ವಾಪಸು ಬರೋದು?' "ಸಾಯಂಕಾಲ."ಈ ಹೊಸ ಸಂಸಾರದ ರೀತಿ ನೀತಿಗಳ ವಿಷಯವಾಗಿ ವಠಾರದಲ್ಲಿ ಆ ದಿನವೆಲ್ಲಾ
ಗುಜುಗುಜು ಟೀಕೆ ಟಿಪ್ಪಣಿಗಳಾದುವು. ೮
ಕಾಗದ ಬರೆದಿದ್ದಂತೆ ಜಯರಾಮುವಿನ ತಂದೆ ಆ ತಿಂಗಳ ಕೊನೆಯಲ್ಲಿ ಬಂದರು.
ಪುಸ್ತಕ ತುಂಬಿದ್ದ ದೊಡ್ಡ ಪೆಟ್ಟಿಗೆಯೂ ಅವರ ಜತೆಯಲ್ಲೇ ಇತ್ತು. ತಂದೆ ಪ್ರಕಾಶ
ಕರಲ್ಲಿಗೆ ಆದನ್ನೊಯ್ದು ಲೆಕ್ಕ ಒಪ್ಪಿಸುವುದರೊಳಗಾಗಿ ಯಾವ ಪುಸ್ತಕಗಳಿವೆ ಎಂದೆಲ್ಲ
ನೋಡಿಬಿಡಬೇಕೆಂದು ಜಯರಾಮುಗೆ ಅಪೇಕ್ಷೆಯಾಯಿತು. ರಾಧೆಯಂತೂ ಕಾದಂಬ
ರಿಗಳ ಹುಚ್ಚಿ. ಅಣ್ಣ ತಂಗಿ ಇಬ್ಬರೂ ಸೇರಿ ಪೆಟ್ಟಿಗೆಯನ್ನು ಪರೀಕ್ಷಿಸಲು ಅಪ್ಪನ
ಸಮ್ಮತಿ ಕೇಳಿದರು. ಮನೆಯಲ್ಲೆ ಇದ್ದರೂ ಇಲ್ಲದವರಂತೆ ವರ್ತಿಸುತ್ತಿದ್ದ ತಂದೆಗೆ,
ಮಕ್ಕಳು ಹಾಗೆಲ್ಲ ಸಮ್ಮತಿ ಕೇಳುವುದು ಅಗತ್ಯವೆಂದೇ ತೋರಲಿಲ್ಲ. ಆದರೊ ಆ
ಮಕ್ಕಳು ಚಿಕ್ಕವರಿದ್ದಾಗ, ಪುಸ್ತಕವೆಳೆದುಕೊಂಡು ಕಿತ್ತಾಡದಂತೆ ಎಚ್ಚರ ವಹಿಸಿ ರೊಢಿ
"ಪುಸ್ತಕಗಳನ್ನು ಹುಷಾರಾಗಿ ಹಿಡೀರೀಪ್ಪಾ...ಕೊಳೆಯಾದರೆ ನನ್ನ ತಲೆಗೇ ಕಟ್ತಾರೆ. ಈಗಾಗ್ಲೇ ಕೊಂಡುಕೊಳ್ಳೋರು ಮುಟ್ಟಿ ಮುಟ್ಟಿ ಎಷ್ಟೋ ಪುಸ್ತಕ ಜಜಿ
ಬಿಜಿಯಾಗಿವೆ."ತಾವು ಎಚ್ಚರದಿಂದ ಇರದೇ ಇದ್ದರೆ ಸಂಪಾದನೆಗೆ ಕತ್ತರಿ ಬೀಳುವ ಪ್ರಮೇಯ. ಜಯರಾಮುಗೆ ಅದೆಲ್ಲ ಈಗ ಅರ್ಥವಾಗುತ್ತಿತ್ತು. ಹಿಂದಿನಿಂದಲೂ ಆತ ಪುಸ್ತಕಗಳನ್ನು ಕೂಡಿಡುತ್ತಿದ್ದ. ಹಿಂದೆ ಹೊಸ ಹೊಸ ಪುಸ್ತಕ ಹೊತ್ತು ಮಾರಾಟಕ್ಕೆಂದು ತಂದೆ ಹೊರಟಾಗ, ಭಾರಿ ಬೆಲೆಯ ಕೆಲವನ್ನು ಬಿಟ್ಟು ಉಳಿದ ಪುಸ್ತಕಗಳನ್ನೆಲ್ಲ ಒಂದೊಂದು ಪ್ರತಿ ಜಯರಾಮು ಎತ್ತಿ ಇಡುತ್ತಿದ್ದ. ಆಗ, ಆದರಿಂದ ತಮಗೇ ನಷ್ಟವಾಗುವುದೆಂದು ಆತನಿಗೆ ಗೊತ್ತಿರಲಿಲ್ಲ. ಕ್ರಮೇಣ "ಜನ ಪುಸ್ತಕ ಕೊಳ್ಳೋದೇ ಕಡಿಮೆ ಯಾಗ್ಬಿಟ್ಟಿದೆ" ಎಂಬ ಮಾತು ಅಪ್ಪನ ಬಾಯಿಯಿಂದ ಬರುತ್ತಿತ್ತು. ಬೇಸರದ ಆ ಧ್ವನಿ ಕೇಳಿದಾಗ ಜಯರಾಮುಗೆ ತಾನು ಆ ಪುಸ್ತಕಗಳನ್ನು ಮುಟ್ಟುವುದೇ ತಪ್ಪು ಎನಿಸುತ್ತಿತ್ತು. ಒಮ್ಮೊಮ್ಮೆ ತನಗೆ ಪ್ರೀತಿಪಾತ್ರವೆನಿಸಿದ ಯಾವುದಾದರೂ ಪುಸ್ತಕ ವನ್ನು ಕಂಡು ಆತ "ಅಪ್ಪಾ, ಇದೊಂದನ್ನ ಇಟ್ಕೊಳ್ಲೇ ಅಪ್ಪ ?" ಎಂದರೆ,ತಂದೆ,"ಆ
ಪ್ರತಿ ಬೇಡವೋ. ಕೊಳೆಯಾಗಿರೋದು ತಗೊಳೋ" ಎನ್ನುತ್ತಿದ್ದರು. ಆ ಬಳಿಕ ಕೊಳೆಯಾದ ಪುಸ್ತಕಗಳನ್ನಷ್ಟೇ ಬಯಸುವುದು ಜಯರಾಮುಗೆ ಆಭ್ಯಾಸವಾಯಿತು.ಆಣ್ಣ-ತಂಗಿ ಆ ದೊಡ್ಡ ಪೆಟ್ಟಿಗೆಯನ್ನು ತೆರೆದು ನೋಡಿದರು. ತಂದೆ ಹೋಗುತ್ತ ಒಯ್ದಿದ್ದ ಪುಸ್ತಕಗಳಲ್ಲಿ ಹೆಚ್ಚಿನವು ಹಾಗೆಯೇ ಇದ್ದುವು. ಪರ ಊರಿನ ಪ್ರಕಾಶಕರಿಂದ ಪಡೆದಿದ್ದ ಕೆಲವನ್ನು ಮಾತ್ರ ಈ ಮೊದಲು ಅಣ್ಣ-ತಂಗಿ ಕಂಡಿರಲಿಲ್ಲ.
ಓ! ಇದು ಚೆನ್ನಾಗಿದೇಂತ ತೋರುತ್ತೆ. ಅಲ್ವೆ ಅಣ್ಣ?" ಎಂದಳು ರಾಧಾ ಗಾತ್ರದೊಂದು ಕಾದರಿಬರಿಯನ್ನೆತ್ತಿಕೊಂಡು.
