ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅoಳು ೨ ಕೋಸಲೇಂದ್ರ : ( ನಕ್ಕು ) ಅದು ಸ್ನೇಹವೋ? ಪ್ರೀತಿಯೊ? ತೂಗಿ ನೋಡು ಮೃಣಾಲಿನಿ ! ಸ್ನೇಹ' ಎಂದರೆ ನಾನು ಗೆಳೆಯ' ನಾಗುತ್ತೇನೆ. ( ಪ್ರೀತಿ? ಎಂದರೆ ಪ್ರೇಮಿ'ಯಾಗುತ್ತೇನೆ. ಮೃಣಾಲಿನಿ : ಸದ್ಯಕ್ಕೆ ಗೆಳೆಯ' ಎಂದು ತಿಳಿದು ಸಾಗೋಣ. ನಿನ್ನ ಗೆಳೆತನ ಅದು ಹೇಗೋ ನನ್ನ ಹೃದಯವನ್ನು ಮುಟ್ಟಿದೆ, ಕೋಸಲೇಂದ್ರ ! ಮಾರ್ಕ್ಸ್ ವಾದಿಯದು ಸ್ವಯಂಪೂರ್ಣ ವ್ಯಕ್ತಿತ್ವವೆಂದು ನಾನು ತಿಳಿದಿದ್ದೆ. ಆದರೆ ನೀನು ಈಗ ಅದರ ಭಾಗವಾಗಿದ್ದೀ. ಕೋಸಲೇಂದ್ರ : ಇದು ನಿನಗೊಂದು ಒಗಟವಾದರೂ ನನಗೆ ಅರ್ಥವಾಗುತ್ತದೆ, ಮೃಣಾಲಿನಿ. ಇನ್ನು ಬೇಕಾದರೆ ನಾವು ಸೇರಿ ವಿವಿಧ ವಿಷಯಗಳನ್ನು ಚರ್ಚಿಸಬಹುದು. ಆದರೆ ಆ ಪುಸ್ತಕಗಳನ್ನು ನಾನು ಕೇಳಲಾರೆ. ಇನ್ನು ಅವನ್ನೆ ಓದಿ ತೋರಿಸುವದಿದ್ದರೆ ನೀನು ಆ ಬನಸಿಲಾಲನ ಕಡೆಗೆ ಹೋಗು. ಮೃಣಾಲಿನಿ : ಥ ! ಆ ಬನಸಿಲಾಲನ ಹೊಲವನ್ನು ನಾನಿನ್ನು ದಾಟುವ ದಿಲ್ಲ. ಮಾರ್ಕ್ಸನ ಗ್ರಂಥಗಳನ್ನು ತಿಳಿಯುವ ಸಾಮರ್ಥ್ಯ ಹೋಗಲಿ, ಅವನ ಹೆಸರನ್ನು ಉಚ್ಚರಿಸಲು ಸಹ ಬನಸಿಲಾಲನಿಗೆ ಬರುವದಿಲ್ಲ. ಸಹಾಧ್ಯಾಯ ವೆಂದರೆ ಜೀವದಾಯಿಯಾಗಿರಬೇಕು. ಬನಸಿಲಾಲನಂಥವರ ಸಂಪರ್ಕ, ಇದ್ದ ಜೀವವನ್ನು ಹೀರುತ್ತದೆ. ಕೋಸಲೇಂದ್ರ : ಹೀಗೇನು ? ಈಗ ನೀನು ನನ್ನ ಭಾಷೆಯನ್ನು ಆಡಹತ್ತಿದೆ, ಮೃಣಾಲಿನಿ, ಅಭ್ಯಾಸಕೂಟದ ಮೂಲಕ ನಿನ್ನ ಭಾಷೆ ನನ್ನ ನಾಲಿಗೆಯ ಮೇಲೆ ಕೂತಿದೆ. ಇನ್ನು ಬರಬರುತ್ತ ನೀನು ಕವಿಯಾಗಿ ನಾನು ಮಾರ್ಕ್ಸ ವಾದಿಯಾಗುವ ಸಂಭವವಿದೆ. ಮೃಣಾಲಿನಿ : ಕೋಸಲೇಂದ್ರ, ಕೆಲವು ವಾರಗಳ ಹಿಂದೆ ಯಾವುದು ಸಂಭವನೀಯ, ಯಾವುದು ಅಸಂಭವನೀಯ ಎಂಬುದರ ಬಗ್ಗೆ ನನಗೆ ನಿಶ್ಚಿತ ಅಭಿಪ್ರಾಯಗಳಿದ್ದವು. ಆದರೆ ಈಗ ನನ್ನ ಅಂತರಂಗದಲ್ಲಿಯೇ ಏನೋ ಒಂದು ಕ್ರಾಂತಿ ಎದ್ದಿದೆ. ಈ ಕ್ರಾಂತಿಯಲ್ಲಿ ಎಲ್ಲ ಅಭಿಪ್ರಾಯಗಳು ಸಂಜೆಯ ಮುಗಿಲಿನಲ್ಲಿ ವಿವಿಧ ಪಕ್ಷಿಗಳಂತೆ ಹಾರಾಡಹತ್ತಿವೆ. ಅವುಗಳಲ್ಲಿ ಯಾವುದು ನನ್ನದು, ಯಾವುದು ನನ್ನದಲ್ಲ ಎಂಬುದನ್ನು ಗುರುತಿಸಲು ನಾನು ಅಸಮರ್ಥಳಾಗಿದ್ದೇನೆ.