ನಿಕಲ್ ಅಶ್ರಗ - ಧ್ರುವೀಕೃತ ಬೆಳಕನ್ನು ಉಂಟುಮಾಡಲು ಬಳಸುವ ಒಂದು ಸಾಧನ. ಇದನ್ನು ಮೊದಲಿಗೆ ಸ್ಕಾಟ್ಲೆಂಡಿನ ಭೌತವಿಜ್ಞಾನಿ ವಿಲಿಯಮ್ ನಿಕಲ್ (1768-1851) ಉಪಜ್ಞಿಸಿದ. ಧ್ರುವೀಕೃತ ಬೆಳಕಿನ ಅಧ್ಯಯನದಲ್ಲಿ ಇದರ ಬಳಕೆ ಹೆಚ್ಚು. ದ್ವಿವಕ್ರೀಭವನದ (ಬೈರ್ ಫ್ರಿಂಜೆನ್ಸ್) ಗುಣಲಕ್ಷಣವನ್ನು ಪ್ರದರ್ಶಿಸುವ ಕ್ಯಾಲ್ಸೈಟ್ ಹರಳುಗಳನ್ನು ಬಳಸಿ ನಿಕಲ್ ಅಶ್ರಗವನ್ನು ತಯಾರಿಸಿದರು. ರೋಷಾನ್, ಡೆ ಸೆನಾರ್‍ಮಾಂಟ್ ಮತ್ತು ವೂಲ್ಯಾಸ್ಟನ್ ಮುಂತಾದ ಅಶ್ರಗಗಳು ಕೂಡ ನಿಕಲ್ ಅಶ್ರಗದಂತೆಯೇ ವರ್ತಿಸುತ್ತದೆ. (ನೋಡಿ- ಕ್ಯಾಲ್ಸೈಟ್) (ನೋಡಿ- ದ್ವಿವಕ್ರೀಭವನ) (ನೋಡಿ- ಧ್ರುವೀಕೃತ-ಬೆಳಕು) (ಜಿ.ಎಸ್.ಡಿ.ಇ.)