ತಂಗಿಯ ಪ್ರಶ್ನೆಗೆ ಅಣ್ಣ ಉತ್ತರ ಕೊಡಲಿಲ್ಲ. ಪುಸ್ತಕಗಳನ್ನು ನೋಡುತ್ತ ಅವನ ಹೃದಯ ಕುಗ್ಗಿ ಹೋಯಿತು. ಕಣ್ಣುಗಳಿಗೆ ಮಂಜು ಕವಿಯಿತು. ಈ ಸಲದ ಪ್ರವಾಸದಲ್ಲಿ ಹೆಚ್ಚು ಮಾರಾಟವಾಗಿಯೇ ಇಲ್ಲವೆಂಬುದು ಸ್ಪಷ್ಪವಾಗಿತ್ತು. ಆತ ತಂದೆಗೆ ಬೆನ್ನು ಮಾಡಿ ಪುಸ್ತಕಗಳೆದುರು ಸುಮ್ಮನೆ ಕುಳಿತ. ರಾಧೆಯೇ ಆರೇಳು ಪುಸ್ತಕ ಆರಿಸಿದಳು.
"ಅಣ್ಣ ಇಷ್ಹೂ ಇಟ್ಕೂಂಡ್ಬಿಡೋಣ್ವೆನೋ?"
-ಎಂದು ರಾಧಾ ಕೇಳಿದಳು.
ಜಯರಾಮು ಆಕೆ ತೋರಿಸಿದ ಪುಸ್ತಕಗಳನ್ನು ನೋಡಿದ. ಆವೆಲ್ಲವೂ ಮೈಸೂರಿನ ಪ್ರಕಟಣೆಗಳಾಗಿದ್ದವು. ತನ್ನದಲ್ಲವೆಂಬಂತೆ ಕಂಡ ಸ್ವರದಲ್ಲಿ ಆತ ಹೇಳಿದ:
"ಆಪ್ಪ ಇನ್ನೊಂದ್ಸಲ ಹೋಗೋವರೆಗೂ ಇಲ್ಲೇ ಇರತ್ತೆ. ಓದಿ ನೋಡಿದ ರಾಯ್ತು."
"ಯಾಕೆ,ನಮ್ಮನೇಲೇ ಇಟ್ಕೊಳ್ಳೋದು ಬೇಡ್ವಾ?"
"ಥೂ! ಇದೆಲ್ಲಾ ಕಚಡಾ ಪುಸ್ತಕ. ಯಾಕೆ ಮನೇಲಿ ಇಟ್ಕೂಳ್ಳೋದು?"
-ಎಂದು ಜಯರಾಮು, ನಿಜ ಸಂಗತಿ ಏನೆಂಬುದನ್ನು ವಿವರಿಸಲಾಗದೆಯೇ, ರೇಗಿ ಹೇಳಿದ.
ಮಕ್ಕಳ ಸಂಭಾಷಣೆಯನ್ನು. ಕೇಳುತ್ತಿದ್ದ ತಂದಗೆ ಮಗನ ವರ್ತನೆ ವಿಚಿತ್ರ ವೆನಿಸಿತು.
"ಏನೊ ಅದು?" ಎಂದು ಅವರು,ಮಗನ ಧ್ವನಿ ತನಗೆ ಇಷ್ಟವಾಗಲಿಲ್ಲ ಎಂಬು ದನ್ನು ಸೂಚಿಸಿದರು.
"ಏನೂ ಇಲ್ಲ," ಎಂದು ಜಯರಾಮು ದುಗುಡದ ಸ್ವರದಲ್ಲಿ ಊತ್ತರವಿತ್ತು, ಹೊರಕ್ಕೆ ಹೊರಟ.
"ಎಲ್ಲಿಗೆ ಹೋಗ್ತಿದೀಯೋ?"
-ತಾಯಿ ಕೂಗಿ ಕೇಳಿದರು.
ಜಯರಾಮು ತಿರುಗಿ ನೋಡಲಿಲ್ಲ. ದಡದಡನೆ ಮೆಟ್ಟಲಿಳಿಯುತ್ತ ಗಟ್ಟಿಯಾಗಿ ಹೇಳಿದ:
"ಇಲ್ಲೇ ವಾಚನಾಲಯಕ್ಕೆ ಹೋಗ್ಬರ್ತೀನಮ್ಮ.""ಆದೇನು ವಾಚನಾಲಯವೋ ಮೂರು ಹೊತ್ತೊ ಅಲ್ಲಿಗೆ ಹೋಗ್ತೀನೀಂತ
ಸಾಯ್ತಿರ್ತಾನೆ," ಎಂದು ತಾಯಿ,ತಂದೆಗೆ ದೊರು ಕೊಟ್ಟಳು."ಹೋಗಲಿ ಬಿಡು,ಮಾರ್ಚ್ ಗಂಮ್ತೂಇದೆ ಕಟ್ಟೋಕಾಗಲ್ಲ ಇನ್ನು ಸೆಪ್ಟೆಂಬರ್ ತಾನೆ? ಟೈಮಿದೆ ."
"ವಾಚನಾಲಯಕ್ಕೆ ಎಲ್ಲಾ ಪೇಪರೂ ಬರುತ್ತಂತಪ್ಪ.ಆದರೆ ಹುಡುಗೀರು ಅಲ್ಲಿಗೆ ಹೋಗ್ಕೂಡ್ದಂತೆ," ಎಂದು ರಾಧಾ ತಂದೆಗೆ ಊರಿನ ಸಮಾಚಾರ ಒದಗಿಸಿದಳು.
"ಹುಡುಗಿರು ವಾಚನಾಲಯಕ್ಕೆ ಹೋಗೋದೂಂದು ಬಾಕಿ ಇದೆ ಇನ್ನು..." ಎಂದು ರಾಧೆಯ ತಾಯಿ ಬೇರೆ ಯಾವುದೋ ಬೇಸರವನ್ನು ಆ ಮಾತಿನಲ್ಲಿ ಪ್ರಕಟಿ ಸಿದಳು.
"ಮನೆ ಸಾಮಾನು ಎಲ್ಲಾ ಇದ್ಯೇನು?" ಎಂದು ತಂದೆ ವಿಚಾರಿಸಿದರು.
"ಹೂಂ" ಎಂದು ತಾಯಿ ಉತ್ತರ ಕೊಡುತ್ತಲೆ,ರಾಧಾ ಒಂದು ಹೊಸ ಕಾದಂಬರಿಯನ್ನೆತ್ತಿಕೊಂಡಳು.ತಾಯ್ತಂದೆಯರ ಆ ಸಂವಾದದಲ್ಲಿ ಆಕೆಗೆ ಆಸಕ್ತಿ ಇರಲಿಲ್ಲ.ನೆಲದಲ್ಲಿದ್ದ ಹಾಸಿಗೆಯ ಸುರುಳಿಯ ಮೇಲೆ ಗೋಡೆಗೊರಗೆ ಕುಳಿತು, ಕಾದಂಬರಿಯನ್ನು ಬರೆದವರ ಹೆಸರನ್ನೂಮ್ಮೆ ಗಮನಿಸಿ, ಮುನ್ನುಡಿಯ ಪುಟಗಳನ್ನು ಓದದೆಯೇ ಹಾರಿಸಿ, ಮೊದಲ ಅಧ್ಯಾಯದಿಂದಲೇ ಅರಂಭಿಸಿದಳು.ಸ್ವಲ್ಪ ಹೊತ್ತಿ ನೆಲ್ಲೆ ಆಕೆ ಕಾದಂಬರಿಯಲ್ಲಿ ತಲ್ಲೀನಳಾದಳು.
ಮಗಳು ಓದುತ್ತಿದ್ದಂತೆ ತಾಯಿ ತಂದೆಯರ ಸಂಭಾಷಣೆ ನಡೆಯಿತು.
"ನಾರಾಯಣೆ ತೀರ್ಕೊಂಡ್ಲು."
"ಯಾರು ನಾರಾಯಣೆ?"
"ಆ ಕೊನೇ ಮನೆ,ಗೊತ್ತಿಲ್ವೆ? ಸೌದೆ ಕದ್ದಳೊಂತ.."
"ಹೂಂ.ಹೂಂ...ಅಯ್ಯೋ ಪಾಪ...ಏನಾಗಿತ್ತು?"
"ಆದೇನೋ ಸುಡುಗಾಡು ಜ್ವರದ ಕಾಹಿಲೆ.....ನಾಲ್ಕರಲ್ಲಿ ಮೂರು ಚಿಕ್ಕ ಮಕ್ಕಳು. ಕೊನೇದಕ್ಕಂತೂ ಒಂದು ವರ್ಷ್ ಕೂಡಾ ಇಲ್ಲ..."
