ರಂಗಮ್ಮನ ವಠಾರ (1987)
by ನಿರಂಜನ

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

86852ರಂಗಮ್ಮನ ವಠಾರನಿರಂಜನ

ವಾಚಕ ಮಹಾಶಯ

ನಿರಂಜನ: ಮೂವತ್ತು ಸಂಪುಟಗಳಲ್ಲಿ...... ಸರಣಿಯ ಮೂರನೆಯ ಸಂಪುಟ
ನಿಮ್ಮ ಮುಂದಿದೆ. ಇದರಲ್ಲಿ ನನ್ನ ಮೂರು ಕಾದಂಬರಿಗಳು ಅಡಕವಾಗಿವೆ_
'ರಂಗಮ್ಮನ ವಠಾರ,' 'ದೂರದ ನಕ್ಷತ್ರ' ಮತ್ತು 'ನವೋದಯ.'

ಇವುಗಳಲ್ಲಿ, ತನ್ನ ವಿಶಿಷ್ಟ ಕಥನ ವಿಧಾನದಿಂದಾಗಿ ಜನಪ್ರಿಯವಾದ ಕಾದಂಬರಿ,
'ರಂಗಮ್ಮನ ವಠಾರ.' ಹದಿನಾಲು 'ಮನೆ'ಗಳಾಗಿ ವಿಂಗಡಿಸಲ್ಪಟ್ಟು, ಹದಿನಾಲ್ಕು
ಸಂಸಾರಗಳಿಗೆ ಆಸರೆ ನೀಡಿರುವ ವಠಾರವೇ ಈ ಕೃತಿಯ ಕೇಂದ್ರಬಿಂದು. ಇಡೀ
ಕಾದಂಬರಿಗೆ ನಾಯಕ-ನಾಯಿಕೆ ಇಲ್ಲ, ಆದರೆ, ಜೋಡಿಗಳು ಸಾಕಷ್ಟಿವೆ. ಹದಿನಾಲ್ಕು
ವಸತಿಗಳೆಂದ ಮೇಲೆ ಹಿರಿ-ಕಿರಿಯರ ಒಟ್ಟು ಸಂಖ್ಯೆ ತೀರಾ ಚಿಕ್ಕದಾಗುವುದೂ
ಶಕ್ಯವಿಲ್ಲ!

ನಮ್ಮ ನಗರ ಪಟ್ಟಣಗಳಲ್ಲಿ ವಠಾರಗಳು-ಚಾಳ್ ಗಳು-ಇನ್ನೂ ಇವೆ. ಬಹು
ಮಹಡಿ ಕಟ್ಟಡಗಳ ಉದ್ಭವದೊಂದಿಗೆ, ವಠಾರ ಮನೆಗಳು ಅಪಾರ್ಟ್ ಮೆಂಟ್ ಗಳಾಗಿ
ರೂಪುಗೊಂಡಿರುವುದೂ ಉಂಟು. ಈ ಆಕಾಶವಾಸ ಬಡ ಮಧ್ಯಮ ವರ್ಗದವರ
ಪಾಲಿಗೆ ಕೇವಲ ಕನಸು. ಏನಿದ್ದರೂ ರಂಗಮ್ಮನ ಬಾಡಿಗೆದಾರರ ಕಥೆ ಸಾರ್ವ
ಕಾಲಿಕ. ಈಗಿನ ಪೀಳಿಗೆಯವರಿಗಂತೂ ಇದು ತಾಜಾ ಸರಕು.

****

ಅಧ್ಯಾಪಕ ಸಂಕುಲದ ಬಗೆಗೆ ನನ್ನ ಕುತೂಹಲ ವಿದ್ಯಾರ್ಥಿ ದೆಸೆಯಿಂದಲೇ
ಆರಂಭ. ಉಪಾಧ್ಯಾಯರ ಪ್ರತಿಭೆ, ಬೋಧನ ಸಾಮರ್ಥ್ಯ, ಮಾನವೀಯ ನಡ
ವಳಿಕೆ - ಇವಷ್ಟೇ ಆಗ ನನಗೆ ಮುಖ್ಯವಾಗಿದ್ದುವು. ಅವರ ಜಾತಿ ಗೀತಿ ನನಗೆ ಅಮುಖ್ಯ
ವಾಗಿತ್ತು. ಆದರೆ ಅವರ ಮನೆಗಳ ಬಳಿ ಸಾರಿದಾಗ, ಧಾರ್ಮಿಕ ಆಚಾರಗಳಲ್ಲಿ
ವ್ಯತ್ಯಾಸ ಕಾಣುತ್ತಿದ್ದೆ. ನನ್ನದಲ್ಲದ ಪ್ರಪಂಚದಲ್ಲಿ ತೋರಿ ಬರುತ್ತಿದ್ದ ವೈವಿಧ್ಯ
ನನ್ನನ್ನು ವಿಸ್ಮಯಕ್ಕೆ ಗುರಿ ಮಾಡುತ್ತಿತ್ತು.

ನೀಲೇಶ್ವರದಲ್ಲಿ ಹೈಸ್ಕೂಲು ಶಿಕ್ಷಣ ಮುಗಿಸಿ, ಲೇಖನಿಯ ಬಲದಿಂದ ಬದುಕ
ಲೆಂದು ಮಂಗಳೂರು ತಲಪಿದೆ. 'ರಾಷ್ಟ್ರ ಬಂಧು'ವನ್ನು ಸೇರುವುದಕ್ಕೆ ತುಸು ಮುನ್ನ
ನಾನು ಕಂಡ ವ್ಯಕ್ತಿ ಕಯ್ಯಾರರು, ಅವರು ಆಗ 'ಸ್ವದೇಶಾಭಿಮಾನಿ' ಸಾಪ್ತಾಹಿಕದಲ್ಲಿ
ಉಪ ಸಂಪಾದಕರಾಗಿದ್ದರು. ನನಗೆ ಅವರೊಂದು ಸಲಹೆ ನೀಡಿದರು: "ನಿಮಗೆ
ಪತ್ರಿಕೋದ್ಯಮ ಬೇಡ. ನೀವು ಮಾಸ್ಟ್ರಾಗಿ." ಮಾಸ್ಟ್ರಾಗದೆ ಪತ್ರಿಕೋದ್ಯಮಿಯೇ
ಆದೆ. ಆದರೆ, ಅಗತ್ಯವಾಗಿದ್ದ ಚೂರು ಪಾರು ಹೆಚ್ಚಿನ ಸಂಪಾದನೆಗಾಗಿ, ಒಂದೆರಡು
ಕಡೆ ಟ್ಯೂಷನ್ ಇಟ್ಟುಕೊಂಡೆ. ಅಂತೂ ಒಂದು ಬಗೆಯ ಮಾಸ್ಟ್ರಾದೆ! ಸುಪ್ತಪ್ರಜ್ಞೆ
ಯಲ್ಲಿ ಈ ಮಾಸ್ತರಿಕೆ ನನಗೆ ಬಹಳ ಕಾಟ ಕೊಟ್ಟಿರಬೇಕು. ಆ ಕಾರಣದಿಂದಲೆ ಜಯ
ದೇವ ನನ್ನ 'ದೂರದ ನಕ್ಷತ್ರ' ಕಾದಂಬರಿಯಲ್ಲಿ ಮೂರ್ತರೂಪ ತಳೆದ.

vi

ಆ ವರ್ಷಗಳಲ್ಲಿ ಕನ್ನಡ ನಾಡಿನ ಉದ್ದ ಅಗಲ ಅಳೆದಿದ್ದೆ. ಸ್ವಾತಂತ್ರ್ಯ
ಪ್ರಾಪ್ತಿಯ ಅನಂತರದ ಭ್ರಮೆ ನಿರಸನ ಸಾಕಷ್ಟು ನೋವು ಉಂಟು ಮಾಡಿತ್ತು. ಆ
ನೋವು ಉಲ್ಬಣಿಸಿದ್ದು, ಜಾತೀಯತೆಯ ವಿರಾಟ್ ರೂಪವನ್ನು ನಾನು ಕಂಡಾಗ.
ಈ ಪಿಡುಗು ಕ್ರಮೇಣ ಸರ್ವವ್ಯಾಪಿಯಾಗತೊಡಗಿತು.

ಆ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯ ಉದಿಸಿತು. ಕನ್ನಡಿಗರ ಪಾಲಿಗೆ
ಅದೊಂದು ಮಹಾಸಂಭವ. ಜಯದೇವ ಈಗಲೂ ಅಧಾಪಕ. ನೂತನ ರಾಜ್ಯೋ
ದಯದ ವೀಕ್ಷಕ. 'ದೂರದ ನಕ್ಷತ್ರ'ದ ಕಥೆಯ ಮುಂದುವರಿಕೆಯೇ “ನವೋದಯ.'

****

ಪುಟ್ಟದಾದ ಒಂದೂರು. ಒಂದು ಪ್ರಾಥಮಿಕ ಶಾಲೆ, ಒಂದು ಮಾಧ್ಯಮಿಕ
ಶಾಲೆ, ನೀಲಿ ನಕಾಶೆಯಲ್ಲಿ ಕಂಗೊಳಿಸಿದ ಫ್ರೌಡಶಾಲೆ. ನಾಲ್ಕಾರು ಉಪಾಧ್ಯಾಯರು
ಮಕ್ಕಳಿಗೆ ಪಾಠ ಹೇಳುವ ಆಟದಲ್ಲಿ ನಿರತರು.

ಕಾಲದ ಚೌಕಟ್ಟಿನಲ್ಲಿ ವಿಸ್ತಾರ ಬದುಕಿನ ಪುಟ್ಟ ಭಾಗವನ್ನು ಕಲಾತ್ಮಕವಾಗಿ ಸೆರೆ
ಹಿಡಿಯುವ ಪ್ರಯತ್ನವಿದೆ 'ದೂರದ ನಕ್ಷತ್ರ'ದಲ್ಲಿ, 'ನವೋದಯ'ದಲ್ಲಿ.

ಇತರ ಪಾತ್ರಗಳು ಹಲವಿದ್ದರೂ, ಇಲ್ಲಿ ಪ್ರಮುಖರು ಅಧಾಪಕರು. ವೈಯು
ಕ್ತಿಕ ಮತು ಸಾಮುದಾಯಿಕ ಜೀವನದಲಿ ಅನಪೇಕಣಿಯ ಅಂಶಗಳು ಸಾಕಷ್ಟಿದ್ದರೂ
ಅವನ್ನು ಮೆಟ್ಟಿ ನಿಲ್ಲಬಲ್ಲ ಮಾನವೀಯ ಗುಣವೂ ಒಂದಿದೆ. ಆ ಗುಣ ಇಲ್ಲಿ ಇರುಳಿನ
ಹಣತೆಯಾಗಿ ಮಂದ ಬೆಳಕು ಬೀರಿದೆ; ದಡಗಳನ್ನು ಜೋಡಿಸುವ ಸೇತುವೆಯಾಗಿದೆ.
****
ಈ ಸಂಪುಟದ ಆನುಬಂಧದಲ್ಲಿ, ಮೇಲೆ ಪ್ರಸ್ತಾಪಿಸಿದ ಕಾದಂಬರಿಗಳನ್ನು
ಕುರಿತು ಇನ್ನಿಷ್ಟು ವಿವರಗಳನ್ನು ಕಲೆ ಹಾಕಿದ್ದೇನೆ. ಸಂಪುಟದ ಓದಿಗೆ ಅದು ಸಹಾಯಕ.

'ನಿರಂಜನ: ಮೂವತ್ತು ಸಂಪುಟಗಳಲ್ಲಿ.' ಐ.ಬಿ.ಎಚ್. ಪ್ರಕಾಶನದ ಯೋಜನೆ,
ಅದಕ್ಕೆ ಕಾರಣರು ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀ ಜಿ. ಕೆ. ಅನಂತರಾಮ್
ಅವರು. ಗದಗಿನ ತ್ವರಿತ ಮುದ್ರಣದ ಶ್ರೀ ಫ. ಶಿ. ಭಾಂಡಗೆಯವರು ಈ ಸಂಪುಟವನ್ನು
ಒಂದೂವರೆ ತಿಂಗಳಲ್ಲಿ ಅಂದವಾಗಿ ಮುದ್ರಿಸಿದ್ದಾರೆ.

--ಇವರಿಗೆ ನಾನು ಕೃತಜ್ಞ.


9–6–1987
ನಿರಂಜನ

'ಕಥೆ' 515 7ನೇ ಮುಖ್ಯಬೀದಿ,

46ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-560 04!











ರಂಗಮ್ಮನ ವಠಾರ

ಅಂಗಳದಲ್ಲಿ ಹೆಂಗಸರು ಗುಂಪುಕಟ್ಟಿಕೊಂಡು ಗುಸು ಗುಸು ಮಾತನಾಡುತ್ತಿ

ದ್ದರು. ಆ ಮಾತುಕತೆಯ ನಡುವೆ ಒಮ್ಮೆಲೆ ಅವರ ಕಿವಿಗಳು ನಿಮಿರಿದವು. ಸದ್ದು,ಮೊದಲು ಅಸ್ಪಷ್ಟವಾಗಿದ್ದುದು, ಕ್ರಮೇಣ ಸ್ಪಷ್ಟವಾಗಿ ಕೇಳಿಸಿತು.

ಟಕ್-ಟಕ್-ಟಕ್....

ವಠಾರದ ನಡುವಿನ ಎರಡಡಿ ಅಗಲದ ಓಣಿಯಲ್ಲಿ ನಡೆಗೋಲನ್ನೂರಿಕೊಂಡು

ರಂಗಮ್ಮ ಬರುತ್ತಿದ್ದರು. ಎಂದಿನಂತೆ, ಆ ಸದ್ದಿನ ಜತೆಯಲ್ಲೆ, ಇದ್ದ ಕೆಲವು ಹಲ್ಲುಗಳನ್ನು ಕಡಿಯುವ ಸಪ್ಪಳ. ಅದರೊಡನೆ ಬೆರೆಯಲೆಂದು, ಗಂಟಲಿನಿಂದ ಹೊರಟು ಅಲ್ಲಿಯೆ ಇಂಗುತ್ತಿದ್ದ ಆಂ_ಊಂ_ನರಳಾಟ.

ವಯಸ್ಸಾಗಿದ್ದ ರಂಗಮ್ಮ ಮೆಲ್ಲನೆ ನಡೆದು ಬಂದು ಹೆಂಗಸರ ಗುಂಪಿನೆದುರು

ನಿಂತರು. ಬಾಗಿದ್ದ ಅವರ ಬೆನ್ನು ಕ್ಷಣ ಕಾಲ ನೇರವಾಗಿರಲು ಯತ್ನಿಸಿತು. ಆ ಯತ್ನಕ್ಕೆ ಬೆಂಬಲವಾಗಿ ಬಲಗೈ ಸೊಂಟದ ಮೇಲೇರಿತು.

ಉಳಿದೆಲ್ಲರ ಮುಖಗಳೂ ಪ್ರಶ್ನಾರ್ಥಕ ಚಿಹ್ನೆಯಾಗಿ ರಂಗಮ್ಮನತ್ತ ತಿರುಗಿ

ದುವು. ರಂಗಮ್ಮ ನಿಟ್ಟುಸಿರುಬಿಟ್ಟರು, ತಲೆಯಲ್ಲಾಡಿಸಿದರು. ಏನು ಅದರರ್ಥ? ಆಸೆ ಇಲ್ಲವೆ ಹಾಗಾದರೆ? ನಾರಾಯಣಿ ಬದುಕುವ ಆಸೆಯೇ ಇಲ್ಲವೆ?

ರಂಗಮ್ಮ ಮತ್ತಷ್ಟು ಬಿಗಿಯಾಗಿ ತುಟಿಗಳನ್ನು ಬಿಗಿದುಕೊಂಡರು. ಬೆನ್ನು

ಮೊದಲಿನಂತೆ ಬಾಗಿತು. ಕಾಲುಗಳು ಹಿಂತಿರುಗಿದವು. ಟಕ್_ಟಕ್_ಟಕ್ . . . ರಂಗಮ್ಮ ಸಾವಧಾನವಾಗಿ ನಡೆದು, ಆ ನಡುಹಗಲಲ್ಲೂ ಕತ್ತಲು ಅಡರಿದ್ದ ತಮ್ಮ ಗೂಡಿನೊಳಕ್ಕೆ ಸೇರಿಕೊಂಡರು.

ಮತ್ತೆ ಹೆಂಗಸರ ಗುಸು ಗುಸು ಮಾತು...

"ಅಯ್ಯೋ ಪಾಪ!"

" ಆ ಪುಟ್ಟ ಕೂಸುಗಳನ್ನ ಯಾರು ನೋಡ್ಕೊಳ್ಳೋರು ಇನ್ನು ?"

" ಆತನ ಕೆಲಸ ಬೇರೆ ಹೋಯ್ತಂತೆ."

"ಹೌದೆ? ನಿಜವೆ? ಅಯ್ಯೋ!"

ಆ ವಠಾರಕ್ಕೆ ಅದೇ ವರ್ಷ ಬಿಡಾರ ಬಂದಿದ್ದ, ಮಕ್ಕಳು ಮರಿ ಕಾಹಿಲೆ ಕಸಾಲೆ

ಎಂದರೇನೆಂಬುದನ್ನು ತಿಳಿಯದ, ಎಳೆಯ ಗೃಹಿಣಿಯೊಬ್ಬಳು ದೇವರನ್ನು ಟೀಕಿಸಿದಳು:

"ಆ ಪರಮಾತ್ಮ ಇಂಥ ಕಷ್ಟ ಕೊಡಬಾರದು!"

ಎಲ್ಲರೂ ಆ ಸ್ವರ ಕೇಳಿ ಅತ್ತ ನೋಡಿದರು. ಆದರೆ ಯಾರೂ ಮಾತನಾಡ

ಲಿಲ್ಲ ಮುಖ ಕೆಂಪೇರಿ, ಆಕೆ ತನ್ನ ಬಿಲ ಸೇರಿಕೊಂಡಳು.

ಹುಟ್ಟಿದ್ದ ನಾಲ್ಕು ಮಕ್ಕಳನ್ನೂ ಕಳೆದುಕೊಂಡಿದ್ದ ಬಡ ಹೆಂಗಸೊಬ್ಬಳು, ಒಳೆ

ಹೋದ ಆ ಯುವತಿಯನ್ನು ತನ್ನ ದೃಷ್ಟಿಯಿಂದ ಹಿಂಬಾಲಿಸಿ, ಹೂಂ ಎಂದು ನಿಟ್ಟುಸಿರುಬಿಟ್ಟಳು.

ಆತ ಇದಾರೋ?

ಇಲ್ದೇನು ಮಾಡ್ತಾರೆ ಪಾಪ! ಹುಡುಗರಿಗೆ ಗಂಜಿ ಬೇಯಿಸಿಯಾದರೂ

ಹಾಕೋದು ಬೇಡ್ವೆ?

ಇಲ್ಲ ಕಣ್ರೀ. ಆತ ಒಲೆ ಹಚ್ಚೇ ಇಲ್ಲ. ಬೆಳಗ್ಗೆ ನಾನೇ ಒಂದಿಷ್ಟು ದೋಸ

ಹುಯ್ದು ಹುಡುಗರಿಗೆ ಕೊಟ್ಟೆ.

ಹಾಗೆ ಹೇಳಿದ ಹೆಂಗಸು ಮೂರು ಮಕ್ಕಳ ತಾಯಿ. ಆಕೆಗೂ ನಾರಾಯಣಣಿಗೂ

ಹೇಳಿಕೊಳ್ಳುವಂತಹ ಸ್ನೇಹವೇನೂ ಇರಲಿಲ್ಲ. ವಾಸ್ತವವಾಗಿ, ಅವರೊಳಗೆ ಒಂದು ಬಗೆಯ ವೈಮನಸ್ಸಿತ್ತು. ನಾರಾಯಣಿಯ ಎಂತು ವರ್ಷದ ಹಿರಿಯ ಮಗ ಮಹಾ ತುಂಟ. ಆತನ ದಾಳಿಯಿಂದ ತ್ನ್ನ ಗುಬ್ಬಚ್ಚಿಗಳನ್ನು ಕಾಪಾಡುವುದು ಆ ಹೆಂಗಸಿನ ಪಾಲಿಗೊಂದು ಸಾಹಸವಾಗಿತ್ತು. ಹೀಗಿದ್ದರೂ, ಮರಣಶಯ್ಯೆಯಲ್ಲಿ ಮಲಗಿದ್ದ ನಾರಾಯಣಿಯ ಮಕ್ಕಳಿಗೆ ಆಕೆ ಈ ದಿನ ತಿನಿಸು ಕೊಟ್ಟಿದ್ದಳು.

ಅದು ಹೆಮ್ಮೆಪಡುವಂತಹ ಔದಾರ್ಯವೆಂದು ಭಾವಿಸಿ ಆಕೆ ಆ ವಿಶಯ ಪ್ರಸ್ತಾ

ಪಿಸಿರಲಿಲ್ಲ. ಹಾಗೆ ಮಾಡಿದುದು ಆಡಿದುದು ಅಸ್ವಾಭಾವಿಕವಾಗಿಯೂ ಇತರರಿಗೆ

ತೋರಲಿಲ್ಲ.

ಸದ್ಗುಣ ಸಂಪನ್ನೆಯಾಗಿರಲಿಲ್ಲ ನಾರಾಯಣಿ_ಮಹಾ ಸಾಧ್ವಿಯಾಗಿರಲಿಲ್ಲ. ಆ

ವಠಾರಕ್ಕೆ ಆಕೆ ಬಂದುದು ಚೊಚ್ಚಲ ಬಾಣಂತಿಯಾಗಿ. ಯುದ್ಧ ನಡೆಯುತ್ತಿದ್ದ ಕಾಲ. ವಿಮಾನ ಕಾರಖಾನೆಯಲ್ಲಿ ಗಂಡನಿಗೆ ಕೆಲಸವಿತ್ತು. ಸ್ವಲ್ಪ ದಿನ ಅವರು, ನಾಲ್ಕು ಜನ ಅಸೂಯೆಪಡುವ ಹಾಗೆಯೇ ಇದ್ದರೆನ್ನಬಹುದು. ಯುದ್ಧ ಮುಗಿಯಿತು. ನಾರಾಯಣಿಯ ಗಂಡ ಕೆಲಸ ಕಳೆದುಕೊಂಡ ಸಹಸ್ರ ಸಹಸ್ರ ಜನರಲ್ಲಿ ಒಬ್ಬನಾದ. ನಿರುದ್ಯೋಗ, ಆ ಬಳಿಕ ಸಣ್ಣ ಪುಟ್ಟ ಕೆಲಸ, ಮತ್ತೆ ನಿರುದ್ಯೋಗ, ಮತ್ತೊಮ್ಮೆ ಎಲ್ಲಾದರೂ ಕೆಲಸ. ಸಾಕಷ್ಟು ಸಂಪಾದನೆಯಿಲ್ಲದೆ ಬಾಳು ಸಂಕಟಮಯವಾಯಿತು. ಹೀಗಿದ್ದರೂ ಮಕ್ಕಳಾಗುವುದು ನಿಲ್ಲಲಿಲ್ಲ. ಈ ಏಳು ವರ್ಷಗಳ ಅವಧಿಯಲ್ಲಿ ಮತ್ತೆ ಮೂರು. ಪ್ರತಿಯೊಂದು ಹೆರಿಗೆಯಾದಂತೆ ನಾರಾಯಣಿ ಹೆಚ್ಚು ಹೆಚ್ಚು ಬಡವಾಗುತ್ತ ನಡೆದಳು. ಈ ಸಲ ಬಾಣಂತಿಯಾಗಿ ಒಂದು ವರ್ಷವಾದರೂ ಆಕೆ ಚೇತರಿಸಿಕೊಳ್ಳುವ ಚಿಹ್ನೆ ತೋರಲಿಲ್ಲ ...ಶೀಷೆ ಶೀಷೆ ತುಂಬ ಬಣ್ಣಬಣ್ಣದ ಔಷಧಿ_ಒಂದೆರಡು ಸೂಜಿ ಮದ್ದು ಕೂಡ. ಧರ್ಮಾಸ್ಪತ್ರೆಗೆ ಹತ್ತಾರು ಸಾರಿ ಅಲೆದಾಟ...ಇಷ್ಟೇ ಆಗಿದ್ದರೆ ನಾರಾಯಣಿ 'ಕೆಟ್ಟವಳು' ಎನ್ನಿಸಿಕೊಳ್ಳಬೇಕಾದ್ದಿರಲಿಲ್ಲ. ಆದರೆ ಆ ಏಳು ವರ್ಷಗಳಲ್ಲಿ ನಾರಾಯಣಿ ಏನೋ ಆಗಿ ಹೋಗಿದ್ದಳು. ಆಗಿನ ಮಾತಿನ ಮಲ್ಲಿ, ಸ್ನೇಹಮಯಿ, ಈಗ ಮಹಾ ಮುಂಗೋಪಿ. ನಿಷ್ಕಾರಣವಾಗಿ ರೇಗಿ, ಸಿಕ್ಕವರೊಡನೆಲ್ಲ ಜಗಳ. ‍‍‍ಕಾಯುತ್ತಿದ್ದಳು. ಒಮ್ಮೆ ಎದುರು ಬಿಡಾರದಿಂದ ಎರಡು ತುಂಡು ಸೌದೆ ಕದ್ಧಳೆಂಬ ಆರೋಪ ಆಕೆಯ ಮೇಲೆ ಹೂರಿಸಲ್ಪಟ್ಟಿತು. ಆಗ ವಠಾರ ಧೂಳೆದ್ಧು ಹೋಗುವ ಹಾಗೆ ನಾರಾಯಣಿ ಕಿರಿಚಿಕೊಂಡಿದ್ದಳು:

"ನನ್ನ ಕಳ್ಳಿ ಆಂದೋರ ನಾಲಿಗೆ ಬಿದ್ದು ಹೋಗ!ತೋರಿಸ್ಸ್ ನಾನು ಕದ್ದ ಸೌದೇನ!

ಕೊಡಿ ರುಜುವಾತು!"

ಆ ಆಹ್ವಾನವನ್ನು ಸ್ವೀಕರಿಸುವುದು ಸುಲಭವಾಗಿರಲ್ಲಿಲ. ಎಲ್ಲಿತ್ತು ಸಾಕ್ಶ್ಯ?

ಹಿಡಿ ಬೂದಿಯನ್ನೆತ್ತಿ, ಇದು ಈ ಮನೆಯ ಸೌದೇ ಬೂದಿ ಎನ್ನುವುದು ಸಾಧ್ಯವಿತ್ತೆ? ನಾರಾಣಿ ತಲೆಗೂದಲು ಕೆದೆರಿ ಕಿತ್ತಾಡಿ, ಕಣ್ಣು ಕೆಂಪಗೆ ಮಾಡಿ,ಅಂಗೈಯಿಂದ ತಲೆ ಚಚ್ಚಿಕೊಂಡು, ತಾನು ನಿರಪರಾಧಿಯೆಂದು ತೋರಿಸಿಕೊಡಲು ಯತ್ನಿಸಿದ್ದಳು.ಆದರೆ,ಆಕೆ ಅಪರಾಧಿ ಎಂಬ ವಿಶಯದಲ್ಲಿ ಯಾರಿಗೂ ಸಂದೇಹವಿರಲಿಲ್ಲ.

ಅದು ಎರಡು ವರ್ಷಗಳಿಗೆ ಹಿಂದಿನ ಮಾತು. ಆ ದಿನದಿಂದ ಎದುರು ಬಿಡಾರದ,

ಎರಡೇ ಅಡಿ ಅಂತರದಲ್ಲಿದ್ದ ಎದುರು ಬಿಡಾರದ, ಮೀನಾಕ್ಷಮ್ಮನೂ ಅವಳ ಮನೆಯವರೂ ನಾರಾಯಣಿಯ ಸಂಸಾರದೊಡನೆ ಮಾತು ಬಿಟ್ಟಿದ್ದರು. ಮಿನಾಕ್ಷಮ್ಮನಿಗಿದ್ದುದು ಅದೇ ಆಗ ಶಾಲೆಗೆ ಹೋಗತೊಡಗಿದ್ದ ಒಬ್ಬನೇ ಮಗ. ಆತ ನಾರಾಯಣಿಯ ಮಕ್ಕಳೊಡನೆ ಆಟಾವಾಡದಂತೆ ನೋದಲು ಮೀನಾಕ್ಷಮಾ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ನಾರಾಯಣಿಯ ದೊಡ್ಡ ಹುಡುಗನೂ ಮೀನಾಕ್ಷಮ್ಮನ ಮಗನೂ ಹೋಗುತ್ತಿದ್ದುದು ಒಂದೇ ಶಾಲೆಗೆ.

ಒಂದು ದಿನ ಶಾಲೆಗೆ ಹೋಗುತ್ತ ಮಾತಿಗೆ ಮಾತು ಬೆಳೆದು ಮೀನಾಕ್ಷಮ್ಮನ

ಮಗ ನಾರಾಯಣಿಯ ಹುಡುಗನಿಗೆ ಹೇಳಿದ:

ನಿಮ್ಮಮ್ಮ ಸೌದೆ ಕಳ್ಳಿ.

ಇನ್ನೊಮ್ಮೆ ಹೇಳು!

ಅದೇ ಮಾತು ಇನ್ನೊಮ್ಮೆ.

ಪರಿಣಾಮ, ಬೀದಿಯಲ್ಲಿ ಹುಡುಗರೆಲ್ಲ ಗುಂಪು ಕಟ್ಟಿಕೊಂಡು ನೋಡಿದ ಜಂಗೀ

ಕುಸ್ತಿ. ಕೈಯುಗುರಿನಿಂದ ಒಬ್ಬರು ಇನ್ನೊಬ್ಬರ ಮುಖ ಪರಚಿ ಗಾಯ ಮಾಡಿದರು. ಅಂಗಿ ಹರಿದರು. ವರದಿ ಮನೆಗೆ ಬಂದಾಗ, ವಠಾರದ ತಾಯಂದಿರೊಳಗೆ ಜಗಳವಾಯಿತು.

ಆ ಇಬ್ಬರು ಹುಡುಗರೇನೋ ಅದನ್ನೆಲ್ಲ ಬೇಗನೆ ಮರೆತು ವಠಾರದ ಹೊರಗೆ,/p> ಸ್ನೇಹಿತರಾಗಿಯೇ ಇದ್ದುದು ನಿಜ. ಆದರೆ ಹೆಂಗಸರು ಒಬ್ಬರನ್ನೊಬ್ಬರು ಕ್ಷಮಿಸಲಿಲ್ಲ.

ನಾರಾಯಣಿಗಿಂತಲೂ ಹಿಂದೆಯೇ ಆ ವಠಾರದಲ್ಲಿ ವಾಸ ಮಾಡುತ್ತಿದ್ದ ಸಂಸಾರ

ಗಳೂ ಇದ್ದುವು: ಅನಂತರ ಬಂದವರೂ ಇದ್ದರು. ಅವರೆಲ್ಲರಿಗೂ ನಾರಾಯಣಿ ಪರಿಚಿತಳಾಗಿದ್ದಳು. ಸ್ನೇಹವನ್ನು ಯಾಚಿಸಿ ತಾವಾಗಿಯೇ ಆಕೆಯ ಬಳಿಗೆ ಹೋಗಬೇಕೆಂದು ಅವರಲ್ಲಿ ಯಾರಿಗೂ ಎಂದೂ ಅನಿಸಿರಲಿಲ್ಲ.

ಆದರೆ ಈ ದಿನ ಪ್ರತಿಯೊಂದು ಹೃದಯವನ್ನೂ ದುಃಖದ ಇಕ್ಕುಳ ಹಿಚುಕಿ

ನೋಯಿಸುತ್ತಿತ್ತು.

ಬದುಕು _ಅದೇನು ಸುಖವೊ? ಆದರೆ ಸಾವು _ಸುಖ ಎನ್ನಬಹುದೆ?

ಅಂತಹ ಹೊತ್ತಿನಲ್ಲಿ ಆ ಹೆಂಗಸರಿಗೆ, ನಾರಾಯಣಿಯ ಕಡುವೈರಿಯಾದ

ಮೀನಾಕ್ಷಮ್ಮನ ನೆನಪಾಗದಿರಲಿಲ್ಲ. ಎಲ್ಲಿ ಮೀನಾಕ್ಷಮ್ಮ? ಎಂದು ಸ್ವರವೆತ್ತಿ ಯಾರೂ ಕೇಳದೆ ಹೋದರೂ, ಎಲ್ಲರ ದೃಷ್ಟಿಗಳೂ ಆಕೆಯನ್ನು ಹುಡುಕುತ್ತಿದ್ದುವು.

ಮೀನಾಕ್ಷಮ್ಮ ತನ್ನ ಮನೆಯ ತಲೆಬಾಗಿಲ ಬಳಿ ನಿಂತು, ಎದುರು ಮನೆಯನ್ನೇ

ದಿಟ್ಟಿಸುತ್ತಿದ್ದಳು. ಸೂರ್ಯರಶ್ಮಿಯ ಪ್ರವೇಶವಿಲ್ಲದ ಗವಿಮನೆ. ಆದರೂ ಆ ಮಬ್ಬು ಬೆಳಕಿನಲ್ಲಿ, ಹಳೆಯ ಚಾಪೆಯ ಮೇಲೆ ಹಾಸಿದ್ದ ಹರಿದ ತೆಳು ಹಾಸಿಗೆಯ ಮೇಲೆ ನಾರಾಯಣಿ ಮಲಗಿದ್ದುದು ಕಾಣಿಸುತ್ತಿತ್ತು. ಕೊನೆಯ, ಒಂದು ವರ್ಷದ, ಮಗು ಪಕ್ಕದಲ್ಲಿ ಕುಳಿತಿತ್ತು. ಆಕೆಯ ಗಂದ ಆಡುಗೆ ಮನೆಯಲ್ಲಿದ್ದನೇನೊ...ಅಲ್ಲಿ ಹಾಗೆ ಮಲಗಿದ್ದ ಆ ಮೂಳೆಯ ಹಂದರ ತನ್ನ ಪರಮ ದ್ವೇಷಿ ಎಂದು ಭಾವಿಸಲು ಮೀನಾಕ್ಷಮ್ಮ ಸಿದ್ಧಳಿರಲಿಲ್ಲ.

ಹೊರಬಾಗಿಲಿನಾಚೆ ಅಂಗಳದಲ್ಲಿ ನಿಂತಿದ್ದ ಹೆಂಗಸರಲ್ಲಿ ಒಬ್ಬಾಕೆ ಮೀನಾಕ್ಷಮ್ಮ

ನನ್ನು ಅಲ್ಲಿಂದಲೆ ನೋಡಿ ಸನ್ನೆ ಮಾಡಿ ಕರೆದಳು...ಮೀನಾಕ್ಷಮಾ ಅಗಲ ಕಿರಿದಾದ ಆ ಓಣಿಯುದ್ದಕ್ಕೂ ನಡೆದು, ಅಂಗಳ ತಲುಪಿದಳು. ಮುಂದುವರಿಯಲಾಗಲಿಲ್ಲ. ಗುಂಪಿನಿಂದ ದೂರವಾಗಿಯೇ ನಿಂತಳು.

"ಬನ್ನಿ ಮೀನಾಕ್ಷಮ್ಮ."

ಅಷ್ಟು, ದೂರ ಬಂದಿದ್ದುದೇ ಸಾಲದೆ?

"ಇಂಥ ಕಷ್ತ ಯಾರಿಗೂ ಬರಬಾರ್ದು, ಅಲ್ವೆ ಮೀನಾಕ್ಷಮ್ಮ?"

ಸಂಡೆಹವಾದರೂ ಏನು ಅದರಲ್ಲಿ?

ಯಾರೋ ಒಬ್ಬಳು ಕೇಳಿದಳು:

"ಒಳ್ಕ್ಕೆ ಹೋಗಿ ನೋಡಿದಿರಾ?"

"ಇಲ್ಲ" ಎಂದಳು ಮೀನಾಕ್ಷಮ್ಮ. ಅರೆ ಕ್ಷಣ ತಡೆದು ಆಕೆ ಎಂದಳು: "ಹೋಗಿ ನೋಡ್ತೀನಿ."

ನಡುಗುತ್ತಿತ್ತು ಆ ಸ್ವರ. ನಾರಾಯಣಿಯನ್ನು ವೈರಿಯಾಗಿ ಪರಿಗಣಿಸಿದ ತಾನು

ಪಾಪಿ ಎನ್ನುವ ಭಾವನೆ. ಒಮ್ಮೆಲೆ ಮೀನಾಕ್ಷಮ್ಮ ಸೆರಗನ್ನು ಕಣ್ಣಿಗೊತ್ತಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು.

ಯಾರು ಬಾಯ್ತೆರೆದು ಮಾತನಾಡಲಿಲ್ಲ. ಆದರೆ ಮೊದಲೇ ತೀರ್ಮಾನವಾಗಿ

ತ್ತೇನೋ ಎನ್ನುವ ಹಾಗೆ, ಎಲ್ಲರೂ ನಾರಾಯಣಿಯ ಮನೆಯತ್ತ ಬಂದರು. ಮೀನಾಕ್ಷಮ್ಮ ಅವರನ್ನೆಲ್ಲ ಹಿಂಬಾಳಿಸಿದಳು.

ಅಷ್ಟರೆಲ್ಲೆ ಗಂದಸಿನ ಗೋಳೋ ಎಂಬ ಹೃದಯಭೇದಕ ಆರ್ತನಾದ ಆ

ಮನೆಯೊಳಗಿಂದ ಹೊರಟಿತು.

ಹೆಂಗಸರು ಬೇಗಬೇಗನೆ ಹೆಜ್ಜೆ ಹಾಕಿದರು. ನಾರಾಯನಣಿಯ ಗಂಡ ತನ್ನ

ಹೆಂಡತಿಯ ಬಳಿಯಲ್ಲಿ ದೇಹ ಮುದುಡಿಕೊಂಡು ಗೋಳಾಡುತ್ತಿದ್ದ.ಪುಟ್ಟ ಮಗು ತಾಯಿಯ ಎದೆಗೆ ಆತುಕೊಂಡು, ತನ್ನೆರಡೂ ಕ್ಶೀಣ ಅಂಗೈಗಳಿಂದ ಸುಕ್ಕುಗಟ್ಟಿದ್ದ ಸ್ತನವನ್ನು ಹಿಡಿದುಕೊಂಡಿತ್ತು.ತೆರೆದ ಕಣ್ಣುಗಳನ್ನೂ ಚಾಚಿದ ಕೈಗಳನ್ನು ಹಾಗೆಯೇ ಬಿಟ್ಟು ನಾರಾಯಣಿ ಹೊರಟ್ಟು ಹೋಗಿದ್ದಳು.

ಬೇಸಗೆಯ ಸೂರ್ಯ ಒಂದೆರಡು ಕಡೆ ಹಂಚಿನ ಎಡೆಗಳಿಂದ ಇಣಿಕಿ ನೋಡು

ತ್ತಿದ್ದ.ಆ ರಶ್ಮಿಗಳು ಆಕಾಶದಿಂದಿಳಿದು ಭೂಮಿ ತಲಪಿದ ಬಳಕಿನ ಹೊಗೆಹಾದಿಗಳ ಹಾಗಿದ್ದುವು.

ಸಾವಿನ ಮನೆ...ವಠಾರದ ಹದಿನಾಲ್ಕು ಮನೆಗಳಲ್ಲೊಂದರಲ್ಲಿ ಸಾವು..

ಹೆಂಗಸರೆಲ್ಲ ಕ್ಷಣಕಾಲ ಆ ಮನೆಯ ಬಾಗಿಲ ಬಳಿ ನಿಂತು ನಾರಾಯಣಿಯೆಂಬ

ಹೆಂಗಸೊಬ್ಬಳು ಬದುಕಿದ್ದ ಳೆಂಬುದಕ್ಕೆ ಸಾಕ್ಶಿಯಾಗಿದ್ದ ಮೃತದೇಹವನ್ನು ನೋಡಿ ಮುಖ ತಿರುಗಿಸಿ ಬದಿಗೆ ಸರಿದರು. ಅಳುವಿನ ಅಕ್ಷಯಪಾತ್ರೆಯಗಳಾಗಿದ್ದ ಅ ನಿಸ್ತೇಜ ಕಣ್ಣುಗಳಿಂದ ಕಂಬನಿ ಚಿಮ್ಮಿತು.

"ನನ್ನ ಬಿಟ್ಟು ಹೋದೆಯಲ್ಲೇ! ನಾನೇನು ಮಾಡ್ಲೇ ಇನ್ನು? ಊ...

ಊ...ಊ..."

ಮಗುವಿನ ಹಾಗೆ ಅಳುತ್ತಿದ್ದ ನಾರಾಯಣಿಯ ಗಂಡ.. ಆತ ಅಸಹಾಯನಾಗಿದ್ದ.

ಆತನ ಸಂಪಾದನೆಯೊಂದೇ ఆ ಸಂಸಾರಕ್ಕೆ ಆಧಾರವಾಗಿದ್ದರೂ ಕೈಹಿಡಿದವಳ ಮೇಲ್ವಿ ಚಾರಣೆಯಲ್ಲೇ ಆತ ಬದುಕಿದ್ದವನು. ಈಗ ಆಸರೆ ತಪ್ಪಿದ ಹಾಗೆ ಆಗಿತ್ತು ಅವನ ಸ್ಥಿತಿ. ಆ ನಾಲ್ವರು ಎಳೆಯ ಮಕ್ಕಳು-ಅವುಗಳಲ್ಲೆರಡು ಹೆಣ್ನು. ಸಂಪಾದನೆ ಶೂನ್ಯ.

