ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು ೧ ಕೋಸಲೇಂದ್ರ : ( ನಗು ) ಹೀಗೆ ಸಿಟ್ಟಿಗೆದ್ದೇನು ಪ್ರಯೋಜನ, ಕಾ:ಮೈಡ್ ಮೃಣಾಲಿನಿ? ಮೇಲುವರ್ಗದ ಜನರಲ್ಲಿ ನಿಮ್ಮ ತತ್ವಪ್ರಸಾರ ಮಾಡುವದು ನಿಮ್ಮ ಕರ್ತವ್ಯವಾಗಿದೆ. ಹಾಗೆ ಮಾಡದೆ ಹೋದರೆ ನೀವು ಕರ್ತವ್ಯಚ್ಯುತರಾಗುತ್ತೀರಿ ! ಮೃಣಾಲಿನಿ : (ಕವನ) ನನ್ನ ಕರ್ತವ್ಯದ ಬಗ್ಗೆ ನಿಮ್ಮಿಂದ ಉಪನ್ಯಾಸ ಬೇಕಾಗಿಲ್ಲ ! ನನ್ನ ಕರ್ತವ್ಯವನ್ನು ಪಾಲಿಸಲು ನನಗೆ ನೂರು ವೇದಿಕೆ ಗಳಿವೆ; ಕೂಲಿಕಾರರಿದ್ದಾರೆ; ಒಕ್ಕಲಿಗರಿದಾರೆ, ( ಕಿಶನಕಿಶೋರರನ್ನು ಬೊಟ್ಟು ಮಾಡಿ ತೋರಿಸಿ ) "ಇವರಂತೆ ಗಜರ್, ಹಲವಾ ತಿಂದು ಹೊಟ್ಟೆ ಉಬ್ಬಿಸಿಕೊಳ್ಳದ ಮಧ್ಯಮವರ್ಗದವರಿದ್ದಾರೆ. ಇಂಥ ಈ ಪ್ರಾಣಿ ಗಳನ್ನು ತೆಗೆದುಕೊಂಡು ನನಗೇನು ಮಾಡಬೇಕಾಗಿದೆ !! [ ಮೋರೆ ತಿರುವಿ ಕೂಡುತ್ತಾಳೆ ಕಿಶನ್ ಕಿಶೋರರು ಗಾಬರಿಯಾಗಿ ತನ್ನ ದುರಿಗಿರುವ ಗಜರ್ ಹಲವಾದ ಪ್ಲೇಟನ್ನು ನೋಡುತ್ತಾರೆ. ] ರೋಹಿಣಿದೇವಿ : (ಬಿಗುವಿನಿಂದ) ಹಾಗೆ ಮಾತಾಡಬಾರದು, ಮೃಣಾಲಿನಿ ! ಇನ್ನೊಬ್ಬರ ಬಗ್ಗೆ ಆದರವಿರದಿದ್ದರೆ ಹೋಗಲಿ. ಕನಿಷ್ಟ ಅವರನ್ನು ಹೀಗೆ ಅಪಮಾನಗೊಳಿಸಬಾರದು. ನಿನ್ನ ಪಿತಾಜಿಯವರಿಗೆ ಇದು ಗೊತ್ತಾದರೆ ಅವರು ಏನಂದಾರು ! ಮೃಣಾಲಿನಿ : ನನ್ನ ಪಿತಾಜಿಯವರು ನನ್ನ ಹಾದಿಯನ್ನು ಅದೆಂದಿಗೋ ಬಿಟ್ಟು ಬಿಟ್ಟಿದ್ದಾರೆ. ಹೀಗೆ ಮಾತಾಡದಿದ್ದರೆ ಹೇಗೆ ಮಾತಾಡಬೇಕು ? ಮಾತು-ಮಾತಿಗೆ ಹೂಂಗುಡುತ್ತ ಕವಲೆತ್ತಿನಂತೆ ತಲೆ ಹಾಕಬೇಕೊ ? ರುಕ್ಕಿಣಿದೇವಿ : ( ಉದ್ವಿಗ್ನಳಾಗಿ ) ಅದೇಕಾದೀತು ? ಹೀಗೆಯೇ ಸಾಗಲಿ ! ( ಮೃಣಾಲಿನಿಯ ಎದುರಿಗಿದ್ದ ಭಜಿಯ ಭೇಟನ್ನು ತೋರಿಸುತ್ತ) ಗಜರ್ ಹಲವಾದ ವಿಷಯ ಹಾಗಿರಲಿ, ನೀವು ಖಾರ ತುಂಬಿದ ಈ ಭಜಿಗಳನ್ನು ತಿನ್ನುತ ಹೀಗೆಯೇ ಉರುಪು ಬೀಳುವಂತೆ ಮಾತಾಡುತ್ತ ಹೋಗಿರಿ ! ಕೋಸಲೇಂದ್ರ, ಇನ್ನು ನಡೆ, ಗಾಡಿಯ ಹೊತ್ತಾಯಿತು ! [ಏಳುತ್ತಾಳೆ, ಓಂಪ್ರಕಾಶನೆಂಬ ಕಿಶನ್ ಕಿಶೋರರ ಸೇವಕನು ಬರುತ್ತಾನ] ಓಂಪ್ರಕಾಶ : ಗಾಡಿಯು ಪ್ಲಾಟಫಾ:ರ್ಮಿಗೆ ಬಂದಿದ್ರೆ ಸರಕಾರ ! ಇನ್ನು ಹೊರಡುವದಾಗಬೇಕು.