"ತ್ಸ್....ತ್ಸ್...ಹೂ...ಏನ್ಮಾಡೋಕಾಗುತ್ತೆ? ಯಾರ ಕೈಲಿದೆ ಹೇಳು ಇದೆಲ್ಲ?"
ಆತ ನಿಟ್ಟುಸಿರುಬಿಟ್ಟುದರಿಂದ ಸಂಭಾಷಣೆ ಸ್ವಲ್ಪ ಹೊತ್ತು ನಿಂತಿತು. ತುಸು ತಡೆದು ಆಕೆ ಹೇಳಿದಳು:
"ಕೆಳಗೆ ಯಾವುದಾದರೂ ಮನೆ ಖಾಲಿಯಾದರೆ ಕೊಡ್ತೀನೀಂತ ರಂಗಮ್ಮ ಹೇಳಿರ್ಲಿಲ್ವೆ?"
"ಹೂಂ,ಹೌದು."
"ಅದೇ-ನಾರಾಯಣೆ ಇದ್ದ ಮನೆ ಖಾಲಿಯಾಯ್ತು."
ಹಾಗೇನು? ಆದರೆ ಅದಕ್ಕೆ ಬಾಡಿಗೆ ಜಾಸ್ತಿ ನೇನೋ?"
"ಹೌದು.ಅಲ್ದೆ ಅದನ್ನ ಆಗ್ಲೆ ಬೇರೆಯವರಿಗೆ ಕೊಟ್ತಿಟ್ರು ಅನ್ನಿ, ಅದರೆ ರಂಗಮ್ನೋರು ನಮ್ಮನ್ನ ಕೇಳ್ಲೊ ಇಲ್ಲ."
"ರಂಗಮ್ನಿಗೆ ಗೊತ್ತಿಲ್ವೆ ನಮ್ಮ ಪರಿಸ್ಥಿತಿ? ಅದಕ್ಕೇ ಕೇಳ್ಲಿಲ್ಲ."
"ನಾನೂ ಸುಮ್ನಿದ್ದೆ. ಆ ವಿಷಯ ಪ್ರಸ್ತಾಪಿಸ್ಲಿಲ್ಲ.ಜಾಸ್ತಿ ಬಾಡಿಗೆ ಕೊಡೋ" ದೊಂದಾಯ್ತ್ತು, ಇದೇ ಬಾಡಿಗೆಗೆ ಬನ್ನಿ ಅಂದ್ರೂ...ಸಾವಿನ ಮನೆಗೆ...."
"ಅಯ್ಯೋ ಅದೆಲ್ವಾ ನೋಡೋಕಾಗುತ್ತೇನೆ ಈಗಿನ ಕಾಲ್ದಲ್ಲಿ?"
ತಾಯಿ ಸುಮ್ಮನಾದಳು.ಮಾತನಾಡಬೆಕಾದ ವಿಷಯಗಳೆಷ್ಟೋ ಇದ್ದುವು. ಅದರೆ ಮಗಳೆದುರಲ್ಲಿ ಅವುಗಳನ್ನು ಪ್ರಸ್ತಾಪಿಸುವ ಹಾಗಿರಲಿಲ್ಲ. ಆ ಕೊಠಡಿ ಮನೆ ಯಲ್ಲಿ ಏಕಾಂತವಾದರೂ ಎಲ್ಲಿಂದ ಬಂತು? ಹೀಗಾಗಿ,ಯಾವುದನ್ನು ಹೇಳಬಾರದು... ಹೇಳಬಹುದು ಎಂದು ಯೋಚಿಸಿ ಯೋಚಿಸಿ ಆಕೆ ಮಾತನಾಡುವಂತಾಯಿತು.
"ಎಷ್ಟು ದಿವಸ ಇರ್ತೀರ ಈ ಸಲ?"
"ಇರ್ತೀನಿ ಇನ್ನೊ ಮೂರು ನಾಲ್ಕು ದಿವಸ."
"ಅಷ್ಟು ಬೇಗ್ನೆ ಹೊರಡ್ಬೇಕೆ?"
ಅಷ್ಟೈಶ್ವರ್ಯದ ಸುಕವನ್ನು ಸುಟ್ಟಿತುಃ ಗಂಡನ ಸಾಮೂಪ್ಯವಾದರೂ ತನ್ನ ಪಾಲಿಗಿರಬಾರದೆ? ಎಂದು ವಯಸ್ಸಾದ ಆ ಜೀವ ಚಡಪಡಿಸಿತು.
"ಈ ಸಲ ಮಲೆನಾಡು ಕಡೆ ಹೋಗೋಣಾಂರತಿದೀನಿ. ಈಗ ಬೇಸಿಗೆ ಸ್ವಲ್ಪ ತಡವಾದರೂ ಮಳೆ ಬಂದ್ಬಿಡುತ್ತೆ. ಹೋದರೆ ಈಗ್ಲೋ ಹೋಗ್ಬೇಕು."
"ಹೊಂ."
ಅವರು ತಲೆತಗ್ಗಿಸಿ ಏನೋ ಯೋಚಿಸುತ್ತ ತಮ್ಮ ಅಂಗಾಂಗಗಳನ್ನು ನೋಡಿ ದರು. ಮಗಳತ್ತ,ಬಾಡಿದ ಮುಖದಿಂದ ದೃಷ್ಟಿ ಬೀರಿದರು.
ಮಗಳನ್ನು ಕೆಳಕ್ಕೆ ಕಳುಹೋಣವೆಂದು ತೋರಿತು ಆಕೆಗೆ. ಆದರೆ ಅದಕ್ಕಾಗಿ ಏನಾದರೊಂದು ಕಾರಣವನ್ನು ಸೃಷ್ಟಿಸಿ ಹೇಳಲು ಆ ತಾಯಿ ಸಮರ್ಥಳಾಗಿರಲಿಲ್ಲ.
"ಇನ್ನೇನು ಸಮಾಚಾರ ವಠಾರದ್ದು?"
"ವಠಾರದ್ದೇನು ಸಮಾಚಾರ? ಇದೆ ಹಾಗೆಯೇ."
ವಿಷಯ ಒರತೆ ಬತ್ತಿದಂತೆ ತೋರಿತು.
ರಾಧೆಯ ತಾಯಿ ತನ್ನ ಗಂಡನನ್ನು ಕಣ್ಣು ತುಂಬಾ ನೋಡಿದಳು. ಮತ್ತೆ ತಲೆ ಬಾಗಿಸಿ ನೆಲ ಕೆರೆಯುತ್ತ ಕುಳಿತಳು. ಅತ್ಮಗತವಾಗಿಯೇ ಏನನ್ನೋ ಆಕೆ ಗಟ್ಟಿಯಾಗಿ ಅನ್ನತೊಡಗಿದವಳು. ಮಾತುಗಳು ಕಡಿದು ಕಡಿದು ಬಂದವು.ಅಸ್ಪಷ್ಟವಾಗಿದ್ದರೂ ಅವರ ಕಿವಿಗಳೊಳಕ್ಕೆ ಆ ಮಾತುಗಳು ಉರಿಯುವ ನೋವನ್ನವಂಟುಮಾಡುತ್ತ ಇಳಿದುವು.
"ಹ್ಯಾಗಾಗಿದೀರಿ ಒಮ್ಮೆ ನೋಡ್ಬಾರ್ದೆ? ಹೊತ್ತು ಹೊತ್ತಿಗೆ ಊಟ ಇಲ್ಲ. ಸಿಕ್ಕಿದ್ದನ್ನ ತಿನ್ನೋದು...ಎಣ್ಣೆ ಸ್ನಾನ ಇಲ್ಲ...ನಾವೇನು ಮನುಷ್ಯ ಜನ್ಮವೋ
ಅಲ್ಲಾ" "ಏನ್ಮಾಡ್ಲೇ ನಾನು?"
ಹೆಂಗಸು ನಿಟ್ಟುಸಿರು ಬಿಟ್ಟಳು.