"ಅಯ್ಯೋ! ಹೀಗಾಯ್ತಲ್ಲೇ ನನ್ಗತೀ...ನಾನೇನು ಮಾಡ್ಲೇ?"

ಆತನ ರೋದನ ನಾರಾಯಣಿಯ ಸಾವನ್ನು ಜಾಹೀರು ಮಾಡಿತು. ಗಂಡಸರೆಲ್ಲ

ಕೆಲಸಕ್ಕೆ ಹೋಗಿದ್ದ ನಡುಹಗಲು. ಆ ಓಣಿ ಅರ್ಧ ಕ್ಷಣದಲ್ಲಿ ವಠಾರದ ಹೆಂಗಸರಿಂದ ತುಂಬಿಹೋಯಿತು. ಒಂದೇ ಒಂದಾಗಿದ್ದ ಗಂಡು ಧ್ವನಿಯೊಡನೆ ಹೆಂಗಸರ ಕಲರವ ಬೆರತು, ಛಾವಣಿಗಳೆಡೆಯಿಂದ ತೂರಿಕೊಂಡು, ಎದುರುಭಾಗದ ಮುರುಕು ಮಹಡಿ ಯನ್ನೂ ದಾಟಿ, ಶ್ರೀರಾಮಪುರದ ಅಕ್ಕಿಪಕ್ಕದ ಬೀದಿಗಳಲ್ಲಿ ಮರಣವಾರ್ತೆಯನ್ನು ಹೊತ್ತು ಹರಿದಾಡಿತು.

ಎಲ್ಲರೂ ಹೆಬ್ಬಾಗಿಲಿನತ್ತ ನೋಡಿದರು. ಅಲ್ಲ್ಲಿ ಬಲಭಾಗದಲ್ಲೆ ವಠಾರದ

ಒಡತಿ ರಂಗಮ್ಮನ ಮನೆ.

"ರಂಗವ್ನೋರಿಗೆ ಹೇಳೀಮ್ಮಾ ಯಾರಾದ್ರೂ."

ಹೋಗಿ ಹೇಳುವ ಅಗತ್ಯವಿರಲಿಲ್ಲ. ನಿಂತಿದ್ದ ಹೆಂಗಸರು ಮಕ್ಕಳೆಡೆಯಿಂದ

ದಾರಿ ಬಿಡಿಸಿಕೊಂಡು, ಅವರು ಬಂದರು. ಊರುಗೋಲು ವಠಾರದ ಕೊನೆಯಲ್ಹದ್ದ

ನಾರಾಯಣಿಯ ಮನೆಯ ಮುಂದೆ ನಿಂತಿತು.

ಪ್ರಯತ್ನ ಪೂವರ್ಕವಾಗಿ ಬೆನ್ನನ್ನು ನೇರಗೊಳಿಸಿ, ಜೋಲು ಮೋರೆ ಹಾಕಿ

ಸುತ್ತಲೂ ನೋಡಿ, ರಂಗಮ್ಮ ನಿಟ್ಟುಸಿರುಬಿಟ್ಟರು.

ಎಲ್ಲರ ಹಾಗೆ ರಂಗಮ್ಮ ಅಳುವುದರಲ್ಲಿ ಅರ್ಥವಿರಲಿಲ್ಲ. ಅರುವತ್ತೈದು ವರ್ಷ

ಗಳ ಅವಧಿಯಲ್ಲಿ ಅವರೆಷ್ಟೋ ಸಾವು ಎಷ್ಟೋ ಹುಟ್ಟು ನೋಡಿದ್ದರು. ಅಲ್ಲದೆ, ವಯಸ್ಸಿನಲ್ಲಿ ಅವರು ಎಲ್ಲರಿಗಿಂತಲೂ ಹಿರಿಯರು. ವಠಾರದ ಒಡತಿ. ಅವರು ಅಳುವಂತಿಲ್ಲ.

ಎರಡು ಮೂರು ವರ್ಷಗಳಿಂದ ಆ ವಠಾರಕ್ಕೆ ಯಮರಾಯ ಬಂದಿರಲಿಲ್ಲ. ಈ

ವರ್ಷ ಯಾಕೊ_

ಯಾರೋ ಅಂದರು:

"ಬುಧವಾರವೇ ಸತ್ಯ, ನಡು ಹಗಲಲ್ಲಿ, ಪುಣ್ಯವಂತೆ."

ಪಾಪ ಪುಣ್ಯಗಳ ಯೋಚನೆ ರಂಗಮ್ಮನನ್ನು ಕಾಡುತ್ತಿರಲಿಲ್ಲ, ಸಾವು ಆ

ವಠಾರದ ದಿನನಿತ್ಯದ ಜೀವನಕ್ರಮವನ್ನು ಸ್ತ್ರಬ್ಧಗೊಳಿಸಿತ್ತು ಸತ್ತಿದ್ದ ನಾರಾಯಣಿ ಯನ್ನು ಹೊರಕ್ಕೆ ಸಾಗಿಸುವವರೆಗೂ ಆ ಅವ್ಯವಸ್ಥೆ ಸರಿಹೋಗುವಂತಿರಲಿಲ್ಲ, ಒಬ್ಬ ಮನುಷ್ಯ ಸತ್ತ ಮೇಲೂ ಮಾಡಬೇಕಾದ ಕ್ರಿಯೆಗಳಿದ್ದುವು

ಸಾವಿನ ಮನೆಯೊಳಕ್ಕೆ ತಲೆಹಾಕಿ ರಂಗಮ್ಮ ಹೇಳಿದರು:

ರಂಗಮ್ಮನ ಸಹಾನುತಾಪದ ಮಾತು ಕೇಳಿ ನಾರಾಯಣಿಯು ಗಂಡ ಮತ್ತೊ

ಗಟ್ಟಿಯಾಗಿ ರೋದಿಸಿದ.

ಮಿನಾಕ್ಷಮ್ಮ ಒಳಹೋದಳು, ಚಲಿಸಿದೆ ಮಲಗಿದ್ದ ತಾಯಿಯ ಬಳಿ ಆಳುತ್ತ

ಲಿದ್ದ ಎಳೆಯ ಕೂಸನ್ನು ಎತ್ತಿಕೊಂಡು ಹುರಬಂದಳು.

"ಎಲ್ಲಿ ಬೇರೆ ಹುಡುಗರು?" ಎಂದು ರಂಗಮ್ಮ ಸುತ್ತಲೂ ನೋಡಿ ಕೇಳಿದರು.

"ದೊಡ್ಡೋನು ಸ್ಕೂಲಿಗೆ ಹೋಗಿದಾನೇನೋ?"

"ఇల్ల, ಚಿಕ್ಕೋವ್ನ ಆಡಿಸ್ತಾ ಇಲ್ಲೆ ಇದ್ದಾಂದ್ರೆ."

ಸಾಯೋ ಘಳಿಗೇಲಿ ಹತ್ತಿರ ಇದ್ದಿಲ್ಲ, ನಿರ್ಭಾಗ್ಯ ಮುಂಡೇವು."

“ಹೋಗ್ರೇ, ಯಾರಾದರೂ ಕರಕೊಂಬನ್ನಿ. ರುಕ್ಕೂ, ನೀನು ಹೋಗಮ್ಮ."

"ಹುಂ.. ಒಬ್ಬರೂ ಇಲ್ವಲ್ಲ ಇಲ್ಲಿ!" ಎಂದರು ರಂಗಮ್ಮ, ಆ ಧ್ವನಿಯಲ್ಲಿ

ಬೇಸರವಿತ್ತು, ಅಷ್ಟು ಜನ ಅಲ್ಲಿದ್ದರೂ ಅವರ ದೃಷ್ಟಿಯಲ್ಲಿ ಒಬ್ಬರೂ ಅಲ್ಲಿರಲಿಲ್ಲ' ಒಬ್ಬ ಗಂಡಸೂ ಅಲ್ಲಿರಲಿಲ್ಲ.

"ದಿನಾ ಗುಂಡಣ್ನನಾದರೂ ಇರ್ತಿದ್ದ. ಎಲ್ಲೋದ್ನೋ ಇವತ್ತು?"

ಗುಂಡಣ್ಣ ತನ್ನ ತಮ್ಮನ ಸಂಪಾದನೆಯನ್ನು ಅವಲಂಬಿಸಿ ಪರೋಪಕಾರಿಯಾಗಿ

ಮನೆಯಲ್ಲೇ ನಿಶ್ಚಿಂತೆಯಿಂದ ದಿನ ಕಳೆಯುತ್ತಿದ್ದ ಉಂಡಾಡಿ.

"ರಾಜಮ್ಮ. ಎಲ್ಲ್ಹೋದ್ನೇ ನಿನ್ಮಗಾ?"

"ಪಕ್ಕದ್ಮನೇಲಿ ಇಸ್ಪೀಟಿಗೆ ಕೂತಿದಾನೇನೊ?"

ರಾಜಮ್ಮ ಹೆಬ್ಬಾಗಿಲನ್ನು ದಾಟಿ ಹೊರ ಅಂಗಳಕ್ಕೆ ಹೋಗಿ ಕರೆದಳು.

"ಗುಂಡಾ...ಏ ಗುಂಡೂ!"

ಬೀದಿಯ ಆಚೆಗಿದ್ದ ಮನೆಗಳಿಂದಲೂ ಜನ ವಠಾರದತ್ತ ನೋಡುತ್ತಿದ್ದರು.

ಬೀದಿ ಕೂಳಾಯಿಯ ಪಕ್ಕದಲ್ಲಿದ್ದ ಮನೆಯಾಕೆ ಹಿತ್ತಲ ಗೋಡೆಗೆ ಎದೆಯಾನಿಸಿ ನಿಂತು ಕೇಳಿದಳು:

"ಏನ್ರೀ ರಾಜಮ್ಮ? ಏನು ಗಲಾಟೆ?"

"ನಾರಾಯಣಿ ಹೊರಟ್ಹೋದ್ಲು ಕಣ್ರೀ."

"ಓ!"

ದಿನವೂ ಮನೆಯಲ್ಲೆ ಇರುತ್ತಿದ್ದ ಗುಂಡಣ್ಣ ಆ ಹೊತ್ತೇ ಎಲ್ಲಿಗೋ ಎದ್ದಿರ

ಬೇಕೇ?

ಗುಂಡಣ್ಣ ಬರಲಿಲ್ಲ. ಆದರೆ ಅಲ್ಲೇ ಕೆಳಗೆ ಅಂಗಡಿ ಬೀದಿಯಲ್ಲಿದ್ದ ನಾರಾ

ಯಣಿಯು ಮಕ್ಕಳು ಓಡಿ ಬಂದುವು. ಚಿಕ್ಕ ಹುಡುಗಿಗೂ ಹುಡಗನಿಗೂ ಅರ್ಥವಾಗ ಲಿಲ್ಲ. ದೊಡ್ಡವನಿಗೆ-ಪುಟ್ಟನಿಗೆ-ಅರ್ಥವಾಯಿತು. ಆದರೆ, ಮೂವರೂ ಅತ್ತರು. ಚಿಕ್ಕವರು ಗಟ್ಟಿಯಾಗಿ, ದೊಡ್ಡವನು ಮೆಲ್ಲ ಮೆಲ್ಲನೆ, ಬಿಕ್ಕಿ ಬಿಕ್ಕಿ

ಮಿನೂನಾಕ್ಷಮ್ಮ ಸಮಿಪದಲ್ಲಿ ಇದ್ದ ಶಾಲೆಗೆ ಹೋಗಿ ತನ್ನ ಮಗನನ್ನು ಕರದು

ತಂದಳು. ಆತ ಪುಸ್ತಕಗಳನ್ನು ತಾಯಿಯ ವಶಕ್ಕೊಪ್ಪಿಸಿ, ತಂದಯನ್ನು ಕರೆತರ ಲೆಂದು ಒಂದೇ ಉಸಿರಿಗೆ ಮಲ್ಲೇಶ್ವರದ ಅಂಗಡಿ ಬೀದಿಗೆ ಓಡಿದ.

ನಾರಾಯಂಇಯ ಮನೆಯ ಎದುರು ಒಂದೇ ಗುಂಪಾಗಿದ್ದ ಹೆಂಗಸರು ದೂರ

ಸರಿದು ಬೇರೆ ಬೇರೆ ಗುಂಪುಗಳಾದರು.

ರಂಗಮ್ಮ ವಿಳಿಪಿಳಿ ಕಣ್ನು ಬಿಡುತ್ತ ಓಣಿಯ ಉದ್ದಕ್ಕೂ ಎರಡು ಸಾರ ನಡೆದರು.

ಏನನ್ನಾದರೂ ಆಳವಾಗಿ ಯೋಚಿಸುವಾಗಲೆಲ್ಲ ಹಾಗೆ ಅವರು ನಡೆಯುತ್ತದ್ದರು.

ಒಂದು ಬಡ ಸಂಸಾರದಲ್ಲಾದ ಸಾವಿನ ಫಲವಾగి ಹುಟ್ಟಿದ ಯೋಚನೆಗಳು...

ಯೋಚಿಸುತ್ತಲಿದ್ದ ರಂಗಮ್ಮ ನಾರಾಯಣಿಯ ಮನೆಯ ಮುಂದೆ ನಿಂತು ಹೇಳಿದರು;

"ಯಾಕಪಾ ಇನ್ನೂ ಅಳ್ತಾನೇ ಇದೀಯಾ? ಏಳು...ನನ್ನಂಥ ಪಾಪಿಯಲ್ಲ

ನಾರಾಯణి...ಪುಣ್ಯವಂತೆ...ಕೆಳ್ಕೊಂಡು ಬಂದಿದ್ಲು ಇಂಥ ಸಾವು ಬರ್ಲೀವಂತ.... ಏಳು.. ಮಕ್ಕಳ್ನ ನಮ್ಮನೇಲಿ ಕೂಡಿಸು,"

ಆದರೆ ಆ ನಾರಾಯಣಿಯ ಗಂಡ ದಿಗ್ಭ್ರಮೆಗೊಂಡವನ ಗೋಡೆ

ಗೊರಗಿ ಕುಳಿತೇ ಇದ್ದ,

ಪಕ್ಕದ ಮನೆಯಾಕೆ ಬಂದು, ಅಳುತ್ತಿದ್ದ ಎಳೆದು ಎಬ್ಬರು ಮಕ್ಕಳನ್ನು ಎಳೆದು

ಕೊಂಡು ತನ್ನ ಮನೆಗೆ ಹೋದಳು. ಪುಟ್ಟು ಮಿನಾಕ್ಷಮ್ಮನ ಬಳಿ ಇದ್ದ ಪಾಪನನ್ನೆತ್ತಿ ಕೊಂಡು ಓಣಿಯಲ್ಲಿ ನಿಂತ.

ರಂಗಮ್ಮ ಮನೆಯೊಳಕ್ಕೆ ಕಾಲಿಟ್ಟು ಆಡುಗೆಯ ಭಾಗದತ್ತ ನೋಡಿದರು. ಒಲೆ

ಹೊಗೆಯಾಡುತ್ತಿರಲಿಲ್ಲ. ಎದುರುಗಡೆಯ ಮೀನಾಕ್ಷಮ್ಮನಿಗೆ ಹೇಳಿದರು:

"ಒಂದಿಷ್ಟು ಕೆಂಡ ಎತ್ಕೊಂದಡ್ಬಾ ತಾಯಿ."

ಸಾವಿನ ಮನೆಯ ಮುಂದೆ ಕೆಂಡಗಳು ಹೊಗೆಯ ಹೊದಿಕೆಯ ಮರೆಯಲ್ಲಿ

ಮರುಗಿದುವು.

ಶ್ರೀನಿವಾಸಶೆಟ್ಟರೆ ಅಂಗಡಿಯಲ್ಲಿ ಲೆಕ್ಕ ಬರೆಯುವ ಗುಮಾಸ್ತೆಯಾದ ಸುಬ್ಬು

ಕೃಷ್ಣಯ್ಯ ತನ್ನ ಹೆಂಡತಿ ಮೀನಾಕ್ಷಮ್ಮನ ಸಂದೇಶ ತಲಪಿದೊಡನೆ ಹೊರಟು ಬಂದ. ಹಿಂದಿನ ರಾತ್ರೆಯೇ ಮೀನಾಕ್ಷಮ್ಮ "ಪಾಪ! ಕಾಹಿಲೆ ಜಾಸ್ತಿಯಾಗಿದೆ. ಇವತ್ತು ಬೆಳ ಗಾಗೋದು ಕಷ್ಟ" ಎಂದಿದ್ದಳು. ಬೆಳಗಾಗಿತ್ತು. ಬೆಳಗಾದ ಮೇಲೆಯೇ ಸತ್ತಿದ್ದಳು ನಾರಾ ಯಣಿ. ಸತ್ತವಳಾಗಲೀ ಉಳಿದವರುವ ಆಕೆಯ ಸಂಸಾರವಾಗಲೀ ಸುಬ್ಬುಕೃಷ್ಣಯ್ಯನಿಗೇನೂ ಆತ್ಮೀಯವಾಗಿರಲಿಲ್ಲ. ಆದರೂ ಹೆಂಡತಿ ಕರೆದಳೆಂದು ಒಡನೆಯೆ ಅವನು ಹೊರಟಿದ್ದ.

ವಠಾರದಲ್ಲಿ ಆತನನ್ನು ಕಂಡೊಡನೆ ರಂಗಮ್ಮ ಹೇಳಿದರು:

"ಬಂದೆಯೇನಪ್ಪಾ, ಬಾ. ಯಾರೂ ಇಲ್ವಲ್ಲಾಂತಿದ್ದೆ, ಬಾ."

ಸುಬ್ಬುಕೃಷ್ಣಯ್ಯ ನೇರವಾಗಿ ತನ್ನ ಮನೆಯೊಳಕ್ಕೆ ಹೋಗಿ ಟೋಪಿಯನ್ನು

ಗೂಟದ ಮೇಲೆ ತೂಗಹಾಕಿದ. ಆಗ ಏನಾದರೂ ಕೆಲಸ ಮಾಡಲು ಅಲ್ಲಿದ್ದ ಗಂಡಸು ತನ್ನ ಪತಿಯೊಬ್ಬನೇ ಎಂದು, ಮೀನಾಕ್ಷಮ್ಮನಿಗೆ ಆ ಸನ್ನಿವೇಶದಲ್ಲೂ ತುಸು ಹೆಮ್ಮೆ.

ಆತ ಹೇಳಿದ:

"ಎಷ್ಟೊತ್ತಾಯ್ತು?"

"ಹನ್ನೊಂದಾಗಿತ್ತೊಂತ ಕಾಣುತ್ತೆ."

"ಈಗೇನ್ಮಾಡ್ಬೇಕೂಂತೀಯಾ?"

"ರಂಗಮ್ನೋರ್ನ ಕೇಳಿ."

ಅಷ್ಟರಲ್ಲಿ ಅಲ್ಲಿಗೇ ನಡೆದು ಬಂದ ರಂಗಮ್ಮ ಮೆಲುದನಿಯಲ್ಲಿ ಸಮಾಲೋಚನೆ

ನಡೆಸಿದರು.

ವಠಾರಕ್ಕೆ ಗಂಡಸರು ಹಿಂತಿರುಗುತ್ತಿದ್ದುದು ಸಂಜೆ ಐದು ಗಂಟೆಯ ಬಳಿಕ.

ಹೇಳಿ ಕಳುಹಿಸುವಂಥ ಸಂಬಂಧಿಕರು ಯಾರೂ ಸತ್ತ ಮನೆಯವರಿಗೆ ಇರಲಿಲ್ಲ, ಕತ್ತ ಲಾಗುವುದರೊಳಗೇ ಶವಸಂಸ್ಕಾರ ಸಾಧ್ಯವಿತ್ತು. ಸಿದ್ಧತೆಯ ಸಣ್ಣ ಪುಟ್ತ ವಿವರಗಳನ್ನು ನಾರಾಯಣಿಯ ಗಂಡನ ಸೊರಗಿದ ಜೀವ ಬಾಗಿಲಿಗೆ ಒರಗಿ ನಿಂತಿತ್ತು. ರಂಗಮ್ಮ ಗ್ಟ್ತಿ ಮನಸ್ಸು ಮಾಡಿ ಆತನನ್ನು ಉದ್ದೇಶಿಸಿ ಕೇಳಿದರು: ರಂಗಮ್ಮನ ವಠಾರ

“ಏನಪಾ, ದುಡ್ದುಗಿಡ್ದು ಏನಾದರೂ ಇಟ್ಟಿದೀಯಾ?"

ಆತ ಮುಖ ತಿರುಗಿಸಿಕೊಂಡು ಮತ್ತೊಮ್ಮೆ ಗಟ್ಟಿಯಾಗಿ ರೋದಿಸತೊಡಗಿದ.

ಸುಬ್ಬಕೃಷ್ಣಯ್ಯನೇನೋ ಅಂದ

ಏನಾದರೂ ಮಾಡೋಣ, ಏನಾದರೂ ಮಾಡೋಣ."

ಆದರೆ ಏನು ಮಾಡಬೇಕೆಂಬುದು ಮಾತ್ರ ಆತನಿಗೆ ಹೊಳೆಯಲಿಲ್ಲ. ತಿಂಗಳ

ಕೊನೆ...ಕಷ್ಟ ಕಾಲ...

ಬಾಪ್ಪ." ಎ೦ದೂ ಸುಬ್ಬುಕೃಷ್ಣಯ್ಯನಿಗೆ ಸನ್ನೆ ಮಾಡುತ್ತ ರಂಗಮ್ಮ ತಮ್ಮ

ಮನೆಯತ್ತ ನಡೆದರು. ನಡೆಯುತ್ತ ಅವರು ಇಳಿದನಿಯಲ್ಲಿ ಗೊಣಗಿದರು:

ಮೂರು ತಿಂಗಳಿಂದ ಬಾಡಿಗೇನೇ ಕೊಟ್ಟಿಲ್ಲ, ಬಡೀಗಂಡ, ಐವತ್ತೊಂದು

ರೂಪಾಯಿ!... ಈಗ ಹೆಣ ಎಥಾಕೋ ಕೆಲಸಾನೂ ನಾವೇ ಮಾಡ್ಬೇಕು..ಹುಂ.."

ರಂಗಮ್ಮನವರೇ ತಮ್ಮ ಕತ್ತಲು ಮನೆಯನ್ನು ಹೊಕ್ಕು, ತಮ್ಮ ಕೊರಳಿನಲ್ಲಿದ್ದ

ಬೀಗದ ಕೈ ತಿರುವಿ, ಹಳೆಯ ಕಬ್ಬಿಣದ ಪೆಟ್ತಿಗೆಯ ಬಾಗಿಲು ತೆರದು, ಐದು ರೂಪಾಯಿ ಯಿಯ ಒಂದು ನೋಟನ್ನು ಎತ್ತಿಕೊಂಡರು. ಬಾಗಿಲಲ್ಲೆ ನಿಲ್ಲಿಸಿ ಬಂದಿದ್ದ ಸುಬ್ಬ ಕೃಷ್ಣಯ್ಯನಿಗೆ ಅದನ್ನು ಒಯ್ದುಕೊತ್ತರು. ಕೊಡುತ್ತ ಅವರೆಂದರು:

"ಪಾಪ!ಕಷ್ಟ್ದಲ್ಲಿದ್ದಾನೆ, ಏಳೇಳು ಜನ್ಮದ ವೈರಿಗೂ ಬೇಡ ಅ ಶಿಕ್ಷೆ"

ಸುಬ್ಬುಕೃಷ್ಣಯ್ಯ ತಲೆತುರಿಸುತ್ತ ನಿಂತ. ಎಲ್ಲಿಗೆ ಸಾಕು ಆ ಐದು ರೂಪಾಯಿ?

"ಇಷ್ಟಿತ್ಲಿ ನನ್ನ ಲೆಕ್ಕಕ್ಕೆ. ಉಳಿದಿರೋದು ನೀವೆಲ್ಲ ಸೇರ್ಕೊಂಡು ಏನಾದರೂ ಮಾಡಿ."

ಆ ಏರ್ಪಾಟಿಗೆ ಮಹಾ ಯಶಸ್ಸು ದೊರೆಯದೇ ಹೋದರೂ ಅದು ಪೂರ್ತಿ

ವಿಫಲವಾಗಲಿಲ್ಲ. ಕೆಲ ಮನೆಯವರು ಗಂಡಸರು ಬರಲೆಂದರು. ಉಳಿದವರು ಕೆಲವರು ಗಂಟೆಗೆ ಗಂಟುಹಾಕಿ ಕೂಡಿಟ್ಟಿದ್ದ ಚಿಲ್ಲರೆ ಹಣವನ್ನು ತೆಗೆದು ಕೊಟ್ಟರು.

ರಂಗಮ್ಮ ಹೆಬ್ಬಾಗಿಲ ಬಳಿಯಲ್ಲಿ ನಿಂತು ತಮ್ಮ ವಠಾರಕ್ಕೆಲ್ಲ ಕೇಳಿಸುವ ಹಾಗೆ

ನುಡಿದರು"

"ಕೊಡಿಯಪ್ಪಾ ಕೊಡಿ ಕಷ್ಟ ಕಾಲದಲ್ಲಿ ಮನುಪ್ನಿಗೆ ಮನುಷ್ನೇ ಆಗ್ಬೇಕಲ್ವೆ

ಮರ ನೆರವಾಗುತ್ಯೆ?"

ಅಷ್ಟರಲ್ಲ್ಲೆ ಗುಂಡಣ್ಣ ಬಂದ, "ಹೆಆಆನ ಹೊರೋಕೆ ಆದೀಯಾ ನೀನು" ಎಂಬ

ಬೈಗಳನ್ನು ಎಷ್ಟೋ ಸಾರಿ ತಾಯಿಯ ಕೈಯಲ್ಲಿ ಆತ ಕೇಳಿದ್ದ. ಆದರೆ ಅದು ನಿಜ ವಾಗಿರಲಿಲ್ಲ. ಸ್ವಂತಕ್ಕೆ ಕಾಸಿನ ಪ್ರಯೋಜನವಾಗದೆ ಹೋದರೂ ಪರೋಪಕಾರ ಮಾಡುವುದರಲ್ಲಿ ಆತನದು ಎತ್ತಿದ ಕೈ. ಈಗ, ಮುಟ್ಟಿದರೆ ನುರಿದು ಬೀಳುವಂತಹ ಸೈಕಲೊಂದನ್ನು ದೊರಕಿಸಿಕೊಂಡು, ನಗರದ ಬೇರೆ ಬೇರೆ ಭಾಗಗಳಲ್ಲಿ ಮಡಿಯುತ್ತಿದ್ದ ವಠಾರದ ನಾಲ್ಕಾರು ಜನ ಗಂಡಸರಿಗೆ ಸಾವಿನ ಸುದ್ದಿ ತಿಳಿಸಲು ಆತ ಧಾವಿಸಿದ.

ನಾರಯಣಿಯನ್ನು ಬೀಲ್ಕೊಡದೆ ಆ ವಠಾರದ ಜನರಿಗೆ ಊಟವಿಲ್ಲ. ಪ್ರತಿ

ಯೊಂದು ಮನೆಯಲ್ಲೂ ಅಡುಗೆ ಅರ್ಧಮರ್ಧವಾಗಿಯೇ ಉಳಿದಿತ್ತು. ಆದರೆ ಹಸಿದ
ಮಕ್ಕಳು_ಯಾಕೆ, ದೊಡ್ಡವರು ಕೂದ_ಬರಿ ಹೊಟ್ಟೆಯಲ್ಲೇ ಇರುವುದು ಸಾಧ್ಯ

ವಿರಲಿಲ್ಲ.

ಒಬ್ಬಾಕೆಯೆಂದಳು:

"ಸಾವಿನ ಮನೇ ಮುಂದುಗಡೆ ನೀರು ಹರಿತೀದೆಯಲ್ಲಾ. ಈಚೆ ಪಕ್ದಲ್ಲಿ

ದ್ಕೊಂಡು ಊಟ ಮಾಡ್ಬೌದು ಕಣ್ರೀ..."

ಎರಡು ಮೂರು ಬಚ್ಚಲುಗಳ ನೀರು ದುರ್ಗಂಧ ಬೀರುತ್ತ ಒಂದು ಸಾಲಿನ

ಮನೆಗಳ ಮುಂದಿನಿಂದ ಸಣ್ಣಗೆ ಹರಿಯುತ್ತಿದ್ದುದು ನಿಜ.

ವಠಾರಕ್ಕೆ ಹೊಸದಾಗಿ ಬಂದಿದ್ದ ಎಳೆಯ ಗೃಹಿಣಿ, ಇನ್ನು ಹತ್ತು ದಿನ ಉಪ

ವಾಸವಿರಬೇಕಾಗುವುದೇನೋ ಎಂಬಂತೆ, ತನ್ನ ಬಾಗಿಲ ಬಳಿ ಮುಖ ಸಪ್ಪಗೆ ಮಾಡಿ

ಕೊಂಡು ನಿಂತಳು.

ಇನ್ನೊಬ್ಬಳೆಂದಳು:

"ಈ ಮಕ್ಕಳಿಗೇನ್ರೀ ಮಾಡೋದು?"

ಎಲ್ಲ ಹೆಂಗಸರು ರಂಗಮ್ಮನತ್ತ ನೋಡಿದರು, ತೀರ್ಪಿಗಾಗಿ. ರಂಗಮ್ಮ ಪ್ರತಿ

ಯೊಂದು ಮಾತನ್ನೂ ತೂಗಿ ತೂಗಿ ಹೇಳಿದರು:

"ಈಗಿನ ಕಾಲ್ದಲ್ಲಿ ಅಷ್ಟೆಲ್ಲ ಕಟ್ಟುನಿಟ್ಟಾಗಿ ಹ್ಯಾಗೆ ಇರೋಕಾಗುತ್ತೆ? ಮಕ್ಕಳು

ಊಟ ಮಾಡ್ಲಿ. ದೊಡ್ಡೋರಲ್ಲಿ ಗಟ್ಟಿಮುಟ್ಟಾಗಿರೋರು ನಿರಾಹಾರವಾಗಿದ್ದ

ರಾಯ್ತು."

......ರಂಗಮ್ಮ ಗಟ್ಟಿಮುಟ್ಟಾಗಿರಲಿಲ್ಲ. ಆದರೂ ಅವರು ನಿರಾಹಾರಿಯಾಗಿ

ಉಳಿದರು.

......ಬಿಸಿಲಿನ ತಾಪ ಕಡಿಮೆಯಾದಂತೆ, ಸಂಜೆಯಾದಂತೆ, ವಠಾರಕ್ಕೆ ಗಂಡಸರು

ಬರತೊಡಗಿದರು. ಎಲ್ಲೆಲ್ಲಿಯೋ ಅಲೆದು ರಾತ್ರೆ ಮನೆ ಸೇರುವವರಲ್ಲೂ ಕೆಲವರು

ಆ ದಿನ ಬೇಗನೆ ಮನೆಗೆ ಬಂದರು.

ಪ್ರಯಾಣಕ್ಕೆ ಮುನ್ನ ಮೀಯಿಸಲೆಂದು ನಾರಾಯಣಿಯನ್ನು ಹೊರಕ್ಕೆ ತಂದು

ದಾಯಿತು. ರಂಗಮ್ಮ ಎಂದಿಗಿಂತ ಮುಂಚಿತವಾಗಿಯೇ ಕೊಳಾಯಿಯ ಬೀಗ ತೆರೆದರು. ಸಾಮಾನ್ಯವಾಗಿ ಮೂರು ಬಿಂದಿಗೆ ನೀರು ವಠಾರದ ಪ್ರತಿಯೊಂದು ಮನೆಗೂ ಉಚಿತ. ಅನಂತರದ ಪ್ರತಿ ಮೂರು ಬಿಂದಿಗೆಗೂ ತಿಂಗಳಿಗೆ ಎಂಟಾಣೆ. ಆದರೆ ಈ ದಿನ ಅಂತಹ ಲೆಕ್ಕಚಾರವಿಲ್ಲ.

ರಂಗಮ್ಮನೇ ಅಂದರು:

"ತಗೋಳೀಪ್ಪಾ, ಎಷ್ಟು ಬೇಕಾದರು ತಗೊಂಡು ಹೋಗಿ ನೀರು."

ನಿರ್ಜೀವವಾಗಿದ್ದ ನಾರಾಯಣಿಯ ಮುಖದ ಮೇಲೆ ನೆಮ್ಮದಿ ಇರಲಿಲ್ಲ.

ನ್ಯಾಯವಾದ ಮುಕ್ತಾಯವಿಲ್ಲದೆ ನಡುವಿನಲ್ಲೇ ಕಡಿದು ಹೋದ ಹಾಗಿತ್ತು ಆ ದೇಹ. ಬದುಕಿನ ಅಪೂರ್ಣ ಆಸೆಗಳು ಎರಡೂ ಕಣ್ಣುಗಳಿಂದ ಇಳಿದು ಕೆನ್ನೆಗಳ ಮೇಲೆ ಆಳ
ವಾದ ಕಣಿವೆ ತೋಡಿದ್ದುವು.
ಆದರೂ ಆ ದೇಹಕ್ಕೆ ಅರಸಿನ ಲೇಪಿಸಿದರು. ಆಕೆಯ ಗಂಡನ ಅಪೇಕ್ಷೆಯಂತೆ
ಮದುವೆಯ ಕಾಲದಲ್ಲಿ ಆಕೆಯುಟ್ಟಿದ್ದ ಧರ್ಮಾವರದ ಸೀರೆಯನ್ನೇ ಉಡಿಸಿದರು; ಉಡಿ
ತುಂಬಿಸಿದರು; ಹಣೆಗೆ ಕುಂಕುಮವಿಟ್ಟರು.
ಆ ದೇಹ ನಾಲ್ವರ ಭುಜಗಳನ್ನು ಆವರಿಸಿದಾಗ ಮತ್ತೊಮ್ಮೆ ರೋದನದ ಅಲೆ
ಗಳು ವಠಾರದ ಇಕ್ಕಟ್ಟಾದ ಗೋಡೆಗಳಿಗೆ ಅಪ್ಪಳಿಸಿದುವು.
ಬಾಗಿಲ ಬಳಿ ನಡೆಗೋಲನ್ನೂರಿ ನಿಂತ ರಂಗಮ್ಮನ ಬಾಯಿಯಿಂದ ಅಸ್ಪಷ್ಟವಾಗಿ
ಮಾತುಗಳು ಹೊರಬಿದ್ದುವು:
"ಹೋಗ್ತೀಯಾ ನಾರಾಯಣೀ...ಹೋಗ್ತೀಯಾ..."
ನಾರಾಯಣಿ ರಂಗಮ್ಮನ ವಠಾರವನ್ನು ಬಿಟ್ಟು ಹೋದಳು. ಸೂರ್ಯ ಮರೆ
ಯಾಗಿ ಕತ್ತಲು ಕವಿಯಿತು. ಬೀದಿಯ ವಿದ್ಯುದ್ದೀಪಗಳು ಹತ್ತಿಕೊಂಡುವು.
ರಂಗಮ್ಮ ವಠಾರದ ಹಿತ್ತಿಲ ಗೋಡೆಗೊರಗಿ, ಆಳಕ್ಕೆ ಇಂಗಿದ್ದ ಕಣ್ಣುಗಳಿಂದ
ಆಕಾಶದತ್ತ ಶೂನ್ಯನೋಟ ಬೀರುತ್ತ ನಿಂತೇ ಇದ್ದರು.
ಬೇರೆ ದಿನವಾಗಿದ್ದರೆ ವಠಾರದ ಯಾರಾದರೂ ರಂಗಮ್ಮನ ಬಳಿಗೆ ಹೋಗಿ,
"ದೀಪ ಹಾಕ್ತೀರಾ?"ಎಂದು ಕೇಳುತ್ತಿದ್ದರು.
ಈ ದಿನ ಹಾಗೆ ಕೇಳಲು ಯಾರೂ ಬರಲಿಲ್ಲ.
"ಕತ್ತಲಾಯ್ತು" ಎಂದು ರಂಗಮ್ಮನೇ ತಮ್ಮಷ್ಟಕ್ಕೆ ಅಂದುಕೊಂಡರು. ಮೆಲ್ಲನೆ
ತಮ್ಮ ಮನೆಯತ್ತ ಸಾಗಿ 'ದೀಪ ಹಾಕಿ'ದರು. ಅಲ್ಲಿದ್ದುದು ಮಂದವಾದ ವಿದ್ಯು
ದ್ದೀಪ-ಮನೆಗೊಂದರಂತೆ. ಆಗಲೆ ಗುಂಡಿಯೊತ್ತಿಯೇ ಇದ್ದ ಮನೆ ಮನೆಗಳಲ್ಲೆಲ್ಲ ಒಮ್ಮೆಲೆ
ಬೆಳಕು ಮೂಡಿತು.
ಆದರೆ ವಠಾರದ ಹದಿನಾಲ್ಕನೆಯ ಮನೆಯಲ್ಲಿ ಯಾರೂ ಗುಂಡಿಯೊತ್ತಲಿಲ್ಲ,
ಅಲ್ಲಿ, ನಾರಾಯಣಿ ಮಲಗಿದ್ದ ಕಡೆ ತಲೆಯ ದಿಕ್ಕಿನಲ್ಲಿ, ಹಣತೆಯೊಂದು ತೂರಾಡಿತು.

ಮನೆ ಬೆಳಗುವ ಗೃಹಿಣಿ ಅಲ್ಲಿರಲಿಲ್ಲ.

ಸಾವು ಸಂಭವಿಸಿದ ಮಾರನೆಯ ದಿನ...
ನಸುಕು ಹರಿಯುತ್ತಿದ್ದಂತೆ ಒಂದೊಂದಾಗಿ ವಠಾರದ ಮನೆಗಳು ಎಚ್ಚರ
ಗೊಂಡುವು. ಎಂದಿನಂತೆಯೇ ಅದು ಒಂದು ಮುಂಜಾನೆ. ಹೆಚ್ಚೂ ಇಲ್ಲ, ಕಡಮೆಯೂ ಇಲ್ಲ.

ಆಗ ಉರಿಯುತ್ತಿದ್ದುದೆಲ್ಲ ಸೀಮೆಎಣ್ಣೆಯ ಹೊಗೆ ದೀಪಗಳು. ಪ್ರತಿದಿನ,

ಅಂದರೆ ರಾತ್ರೆ, ರಂಗಮ್ಮನ ವಠಾರದಲ್ಲಿ ವಿದ್ಯುದ್ದೀಪಗಳು ಉರಿಯುತ್ತಿದ್ದುದು, ಮೂರು ಘಂಟೆಗಳ ಮಾತ್ರ. ರಾತ್ರೆ ಒಂಧತ್ತೂವರೆಯಿಂದ ಹತ್ತರೊಳಗಾಗಿ ರಂಗಮ್ಮ ದೀಪ ಆರಿಸಿ ಬಿಡುತ್ತಿದ್ದರು. ಆ ಬಳಿಕ 'ದೀಪ ಹಾಕು'ವುದು ಮಾರನೆಯ ಸಂಜೆ ಮಾತ್ರವೇ. ವಠಾರಕ್ಕೆ ಹೊಸತಾಗಿ ಬಾಡಿಗೆಗೆ ಬಂದವರು ಗೊಣಗುವುದಿತ್ತು. ಆದರೆ ನಾಲ್ಕು ದಿನಗಳಲ್ಲೇ ಅವರೂ ಇತರ ಎಲ್ಲರ ಹಾಗೆ ಸರಿಹೋಗುತ್ತಿದ್ದರು. ಕತ್ತಲಿರುವಾಗಲೇ ಏಳಬೇಕಾದವರಿಗೆ ಸೀಮೆಎಣ್ಣೆಯ ದೀಪಗಳೇ ಗತಿ. ಆ ವಿಷಯ ದಲ್ಲಿ ರಂಗಮ್ಮನದು ಸರ್ವ ಸಮತಾ ದೃಷ್ಟಿ. ಸ್ವತಃ ತಾವೇ ನಸುಕಿನಲ್ಲಿ ಎದ್ದಾಗಲೂ ರಂಗಮ್ಮ ವಿದ್ಯುದ್ದೀಪ ಉರಿಸುತ್ತಿರಲಿಲ್ಲ.

