ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨ ಯುಗಾಂತರ ಕೋಸಲೇಂದ್ರ : ( ಪುಸ್ತಕವನ್ನು ಇಸಿದುಕೊಂಡು ಬದಿಗಿಟ್ಟು ) ಇನ್ನು ಈ ಪುಸ್ತಕಗಳ ಮಾತು ಹಾಗಿರಲಿ, ಮೃಣಾಲಿನಿ ! ಸಹಪಾಠಿಗಳಾದ ತತ್ವ ಶೋಧಕರೆಂದು ನಾವು ಒಬ್ಬರನ್ನೊಬ್ಬರು ಏಕವಚನದಿಂದ ಕರೆಯಹತ್ತಿದೆ ನಲ್ಲ ? ಅದರಂತೆ ಇನ್ನೂ ಕೆಲವು ನಿಯಮಗಳನ್ನು ಅಮಲಿನಲ್ಲಿ ತರ. ಬೇಕಾಗಿದೆ. ಇಂದು ಅವುಗಳಲ್ಲಿ ಒಂದರ ಬಗ್ಗೆ ನಿರ್ಣಯಿಸೋಣ. ಮೃಣಾಲಿನಿ : ಯಾವ ಮಾತದು ಕೋಸಲೇಂದ್ರ ? ಕೋಸಲೇಂದ್ರ : ( ಕುರ್ಚಿಯಲ್ಲಿ ಹಿಂದಕ್ಕೆ ಸರಿದು ಕುಳಿತುಕೊಂಡು ) Manifesto ಓದಿದೆವು, ಭಾಂಡವಲದ ಮೇಲಿನ ಕಾರ್ಲ್ ಮಾರ್ಕ್ಸನ ಪುಸ್ತಕ ವನ್ನು ಅರಗಿಸಿದೆವು. ಸಾಮ್ರಾಜ್ಯ ವಾದದ ಮೇಲಿನ ಮಾರ್ಕ್ಸ-ಏಂಜೆಲ್ಸ್ ವಿಚಾರ ಮಾಲಿಕೆಯನ್ನೆಲ್ಲ ತಿರುವಿ ಹಾಕಿದೆವು, ಲೆನಿನ್ ಆದ. ಟ್ರಾಟ್ ಆದ. ಇನ್ನು ಉಳಿದ ಪುಸ್ತಗಳನ್ನು ನಾನೇ ಓದಿಕೊಳ್ಳುತ್ತೇನೆ, ಮೃಣಾಲಿನಿ. ಸುಮ್ಮನೆ ನಿನಗೆ ತೊಂದರೆ ಏಕೆ ? ಮೃಣಾಲಿನಿ : ( ಕಂಪಿತಳಾಗಿ ) ಅಂದರೆ ? ಇನ್ನು ನನ್ನ ಈ ಅಭ್ಯಾಸಕೂಟ ಗಳು ಬೇಡವೆಂದು ಹೇಳುವೆಯಾ ? ಅದೇಕೆ ? ವಾರಕ್ಕೊಂದು ಸಲದಂತೆ ಪ್ರಾರಂಭಿಸಿ ವಾರಕ್ಕೆ ಹತ್ತು ಸಲ ಸೇರಿ ನಾವು ಚರ್ಚಿಸಿದೆವು. ನಿನ್ನ ಜೊತೆಗೆ ಓದಿದಾಗ ಅದಾವುದೋ ನನ್ನ ಕೊರತೆಯೊಂದು ತುಂಬಿಕೊಳ್ಳುತ್ತದೆ, ಕೋಸಲೇಂದ್ರ. ಇದರಿಂದ ನನಗೆ ತೊಂದರೆಯಿಲ್ಲವೆಂದಿಷ್ಟೇ ಅಲ್ಲ, ಹೊಸ ದೊಂದು ಆನಂದ ದೊರೆತಿದೆ. ಅದು ಕಳೆದರೆ, ನಾನೇನು ಮಾಡುವೆನೋ ನನಗೆ ತಿಳಿಯಲಿಕ್ಕಿಲ್ಲ. ಕೋಸಲೇಂದ್ರ: ( ಮುಗುಳು ನಗೆಯಿಂದ ) ಎಲ ! ಮಾರ್ಕ್ಸವಾದಿಯ ಬಾಯಲ್ಲಿ ಇದೇನು ನಾನು ಕೇಳುತ್ತಿದ್ದೇನೆ ! ನನ್ನ ಕಿವಿಗಳ ಮೇಲಿನ ವಿಶ್ವಾಸವೇ ಹಾರಿತು. ಈ ಅಸ್ಪುಟ ಭಾಷೆ ನಿನ್ನಿಂದ ಬರಬಾರದು, ಮೃಣಾಲಿನಿ, ಮೃಣಾಲಿನಿ : ಸ್ಪುಟವೋ ಅಸ್ಪುಟವೋ ನನಗೆ ಗೊತ್ತಿಲ್ಲ. ಆದರೆ ಇದು ಮಾರ್ಕ್ಸವಾದಕ್ಕೆ ವಿರುದ್ಧವಾದುದೇನೂ ಅಲ್ಲ. ಸ್ನೇಹ, ಪ್ರೀತಿ, ಎಂದು ಹೇಳುತ್ತಾರಲ್ಲ; ಅದು ಇದೇ ಎಂದು ಕಾಣುತ್ತದೆ.