ಅಷ್ಟರಲ್ಲಿ ಕಳಗಿನಿಂದ ಅಹಲ್ಯೆಯ ಸ್ವರ ಕೇಳಿಸಿತುಃ
"ರಾಧಾ,ಏ ರಾಧಾ,ಸ್ವಲ್ಪ ಬಾರೆ ಇಲ್ಲಿ."
ಕೇಳಿಸಿದರೂ ಓದುತ್ತಲಿದ್ದ ರಾಧಾ ಉತ್ತರ ಕೊಡದೆ ಸುಮ್ಮನಿದ್ದಳು.
"ರಾಧಾ ಬಾರೇ..."
ತಾಯಿಯೆಂದಳು ಮಗಳಿಗೆ:
"ಕರೆಯೋದು ಕೇಳಿಸಲ್ವೆನೇ? ಹೋಗು."
"ಊ...ನಾನು ಹೋಗೊಲ್ಲ...ಓದ್ಬೇಕು."
"ರಾತ್ರೆ ಓದಿದರಾಯ್ತು."
"ಊ...ದೀಪ ಇರೋಲ್ಲ ರಾತ್ರೆ."
"ನಾಳೆ ಓದೀಯಂತೆ."
ರಾಧಾ ಮತ್ತೊಮ್ಮೆ ಊ ಎಂದು ರಾಗ ಎಳೆಯುತ್ತಿದ್ದಂತೆಯೇ ಅಹಲ್ಯಾ ಸ್ವಲ್ವ ಗಟ್ಟಿಯಾಗಿಯೇ ಕರೆದಳು.
ರಾಧಾ ಪುಸ್ತಕವನ್ನು ತನ್ನ ಹಿಂದುಗಡೆ ಮರೆಮಾಡುತ್ತ ಎದ್ದು ನಿಂತು,ಮುಖ ವನ್ನಷ್ಟೆ ಕಿಟಿಕಿಯಿಂದ ಹೊರಹಾಕಿ,"ಯಾಕೆ?"ಎಂದಳು.
ಕೆಳಗೆ ನಿಂತಿದ್ದ ಅಹಲ್ಯೆ ತನ್ನ ಬಳೆಯನ್ನು ಮುಟ್ಟಿ ತೋರಿಸಿದಳು.ರಾಧೆಗೆ ಒಮ್ಮೆಲೆ ನೆನಪಾಯಿತು.ಮಲ್ಲೇಶ್ವರದ ಅಂಗಡಿ ಬೀದಿಯಿಂದ ಬಳೆ ಕೊಳ್ಳ ಬೇಕೆಂದಿದ್ದ ಅಹಲ್ಯೆಯ ಜತೆಯಲ್ಲಿ ತಾನೂ ಬರುವೆನೆಂದು ಹಿಂದಿನ ದಿನ ರಾಧಾ ಮಾತು ಕೊಟ್ಟಿದ್ದಳು.ಈಗ "ತಾಯಿ ಬಿಡೋದಿಲ್ಲ" ಎಂದು ನೆಪ ಹೇಳಿ ತಪ್ಪಿಸಿ ಕೊಳ್ಳುವ ಮನಸ್ಸಾಯಿತು.ಮಲ್ಲೇಶ್ವರದವರೆಗೆ ' ಹೋಗುವುದೆಂದರೆ ತಾಯಿ ಬೇಡ ವೆನ್ನೆ ಬಹುದೆಂಬ ಯೋಚನೆಯೂ ಹೊಳೆಯಿತು. "ತಾಳು ಅಮ್ಮನ್ನ ಕೇಳ್ತೀನಿ ಎನ್ನು ವಂತೆ ರಾಧಾ ಕೈಸನ್ನೆ ಮಾಡಿದಳು.
"ಏನೇ ಅದು?"
---ಎಂದಳು ರಾಧೆಯ ತಾಯಿ.
"ಅಹಲ್ಯೆ ಬಳೆ ಕೊಂಡ್ಕೋಬೇಕಂತೆ. ಮಲ್ಲೇಶ್ವರಕ್ಕೆ ಹೋಗೋಕೆ ನನ್ನನ್ನೂ ಕರೀತಿದಾಳೆ."
"ಅಷ್ಟೇನೇ? ಹೋಗ್ಬಾ."
ರಾಧೆ ನಿರುಪಾಯಳಾಗಿ,ಓದುತ್ತಿದ್ದ ಪುಟಕೊಂದು ಕಾಗದದ ಚೂರಿನ ಗುರು ತಿಟ್ಟು ಪುಸ್ತಕ್ಕವನ್ನು ಮಡಚಿ ತೆಗೆದಿರಿಸಿದಳು.
"ಕುಂಕುಮ ಇಟ್ಕೋ,"
---ಎಂದು ತಾಯಿ ಹೇಳುತ್ತಿದ್ದಂತೆಯೇ, ಆ ಕೆಲಸಕ್ಕಾಗಿಯೇ ರಾಧಾ ಕನ್ನಡಿಯ ಮುಂದೆ ನಿಂತಳು.
ಆಕೆಯ ತಂದೆ ಕುಳಿತಲ್ಲಿಂದೆದ್ದು, ಗೋಡೆಗೆ ತೂಗುಹಾಕಿದ್ದ ತನ್ನ ಕೋಟಿನ ಜೇಬಿನಿಂದ ಆರಾಣೆ ಎಣಿಸಿ ತೆಗೆದು ಮಗಳ ಕೈಗಿಟ್ಟರು"
ನೀನೂ ಬಳೆ ಕೊಂಡೊವಾ, ಈ ಸಲವೂ ಏನೂ ತರೋಕಾಗ್ಲಿಲ್ಲ."
ಮತ್ತೂ ಆರು ಕಾಸನ್ನು ಕೊಟ್ಟರು.
"ಹಾಗೇ ಬರ್ತಾ ನಶ್ಯ ತಗೊಂಡ್ಡಾ"
"ನಾನು ನಶ್ಯ ಕೊಂಡ್ಕೊಂಡ್ರೆ ಅಹಲ್ಯ ನಗ್ತಾಳೆ"
ಸಾಕು, ಹೋಗೇ ಬಡಿವಾರ" ಎಂದು ತಾಯಿ ಗದರಿಸಿದಳು.
"ನಶ್ಯ ಗಂಡನಿಗಲ್ಲು, ಅಪ್ಪನಿಗೆ ಅಂತ ಹೇಳು!" ಎಂದು ಹೇಳಿ ತಂದೆ, ತಮ್ಮ ನಗೆಮಾತಿಗಾಗಿ ತಾವೇ ಸಂತೋಷಪಟ್ಟರು.
ರಾದಾ ನಾಚಿಕೆಯಿಂದ ಮುಖ ಕೆಂಪಗೆ ಮಾಡಿಕೊಂಡು ಹೊರಟು ಹೋದಳು.
ಮಗಳ ಮುಂದೆ ಅನಿರೀಕ್ಷಿತವಾಗಿ 'ಗಂಡ' ಎಂಬ ಮಾತು ಬಂದಿತ್ತು, ತಮಾಷೆ ಗಾಗಿ ತಾವೇ ಸಂತೋಷಪಟ್ಟರು. ರಾದಾ ನಾಚಿಕೆಯಿಂದ ಮುಖ ಕೆಂಪಗೆ ಮಾಡಿಕೊಂಡು ಹೊರಟು ಹೋದಳು.
ಮಗಳ ಮೊಂದೆ ಆನಿರೀಕ್ಷಿತವಾಗಿ 'ಗಂಡ' ಎಂಬ ಮಾತು ಬಂದಿತ್ತು. ತಮಾಷೆ ಗಾಗಿ ಹಾಗೆ ಹೀಳಿದ್ದರೂ ಬಳಿಕ ಅದರ ಯೋಚನೆಯೇನೂ ಅಷ್ಟು ತಮಾಷೆಯ ವಾಗಿರಲಿಲ್ಲ.
"ಬೆಳೆದಿದ್ದಾಳೆ, ವಯಸ್ಸಾಗಿದೆ. ಆದರೂ ಇನ್ನೂ ಮಗು ಇದ್ದ ಹಾಗೇ ಇದಾಳೇಂದ್ರೆ."