ಮೊದಲು ಮಿಣಿಮಿಣಿ ಬೆಳಕಾಗುವುದು ರಾಮಚಂದ್ರಯ್ಯನ ಮನೆಯಲ್ಲಿ, ಆತ

ಟಿ.ಆರ್.ಮಿಲ್ಲಿನಲ್ಲಿ ಸ್ಟೋರ್-ಕೀಪರ್. ಆರು ಗಂಟೆಗೆ ಸರಿಯಾಗಿ ಮಲ್ಲೇಶ್ವರದ ಅಂಗಡಿ ಬೀದಿ ಸೇರಿ, ಕರೆದೊಯ್ಯಲು ಬರುವ ಬಸ್ಸನ್ನೇರಬೇಕು. ಇನ್ನೂ ಮದುವೆ ಯಿಲ್ಲ ಮಹಾರಾಯನಿಗೆ. ಅದು ಮೂವರ ಸಂಸಾರ. ಬಡಕಲು ಬಡಕಲಾಗಿರುವ ತಾಯಿ ಮತ್ತು ಮದುವೆಗೆ ಸಿದ್ದಳಾಗಿರುವ ತಂಗಿ ಅಹಲ್ಯಾ. ಅಹಲ್ಯೆ ಬೇಗನೆ ಏಳು ತ್ತಿರಲಿಲ್ಲ. ಆದರೆ ಆಕೆಯ ಅಣ್ನ ರಾಮಚಂದ್ರನೆದ್ದು, ತಂಬಿಗೆ ನೀರಿನೊಡನೆ ಕತ್ತಲೆಯ ಓಣಿಯಲ್ಲಿ ನಡೆದು, ಸುಬ್ಬುಕೃಷ್ಣಯ್ಯನ ಮನೆಯ ಪಕ್ಕದಲ್ಲಿದ್ದ ಕಕ್ಕಸಿಗೆ ಹೋಗುತ್ತಿದ್ದ. ಅದು ಜೋಡಿ ಕಕ್ಕಸು. ವಠಾರದ ಗಂಡಸರಿಗೊಂದು. ಹೆಂಗಸರಿಗೊಂದು. ಹೆಂಗಸರ ವಿಭಾಗಕ್ಕೆ ಹಳೆಯ ಎರಡು ಸೀಮೆಎಣ್ಣೆ ಡಬ್ಬಗಳನ್ನು ಬಿಡಿಸಿ ತಗಡನ್ನು ಮರದ ಚೌಕಟ್ಟಿಗೆ ಒಡೆದು ಬಾಗಿಲು ತಯಾರಿಸದ್ದರು. ಗಾಳಿ ಬೀಸಿದಾಗಲೆಲ್ಲ ಬಡೆದು ಸದ್ದು ಮಾಡುತ್ತ ಆ ಬಾಗಿಲು ವಠಾರಕ್ಕೆ ಕಾವಲುಗಾರನಾಗುತ್ತಿತ್ತು.

ರಾಮಚಂದ್ರಯ್ಯನ ಮನೆಯಲ್ಲಿ ತಾಯಿ ಮಕ್ಕಳ ಮಾತು ಕೇಳಿದುಡನೆಯೇ

ಪದ್ಮಾವತಿಗೆ ಎಚ್ಚರ. ಆಕೆ ನಾರಾಯಣಿಯ ಮಕ್ಕಳಿಗೆ ಉಣಬಡಿಸಿದ ಮೂರು ಮಕ್ಕಳ ತಾಯಿ. ಪದ್ಮಾವತಿ ಎದ್ದು ಕುಳಿತು, ಕತ್ತಲೆಯಲ್ಲಿ ಕ್ಷಣಕಾಲ ಗಂಡನನ್ನು ನೋಡುತ್ತ ಲಿದ್ದು, ಬಳಿಕ ಮೈ ಮುಟ್ಟಿ ಎಬ್ಬಿಸುತ್ತಿದ್ದಳು. ರಾಜಾ ಮಿಲ್ಲಿನ ಟೈಂ ಕಿಪರ್ ನಾಗ ರಾಜರಾಯ "ಆಂ... ಊಂ.." ಎಂದು ಪ್ರತಿಭಟಿಸುತ್ತಿದ್ದ, ತಬ್ಬಿಕೊಂಡಿದ್ದ ನಿದ್ದೆ ಯನ್ನು ಬಿಟ್ಟುಕೊಡಲು ಇಷ್ಟಪಡೆದೆ.

ಪದ್ಮಾವತಿ ಗಂಡನ ತೋಳನ್ನು ಮುಟ್ಟಿ ಕುಲುಕಿ ಹೇಳುತ್ತಿದ್ದಳು

"ಏಳೀಂದ್ರೆ.. ಬೆಳಗಾಘೋಯ್ತು."

ಬೆಳಗು ಆಗಬೇಕಾದರೆ ಆರು ಘಂಟೆಯವರೆಗೂ ಎಲ್ಲರೂ ಕಾದಿರಬೇಕೆಂಬ

ನಿಯಮ ಎಲ್ಲಿದೆ? ಆಗಿನ್ನೂ ಐದೋ, ಈದೂಕಾಅಲೋ, ಸಹಸ್ರ ಸಂಸಾರಗಳಿಗೆ ಆಗಲೇ ಬೆಳಗು.

ಹೊತ್ತಿಗೆ ಏಳುವ ಇನ್ನೊಬ್ಬ ವ್ಯಕ್ತಿ ನಾರಾಯಣ.ಹಿಂದೂಸ್ಥಾನ

ವಿಮಾನ ಕಾರಖಾನೆಯಲ್ಲಿ ಲೆಕ್ಕ ಕೂಡಿಸಿ ಕಳೆಯುವ ಗುಮಾಸ್ತೆ. ವಿಮಾನಪುರದಲ್ಲಿ 'ನ_ರಾಯನ್' ಎಂದು ಬದಲಾಗಿತ್ತು ಆತನ ಹೆಸರು.ಹೊಸ ಸಂಸಾರ ಹೂಡಿದ ಈ ಪತಿರಾಯ ಐದು ಘಂಟೆಗೇ ಎಚ್ಚರವಾದರೂ ಏಳದೆ, ತನ್ನ ಹಾಸಿಗೆಯ ಮೇಲೆಯೇ ಮುದುಡಿ ಮಲಗಿದ್ದ ಹೆಂಡತಿ ಕಾಮಾಕ್ಷಿಯನ್ನು ಕತ್ತಲಲ್ಲೇ ಎವೆಯಿಕ್ಕದೆ ನೋಡುತ್ತಿದ್ದ. ಅಷ್ಟರಲೇ ಆಲಾರಾಂ ಗಡಿಯಾರದ ಕಿಟಿಕಿಟಿ.ನಾರಾಯಣ ಕೈಚಾಚಿ ಅಲಾರಾಂ ಗುಂಡಿಯನ್ನು ಅದುಮಿ ಆ ಸದ್ದನ್ನು ಅಡಗಿಸುತ್ತಿದ್ದ. ಅದೇ ಕೈಯಿಂದ ಕಾಮಾಕ್ಷಿಯನ್ನು ಸುತ್ತುವರಿದು ಬರಸೆಳೆದು ನಾರಾಯಣ ಆಕೆಯ ಕಿವಿ ಯೊಳಕ್ಕೆ ಕುಟುರುತ್ತಿದ್ದ:

"ಕಾಮೂ...ಕಾಮೂ...ಏ ಕಾಮೂ..."

ಊ...ಎಂದು ರಾಗವೆಳೆಯುತ್ತಿದ್ದಳು ಕಾಮಾಕ್ಷಿ-ಏಳಬೇಡಿ.ಹೋಗಬೇಡಿ,

ಎನ್ನುವಂತೆ, ನಾರಯಣ ಆಕೆಯ ತಲೆಗೂದಲನ್ನೊಮ್ಮೆ ಮೂಸಿ, ನಕ್ಕು, ಎದ್ದು ಕುಳಿತು, ದೀಪ ಹಚ್ಚುತ್ತಿದ್ದ...ಆ ಬಳಿಕ ಸ್ಟವ್ ಉರಿಸುವುದು, ಅದರ ಮೇಲೆ ಅನ್ನ ಕ್ಕಾಗಿ ನೀರು...

ವೈದಿಕ ಕಾರ್ಯಕ್ಕೆಂದು ಕಮಲಮ್ಮನ ಗಂಡ ಪರವೂರಿಗೆ ಹೋಗಿದ್ದ.

ಹಾಗೆಂದು, ಒಂಟಿ ಜೀವವಾದ ಕಮಲಮ್ಮನೇನೂ ಸ್ವಸ್ಥವಾಗಿ ಮಲಗುವ ಹಾಗಿರಲಿಲ್ಲ. ಚಿರದುಃಖಿನಿಯಾದ ಆ ಹೆಂಗಸು ಬೇಗನೆ ಏಳುತ್ತಿದ್ದಳು.ರಾತ್ರಿ ರುಬ್ಬಿ ಇಟ್ಟಿದ್ದ ಹಿಟ್ಟನ್ನು ಹುಯ್ದು ಸಣ್ಣ ಪುಟ್ಟ ಹೇರಳ ದೋಸೆಗಳನ್ನು ಆಕೆ ಸಿದ್ಧಪಡಿಸಬೇಕು. ಇಡ್ಲಿಗಳನ್ನು ಬೇಯಿಸಬೇಕು.ಆರು ಘಂಟೆಗೆ ಐದು ನಿಮಿಷವಿರುವಾಗಲೇ ಎದುರು ಬೀದಿಯ ಹುಡುಗನೊಬ್ಬ ಬಂದು ತಿಂಡಿಯ ಆ ಬುಟ್ಟಿಯನ್ನು ಮಾರಾಟಕ್ಕೆ ಒಯ್ಯು ತ್ತಿದ್ದ. ತಲೆ ನೋವಿರಲಿ,ಮೈಕೈ ಮುಟ್ಟಿದರೆ ನೋಯುತ್ತಿರಲಿ, ಕಮಲಮ್ಮ ಐದು ಘಂಟೆಯ ಸುಮಾರಿಗೆ ಎದ್ದೇಬಿಡುತ್ತಿದ್ದಳು.ಎರಡು ಒಲೆಯುರಿಸು ತ್ತಿದ್ದಳು.ಬೆಂಕಿಯ ನಾಲಿಗೆಗಳು ನಗುತ್ತ ಕುಣಿಯುತ್ತ ಗೋಡೆಗೆ ನೇತು ಹಾಕಿದ್ದ ಚಿಮಿಣಿ ದೀಪವನ್ನು ಅಣಕಿಸುತ್ತಿದ್ದುವು.

ರಾಮಚಂದ್ರಯ್ಯನ ಮನೆಗೂ ರಂಗಮ್ಮನದಕ್ಕೂ, ನಡುವಿನ ಮನೆಯಲ್ಲಿ ಹಸ್ತ

ಸಾಮುದ್ರಿಕದ ಜ್ಯೋತಿಷಿ ಪದ್ಮನಾಭನಿದ್ದ.ಮಧ್ಯ ವಯಸ್ಕ. ಮಗಳು ಮದುವೆ ಯಾಗಿ ಗಂಡನ ಮನೆ ಸೇರಿದ್ದಳು. ಮಗ ಅರವತ್ತು ರೂಪಾಯಿ ಸಂಬಳದ ಕೆಲಸ ದೊರಕಿಸಿಕೊಂಡು ಹೈದರಾಬಾದಿನಲ್ಲಿ ಹೆಂಡತಿ, ಪದ್ಮನಾಭನಿಗೂ ಬೇಗನೆ ಏಳುವ ಅಭ್ಯಾಸ. ಹಾಗೆ ಎದ್ದು ಏನಾದರೂ ಶ್ಲೋಕವನ್ನು ಆತ ಗುಣುಗುಣಿಸುತ್ತಿದ್ದ ಅದು ಯಾವ ಶ್ಲೋಕ ಎಂಬುದು ಎಂದೂ ಯಾರಿಗೂ ತಿಳಿಯುವ ಹಾಗಿರಲಿಲ್ಲ. ಹೆಂಡತಿ ಮತ್ತು ಮಗುವನ್ನು ಬಚ್ಚಲು ಮನೆಯ ಮತ್ತು ನೀರಿನ ಸಂಕಷ್ಟಗಳಿಗೆ ಬಿಟ್ಟು
ಕೊಟ್ಟು, ಆತ ಮಲ್ಲೇಶ್ವರದ ಈಜು ಕೊಳದಲ್ಲಿ ಸ್ನಾನ ಮಾಡಿ ಬರಲು ಎದ್ದು
ಬಿಡುತ್ತಿದ್ದ.
ಸಾಲು ಮನೆಗಳು ಕವಲೊಡೆದಿದ್ದ ಕಟ್ಟಡಕ್ಕೆ ಒಂದು ಮಹಡಿಯಿತ್ತು.ರಂಗ
ಮ್ಮನ ಮಹಡಿಯ ಮಹಲು!ಕೆಳ ಭಾಗದಲ್ಲಿ ನಾಲ್ಕು ಸಂಸಾರಗಳಿದ್ದುವು. ಮೇಲೆ
ಮೂರು.ಕೆಳಗೆ ರಂಗಮ್ಮನ ಮನೆಯ ಭಾಗಕ್ಕೇ ಅಂಟಿಕೊಂಡು ಒಬ್ಬ ತಾಯಿ ಮತ್ತು
ಇಬ್ಬರು ಮಕ್ಕಳಿದ್ದರು. ಕೋಲಾರದವರು. ದೊಡ್ಡವನು ಎಂಜನಿಯರಿಂಗ್
ಕಾಲೇಜಿನಲ್ಲಿ ಓದುತ್ತಿದ್ದ. ಅವನ ಜತೆಗೆಂದು ಚಿಕ್ಕವನೂ ಇಲ್ಲಿಗೇ ಬಂದಿದ್ದ, ಇಂಟರ್
ಪರೀಕ್ಷೆ ಕಟ್ಟಲು. ಬೆಂಗಳೂರಿನಲ್ಲಿ ಹುಡುಗರು ಕೆಟ್ಟು ಹೋಗಬಹುದೆಂದು ತಾಯಿಯೂ
ಒಟ್ಟಿಗೆ ಬಂದಿದ್ದಳು. ಎಂದಾದರೊಮ್ಮೆ ಮಕ್ಕಳಿಗೆ ಪಿತೃದರ್ಶನವೂ ಆಗುತ್ತಿತ್ತು.
ತಾಯಿ ಆ ಮಕ್ಕಳನ್ನು ಬೆಳಗ್ಗೆ ಬೇಗನೆ ಎಬ್ಬಿಸುತ್ತಿದ್ದಳು. ವಿದ್ಯುದ್ದೀಪ ಅವರಿಗೂ
ಇರಲಿಲ್ಲ. ಆದರೆ ಶುಭ್ರ ಪ್ರಕಾಶ ಬೀರುತ್ತಿದ್ದ ಕಂದೀಲಿತ್ತು.
ಆ ಕಂದೀಲಿನ ಬೆಳಕು ಎದುರು ಭಾಗದಲ್ಲಿದ್ದ ತಮ್ಮ ಮನೆಯ ಬಾಗಿಲಿನ ಬಿರುಕು
ಗಳೆಡೆಯಿಂದ ಒಳಬಿದ್ದೊಡನೆಯೇ ರಾಜಮ್ಮನಿಗೆ ಎಚ್ಚರವಾಗುತ್ತಿತ್ತು. ರಂಗಮ್ಮನ
ಬಳಿಕ, ಆಕೆ ಆ ವಠಾರದ ಇನ್ನೊಬ್ಬ ವಿಧವೆ. ದೊಡ್ಡ ಮಗ ಗುಂಡಣ್ಣ ಉಂಡಾಡಿ;
ಎರಡನೆಯವನಿಗೆ ಒಳ್ಳೆಯ ಡಾಕ್ಟರೊಬ್ಬರ ಬಳಿಯಲ್ಲಿ ಕೆಲಸವಿತ್ತು. ವಾಸ್ತವವಾಗಿ
ಅದು ಜವಾನನ ಕೆಲಸ. ಅಷ್ಟೇ ಸಂಬಳ. ಆದರೆ ಜವಾಬ್ದಾರಿ ಕಂಪೌಂಡರನದು.
ಆ ಕಾರಣದಿಂದ ರಾಜಮ್ಮ ತನ್ನ ಮಗನಿಗೆ 'ಕಂಪೋಂಡ್ರು ಕೆಲಸ'ವೆಂದೇ ಹೇಳು
ತ್ತಿದ್ದಳು. 'ಕಂಪೋಂಡ್ರು' ಮನೆ ಬಿಡುವುದು ಏಳು ಘಂಟೆಗಾದರೂ ರಾಜಮ್ಮನಿಗೆ
ಬೆಳಗಿನ ಜಾವ ನಿದ್ದೆ ಬರುತ್ತಿರಲಿಲ್ಲ. 'ಅವರು' ಇದ್ದಾಗ ನಸುಕಿನಲ್ಲೆ ಎದ್ದು
ಅಭ್ಯಾಸ.
ರಾಜಮ್ಮನ ಮನೆಯ ಬಲ ಭಾಗಕ್ಕೆ, ಹೊರ ಅಂಗಳಕ್ಕೆ ತಗಲಿಕೊಂಡಿದ್ದುದು
ಪೋಲೀಸ್ ಕಾನ್ ಸ್ಟೇಬಲ್ ರಂಗಸ್ವಾಮಿಯ ಮನೆ. ಪೋಲೀಸನೊಬ್ಬ ಮನೆಯ
ಎದುರು ಭಾಗದಲ್ಲೇ ಇರುವುದು ಮೇಲೆಂಬುದು ರಂಗಮ್ಮನ ಅಭಿಪ್ರಾಯವಾಗಿತ್ತು.
ವಠಾರದ ನಸುಕಿನ ಗದ್ದಲ ಕೇಳುತ್ತಲೆ ರಂಗಸ್ವಾಮಿಯ ಹೆಂಡತಿಗೆ ಎಚ್ಚರವಾಗುತ್ತಿತ್ತು.
ಆಕೆ ಗೂರಲು ರೋಗಿ. ಎದ್ದು ಕುಳಿತು ಕೆಮ್ಮುತ್ತಿದ್ದಳು. ಮೂವರು ಮಕ್ಕಳ
ಮೇಲಿನ ಹೊದಿಕೆ ಸರಿಪಡಿಸಿ ಮತ್ತೂ ಕೆಮ್ಮುತ್ತಿದ್ದಳು. ರಂಗಸ್ವಾಮಿ ಮಾತ್ರ ಏಕ
ಪ್ರಕಾರವಾಗಿ ಗೊರಕೆ ಹೊಡೆಯುತ್ತಿದ್ದ.

ಆ ಮನೆಗೆ ಎದುರಾಗಿ ಮಾಧ್ಯಮಿಕ ಶಾಲೆಯ ಉಪಾಧ್ಯಾಯರೊಬ್ಬರಿದ್ದರು_
ಲಕ್ಷ್ಮೀನಾರಾಯಣಯ್ಯ. ಆ ಬಡ ಸಂಸಾರದ ಸದಸ್ಯರ ಸಂಖ್ಯೆ ಒಟ್ಟು ಏಳು.
ಸಣ್ಣಪುಟ್ಟ ಮಕ್ಕಳು ಐವರು. ಅವರನ್ನು ಹೊತ್ತು ಹೆತ್ತಿದ್ದ ತಾಯಿ. ಮಕ್ಕಳಾಗ
ಲಿಲ್ಲವೆಂಬ ಕಾರಣದಿಂದ ಗಂಡನ ಮನೆಯಿಂದ ಓಡಿಸಲ್ಪಟ್ಟಿದ್ದ ಉಪಾಧ್ಯಾಯರ

ಯುವತಿ ತಂಗಿ, ವಠಾರದ ಗುಜುಗುಜು ಕೇಳಿಸಿದಂತೆ ಉಪಾಧ್ಯಾಯರ ಹೆಂಡತಿ
ಎಚ್ಚರಗೊಂಡು, ಅಡುಗೆ ಮನೆಯಲ್ಲಿ ಮಲಗಿದ್ದ ನಾದಿನಿಗೆ ಹೇಳುತ್ತಿದ್ದಳು:
"ಏ ಸುಮಂಗಳಾ...ಏಳೇ...ಏಳೇ...ಬೆಳಗಾಯ್ತೂಂತ ಕಾಣುತ್ತೆ."
ಹಾಗೆ ಹೇಳಿ ಆಕೆ ಹೊದಿಕೆಯನ್ನು ಮತ್ತಷ್ಟು ಬಲವಾಗಿ ಮುಖದ ಮೇಲೆಳೆದು
ಕೊಳ್ಳುತ್ತಿದ್ದಳು. ಮಕ್ಕಳ ಕಾಲುವೆಯ ಆಚೆ ದಡದಲ್ಲಿ ಮಲಗಿದ್ದ ಲಕ್ಷ್ಮೀನಾರಾ
ಯಣಯ್ಯ ಮಗ್ಗುಲು ಹೊರಳಿ, ಗೋಡೆಗೆ ಮೂಗು ಮುಟ್ಟಿಸುತ್ತ, ನಿದ್ದೆಯ
ಇನ್ನೊಂದು ಅಧ್ಯಾಯ ಆರಂಭಿಸುತ್ತಿದ್ದರು.
ಕೆಳಗಿನ ಮನೆಗಳಲ್ಲೆಲ್ಲ ಅಡ್ಡಗೋಡೆಯೊಂದು ಎರಡು ಕೊಠಡಿಗಳಿವೆಯೇನೋ
ಎಂಬ ಭ್ರಮೆಗೆ ಕಾರಣವಾಗಿತ್ತು. ಮಹಡಿಯ ವಿಭಾಗದಲ್ಲಿ ಅಂತಹ ಏರ್ಪಾಟಿರಲಿಲ್ಲ.
ಒಂಟಿ ಇಟ್ಟಿಗೆಯಿಟ್ಟು ಒಟ್ಟು ಮೂರು ಕೊಠಡಿಗಳನ್ನು ಮಾಡಿದ್ದರು. ಒಂದೊಂದು
ಕೊಠಡಿಯೂ ಒಂದೊಂದು ಮನೆ. ಆದರೆ ಮಹಡಿಯಾಗಿದ್ದುದರಿಂದ ಬಾಡಿಗೆಯ
ವಿಷಯದಲ್ಲಿ ಯಾವ ಮನೆಗೂ ಅವು ಕಡಿಮೆಯಾಗಿರಲಿಲ್ಲ.
ಮೊದಲ ಕೊಠಡಿಮನೆಯಲ್ಲಿ ಮೂವರು ವಿದ್ಯಾರ್ಥಿಗಳಿದ್ದರು. ಪರಸ್ಪರ
ತುಂಬಾ ಹೊಂದಿಕೊಂಡಿದ್ದ ಹುಡುಗರು! ರಾತ್ರೆ ರಂಗಮ್ಮ ದೀಪ ಆರಿಸುತ್ತಾರೆಂದು
ಅವರೆಂದೂ ನೊಂದುಕೊಂಡವರಲ್ಲ. ಬೆಳಗ್ಗೆ ದೀಪವಿಲ್ಲವೆಂದು ಚಡಪಡಿಸಿದವರೂ
ಅಲ್ಲ. ವಠಾರದಿಂದ ಎಷ್ಟೋ ಹಕ್ಕಿಗಳು ಹೊರಹೋದ ಮೇಲೆಯೇ ಅವರಿಗೆ ಬೆಳಕು
ಹರಿಯುತ್ತಿತ್ತು.
ಎರಡನೆಯ ಕೊಠಡಿಮನೆಯ ನಿವಾಸಿ, ಒಬ್ಬಂಟಿಗನಾದ ಚಂದ್ರಶೇಖರಯ್ಯ.
ಒಂದು ವಿಮಾಸಂಸ್ಥೆಯ ಈ ಪ್ರತಿನಿಧಿ ಉಸಿರಾಟದ ಸದ್ದೂ ಇಲ್ಲದೆ ನಿದ್ದೆ ಹೋಗು
ವಷ್ಟು ಸಮರ್ಥ. ತಿಂಗಳಲ್ಲಿ ಹತ್ತು ದಿನ ಆತ ಊರಲ್ಲಿದ್ದರೇ ಹೆಚ್ಚು. ಇದ್ದಾಗ,
ತಡವಾಗಿ ಮನೆಗೆ ಬರುವುದು, ತಡವಾಗಿ ಏಳುವುದು.

ಮೂರನೆಯ ಕೊಠಡಿಮನೆಯಲ್ಲಿದ್ದುದು ಸಾವಿತ್ರಮ್ಮನ ಸಂಸಾರ. 'ಅವರ
ಯಜಮಾನರು' ಹೆಚ್ಚಾಗಿ ಸ‍ರ್ಕೀಟಿನ ಮೇಲೆಯೇ ಇರುತ್ತಿದ್ದರು. ಆತ ಹಲವು
ಪ್ರಕಾಶನ ಸಂಸ್ಥೆಗಳ ಪ್ರತಿನಿಧಿ. ಕನ್ನಡದ ಅಪೂರ್ವ ವಿದ್ವ‍ತ್ತನ್ನೆಲ್ಲ ಪುಸ್ತಕಗಳ ರೂಪ
ದಲ್ಲಿ ಕಬ್ಬಿಣದೊಂದು ಪೆಟ್ಟಿಗೆಯಲ್ಲಿ ಹೊತ್ತು ಆತ ಊರೂರು ತಿರುಗುತ್ತಿದ್ದರು.
ಇಬ್ಬರು ಮಕ್ಕಳು ಆ ದಂಪತಿಗೆ. ಇಂಟರ್ ಪರೀಕ್ಷೆಗೆ ಎರಡು ಸಾರೆ ಕಟ್ಟಿ ಎರಡು
ಭಾಗಗಳಲ್ಲಷ್ಟೆ ಉತ್ತೀರ್ಣನಾದವನು ಜಯರಾಮು. ಎರಡು ವಾರಪತ್ರಿಕೆಗಳ
ಮಕ್ಕಳ ವಿಭಾಗಕ್ಕೆ ಸದಸ್ಯನಾಗಿದ್ದ ಆತನನ್ನು ಸುತ್ತಮುತ್ತಲಿನವರೆಲ್ಲ ಕವಿಯೆಂದು
ಕರೆಯುತ್ತಿದ್ದರು. ಆತನ ತಂಗಿ, ತಾಯ್ತಂದೆಯರ ದೃಷ್ಟಿಯಲ್ಲಿ 'ಇನ್ನೂ ಚಿಕ್ಕ
ಹುಡುಗಿ.' ಆದರೆ ಅಕ್ಕ ಪಕ್ಕದ ಮನೆ ಹೆಂಗಸರ ಅಭಿಪ್ರಾಯದ ಪ್ರಕಾರ 'ಬೆಳೆದು
ನಿಂತವಳು.' ಆದರೆ ಪುಟ್ಟ ರಾಧಾ ಈಗಲೂ ತಾಯಿಯ ಜತೆಯಲ್ಲೆ ಮೈಮುದುಡಿ
ಕೊಂಡು ಮಲಗುತ್ತಿದ್ದಳು. ಕತ್ತಲ್ಲನ್ನು ಕಂಡರೆ ಅವಳಿಗೆ ಭಯ. ಕವಿ ಜಯರಾಮು

ಮಾತ್ರ ಬೇಗನೆ ಎದ್ದು ಉಷೆಯನ್ನು ಇದಿರುಗೊಳ್ಳಲೆಂದು ವಠಾರದಿಂದ ಹೊರಬಿದ್ದು
ದೂರ, ಬಲು ದೂರ, ಸಾಗುತ್ತಿದ್ದ.
ವಠಾರದ ಹಿಂಭಾಗದ ಮನೆಯ ಸುಬ್ಬುಕೃಷ್ಣಯ್ಯ ಏಳುವುದು ಸ್ವಲ್ಪ ನಿಧಾನ
ವಾಗಿಯೇ. ಒಂಭತ್ತು ಗಂಟೆಗೆ ಸರಿಯಾಗಿ ಆತ ಶ್ರೀನಿವಾಸ ಶೆಟ್ಟರ ಅಂಗಡಿ ಬಾಗಿ
ಲಲ್ಲಿದ್ದರಾಯಿತು.
ಅದರ ಎದುರು ಭಾಗದಲ್ಲೇ ನಾರಾಯಣಿಯ ಮನೆ....
ಎಂದಿನಂತೆಯೇ ಈ ದಿನವೂ ಈ ಮುಂಜಾನೆಯೂ...
ಎಚ್ಚರವಾಗಿ ಬಹಳ ಕಾಲ ಕಂಬಳಿ ಹೊದೆದು ಕುಳಿತಿದ್ದ ರಂಗಮ್ಮ, ನಿನ್ನೆ-ಈ
ದಿನ-ನಾಳೆಗಳ ಬಗೆಗೆ ಯೋಚಿಸಿದರು. ಬಳಿಕ ಎದ್ದು ಬಾಗಿಲು ತೆರೆದರು. ಮಬ್ಬು
ಬೆಳಕಿನ ಗಾಳಿ ಅವರ ಮುದಿಮುಖಕ್ಕೆ ಮುತ್ತಿಟ್ಟಿತು...ಬೀಗದ ಕೈ ಗೊಂಚಲನ್ನೆತ್ತಿ
ಕೊಂಡು ನಡೆಗೋಲನ್ನೂ ರುತ್ತ ಅವರು ಹೊರಬಂದರು. ಅವರ ದೃಷ್ಟಿ ಓಣಿಯ
ಕೊನೆಗೆ-ನಾರಾಯಣಿಯ ಮನೆಯತ್ತ_ಹರಿಯಿತು. ಅವರು ಮೆಲ್ಲನೆ ಅಲ್ಲಿಗೆ
ನಡೆದರು. ಬಾಗಿಲಿಗೆ ಒಳಗಿನಿಂದ ಅಗಣಿ ಹಾಕಿರಲಿಲ್ಲ. ರಂಗಮ್ಮ ಬಾಗಿಲನ್ನು
ಹಿಂದಕ್ಕೆ ತಳ್ಳಿದರು. ನಾರಾಯಣಿ ಮಲಗಿದ್ದಲ್ಲಿ ತಲೆಯ ಭಾಗದಲ್ಲಿರಿಸಿದ್ದ ಹಣತೆ
ಎಣ್ಣೆ ಆರಿ ನಂದಿ ಹೋಗಿತ್ತು. ನಾಲ್ವರು ಮಕ್ಕಳನ್ನೂ ಮೂಲೆಯಲ್ಲಿ ಒಂದಾಗಿ
ಮಲಗಿಸಿ ಹೊದಿಸಿತ್ತು. ನಾರಾಯಣಿಯ ಗಂಡ ಬರಿ ಚಾಪೆಯ ಮೇಲೆ ಮಕ್ಕಳತ್ತ
ಮುಖ ತಿರುಗಿಸಿ ಮಲಗಿದ್ದ. 'ಅಯ್ಯೋ ಪಾಪ!' ಎನಿಸಿತು ರಂಗಮ್ಮನಿಗೆ. ಅವರು
ಮತ್ತೆ ಬಾಗಿಲೆಳೆದುಕೊಂಡರು.
ರಂಗಮ್ಮ ಹೊರ ಹಿತ್ತಿಲಿಗೆ ಬಂದು ಕೊಳಾಯಿಗೆ ಹಾಕಿದ್ದ ಬೀಗ ತೆಗೆದರು.
ವಠಾರದ ಎಲ್ಲರನ್ನೂ ಉದ್ದೇಶಿಸಿ ಅವರೆಂದರು:
“ಕೊಳಾಯಿ ಬೀಗ ತೆಗೆದಿದೀನಿ....ಬನ್ರೇ....”
ಒಬ್ಬೊಬ್ಬರಾಗಿ ಕೊಡವೆತ್ತಿಕೊಂಡು ಎಲ್ಲರೂ ಬಂದರು-ಮೀನಾಕ್ಷಮ್ಮ,
ಪದ್ಮಾವತಿ, ಕಮಲಮ್ಮ, ಕಾಮಾಕ್ಷಿ, ರಾಜಮ್ಮ, ರಾಧಾ...ಎಲ್ಲರೂ.
ನಾರಾಯಣಿಯಂತೂ ಕಾಹಿಲೆ ಮಲಗಿದ ಮೇಲೆ ನೀರಿಗೆ ಬಂದೇ ಇರಲಿಲ್ಲ. ಆಕೆ
ಬರದೇ ಇದ್ದುದರಿಂದ ಏನೋ ಕೊರತೆಯಾದಂತೆ ಯಾರಿಗೂ ಅನಿಸಲಿಲ್ಲ.
ಎಂದಿನಂತೆಯೇ ಮತ್ತೊಂದು ದಿನ ಯಾವ ಬದಲಾವಣೆಯೂ ಇಲ್ಲದೆ ತಮ್ಮ
ವಠಾರದಲ್ಲಿ ಆರಂಭವಾಯಿತೆಂದು ರಂಗಮ್ಮ ಸಮಾಧಾನದ ನಿಟ್ಟುಸಿರು ಬಿಟ್ಟರು.


ನಾರಾಯಣಿಯ ಗಂಡ ಎಲ್ಲಿಂದಲೋ ಸಾಲ ಪಡೆದು ಒಂದಿಷ್ಟು ಅಕ್ಕಿ ತಂದು
ಗಂಜಿ ಬೇಯಿಸಿದ. ಮಾರಲೆಂದು ಸಿದ್ಧಪಡಿಸುತ್ತಿದ್ದುದರಲ್ಲಿ ಸ್ವಲ್ಪ ತಿಂಡಿ ಉಳಿಸಿ


ಕೊಂಡು ಕಮಲಮ್ಮ ಎಳೆಯ ಮಕ್ಕಳಿಗೆ ಕೊಟ್ಟಳು. ದೊಡ್ದ ಹುಡುಗ ಶಾಲೆಗೆ ಹೋಗುವುದನ್ನು ನಿಲ್ಲಿಸಿ, ಚಿಕ್ಕವರನ್ನು ನೋಡಿಕೊಂಡ. ಕಾಮಾಕ್ಷಿ ಕೊನೆಯ ಕೂಸಿಗೆ ಹಸುವಿನ ಹಾಲು ಕುಡಿಸಿದಳು.

ಸಾವಿನ ಮನೆಗೆ ಸಂಕೀತವಾಗಿದ್ದ ಹಣತೆ, ಆಗಾಗ್ಗೆ ಎಣ್ಣೆ ಇಲ್ಲದೆ ಆರಿದರೂ,

ಒಂದು ಎರಡು ಮೂರು ಎಂದು ಕಳೆದ ದಿನಗಳನ್ನು ಲೆಕ್ಕ ಹಾಕಿತು.

ಅಳು-ನಗು, ಸಾಧನೆ- ಸಂಪಾದನೆ, ಸುಖ-ಸಂಕಟ, ಹೀಗೆ ಬದುಕಿನ ಬಣ್ಣ

ಬಣ್ಣದ ಅಲೆಗಳು ವಠಾರದ ಜೀವನ ಸರೋವರದಲ್ಲಿ ಹುಟ್ಟಿ, ಅಳಿಯುತ್ತ ಇದ್ದುವು.

ಆದರೆ ರಂಗಮ್ಮ ಗೆಲುವಾಗಿರಲಿಲ್ಲ. ಅವರ ಸುಕ್ಕುಗಟ್ಟಿದ್ದ ಮುಖ ಬಾಡಿ

ಕೊಂಡು ಮತ್ತಷ್ಟು ಸಪ್ಪೆಯಾಯಿತು. ಒಮ್ಮೆ ಸಿಡುಕು, ಮರುಕ್ಷಣವೇ ಸಂತೋಷ- ಇದು ಅವರ ಸ್ವಭಾವ. ಆದರೆ ಈಗ ದಿನವೆಲ್ಲ ಮುಖ ಗಂಟಿಕ್ಕಿಕೊಂಡೇ ಇರುತ್ತಿತ್ತು...

...ರಾಧಾ ಮೂರು ಎಂದು ಹೇಳಿ ನಾಲ್ಕು ಕೊಡ ನೀರು ಒಯ್ದಳೆಂದು ಅವರು

ಗದರಿದರು. ರಾಧಾಗೆ ಅಳು ಬಂತು.

ಜಯರಾಮು ಕಿಟಿಕಿಯಿಂದ ಮುಖ ಹೊರ ಹಾಕಿ ಕೆಳಕ್ಕೆ ರಂಗಮ್ಮನತ್ತ

ನೋಡುತ್ತ ರಾಗವೆಳೆದ:

"ನಾಲ್ಕು ಕೊಡ ನೀರು ಹೊತ್ಕೊಂಡು ಈ ಮಹಡಿ ಮೆಟ್ಟಲು ಹತ್ತೋದು

ಮನುಷ್ಯರಿಂದ ಸಾಧ್ಯವೇ ರಂಗವ್ನೋರೆ? ಅದೂ ರಾಧಾ, ಪುಟ್ಟ ಹುಡುಗಿ?"

ರಾಧಾ ಪುಟ್ಟ ಹುಡುಗಿಯಲ್ಲವೆಂದು ವಾದಿಸುತ್ತಿದ್ದ ಇಬ್ಬರು ಮೂವರು

ಹೆಂಗಸರು ಕೊಳಾಯಿಯ ಬಳಿ ನಿಂತಿದ್ದರು. ಅವರಿಗೆ ಕೇಳಿಸಲೆಂದೇ ಜಯರಾಮು ಹಾಗೆ ಹೇಳಿದ್ದ.

ಆತ ನಿರೀಕ್ಷಿಸಿದ್ದಂತೆಯೇ ಚಚೆರ್ ನಾಲ್ಕು ಕೊಡಗಳನ್ನು ಮರೆತು ರಾಧಾಳತ್ತ

ತಿರುಗಿತು.

ಮದುವೆಯಾಗದೇ ಇದ್ದ ಇಬ್ಬರು ಗಂಡುಮಕ್ಕಳ ತಾಯಿ ರಾಜಮ್ಮ ಯಾವುದೋ

ಸಂಕಟವನ್ನು ಮರೆಸಲು ಹಾದಿಯಾಗಲೆಂದು ಮಾತನಾಡಿದಳು:

"ಚೆನ್ನಾಗಿದೆ...ಪುಟ್ಟ ಹುಡುಗಿ...ಊಹೂಹೂಹು...ಪಾಪ! ದೃಷ್ಟಿ

ತಾಕೀತು."

"ಯಾಕೆ ಸುಮ್ಸುಮ್ಮೆ ಜಗಳ ಕಾಯ್ತಿಯೋ?" ಎಂದು ಜಯರಾಮುವಿನ

ತಾಯಿ ವಿನಂತ ಮಾಡುವ ಧ್ವನಿಯಲ್ಲಿ ಮಗನಿಗೆ ಅಂದಳು.

ಗುಂಡಣ್ಣ ಹೆಬ್ಬಾಗಿಲ ಬಳಿ ತಲೆ ಹಾಕಿ ಗಡಸು ಸ್ವರದಲ್ಲಿ ಗದರಿದ:

"ಏನಮ್ಮಾ ಅದು ಗಲಾಟೆ?"

ರಂಗಮ್ಮ ಅಲ್ಲಿಂದ ಒಳಕ್ಕೆ ಬಂದರು. ಕಟ್ಟಡದ ಕೆಳಭಾಗದಲ್ಲಿದ್ದ ನಾಲ್ಕು ಮನೆ

ಗಳಲ್ಲೂ ಹಗಲು ಹೊತ್ತು ಕೂಡ ಸಾಕಷ್ಟು ಬೆಳಕು ಇರುತ್ತಿರಲ್ಲಿಲ.ಆದರೆ ರಂಗಮ್ಮ ನಿಗೆ, ದೃಷ್ಟಿ ಮಂದವಾಗಿದ್ದರೂ, ಅಭ್ಯಾಸಬಲದಿಂದ, ಆ ಮನೆಗಳ ಒಳಗಿದ್ದ ಪ್ರತಿ ಯೊಂದೊಂದೂ ತೆರೆದ ಬಾಗಿಲುಗಳೆಡೆಯಿಂದ ಕಾಣಿಸುತ್ತಿತ್ತು.
ರಂಗಮ್ಮನ ಗಂಟಲಿನಿಂದ ಆಂ_ಊಂ_ನರಳಾಟದ ಧ್ವನಿ ಹೊರಟಿತು. ಹಲ್ಲು
ಕಡಿತದ ಸಪ್ಪಳ ಕೇಳಿಸಿತು. ಎಲ್ಲಿಲ್ಲದ ಬೇಸರದಿಂದ ಹಿಂಡಿಹೋಗಿತ್ತು ಮನಸ್ಸು.
ಓಣಿಯಲ್ಲಿ ಪದ್ಮನಾಭನ ಮನೆಯ ಮುಂದುಗಡೆ ಯಾವುದೋ ಮಗು ಇಸ್ಸಿ
ಮಾಡಿತ್ತು.
ಕಟಕಟನೆ ಸದ್ದು ಮಾಡಿಕೊಂಡು ಹಾಸುಗಲ್ಲುಗಳ ಮೇಲೆ ನಡೆಯುತ್ತ ರಂಗಮ್ಮ
ಅಲ್ಲಿಗೆ ಬಂದರು.
"ಯಾರ ಮಗೂನೇ ಇದು?........ವಠಾರದ ಆಚೆಗೆ ಬೀದಿಗೆ ಕಳಿಸೀಂತ ಎಷ್ಟು
ಸಾರಿ ಹೇಳಿಲ್ಲ ನಿಮಗೆ?...."
ಯಾವ ಮನೆಯಿಂದಲೂ ಉತ್ತರ ಹೊರಡಲಿಲ್ಲ. ರಂಗಮ್ಮನ ಸ್ವರ ಕಿರಿಚಿ
ಕೊಳ್ಳುವ ಮಟ್ಟಕ್ಕೇರಿತು:
"ಕಿವಿ ಕೇಳಿಸೋಲ್ವೇನ್ರೇ? ಪದ್ಮಾವತೀ, ಕಮಲಮ್ಮ, ಯಾರ ಮಗೂನ್ರೇ
ಇದು?"
"ನಮ್ಮದಲ್ಲಪ್ಪ", " ನಮ್ಮದಲ್ಲ" ಎಂದು ಉತ್ತರಗಳು ಬಂದುವು. ತಾಯಂದಿರು
ತಮ್ಮ ಎಳೆಯ ಮಕ್ಕಳನ್ನು ಹಿಡಿದು ತಿರುಗಿಸಿ ಪರೀಕ್ಷಿಸಬೇಕಾಯಿತು.
"ಇದೊಳ್ಳೇ ತಮಾಷಿ. ಹಾಗಾದರೆ ಬೀದಿ ಮಕ್ಕಳು ಬಂದುವೇನು ಇಲ್ಲಿಗೆ?"
ಎಂದು ಗಟ್ಟಿಯಾದ ಸ್ವರದಲ್ಲಿ ರಂಗಮ್ಮ ಕೇಳಿದರು.
ನಾರಾಯಣಿಯ ಮಗ ಪುಟ್ಟು ಹೊರ ಬಂದು ವಿಷಾದದ ಧ್ವನಿಯಲ್ಲಿ ಹೇಳಿದ:
"ನಮ್ಮನೇ ಮಗು ಅಜ್ಜಿ, ನಾನು ನೋಡೇ ಇರ್ಲಿಲ್ಲ. ತೆಗೀತೀನಿ."
ತಾಯಿಯಿಲ್ಲದ ತಬ್ಬಲಿ ಮಕ್ಕಳು...ರಂಗಮ್ಮನ ಗಂಟಲು ಒಣಗಿತು.
ಇಸ್ಸಿ ಎತ್ತಲು ಹುಡುಗ ಯಾವುದೋ ಹಳೆಯ ಪತ್ರಿಕೆಯ ಚೂರುಗಳನ್ನು
ತರುತ್ತಿದ್ದಂತೆ ಕಮಲಮ್ಮನ ಸ್ವರ ಕೇಳಿಸಿತು.
"ತಾಳೋ ಮರಿ. ನಾನು ತೆಗೀತೀನಿ, ತಾಳೋ...."
ರಂಗಮ್ಮ ಹಾಗೆಯೇ ಮುಂದಕ್ಕೆ ನಡೆಯುತ್ತ ಹಿತ್ತಿಲ ಬಾಗಿಲವರೆಗೆ ಬಂದರು.
ಆ ಕೊನೆಯ ಸಂಸಾರಕ್ಕೊದಗಿದ ದುರ್ಗತಿಯನ್ನು ನೆನೆಯುತ್ತ ಅವರಿಗೆ ಸಂಕಟವೆನಿಸಿತು,
ಉಗುಳು ನುಂಗುವಂತಾಯಿತು.
ಹಿತ್ತಿಲ ಬಾಗಿಲ ಬಳಿ ಕಸದ ಗುಪ್ಪೆ ಇತ್ತು. ಮೀನಾಕ್ಷಮ್ಮನ ಮನೆಯದೇ
ಎಂಬುದು ಖಚಿತವಾಗಿದ್ದರೂ ರಂಗಮ್ಮ ಎಂದಿನಂತೆ ಮಾತನಾಡಿದರು:
"ಯಾರ್ರೇ ಇಲ್ಲಿ ಕಸದ ಗುಪ್ಪೆ ಹಾಕಿರೋರು? ಬಾಗಿಲು ತೆರೆದು ಹೊರಕ್ಕೆ
ಎಸಿಯೋಕೆ ಆಗಲ್ವೇನ್ರೆ? ಮುನ್ಸಿಪಾಲ್ಟಿಯೋರು ವಠಾರದ ಒಳಕ್ಕೆ ಬರ್ತಾರೇಂತ
ತಿಳ್ಕೊಂಡಿದೀರೇನ್ರೇ?...."