ಗಂಡ ಒಮ್ಮಲೆ ಮುಖ ಸಪ್ಪಗೆ ಮಾಡಿ ಕುಳಿತುದನ್ನು ಕಂಡು ಆಕೆಯೇ ಮುಂದುವರಿಸಿದಳು.
“ಅಹಲಾಗೆ ಗಂಡು ಹುಡುಕ್ತಾ ಇದಾರೆ."
"ರಾಧಾಗೆ ಹುಡುಕ್ಸಾ ಇಲಾಂತ ತಾನೆ ನೀನು ಹೇಳೋದು'
ಬೇಸರದ ಧ್ವನಿಯಲ್ಲಿ ಹೊರಟಿತು ಆ ಪ್ರಶ್ನೆ.
"ರೇಗ್ವೇಡಿ. ಅಹಲ್ಯ ರಾಧಾ ಇಬ್ಬರಿಗೊ ಒಂದೇ ವಯಸ್ಸು ಅಂತ ಹಾಗೆ ಹೇಳ್ವೆ, ಈ ಮಳೆಗಾಲಕ್ಕೆ ಹದಿನೆಂಟು ಹಿಡಿಯುತ್ತೆ."
"ಹೋಂ_"
“ಅರಸೀಕೆರೆ ಹತ್ರ ಯಾವುದೋ ಹಳ್ಳಿ ಕಡೆ ವರ ಇದೆ ಅಂತ ಏನೋ ಅಂದಿದ್ರಿ, ಹೋದ್ಸಾರೆ."
ಹೌದು ಹೋಗಿದೆ. ಆಗಿಲ್ಲ."
"ಅಗಿಲ್ಲ ಏನಾಯ್ತು? ಎಂದು ಪ್ರಶ್ನೆಯ ನೋಟ ಬೀರಿದಳು ತಾಯಿ.
"ನಮ್ಮಂಥ ನೂರು ಜನ ಬಡವರನ್ನ ಕೊಂಡೊಳ್ಳೋ ಹಾಗೆ ಮಾತಾಡ್ದ."
ಆಕೆ ನಿಟುಸಿರುಬಿಟ್ಟಳು.
"ಪುಸ್ತಕದ ಪೆಟ್ಟೇನೆಲ್ಲ ಅರಸೀಕೆರೇಲೆ ಬಿಟ್ಟ ಹೋಗಿದ್ದೆ-ಕುಚೇಲನ ಹಾಗೆ ಕಾಣ್ಭಾರದೊಂತ. "ಹೋಗಲಿ ಬಿಡಿ, ಬಡ ಹುಡುಗರು ಯಾರೂ ಇಲ್ವೆ ?"
“ಬಡವರಾದ ಮಾತ್ರಕ್ಕೆ ವರದಕ್ಷಿಣೆ ಬಿಟ್ಕೊಡ್ತಾರೆ ಅಂದ್ಕೊಂಡ್ಯಾ?"
“ಹಾಗಲ್ಲ - "
“ತೀರಾ ನಿರ್ಗತಿಕನಿಗೆ ಕೊಟ್ಟು ಕೂಡಾ ಏನೇ ಪುರುಷಾರ್ಥ? ಸಾಲವೊ ಏನೋ ಮಾಡಿ ನಾವು ಕೊಡೋ ಐನೂರು ರೂಪಾಯಿ ಕರಗೋ ತನಕ ಮಜವಾಗಿರ್ತಾನೆ. ಆಮೇಲೆ ನಿನ್ಮಗಳ ಗತಿ?"
"ಏನೋಪ್ಪ, ನನಗೊಂದೂ ತಿಳೀದು. ನಮಗಿರೋದು ಒಂದೇ ಒಂದು ಹೆಣ್ಣು ಮಗು ಅಲ್ವೆ? ಕೆಳಗಿಳಿದ್ರೆ, ತಲೆ ಎತ್ಕೋಂಡು ನಡೆಯೋಕಾಗೋಲ್ಲ. ಏನೇನೋ ಅಂತಾರೆ."
“ಯಾರು ವಠಾರದೋರೆ?"
"ವಠಾರದೋರು, ಹೊರಗಿನೋರು, ಎಲ್ಲಾ .”
"ಅನ್ಲಿ ಬಿಡು, ಇದೇನು ಹತ್ತೊಂಭತ್ನೇ ಶತಮಾನವೇ?”
“ನೀವೇನೋ ಹಾಗೆ ಅಂದ್ಬಿಡ್ತೀರಾ.. ಆದರೆ... ನಾನು..."
ಆಳು. ಬಂದುಬಿಟ್ಟಿತು ಆಕೆಗೆ.
"ಅಳಬೇಡ್ವೆ, ದೇವರು ಬಿಟ್ಟು ಹಾಕೊಲ್ಲ, ಏನಾದರೂ ದಾರಿ ತೋರಿಸೇ ತೋರಿಸ್ತಾನೆ."
ಅಷ್ಟು ಹೊತ್ತಿಗೆ ಪಕ್ಕದ ಮನೆಯವನು ಇರುತ್ತಿರಲಿಲ್ಲ. ಕೊನೆಯ ಕೊಠ ಡಿಯ ವಿದ್ಯಾರ್ಥಿಗಳೂ ಇರುತ್ತಿರಲಿಲ್ಲ. ಅದನ್ನು ತಿಳಿದಿದ್ದ ಆಕೆ ಸ್ವಲ್ಪ ಗಟ್ಟಿಯಾ ಗಿಯೇ ಅತ್ತಳು.
ಅವರು ಬಾಗಿಲ ಬಳಿಗೆ ಹೋಗಿ ಅದನ್ನು ಮುಚ್ಚಿದರು, ಹೆಂಡತಿಯ ಹತ್ತಿರ ಬಂದು, ಆಕೆಗೆ ತಗಲಿಕೊಂಡೇ ಕುಳಿತರು. ಆಕೆಯ ಬಲಗೈಯನ್ನೆತ್ತಿ ಬೆರಳುಗಳನ್ನು ಮುಟ್ಟಿ ನೋಡಿದರು. ಇಪ್ಪತ್ತು ವರ್ಷಗಳಿಗೆ ಹಿಂದೆ ತುಂಬಾ ಸುಂದರಿಯಾಗಿದ್ದ ಆ ಜೀವ ಕಣ್ಣುಗಳೀಗ ಆಳಕ್ಕೆ ಇಳಿದಿದ್ದುವು. ಕಪೋಲಗಳು ಬತ್ತಿದ್ದುವು. ತಲೆಗೂದಲು ಬಿಳಿಯ ವರ್ಣಕ್ಕೆ ಬೇಗ ಬೇಗನೆ ತಿರುಗುತ್ತಿತ್ತು, ಹಿಂದಿನದೇ ನಿರ್ಮಲಾಂತಃಕರಣ ದಿಂದ, ಹಿಂದಿನದೇ ಆತ್ಮೀಯತೆಯಿಂದ ಹೆಂಡತಿಯ ಮುಂಗುರುಳನ್ನು ನೇವರಿಸಿ ಮೃದುವಾಗಿ ಅವರು ಅಂದರು..."
"ಅಳಬೇಡ ಚಿನ್ನ..."
ಮಕ್ಕಳಿಗೆ ತಿಳಿಯದಂತೆ, ತಾನೊಬ್ಬಳೆ ಇದ್ದಾ ಗ, ಇಲ್ಲವೆ ರಾತ್ರಿ ಮಕ್ಕಳು ನಿದ್ದೆ ಹೋದ ಮೇಲೆ ಆಕೆ ಆಗಾಗ್ಗೆ ಅಳುವುದಿತ್ತು, ಈಗ ಗಂಡನೆದುರು ತನ್ನ ದುಃಖದ ಸಾಕ್ಷವನ್ನಷ್ಟೆಕೊಟ್ಟು ಆಕೆ ಕಣ್ಣೊರೆಸಿಕೊಂಡಳು. ತನ್ನ ತಲೆಯನ್ನು ಗಂಡನ ಭುಜದ ಮೇಲೆ ಒರಗಿಸಿ, ಎಲ್ಲ ಸಂಕಟವನ್ನೂ ಮರೆಯಲು ಯತ್ನಿಸಿದಳು.