ಮೀನಾಕ್ಷಮ್ಮ ಎಂದಿನಂತೆ ಸಾವಧಾನವಾಗಿಯೇ ಉತ್ತರವಿತ್ತಳು:

"ನಾನು ರಂಗಮ್ನೋರೆ....ಬಂದೆ, ಎತ್ತಿ ಹಾಕ್ತೀನಿ..."
ರಂಗಮ್ಮ ಗೊಣಗುತ್ತ ಹಿಂತಿರುಗಿ, ಓಣಿಯುದ್ದಕ್ಕೂ ನಡೆದು ಈ ತುದಿಗೆ
ಬಂದು, ತಮ್ಮ ಮನೆಯ ಬಾಗಿಲ ಬಳಿ ನಿಂತರು.
ರಾಜಮ್ಮ ರಂಗಮ್ಮನ ಪರವಾಗಿ ಕೊಳಾಯಿಗೆ ಬೀಗ ತಗಲಿಸಿ, ಬೀಗದ ಕೈಯನ್ನು
ತಂದುಕೊಟ್ಟಳು:
"ಆಯ್ತೇನು ನೀರು ಎಲ್ರಿಗೂ?"
"ಆಯ್ತು ರಂಗಮ್ನೋರೆ."
ಇದು ಕೂಡ ಪದ್ಧತಿಯ ಮಾತು.
ರಂಗಮ್ಮ ತಮ್ಮ ಮನೆಯೊಳಕ್ಕೆ ಬಂದರು. ಒಲೆ ಹಚ್ಚಬೇಕಿನ್ನು. ತಮಗಾಗಿ
ನೀರು ಬಿಸಿ ಮಾಡಿ, ಆಡುಗೆ ಮನೆಯಲ್ಲೇ ಇದ್ದ ಬಚ್ಚಲಲ್ಲಿ ಸ್ನಾನ ಮಾಡಬೇಕು. ಆ
ಬಳಿಕ ದೇವರ ಪೂಜೆ. ತಮ್ಮ ಒಪ್ಪೊತ್ತಿನ ಊಟಕ್ಕಾಗಿ ಅನ್ನ, ಸಾರು.
ಈ ದಿನ ಏನೂ ಬೇದವೆಂದು ತೋರಿತು ರಂಗಮ್ಮನಿಗೆ. ಕಾಯಿಸದೆ ಹಾಗೆಯೇ
ಇರಿಸಿದ್ದ ಅರ್ಧ ಪಾವು ಹಾಲನ್ನು ನೋಡುತ್ತ ಅವರು ಗೋಡೆಗೊರಗಿ ಕುಳಿತರು.
ಯೋಚನೆಗಳು ಅವರನ್ನು ಕಾಡಿದುವು.
ಏನು ಮಾದಬೇಕು? ತಾನೇನು ಮಾಡಬೇಕು?
ತಿಂಗಳಿಗೆ ಹದಿನೇಳರಂತೆ ಮೂರು ತಿಂಗಳು...ಮೂರು ಸಾರೆ ಹತ್ತು ಮತ್ತು
ಮೂರು ಸಾರೆ ಏಳು..ಮೂವತ್ತು ಮತ್ತು ಇಪ್ಪತೋಂದು...ಐವತೋಂದು....
ಅದಂತೂ ದೊರೆಯುವ ಆಸೆ ಇರಲಿಲ್ಲ. ಒಂದು ತಿಂಗಳ ಬಾಡಿಗೆಯನ್ನೂ
ಮುಂಗಡವಾಗಿ ಆ ಸಂಸಾರ ಕೊಟ್ಟಿರಲಿಲ್ಲ. ಹೀಗಾಗಿ ಅಷ್ಟು ಹಣವೂ ಕೈ ಬಿಟ್ಟು
ಹೋದ ಹಾಗೆಯೇ.
ಆದರೆ ಅಷ್ಟೇ ಹಣವೆಂದು ಹೇಳುವುದು ಹೇಗೆ? ಮುಂದಿನ ಹತಿ ಏನು?
ಆ ಮಹಾರಾಯ ಮನೆಯನ್ನಾದರೂ ಖಾಲಿ ಮಾಡಿದರೆ ಚೆನ್ನಾಗಿತ್ತು...
ಆದರೆ ಆತ ಖಾಲಿ ಮಾಡುವ ಯಾವ ಚಿಹ್ನೆಯೂ ಇರಲಿಲ್ಲ. ನಿರುದ್ಯೋಗ
ಬೇರೆ..ಮಕ್ಕಳನ್ನು ಸಾಕುವುದಕ್ಕಾದರೂ ಎರಡನೇ ಮದುವೆ? ಅಷ್ಟೆಲ್ಲ ಸಾಮರ್ಥ್ಯ
ಆ ಗಂಡಸಿಗೆ ಇದ್ದ ಹಾಗೆ ತೋರಲಿಲ್ಲ. ಅಂದ ಬಳಿಕ-?
ಬೇಕಾದಷ್ಟು ಕಾಲ ಬಾಡಿಗೆ ಇಲ್ಲದೆಯೇ ಇಲ್ಲಿ ಇರು- ಎಂದು ಹೇಳಿದ ಹಾಗೆ
ಅದು ಹೇಗೆ ಸಾಧ್ಯ? ಶ್ರೀರಾಮಪುರದಲ್ಲೇ ಪ್ರಖ್ಯಾತವಾಗಿರುವ ರಂಗಮ್ಮನ
ವಠಾರವೇನು ಧರ್ಮಛತ್ರ ಕೆಟ್ಟು ಹೋಯ್ತೆ?
ಹಾಗಾದರೆ ಆತನಿಗೆ ಹೇಳಬೇಕು, ಮನೆ ಖಾಲಿ ಮಾಡು ಅಂತ.
ಹಾಗೆ ಹೇಳುವುದು ಮಾಅತ್ರ ಸುಲಭವಾಗಿರಲಿಲ್ಲ.
ಏನು ಮಾಡಬೇಕೆಂಬುದು ತೋಚದೆ, ಹಲ್ಲಿನ ಸದ್ದು ಮಾಡುತ್ತ ಆಂ-ಹೂಂ-
ಎಂದು ನರಳುತ್ತ ರಂಗಮ್ಮ ಸಂಕಟಪಟ್ಟರು.
ನಾಲ್ವತ್ತು ವರ್ಷ ವಯಸ್ಸಾಗಿದ್ದಾಗಲೇ ವಿಧವೆಯಾಗಿದ್ದರು ರಂಗಮ್ಮ. ಆ
ಪುಣ್ಯಾತ್ಮ ಬಿಟ್ಟು ಹೋದ ಆಸ್ತಿಯೆಂದರೆ ಬಾಲ್ಯಾವಸ್ಥೆಯಲ್ಲಿದ್ದ ಒಂದು ಗಂಡು,
ಎರಡು ಹೆಣ್ಣು ಮತ್ತು ಪುಟ್ಟ ಮನೆ. ಅವರು ತೀರಿಕೊಂಡಾಗ ಮಹಡಿ ಕಟ್ಟುವ
ಕೆಲಸ ಅರ್ಧದಲ್ಲೇ ನಿಂತಿತ್ತು. ಆವರೆಗೂ ಪುಕ್ಕಲು ಜೀವಿಯಾಗಿ ಗಂಡನ ನೆರಳಾಗಿದ್ದ
ರಂಗಮ್ಮ ಆ ಬಳಿಕ ಧೈರ್ಯ ತಳೆದು ದಿನ ಕಳೆದರು.
ಮನೆಯ ಅರ್ಧವನ್ನು ಅವರು ಬಾಡಿಗೆಗೆ ಕೊಟ್ಟರು. ಮಹಡಿ ಕಟ್ಟುವ ಕೆಲಸ
ಪೂರ್ತಿಯಾಯಿತು. ಕ್ರಮೇಣ ಕೆಳ ಭಾಗದಲ್ಲಿ ನಾಲ್ಕು ಮನೆಗಳಾದುವು. ಮಹಡಿಯ
ಮೂರು ಕೊಠಡಿಗಳನ್ನು ಓದುವ ಹುಡುಗರಿಗೆ ಬಾಡಿಗೆಗೆ ಕೊಟ್ಟುದಾಯಿತು.
ಬೆಳೆದು ನಿಂತ ಎರಡು ಹುಡುಗಿಯರನ್ನೂ ಹೆಚ್ಚು ಖರ್ಚಿಲ್ಲದೆಯೇ ರಂಗಮ್ಮ
ಮದುವೆ ಮಾಡಿಕೊಟ್ಟರು. ಆದರೆ ಮಗನಿಗೆ ಮಾತ್ರ ತುಂಬ ಅನುಕೂಲವಾಗಿದ್ದ
ಕಡೆಯೇ ಸಂಬಂಧ ಕುದುರಿಸಿದರು.ವರದಕ್ಷಿಣೆಯಾಗಿ ಬಂದುದನ್ನೆಲ್ಲ ಬಳಸಿ, ಮನೆಯ
ಹಿಂಭಾಗದ ಹಿತ್ತಿಲಲ್ಲಿ ಎರಡು ಸಾಲು ನಾಲ್ಕು-ನಾಲ್ಕು ಮನೆಗಳನ್ನು ಕಟ್ಟಿಸಿದ್ದಾಯಿತು.
ಜನ ಅದನ್ನು ವಠಾರವೆಂದು ಕರೆದರು. ಹಾಗೆ ಕರೆಯಲು ಯಾರು ಮೊದಲು
ಮಾಡಿದರೊ! ರಂಗಮ್ಮ ವಿಧವೆಯಾದ ಮೇಲೂ ಬಹಳ ಕಾಲ ಕೃಷ್ಣಪ್ಪನವರ ಮನೆ
ಯಾಗಿಯೇ ಇದ್ದುದು ಕ್ರಮೇಣ ರಂಗಮ್ಮನ ವಠಾರವಾಗಿ ಮಾರ್ಪಟ್ಟಿತು.
ಅದು ಹಲವು ವರ್ಷಗಳಿಗೆ ಹಿಂದಿನ ಮಾತು,ಈಗ ರಂಗಮ್ಮ ವೃದ್ಧೆ. ಇಬ್ಬರು
ಹೆಣ್ಣು ಮಕ್ಕಳಿಗೂ ಎಷ್ಟೋ ಮಕ್ಕಳಾಗಿದ್ದುವು. ಮಗನೂ ಸಂಸಾರವಂದಿಗನಾಗಿ ತಂದೆ
ಯಾಗಿದ್ದ. ಆಗಾಗ್ಗೆ ವರ್ಗವಾಗುತ್ತಿದ್ದ ಆತ ಈಗ ಇದ್ದುದು ಕಡೂರಿನಲ್ಲಿ.
ಯಾರಾದರೂ ಕೇಳಿದರೆ ರಂಗಮ್ಮ ಹೇಳುತ್ತಿದ್ದರು:
"ಇಲ್ಲೇ ಕಡೂರಲ್ಲಿ. ಒಪ್ಪೊತ್ತಿನ ಪ್ರಯಾಣ... "
ತಾನು ಹೋದಲ್ಲಿಗೆ ತಾಯಿಯನ್ನೂ ಕರೆದೊಯ್ಯಬೇಕೆಂದು ಮಗ ಎಷ್ಟೋ
ಪ್ರಯತ್ನಿಸಿದ್ದ.

"ತಿಂಗಳಿಗೊಂದ್ಸಾರಿ ಬಾಡಿಗೆ ವಸೂಲ್ಮಾಡ್ಕೊಂಡು ಬಂದರಾಯ್ತು," ಎಂದಿದ್ದ.
ರಂಗಮ್ಮ ಒಪ್ಪಿರಲಿಲ್ಲ. ತಮ್ಮ ಆ ವಠಾರವನ್ನು ಬಿಟ್ಟು ಒಂದು ದಿನದ ಮಟ್ಟಿಗೂ
ದೂರಹೋಗಲು ಅವರು ಸಿದ್ಧವಿರಲಿಲ್ಲ.
ಅವರು ಸೂಚಿಸಿದ್ದೊಂದೇ ಪರಿಹಾರ:
"ಆದಷ್ಟು ಬೇಗ್ನೆ ಈ ಊರ್ಗೇ ವರ್ಗ ಮಾಡಿಸ್ಕೊಂಡ್ಬಿಡಪ್ಪ...."
ವಠಾರದ ಮೇಲ್ವಿಚಾರಣೆಯೇನು ಸುಲಭದ ಕೆಲಸವೆ? ಹುಡುಗರಿಗೆ ಏನೂ
ತಿಳಿಯದು. ಏನೂ ತಿಳಿಯದು...
ಒಂಟಿಯಾಗಿಯೇ ಇರುವುದು ರಂಗಮ್ಮನಿಗೆ ಅಭ್ಯಾಸವಾಯಿತು. ಒಮ್ಮೊಮ್ಮೆ
ಒಬ್ಬೊಬ್ಬ ಮಗಳು ಚಿಳ್ಳೆ ಪಿಳ್ಳೆಗಳೊಡನೆ ಅಲ್ಲಿಗೆ ಬರುವುದಿತ್ತು. ಆಗ ರಂಗಮ್ಮ
ವಠಾರದ ಮೇಲ್ವಿಚಾರಣೆಯ ಜತೆಗೆ ಮೊಮ್ಮಕ್ಕಳ ಲಾಲನೆ ಪಾಲನೆಯನ್ನು ಮಾಡುತ್ತ
ಸುಖಿಯಾಗುತ್ತಿದ್ದರು.
...ಈಗ ಭಿನ್ನವಾದ ಈ ಸನ್ನಿವೇಶ.
ಯಾರಾದರೂ ಹೇಳುವುದು ಸಾಧ್ಯವಿತ್ತು:
"ನಿರ್ಗತಿಕ ಬಡಪಾಯಿ ಆತ....ಹೋಗಲಿ ಬಿಡಿ, ಇದ್ದುಕೊಳ್ಳಲಿ."
ಆದರೆ ರಂಗಮ್ಮನಿಗೆ ತಿಳಿಯದೆ? ಹಾಗೆ ಒಮ್ಮೆ ಮೊದಲಾಯಿತೆಂದರೆ ಅದಕ್ಕೆ
ಕೊನೆಯುಂಟೆ? ಯಾರು ನಿರ್ಗತಿಕರಲ್ಲ? ಬಡಪಾಯಿಗಳಲ್ಲ?
ಅದು ಆ ತಿಂಗಳ ಮೂರನೆಯ ವಾರ. ಆಗಲೆ ಮನೆ ಖಾಲಿಯಾದರೆ ಮುಂದಿನ
ತಿಂಗಳ ಮೊದಲನೆ ತಾರೀಖಿನಿಂದಲೇ ಯಾರಾದರೂ ಬರುವುದು ಸಾಧ್ಯವಿತ್ತು, ಅದೂ
ಹೆಚ್ಚು ಬಾಡಿಗೆಗೆ-ಎರಡು ರೂಪಾಯಿಯಾದರೂ ಹೆಚ್ಚು ಬಾಡಿಗೆಗೆ. ಈಗಲೇ ಖಾಲಿ
ಯಾಗದೆ ಹೋದರೆ ಮತ್ತೂ ಒಂದು ತಿಂಗಳು ನಷ್ಟವೇ.
ಮಗನಿಗೆ ಬೆಂಗಳೂರಿಗೇ ವರ್ಗವಾದಮೇಲೆ ಮುಂಭಾಗದ ಮನೆಯ ಕೆಳಭಾಗದ
ನಾಲ್ಕು ಸಂಸಾರಗಳನ್ನೂ ಬಿಡಿಸಿ, ದುರಸ್ತಿ ಪಡಿಸಿ, ತಾವೆಲ್ಲ ಅಲ್ಲಿ ವಾಸ ಮಾಡಬೇಕು;
ಈಗ ತಾನಿರುವ ಮನೆಯನ್ನೂ ಬಾಡಿಗೆಗೆ ಕೊಡಬೇಕು-ಎಂಬುದು ರಂಗಮ್ಮನ ಅಪೇಕ್ಷೆ
ಯಾಗಿತ್ತು. ಮುಂದೆ, ಹಿಂಭಾಗದ ನಾಲ್ಕು ಮನೆಗಳ ಒಂದೊಂದು ಸಾಲನ್ನು ತಮ್ಮ
ಇಬ್ಬರು ಹೆಣ್ಣು ಮಕ್ಕಳಿಗೆ ಬಿಟ್ಟು ಹೋಗಬೇಕು ಎಂದುಕೊಂಡಿದ್ದರು.
ಇಲ್ಲ; ಬಾಡಿಗೆ ಹೋದರೆ ಹೋಗಲಿ ಎಂದು ಅವರು ಉಪೇಕ್ಷೆ ಮಾಡುವುದು
ಸಾಧ್ಯವಿರಲಿಲ್ಲ.
'ನಾನು ನಿರ್ದಯಳೂಂತ ಹೇಳೋ ಧೈರ್ಯ ಯಾರಿಗಿದೆ? ಈಗ ಮೂರು
ತಿಂಗಳ ಬಾಡಿಗೆ ಬಿಟ್ಟಿರೋದು ಸಾಲದೆ? ಶವ ಸಂಸ್ಕಾರಕ್ಕೇಂತ ಐದು ರೂಪಾಯಿ
ಬೇರೆ...'
ಯೋಚಿಸುತ್ತಿದ್ದ ರಂಗಮ್ಮನಿಗೆ ನಾರಾಯಣಿಯ ನೆನಪಾಯಿತು. ಮೊದಲ
ಸಾರೆ ಬಾಡಿಗೆಗೆ ಮನೆ ಕೇಳಲು ಬಂದ ಆಕೆ, ಚೊಚ್ಚಲ ಮಗುವನ್ನೆತ್ತಿಕೊಂಡು ನಗು
ನಗುತ್ತ ಮಾತನಾಡಿದ್ದಳು.
ಆಗ ಕೇಳಿದ್ದರು ರಂಗಮ್ಮ:
"ಮಗು__"
"ಗಂಡು," ಎಂದಿದ್ದಳು ನಾರಾಯಣಿ.
"ನನ್ನದೂ ಮೊದಲನೇದು ಗಂಡೇ."
"ಓ!"
ಆದರೆ, ನಾಲ್ಕು ಮಕ್ಕಳ ತಾಯಿಯಾಗಿ, ಸಾಯುವ ಕಾಲಕ್ಕೆ ಹೇಗಾಗಿ ಹೋಗಿ
ದ್ದಳು ಆ ನಾರಾಯಣಿ!
'ಬ್ರಹ್ಮಲಿಪಿ ಅಳಿಸೋರು ಯಾರು?' ಎಂದು ತಮ್ಮಷ್ಟಕ್ಕೆ ರಂಗಮ್ಮ ಅಂದು
ಕೊಂಡರು.
ಕನಿಕರದ ಅನುತಾಪದ ಒರತೆಗಳನ್ನು ಹತ್ತಿಕ್ಕಿ ರಂಗಮ್ಮ ಕರ್ತವ್ಯದ ಬಗೆಗೆ

ಚಿಂತಿಸಿದರು.
ಕರ್ತವ್ಯ ಸ್ಪಷ್ಟವಾಗಿತ್ತು. ಅದು ಸಾರುತ್ತಿತ್ತು:
'ಮನೆ ಖಾಲಿ ಮಾಡಿಸಬೇಕು: ಬೇಗನೆ ಖಾಲಿ ಮಾಡಿಸಬೇಕು.'
ರಂಗಮ್ಮ ನಿಟ್ಟುಸಿರು ಬಿಟ್ಟು ಒಲೆ ಹಚ್ಚಿದರು.
ಕಕ್ಕಸಿಗೆ ಹೋದಾಗ ಅವರಿಗೆ ಕಾಣಿಸಿತು. ನಾರಾಯಣಿಯ ಗಂಡ ಒಲೆಯ
ಬುಡದಲ್ಲಿ ಕುಳಿತು ಮಕ್ಕಳಿಗೆ ಗಂಜಿ ಬಡಿಸುತ್ತಿದ್ದ. ಹೊರಗಿನಿಂದ ತೂರಿಬರುತ್ತಿದ್ದ
ಬಿಸಿಲನ್ನು ಸಹಿಸಲಾರದೆ ಕಣ್ಣು ಕಿರಿದುಗೊಳಿಸುತ್ತ ಹಣತೆ ಉರಿಯುತ್ತಿತ್ತು.
'ಈಗಲೇ ಹೇಳೋಣವೇ?'
"ಈಗಲೇ ಹೇಳೋಣವೇ?" ಎಂದು ರಂಗಮ್ಮ ತಮ್ಮನ್ನೇ ಪ್ರಶ್ನಿಸಿದರು.
"ಬೇಡ . ಮಧ್ಯಾಹ್ನ ಹೇಳಿದರಾಯ್ತು. ಇಲ್ಲವೆ ಸಂಜೆ ಹೇಳಿದರಾಯ್ತು"
ಎಂದು ತಮಗೆ ತಾವೇ ಉತ್ತರಿಸಿಕೊಂಡರು.
...ಆದರೆ ಮಧ್ಯಾಹ್ನ ಆತ ಮನೆಯಲ್ಲೇ ಇರಲಿಲ್ಲ. ಸಂಜೆಯಾದರೂ ಬರಲಿಲ್ಲ.
ಮಾಡಬೇಕಾದ್ದೇನೆಂಬುದು ಇತ್ಯರ್ಥವಾಗಿದ್ದರೂ ಆ ಕೆಲಸವನ್ನಷ್ಟು ಬೇಗನೆ
ಮುಗಿಸುವುದಾಗಲಿಲ್ಲವಲ್ಲ ಎಂದು ರಂಗಮ್ಮನಿಗೆ ಕಸಿವಿಸಿಯಾಯಿತು. ದುಗುಡ ಹೆಚ್ಚಿತು.
ನಿಷ್ಕಾರಣವಾಗಿ ರೇಗುತ್ತ, ಏನಾದರೊಂದು ನೆಪ ತೆಗೆದು ಯಾರಿಗಾದರೂ ಛೀಮಾರಿ
ಹಾಕುತ್ತ, ವಠಾರದ ಉದ್ದಗಲಕ್ಕೂ ಅವರು ಓಡಾಡಿದರು.
ಕತ್ತಲಾಗುತ್ತ ಬಂದಾಗ ರಂಗಮ್ಮ ಚಿಕ್ಕವರನ್ನು ಆಡಿಸುತ್ತ ನಿಂತಿದ್ದ ನಾರಾ
ಯಣಿಯ ದೊಡ್ಡ ಹುಡುಗನನ್ನು ಕರೆದರು.
"ಎಲ್ಹೋಗಿದಾನೋ ನಿಮ್ಮಪ್ಪ?"
"ಗೊತ್ತಿಲ್ಲ ಅಜ್ಜಿ."
"ಬರ್ತಾನೇನು ರಾತ್ರೆ?"
"ಹೂಂ. ಬರ್ತಾರೆ."
ಆ ಬಳಿಕ ಅಸ್ಪಷ್ಟವಾದ ನಾಲ್ಕು ಮಾತುಗಳನ್ನು ರಂಗಮ್ಮ ಗೊಣಗಿದರು. ಅದೇ
ನೆಂದು ತಿಳಿದುಕೊಳ್ಳುವ ಗೊಡವೆಗೂ ಆತ ಹೋಗಲಿಲ್ಲ.
ಹುಡುಗ ತಾಯಿಯಿಲ್ಲದ ತನ್ನ ಮನೆಯತ್ತ ಹೊರಟ. ಆಗ ರಂಗಮ್ಮ
ಮತ್ತೊಮ್ಮೆ ಆತನ ಹೆಸರು ಹಿಡಿದು ಕರೆದರು.

"ನಿಮ್ಮಪ್ಪ ಬಂದ ತಕ್ಷಣ ನನ್ನನ್ನ ನೋಡ್ಬೇಕೂಂತ ಹೇಳು."
" ಹೂನಜ್ಜಿ."
ತನ್ನ ತಂದೆಯನ್ನು ಯಾಕೆ ಕರೆದಿರಬಹುದೆಂದು ಆ ಹುಡುಗ ಯೋಚಿಸಲಿಲ್ಲ.
ರಂಗಮ್ಮ ತಮ್ಮ ಮನೆಯಲ್ಲಿ 'ದೀಪ ಹಾಕಿ'ದರು. ಕಮಲಮ್ಮ ಬಂದು ನಾರಾಯಣಿಯ
ಮನೆಯಲ್ಲೂ ಗುಂಡಿಯೊತ್ತಿದಳು. ಪಾತ್ರೆಯಲ್ಲಿ ಬೆಳಗ್ಗೆ ಮಾಡಿ ಉಳಿದಿದ್ದ
ಗಂಜಿಯಿತ್ತು.

"ನೀವೆಲ್ಲಾ ಊಟ ಮಾಡಿ ಮಲಕೊಂಡ್ಬಿಡೀಪ್ಪಾ ಪುಟ್ಟೂ. ಎಷ್ಟು ಹೊತ್ತಿಗೆ
ಬರ್ತಾರೋ ಏನೋ ನಿಮ್ಮಪ್ಪ."
"ಹೂಂ."
"ಊಟಕ್ಕಿಡ್ಲೇನು?"
"ಬೇಡಿ ಅತ್ತೆ. ನಾವೇ ಬಡಿಸ್ಕೋತೀವಿ ಅತ್ತೆ."

ಅತ್ತೆ ಕವ:ಲಮ್ಮ! ಆಕೆಗೆ ಹೆಣ್ಣು ಮಗುವಿರಲಿಲ್ಲ...ಯಾವ ಮಗುವೂ ಇರ
ಲಿಲ್ಲ. ಲಂಗ ತೊಡುವ ಪುಟ್ಟ ಮಗಳು ಇದ್ದಿದ್ದರೆ ಆ ಹುಡುಗನನ್ನೇ ಕಮಲಮ್ಮ
ಖಂಡಿತವಾಗಿಯೂ ಅಳಿಯನನ್ನಾಗಿ ಮಾಡಿಕೊಳ್ಳುತ್ತಿದ್ದಳು.
ಕಮಲಮ್ಮ ನಿಟ್ಟುಸಿರುಬಿಟ್ಟು ಗಂಜಿಯ ಪಾತ್ರೆಯತ್ತ ಮತ್ತೊಮ್ಮೆ ನೋಡಿದಳು.
ಅಲ್ಲಿ ಹೆಚ್ಚೇನೂ ಇರಲಿಲ್ಲ
"ಇದರಲ್ಲೇನೂ ಮಿಗಿಸ್ಬೇಡಿ. ನಿಮ್ಮಪ್ಪ ಊಟ ಮಾಡ್ಕೊಂಡೇ ಬರ್ತಾರೆ."
"ಹೂಂ ಅತ್ತೆ."
....ಮಕ್ಕಳು ಊಟ ಮಾಡಿ ಒಂದನ್ನೊಂದು ತಬ್ಬಿಕೊಂಡು ನಿದ್ದೆಹೋದವು.
ಬಲು ಭಾರವಾದ ಹೃದಯವನ್ನು ಹೊತ್ತು ಅತ್ಯಂತ ಹಗುರವಾದ ಕಳ್ಳ ಹೆಜ್ಜೆ
ಗಳನ್ನಿ ಡುತ್ತ ಒಂಭತ್ತು ಘಂಟೆಯ ಸುಮಾರಿಗೆ ನಾರಾಯಣಿಯ ಗಂಡ ಮನೆಗೆ ಬಂದ.
ಇನ್ನು ರಂಗಮ್ಮ ಹೆಚ್ಚು ದಿನ ತಡೆಯಲಾರರೆಂಬ ಭಯ ಆತನಿಗಿದ್ದೇ ಇತ್ತು. ವಠಾರಕ್ಕೆ
ಹಿಂತಿರುಗಿದಾಗಲೆಲ್ಲ ಅಳುಕು ಹೆಚ್ಚುತ್ತಿತ್ತು....ಹಗಲು ಉದ್ಯೋಗಕ್ಕಾಗಿ ಆತ ಅಲೆ
ಯುತ್ತಿದ್ದ. ಆದರೆ ಎಲ್ಲ ಯತ್ನಗಳೂ ಪರಿಚಯದವರಿಂದ ಪುಡಿಕಾಸು ಸಾಲ ಪಡೆ
ಯುವುದರಲ್ಲೇ ಮುಕ್ತಾಯವಾಗುತ್ತಿದ್ದುವು. ಹೇಡಿ ಮನಸ್ಸು ಒಮ್ಮೊಮ್ಮೆ ‌ಎಲ್ಲಿ
ಗಾದರೂ ಓಡಿಹೋಗೆನ್ನುತ್ತಿತ್ತು. ಆದರೆ, ಮಕ್ಕಳ ನೆನಪಾದಗಲೆಲ್ಲ ಒತ್ತರಿಸಿ ಬರು
ತ್ತಿತ್ತು ಅಳು.
ನಿದ್ದೆ ಹೋಗುತ್ತಿದ್ದ ಮಕ್ಕಳನ್ನು ಕಂಡು ಆತನಿಗೆ ತುಸು ಸಮಾಧಾನವೆನಿಸಿತು.
ಗಂಜಿಯ ಪಾತ್ರೆಯನ್ನು ನೋಡಿದ. ಅಲ್ಲೇನೂ ಇರಲಿಲ್ಲ. ಹಸಿವೆಯಾಗಿತ್ತು. ಆತ
ಸಂಜೆ ಒಮ್ಮೆ ಬರಿಯ ಕಾಫಿ ಕುಡಿದಿದ್ದ; ಯಾರೋ ಸ್ನೇಹಿತ ಕೊಟ್ಟಿದ್ದ ಸಿಗರೇಟು
ಸೇದಿದ್ದ_ಅಷ್ಟೆ. ಈಗ ಮನೆಯಲ್ಲಿ ಒಲೆ ಹಚ್ಚಲು ಮನಸ್ಸಾಗಲಿಲ್ಲ. ಅಲ್ಲದೆ ಇರುವ
ಸ್ವಲ್ಪ ಅಕ್ಕಿ ಆದಷ್ಟು ದಿನ ಬರಬೇಕಲ್ಲವೆ?.... ಆತ ಎರಡು ಲೋಟ ನೀರು
ಕುಡಿದ. ದೀಪ ಆರಿಸಿ ಮಲಗಿಕೊಳ್ಳಬೇಕೆಂದು, ಚಾಪೆಯನ್ನೆತ್ತಿ ಮಕ್ಕಳ ಬಳಿಯಲ್ಲೇ
ಸುರುಳಿ ಬಿಡಿಸಿದ.
ಅಷ್ಟರಲ್ಲಿ ರಂಗಮ್ಮ ಬರುತ್ತಿದ್ದ ಸದ್ದಾಯಿತು. ಅವರ ದೃಷ್ಟಿಗೆ ಬೀಳುವುದಕ್ಕೆ
ಮುಂಚೆಯೇ ದೀಪ ಆರಿಸಬೇಕೆಂದು ಆತ ಮುಂದಾದ. ಸಾಧ್ಯವಾಗಲಿಲ್ಲ. ರಂಗಮ್ಮ
ಆಗಲೇ ಬಾಗಿಲು ಸಮೀಪಿಸಿದ್ದರು. ಅಲ್ಲಿಗೇ ಬಂದಿದ್ದರು ಅವರು.
ನಾರಾಯಣಿಯ ಗಂಡ ವಠಾರದೊಳಕ್ಕೆ ಬಂದುದನ್ನು ರಂಗಮ್ಮ ಗಮನಿಸಿದ್ದರು.
ಹುಡುಗ ಹೇಳಿದೊಡನೆ ತಮ್ಮನ್ನು ಕಾಣಲು ಆತ ಬರಬಹುದು ಎಂದು ಕಾದು ಕುಳಿ
ತರು. ಬರಲಿಲ್ಲ. ಹುಡುಗ ಹೇಳಲು ಮರೆತನೇನೋ ಎಂದುಕೊಂಡರು. ಹೇಳಿದರೂ
ಬರದೇ ಇರಬಹುದು-ಎಂಬ ಶಂಕೆ ತಲೆದೋರಿ, ಬಲವಾಯಿತು. ಆತ ತಪ್ಪಿಸಿಕೊಳ್ಳಲು
ಯತ್ನಿಸುತ್ತಿದ್ದಾನೆಂದು ರಂಗಮ್ಮ ಸಿಟ್ಟಾದರು. ತಾವೇ ಹೋಗಿ ನೋಡುವುದು
ಮೇಲೆಂದು ಎದ್ದರು.
ಬಾಗಿಲ ಬಳಿ ನಿಂತು, ಮಕ್ಕಳು ಆಗಲೆ ಮಲಗಿದ್ದುವೆಂಬುದನ್ನು ಮನಗಂಡಾಗ,
ತಮ್ಮ ಸಂದೇಶ ಆತನಿಗೆ ತಲುಪಿಯೇ ಇಲ್ಲವೆಂಬುದು ಸ್ಪಷ್ಟವಾದಗ, ರಂಗಮ್ಮನ ಸಿಟ್ಟು
ಅರ್ಧ ಇಳಿಯಿತು. ಆ ಕ್ಷಣವೇ ಕನಿಕರದ ಹೊನಲಿನಲ್ಲಿ ಕರ್ತವ್ಯ ತೇಲಿ ಹೋದೀತೆಂದು
ಹೆದರಿ, ಅವರು ಬಿಗಿಯಾದರು.
ಆದರೂ ಒರಟಾಗಿ ವರ್ತಿಸುವುದು ಅವರಿಂದಾಗಲಿಲ್ಲ. ಗಲಾಟೆ ಇಲ್ಲದೆ ಒಮ್ಮೆ
ಮನೆ ಖಾಲಿಯಾದರೆ ಸಾಕಪ್ಪ- ಎಂದುಕೊಂಡರು. ಮಾತುಗಳು ನಯವಾಗಿಯೇ
ಬಂದುವು.
"ಊಟ ಆಯ್ತೆ?"
"ಆಯ್ತು ರಂಗಮ್ನೋರೆ."
ಇಲ್ಲಿ ನಿಜದ ಬದಲು ಸುಳ್ಳು ಸಹ್ಯವಾಗಿತ್ತು.
ಆತನ ಉತ್ತರ ನಿಜವೋ ಅಲ್ಲವೋ ಎಂದು ಪರೀಕ್ಷಿಸುವ ಆಕಾಂಕ್ಷೆಯೇನೂ
ರಂಗಮ್ಮನಿಗಿರಲಿಲ್ಲ.
"ಸ್ವಲ್ಪ ಮನೇ ಕಡೆ ಬಾಪ್ಪಾ."
"ಬಂದೆ, ನಡೀರಿ."
ಆತ ಹಾಗೆಯೇ ಹೊರಡಲು ಸಿದ್ಧನಾದ.
"ದೀಪ ಆರಿಸ್ಬಿಡು" ಎಂದು ಹೇಳಿ ರಂಗಮ್ಮ ತಮ್ಮ ಮನೆಯತ್ತ ಹೆಜ್ಜೆ ಇಟ್ಟರು.
ನಾರಾಯಣಿಯ ಗಂಡ ದೀಪ ಆರಿಸಿ, ಮೌನವಾಗಿ ಅವರನ್ನು ಹಿಂಬಾಲಿಸಿದ
....ಗೋಡೆಗೊರಗಿ ನೆಲದಮೇಲೆ ಕುಳಿತ ನಾರಾಯಣಿಯ ಗಂಡನನ್ನು ರಂಗಮ್ಮ
ದಿಟ್ಟಿಸಿದರು.
"ಕೆಲಸ ಸಿಗಲಿಲ್ಲ?..."
"ಹುಡುಕ್ತಾ ಇದೀನಿ ರಂಗಮ್ನೋರೆ."
"ಇದೇನೂ ಮೊದಲ್ನೇ ಸಲ ಅಲ್ವಲ್ಲಾ? ಹಿಂದೆ ಕೆಲಸ ಸಿಕ್ದಾಗ್ಲೆಲ್ಲ ಕಳ
ಕೊಂಡ್ಬಿಟ್ಟೆ."
"ಏನು ಮಾಡ್ಲಿ ಹೇಳಿ? ನನ್ನ ಹಣೇ ಬರಹ."
ರಂಗಮ್ಮ ಮಾತ್ರ ಹಾಗೆಂದು ಒಪ್ಪಲು ಸಿದ್ಧರಿರಲಿಲ್ಲ. ಈ ಗಂಡಸಿನ ಯೋಗ್ಯ
ತೆಯೇ ಅಷ್ಟು ಎಂಬುದು ಅವರಿಗೆ ಖಚಿತವಾಗಿತ್ತು. ಅವರ ಗಂಟಲಿನಿಂದ ಅಸ್ಪಷ್ಟವಾದ
ಸ್ವರಗಳು ಹೊರಬಿದ್ದುವು:
"ಮೂರು ತಿಂಗಳ ಬಾಡಿಗೆ ನಿಂತು ಹೋಗಿದೆ."
"ಕೆಲಸ ಸಿಕ್ಕಿದ ತಕ್ಷಣ ಕೊಟ್ಬಿಡ್ತೀನಿ ರಂಗಮ್ನೋರೆ. "
ಹಾಗೆ ಹೇಳಿದ್ದ ಮಹಾನುಭಾವರನ್ನು ಹಿಂದೆಯೂ ಕಂಡಿದ್ದರು ರಂಗಮ್ಮ. ಆ
ಮಾತಿಗೆ ಬೆಲೆ ಎಷ್ಟೆಂಬುದೂ ಅವರಿಗೆ ಗೊತ್ತಿತ್ತು.
" ಹುಡುಗರ ಹಾಗೆ ಆಡ್ತೀಯಪ್ಪಾ ನೀನು," ಎಂದು ಸ್ವರವನ್ನು ಸ್ವಲ್ಪ ತೀಕ್ಷ್ಣ
ಗೊಳಿಸಿ ರಂಗಮ್ಮ ಹೇಳಿದರು.
ನಾರಾಯಣಿಯ ಗಂಡ ತಲೆ ತಗ್ಗಿಸಿದ. ಈತನಿನ್ನು ಅಳುವುದಕ್ಕೆ ಆರಂಭಿಸ
ಬಹುದೆಂದು ರಂಗಮ್ಮನಿಗೆ ತೋರಿತು. ಮೌನವಾಗಿ ಅವರು ಒಂದು ಕ್ಷಣ ಕಳೆದರು.
ಸದ್ಯಃ ಆತ ಅಳಲಿಲ್ಲ. ಬೇರೆ ಬಿಡಾರ ಇನ್ನೆಲ್ಲಿ ಹುಡುಕಬೇಕು ಎಂಬ ಯೋಚನೆಯಲ್ಲಿ
ಅವನು ಮುಳುಗಿದ್ದ.
ಗಂಭೀರ ಧ್ವನಿಯಲ್ಲಿ ರಂಗಮ್ಮನೆಂದರು:
"ನನಗೆ ಗೊತ್ತಿದೆಯಪ್ಪಾ. ಈ ಮೂರು ತಿಂಗಳ ಬಾಡಿಗೆ ಐವತ್ತೊಂದು
ರೂಪಾಯಿ ಕೊಡೋದು ನಿನ್ನಿಂದಾಗೋಲ್ಲ. ಮುಂದೆಯೂ ಪ್ರತಿ ತಿಂಗಳು ಹದಿನೇಳು
ರೂಪಾಯಿ ಕೊಡೋದೂ ನಿನ್ನಿಂದಾಗೋಲ್ಲ."
ಪ್ರತಿಕ್ರಿಯೆ ಏನು ಎಂದು ಆತನ ಮುಖಭಾವದಿಂದ ತಿಳಿಯಲು ರಂಗಮ್ಮ
ಪ್ರಯತ್ನಿಸಿದರು. ಆದರೆ ಆತನ ತಲೆಗೂದಲಿನ ನೆರಳು ಮುಖದ ಮೇಲೆ ಬಿದ್ದು,
ಏನೂ ಕಾಣಿಸಲಿಲ್ಲ.
"ನೋಡಪ್ಪಾ, ನಾನು ತೀರ್ಮಾನ ಮಾಡ್ಬಿಟ್ಟಿದ್ದೀನಿ."
ಈಗಲೂ ಆತ ತಲೆ ಎತ್ತಲಿಲ್ಲ. ಆ ತೀರ್ಮಾನ ಏನೆಂದು ತಿಳಿಯುವ ಕುತೂ
ಹಲವೂ ಅವನಿಗಿದ್ದಂತೆ ತೋರಲಿಲ್ಲ.
"ಬಾಕಿಯಾಗಿರೋ ಐವತ್ತೊಂದು ರೂಪಾಯಿ ಅನುಕೂಲವಾದಾಗ ಕೊಡು.
ನಾಳೆಯ ದಿವಸ ಮನೆ ಖಾಲಿ ಮಾಡು."
ಈಗ ಆತ ತಲೆ ಎತ್ತಿದ. ಅಸಹಾಯಕತೆ ಮಂಜಿನ ಪರದೆಯಾಗಿ ಕಣ್ಣ ಬೊಂಬೆ
ಗಳನ್ನು ಮುಚ್ಚಿಕೊಂಡಿತ್ತು. ಆ ಮನುಷ್ಯನಿಗೆ ತುಟಿಗಳೇ ಇಲ್ಲವೆನೋ ಎಂಬಂತೆ
ಮುಖ ಮುದುಡಿತ್ತು. ಆತ ಮೂಕನಾಗಿಯೇ ಇದ್ದ.
ಇದೊಳ್ಳೇ ಪ್ರಾರಬ್ಧ ಎಂದುಕೊಂಡರು ರಂಗಮ್ಮ.
ಆದರೆ ಅಷ್ಟರಲ್ಲೇ, ಅಸಹನೀಯವಾಗಿದ್ದ ಮನವನ್ನು ಮುರಿದು ಗಂಟಲು
ಸರಿಪಡಿಸುತ್ತ ಆತ ಮಾತನಾಡಿದ:
"ಇನ್ನೊಂದು ತೊಂಗಳಾದರೂ ಪುರಸೊತ್ತು ಕೊಡಿ ರಂಗಮ್ನೋರೆ."
ಅದೀಗ ನಿಷ್ಠುರವಾಗಿ ಮಾತನಾಡಬೇಕಾದ ಸಂದರ್ಭ.
" ಇಲ್ಲ " ಎಂದರು ರಂಗಮ್ಮ. ಸ್ವಲ್ಪ ತಡೆದು ಅವರು ಮುಂದುವರಿದರು:
"ಸಾಧ್ಯವೇ ಇಲ್ಲ, ಮನೆ ಖಾಲಿ ಮಾಡ್ಲೇಬೇಕು."4
ರೂಪು ತಳೆಯುತ್ತಿದ್ದ ಮಾತು ಆತನ ಗಂಟಲಲ್ಲೇ ಇಂಗಿ ಹೋಯಿತು.
ಸ್ವರವೇರಿಸಿ ರಂಗಮ್ಮ ನುಡಿದರು:
"ನೋಡಪ್ಪಾ, ಇನ್ನೂ ಒಂದು ದಿವಸ ಜಾಸ್ತಿ ಅವಕಾಶ ಕೊಡ್ತೀನಿ. ಶನಿವಾರ
ಸಾಯಂಕಾಲ ಹೊತ್ತಿಗೆ ಮನೆ ಖಾಲಿ ಮಾಡೇ ತೀರ್ಬೇಕು. ಭಾನುವಾರ ಮನೆ
ನೋಡೋಕೆ ಬರ್ತಾರೆ."
ಯಾರಾದರೂ ಮನೆ ನೋಡಲು ಬರಬಹುದು ಎಂಬ ನಿರೀಕ್ಷೆಯನ್ನು 'ಬರ್ತಾರೆ'
ಎಂದು ರಂಗಮ್ಮ ಮಾರ್ಪಾಡಿಸಿದ್ದರು. ಹಾಗೆ ಹೇಳುವುದು ಅಗತ್ಯವಾಗಿತ್ತು.
ಆ ನಿರಾಶೆಯಲ್ಲೂ ಆತ ಏನೋ ಹೇಳಲೆತ್ನಿಸಿದ:
"ಒಂದು ತಿಂಗಳು__"
"ಇಲ್ಲವಪ್ಪಾ, ಇಲ್ಲ. ನನ್ನನ್ನ ರೇಗಿಸ್ಬೇಡ. ನಾಲ್ಕು ಜನರ ಕೈಲಿ ಕೆಟ್ಟೋಳು
ಅನ್ನಿಸ್ಬೇಡ."
"ಇಲ್ಲ ರಂಗಮ್ನೋರೆ. ಮುಖ್ಯ ನನ್ನ ಹಣೇಲಿ ಹೀಗೆ ಬರೆದಿತ್ತು."
ಆತ ಕಣ್ಣುಗಳನ್ನು ಹಿಂಡಿ ಒಂದೊಂದು ಹನಿ ಕಂಬನಿ ಉದುರಿಸಲು ಯತ್ನಿಸಿದ.
ಆದರೆ ಅವು ಬತ್ತಿ ಹೋಗಿದ್ದುವು.
ಹೆಣ್ಣಿಗಿಂತಲೂ ಕಡೆಯಾಗಿ ವರ್ತಿಸುತ್ತಿದ್ದ ಆತನನ್ನು ಕಂಡು ರಂಗಮ್ಮನ ಸೈರಣೆ
ತಪ್ಪಿತು. ಚೆನ್ನಾಗಿ ಬಯ್ಯಬೇಕೆನಿಸಿತು. ವಠಾರದಲ್ಲೇ ಮುಂದೆಯೂ ಆತ ಇರುವ
ಪ್ರಮೇಯವಿದ್ದರೆ ಹೇಳುತ್ತಲೂ ಇದ್ದರೇನೋ ಆದರೆ 'ಹಾಳಾಗಿ ಹೋಗಲಿ'
ಎಂದು ಈಗ ಅವರು ಸುಮ್ಮನಾದರು.
ನಾರಾಯಣಿಯ ಗಂಡನೆದ್ದು, ಚಾಪೆಯ ಮೇಲೆ ನಿದ್ದೆ ಬಾರದೆ ಹೊರಳಾಡುವ ಸುಖಕ್ಕಾಗಿ ಮಕ್ಕಳೆಡೆಗೆ ನಡೆದ.
ಮರುದಿನವೂ ಆತ ಮಕ್ಕಳಿಗೆ ಗಂಜಿ ಬೇಯಿಸಿಕೊಟ್ಟು ಹೊರ ಹೋದ.
ರಂಗಮ್ಮ ವಠಾರಕ್ಕೆಲ್ಲಾ ತಿಳಿಯುವಂತೆ ಡಂಗುರ ಸಾರಿದರು:
"ನಾರಾಯಣಿಯ ಗಂಡ ಮನೆ ಖಾಲಿ ಮಾಡ್ತಾನೆ."
"ಎಲ್ಲಿಗೆ ಹೋಗ್ತಾರಂತೆ? ಕೆಲಸ ಸಿಕ್ತೇನು?"
"ಏನೋಪ್ಪ. ಅಂತೂ ಶನಿವಾರ ಸಾಯಂಕಾಲದೊಳಗೆ ಮನೆ ಖಾಲಿ
ಮಾಡ್ತಾನೆ."
ನಾರಾಯಣಿ ಬಿಟ್ಟುಹೋಗಿದ್ದ ಮಕ್ಕಳಲ್ಲಿ ಕಿರಿಯದು ಎದೆ ಹಾಲಿಲ್ಲದೆ ಬಿರು
ಗಣ್ಣು ಬಿಡುತ್ತಿತ್ತು. ಅದನ್ನು ಗಟ್ಟಿಯಾಗಿ ತಬ್ಬಿಕೊಂಡು ಕಮಲಮ್ಮ ಬಾಡಿದ
ಮುಖದಿಂದ ಆ ಸುದ್ದಿ ಕೇಳಿದಳು.
ಕೇಳಿದವರು ನಂಬಲಿ ನಂಬದಿರಲಿ, ರಂಗಮ್ಮ ಹೇಳುವ ವೈಖರಿ ಅಂಥದು.
ಒಂದು ಸಂಸಾರವನ್ನು ವಠಾರದಿಂದ ರಂಗಮ್ಮ ಹೊರಹಾಕಿದಳು ಎಂಬ ಮಾತು
ಪ್ರಸಾರವಾಗುವ ಇಷ್ಟ ಅವರಿಗಿರಲಿಲ್ಲ.

ಕಡಮೆ ಬಾಡಿಗೆಗೆ ಮನೆ ಹುಡುಕಿ ಹುಡುಕಿ ಸಿಗದೆ ಇದ್ದ ಹಸ್ತಸಾಮುದ್ರಿಕದ
ಪದ್ಮನಾಭನ ಹೆಂಡತಿಯೆಂದಳು:
"ಕಮ್ಮಿ ಬಾಡಿಗೆಗೆ ಅವರಿಗೆ ಬೇರೆ ಮನೆ ಸಿಗ್ತೋ ಏನೋ."

ರಂಗಮ್ಮ ಒಣ ನಗೆ ನಕ್ಕರು.ಮಾತನಾಡಲಿಲ್ಲ."ಮೂರು ತಿಂಗಳ ಬಾಡಿಗೆ
ಬಿಟ್ಟುಕೊಟ್ಟಿದ್ದೀನಿ" ಎಂದು ವಠಾರಕ್ಕೆಲ್ಲ ಸಾರಿ ಹೇಳುವ ಅಪೇಕ್ಷೆ ಅವರಿಗಾಯಿತು.
ಆದರೆ ಅದನ್ನು ಅವರು ಅದುಮಿ ಹಿಡಿದರು. ಹಾಗೆ ಇತರರೆದುರು ಜಾಹೀರು ಮಾಡು
ವುದರಿಂದ, ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚೆಂಬುದು ಅವರಿಗೆ ಸ್ಪಷ್ಟವಾಗದಿರಲಿಲ್ಲ.
ಆದರೆ ತಿಳಿದವರಿಗೆ ತಿಳಿದೇ ಇತ್ತು.
ಮೀನಾಕ್ಷಮ್ಮನ ಮಗ ತನ್ನ ತಾಯಿಯ ಎದುರಿನಲ್ಲೇ ನಾರಾಯಣಿಯ ಮಗ
ನನ್ನು ಕೇಳಿದ:
"ನೀವೆಲ್ಲ ಹೊರಟ್ಹೋಗ್ತೀರೇನೋ ಪುಟ್ಟೂ?"
"ಏನೋ. ಅಪ್ಪ ಹೇಳೇ ಇಲ್ಲ."
"ನಮ್ಮ ಸ್ಕೂಲಿಗೆ ಇನ್ನು ಬರಲ್ವೇನು ಹಾಗಾದ್ರೆ?"
ಶಾಲೆಯ ಪ್ರಸ್ತಾಪದಿಂದ ಪುಟ್ಟನ ಕಣ್ಣುಗಳು ಹನಿಗೂಡಿದುವು.
ಮಗನಿಗೆಂದು ತಿಂಡಿ ಮಾಡುತ್ತಿದ್ದ ಮೀನಾಕ್ಷಮ್ಮ ಹೆಚ್ಚಾಗಿಯೇ ತಯಾರಿಸಿ
ನಾರಾಯಣಿಯ ಮಕ್ಕಳಿಗೂ ಕೊಟ್ಟಳು.
ರಾತ್ರೆ ತಂದೆ ಬರುವವರೆಗೂ ಪುಟ್ಟ ನಿದ್ದೆ ಹೋಗಲಿಲ್ಲ. ತಂದೆಯನ್ನು ಕಾಣು
ತ್ತಲೇ ಆತ ಕೇಳಿದ:
"ಅಪ್ಪ, ನಾವೆಲ್ಲಿಗೆ ಹೋಗ್ತೀವಪ್ಪ?"
"ಸುಡುಗಾಡಿಗೆ!"
ಸೋತು ಬಂದಿದ್ದ ತಂದೆಯ ಧ್ವನಿ ಕರ್ಕಶವಾಗಿತ್ತು. ಪುಟ್ಟ ಮತ್ತೊಂದು
ಪ್ರಶ್ನೆ ಕೇಳದೆ, ಮಾತನಾಡದೆ, ಉಳಿದ ಮೂವರ ಜತೆಯಲ್ಲಿ ತಾನೂ ಮಲಗಿ ನಿದ್ದೆ
ಹೋದ.
ಆ ತಂದೆಗೆ ರಾತ್ರೆ ಸರಿಯಾಗಿ ನಿದ್ದೆ ಬರಲಿಲ್ಲ. ಆ ರಾತ್ರೆ ಕಳೆದು ಬರುವ
ದಿನವೇ ಶನಿವಾರ. "...ಶನಿವಾರ ಸಾಯಂಕಾಲದ ಹೊತ್ತಗೆ ಮನೆ ಖಾಲಿ ಮಾಡೇ
ತೀರ್ಬೇಕು..." ನಾರಾಯಣಿ ಸತ್ತಳೆಂದು ಸಾರುತ್ತಿದ್ದ ಹಣತೆ ಆರಿ ಹೋಗಿತ್ತಲ್ಲ?
ಅದನ್ನು ಮತ್ತೆ ಬೆಳಗುವ ಗೋಜಿಗೆ ಆತ ಹೋಗಲಿಲ್ಲ. ಆ ಯಾವ ಕಟ್ಟು ಕಟ್ಟಳೆಗೂ
ಆಗ ಅರ್ಥವಿದ್ದಂತೆ ಅವನಿಗೆ ತೋರಲಿಲ್ಲ....ಬಗೆಹರಿಯದ ಯೋಚನೆಗಳ ಸಹವಾಸ
ದಲ್ಲಿ ಆ ಇರುಳು ನಿಧಾನವಾಗಿ ಕರಗಿತು.
ಕಿರ್ರ್ ಎಂದು ರಾಮಚಂದ್ರಯ್ಯನ ಮನೆಬಾಗಿಲ ಸದ್ದು. ಅನಂತರ ಅದರೆದುರು
ಮನೆ. ಅಷ್ಟರಲ್ಲಿ ನಾರಾಯಣನ ಗಡಿಯಾರದ ಅಲಾರಂ...
ನಾರಾಯಣಿಯ ಗಂಡ ಬೇಗನೆದ್ದ. ದೀಪ ಹಚ್ಚಲಿಲ್ಲ. ಕತ್ತಲೆಯಲ್ಲೆ ಪಾತ್ರೆ
ಗಳನ್ನು ತಡವಿ ನೋಡಿ ಮುಖದ ಮೇಲಿಷ್ಟು ನೀರು ಹನಿಸಿದ. ಮಗನನ್ನು ಮೈ
ಮುಟ್ಟಿ ಎಚ್ಚರಿಸಿದ.
"ಲೋ...ಪುಟ್ಟೂ...ಪುಟ್ಟೂ...ಲೋ..."
ಗಡಬಡಿಸಿ ಎದ್ದು ಹುಡುಗ ಹೆದರಿಕೊಂಡೇ ಕೇಳಿದ:
"ಏನಾಯ್ತಪ್ಪಾ, ಅಪ್ಪಾ...."
"ಏನೂ ಇಲ್ಲ ಕಣೋ. ನಾನು ಒಂದಿಷ್ಟು ಹೊರಗೆ ಹೋಗ್ಬಿಟ್ಟು ಬರ್ತೀನಿ...
ಇವತ್ತು ನೀನೇ ಗಂಜಿ ಬೇಯಿಸ್ತೀಯಾ?"
"ಹೂಂ. ಹೂಂ...ಎಷ್ಟೊತ್ತಿಗೆ ಬರ್ತಿಯಪ್ಪಾ?"
"ಮಧ್ಯಾಹ್ನವೇ ಬಂದ್ಬಿಡ್ತೀನಿ ಕಣೋ....ಇನ್ನು ಮಲಕ್ಕೋ."
"ಹೂಂ..."
ಯಾರಿಗೂ ತಿಳಿಯದಂತೆ ಹೊರಹೋಗಬೇಕೆಂದು ಆತ ಬಯಸಿದ್ದರೂ ಕಮ
ಲಮ್ಮ ತನ್ನ ಮನೆಯ ಬಾಗಿಲಲ್ಲೆ ನಿಂತಿದ್ದಳು. ತಂದೆ ಮಗನ ಗುಸುಗುಸು ಮಾತನ್ನು
ಕೇಳಿದ ಮೇಲೆ ಆಕೆ ಸುಮ್ಮನಿರುವುದು ಸಾಧ್ಯವಿರಲಿಲ್ಲ.
"ಏನೂ ಬೇಗ್ನೆ ಹೊರಟ್ಬಿಟ್ಟಿದೀರಲ್ಲಾ?"
"ಹೂಂ ಕಣ್ರೀ....ಬೇರೆ ಬಿಡಾರ ಗೊತ್ಮಾಡ್ಬೇಕು."
_ಗದ್ಗದಿತ ಕಂಠ.
"ಆಗಲಿ ಹೋಗ್ಬಿಟ್ಟು ಬನ್ನಿ."
"ಮಕ್ಕಳ್ನ ಒಂದಿಷ್ಟು_"
" ನೋಡ್ಕೋತೀನಿ. ಹೋಗಿ. "
ಬೆಳಗಾಯಿತು. ರಂಗಮ್ಮ ನಡೆಗೋಲಿನ ಸದ್ದು ಮಾಡುತ್ತ ಒಂದು ಸುತ್ತು
ಬಂದು ಹೋದರು.
ಪುಟ್ಟ ಒಲೆ ಹಚ್ಚಲಿಲ್ಲ. ಕಮಲಮ್ಮನೇ ಬೇಯಿಸಿ ಹಾಕಿದಳು. ಕಾಮಾಕ್ಷಿ
ಎಳೆಯ ಮಗುವನ್ನೆತ್ತಿಕೊಂಡು ಆಡಿಸಿದಳು.
ಈ ದಿನ ಮನೆ ಖಾಲಿಯಾಗುವುದೋ ಇಲ್ಲವೋ ಎಂಬ ಸಂದೇಹ ರಂಗಮ್ಮ
ನನ್ನು ಬಾಧಿಸುತ್ತಲೇ ಇತ್ತು. ಅವರು ದಿನವೆಲ್ಲ ಸಿಡಿದುಕೊಂಡೇ ಮಾತನಾಡಿದರು.
ಗಟ್ಟಿಯಾಗಿಯೇ ಗೊಣಗಿದರು.
ನಾಲ್ಕು ಘಂಟೆಗೆ ನಾರಾಯಣಿಯ ಗಂಡ ಬಂದ. ಎರಡು ಗೋಣಿ ಚೀಲಗಳಲ್ಲಿ
ಮನೆಯ ಎಲ್ಲಾ ಸಾಮಾನುಗಳನ್ನು ತುರುಕಿದ. ಆಗಲೆ ಮೂಲೆ ಸೇರಿದ್ದ ಹಣತೆ
ಯನ್ನೂ ಬಿಡಲಿಲ್ಲ.
ಅವರನ್ನು ಕರೆದೊಯ್ಯಲು, ಕುಂಟುತ್ತಿದ್ದ ಬಡಕಲು ಕುದುರೆಯ ಹರಕು
ಜಟಕಾ ಗಾಡಿಯನ್ನು ‌ತಂದುದಾಯಿತು.
ಮೀನಾಕ್ಷಮ್ಮನ ಮಗ ಕೊನೆಯ ಘಳಿಗೆವರೆಗೂ ಪುಟ್ಟನನ್ನು ಬಿಡಲಿಲ್ಲ.
ಗೆಳೆತನದ ನೆನಪಿಗೆಂದು ನೀಲಿ ಕೆಂಪು ಬಣ್ಣದ ತನ್ನ ಒಂದು ಪೆನ್ಸಿಲನ್ನು ಆತ ಪುಟ್ಟನಿಗೆ
ಕೊಟ್ಟ.
"ಮರೀಬೇಡ ಪುಟ್ಟೂ."
"ಇಲ್ಲ. ಮರೆಯೋಲ್ಲ."
"ಪ್ರತಿ ಭಾನುವಾರವೂ ಆಟ ಆಡೋಕೆ ಬರ್ಬೇಕು."
" ಹೂಂ. ಬರ್ತೀನಿ."
ಆದರೆ ಹೊಸ ಬಿಡಾರ ಎಲ್ಲಿ ಎಷ್ಟು ದೂರ ಎಂಬುದು ಇಬ್ಬರಿಗೂ ಗೊತ್ತಿರಲಿಲ್ಲ.
ತೆರವಾದ ಮನೆಯ ಒಳಹೊಕ್ಕು ದೀಪದ ಬಲ್ಬನ್ನು ನೋಡಿ ಬಂದು, ರಂಗಮ್ಮ
ನಾರಾಯಣಿಯ ಗಂಡನನ್ನು ಕೇಳಿದರು:
"ಮನೆ ಎಲ್ಮಾಡಿದೀಯಪ್ಪ?"
"ಚಿಕ್ಕಮಾವಳ್ಳೀಲಿ ರಂಗಮ್ನೋರೆ."
"ಎಷ್ಟು ಬಾಡಿಗೆ?"
"ಸದ್ಯ ಒಬ್ಬ ಸ್ನೇಹಿತನ ಮನೇಲಿ ಹೋಗಿರ್ತೀನಿ."
"ಓ...ಹಾಗೋ..."
ಸಂಜೆ ಬೇಗನೆ ಆ ಪ್ರದೇಶ ಬಿಡಬೇಕೆಂದು ಆತ ಬಯಸಿದ್ದ. ವಠಾರಕ್ಕೆ ಹಿಂತಿ
ರುಗುವ ಗಂಡಸರಿಗೆಲ್ಲ ಮುಖ ತೋರಿಸುವ ಇಚ್ಛೆ ಆತನಿಗಿರಲಿಲ್ಲ.
ಮನೆಯಲ್ಲೇ ಇದ್ದ ಗುಂಡಣ್ಣ ಸಾಮಾನಿನ ಚೀಲಗಳನ್ನು ಹೊರ ಅಂಗಳಕ್ಕೆ
ತಂದು ಸಾಬಿಯ ಕೈಗೊಪ್ಪಿಸಲು ನೆರವಾದ.
ವಠಾರದ ನಿವಾಸಿಗಳಲ್ಲಿ ಹೆಚ್ಚಿನ ಹೆಂಗಳೆಯರು ಅಂಗಳಕ್ಕೆ ಬಂದು ನಿಂತರು.
ಮನೆಯೊಳಗಿದ್ದ ಕವಿ ಜಯರಾಮು ಮಹಡಿಯ ಮೇಲಿನ ಕಿಟಕಿಯಿಂದ ಕೆಳಗಿಣಿಕಿ
ನೋಡಿದ.
ಏಳು ವರ್ಷಗಳ ಹಿಂದೆ ಸೊಗಸಾದೊಂದು ಜಟಕಾ ಗಾಡಿ ಆ ವಠಾರಕ್ಕೆ
ಬಂದಿತ್ತು. ಯೌವನ ಸೌಂದರ್ಯ ಆರೋಗ್ಯಗಳ ಪ್ರತಿಮೂರ್ತಿಯಾಗಿ ಚೊಚ್ಚಲ ಮಗು
ಪುಟ್ಟನೊಡನೆ ನಾರಾಯಣಿ ಆ ಗಾಡಿಯಿಂದ ಕೆಳಕ್ಕಿಳಿದಿದ್ದಳು. ಆ ಬಳಿಕ ಆಕೆಯ
ಗಂಡ. ಪುಟ್ಟನ ತಂದೆ ಇಷ್ಟು ವರ್ಷಗಳ ಕಾಲವೂ ವಠಾರದ ಪಾಲಿಗೆ 'ನಾರಾಯಣಿಯ
ಗಂಡ'ನಾಗಿಯೇ ಉಳಿದಿದ್ದ.
ಕಮಲಮ್ಮ ಸೆರಗಿನಿಂದ ಕಣ್ಣೊತ್ತಿಕೊಳ್ಳುತ್ತ, ಕಾಮಾಕ್ಷಿಯ ಕಂಕುಳಿನಿಂದ
ನಾರಾಯಣಿಯ ಹಸುಗೂಸನ್ನು ಪಡೆದು ಪುಟ್ಟನಿಗೆ ಕೊಟ್ಟಳು. ಜೋಲು ಮೋರೆ
ಹಾಕಿಕೊಂಡಿದ್ದ ಪುಟ್ಟ ಆ ಮಗುವನ್ನು ತನ್ನ ಕಂಕುಳಿಗೇರಿಸಿದ.
"ಪೋಲಿ ಅಲೀಬೇಡ ಪುಟ್ಟೂ. ನಿಮ್ಮಪ್ಪನಿಗೆ ಕೆಲಸ ಸಿಕ್ಕಿದ ತಕ್ಷಣ ಸ್ಕೂಲಿಗೆ
ಹೋಗು...."
___ಎಂದು ರಂಗಮ್ಮ ಆ ಹುಡುಗನನ್ನು ಉದ್ದೇಶಿಸಿ ಹಿತದ ಮಾತನ್ನಾಡಿದರು.
'ಹೂಂ' ಎನ್ನಲು ಯತ್ನಿಸಿದ ಪುಟ್ಟು. ಆದರೆ ಆ ಸ್ವರ ರಂಗಮ್ಮನಿಗೆ
ಕೇಳಿಸಲಿಲ್ಲ.
ಹಾದಿಹೋಕರೂ ಒಂದು ಕ್ಷಣ ನಿಂತು ಬಿಡಾರ ಬದಲಾಯಿಸುತ್ತಿದ್ದ ಸಂಸಾರ
ವನ್ನು ನೋಡಿದರು. ಅಕ್ಕಪಕ್ಕದಿಂದಲೂ ಎದುರುಗಡೆಯಿಂದಲೂ ನಾಲ್ಕಾರು
ಹೆಂಗಸರು ಹೊರ ಬಂದು ನಿಂತರು. ಅಲ್ಲೇ ಬೀದಿಯ ಮೂಲೆಯಲ್ಲಿ ಅಂತಸ್ತಿನ
ಮನೆಯಿತ್ತು. ಅಂತಸ್ತಿನ ಮನೆಯವರ ದೊಡ್ಡ ಮಗಳು ಪಾಠ ಪ್ರವಚನಗಳಿಲ್ಲದ ಆ
ದಿನ ಕಾಲೇಜಿಗೆ ಹೋಗಿರಲಿಲ್ಲ. 'ಕಥೆಪುಸ್ತಕ' ಹಿಡಿದು 'ಬಾಲ್ಕನಿ'ಯಲ್ಲಿ ಕುಳಿತಿದ್ದ
ಆಕೆ ಎದ್ದು ನಿಂತು, ಮೊದಲು ಜಯರಾಮುವನ್ನೂ ಬಳಿಕ ಕೆಳಗಿನ ದೃಶ್ಯವನ್ನೂ
ನೋಡಿದಳು.
"ಬರ್ತೀವಿ ರಂಗಮ್ನೋರೆ," ಎಂದ ನಾರಾಯಣಿಯ ಗಂಡ.
"ಆಗಲಿ, ಹೋಗ್ಬನ್ನೀಪ್ಪಾ."
"ಆಮೇಲೆ ಬಂದು ನೋಡ್ತೀನಿ...."
"ಆಗಲಿ. ಆಗಲಿ."
ಎರಡು ಸಾರೆ ಬಾರುಕೋಲಿನ ರುಚಿ ತಾಗಿ ಕುಪ್ಪಳಿಸಿದ ಮೇಲೆ ಗಾಡಿಯನ್ನು
ಕುದುರೆ ಮುಂದಕ್ಕೆಳೆಯಿತು. ಗುಂಪು ಕೂಡಿದ ಬೀದಿ ಹುಡುಗರು ಕುದುರೆ ಕುಪ್ಪಳಿಸಿ
ದಾಗ 'ಹೊಹ್ಹೋ' ಎಂದು ನಕ್ಕರು.
ಜಟಕಾ ಸಾಗಿತು. ವಠಾರದವರೆಲ್ಲ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು.
'ಹೋಗ್ರೋ' ಎಂದು ಗುಂಡಣ್ಣ ಕೈ ಬೀಸಿದೊಡನೆ ಬೀದಿಯ ಹುಡುಗರು ಚೆದರಿ
ಹೋದರು.
ಕಮಲಮ್ಮನೊಬ್ಬಳೇ,ಬಹಳ ಹೊತ್ತು, ಗಾಡಿ ಹೋದ ದಿಕ್ಕನ್ನು ನೋಡುತ್ತ
ನಿಂತಳು.
ರಂಗಮ್ಮ ಒಳಗಿನಿಂದ ರಟ್ಟಿನ ತುಂಡೊಂದನ್ನು ತಂದು, ಬೀದಿಗೆ ಕಾಣಿಸುವ
ಹಾಗೆ, ಹೊರಗೋಡೆಯ ಮೇಲಿದ್ದ ಮೊಳೆಗೆ ತಗಲ ಹಾಕಿದರು. ಆ ರಟ್ಟಿನ ಮೇಲೆ
ಸುಣ್ಣದ ಕಡ್ಡಿಯಲ್ಲಿ ಬರೆದಿತ್ತು:
ಮನೆ ಬಾಡಿಗೆಗೆ ಇದೆ
ಕೆಳ ಭಾಗದ ಮೊದಲ ಮನೆಯ ಪೋಲೀಸನ ಹುಡುಗ ಅಕ್ಷರಕ್ಕೆ ಅಕ್ಷರ
ಜೋಡಿಸಿ ಅದನ್ನೋದಿದ. ಕೈತಟ್ಟಿ ಕುಣಿಯುತ್ತ ಅದನ್ನೇ ಆತ ಕಂಠಪಾಠ ಮಾಡಿದ:
" ಮನೆ ಬಾಡಿಗೆಗೆ ಇದೆ....
...ಮನೆ ಬಾಡಿಗೆಗೆ ಇದೆ."

ಬಾಡಿಗೆಗೆ ಇದ್ದ ಮನೆಯನ್ನು ನೋಡಲು ಇಬ್ಬರು ಮೂವರು ಬಂದರು. ವರ್ಷ
ವರ್ಷಗಳಿಂದ ನುಡಿದು ನುರಿತಿದ್ದ ಸ್ವರದಲ್ಲಿ ರಂಗಮ್ಮ ಹೇಳಿದರು: "ಕೊಳಾಯಿ ಇದೆ,
ಲೈಟಿದೆ, ಬಚ್ಚಲಿದೆ, ಕಕ್ಕಸಿದೆ." ಸಮಾಧಾನದ ಛಾಯೆಯನ್ನು ಆ ಮುಖಗಳ ಮೇಲೆ
ಕಾಣದೆ ಇದ್ದಾಗ ರಂಗಮ್ಮ ಕೊನೆಯ ಯತ್ನ ಮಾಡಿದರು: "ಬಾಡಿಗೆ ಇಪ್ಪತ್ತೇ
ರೂಪಾಯಿ. ಬೇಕಾದರೆ ನಿಮಗಾಗಿ ಒಂದು ರೂಪಾಯಿ ಕಮ್ಮಿ ಮಾಡ್ತೀನಿ."
-"ನಾಳೆ ಬಂದು ಹೇಳ್ತೀನಿ."
-"ಮನೆಯವರನ್ನ ವಿಚಾರಿಸಿ ತಿಳಿಸ್ತೀನಿ."
-"ಹತ್ತೊಂಭತ್ತು ರೂಪಾಯಿಯೇ ಅಖೈರು ಹಾಗಾದರೆ?"
-"ಅಂತೂ ನಾನು ಬಂದು ಹೇಳೋವರೆಗೂ ದಯವಿಟ್ಟು ಯಾರಿಗೂ
ಕೊಡ್ಬೇಡಿ."
ಆದರೆ ಪರಿಣಾಮ ಒಂದೇ. ಒಮ್ಮೆ ನೋಡಿ ಹೋದವರು ಮತ್ತೆ ಬರಲಿಲ್ಲ.
ರಂಗಮ್ಮ ತಮ್ಮೊಳಗೇ ಗೊಣಗಿದರು. ನಾರಾಯಣಿಯ ಗಂಡನನ್ನು
ಹನ್ನೊಂದು ದಿನ ಕಳೆಯುವುದಕ್ಕೆ ಮುಂಚೆ ಕಳಿಸಬಾರದಿತ್ತೆಂಬ ಅಂಶ ಬೇರೆ ಅವರ
ಮನಸ್ಸನ್ನು ಆಗಾಗ್ಗೆ ಕುಟುಕುತ್ತಿತ್ತು. ಬಿಡಾರ ಖಾಲಿಯಾಗಿಯೇ ಉಳಿದಷ್ಟು ದಿನವೂ
ಹೆಚ್ಚುತ್ತಿತ್ತು ಆ ಯೋಚನೆ.
ಮನೆಯನ್ನು ಹತ್ತೊಂಭತ್ತು ರೂಪಾಯಿ ಬಾಡಿಗೆಗೆ ಕೊಡಬೇಕೆಂಬುದು ಅವರ
ನಿರ್ಧಾರವಾಗಿತ್ತು. ಹಾಗೆ ಬಾಡಿಗೆ ಹೆಚ್ಚಿಸುವುದು ಈ ಕೆಲವು ವರ್ಷಗಳಿಂದ ಅವರು
ಅನುಸರಿಸುತ್ತ ಬಂದಿದ್ದ ಪದ್ಧತಿ. ಮೊದಲಿನಲ್ಲಿ ಆ ಮನೆಗಳಿಗೆಲ್ಲ ಅವರಿಗೆ ದೊರೆಯು
ತ್ತಿದ್ದುದು ಐದೈದು ರೂಪಾಯಿ ಬಾಡಿಗೆ. ಆಗ ವಿದ್ಯುದ್ದೀಪವಿರಲಿಲ್ಲ. ಅದು ಬಂದ
ಮೇಲೆ ಬಾಡಿಗೆ ಏಳು ರೂಪಾಯಿಗೆ ಏರಿತು. ಯುದ್ಧದ ಸಮಯದಲ್ಲಿ ಬೇರೆ ಬೇರೆ
ಕಾರಣಗಳನ್ನು ಹೇಳಿ ಬಾಡಿಗೆ ಹನ್ನೆರಡೂವರೆ ಎಂದು ರಂಗಮ್ಮ ಗೊತ್ತು ಮಾಡಿದರು.
ಕೆಲವರು ಅಷ್ಟನ್ನು ತೆರಲಾಗದೆ ಹೊರಟು ಹೋಗಬೇಕಾಯಿತು. ಆಗ ಹೊಸತಾಗಿ
ಬಂದವರಿಂದ ಪಡೆದುದು ಹದಿನಾಲ್ಕು ರೂಪಾಯಿ. ಆನಂತರ ಹದಿನೈದು_ಹೀಗೆ.
ವಠಾರಕ್ಕೆ ಅತ್ಯಂತ ಹಳಬಾರದ ಸುಬ್ಬುಕೃಷ್ಣಯ್ಯನ ಸಂಸಾರ ಈಗಲೂ ಕೊಡುತ್ತಿ
ದ್ದುದು ಹನ್ನೆರಡೂವರೆ ರೂಪಾಯಿ ಬಾಡಿಗೆಯೇ. ಆದರೆ ಹೊಸಬರಾದ ನಾರಾಯಣ-
ಕಾಮಾಕ್ಷಿಯರ ಮನೆಬಾಡಿಗೆ ಹತ್ತೊಂಭತ್ತು. ಹಾಗೆ ತರತಮವೆಣಿಸುವುದರಲ್ಲಿ ತಪ್ಪಿಲ್ಲ
ವೆಂಬುದು ರಂಗಮ್ಮನ ದೃಡ ಅಭಿಪ್ರಾಯ. ಅವರ ದೃಷ್ಟಿಯಲ್ಲಿ ಮನೆಗೆ ತಕ್ಕಂತೆ
ಬಾಡಿಗೆಯಲ್ಲ. ಬಾಡಿಗೆ ಅವರವರ ಅನುಕೂಲತೆಗೆ ತಕ್ಕಂತೆ, ಸಂಪಾದನೆಗೆ ಅನುಗುಣ
ವಾಗಿ. ಇಂಥವರು ತಮ್ಮ ವಠಾರಕ್ಕೆ ಬಿಡಾರ ಬರುವರೆಂಬುದು ಖಚಿತವಾದಾಗ ಅವರ

ಪೂರ್ವೇತಿಹಾಸವನ್ನೂ ಈಗಿನ ಇರುವಿಕೆಯನ್ನೂ ಕೂಲಂಕಷವಾಗಿ ರಂಗಮ್ಮ ಕೇಳಿ
32
ಸೇತುವೆ

ತಿಳಿದುಕೊಳ್ಳದೆ ಇರುತ್ತಿರಲಿಲ್ಲ.
ರಂಗಮ್ಮನ ವಠಾರದಲ್ಲಿ ಯಾವ ಮನೆಯೂ ಹೆಚ್ಚು ದಿನ ಖಾಲಿಯಾಗಿ
ಬಿದ್ದುದೇ ಇಲ್ಲ. ಈ ಸಲ ಮಾತ್ರ ಕೊನೆಯ ಮನೆಗೆ ಯಾರೂ ಬರದೆ ಇದ್ದುದನ್ನು
ಕಂಡು ಅವರಿಗೆ ಕಸಿವಿಸಿಯಾಯಿತು.
ನಾರಾಯಣಿಯ ಸಂಸಾರದ ವಿಷಯ ವಠಾರದಲ್ಲಿ ಈಗ ಯಾರೂ ಮಾತನಾಡು
ತ್ತಿರಲಿಲ್ಲ. ಮೀನಾಕ್ಷಮ್ಮನ ಮಗನೇನೋ ಒಂದು ದಿವಸ ಪುಟ್ಟನಿಗಾಗಿ ಕಾದು ನೋಡಿದ.
"ಚಿಕ್ಕಮಾವಳ್ಳಿ ದೂರ ಕಣೋ. ಅಲ್ಲಿಂದ ಪುಟ್ಟ ಬರೋದಿಲ್ಲ," ಎಂದು
ಮೀನಾಕ್ಷಮ್ಮ ತಿಳಿಯ ಹೇಳಿದ ಮೇಲೆ, ಆ ಹುಡುಗ ಪುಟ್ಟನನ್ನು ಮರೆತು ವಠಾರದ
ಉಳಿದವರೆಡೆಯಿಂದ ತನ್ನ ಸ್ನೇಹಿತರನ್ನು ಆಯ್ದುಕೊಂಡ.
ತಮ್ಮೊಡನೆ ವಾಸ ಮಾಡಲು ಹೊಸತಾಗಿ ಬರುವ ಸಂಸಾರ ಯಾವುದೆಂದು ತಿಳಿ
ಯುವ ಕುತೂಹಲ ಮಾತ್ರ ವಠಾರದ ಎಲ್ಲರಿಗೂ ಇತ್ತು.
ದಿನ ಕಳೆಯುತಿತ್ತು. ಕೊನೆಯ ಮನೆಗೆ ಇನ್ನೂ ಮುಚ್ಚಿದ ಬಾಗಿಲೇ.
'ಅದೆಂಥ ಕೆಟ್ಟ ಘಳಿಗೇಲಿ ಬಿಟ್ಟಳೋ ಮಹಾರಾಯಿತಿ' ಎಂದು ತಮ್ಮೊಳಗೇ
ರಂಗಮ್ಮ ವಟಗುಟ್ಟದಿರಲಿಲ್ಲ.
ತಿಂಗಳ ಹದಿಮೂರನೆಯ ತಾರೀಖಿನ ದಿನ ಮನೆ ನೋಡಲು ಮತ್ತೆ ಒಬ್ಬಾತ
ಬಂದ.
ವಠಾರದೊಳಕ್ಕೆ ಅಪರಿಚಿತ ಕಾಲಿಟ್ಟುದನ್ನು ಮೊದಲು ನೋಡಿದ ಅವಿವಾಹಿತೆ
ಅಹಲ್ಯ ರಂಗಮ್ಮನಿಗೆ ವರದಿ ಮಾಡಿದಳು.
"ರಂಗಮ್ನೋರೆ, ಯಾರೋ ಬಂದಿದ್ದಾರೆ."
ಯಾರಾದರೂ ಬರುವುದು ಮನೆ ನೋಡುವುದಕ್ಕೆ ಎಂಬ ವಿಷಯದಲ್ಲಿ ರಂಗಮ್ಮ
ನಿಗೆ ಸಂದೇಹವಿರಲಿಲ್ಲ. ಅವರು ಬೆನ್ನು ಬಾಗಿ ನಡೆದು ಬಂದು, ಸೊಂಟದ ಮೇಲೆ ಕೈ
ಇರಿಸಿ ದೇಹವನ್ನೆತ್ತರಿಸಿ ಬಂದವನನ್ನು ನೋಡಿದರು.
ಎಲ್ಲ ಬಾಗಿಲುಗಳೆಡೆಯಿಂದಲೂ ಇಣಕಿ ನೋಡುತ್ತಿದ್ದ ಹೆಂಗಸರತ್ತ, ತನ್ನನ್ನೇ
ಹಿಂಬಾಲಿಸಿ ಬಂದ ಆರೇಳು ಸಣ್ಣ ಸಣ್ಣ ಹುಡುಗರತ್ತ, ದೃಷ್ಟಿ ಬೀರುತ್ತ ಆತ ಹೇಳಿದ:
"ಯಾವುದೋ ಮನೆ ಖಾಲಿ ಇದೆಯಂತೆ..."
"ಬನ್ನಿ," ಎಂದು ಸ್ವಾಗತಿಸಿ ರಂಗಮ್ಮ ನಡೆಗೋಲನ್ನೂರಿಕೊಂಡು ಓಣಿ
ಯುದ್ದಕ್ಕೂ ಮುಂದೆ ನಡೆದರು. ಆತ ಹಿಂಬಾಲಿಸಿದ..ಕಚ್ಚಿ ಪಂಚೆ: ಹಳೆಯದಾಗಿ
ಮಾಸಿದ್ದ ರೇಶಿಮೆಯ ಜುಬ್ಬ: ಎಣ್ಣೆ ಹಾಕಿ ಹಿಂದಕ್ಕೆ ಬಾಚಿದ್ದ, ಸ್ವಲ್ಪ ನೀಳವಾಗಿಯೇ
ಇದ್ದ ನಯವಾದ ಕ್ರಾಪು: ತೆಳ್ಳ್ಳಗೆ-ಎತ್ತರ:ಕೋಲು ಮುಖ...ವೀಳ್ಯ ಜಗದಿದ್ದ ತುಟಿ
ಗಳು ಕೆಂಪಗಿದ್ದವು.
ಆಹಲ್ಯಾ, ಕಾಮಾಕ್ಷಿಯ ಮನೆ ಬಾಗಿಲಿಗೆ ಜಿಗಿದು ಹೇಳಿದಳು"
"ನೋಡಿ ಬೇಕಾದರೆ, ಇವರು ಖಂಡಿತ ಒಪ್ಪೋದಿಲ್ಲ."
ಹೆಣ್ಣನ್ನು ನೋಡಲು ಗಂಡು ಬಂದ ಹಾಗೆ!