ತಮ್ಮನ್ನು ನಂಬಿ ಹಿಡಿದ ಜೀವ ಪರಿತಪಿಸುವುದನ್ನು ಕಂಡು ಹೃದಯವನ್ನು ಗರಗಸದಿಂದ ಕುಯ್ಯುತ್ತಿದ್ದ ಹಾಗಾಯಿತು ಅವರಿಗೆ.
"ಚಿನ್ನ, ನಿನಗೆ ನಾನು ಸುಖ ಕೊಡಲೇ ಇಲ್ಲ."
ಭುಜದ ಮೇಲಿದ್ದ ತಲೆಯಲುಗಿತು. ತುಟಿಗಳೆಡೆಯಿಂದ ಮಾತು ಹೊರಡಲಿಲ್ಲ.
ಯಾವುದೋ ಯೋಚನೆಯ ನಡುವೆ ಅವರೆಂದರು:
"ಸದ್ಯಃ ಇಬ್ಬರೇ ಮಕ್ಕಳು..."
ಮಾತು ಹೊರಗೆ ನಿಂತರೂ,ಮನಸಿನೊಳಗೇ ಯೋಚನೆ ಮುಂದುವರಿಯಿತು:
ಇಬ್ಬರೇ ಮಕ್ಕಳು...ರಾಧಾ ಹುಟ್ಟಿದ ಅನಂತರ ಮತ್ತೊಮ್ಮೆ ತಾಯಿಯಾಗಲಿದ್ದ
ಆಕೆಗೆ ಗರ್ಭಸ್ರಾವವಾಯಿತು. ಆರೈಕೆ ಸರಿಯಾಗಿ ಆಗದೆ ಗರ್ಭಕೋಶದ ಕಾಹಿಲೆ
ಗಳಿಗೆ ಗುರಿಯಾದಳು. ದೀರ್ಘಕಾಲ ಕಳೆದ ಮೇಲೆ ಚೇತರಿಸಿಕೊಂಡಳು ನಿಜ,
ಆದರೆ ಮತ್ತೆ ತಾಯಿಯಾಗಲಿಲ್ಲ. ಹಾಗಾದುದು ದೇವರ ಕೃಪೆಯೇನೋ ಎಂದು
ಅವರಿಗೆ ಒಮ್ಮೊಮ್ಮೆ ಅನಿಸುತ್ತಿತ್ತು. ಅದಲ್ಲದೆ ಹೆಚ್ಚು ಮಕ್ಕಳೇನಾದರೂ ಆಗಿದ್ದರೆ
ಅವುಗಳ ಗತಿ? ಈಗ ಇರುವವರು ಒಬ್ಬರೇ......ಮಗಳಿಗೊಂದು ಮದುವೆಯಾಗಿ
ಮಗನಿಗೊಂದು ಕೆಲಸ ದೊರೆತರೆ, ತಮ್ಮ ಸಂಸಾರದ ದೊಡ್ಡ ಸಮಸ್ಯೆಗಳು ಬಗೆಹರಿದ
ಹಾಗೆಯೇ.
ಹೀಗೆಂದು ಅವರು ಯೋಚಿಸುತ್ತಿದ್ದರು. ಆಕೆ ಮಾತ್ರ ಕನಸಿನ ನಿದ್ದೆಯಲ್ಲಿ
ದ್ದಂತೆ ಕಣ್ಣುಮುಚ್ಚಿಕೊಂಡೇ ಇದ್ದಳು.
ತಮ್ಮ ಯೋಜನೆಗಳಿಗೊಂದು ಸುಂದರ ರೂಪವನ್ನು ಕೊಡಲೆತ್ನಿಸುತ್ತ
ಅವರೆಂದರು:
"ಇನ್ನು ಸ್ವಲ್ಪ ದಿವಸ ಈ ಕಷ್ಟ. ಯಾವಾಗಲೂ ಹೀಗೇ ಇರೋಲ್ಲ ಚಿನ್ನ."
'ಹೌದು' ಎಂದೋ, 'ಇದು ಹುಚ್ಚು ಮಾತು' ಎಂದೊ ಅನ್ನುವಂತೆ ಭುಜದ
ಮೇಲಿದ್ದ ಆಕೆಯ ತಲೆ ಅಲುಗಿತು.
ಕೊನೆಯ ಕೊಠಡಿಯ ಬೀಗ ತೆಗೆದ ಸಪ್ಪಳವಾಯಿತು. ಮಾತಿನ ಸದ್ದು. ಆಕೆ
ಒಮ್ಮೆಲೆ ಎಚ್ಚೆತ್ತು, ತಲೆ ಎತ್ತಿ, ಗಂಡನಿಂದ ದೂರ ಕುಳಿತಳು. ಕಳ್ಳತನದಲ್ಲೇನನ್ನೊ
ಮಾಡುತ್ತಿದ್ದವರ ಹಾಗಾಯಿತು ಆಕೆಯ ಸ್ಥಿತಿ.
"ಸ್ಕೂಲು ಹುಡುಗರು ಬಂದರೂಂತ ಕಾಣುತ್ತೆ."
__ಎಂದಳು ಆಕೆ. ಶಾಂತವಾಗಿತ್ತು ಅವಳ ಮುಖಮುದ್ರೆ.
ಆ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮ ಯೋಚನೆಯನ್ನೇ ಮುಂದು
ವರಿಸುತ್ತ ಅವರೆಂದರು:
"ಎಷ್ಟೊಂದು ಸೊರಗಿದ್ದೀಯಾ ನೀನು?"
"ನನಗೇನೂ ಆಗಿಲ್ಲ. ನಾನು ಚೆನ್ನಾಗಿದೀನಿ."
ಗಂಡ ಆಡಿದ ಅಮೃತದಂತಹ ಮಾತಿಗಾಗಿ ದೃಷ್ಟಿಯಿಂದಲೇ ಕೃತಜ್ಞತೆಯನ್ನು
"ಹಾಗಾದರೆ ನನಗೆ ದೃಷ್ಟಿದೋಷ ಅನ್ನು!"
ಆ ನಗೆ ಮಾತು ಆಕೆಯ ಹೃದಯವನ್ನು ಬೆಳಗಿತು. ಕಣ್ಣುಗಳು ಮಿನುಗಿದುವು.
"ಒಲೆ ಹಚ್ಚಿ ಒಂದಿಷ್ಟು ಕಾಫಿ ಮಾಡ್ಲಾ?"
"ಹೂಂ. ಮಾಡು."
ಅವರು ಜಯರಾಮುವಿನ ಚಾಪೆ ಬಿಡಿಸಿ ಮಲಗಿಕೊಂಡು ಛಾವಣಿಯತ್ತ
ನೋಡಿದರು. ಹೆಂಡತಿ ಒಲೆ ಹಚ್ಚುತ್ತಿದ್ದಂತೆ ಅವರೆಂದರು:
"ಮಳೆ ಬಂದರೆ ಹೋದ ವರ್ಷದ ಹಾಗೆ ಈ ವರ್ಷವೂ ಸೋರುತ್ತೆ ಅಲ್ವೆ?
ನೋಡು ಆ ಮೂಲೆ ಹಂಚುಗಳೆಲ್ಲಾ ಒಡೆದು ಹೋಗಿವೆ."
"ದುರಸ್ತಿ ಮಾಡಿಸ್ಬೇಕೂಂತ ಹೇಳ್ತಾ ಇದ್ರು ರಂಗಮ್ಮ."
"ಗುಂಡಣ್ಣನ ಕೈಲಿ ತಾನೆ ಮಾಡ್ಸೋದು?"