ರಂಗಮ್ಮನ ವಠಾರ
33

ರಂಗಮ್ಮ ಬಂದವನೊಡನೆ ಕೊನೆಯ ಮನೆಯ ಒಳಹೊಕ್ಕಿದ್ದನ್ನು ಕಂಡು,
ಅಹಲ್ಯಾ ಹೇಳಿದಳು:
“ಈಗ ರಂಗಮ್ಮ ಏನು ಹೇಳ್ತಾರೆ ಗೊತ್ತೇನು?"
"ಗೊತ್ತು, ಗೊತ್ತು."
"ಕೊಳಾಯಿ ಇದೆ, ಲೈಟಿದೆ, ಬಚ್ಚಲಿದೆ, ಕಕ್ಕಸಿದೆ..."
ಹೇಳುತ್ತ ಹೇಳುತ್ತ ಅಹಲ್ಯಾ ನಕ್ಕಳು, ಕಾಮಾಕ್ಷಿಗೂ ನಗು ತಡೆಯಲಾಗಲಿಲ್ಲ.
ಇವರ ಸಂಭಾಷಣೆ ಕೇಳಿ ಪಕ್ಕದ ಮನೆಯೊಳಗಿದ್ದ ಕಮಲಮ್ಮನಿಗೂ ನಗು ಬರದಿರಲಿಲ್ಲ.
ಸರಿಯಾಗಿಯೇ ಹೇಳಿದ್ದಳು ಅಹಲ್ಯಾ.ರಂಗಮ್ಮ ಎತ್ತಿಕೊಳ್ಳುತ್ತ ಆ
ಮಾತನ್ನೇ ಆಡಿದರು.
ಆದರೆ ಬಂದವನು ಸ್ವಲ್ಪ ವಿಚಿತ್ರವಾಗಿದ್ದ.
"ಕೊಳಾಯಿ ಆಗ್ಲೇ ನೋಡ್ದೆ. ಬರುತ್ಲೆ ಎದುರುಗಡೇನೇ ಇದೆ, ಅಲ್ವೆ?"
ಬಂದವನ ಆ ಮಾತಿಗೆ ಏನು ಉತ್ತರ ಕೊಡಬೇಕೆಂಬುದು ರಂಗಮ್ಮನಿಗೆ
ತೋಚದೆ ಹೋಯಿತು. ಆದರು ಆವರು ಸುಧಾರಿಸಿಕೊಂಡರು.
"ಹೌದು ಅದೇ. ಪ್ರತಿ ಮನೆಗೂ ಮೂರು ಮೂರು ಬಿಂದಿಗೆ ನೀರು, ಜಾಸ್ತಿ
ಬೇಕಾದರೆ ಮೂರು ಮೂರು ಬಿಂದಿಗೆಗೆ--"
ಬಂದವನು ನಡುವೆ ಬಾಯಿಹಾಕಿದ:
"ಅಯ್ಯೋ ಅದು ಪರವಾಗಿಲ್ಲಾಂದ್ರೆ. ಏನೋ ಇಷ್ಟು ಚಿಲ್ಲರೆ ದುಡು. ಅಷ್ಟೇ
ತಾನೇ?"
ರಂಗಮ್ಮ ಒಂದು ಕ್ಷಣ ತೆಪ್ಪಗಾಗಿ ಹೂಂಗುಟ್ಟಿದರು.
ಆತ ಛಾವಣಿಯನ್ನು ದಿಟ್ಟಿಸುತ್ತ ವಿದ್ಯುತ್ ಗುಂಡಿಯನ್ನು ಒತ್ತಿ ನೋಡಿದ.
"ಮೇನ್ ಸ್ವಿಚ್ಚು ಆಫ್ ಮಾಡಿದೀರೇನೋ?"
"ಹೂಂ. ಚಿಕ್ಕ ಹುಡುಗರು. ಅಪಾಯ ಅಂತ."
"ಸರಿ, ಸರಿ, ನ್ಯಾಯವೇ."
ಆತನ ಮುಖದ ಮೇಲೆ ಯಾವ ಭಾವವಿದೆಯೆಂದು ತಿಳಿಯಲು ರಂಗಮ್ಮ
ದಿಟ್ಟಿಸಿ ನೋಡಿದರು. ನಿಶ್ಚಲವಾಗಿತ್ತು ಮುಖಮುದ್ರೆ, 'ಆಸಾಮಿ ಜೋರಾಗಿ
ದಾನೆ' ಎನಿಸಿತು ರಂಗಮ್ಮನಿಗೆ. ಯಾಕೋ ಅವರಿಗೆ ಅಧೈರ್ಯವಾಯಿತು.
ಮನೆಯಿಂದ ಹೊರಕ್ಕೆ ಕಾಲಿಡುತ್ತ ಆತ ಹೇಳಿದ:
"ಚಪ್ಪಲಿ ಹೊರಗೇ ಬಿಟ್ಟು ಬಂದೆ. ಪರವಾಗಿಲ್ಲ ತಾನೆ?"
"ನಮ್ಮ ವಠಾರದಲ್ಲಿ ನಾಯಿ ಇಲ್ಲ," ಎಂದು ಹೇಳಿ ರಂಗಮ್ಮ ಸುಮ್ಮನಾದರು.
ಆತ, ಒಣಿಯಲ್ಲಿ ತುಂಬಿದ್ದ ಹುಡುಗರ ತಂಡವನ್ನು ಮತ್ತೊಮ್ಮೆ ನೋಡಿ,
ಕೇಳಿದ:
"ಬಚ್ಚಲು ಮನೆ ಎಲ್ಲಿದೆ?"
ಅಲ್ಲೆ ಪಕ್ಕದಲ್ಲೆ ಹಿತ್ತಿಲ ಗೋಡೆಗೆ ಅಂಟಿಕೊಂಡಿದ್ದ ಮುರುಕು ಕೊಠಡಿಯನ್ನು
ರಂಗಮ್ಮ ತೋರಿಸಿದರು. ಮಗನ ಮದುವೆಯ ಬಳಿಕ ಸಾಲುಮನೆಗಳನ್ನು ಕಟ್ಟಿಸಿ
ದಾಗ ಮೊದಲೇನೋ ಬಚ್ಚಲುಮನೆಯಲ್ಲಿ ಹಂಡೆ ಹುಗಿಸಿದ್ದರು. ಆದರೆ ಆಮೇಲೆ
ದಿನನಿತ್ಯವೂ ನಡೆಯತ್ತಿದ್ದ ವಿವಾದಗಳನ್ನು ಬಗೆಹರಿಸಲಾಗದೆ, ಹಂಡೆಯನ್ನು
ಅಗೆದು, ತೆಗೆದು ಒಳಕ್ಕೆ ಒಯ್ದಿದ್ದರು.
ಬಚ್ಚಲು ಮನೆಯ ಆ ಸ್ಥಿತಿಗೆ ವಿವರಣೆ ಎಂಬಂತೆ ರಂಗಮ್ಮ ಹೇಳಿದರು:
"ಎಲ್ಲರ ಅನುಕೂಲಕ್ಕಾಗಿ ಬಚ್ಚಲು ಮನೇನ ಹೀಗೇ ಬಿಟ್ಟಿದ್ದೇವೆ. ಯಾರು
ಬೇಕಾದರೂ ಉಪಯೋಗಿಸ್ಬಹುದು."
"ಅವರವರ ಮನೇಲಿ ನೀರು ಕಾಯಿಸಿ ಹೊತ್ಕೊಂಡು ಬರ್ಬೇಕು ಅಲ್ವೆ?"
"ಹೌದು. ಬೇಕಾದರೆ ಒಳಗೆ ಅಡುಗೆ ಮನೇಲಿ ಸ್ನಾನ ಮಾಡೋಕೂ
ಏರ್ಪಾಟಿದೆ. ಎಷ್ಟೋ ಜನ ಹಾಗೇ ಮಾಡ್ತಾರೆ.
"ನಿಜ, ನಿಜ. ಅದೇ ಅನುಕೂಲ."
ಬಚ್ಚಲು ಮನೆಯ ಎದುರಿಗೆ ತಿರುಗಿ ಆತ ಹೇಳಿದ:
"ಇದು ಕಕ್ಕಸೂಂತ ಕಾಣುತ್ತೆ."
"ಹೌದು. ಬೊಂಬಾಯಿ ಕಕ್ಕಸು. ಸಿಮೆಂಟು ಹಾಕಿದೆ."
ಆತನಿಗೆ ಆಶ್ಚರ್ಯವಾದಂತೆಯೂ ತೋರಲಿಲ್ಲ. ನಗಲೂ ಇಲ್ಲ ಆತ. ರಂಗಮ್ಮ
ನನ್ನೇ ನೋಡಿ ಮುಖ್ಯ ಪ್ರಶ್ನೆ ಕೇಳಿದ:
"ಬಾಡಿಗೆ ಎಷ್ಟು?"
"ನಡೀರಿ. ಒಳಗೆ ಹೋಗೋಣ."
ಪುನಃ ರಂಗಮ್ಮನೇ ಮುಂದಾದರು. ಹಗಲಲ್ಲೂ ಕತ್ತಲು ಕವಿದಿರುತ್ತಿದ್ದ
ಮನೆ. ಬಾಗಿಲ ಹೊರಗ ಕುಳಿತು ಓಣಿಯ ಬೆಳಕನ್ನು ಆತ ದಿಟ್ಟಿಸಿದ. ಹೆಂಗಸರೂ
ಹುಡುಗರೂ ಅತ್ತಿತ್ತ ಹಾದು ಹೋಗುತ್ತಿದ್ದರು. ತನ್ನನ್ನು ನೋಡುವುದಕೋಸ್ಕರ
ಅವರು ಹಾಗೆ ಮಾಡುತ್ತಿದ್ದರೆಂದು ಬಂದವನಿಗೆ ತಿಳಿಯದೆ ಇರಲಿಲ್ಲ.
ರಂಗಮ್ಮ ಗೋಡೆಗೊರಗಿ ಕುಳಿತು, ಹೇಳಿದರು:
"ಬಾಡಿಗೆ ಇಪ್ಪತ್ತು ರೂಪಾಯಿ."
"ಹೆಚ್ಚಾಯ್ತು ಅಲ್ವೆ?"
ರಂಗಮ್ಮ ಸುಮ್ಮನಿದ್ದರು. ಅವರು ಕೇಳಬೇಕಾಗಿದ್ದ ಬೇರೆ ಕೆಲವು ಪ್ರಶ್ನೆಗಳು
ಉಳಿದಿದ್ದುವು.
"ನೀವು ಯಾವ ಜನ?"
"ಬ್ರಾಹ್ಮಣ. ಯಾಕೆ, ಸಂಶಯ ಬಂತೆ?"
"ಹಾಗಲ್ಲ. ಬ್ರಾಹ್ಮಣರಲ್ದೋರು ಯಾರೂ ಮನೆ ವಿಚಾರಿಸ್ಕೊಂಡು ನಮ್ಮ
ವಠಾರಕ್ಕೆ ಬರೋದೇ ಇಲ್ಲ. ಬೇರೆ ಜನಕ್ಕೆ ನಾವು ಮನೆ ಕೊಡೋದೂ ಇಲ್ಲ." ಅದು ಪೂರ್ತಿ ನಿಜವಾಗಿರಲಿಲ್ಲ. ಎಷ್ಟೋ ವೇಳೆ ಬ್ರಾಹ್ಮಣೇತರ ಹುಡುಗರಿಗೆ
ಮೇಲಿನ ಕೊಠಡಿಯನ್ನು ಅವರು ಕೊಟ್ಟುದಿತ್ತು. ಆದರೆ, ಆ ಹುಡುಗರು ಅಲ್ಲಿ
ಅಡುಗೆ ಮಾಡಬಾರದೆಂಬ ಶರೆತವಿತ್ತು.
"ನಿಮ್ಮ ಹೆಸರು?"
"ಶಂಕರನಾರಾಯಣಯ್ಯ ಅಂತ. ನಾವು ಸ್ಮಾರ್ತರು."
"ಅದೇನೂ ಪರವಾಗಿಲ್ಲ. ನಮ್ಮ ವಠಾರದಲ್ಲಿ ಎಲ್ಲಾ ಥರದೋರೂ ಇದಾರೆ.

ಒಟ್ಟಿನಲ್ಲಿ ಬ್ರಾಹ್ಮಣರಾದರಾಯ್ತು."
"ಏನೂ ತೊಂದರೆ ಇಲ್ಲ. ನಾಲ್ಕು ಜನರ ಜತೇಲಿ ಹೊಂದಿಕೊಂಡು
ಹೋಗ್ತೇವೆ."
"ಸಂತೋಷ. ನಿಮಗೆ ಮದುವೆಯಾಗಿದೆ ತಾನೆ?"
ಆ ಪ್ರಶ್ನೆ ಕೇಳಿ ಆತನಿಗೆ ನಗು ಬಂತು. ಬಾಯಿ ಕಣ್ಣುಗಳನ್ನು ತೆರೆದು ಆತ
ಹಲ್ಲು ಕಿರಿದ.
"ಮದುವೆಯಾಗಿದೇಂತ್ಲೆ ಈ ತಾಪತ್ರಯ. ಇಲ್ದಿದ್ರೆ ಮನೆ ಹುಡುಕ್ಕೊಂಡು
ಯಾಕ್ಬರ್ತಿದ್ದೆ?"
ಆ ರಸಿಕತನದ ಉತ್ತರ ರಂಗಮ್ಮನಿಗೆ ಇಷ್ಟವಾಯಿತು. ಅವರೂ ಬಾಯ
ಗಲಿಸಿ, ಇನ್ನೂ ಉಳಿದಿದ್ದ ಕೆಲವು ಹಲ್ಲುಗಳನ್ನು ತೋರಿಸುತ್ತ, ಸದ್ದಿಲ್ಲದೆ ನಕ್ಕರು.
ಮರುಕ್ಷಣವೆ ಮಾಮೂಲಿನ ಉಪಚಾರದ ಮಾತುಗಳು ಹೊರಬಿದ್ದುವು.
"ಹಾಗೆ ಕೇಳ್ದೇಂತ ತಪ್ಪು ತಿಳ್ಕೋಬೇಡಿಪ್ಪಾ. ಬ್ರಹ್ಮಚಾರಿಗಳಿಗೆ ನಾವು ಮನೆ
ಕೊಡೋದಿಲ್ಲ."
ಬಂದವನಿಗಂತೂ, ಬ್ರಹ್ಮಚಾರಿಯಾಗಿದ್ದಾಗ ಮನೆ ಸುಲಭವಾಗಿ ಸಿಗದೆ ಪಟ್ಟಿದ್ದ
ಕಷ್ಟ ನೆನಪಿಗೆ ಬಂತು.
ಬ್ರಹ್ಮಚಾರಿಗಳಿಗೆ ರಂಗಮ್ಮನ ವಠಾರದಲ್ಲಿ ಆಸ್ಪದವಿಲ್ಲವೆಂಬುದೂ ಪೂರ್ತಿ ಸರಿ
ಯಾಗಿರಲಿಲ್ಲ. ವಿಮಾ ಸಂಸ್ಥೆಯ ಚಂದ್ರಶೇಖರಯ್ಯ ಹಿಂದೆ ಮನೆ ಕೇಳಲು ಬಂದಿ
ದ್ದಾಗ, ತನಗೆ ಮದುವೆಯಾಗಿದೆ ಎಂದೇ ಹೇಳಿದ್ದ. ಆದರೆ ವಾಸವಾಗಿರಲು ಬಂದಾಗ
ಇದ್ದುದು ಒಬ್ಬನೇ. ರಂಗಮ್ಮ ಅವನನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಮ್ಮೆ
" ಊರಲ್ಲಿದಾಳೆ" ಎಂದಿದ್ದ. ಮತ್ತೊಮ್ಮೆ "ತವರ್ಮನೇಲಿ." ರಂಗಮ್ಮ ಮತ್ತೂ ಗಲಾಟೆ
ಮಾಡಿದಾಗ ಅವನು ರೇಗಿ ಹೇಳಿದ: "ನಿಮಗೇನಮ್ಮ ಬಂದಿರೋ ಕಷ್ಟ? ಈ ವಠಾರ
ದಲ್ಲಿ ನನ್ನಷ್ಟು ತೆಪ್ಪಗೆ ಇರೋ ಇನ್ನೊಬ್ಬ ಮನುಷ್ಯನ್ನ ತೋರ್ಸಿ. ನಾನಿಲ್ಲಿರೋದು
ವಾರಕ್ಕೆರಡು ದಿನ. ಅಷ್ಟಕ್ಕೆ...." ರಂಗಮ್ಮ ಸುಮ್ಮನಾಗಿದ್ದರು. ಆತ ಸಮಯಕ್ಕೆ
ಸರಿಯಾಗಿ ಬಾಡಿಗೆ ಕೊಡುತ್ತದ್ದ. ವಿದ್ಯಾವಂತ. ಟೀಕ್ ಟಾಕ್ ಉಡುಪು ಧರಿಸಿ
ಅವನು ಹೋಗಿ ಬರುತ್ತಿದ್ದಾಗಲೆಲ್ಲ ರಂಗಮ್ಮನಿಗೆ ತಮ್ಮ ವಠಾರದ ಬಗೆಗೆ ಹೆಮ್ಮೆ
ಎನಿಸುತ್ತಿತ್ತು.

ಆದರೆ ಮತ್ತೊಮ್ಮೆ ಅಂಥದೇ ಪ್ರಯೋಗ ನಡೆಸಲು ಅವರು ಸಿದ್ದರಿರಲಿಲ್ಲ
ಮುಂದೇನು ಪ್ರಶ್ನೆ ಬರುವುದೋ ಎಂದು ಕಾದು ಕುಳಿತಿದ್ದ ಶಂಕರ ನಾರಾಯಣಯ್ಯ
ನನ್ನು ನೋಡುತ್ತ ರಂಗಮ್ಮ ಕೇಳಿದರು:
"ಎಷ್ಟು ಮಕ್ಕಳು ?"
"ಸದ್ಯಕ್ಕೆ ಒಂದೇನು, ಹೆಣ್ಣು, ಎರಡು ವರ್ಷದ್ದು,"
"ನನಗೂ ಇಬ್ಬರು, ಹೆಣ್ಣು ಮಕ್ಕಳು ದೊಡ್ಡವರೂಂತಿಟ್ಕೊಳ್ಳಿ"
"ಹಾಗೇನು ಸಂತೋಷ."
"ನಿಮ್ಮ ತಾಯಿನೂ ಇದಾರೋ."
"ಯಾರೂ ಇಲ್ಲ ನಾವು ಮೂರೇ ಜನ."
ರಂಗಮ್ಮನಿಗೆ ಸಮಾಧಾನವೆಸಿಸಿತು. ಸಾಮಾನ್ಯವಾಗಿ, ಮನೆ ತುಂಬ ಮಕ್ಕಳಿ
ರಬೇಕು ಎಂದು ಹೇಳುವವರೇ ರಂಗಮ್ಮ. ಆದರೆ ವಠಾರ ತುಂಬ ಮಕ್ಕಳು, ಮಕ್ಕಳ
ತಾಯಂದಿರೇ ಇರಬೇಕೆಂಬ ವಿಷಯದಲ್ಲಿ ಅವರಿಗೆ ಬಿನ್ನಾಭಿಪ್ರಾಯವಿತ್ತು.
ತಮ್ಮ ವಠಾರದಲ್ಲಿ ವಾಸವಾಗಲು ಬೇಕಾದ ಅರ್ಹತೆ ಬಹಳ ಮಟ್ಟಿಗೆ ಆ
ಮನುಷ್ಯನಿಗೆ ಇದ್ದಂತೆ ರಂಗಮ್ಮನಿಗೆ ತೋರಿತು ಆದರೂ ಅವರ ಪ್ರಶ್ನಾವಳಿ ಕೊನೆ
ಮುಟ್ಟಿರಲಿಲ್ಲ.
"ಎಲ್ಲಿ ಕೆಲಸ?"
ಹಿಂದಿನ ಕಾಲದಲ್ಲಿ ಬ್ರಾಹ್ಮಣನನ್ನು ಯಾರೂ ಹಾಗೆ ಕೇಳುತ್ತಿದ್ದರು? ಆದರೆ
ಈಗ ಆ ಪ್ರಶ್ನೆಯನ್ನು ಸ್ಪಷ್ಟವಾಗಿ ಕೇಳುವುದಿಲ್ಲ ಅಗತ್ಯವಿತ್ತು ಗಾದೆಯೇ ಇರಲಿಲ್ಲವೇ?
ಉದ್ಯೋಗಂ...
"ನಾನು ಪೇಂಟರ್."
ರಂಗಮ್ಮನಿಗೆ ಅರ್ಥವಾಗಲಿಲ್ಲ.
"ಆಠಾರಾ ಕಛೇರಿಯಲ್ಲಿದೀರಾ?"
"ಇಲ್ಲ. ನನು ಚಿತ್ರ ಬರೀತೀನಿ ಬಣ್ಣದ್ದು ಬೋರ್ಡು ಬರೀತೀನಿ."
" ಓ.."
ಸ್ವರವನ್ನು ಸ್ಲಲ್ಪ ದೀರ್ಘವಾಗಿಯೇ ರಂಗಮ್ಮ ಎಳೆದರು. ಅವರಿಗೆ ನಿರಾಶೆ
ಯಾಯಿತು ಆದರೂ, ತನ್ನ ಉದ್ಗಾರದೊಡನೆ ನೆಲೆಸಿದ ಮೌನವನ್ನು ಮುರಿದು,
ಅವರು ಮಾತು ಮುಂದುವರಿಸಿದರು.
"ಎಷ್ಟು ಬರುತ್ತೆ ಸಂಬಳ?"
ಯಾರನ್ನೂ 'ಸಂಬಳ' ಎಷ್ಟು ಎಂದು ಕೇಳಕೂಡದೆಂದು ರಂಗಮ್ಮನ ಮಗ
ತಾಯಿಗೆ ಭೋಧನೆ ಮಾಡಿದ್ದ. ಹಾಗೆ ಕೇಳುವುದು ಸರಿಯಲ್ಲವೆಂಬುದನ್ನು ಮನ
ಗಾಣಿಸಿಕೊಡಲು ಬಹಳ ಪ್ರಯಾಸಪಟ್ಟಿದ್ದ ಆದರೆ ಬಾಡಿಗೆಗೆ ಮನೆ ಕೇಳಲು ಬರುವವ
ರನ್ನು ಆ ರೀತಿ ಪ್ರಶ್ನಿಸದೆ ಅನ್ಯಗತಿಯೇ ಇರಲಿಲ್ಲ ಹೀಗಾಗಿ ಪ್ರಶ್ನೆಯ ಜೊತೆಯಲ್ಲೇ
'ಹೀಗೆ ಕೇಳ್ದೇಂತ ಏನೂ ತಿಳ್ಕೋಬೇಡಿಪ್ಪಾ' ಎಂದು ಹೇಳಲು ಮಗ ಕಲಿಸಿ
ಕೊಟ್ಟಿದ್ದ. ಮರೆಯದೇ ಈ ಸಲವೂ ಅದನ್ನು ರಂಗಮ್ಮ ಅಂದರು.
"ಸಂಬಳ ಇಲ್ಲ."
ರಂಗಮ್ಮನಿಗೆ ಆ ಉತ್ತರ ಅರ್ಥವಾಗಲಿಲ್ಲ.
"ಅಂದರೆ?"
"ಸಂಬಳ ಇಲ್ಲ-ಸಂಪಾದನೆ. ಸ್ವಂತದ ಸಂಪಾದನೆ. ಕೆಲಸ ಮಾಡಿದಷ್ಟೂ
ದುಡ್ಡು ಬರುತ್ತೆ."
"ತಿಂಗಳಿಗೆ ಒಂದರುವತ್ತು ರೂಪಾಯಿ ಬರುತ್ತೋ?"
"ನೂರು ನೂರೈವತ್ತು ರೂಪಾಯಿ ಬರುತ್ತೆ."
ರಂಗಮ್ಮ ಸುಮ್ಮನಾದರು. ಚಿತ್ರ ಬರೆದು ಅಷ್ಟು ಸಂಪಾದಿಸಬಹುದೆಂದು
ಅವರಿಗೆ ಗೊತ್ತಿರಲಿಲ್ಲ.ಸಂಪಾದನೆಯಲ್ಲೂ ಸ್ಥಾನಮಾನದಲ್ಲೂ ಚಂದ್ರಶೇಖರಯ್ಯ
ನನ್ನಾಗಲೀ ತಮ್ಮ ಮಗನನ್ನಾಗಲಿ ಮೀರಿಸುವವರು ಆ ವಠಾರಕ್ಕೆ ಬರಬಹುದೆಂದು
ಅವರು ಭಾವಿಸಿರಲಿಲ್ಲ. ಶಂಕರನಾರಾಯಣಯ್ಯನ ಬಗೆಗೆ ಗೌರವವೇನೂ ಅವರಲ್ಲಿ
ಉಂಟಾಗಲಿಲ್ಲ, ನಿಜ. ಆದರೆ, ಆ ಮನುಷ್ಯನಿಗೆ ಬಾಡಿಗೆ ಕೊಡುವ ಸಾಮರ್ಥ್ಯವಿದೆ
ಎಂದು ಅವರು ತಿಳಿದುಕೊಂಡರು.
"ಯಾವತ್ತು ಬರ್ತೀರಾ?"
"ಬಾಡಿಗೆ ವಿಷಯವೇ ಇತ್ಯರ್ಥವಾಗಿಲ್ವಲ್ಲಾ ಇನ್ನೂ ?"
"ಆಗ್ಲೇ ಹೇಳ್ಲಿಲ್ವೆ? ಇಪ್ಪತ್ತು ರೂಪಾಯಿ."
"ಎಲ್ಲಾದರೂ ಉಂಟೆ? ಏನಂದಾರು ಯಾರಾದರೂ?"
ರಂಗಮ್ಮನಿಗೆ ಸ್ವಲ್ಪ ರೇಗಿತು. ಅವರು ಬಿಗಿಯಾಗಿಯೇ ಅಂದರು:
"ನಿಮಗೆ ಇಷ್ಟವಾದರೆ ಬನ್ನಿ. ಕಷ್ಟವಾದರೆ ಬಿಡಿ. ಹತ್ತೊಂಭತ್ತು ರೂಪಾ
ಯಿಗಿಂತ ಕಮ್ಮಿ ಸಾಧ್ಯವೇ ಇಲ್ಲ."
"ಕಕ್ಕಸಿಗೆ ಬೇರೆ ಕೊಡ್ಬೇಕೇನು?"
ಮಾತಿನ ಜತೆ ಅಣಕದ ನಸುನಗೆಯಿತ್ತು. ಆದರೆ ರಂಗಮ್ಮನಿಗೆ ಅದು ಅರ್ಥ
ವಾಗಲಿಲ್ಲ.
"ಇಲ್ಲ. ನೀರಿಗೆ ಮಾತ್ರ___"
"ಸರಿ, ಸರಿ. ಅದನ್ನು ಆಗ್ಲೇ ಹೇಳಿದೀರಿ."
"ಇಷ್ಟೆ. ಒಪ್ಪಿಗೆಯಾದರೆ ಬನ್ನಿ. ನಿಮ್ಮ ಮನೆಯವರನ್ನ ಕರಕೊಂಡು ಬಂದು
ತೋರಿಸಿ, ಬೇಕಾದರೆ."
"ಅದೇನೂ ಪರವಾಗಿಲ್ಲ. ನಾನು ನೋಡಿದರೆ ಸಾಕು."
"ತಿಂಗಳ ಬಾಡಿಗೆ ಮುಂಗಡ ಕೊಡ್ಬೇಕು."

ಶಂಕರನಾರಾಯಣಯ್ಯ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ:

"ಹದಿನೈದನೇ ತಾರೀಕು ಸಾಯಂಕಾಲ ಬಂದ್ದಿಡ್ತೀನಿ.. ಅರ್ಧ ತಿಂಗಳಿನ ಬಾಡಿಗೆ
ಮುಂಗಡ ಕೊಡ್ರೀನಿ."
ಈ ಲೆಕ್ಕಾಚಾರದಲ್ಲೆಲ್ಲ ರಂಗಮ್ಮ ಎಂದೂ ಬಿಟ್ಟುಕೊಟ್ಟವರಲ್ಲ. ಕಟ್ಟುನಿಟ್ಟಾ
ಗಿಯೇ ಅವರು ಹೇಳಿದರು:
"ಅದೊಂದು ಸಾಧ್ಯವಿಲ್ಲ. ನಾಳೆ ದಿವಸ ಚೆನ್ನಾಗಿದೆ. ಬಂದು ಹತ್ತೊಂಭತ್ತು
ರೂಪಾಯಿ ಮುಂಗಡ ಕೊಟ್ಟ ಕರಾರು ಪತ್ರ ಮಾಡೊಂಡು ಹೋಗಿ.. ನಾಡಿದ್ದು
ಬಿಡಾರ ಬಂದ್ದಿಡಿ.. ಮುಂದಿನ ತಿಂಗಳು ಮೊದಲ್ನೆ ತಾರೀಕಿಗೆ, ಅಥವಾ ಐದನೇ
ತಾರೀಕಿನೊಳಗೆ.. ಈ ಅರ್ಧ ತಿಂಗಳ ಬಾಡಿಗೆ ಕೊಡಿ."
ವಠಾರದ ಒಡತಿಯೊಡನೆ ಚರ್ಚೆ ವ್ಯರ್ಥವೆಂದು ಮನಗೊಂಡ ಶಂಕರನಾರಾಯ
ಣಯ್ಯ ಸಂದರ್ಶನವನ್ನು ಮುಕ್ತಾಯಗೊಳಿಸಿದ.
“ಹಾಗೇ ಆಗ್ಲಿ."
ಬಂದವನು ಹೊರಡಲು ಎದು ನಿಂತನೆಂದ ರಂಗಮ್ಮನೂ ಎದ್ದರು. ಆದರೆ
ಈಗಿರುವ ಮನೆಯನ್ನು ಆತ ಬಿಡಲು ಕಾರಣವೇನೆಂದು ತಿಳಿಯುವ ಒಂದು ಕೆಲಸ
ಉಳಿದಿತ್ತು, ಅದಕ್ಕೆ ಪೀಠಿಕೆಯಾಗಿ ಪಟ್ಟ ಪ್ರಶ್ನೆಗಳನ್ನು ರಂಗಮ್ಮ ಕೇಳಬೇಕಾಯಿತು.
“ನೀವು ಕೆಲಸ ಮಾಡೋದೆಲ್ಲಿ?"
"ಗಾಂಧಿನಗರದಲ್ಲಿ"
"ಹಾಲಿ ಅಲ್ಲೇ ವಾಅಸವಾಗಿದೀರೋ?"
"ಇಲ್ಲ. ಈಗಿರೋದು ಶೇಷಾದ್ರಿಪುರದಲ್ಲಿ."
ಮತ್ತೆ! ಅದೇ ಸಮೀಪ ಅಲ್ವೆ ನಿಮ್ಗೆ?"
"ಬೆಂಗಳೂರಲ್ಲಿ ದೂರವೇನು, ಸಮೀಪವೇನು, ಎಲ್ಲಾ ಒಂದೇ."
ರಂಗಮ್ಮನಿಗೆ ಬೇಕಾಗಿದ್ದುದು, ಆ ಉತ್ತರದಿಂದ ದೊರೆಯಲಿಲ್ಲ, ಅವರು ನೇರ
ವಾಗಿಯೇ ಕೇಳಬೇಕಾಯಿತು.
“ಈಗೀರೊ ಮನೇನ ಯಾಕೆ ಬಿಡ್ತಿದೀರಿ ಹಾಗಾದರೆ?"
"ಒಂದು ಅರ್ಧ ಕ್ಷಣ ಶಂಕರನಾರಾಯಣಯ್ಯನ ದೃಷ್ಟಿ ಶೀತಲವಾಯಿತು.
ಆದರೂ ಉತ್ತರ ಕೊಡಲು ಆತ ತಡಮಾಡಲಿಲ್ಲ.
“ಈಗಿರೋ ಮನೆ ಅಷ್ಟು ಅನುಕೂಲವಾಗಿಲ್ಲ, ಕಡಿಮೆ ಬಾಡಿಗೇದು. ಜವುಗು
ಜಾಗ, ಶ್ರೀರಾಮಪುರದ ಹವಾ ಚೆನಾಗಿದೇಂತ ಡಾಕ್ಟರು ಬೇರೆ ಹೇಳಿದ್ರು-----"
"ಹೌದು, ಹೌದು. ಅದು ನಿಜವೇ. ಆರೋಗ್ಯದ ದೃಷ್ಟಿಯಿಂದ ಇದು
ಒಳ್ಳೆ ಜಾಗ. ನಮ್ಮ ವಠಾರದ ವಿಷಯದಲ್ಲಂತೂ ಇಲ್ಲಿ ಯಾರನ್ನು ಬೇಕಾದರೂ
ಕೇಳಿ, ಹೇಳ್ತಾರೆ. ಮಳೆ ಇರಲಿ, ಛಳಿ ಇರಲಿ, ಸೆಖೆ ಇರಲಿ, ರಂಗಮ್ಮನ ವಠಾರದಲ್ಲಿ
ಎಲ್ಲಾ ಒಂದೇ!"

“ ಕೇಳೋದೇನ್ಬಂತು-ಕಣ್ಣಾರೆ ನಾಅನೇ ಕ್ಂದ್ಮೇಲೆ ?"
ರಂಗಮ್ಮನಿಗೆ ತೃಪ್ತಿಯಾಯಿತು. ಬಾಗಿದ ದೇಹದಿಂದ ತಲೆಯನ್ನಷ್ಟೆ ಮೇಲ
ಕ್ಕೆತ್ತಿ ಆತನನ್ನು ನೋಡುತ್ತ ಆಕೆ ಹೇಳಿದರು:
"ಹೋಗ್ಬಿಟ್ಟು ಬರ್ತೀರಾ ಹಾಗಾದ್ರೆ? ನಾಳೆ ಬರ್ತೀರಾ?"
ಆತ 'ಹೂಂ'ಗುಟ್ಟಿದ. ಹಿಂಬಾಲಿಸಿ ಬಂದ ಎಲ್ಲರ ದೃಷ್ಟಿಗಳನ್ನೂ ಹಿಂದೆ
ಬಿಟ್ಟು, ಅಂಗಳಕ್ಕಿಳಿದು, ಕಾಲಿಗೆ ಚಪ್ಪಲಿ ಸಿಕ್ಕಿಸಿಕೊಂಡ. ರಂಗಮ್ಮ ಅಂಗಳದ ವರೆಗೂ
ಬಂದರು.
ಪರೀಕ್ಷೆಯಲ್ಲಿ ಉತ್ತರ ಕೊಟ್ಟು ಬಸವಳಿದು ಬಂದಿದ್ದ ಶಂಕರನಾರಾಯಣಯ್ಯ
ಜುಬ್ಬದ ಜೇಬಿನಿಂದ ಕರವಸ್ತ್ರ ಹೊರತೆಗೆದು ಮುಖ ಒರೆಸಿದ...ಆ ಕ್ಷಣ ಏನನ್ನೋ
ನಿರೀಕ್ಷಿಸಿ ಆತನ ಕಣ್ಣಿ ವೆಗಳು ಕುಣಿದುವು.
"ಒಂದು ವಿಷಯ ನಿಮ್ಮನ್ನ ಕೇಳ್ಬೇಕಾಗಿದೆಯಲ್ಲಮ್ಮ."
"ಏನಪ್ಪಾ ಅದು?"
"ಖಾಲಿ ಮನೇಲಿ ವಾಸವಾಗಿದ್ದೋರು ಅದನ್ನ ಬಿಟ್ಟು ಹೋಗಿ ಎಷ್ಟು ಸಮಯ
ವಾಯ್ತು?"
"ಒಂದು ಎರಡು ವಾರ,ಅಷ್ಟೇ. ಯಾಕಪ್ಪಾ?"
"ಅವರು ಮನೆ ಖಾಲಿ ಮಾಡಲು ಕಾರಣ?"
ರಂಗಮ್ಮನಿಗೆ ಉಗುಳು ಗಂಟಲಲ್ಲಿ ಸಿಲುಕಿಕೊಂಡಿತು. ತಮ್ಮನ್ನು ಮೀರಿಸಿದ
ಜಾಣರಿಲ್ಲ ಎಂದು ಭಾವಿಸಿದ್ದುದಕ್ಕೆ ಇದೀಗ ಶಿಕ್ಷೆ ಎಂದುಕೊಂಡರು. ನಿಜ ಹೇಳಿದರೆ
ಈತ ಬರದೇ ಹೋಗಬಹುದೆಂದು ಅವರಿಗೆ ಭಯವಾಯಿತು. ಸಾವು ಸಂಭವಿಸಿದ
ಮನೆಯಲ್ಲಿ ಸಂಸಾರ ಹೂಡಲು ತಾವಾಗಿಯೇ ಇಷ್ಟಪಡುವವರು ಯಾರು?
ರಂಗಮ್ಮ ಉತ್ತರ ಕೊಡಲು ಅನುಮಾನಿಸುತ್ತಿದ್ದುದನ್ನು ಕಂಡು ಆತನೇ
ಮುಂದುವರಿಸಿದ:
"ಹೇಳಿ. ಪರವಾಗಿಲ್ಲ."
"ಬಡವ....ಇಷ್ಟು ಬಾಡಿಗೆ ಕೊಡೋದು ಕಷ್ಟವಾಯ್ತೂಂತ___"
ಆತ ನಕ್ಕುಬಿಟ್ಟ.
"ನೋಡಿಮ್ಮಾ, ನಾನು ಬರದೇ ಹೋಗ್ಬಹುದೂಂತ ನೀವು ಮುಚ್ಚುಮರೆ
ಮಾಡ್ತಿದೀರ."
"ಹಾಗೇನಿಲ್ಲ....ಅದು... ಈ..."
"ಅಲ್ಲೇ ಕೆಳಗೆ ಹೋಟೆಲಿನವರನ್ನ ಕೇಳ್ದೆ-ಯಾವುದಾದರೂ ಮನೆ ಖಾಲಿ
ಇದೆಯೇ ಅಂತ. ರಂಗಮ್ಮನ ವಠಾರದಲ್ಲೊಂದು ಖಾಲಿ ಇರಬೇಕು-ಅಲ್ಲಿ ಯಾರೋ
ಮೊನ್ನೆ ಸತ್ತರೂಂತ ಆತ ಅಂದ."
"ಹಾಂಗದ್ನೆ? ಅಯ್ಯೋ ಪರಮಾತ್ಮಾ!"
"ಯಾಕೆ? ಯಾರೂ ಸಾಯಲಿಲ್ವೇನು?"

"ಸತ್ತರು. ಅದು ಬೇರೆ ವಿಷಯ. ಆದರೆ ಸತ್ತದ್ದಕ್ಕೆ ಖಾಲಿ ಆಯ್ತೂಂತ
ಅನ್ಬೇಕೆ?"
"ಅದರಲ್ಲಿ ಏನೀಗ ತಪ್ಪು? ಹುಟ್ಟೋದು ಎಷ್ಟು ಸ್ವಾಭಾವಿಕವೋ ಸಾಯೋದು
ಅಷ್ಟೆ ಸ್ವಾಭಾವಿಕ. ಪಟ್ಟಣವಾಸದಲ್ಲಿ ಅದಕ್ಕೆಲ್ಲ ಮಹತ್ವ ಕೊಡೋಕಾಗುತ್ಯೆ?
ಈಗ ಆತ್ಮಹತ್ಯೇನೆ ಮಾಡ್ಕೊಂಡ್ರೂಂತ ಇಟ್ಕೊಳ್ಳಿ. ಆ ಮನೇನ ಬಿಟ್ಟಿಡೋಕೆ
ಆಗುತ್ಯೆ?"
"ಅದು ನಿಜ, ನಿಮಗೆ ತಿಳಿವಳಿಕೆ ಇರೋದ್ರಿಂದ ಹೀಗೆ ಹೇಳ್ತೀರಾ. ಆದರೆ
ಬೇರೆಯವರು___"
"ಅದೆಲ್ಲಾ ದೊಡ್ಡದಲ್ಲಾಂದ್ರೆ!"
"ಹೆಂಗಸರು ಮಕ್ಕಳು ಸಾವುಗೀವು ಅಂದ್ರೆ ಸ್ವಲ್ಪ ಹೆದರ್ಕೋತಾರೆ."
"ನಮ್ಮ ಚಂಪಾ ವಿಷಯದಲ್ಲಿ ಅಂಥ ಯೋಚನೆ ಮಾಡ್ಬೇಕಾದ್ದೇ ಇಲ್ಲ.
ಇಂಥಾಂದು ಆಕೆ ಎಷ್ಟೋ ನೋಡಿದಾಳೆ."
ಸಾವಿನ ಮನೆ ಬೇಡವೆಂದು ಆತ ಹೇಳಲಿಲ್ಲವಲ್ಲಾ ಎಂದು ರಂಗಮ್ಮನ ಕಣ್ಣು
ಗಳು ಕೃತಜ್ಞತೆಯಿಂದ ತುಂಬಿದವು.
"ಅಂದ ಹಾಗೆ, ಆ ಮನೆಗೆ ಒಂದಿಷ್ಟು ಸುಣ್ಣ ಸಾರಿಸಿ ಸ್ವಚ್ಛ ಮಾಡಿಸಿ ಇಟ್ಟಿರಿ!"
"ಆಗಲಿ ಮಾಡಿಸ್ತೀನಿ."
ವಠಾರದ ಬೇರೆ ಮನೆ ಖಾಲಿಯಾಗಿದ್ದಿದ್ದರೆ ರಂಗಮ್ಮ ಒಪ್ಪುತ್ತಿರಲಿಲ್ಲ.
ಬೀದಿಗೆ ಇಳಿಯುತ್ತಿದ್ದ ಆತನ ದೃಷ್ಟಿ ಗೋಡೆಯ ಮೇಲಿದ್ದ 'ಮನೆ ಬಾಡಿಗೆಗೆ
ಇದೆ' ಬೋರ್ಡಿನತ್ತ ಹೋಯಿತು.
"ಇದೇನು ಸುಣ್ಣದ ಕಡ್ಡೀಲಿ ಬರೆಸಿದೀರಲ್ಲಾ. ನಾನು ಬಂದ್ಮೇಲೆ ಮರದ
ಹಲಿಗೇಲಿ ಬರ್ಕೊಡ್ತೀನಿ, ಸೊಗಸಾಗಿ. ಭದ್ರವಾಗಿ. ಖಾಯಂ ಆಗಿ ಇರುತ್ತೆ. ಒಳಗೆ
ಇಟ್ಕೊಂಡ್ರೆ ಯಾವತ್ತು ಬೇಕಾದ್ರೂ ಉಪಯೋಗಿಸ್ಬಹುದು."
ರಂಗಮ್ಮ ನಕ್ಕರು.
"ಆಗಲೀಪ್ಪಾ. ನಿಮ್ಮದೇ ವಠಾರ. ಅದೇನು ಮಾಡ್ತಿರೋ ಮಾಡಿ."


ಆ ಮನುಷ್ಯ ವಠಾರಕ್ಕೆ ಬೀಡಾರ ಬರಲು ಒಪ್ಪಿದನೆಂದು ತಿಳಿದಾಗ ಅಹಲೈಗೆ
ತುಸು ಆಶ್ಚರ್ಯವೇ ಆಯಿತು.
"ಎಷ್ಟು ಬಾಡಿಗೆಗೆ ಒಪ್ಕೊಂಡ್ರು ರಂಗಮ್ನೋರೆ?"

ರಂಗಮ್ಮನಿಗೆ ಆ ಪ್ರಶ್ನೆ ಇಷ್ಟವಾಗಲಿಲ್ಲ.
"ನಿನಗ್ಯಾತಕ್ಕಮ್ಮ ಅದೆಲ್ಲ?ಒಪ್ಕೊಂಡ,ಹೋದ."
"ಇಪ್ಪತ್ತೊಂತ ತ್ತೋರುತೆ."
ಹತ್ತೊಂಭತ್ತು. ನೀವು ಮನೆ ಖಾಲಿ ಮಾಡಿದ್ರೆ ಮುಂದೆ ನಿಮ್ಮದಕ್ಕೂ
ಹತ್ತೊಂಭತ್ತು ರೂಪಾಯಿ ಬರುತ್ತೆ."
ರಂಗಮ್ಮ ರೇಗಿದರೆಂದು ಅಹಲ್ಯಾ ಸುಮ್ಮನಾದಳು.ಆದರೂ ಮೌನವಾಗಿ
ಕುಳಿತಿರಲಾರದೆ ವರದ ಬಾಗಿಲಿನಿಂದ ಬಾಗಿಲಿಗೆ ಸಂಚರಿಸಿ ಕೊನೆಯ ಮನೆಗೆ ಬಿಡಾರ
ಬರಲಿರುವ ವಿಷಯವನ್ನು ಪ್ರಸಾರ ಮಾಡಿದಳು.
"ಬಂದ್ಮೇಲೆ ತಾನೆ?"ಎಂದು ಒಬ್ಬಿಬ್ಬರು ಸಂದೇಹದ ರಾಗವೆಳೆದರು.
ಮರುದಿನ ಸಾಯಂಕಾಲ ಶಂಕರನಾರಾಯಣಯ್ಯ ಮುಂಗಡ ಬಾಡಿಗೆ ತೆತ್ತು
ಕರಾರು ಪತ್ರ ಮಡಿಕೊಳ್ಳಲು ಬರದೆ ಇರಲ್ಲಿಲ. ಈ ದಿನ ಅತ ಅಪರಿಚಿತನಂತೆ
ಅಂಗಳದಲ್ಲೇ ನಿಲ್ಲಲಿಲ್ಲ. ಕತ್ತಲೆಯ ನಡುಮನೆ ಹಾದಿಯಲ್ಲಿ ಬಂದು ರಂಗಮ್ಮನ
ಬಾಗಿಲಿನೆದುರು ಓಣೆಯಲ್ಲಿ ನಿಂತು,"ಇದೀರಾ?"ಎಂದು ಕೇಳಿದ.
ಸಂಜೆಯಾದರೂ ಈತ ಬರಲೇ ಇಲ್ಲವಲ್ಲಾ -ಎಂದು ಯೊಚನೆಯಲ್ಲೇ ಇದ್ದ
ರಂಗಮ್ಮ "ಬನ್ನಿ, ಬನ್ನಿ"ಎಂದರು.
ಹಿಂದಿನ ದಿನದ್ದೇ ವೇಷಭೂಷಣ . ಈ ದಿನವೂ ವೀಳ್ಯ ಜಗಿದು ತುಟಿಗಳು
ಕೆಂಪಾಗಿದ್ದುವು. ಹಿಂದಿನ ದಿವಸ ಮಾತು ನಿಲ್ಲಿಸಿದ್ದಲ್ಲಿಂದಲೇ ಮುಂದುವರಿಸಿದ ಹಾಗೆ
ಆತ ಹೇಳಿದ:
"ಅದೇನೋ ಕರಾರು ಪತ್ರ ಬರೀಬೇಕು ಅಂದ್ರಲ್ಲಾ."
"ಹೌದು,ಹೌದು. ಬಾಡಿಗೆ ಹಣ ತಂದಿದ್ದೀರಾ?"
"ತಗೊಳ್ಳಿ."
ಜುಬ್ಬದ ಪಾರ್ಶ್ವ ಜೇಬಿನಲ್ಲಿ ಮಡಚಿ ಇಟ್ಟಿದ್ದೊಂದು ಲಕೋಟೆಯನ್ನು ಆತ
ಹೊರತೆಗೆದ.ಹತ್ತು ರೂಪಾಯಿನದೊಂದು, ಐದು ರೂಪಾಯಿನದೊಂದು, ಒಂದು
ರೂಪಾಯಿನ ನಾಲ್ಕು ನೋಟುಗಳು_ಅದರೊಳಗಿದ್ದುದೇ ಅಷ್ಟು.ಅಷ್ಟನ್ನೂ ಆತ
ರಂಗಮ್ಮನ ಎದುರಿಟ್ಟ.
ಅವರು ಎಲ್ಲವನ್ನೂ ಎತ್ತಿಕೊಂಡು ಒಂದೂಂದನ್ನೂ ಬೆಳಕಿಗೆ ಹಿಡಿದು ಸೂಕ್ಷ್ಮ
ವಾಗಿ ನೋಡಿದರು.
"ದೃಷ್ಟಿ ಸ್ವಲ್ಪ ಮಂದ. ವಯಸ್ಸಾಯ್ತು" ಎಂದು ಅವರು ಆ ಸೂಕ್ಷ್ಮ ಪರೀ
ಕ್ಷೆಗೆ ಕಾರಣ ಕೂಟ್ಟರು.ಮಂದವೋ ಚುರುಕೋ ,ಎಷ್ಟೋ ವರ್ಷಗಳಿಂದ ನೋಟನ್ನು
ಅವರು ಹಿಡಿದು ನೋಡುತಿದ್ದ ರೀತಿಯೇ ಅಂಥದ್ದು. ಸುಬ್ಬುಕೃಷ್ಣಯ್ಯನಿಗೆ ಮನೆ
ಕೊಟ್ಟಾಗ ದೊರೆತ ಐದು ರೂಪಯಿನ ನೋಟನ್ನೂ_ಆ ಮೊದಲ ಬಾಡಿಗೆಯನ್ನೂ

6

ಅಷ್ಟೇ ಸೂಕ್ಶ್ಮವಾಗಿ ತಿರುತಿರುಗಿಸಿ ಅವರು ಪರೀಕ್ಷಿಸಿದ್ದರು. ಆಗಲೂ ಹೇಳಿದ್ದರು
'ದೃಷ್ಟಿ ಸ್ವಲ್ಪ ಮಂದ'ಎಂದು. 'ವಯಸ್ಸಾಯ್ತು' ಎಂದು ಮಾತ್ರ ಅಂದಿರಲಿಲ್ಲ.
ದೃಷ್ಟಿ ಎಂದೂ ಅವರಿಗೆ ತೊಂದರೆ ಕೊಟ್ಟಿರಲಿಲ್ಲವೆಂದಲ್ಲ. ಆದರೆ ನೇತ್ರ ವೈದ್ಯರ
ಬಳಿಗೆ ಹೋಗಿ ಕನ್ನಡಕ ಕೊಳ್ಳುವ ಗೋಜಿಗೆ ಅವರು ಹೋಗಿರಲಿಲ್ಲ.
"ಸರಿಯಾಗಿದೆ,"ಎಂದರು ರಂಗಮ್ಮ. ಮುಂದೆ ತಾವೇ ಮಾತು ಸೇರಿಸಿದರು:
"ನಿಮ್ಮಲ್ಲಿ ಕಾಗದ ಪೆನ್ನು ಏನೂ ಇಲ್ಲಾಂತ ತೋರುತ್ತೆ."
"ಪೆನ್ನಿದೆ."
"ಜುಬ್ಬದ ಎದೆ ಭಾಗದಲ್ಲಿ ಪೆನ್ನಿಗಾಗಿಯೇ ಮಾಡಿದ್ದ ಕಿರುಜೇಬಿನಿಂದ ಎರಡು
ರೂಪಾಯಿಯ ನಕಲಿ ಪಾರ್ಕರ್ ಪೆನ್ನನ್ನು ಹೊರತೆಗೆದು ಶಂಕರನಾರಾಯಣಯ್ಯ
ಕೈಯಲ್ಲಿ ಹಿಡಿದುಕೊಂಡ.
ರಂಗಮ್ಮ ಅಸ್ಪಷ್ಟವಾಗಿ ಏನನ್ನೋ ಗೊಣಗಿ, ಕೊರಳಿಗೆ ತೂಗಹಾಕಿದ್ದ ಬೀಗದ
ಕೈಯಿಂದ ಕಬ್ಬಿಣದ ಪೆಟ್ಟಗೆಯನ್ನು ತೆರೆದು, ಸ್ವಲ್ಪ ಮಾಸಿದ್ದ ಮಡಚಿದ್ದ ಕಾಗದದ
ಹಾಳೆಯೊಂದನ್ನು ಹೊರತೆಗೆದು,ಆತನ ಮುಂದಿಟ್ಟರು. ಒತ್ತಿಕೊಳ್ಳಲೆಂದು
ಯಾವುದೋ ಒಂದು ಹಳೆಯ ಪುಸ್ತಕವನ್ನೂ ಕೊಟ್ಟರು.
ಶಂಕರನಾರಾಯಣಯ್ಯ ಬರೆಯಲು ಸಿದ್ಧನಾದ. ರಂಗಮ್ಮನ ಮುಖ ನೋಡಿದ.
"ಹೇಳಿ ಬರಕೋತೀನಿ.
"ರಂಗಮ್ಮ ಹೇಳಲು ಸಿದ್ಧವಾದರು. ಎಷ್ಟೋ ಸಾರೆ ಹೇಳಿ ಬರೆಸಿ ಅಭ್ಯಾಸ
ವಾಗಿತ್ತು. ಪರಿಚಯ ಪದಗಳು ಅವರ ಮನಸ್ಸಿನಲ್ಲಿ ರೂಪುಗೊಂಡುವು.
"ಮಲ್ಲೇಶ್ವರ, ಶ್ರೀರಾಮಪುರ ರಂಗಮ್ಮನ ವಠಾರದ ಮಾಲಿಕರಾದ ರಂಗಮ್ಮ
ನವರಿಗೇ-ಆಮೇಲೆ ನಿಮ್ಮ ಹೆಸರು ಹಾಕಿ-ನಾದ ನಾನು ಬರೆದು ಕೊಡುವು
ದೇನೆಂದರೆ...
"ಶಂಕರನಾರಾಯಣಯ್ಯ ಅಷ್ಟನ್ನೂ ಬರೆದುಕೊಂಡ. ಆತನಿಗೆ ನಗು ಬಂತು.
ತುಟಿಗಳು ಬೇರ್ಪಟ್ಟು ಕೋಲುಮುಖ ಅಗಲವಾಯಿತು. ಆದರೆ ಆತನ ತಲೆ ಬಾಗಿದ್ದು
ದರಿಂದಲೂ ಮುಂದಿನ ಮಾತುಗಳನ್ನು ರಂಗಮ್ಮ ನೆನಪು ಮಾಡಿಕೊಳ್ಳುತ್ತಿದ್ದುದ
ರಿಂದಲೂ ಆಕೆಗೆ ಅದು ಕಾಣಿಸಲಿಲ್ಲ.
"ಅಷ್ಟೂ ಬರೆದಾಯ್ತೊ?"
"ಹೂಂ.ಮುಂದಕ್ಕೆ ಹೇಳಿ."
"ಮುಂದೆ ಇವತ್ತಿನ ತಾರಿಖು-ತಿಂಗಳು-ಇಸವಿ ಬರೀರಿ."
"ಹೂಂ."

"ಈ ದಿವಸ ನಾನು ಮೊಬಲಗು ರೂಪಾಯಿ ಹತೋಂಭತ್ತನ್ನು ಈ ವಠಾರದ
ಮನೆಯ-ನಂಬರು ಹದಿನಾರು ಐವತ್ತು-ಒಂದು ತಿಂಗಳ ಮುಂಗಡ ಬಾಡಿಗೆಯಾಗಿ
ಪೂರ್ತಾ ಪಾವತಿ ಮಾಡಿದ್ದೇನೆ....ಬರೆದಿರೋ?...ಮುಂದೆ ಪ್ರತಿ ತಿಂಗಳೂ ಮೊದಲ್ನೇ
ತಾರೀಖಿಗೆ- ಮೊದಲ್ನೇ ತಾರೀಖು ಅಂತ್ಲೇ ಹಾಕಿ, ಅವಧಿಯೇನೋ ಆಮೇಲೂ ಐದು
ದಿವಸ ಇರುತ್ತೆ-ತಾರೀಖಿಗೆ ಹತ್ತೊಂಭತ್ತು ರೂಪಾಯಿ ಬಾಡಿಗೆ ತಪ್ಪದೇ ಸಲ್ಲಿಸುವು
ದಾಗಿ ಈ ಮೂಲಕ ಬರೆದು ಕೊಡುತ್ತೇನೆ. ಈ ಸಲ ಮೊದಲೇ ತಾರೀಖಿಗೆ ಮಾತ್ರ
ನೀವು ಅರ್ಧ ತಿಂಗಳಿಂದು ಕೊಟ್ಟರಾಯ್ತು ... ಅದನ್ನ ಬರೀಬೇಡಿ... ಅದೇನೇನು
ಹೇಳಿದ್ನೋ. ಎಲ್ಲಿ ಸ್ವಲ್ಪ ಓದಿ."
ಸರಿಯಾಗಿ ಬರೆದುಕೊಂಡಿದ್ದುದನ್ನು ಶಂಕರನಾರಾಯಣಯ್ಯ ಓದಿದ.. ನಿಧಾನ
ವಾದ ಗಂಭೀರವಾದ ಆತನ ನಟನೆಯ ಧ್ವನಿ ರಂಗಮ್ಮನಿಗೆ ಮೆಚ್ಚುಗೆ
ಯಾಯಿತು.
“ಸರಿ. ಮುಂದಕ್ಕೆ ಬರೀರಿ."
"ಹೇಳಿ."
"ಮೂರು ಬಿಂದಿಗೆಗಿಂತ ಹೆಚ್ಚಿನ ಪ್ರತಿ ಮೂರು ಬಿಂದಿಗೆ ನೀರಿಗೂ ಎಂಟಾಣೆ
ಸಲ್ಲಿಸುತ್ತೇನೆ."
“ಹೂಂ."
"ಅವಸರ ಮಾಡ್ಬೇಡಿ. ನಿಧಾನವಾಗೇ ಬರೀರಿ...ಬಲ್ಬು ಕೆಟ್ಟು ಹೋದರೆ
ಹೊಸ ಬಲ್ಬು ನಾನೇ ಹಾಕುತ್ತೇನೆ. ಮನೆಯ ವಿಷಯದಲ್ಲಿ ಸಮಸ್ತ ಜವಾಬ್ದಾರಿಯೂ
ನನ್ನದೇ ಎಂದು ಈ ಮೂಲಕ ಒಪ್ಪಿಕೊಳ್ಳುತ್ತೇನೆ....ಬರೆದಿರಾ?"
"...ಈ ಮೂಲಕ ಒಪ್ಪಿಕೊಳ್ಳುತ್ತೇನೆ. ಬರೆದೆ."
"ಅಷ್ಟೆ. ಇನ್ನೊಮ್ಮೆ ಓದಿ."
ಶಂಕರನಾರಾಯಣಯ್ಯ, ನಿಧಾನವಾಗಿ, ಬರೆದುದೆಲ್ಲವನ್ನೂ ಓದಿದ.
"ಅದರ ಕೆಳಗೆ ರುಜು ಹಾಕಿ"
ಶಂಕರನಾರಾಯಣಯ್ಯ ಎಂದು ಇಂಗ್ಲಿಷಿನಲ್ಲಿ ಸಹಿಯಾಯಿತು.
"ರುಜು ಹಾಕಿದಿರೋ? ಅದರ ಕೆಳಗೆ ತಾರೀಖೂ ಹಾಕಿ."
"ಹಾಕ್ದೆ."
"ಸಂತೋಷ. ಅಷ್ಟೆ."
ಬಲು ಕಷ್ಟದ ಕೆಲಸವನ್ನು ಮಾಡಿ ಮುಗಿಸಿದ ಹಾಗೆ ರಂಗಮ್ಮ ಸಂತೃಪ್ತಿಯ
ನಿಟ್ಟುಸಿರು ಬಿಟ್ಟರು.
ಆದರೆ ಶಂಕರನಾರಾಯಣಯ್ಯನಿಗೆ ಅಷ್ಟು ತೃಪ್ತಿಯಾಗಿರಲಿಲ್ಲ.
"ಕರಾರು ಪತ್ರ ಎಂದಿರಿ. ಇದಕ್ಕೆ ನಿಮ್ಮ ಸಹಿಯೂ ಆಗೋದು ಬೇಡ್ವೆ ರಂಗ
ಮ್ನೋರೆ?"
ರಂಗಮ್ಮನಿಗೆ ಸಹಿ ಹಾಕಲು ಬರುತ್ತಿರಲಿಲ್ಲ. ಅವರ ಪಾಲಿಗಿದ್ದುದು ಎಡಗೈ
ಹೆಬ್ಬೆಟ್ಟಿನ ಗುರುತು. ಆದರೆ ಆ ವಿಷಯವನ್ನೇನೂ ಅವರು ಹೇಳಲಿಲ್ಲ.
"ಇಲ್ಲವಲ್ಲಪ್ಪಾ. ನಮ್ಮಲ್ಲಿ ಕರಾರುಪತ್ರಕ್ಕೆ ಒಬ್ಬರೇ ಸಹಿ ಹಾಕೋದು. ನೀವು

ಬರಕ್ಕೊಡೋದು, ನಾನು ತಗೊಳ್ಳೋದು."
ಶಂಕರನಾರಾಯಣಯ್ಯ ಸಣ್ಣಗೆ ನಕ್ಕ.
“ಹಾಗೆಯೇ ಆಗಲಿ. ಇನ್ನು ಬರ್ಲೇನು ನಾನು?"
“ಆಗಬಹುದಪ್ಪಾ. ನಾಳೇನೇ ಬರ್ತೀರೊ?"
“ಹೂಂ. ಸುಣ್ಣ ಹೊಡಿಸಿ ನೆಲ ಸಾರಿಸಿದೆ ತಾನೆ?"
ಆ ಕೆಲಸವಾಗಿರಲಿಲ್ಲ. ಮುಂಗಡ ಬಾಡಿಗೆ ಬಂದು ಕರಾರು ಪತ್ರವಾದ ಮೇಲೆ
ಮಾಡಿಸಿದರಾಯಿತೆಂದು ರಂಗಮ್ಮ ಸುಮ್ಮನೆ ಇದು ಬಿಟ್ಟಿದ್ದರು.
"ಅಯ್ಯೋ, ಅದೆಲ್ಲ ಎಷ್ಟರ ಕೆಲಸ! ಬೆಳಗ್ಗೆ ಮಾಡಿಸ್ತೀನಿ."
ಕರಾರು ಪತ್ರವನ್ನು ಪಡೆದುಕೊಂಡು ರಂಗಮ್ಮ ನಾಜೂಕಾಗಿ ಮಡಚಿ ಕೈಯಲ್ಲೆ
ಇರಿಸಿಕೊಂಡರು.
ಶಂಕರನಾರಾಯಣಯ್ಯನಿಗೆ ಒಂದು ತರಹೆಯಾಯಿತು. ಆತ ಹಣವನ್ನೂ
ಕೊಟ್ಟಿದ್ದ, ಸಹಿಯನ್ನೂ ಹಾಕಿದ್ದ. ಆದರೆ ಹಣ ತಲಪಿದುದಕ್ಕೆ ವಠಾರದ ಒಡತಿ
ಯಿಂದ ರಶಿತಿ ಬಂದಿರಲಿಲ್ಲ.
"ಹೊರಡ್ತೀರಾ ಹಾಗಾದರೆ?"
-ಎಂದು ರಂಗಮ್ಮ ಕೇಳಿದರು.
“ಹೂಂ."
ಆತ ಎದ್ದು ನಿಂತ. ಪೆಚ್ಚು ಮೋರೆಯ ಲಕ್ಷಣ ಮೊದಲ ಬಾರಿಗೆ ಮೂಡಿ
ಮರೆಯಾಯಿತು.
“ಹಣ ತಲಪಿದ್ದಕ್ಕೆ ರಶೀತಿ ಕೊಡ್ತೀರಾ ರಂಗಮ್ನೋರೆ?
"ರಶೀತೀನೆ? ಏನೂ ಪರವಾಗಿಲ್ಲ. ಹೋಗ್ಬಿಟ್ಟು ಬನ್ನಿ"
ಶಂಕರನಾರಾಯಣಯ್ಯ ಮನಸ್ಸಿನೊಳಗೇ ಅನುಮಾನಿಸಿದರೂ ಹೊರಗೆ ಒಣ
ನಗೆ ತೋರುತ್ತಾ ಹೊರಡಲು ಸಿದ್ಧನಾದ.
ಆತನ ಪ್ರಶ್ನೆಯಿಂದ ಸ್ವಲ್ಪ ನೊಂದುಕೊಂಡವರ ಹಾಗೆ ರಂಗಮ್ಮ ಮತ್ತೂ
ಹೇಳಿದರು:
"ಇಲ್ಲಿ ಯಾರನ್ನು ಬೇಕಾದರೂ ಕೇಳಿ ನೋಡಿ. ನಮ್ಮ ವಠಾರದಲ್ಲಿ ರಶೀತಿ
ಕೊಡೋ ಪದ್ದತಿನೇ ಇಲ್ಲ."
"ನನಗೆ ಗೊತ್ತಿರ್ಲಿಲ್ಲ, ಆದ್ದರಿಂದ ಕೇಳ್ದೆ...ನಾವು ಈಗಿರೋ ಮನೆಯ ಮಾಲಿ
ಕರು ರಶೀತಿ ಕೊಡ್ತಾರೆ. ನೀವು ಇಷ್ಟು ಹೇಳಿದ್ಯೆಲೆ ಏನೂ ಪರವಾಗಿಲ್ಲ, ಬರ್ತೀನಿ."
"ಆಗಲಪ್ಪಾ."
ಈ ದಿನ ಆತನೊಬ್ಬನೇ ಅಂಗಳ ದಾಟಿ ಬೀದಿಗಿಳಿದ. ರಂಗಮ್ಮ ಬೀಳ್ಕೊಡಲು
ಬರಲಿಲ್ಲ.
ಆತ ಹೋದೊಡನೆಯೇ ಅಹಲ್ಯಾ ರಂಗಮ್ಮನ ಮನೆ ಬಾಗಿಲಲ್ಲಿ ನಿಂತಳು.
"ಯಾವತ್ತು ಬರ್ತಾರಂತ್ರೀ?"
"ನಿನಗ್ಯಾಕೇ ಆ ಸಮಾಚಾರ? ಬರ್ತಾರೆ, ನಾಳೆ ಬಂದ್ಬಿಡ್ತಾರೆ."
ಎಷ್ಟು ಜನ? ದೊಡ್ಡವರೆಷ್ಟು-ಚಿಕ್ಕವರೆಷ್ಟು? ಕೆಲಸ ಏನು? ಅಹಲ್ಯೆಯ ಪ್ರಶ್ನೆ
ಗಳಿಗೆ ಅಂತ್ಯವಿರಲಿಲ್ಲ.
"ಸಾಕುಸಾಕಾಗಿ ಹೋಗುತ್ತಮ್ಮ ನಿನಗೆ ಉತ್ತರ ಕೊಟ್ಟು," ಎಂದು ರಂಗಮ್ಮ
ಬೇಸರದಿಂದಲೇ ಅಂದರು. ಆದರೆ ಕೇಳಿದ್ದಕ್ಕೆಲ್ಲ ಸಮರ್ಪಕ ಉತ್ತರ ಮಾತ್ರ ಕೊಡ
ದಿರಲಿಲ್ಲ.
"ತಿಂಗಳಿಗೆ ನೂರೈವತ್ತು ರೂಪಾಯಿ ಸಂಪಾದಿಸ್ತಾನೆ," ಎಂದು ಅಂತಹ ಬಾಡಿಗೆ
ದಾರನನ್ನು ದೊರಕಿಸಿಕೊಂಡ ತಮ್ಮ ಬಗೆಗೆ ಅಭಿಮಾನಪಡುತ್ತಾ ರಂಗಮ್ಮ ಹೇಳಿದರು.
ಅಹಲ್ಯಾ ಎದುರಲ್ಲೇ ಇದ್ದ ಕಾಮಾಕ್ಷಿಯ ಮನೆಗೆ ಜಿಗಿದಳು. ಅಲ್ಲಿಂದ ಹೊರ
ಹೋಗಿ "ಓ ರಾಧಾ, ಬಾರೇ" ಎಂದು ಮಹಡಿ ಮೇಲಿನ ಗೆಳತಿಯನ್ನು ಕೆಳಕ್ಕಿಳಿಸಿದಳು.
ಆ ಬಳಿಕ ಪ್ರತಿಯೊಂದೊಂದು ಮನೆಗೆ ಸುದ್ದಿ ಪ್ರಸಾರವಾಯಿತು.
_ನಾಳೆ ದಿವಸ ಕೊನೇ ಮನೆಗೆ ಬಿಡಾರ ಬರ್ತಾರಂತೆ.
_ಅವರು ಚಿತ್ರ ಬರೀತಾರಂತೆ.
ಉಪಾಧ್ಯಾಯರ ಹೆಂಡತಿಯ ಕುತೂಹಲ ಕೆರಳಿತು. ತಮ್ಮ ಸಂಸಾರದ್ದೊಂದು
ಭಾವಚಿತ್ರ ತೆಗೆಸಬೇಕೆಂದು ಆಕೆ ಬಹಳ ದಿನಗಳಿಂದ ಬಯಸಿದ್ದಳು. ಆ ಬಯಕೆ
ಈಡೇರಿಯೇ ಇರಲಿಲ್ಲ. ಗರ್ಭಿಣಿಯಾಗಿದ್ದಾಗ, 'ಈಗ ಚೆನ್ನಾಗಿರೋಲ್ಲ. ಬಾಣಂತಿ
ಯಾದ್ಮೇಲೆ ತೆಗೆಸೋಣ' ಎನ್ನುತ್ತಿದ್ದ ಗಂಡ ಲಕ್ಷೀನಾರಾಯಣಯ್ಯ. ಬಾಣಂತಿ
ಯಾದ ಮೇಲೆ, 'ಮಗು ಚಿಕ್ಕದು ಕಣೇ, ಅಲುಗುತ್ತೆ. ಚಿತ್ರ ಕೆಟ್ಟುಹೋಗುತ್ತೆ'
ಎನ್ನುತ್ತಿದ್ದ. ಮಗು ದೊಡ್ಡದಾಗುವುದರೊಳಗಾಗಿಯೇ 'ಈಗ ಚೆನ್ನಾಗಿರೋಲ್ಲ.
ಬಾಣಂತಿ ಯಾದ್ಮೇಲೆ__' ಬಾಣಂತಿಯಾದ ಮೇಲೆ ಹಿಂದಿನ ಕಥೆಯೇ. ಕ್ರಮೇಣ
ದಿನಕಳೆದಂತೆ ಭಾವಚಿತ್ರ ತೆಗೆಯುವ ವಿಷಯದಲ್ಲಿ ಉಪಾಧ್ಯಾಯರ ಆಸಕ್ತಿ ಕಡಮೆ
ಯಾಯಿತು. ಯಾವುದರಲ್ಲಿ ತಾನೆ ಆಸಕ್ತಿ ಇತ್ತು ಅವರಿಗೆ? ಮದುವೆಯಾದಾಗ ಒಂದು
ಭಾವಚಿತ್ರ ತೆಗೆಸಿತ್ತು_ಕುಳಿತ ಗಂಡನ ಹಿಂದೆ ನಿಂತು ತೆಗೆಸಿಕೊಂಡಿದ್ದ ಚಿತ್ರ. ಅವರ
ದುರದೃಷ್ಟ. ಕಟ್ಟು ಹಾಕಿಸಿದ್ದ ಚಿತ್ರದ ಗಾಜು ಒಡೆದುಹೋಯಿತು; ಚಿತ್ರದ ಹಿಂದಿದ
ರಟ್ಟಿಗೆ ಗೋಡೆಯ ಗೆದ್ದಲು ಹಿಡಿದು, ಚಿತ್ರದ ಕಾಲು ಭಾಗ_ಕಾಲುಗಳ ಭಾಗ_
ಅದಕ್ಕೆ ಆಹುತಿಯಾಯಿತು. ಮನೆಯೊಳಗೆ ಸಾಕಷ್ಟು ಬೆಳಕು ಇಲ್ಲದಿದ್ದುದರಿಂದ,
ಅಲ್ಲದೆ ಪರೀಕ್ಷಿಸಿ ನೋಡುವ ನೆಂಟರಿಷ್ಟರೂ ಬರುತ್ತಿರಲಿಲ್ಲವಾದ್ದರಿಂದ, ಅದೇ ಚಿತ್ರ
ವನ್ನು ಇನ್ನೂ ಗೋಡೆಯ ಮೇಲೆ ತೂಗಹಾಕಲು ಅಷ್ಟು ಸಂಕೋಚವೆನಿಸಿರಲಿಲ್ಲ.
ಆದರೂ ಹೊಸತೊಂದು ಭಾವಚಿತ್ರ ಇದ್ದಿದ್ದರೆ....
ಈಗ ಹೊಸ ಬಿಡಾರ ಬರಲಿರುವವರ ವಿಷಯ ಕೇಳುತ್ತ ಲಕ್ಷೀನಾರಾಯಣ
ಯ್ಯನ ಹೆಂಡತಿಯ ಆಸೆ ಮತ್ತೆ ಚಿಗುರಿತು. "ಚಿತ್ರ ಬರಿಯೋದು ಅಂದ್ರೇನೆ ಅಹಲ್ಯಾ?"
"ಹಾಗಂದ್ರೆ? ಚಿತ್ರ ಬರಿಯೋದು ಕಣ್ರೀ."
"ಫೋಟೋ ತೆಗೆಯೋದೇ?"
"ಉಹುಂ. ಕೈಲಿ ಚಿತ್ರ ಬರೆದು ಬಣ್ಣ ಹಾಕೋದು."
"ಅಷ್ಟೇನಾ?"
ಆ ನಿರಾಸಕ್ತಿಯ ಧ್ವನಿಯ ಕಾರಣ ಅಹಲ್ಯೆಗೆ ತಿಳಿಯಲಿಲ್ಲ.
ಬರಲಿರುವ ಸಂಸಾರದಲ್ಲಿ ತನ್ನ ಓರಗೆಯ ಹುಡುಗಿಯರು ಯಾರೂ ಇಲ್ಲವೆಂದು
ರಾಧೆಗೆ ವ್ಯಸನವಾಯಿತು. ರಾಧೆಯನ್ನಲ್ಲದೆ ಬೇರೆ ಗೆಳತಿಯರ ಯೋಚನೆಯನ್ನೇ
ಎಂದೂ ಮಾಡದ ಅಹಲ್ಯ ಮಾತ್ರ ಆ ಅಂಶವನ್ನು ಗಮನಿಸಲಿಲ್ಲ. ಆದರೆ, ಅಹಲ್ಯೆಯ
ತಾಯಿಯೂ ರಾಧೆಯ ತಾಯಿಯೂ ಹೊಸ ಸಂಸಾರದ ಸದಸ್ಯರು ಯಾರು ಯಾರೆಂಬು
ದನ್ನು ಕೇಳದಿರಲಿಲ್ಲ. ವಿವರ ತಿಳಿದಾಗ ಅವರು ಸಂತೋಷ ಸೂಚಿಸಲೂ ಇಲ್ಲ.
ಬೇರೆ ಮಾತುಗಳೂ ಕೇಳಿಸಿದುವು:
"ಆತನಿಗೆಷ್ಟೊ ವಯಸ್ಸು?"
"ಮೂವತ್ತೊ ನಾಲ್ವತ್ತೊ ಇರಬೇಕು."
"ಮಗು ಚಿಕ್ಕದಂತೆ."
"ಎಂಥವರೊ?"
ಈ ಮಾತುಕತೆಗಳೆಲ್ಲ ನಡೆದುದು ಎರಡು ನಿಮಿಷಗಳ ಕಾಲ ಮಾತ್ರ. ದಿನದ
ದುಡಿತದಿಂದ ಗಂಡಸರು ಹಿಂತಿರುಗಿದರು. ವಠಾರಕ್ಕೆ ಹೊಸ ಬಿಡಾರ ಬರಲಿದೆಯೆಂದು
ಅವರೇನೂ ಆಸಕ್ತಿ ತೋರಿಸಲಿಲ್ಲ. ಹೆಂಗಸರು ಮನೆಗೆಲಸಗಳಲ್ಲಿ ನಿರತರಾದರು.
ಪುಟ್ಟ ಮಕ್ಕಳು ದೀಪ ಹತ್ತಿಕೊಂಡ ಸ್ವಲ್ಪಹೊತ್ತಿನಲ್ಲೆ 'ಹಸಿವು ಹಸಿವು' ಎಂದು
ಕೂಗಾಡಿ ನಿದ್ದೆ ಹೋಗಿದ್ದುವು. ತಮ್ಮನ್ನು ಮಾತನಾಡಿಸಲು ಬಂದ ಹುಡುಗರನ್ನು
'ದೂರ ಹೋಗಿ' ಎಂದು ಗದರಿಸಿ ಗಂಡಸರು, ಹೊರಗಿನ ಗಾಳಿಯಾದರೂ ಮೈಗೆ
ತಗಲೀತೇನೋ ಎಂಬ ಅಸೆಯಿಂದ, ತಗಲಬಹುದೆಂಬ ಭ್ರಮೆಯಿಂದ, ಮನೆಬಾಗಿಲು
ಗಳಲ್ಲಿ ನಿಂತರು.
ರಂಗಮ್ಮ ಆ ವಠಾರದಲ್ಲಿ ಮನಸ್ಸು ಬಿಚ್ಚಿ ಏಕಾಂತದಲ್ಲಿ ಮಾತನಾಡುತ್ತಿದ್ದುದು
ಸುಬ್ಬುಕೃಷ್ಣಯ್ಯನೊಡನೆ ಮಾತ್ರ. ಆತ ವಠಾರದ ಮೊದಲ ಬಾಡಿಗೆದಾರ. ಆಂಗಡಿ
ಯಲ್ಲಿ ಶ್ರೀನಿವಾಸಶೆಟ್ಟರ ನಂಬಿಕೆಗೆ ಅರ್ಹನಾಗಿದ್ದಂತೆ, ವಠಾರದಲ್ಲಿ ರಂಗಮ್ಮನ ವಿಶ್ವಾ
ಸಕ್ಕೆ ಆತ ಪಾತ್ರನಾಗಿದ್ದ. ಇನ್ನೊಬ್ಬರಿಗೆ ವಿಧೇಯನಾಗಿ ನಿಷ್ಠಾವಂತನಾಗಿ ಬಾಳ್ವೆ
ನಡೆಸುವುದೇ ಸುಬ್ಬುಕೃಷ್ಣಯ್ಯನ ಬದುಕಿನ ಪರಮ ಗುರಿಯಾಗಿತ್ತೆಂದರೂ ತಪ್ಪಾಗ
ಲಾರದು. ತನ್ನ ಬಗ್ಗೆ ಮೆಚ್ಚಿಗೆ ಸೂಚಿಸಿ ಯಾರಾದರೂ ಬರಿದೆ ಮಾತಾಡಿದರೂ
ಸಾಕು. ಅಷ್ಟರಲ್ಲೇ ಅವನಿಗೆ ತೃಪ್ತಿಯಾಗುತ್ತಿತ್ತು.
ಮುಖ್ಯ ಕೆಲಸವೊಂದನ್ನು ಸಾಧಿಸಿದ ರಂಗಮ್ಮ ಈ ದಿನ ಸುಬ್ಬುಕೃಷ್ಣಯ್ಯನ
ಬರವನ್ನು ಇದಿರು ನೋಡುತ್ತಿದ್ದರು. ಪ್ರತಿ ಸಲವೂ ಪ್ರತಿಯೊಂದು ಕರಾರು ಪತ್ರ
ವನ್ನೂ ಸುಬ್ಬಕೃಷ್ಣಯ್ಯನಿಗೆ ತೋರಿಸಿ, ಓದಿಸಿ ಕೇಳಿ, 'ಸರಿಯಾಗಿದೆ' ಎಂದು ಆತನ
ಒಪ್ಪಿಗೆ ಪಡೆದ ಹೊರತು ಅವರಿಗೆ ಸಮಾಧಾನವಿರುತ್ತಿರಲಿಲ್ಲ.
"ನಾಣೀ, ಏ ನಾಣೀ ..." ಎಂದು ಮೀನಾಕ್ಷಮ್ಮನ ಮಗನನ್ನು, ಓಣಿಯಲ್ಲಿ
ನಿಂತುಕೊಂಡು, ರಂಗಮ್ಮ ಕರೆದರು.
“ಊಟ ಮಾಡ್ತಾ ಇದಾನೆ ರಂಗಮ್ನೋರೆ," ಎಂದು ವಠಾರಕ್ಕೆಲ್ಲ ಕೇಳಿಸುವ
ಹಾಗೆ ಮೀನಾಕ್ಷಮ್ಮ ಉತ್ತರ ಕೊಟ್ಟಳು.
"ಇಲ್ಲಿ ಬಾಮ್ಮಾ ಸ್ವಲ್ಪ."
ಮೀನಾಕ್ಷಮ್ಮನನ್ನೇ ರಂಗಮ್ಮ ಕರೆದರು. ಆಕೆ ಹತ್ತಿರ ಬರುತ್ತಲೆ ಅವರೆಂದರು;
"ನಿನ್ನ ಯಜಮಾನರು ಮನೆಗೆ ಬಂದಿಲ್ಲ, ಅಲ್ವೆ?"
"ಇನ್ನು ಎಂಟುವರೇನೇ ಇಲ್ಲ."
"ಹೌದು ಹೌದು."
ಒಂಭತ್ತು ಘಂಟೆಗೆ ಶೆಟ್ಟರ ಅಂಗಡಿ ಬಾಗಿಲು ಹಾಕುತ್ತಿದ್ದರು. ಅನಂತರ
ಹೊರಟ ಸುಬ್ಬುಕೃಷ್ಣಯ್ಯ ಮನೆ ಸೇರುತ್ತಿದ್ದುದು ಒಂಭತ್ತೂವರೆಯ ಸುಮಾರಿಗೆ.
ಗಂಡ ಹೆಂಡಿರ ಊಟವೇ ದೀಪ ಆರುವುದಕ್ಕೆ ಮುಂಚೆ ಆ ಮನೆಯಲ್ಲಿ ನಡೆಯುತ್ತಿದ್ದ
ಕೊನೆಯ ಕೆಲಸ, ಊಟವಾದ ತಕ್ಷಣ ಅವರು ಮಲಗಿಬಿಡುತ್ತಿದ್ದರು...
ಏನು ವಿಶೇಷ-ಎಂದು ಕೇಳಬಹುದಾಗಿತ್ತು ಮೀನಾಕ್ಷಮ್ಮ, ಅದು ಗೊತ್ತೇ
ಇದ್ದುದರಿಂದ ಆಕೆ ಕೇಳಲಿಲ್ಲ. ತನ್ನ ಯಜಮಾನರ ವಿಷಯವಾಗಿ ರಂಗಮ್ಮ ತೋರು
ತ್ತಿದ್ದ ವಿಶ್ವಾಸದಿಂದ ಮೀನಾಕ್ಷಮ್ಮನಿಗೆ ಸಾಭಾವಿಕವಾಗಿಯೇ ಹೆಮ್ಮೆ.
ಒಳಗಿನಿಂದ ನಾಣಿಯ ಸ್ವರ ಕೇಳಿಸಿತು:
"ಅಮ್ಮಾ ಬಾ ಅಮ್ಮ."
"ಹೋಗಮ್ಮ, ನಿನ್ನ ಕುಮಾರ ಕಂಠೀರವ ಕೂಗ್ತಿದ್ದಾನೆ. ನಿನ್ನ ಯಜಮಾನರು
ಬಂದ್ಕೂಡ್ಲೆ ಸ್ವಲ್ಪ ಕಳಿಸ್ಕೊಡಮ್ಮ."
"ಹೂಂ" ಎಂದು ಮೀನಾಕ್ಷಮ್ಮ ಹೊರಟು ಹೋದಳು.
ರಂಗಮ್ಮ ಮಾರನೆಯ ದಿನ ಬೆಳಗ್ಗೆ ಮಾಡಬೇಕಾದ ಕೆಲಸದ ವಿಷಯವನ್ನು
ಯೋಚಿಸಿದರು. ಅರ್ಧ ಸೇರಿನಷ್ಟು ಸುಣ್ಣ ಯಾವುದೋ ಕಾಲದ್ದು ಮಿಕ್ಕಿತ್ತು
ಅದನ್ನೇ ಒಂದಿಷ್ಟು ಕಲಕಿ ನೀರು ಮಾಡಿದರಾಯಿತೆಂದುಕೊಂಡರು. ಹಿಂದೆ ಮಗ
ಮನೆಯಲ್ಲೇ ಇದ್ದಾಗ, ಮನೆಗಳು ತೆರವಾದಾಗಲೆಲ್ಲ ಎಷ್ಟೋ ಸಾರೆ ಆತನೇ ಗೋಡೆಗೆ
ಸುಣ್ಣ ಬಳಿಯುತ್ತಿದ್ದ. ಆ ಕೆಲಸವನ್ನೀಗ ರಂಗಮ್ಮ ಮಾಡುವಂತಿರಲಿಲ್ಲ, ಬೀದಿಯ
ಆಚೆಗಿನ ಎದುರು ಮನೆಗೆ ಮುಸುರೆ ತಿಕ್ಕಲು ಒಬ್ಬಾಕೆ ಬರುತ್ತಿದ್ದಳು. ಆಕೆಗೆ ಹೇಳಿ
ಕೆಲಸ ಒಪ್ಪಿಸಬೇಕು; ಒಂದು ನಾಲ್ಕಾಣೆ ಕೂಲಿ ಕೊಟ್ಟರಾಯ್ತು-ಎಂದು ಅವರು