ಆಕೆಗೆ ನಗು ಬಂತು. ಕಳೆದ ವರ್ಷ ಒಡೆದು ಹೋಗಿದ್ದ ಹಂಚುಗಳನ್ನು ಸರಿ
ಪಡಿಸಬೇಕೆಂದು ರಂಗಮ್ಮ ಒಂದೆರಡು ಬಾರಿ ಗುಂಡಣ್ಣನನ್ನು ಮೇಲಕ್ಕೆ ಕಳುಹಿಸಿ
ದ್ದಳು. ಗುಂಡಣ್ಣನೋ 'ನಾನೊಲ್ಲೆ' ಎಂದು ಯಾವತ್ತೂ ಹೇಳಿದವನಲ್ಲ. ವಠಾರದ
ಎಲ್ಲ ಹುಡುಗರೆದುರು, ರಂಗಮ್ಮನಿಂದ ನಿರ್ದೇಶಿತನಾಗಿ ಆತ ಛಾವಣಿಯನ್ನೇರಿದ.
ಒಡೆದ ಹಂಚುಗಳ ಬದಲು ಹೊಸ ಹಂಚುಗಳನ್ನಿರಿಸಿದ. ಆದರೆ ಆತ ಏರಿ ಇಳಿಯುವ
ಗದ್ದಲದಲ್ಲಿ ಬೇರೆ ಹಂಚುಗಳು ಬಿರುಕು ಬಿಟ್ಟುವು!
ಅವರು ಕೇಳಿದರು:
"ಗುಂಡಣ್ಣ ಇನ್ನೂ ಇಲ್ಲೇ ಇದಾನೇನು?"
"ಇಲ್ದೆ ಎಲ್ಹೋಗ್ತಾನೆ?"
"ಶುದ್ಧ ಬೆಪ್ಪು. ಮೆದುಳೇ ಇಲ್ಲ ಪ್ರಾಣಿಗೆ."
ತಮ್ಮ ಮಕ್ಕಳ ವಿಷಯದಲ್ಲಿ ಅವರಿಗೆ ತುಂಬಾ ಅಭಿಮಾನವಿತ್ತು. ಜಯರಾಮು
ಇಂಟರ್ ಪರೀಕ್ಷೆಯಲ್ಲಿ ಒಂದೇ ಸಲ ಉತ್ತೀರ್ಣನಾಗದೆ ತೊಂದರೆ ಕೊಟ್ಟದ್ದು ನಿಜ.
ಆದರೆ, ಅದು ಬೇರೆ ವಿಷಯ. ಪ್ರಾಪಂಚಿಕ ಜ್ಞಾನಕ್ಕೆ ಸಂಬಂಧಿಸಿ ತನ್ನ ಓರಗೆಯವ
ರನ್ನೆಲ್ಲ ಆತ ಸುಲಭವಾಗಿ ಮೀರಿಸುತ್ತಿದ್ದನೆಂಬುದು ತಂದೆಗೆ ಗೊತ್ತಿತ್ತು.
ಅವರು ಮಗನನ್ನು ಕುರಿತು ಯೋಚಿಸಿದರು. ಆತ ದೊಡ್ಡ ವಿದ್ವಾಂಸನಾಗ
ಬೇಕೆಂಬುದು ಅವರ ಆಸೆಯಾಗಿತ್ತು. ಮುಂದೆ ವಿಶ್ವವಿದ್ಯಾನಿಲಯದಲ್ಲಿ ಆತ ಹಿರಿಯ
ಪ್ರಾಧ್ಯಾಪಕನಾಗಿ ತಮಗೆ ಗೌರವ ತರಬೇಕೆಂಬ ಬಯಕೆ ಅವರಿಗಿತ್ತು. ಆದರೆ ಈಗ
ಆ ಕನಸು ಕಾರ್ಯವಾಗುವ ಸುಳಿವೂ ಇರಲಿಲ್ಲ.
ಮಗನ ವಿಷಯ ಹೆಂಡತಿಯೊಡನೆ ಮಾತನಾಡಲು ಅವರು ಇಚ್ಛಿಸಿದರು.
"ಹ್ಯಾಗಿದಾನೆ ಜಯರಾಮು?"
"ಇತ್ತೀಚೆಗೆ ಯಾಕೋ ಒಂದು ಥರವಾಗಿದಾನೆ. ಮುಖದ ಮೇಲೆ ಕಳೇನೇ ಇಲ್ಲ."
"ಅವನಿಗೆ ಸ್ನೇಹಿತರು ಇದಾರೇನು ಯಾರಾದರೂ?"
"ಯಾರೂ ಕಾಣೆನಪ್ಪಾ. ಮನೆಗೆ ಬರೋದೇನೂ ತಡ ಮಾಡೋಲ್ಲ.ಸಾಮಾನ್ಯ ವಾಗಿ ಒಬ್ನೇ ಇರ್ತಾನೆ..."
"ಬೆಳೆಯೋ ಹುಡುಗ...ನಾವು ಅನುಭವಿಸ್ತಿರೋ ಪಾಡು ಅರ್ಥವಾಗಿದೇಂತ ತೋರುತ್ತೆ..."
ಅವರು ತಪ್ಪಾಗಿ ಊಹಿಸಿರಲಿಲ್ಲ.
ಮಗನ ಬಳಿಕ ಮಗಳ ಸರದಿ...'ಚಿಕ್ಕವಳು'ಎಂದು ಎಷ್ಟೇ ಸಮಾಧಾನ ಹೇಳಿ ಕೊಂಡರೂ ಈಗಲೇ ಹುಡುಗಿ ಬೆಳೆದುಬಿಟ್ಟಿದ್ದಾಳೆ. ಅವರಮ್ಮನದೇ ರೂಪು. ಯಾವುದರಲ್ಲಿ ಕಡಮೆ ಆಕೆ? ಐಶ್ವರ್ಯದಲ್ಲಿ ತಾನೆ? ಅದು ದೊಡ್ಡದ್ದಲ್ಲ. ನಾವು ಶ್ರೀಮಂತರೆಂದು ಹೆಳಿಕೊಂಡದ್ದೇ ಇಲ್ಲ ಯಾವತ್ತೂ...
ಪಕ್ಕದ ಕೊಠಡಿ ಮನೆಯಲ್ಲಿ ಒಬ್ಬಂಟಿಗನಾಗಿ ವಾಸಿಸುತ್ತಿರುವ ಆ ಯುವಕ. ತಾವು ಒಂದೆರಡು ಸಾರೆ ಮಾತನಾಡಿಸಿದ್ದರು. ಸಂಭಾವಿತನಾಗಿಯೇ ತೋರಿದ್ದ.
"ಪಕ್ಕದ ಮನೆಯಾತ__"
"ಏನು?"
ಅವರು ಒಂದನ್ನು ಯೋಚಿಸಿದರು. ಆಕೆಯೂ ಒಂದನ್ನು ಯೋಚಿಸಿದಳು. ಇಬ್ಬರು ಯೋಚಿಸಿದುದೂ ಒಂದೇ ಆಗಿತ್ತು.
"ಚೆನ್ನಾಗಿದಾನಾ?"
"ಇದಾನೆ, ಒಳ್ಳೆಯವನು ಪಾಪ. ಯಾರ ತಂಟೆಗೂ ಹೋಗೊಲ್ಲ."
ಅವರು ಮುಂದೆ ಮಾತನಾಡಲಿಲ್ಲ. ದೄಷ್ಟಿ ಛಾವಣಿಯನ್ನೇ ನೋಡುತ್ತಿದ್ದರೂ ಯೋಚನೆಗಳು ಒಂದನ್ನೊಂದು ಹಿಂಬಾಲಿಸಿ ದೂರ ದೂರ ಸಾಗಿದುವು.
ಆಕೆ ಹೇಳಿದಳು:
"ಏಳಿ, ಕಾಫಿ ಸೋಸಿದ್ದಾಯ್ತು."
೯
ಜಯರಾಮು ವಾಚನಾಲಯಕ್ಕೆಂದು ಹೊರಟಿದ್ದ ನಿಜ. ಆದರೆ ಹತ್ತು ಹೆಜ್ಜೆ ಹೋದ ಮೇಲೆ ಆತ ತನ್ನ ಮನಸ್ಸು ಬದಲಾಯಿಸಿದ. ಕೇಳಿದ್ದ ಒಂದು ಪ್ರಶ್ನೆಗೆ ಸಂಪಾದಕರಿಂದ ಉತ್ತರ, ಬರೆದಿದ್ದ ಒಂದು ಓಲೆಗೆ ಮಕ್ಕಳ ಬಳಗದ ಅಣ್ಣನಿಂದ ಮಾರೋಲೆ, _ಇಷ್ಟನ್ನು ಆತ ಆ ವಾರದ ಪತ್ರಿಕೆಯಲ್ಲಿ ನಿರೀಕ್ಷಿಸಿದ್ದ. ಇಷ್ಟಲ್ಲದೆ ಎರಡು ಪತ್ರಿಕೆಗಳಿಗೆ ಎರಡು ಸಣ್ಣ ಕತೆಗಳನ್ನೂ ಆತ ಕಳುಹಿಸಿ ಬಹಳ ದಿನಗಳಾಗಿ ದ್ದುವು. ಜತೆಯಲ್ಲಿ ಅಂಚೆ ಚೀಟಿ ಇಟ್ಟಿದ್ದರೂ ಉತ್ತರ ಬಂದಿರಲಿಲ್ಲ. ಸ್ವೀಕೄತವಾಗಿರ ಬಹುದು; ಯಾವುದಾದರೊಂದು ವಾರಪತ್ರಿಕೆ ತೆರೆದೊಡನೆ ತನ್ನ ಕತೆಯೂ ಹೆಸರೂ ಕಣ್ಣಿಗೆ ಬೀಳಬಹುದು_ಎಂದು ಜಯರಾಮು ಆಸೆ ಕಟ್ಟಿಕೊಂಡಿದ್ದ. ಅದು ಆ ಏರಡು ಪತ್ರಿಕೆಗಳೂ ಹೊರಬೀಳುವ ದಿನ. ಬೇರೆ ವಾರವಾಗಿದ್ದರೆ ಜಯರಾಮು ಇಷ್ಟು ಹೊತ್ತಿಗೆ ಅಂಗಡಿ ಬೀದಿಯಲ್ಲಾಗಲೀ ವಾಚನಾಲಯದಲ್ಲಾಗಲೀ ಇರುತ್ತಿದ್ದ. ಆದರೆ ಈ ದಿನ ವಾರಪತ್ರಿಕೆಗಳನ್ನು ತೆರೆದು ನೋಡುವುದರಲ್ಲೂ ಆತನಿಗೆ ಆಸಿಕ್ತಿ ಇರಲಿಲ್ಲ.
ಜನರಿರುವ ಬೀದಿ ಬಿಟ್ಟು ಜಯರಾಮು ಕಾಲು ಹಾದಿ ಹಿಡಿದ. ಯಾರೂ ಜನ ರಿಲ್ಲದ ಜಾಗಕ್ಕೆ ದೂರ ಒಬ್ಬನೇ ಹೋಗಬೇಕೆಂದು ಅವನಿಗೆ ಬಯಕೆಯಾಯಿತು. ಯಾವುದೋ ಶಕ್ತಿ ನಗುನಗುತ್ತ ಒರಟು ಕೈಗಳಿಂದ ತನ್ನ ಕತ್ತನ್ನು ಹಿಸುಕಿ ಉಸಿರು ಕಟ್ಟಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಹೄದಯ ಭಾರವಾಗಿ ಮೈ ಕಾವೇರಿದಂತೆ ತೋರಿತು.
...ರೈಲು ಸೇತುವೆಯನ್ನು ತಲುಪಿದ ಜಯರಾಮು, ಮಣ್ಣು ದಿಬ್ಬಗಳನ್ನು ಹಾದು ಕೆಳಕ್ಕಿಳಿದ. ಪಾದದ ಬಳಿ ಸ್ವಲ್ಪ ಹರಿದಿದ್ದ ಪಾಯಜಾಮ, ಮಾಸಿದ ಅಂಗಿ, ಎಣ್ಣೆ ಬಾಚಣಿಗೆಗಳ ಸ್ಪರ್ಶವಿಲ್ಲದೆ ಇದ್ದರೂ ಓರಣವಾಗಿದ್ದ ಕ್ರಾಪು......ಕಂಬಿಗೆ ಅಡ್ಡವಾಗಿ ಹಾಕಿದ ಹಲಿಗೆಗಳು ಅನಂತವಾಗಿದ್ದವು. ಕಲ್ಲು ತಾಕಿ ಒಮ್ಮೊಮ್ಮೆ ನೋವಾದರೂ, ಹಲಿಗೆಯಿಂದ ಹಲಿಗೆಗೆ ಹೆಜ್ಜೆ ಇಡುತ್ತ ಯಶವಂತಪುರದತ್ತ ಜಯ ರಾಮು ನಡೆದ.
ನಿರ್ಜನವಾಗಿದ್ದ ಮಲ್ಲೇಶ್ವರದ ರೈಲು ನಿಲ್ದಾಣ ಹಿಂದೆ ಬಿತ್ತು. ಆ ಬಳಿಕ ರೈಲು ಗೇಟು, ಕಾವಲು ಮನೆ, ಒಂಟಿ ಮರ. ಬರಲಿದ್ದ ಕಡು ಬೇಸಗೆಗೆ ಆಗಲೆ ಹೆದರಿ ನೆಲದ ಮೈ ಸುಕ್ಕುಗಟ್ಟಿತ್ತು. ಸಂಜೆಯಾಗುತ್ತ ಬಂದಿದ್ದರೂ ವೄದ್ದ ಸೂರ್ಯ ಉಗ್ರ ನಾಗಿಯೇ ಇದ್ದ. ಜಯರಾಮು ಅಲ್ಲೇ ಎಡಕ್ಕೆ ಇಳಿದು ಕೆರೆಯನ್ನು ಬಳಸಿಕೊಂಡು ಎದುರಿಗಿದ್ದ ಬೆಟ್ಟವನ್ನೇರಿದ. ಎತ್ತರದಲ್ಲಿ ಬಂಡೆಗಲ್ಲುಗಳಿದ್ದುವು. ಜಯರಾಮು ತನ್ನ ಪರಿಚಯದ ಕಲ್ಲಿಗೆ ಒರಗಿ ಕುಳಿತ.
ವಾರಕೋಮ್ಮೆಯೋ ಎರಡು ವಾರಗಳಿಗೊಮ್ಮೆಯೋ ಜಯರಾಮು ಅಲ್ಲಿಗೆ ಬರುವುದಿತ್ತು. ಅದು ಮನಸ್ಸು ತುಂಬಾ ಉಲ್ಲಾಸವಾಗಿದ್ದಾಗ, ಇಲ್ಲಿವೆ ಬಹಳ ಪ್ರಕ್ಷುಬ್ಧಗೊಂಡಿದ್ದಾಗ. ಮನಸ್ಸು ಸಂತೋಷದಿಂದ ಚಿಲಿಪಿಲಿಗುಡುತ್ತಿದ್ದ ದಿನ, ಬಾಡಿದ್ದರೂ ಸರಿಯೆ ಚಿಗುರಿದ್ದರೂ ಸರಿಯೆ ನಿಸರ್ಗ ಸುಂದರವಾಗಿ ಕಾಣಿಸಿ ಆತ ನನ್ನು ತನ್ಮಯಗೊಳಿಸುತ್ತಿತ್ತು. ಮನುಷ್ಯನನ್ನು ಮಣ್ಣಿಗೆ ಬಿಗಿದಿರುವ ಅಗೋಚರ ತಂತುವಿನ ವಿಷಯ ಆತ ವಿಸ್ಮಯಗೊಳ್ಳುತ್ತಿದ್ದ. ಕರಿಯ ಬಂಡೆಗಳು ಆತನಿಗೆ ಪ್ರಿಯ ವಾಗಿ ತೋರುತ್ತಿದ್ದುವು. ಬೆರಳುಗಳಿಂದ ಅವುಗಳನ್ನು ಮುಟ್ಟಿ ನೋಡುತ್ತಿದ್ದ. ಮನಸ್ಸು ಬೇಸರವಾಗಿದ್ದಾಗ, ಸುತ್ತಮುತ್ತಲಿನ ಬರಿಯ ಶೂನ್ಯವೂ ಒಂದು ಬಗೆಯ
ನೆಮ್ಮದಿಯನ್ನು ಆತನಿಗೆ ದೊರಕಿಸುತ್ತಿತ್ತು.