ನಿರ್ಧರಿಸಿದರು.
ಹೇಗೆ ಹೊತ್ತು ಕಳೆಯಬೇಕೆಂದು ತೋಚದೆ ತಮ್ಮ ಬಾಗಿಲೆಳೆದುಕೊಂಡು
ರಂಗಮ್ಮ ಹೊರ ಅಂಗಳಕ್ಕೆ ಬಂದರು. ಮಹಡಿಯ ಮೇಲಿನ ಮೊದಲ ಕೊಠಡಿಯಲ್ಲಿ
ಓದುವ ಹುಡುಗರು ಅದೇನೋ ಮಾತನಾಡುತ್ತ ನಗುತ್ತ ಗದ್ದಲವೆಬ್ಬಿಸುತ್ತಿದ್ದರು.
ಪ್ರಯಾಸಪಟ್ಟು ಮಹಡಿಯ ಮೇಲೇರಿದರು ರಂಗಮ್ಮ. ಸದ್ದು ಮಾಡಬಾರ
ದೆಂದು ಅವರೆಷ್ಟು ಪ್ರಯತ್ನ ಪಟ್ಟರೂ ಉಸಿರಿಗಾಗಿ ಏದಾಟ, ಗಂಟಲಿನಿಂದ ಹೊರಡು
ತ್ತಿದ್ದ ನರಳಿಕೆಯ ಸ್ವರ, ಮಹಡಿ ಏರಿದ ಮೇಲೆ ನಡೆಗೋಲಿನ ಟಕ್ ಟಕ್ ಮುಂಚಿತ
ವಾಗಿಯೇ ಅವರ ಆಗಮನದ ಸಂದೇಶವನ್ನು ಹುಡುಗರಿಗೆ ಮುಟ್ಟಿಸಿದುವು. ಉಪಾ
ಧ್ಯಾಯರು ತರಗತಿಗೆ ಬಂದೊಡನೆ ಒಮ್ಮೆಲೆ ತಣ್ಣಗಾಗುವಂತೆ ಸದ್ದೆಲ್ಲ ಅಡಗಿ
ಹೋಯಿತು.
ಸುಧಾರಿಸಿಕೊಂಡು ಹೊರಗಿನಿಂದಲೇ ರಂಗಮ್ಮ ಹೇಳಿದರು:
"ಪರಮೇಶ್ವರಪ್ಪ, ಅದೇನೋ ಗಲಾಟೆ? ಮನಸ್ನಲ್ಲೇ ಓದ್ಕೋಬಾರ್ದೇನೊ..."
ಒಳಗಿನಿಂದ ಉತ್ತರ ಬರಲಿಲ್ಲ.
ಅದರ ಪಕ್ಕದ ಕೊಠಡಿಗೆ ಬೀಗ ಹಾಕಿತ್ತು.
ಮೂರನೆಯ ಕೊಠಡಿ ಮನೆಯ ಬಾಗಿಲಲ್ಲಿ ರಾಧೆಯ ತಾಯಿ ನಿಂತಿದ್ದಳು.
"ಊಟ ಆಯ್ತೇ?" ಎಂದು ರಂಗಮ್ಮ ಮುಂದೆ ಹೋಗುತ್ತಾ ಕೇಳಿದರು.
"ಹುಡುಗರು ಕೂತಿದಾರೆ."
ಉಣ್ಣಲು ಕುಳಿತಿದ್ದ ಜಯರಾಮು ತುತ್ತು ಅನ್ನವನ್ನು ಬಾಯಿಯಲ್ಲಿರಿಸಿ
ಕೊಂಡೇ ಕೇಳಿದ:
"ಕೊನೇ ಮನೆಗೆ ಯಾರೋ ಬಂದ್ರು, ಅಲ್ವೆ ರಂಗಮ್ನೋರೆ?"
"ಹೂನಪ್ಪಾ. ನಾಳೆ ಬರ್ತಾರೆ."
ಜಯರಾಮುವಿನ ತಾಯಿ ಕ್ಷೀಣ ಸ್ವರದಲ್ಲಿ ಹೇಳಿದಳು:
"ಕೆಳಗೆ ಮನೆ ಖಾಲಿಯಾದಾಗ ಕೊಡ್ತೀನೀಂತ ಹಿಂದೆ ಹೇಳಿದ್ರಿ."
"ಆದರೆ ನೀವು ಕೇಳ್ಲೇ ಇಲ್ಲ."
"ಅವರು ಇರ್ಲಿಲ್ಲಾಂತ__"
"ನಾನು ಅದಕ್ಕೇ ಸುಮ್ಮನಾದೆ."
ಆ ಪ್ರಸ್ತಾಪದಿಂದ ರಂಗಮ್ಮನ ಮನಸ್ಸಿನಲ್ಲಿ ಕಸಿವಿಸಿಯಾಯಿತು. ಅವರು
ಹಾಗೆ ಹೇಳಿದ್ದುದು ನಿಜ. ಆದರೆ ಈ ಮನೆಯವರು ಈಗ ಕೊಡುವುದು ಹದಿನಾರೇ
ರೂಪಾಯಿ. ಕೆಳಗೆ ಬಂದರೆ ಜಾಸ್ತಿ ಕೊಡಬೇಕು. ಅಲ್ಲದೆ, ಇವರು ಕೆಳಕ್ಕೆ ಬಂದ
ಮೇಲೆ ಮಹಡಿಯ ಮೇಲಿನ ಕೊಠಡಿ ಮನೆಗೆ ಸುಲಭವಾಗಿ ಬಾಡಿಗೆದಾರ ಸಿಗುವ
ಸಂಭವವೂ ಇರಲಿಲ್ಲ. ಇದೆಲ್ಲ ಮನಸ್ಸಿನ ಆಳದಲ್ಲಿ ಇದ್ದುದರಿಂದಲೇ ರಂಗಮ್ಮ ಆ
ಯೋಚನೆ ಮಾಡಿರಲಿಲ್ಲ.
ಬಾಗಿಲಲ್ಲಿ ನಿಂತಿದ್ದ ಆ ತಾಯಿ ಸುಮ್ಮನಿದ್ದುದನ್ನು ಕಂಡು, ಆ ಸಂದರ್ಭದಲ್ಲೇ

ನಾದರೂ ಒಳ್ಳೆಯ ಮಾತನಾದಲು ರಂಗಮ್ಮ ಬಯಸಿದರು.
"ಅದಕ್ಕೆನಂತೆ ಈಗ? ಇನ್ನೊಂದ್ಸಲ ಖಾಲಿಯಾದಾಗ ನಿಮಗೇ ಕೊಡ್ತೀನಿ."
ಒಳಗೆ ಮೂಲೆಯ ಬಚ್ಚಲಲ್ಲಿ ಕೈ ತೊಳೆಯುತ್ತಿದ್ದ ಜಯರಮು ಹೇಳಿದ:
"ಇನ್ನೊಂದ್ಸಲ ಖಾಲಿಯಾದಾಗ?ಬೇರೆ ಯಾರನ್ನ ಕಳಿಸ್ಬೇಕೊಂತೆ ಮಾಡಿದೀರಿ
ರಂಗಮ್ನೇರೆ!"
ಕೆಟ್ಟ ಹುಡುಗ 'ಕಳಿಸು'ವ ಮಾತನ್ನಾಡಿ ನಾರಾಯಣಿಯ ನೆನಾಪು ಹುಟ್ಟಿಸಿದ.
"ಅದೆಂಥ ಮಾತೋ..." ಎಂದಳು ತಾಯಿ, ಮಗನನ್ನುದೇಶಿಸಿ, ಬೇಸರದ
ಧ್ವನಿಯಲ್ಲಿ.
"ನೋಡು, ನೋಡು-ಹ್ಯಾಗೆ ಆದಡ್ತನೇಂತ.ಬರ್ತ ಬರ್ತ ಯಾಕೋ ಅತಿ
ಆಘೋಯ್ತುಮ್ಮ ನಿನ್ಮಗಂದು," ಎಂದು ರಂಗಮ್ಮ ನೊಂದ ಧ್ವನಿಯಲ್ಲಿ ಅಂದರು.
ಮತ್ತೆ ಅಲ್ಲಿರಲು ಮನಸ್ಸಾಗದೆ ಹಿಂತಿರುಗಿ ಹೊರಟರು.
"ಬರ್ತೀನಮ್ಮ."
"ಹೊಂ ರಂಗಮ್ಮ್ನೋರೆ."
"ಕಾಗದ ಬಂದಿತ್ತೇನು ನಿಮ್ಮ ಯಜಮಾನರ್ದು? ಯಾವೂರಲ್ಲಿದಾರೆ ಈಗ?"
"ಹೂದ ವಾರ ದವಣಗೆರೆಯಿಂದ ಬ್ಂದಿತ್ತು."
"ಯಾವತ್ತು ಬರ್ತಾರಂತೆ?"
"ಈ ತಿಂಗಳ ಕೊನೇಲಿ ಬರ್ತಿನೀಂತ ಬರೆದಿದಾರೆ.
"ಚಂದ್ರಶೆಖರಯ್ಯನ ಕೊಠಡಿ ದಾಟುತ್ತ ರಂಗಮ್ಮ ಕೇಳಿದರು:
"ಏನು ಈತ ಊರಲ್ಲೆ ಇಲ್ವೋ ಹ್ಯಾಗೆ?"
"ನಿನ್ನೆಯಿಂದ ಬಂದಿಲ್ಲ.ಇಲ್ಲಂತ ತೋರುತ್ತೆ."
"ಇವನ್ನೊಬ್ಬ ಮನುಷ್ಯ.ಅದ್ಯಾಕೆ ಹೀಗಿದಾನೋ....
"ಮೆಟ್ಟಲು ಇಳಿಯತೊಡಗುತ್ತ ರಂಗಮ್ಮ ಹೇಳಿದರು;
"ಹೊಂ.ಬರ್ತಿನಮ್ಮ,ಊಟ ಮುಗಿಸಿ ದೀಪ ಆರಿಸಿ ಮಲಕೊಂಡ್ಬಿಡಿ.
"ಆ ಮಾತಿಗೆ ಉತ್ತರ ಬರಲಿಲ್ಲ. ಧಡಾರನೆ ಬಾಗಿಲು ಹಾಕಿದ ಸದ್ದು ಮಾತ್ರ
ಕೇಳಿಸಿತು.
ಬಲು ನಿಧಾನವಾಗಿ ರಂಗಮ್ಮ ಇಳಿಯುತ್ತಿದ್ದರು. ಇಪ್ಪತ್ತೈದು ವರ್ಷಗಳ
ಹಿಂದೆ ಅವರ ಗಂಡ ಕೃಷ್ಣಪ್ಪನವರು ಆ ಮಹಡಿ ಕಟ್ಟಿಸುತ್ತಿದ್ದ ಕಾಲ. ಆಗ ಎಷ್ಟೊಂದು
ಸುಲಭವಾಗಿ ಅವರು ಹತ್ತಿ ಇಳಿಯುತ್ತಿದ್ದರು! ಆಗಲೆ ಅವರಿಗೆ ನಾಲ್ವತ್ತು ವರ್ಷ
ವಯಸ್ಸು.ದೊಡ್ಡವರಾಗಿದ್ದ ಮೂವರು ಮಕ್ಕಳ ತಾಯಿ. ಆದರು ಅವರು ದೃಢ
ಕಾಯಕರಾಗಿದ್ದರು.ದಣಿವು ಎಂಬುದನ್ನೇ ಕಂಡಿರಿಯದ ದೇಹ ಅವರದು.
ಈಗ, ಒಮ್ಮೆ ಮಹಡಿ ಸಂದರ್ಶನ ಮಾಡಿಬರುವುದೆಂದರೆ ತಿರುಪತಿ ಬೆಟ್ಟವನ್ನು
ಏರಿ; ಇಳಿದ ಹಾಗೆ ಅವರಿಗೆ ಭಾಸವಾಗುತಿತ್ತು.
ಅಂಗಳ ತಲಪಿದ ಮೇಲೆ ರಂಗಮ್ಮ ಊರುಗೋಲನ್ನು ಆಧರಿಸಿ ದೇಹವನ್ನು
ನೇರೆಗೊಳಿಸಿ ಕ್ಷಣ ಕಾಲ ನಿಂತು, ತಂಪಾದ ಗಾಳಿಯನ್ನು ಒಳಕ್ಕೆಳೆದುಕೊಂಡರು;
ಬೀದಿಯ ಮೇಲಕ್ಕೂ ಕೆಳಕ್ಕೊ ಒಮ್ಮೆ ನೋಡಿದರು. ಮಹಡಿಯನ್ನೇರುವುದಕ್ಕೆ
ಮುಂಚೆ ಅವರ ಮನಸ್ಸು ಹಾಯಾಗಿತ್ತು. ಆದರ ಮೇಲೆ ನಡೆದ ಸಂಭಾಷಣೆ, ಏರಿ
ಇಳಿದ ಆಯಾಸ,ಎರಡೂ ಸೇರಿ ಅವರ ನೆಮ್ಮದಿಗೆ ಭಂಗ ತಂದಿದ್ದುವು.
ಎರಡು ನಿಮಿಷ ಆ ಕತ್ತಲಲ್ಲಿ ಒಬ್ಬರೇ ತಮ್ಮ ವಠಾರವನ್ನು ನೋಡುತ್ತ ತಂಪಾದ
ಗಾಳಿಯನ್ನು ಸೇವಿಸಿದ ಮೇಲೆ ಮನಸ್ಸು ಪ್ರಸನ್ನವಾಯಿತು.
ಏನೇನೋ ಬಯಕೆಗಳು ಅವರ ಹೃದಯದಿಂದ ಚಿಮ್ಮಿ ಬಂದುವು. ತಮ್ಮ
ಮಗನನ್ನು ಆ ಕ್ಷಣವೆ ನೋಡುವ ಹಂಬಲ ಕಿರಿದಾಗಿ ಮೂಡಿ,ಒಮ್ಮೆಲೆ ಬಲವಾಗಿ
ಬೆಳೆಯಿತು . ನಿತ್ಯ ರೋಗಿಯಾದ ಆ ಸೊಸೆ....ಎಳೆಯ ಮಕ್ಕಳಿಬ್ಬರು...ಗಂಡಂದಿರ
ಜತೆಯಲ್ಲಿದ್ದ ಇಬ್ಬರು ಹೆಣ್ಣುಮಕ್ಕಳ ನೆನಪಾಯೆತು...ಅವರ ಸಂತಾನ.ಲಕ್ಷ್ಮಿಯ
ಪುಟ್ಟ ಮಗು ಎಷ್ಟು ಮುದ್ದಾಗಿದ್ದ! ಅಜ್ಜಿಯದೇ ರೂಪು ಎಂದಿದ್ದರು ಎಲ್ಲರೂ.
ಅದೇನು ರುಪವೋ ತನ್ನದು...ಯುವತಿಯಾಗಿದ್ದಾಗ ಸಾಕಷ್ಟು ರೂಪವತಿಯೆಂದೇ
ಹೆಸರುವಾಸಿಯಾಗಿದರಲ್ಲವೆ? ಕಳೆದ ಸಾರೆ ಲಕ್ಷ್ಮಿ ಬಂದಾಗ ಆ ಪುಟ್ಟಾ ಕೂಸು ಹೇಗೆ
ತನಗೇ ಅಂಟಿಕೊಂಡಿತ್ತು! ಒಂದು ಕ್ಷಣವೂ ಬಿಟ್ಟಿರುತ್ತಿರಲಿಲ್ಲ ತನ್ನನ್ನು. ಸಣ್ಣ
ಮಗುವಿಗೆ ಕಜ್ಜಿಯಾಗಿದೆ ಎಂದು ಕಳೆದ ತಿಂಗಳು ಲಕ್ಷ್ಮಿ ಕಾಗದ ಬರೆಸಿದ್ದಳು. ಈಗ
ಹೇಗಿದೆಯೊ?...ದೊಡ್ಡ ಮಗಳನ್ನು ನವರಾತ್ರಿಯ ಹೊತ್ತಿಗಾದರೂ ಈ ಸಲ ಕರೆಸ
ಬೇಕು.ಆಗ ರಜಾ ತಗೆದುಕೊಂಡು ಮಗನೂ ಬರಬಹುದು.
ರಂಗಮ್ಮ ವಠಾರದತ್ತ ನೋಡಿದರು.ವಠಾರದಲ್ಲೇ ಅತಿ ದೊಡ್ಡಾದಾಗಿದ್ದ
ಮುಂಭಾಗದ ಎರಡು ಕಿಟಕಿಗಳಿಂದಲೂ ವಿದ್ಯುತ್ ಬೆಳಕು ಮಂದವಾಗಿ ಹೊರಬರು
ತ್ತಿತ್ತು.ಉಳಿದ ಮನೆಗಳಿಗೆಲ್ಲ ಇದ್ದುದು ಪುಟ್ಟ ಗೂಡು ಕಿಟಕಿ.
ಉಪಾಧ್ಯಾಯರ ಕಿಟಕಿಯತ್ತ ರಂಗಮ್ಮ ಸರಿದರು.
ಒಳಗೆ ಲಕ್ಷ್ಮೀನಾರಾಯಣಯ್ಯನ ಹೆಂಡತಿ ಮಕ್ಕಳನ್ನು ಮಲಗಿಸಿ ಹಸುಗೂಸಿಗೆ
ಮೊಲೆ ಹಾಲು ಕುಡಿಸುತ್ತ ಒರಗಿದ್ದಳು.ಕಿಟಿಕಿಯ ಬಳಿ ಯಾರೋ ಸರಿದಂತಾಗಲು,
ಆಕೆ ಅವಸರವಾಗಿ ಎದೆಯನ್ನು ಸೆರಗಿನಿಂದ ಹಡೆದುಕೊಂಡು "ಯಾರು?"ಎಂದಳು.
ಹೊರಗಿನಿಂದ ರಂಗಮ್ಮನ ಸ್ವರ ಕೇಳಿಸಿತು.
"ನಾನು ಕಣೆ ಮೇಷ್ಟ್ರಿನ್ನೂ ಬಂದಿಲ್ವಾ?"
"ಬಂದಿದ್ರು ರಂಗಮ್ನೋರೆ.ಅದೇನೋ ಸಭೆ ಇದೇಂತ ವಾಪ್ಸು ಹೋದ್ರು."
"ಎಲ್ಲಿ ನಿನ್ನ ನಾದಿನಿ?"
"ಅಡುಗೆ ಮನೇಲಿದೀನಿ ರಂಗಮ್ನೋರೆ...."ಎಂದು ಸುಮಂಗಳಾ ಒಳಗಿನಿಂದಲೇ
ಅಂದಳು.
"ಸುಮ್ನೆ ಕೊಗ್ದೆ ಅಗಲಿ, ಕೆಲಸ ಆಗಲಿ, "ಎಂದು ರಂಗಮ್ಮ ಇನ್ನೊಂದು
ಕಿಟಿಕಿಯತ್ತ ತೆರಳಿದರು.
ಹಾಗೆ ರಂಗಮ್ಮ ರಾತ್ರಿ ಹೊತ್ತು ಇನಕಿ ನೋಡುವುದೇನೂ ಯಾರಿಗೂ ಹೊಸ
ತಾಗಿರಲಿಲ್ಲ. ಎದುರು ಮನೆಯ ಕಿಟಕಿಯ ಬಳಿಯಿಂದಲೂ ರಂಗಮ್ಮ ಮಾತನಾಡು
ತ್ತಿದದು ಉಪಧ್ಯಾಯರು ಹೆಂಡತಿಗೆ ಕೇಳಿಸುತ್ತಿತ್ತು.
"ಇನಸ್ಪೆಕ್ಟ್ರು ಬಂದಿಲ್ವಾ ಇನ್ನೂ?"
"ಇಲ್ಲ ಕಣ್ರೀ "
ಅದು ಪೋಲೀಸನ ಹೆಂಡತಿ ಸರೋಜಮ್ಮನ ಸ್ವರ.
"ಹುಡುಗ್ರಿಗೆಲ್ಲಾ ಊಟ ಆಯ್ತೇನು?"
" ಮಲಕ್ಕೊಂಡ್ಬಿಟ್ಟಿವೆ ಆಗ್ಲೇ".
"ಏನು ಮಾಡ್ದೆ ಅಡುಗೆ?"
"ಏನೂ ಇಲ್ಲ್ ರಂಗಮ್ಮೋರೆ....ಮಧ್ಯಾಹ್ನ್ ದ್ದೇ ಇತ್ತು ಸ್ವಲ್ಪ...."
"ಆಗಲೀಮ್ಮ ಬರ್ತೀನಿ "
ರಂಗಮ್ಮ ಬೇರೆ ಬಾಗಿಲುಗಳ ಬಳ್ಳಿ ಬಂದರು. ಬಾಗಿಲು ಮುಚ್ಚಿದ್ದ ಕಡೆ ಕಿಟಕಿ
ಗಳ ಮೂಲಕ ಮಾತನಾಡಿದರು.
-"ಮಲಕ್ಕೊಂಡ್ಬಿಟ್ಯಾ ರಾಜಮ್ಮ?"
-"ಹುಡುಗರು ಇನ್ನೂ ಓದ್ತಾನೆ ಇದಾರೊ?ಓದೀಪಾ ಚ್ಚೆನ್ನಾಗಿ ಓದಿ."
-"ಏನು ಮೀನಾಕ್ಷೀ ...ಎಲ್ಲಿ ನಿನ್ನ ಗಂಡ ಬರೋದು ಹೋಗೋದು ಗೊತ್ತೇ
ಆಗಲ್ವೆ..."
-"ಏನಾಮ್ಮ, ಯಜಮಾನ್ರಿಂದ ಕಾಗ್ದ ಇದೆಯೋ?"
-"ಹಿಟ್ಟು ರುಬ್ಬಿದ್ದಾಯ್ತೆ ಕಮಲಮ್ಮ?"
-"ಇನ್ನೂ ಸವಾರಿ ಬಂದಿಲ್ವೆ ಪದ್ಮಾವತಿ ?"
-"ಮಲಕ್ಕೊಂಡ್ಬಿಟ್ಲೇನು ಅಹಲ್ಯಾ? ಎಲ್ಲಿ ಮಗ? ಅಂಗಡಿ ಬೀದಿಗೆ
ಹೋದ್ನೆ?"
ರಂಗಮ್ಮ ಅಲ್ಲಿಂದ ಮುಂದಕ್ಕೆ ಹೋಗಲಿಲ್ಲ. ಒಂದು ಖಾಲಿ ಮನೆ,ಆ ರಾತ್ರೆಯ
ಮಟ್ಟಿಗೆ.ನಾರಾಯಣಿ ಇದದ್ದು.ಇನ್ನೊಂದು ಮಿನಾಕ್ಷಮ್ಮನ ಮನೆ. ಸುಬ್ಬು
ಕೃಷ್ಣಯ್ಯ ಇನ್ನೂ ಬಂದಿರಲಿಲ್ಲ.
ತಮ್ಮ ಮನೆಗೇ ರಂಗಮ್ಮ ವಾಪಸು ಬಂದು ಕೈಕಾಲು ತೊಳೆದು, ಗೋಡ
ಗೊರಗಿ ಕುಳಿತು,ದೇವರ ಹೆಸರನ್ನು ಜಪಿಸತೊಡಗಿದರು... ನಾಲಿಗೆ ಮೌನವಾಗಿ ದೇವರ
ಹೆಸರನ್ನು ತೊದಲುತ್ತಿದ್ದರೂ ಯೋಚನೆ ವಠಾರದ ಬೇರೆ ಬೇರೆ ಸಂಸಾರಗಳ ಬಳಿ
ಸುಳಿಯತ್ತಲೇ ಇತ್ತು.. ಅಷ್ಟೊಂದು ಜನರೆಡೆಯಲ್ಲಿ ತಾವು ಏಕಾಕಿನಿ ಎಂಬ ಭಾವನೆ
ಅವರಲ್ಲಿ ಮೂಡಲಿಲ್ಲ.
ಅವರು ಬಾಗಿಲನ್ನು ಅಡ್ಡ ಮಾಡಿದರು. ಯಾರೋ ಒಳಕ್ಕೆ ಹಾದು ಒಳಕ್ಕೆ ಹಾದು ಒಣಿಗಿಳಿದು
ನಡೆದ ಹಾಗೆ ಭಾಸವಾಯಿತು. ಚಪ್ಪಲಿಯ ಕ್ರಮಬದ್ಧ ನಡಿಗೆಯ ಸಪ್ಪಳ. ಸುಬ್ಬು
ಕೃಷ್ಣಯ್ಯನೇ ಇರಬೇಕೆ೦ದು ರ೦ಗಮ್ಮ ಊಹಿಸಿದರು.
ಊಹೆ ಸರಿಯಾಗಿತ್ತು, ಐದು ನಿಮಿಷಗಳಲ್ಲೆ, ಅಡ್ಡ ಪ೦ಚೆಯುಟ್ಟ ಎದೆಯ
ಮೇಲೋ೦ದು ಅ೦ಗವಸ್ತ್ರ ಹಾಕಿಕೊ೦ಡು ಸುಬ್ಬು ಕೃಷ್ಣಯ್ಯ ಒಳಕ್ಕೆ ಬ೦ದ.
"ಕರೆದಿರ೦ತೆ."
"ಹೊನಪ್ಪಾ,ಬಾ...."
"ಯಾರೋ ಬಡವರ ಬರ್ತಾರ೦ತೆ ನಾಳೆ"
"ಹೌಹೌದು. ಅದಕ್ಕೆ ನಿನ್ನ ಕರೆದ,"
ಸುಬ್ಬುಕೃಷ್ಣಯ್ಯ ಕುಳಿತು ಸಿದ್ಧನಾದ. ರಂಗಮ್ಮ ಹಾಸಿಗೆಯ ಸುರುಳಿಯ ಕೆಳಗೆ
ಮಡಚಿ ಇರಿಸಿದ ಕರಾರು ಪತ್ರವನ್ನು ಹೊರ ತೆಗೆದು ಆತನ ಕೈಗಿತ್ತರು. ವಿದ್ಯುದ್ದೀಪದ
ಬೆಳಕು ಸಾಲದೆ ಹೋದರೂ ಸ್ವಲ್ಪ ಕಷ್ಟಪಟ್ಟು ಆತ ಓದಿ ಹೇಳಿದ. ಕಿವಿಗೊಟ್ಟು
ಕೇಳಿದ ಮೇಲೆ ರ೦ಗಮ್ಮ ಪ್ರಸ್ನಿದರು:
"ಸರಿಯಾಗಿದೆ ತಾನೆ?"
"ಓಹೋ. ಸರಿಯಾಗದೆ," ಅಲ್ಲಾ?"
"ಚೆನ್ನಾಗಿಯೇ ಇದೆ."
"ಒಳ್ಳೆಯವನೂಂತ್ಲೇ ತೋರುತ್ತಪ್ಪಾ."
ಮೊದಲ ನೋಟಕ್ಕೇ ಹಾಗೆ ತೀರ್ಮಾನಕ್ಕೆ ಬಂದು ಅಂತಹ ಪ್ರಮಾಣ ಪತ್ರ ಪತ್ರ
ರಂಗಮ್ಮ ಕೊಟ್ಟದು ಅದೇನೂ ಹೊಸತಾಗಿರಲಿಲ್ಲ.
ಶ೦ಕರನಾರಯಣ್ಣಯ್ಯ ತಮಾಷೆಯಾಗಿ ಆಡಿದ ಮಾತುಗಳು ನೆನಪಿಗೆ ಬ೦ದು
ರ೦ಗಮ್ಮ ನಸುನಕ್ಕರು.
"ಮಾತು ಎಷ್ಟು ಚೆನಾಗಿ ಆಡ್ತಾನೆ ಅಂತೀಯಾ."
ಸುಬ್ಬಕೃಷ್ಣಯ್ಯನಿಗೆ ಆಗಲೇ ಬೇಸರ ಬಂದಿತ್ತು. ಚುರು ಚುರೆನ್ನುತ್ತಿತ್ತು
ಹಸಿದ' ಹೊಟ್ಟೆ. ದಣಿದಿದ್ದ ವಿಶ್ರಾ೦ತಿಯನ್ನು ಯಾಚಿಸುತ್ತಿತ್ತು.
"ನಾಳೆ ಬರ್ತಾರೆ ಅಲ್ವೆ?" ಎಂದ ಸುಬ್ಬಕೃಷ್ಣಯ್ಯ, ಮಾತು ಮುಗಿಸ ಬಯ
ಸುತ್ತಾ.
ಹೂಂ. ನಾಳೇನೆ."
ಸುಬ್ಬುಕೃಷ್ಣಯ್ಯ ಕಣ್ಣುಗಳು ಜಡವಾದುವು. ಆತ ಬಾಯಿ ಆಕಳಿಸಿ ಚಿಟಕೆ
ಹೊಡೆದ.
"ಆಗಲಿ ಹೋಗಪ್ಪಾ...ನಿನಗೂ ಆಯಾಸವಾಗಿದೆ. ಇಷ್ಟೇ. ಇಷ್ಟಕ್ಕೇ ಕರೆದೆ."
ಅಷ್ಟು ಹೇಳಿ ರಂಗಮ್ಮ, ಅಮೂರ್ಣವಾಗಿದ್ದ ಕೆಲಸವೂ ಮುಗಿದಂತಾಯಿತೆಂದು,
ಸ೦ತೃಪ್ತಿಯ ನಿಟ್ಟುಸಿರುಬಿಟ್ಟರು.
ಸುಬ್ಬುಕೃಷಯ್ಯ ಆ ಬಾಗಿಲಿ೦ದ ಹೊರಬಿದ್ದು ತನ್ನ ಬಾಗಿಲಿಗೆ ಹೊರಟ.
ರ೦ಗಮ್ಮನ ಮಾತುಗಳು ಆತನನ್ನು ಹಿ೦ಬಾಲಿಸಿದುವು.
"ಹತ್ತು ಘ೦ಟೆ ಆಗೊಃಯಿತ೦ತ ಕಾಣುತ್ತೆ. ಊಟ ಆದ್ಮೇಲೆ ಹೇಳಪ್ಪಾ.
ದೀಪ ಆರಿಸ್ತಿನಿ."
ಸುಬ್ಬುಕೃಷಯ್ಯ ಊತ್ತರವೀಯಲಿಲ್ಲ. ನೇರವಾಗಿ ತನ್ನ ಮನೆಯೋಳಕ್ಕೆ ಬ೦ದು
ತಟ್ಟೆಯ ಮು೦ದೆ ಕುಳಿತ.
ತಮ್ಮ ಬಾಗಲಿಗೆ ಆಗಣಿ ಹಾಕಲೆ೦ದು ರ೦ಗಮ್ಮ ಎದ್ದರು.
ಅಷ್ಟರಲ್ಲಿ ಹಿತ್ತಿಲ ಬಾಗಿಲನಾಚೆಯ ಕೊಚ್ಚೆ ಹಾದಿಯಿ೦ದ ಸ್ವರ ಕೇಳಿಸಿತು:
"ಕವಳಾತ್ತಾಯಿ ....ಆಮ್ಮಾ..."
ನಾಭಿಯಲ್ಲೇ ನಡುಕ ಹುಟ್ಟಿಸುವ೦ತಹ ವಿಕಾರ ಕರ್ಕಶ ಧ್ವನಿ.
ಮಧ್ಯಾಹ್ನದ ఒ೦ದು ತುತ್ತು ಅನ್ನ ಮಿಕ್ಕಿತ್ತು, ರಂಗಮ್ಮ ಅದನ್ನೆತ್ತಿಕೊ೦ಡು
ಓಣಿಯುದ್ದಕ್ಕೂ ಹೋಗಿ ಹಿತ್ತಿಲ ಬಾಗಿಲು ತೆಗೆದು ಭಿಕ್ಷುಕಿಗೆ ಹಾಕಿದರು.
ಒಳಬಂದು ಕೈ ತೊಳೆದು, ಹಾಸಿಗೆ ಹಾಸಿದ ಸ್ವಲ್ಪ ಹೊತ್ತಿನಲ್ಲಿ ಮೀನಾಕ್ಷಮ್ಮನ
ಕೀರಲು ಸ್ವರ ಕೇಳಿಸಿತು:
"ದೀಪ ಆರಿಸಿ ರಂಗಮ್ಮೊರೇ..."
ರಂಗಮ್ಮ ವಿದ್ಯುತ್ ಹಿಡಿಯನ್ನು ಮೇಲಕ್ಕೆ ತಳ್ಳಿದರು.
ಅದು ಟಿಕ್ ಸದು ಮಾಡಿತು. ದೀಪ ಆರಿಹೋಯಿತು.



ఒంಟಿ ಎತ್ತಿನ ಗಾಡಿಯಲ್ಲಿ ಶಂಕರನಾರಾಯಣಯ್ಯನ ಸ೦ಸಾರ ರಂಗಮ್ಮನ
ವಠಾರಕ್ಕೆ ಸಾಗಿ ಬಂತು. ಹೊರಗೆ ಹುಡುಗರು ನಡೆಸಿದ್ದ ಗದ್ದಲದೊಡನೆ ಸ್ಪರ್ಧಿಸು
ತ್ತಿದ್ದವನ ಹಾಗೆ ಗುಂಡಣ್ಣ ಗೊರಕೆ ಹೊಡೆಯುತ್ತ ನಿದ್ದೆ ಹೋಗಿದ್ದ, ರಾಜಮ್ಮ
ಮಗನನ್ನು ಎಬ್ಬಿಸಿದರು;
"ಏಳೋ ಗು೦ಡ. ರಂಗಮ್ಮ ಕೂಗ್ತಿದಾರೆ ನೋಡು."
ಮುಖಕ್ಕಿಷ್ಟು ನೀರು ಹನಿಸಿ ಹೊರಬ೦ದ ಗುಂಡಣ್ಣನಿಗೆ ಕತ್ತಲೆಯ ನಡು
ಹಾದಿಯ ಆಚೆ ಅ೦ಗಳಕ್ಕಿಳಿಯುತ್ತಿದ್ದ ಸಾಮಾನುಗಳು ಗೋಚರಿಸಿದುವು. ರಂಗಮ್ಮ
ಕರೆದುದರ ಉದ್ದೆಶವೂ ಅರ್ಥವಾಯಿತು. ಅವರ ಬಳಿಗೆ ಹೋಗದೆ ಗುಂಡಣ್ಣ

ನೇರವಾಗಿ ಅಂಗಳಕ್ಕೇ ನಡೆದ.
ರಂಗಮ್ಮನೂ ಅವನನ್ನು ಹಿಂಬಾಲಿಸಿಕೊಂಡು ಬಂದರು.
"ಗಾಡಿ ಬಂತು ಕಣೋ ಗುಂಡಣ್ಣ ."
ಯಾವ ಸಂದರ್ಭದಲ್ಲೂ 'ಸಹಾಯ ಮಾಡು' ಎಂದು ಬಾಯಿ ಬಿಚ್ಚಿ ಗುಂಡಣ್ಣ
ನಿಗೆ ಹೇಳಬೇಕಾದ್ದೇ ಇರಲಿಲ್ಲ.
ಮನೆಯ ಎದುರು ಭಾಗದ ಕಿಟಕಿಗಳಿಂದಲೂ ಮಹಡಿಯ ಮೇಲಿನಿಂದಲೂ
ವಠಾರದ ಸದಸ್ಯರ_ಹೆಂಗಸರು ಮಕ್ಕಳ_ಮುಖಗಳು ಕಾಣಿಸಿದುವು. ಹಿಂಭಾಗದಲ್ಲೂ
ಮನೆಯೊಡತಿಯರು ಬಾಗಿಲಿನಿಂದ ಹೊರಕ್ಕೆ ಕತ್ತು ಚಾಚಿ ಬೀದಿಯತ್ತ ನೋಡಿದರು.
ಕೆಲ ಹುಡುಗರು ಹುಲ್ಲು ಜಗಿಯುತ್ತ ನಿಂತಿದ್ದ ಎತ್ತಿನ ಬಳಿಯಲ್ಲೂ ಕೆಳಕ್ಕೆ ಇಳಿಸಿದ
ಸಾಮಾನುಗಳ ಸುತ್ತಲೂ ನಿಂತರು.
ಬೇರೆಯವರು ಮೊದಲು ಇದಿರ್ಗೊಂಡುದಾಯಿತೆಂದು ಸ್ಪಷ್ಟವಾದ ಮೇಲೆ
ರಂಗಮ್ಮ ತಲೆಯ ಮೇಲುಗಡೆ ಸೆರಗೆಳೆದು ಅಂಗಳಕ್ಕೆ ಇಳಿದರು.
"ಬಂದಿರಾ? ಬನ್ನೀಪ್ಪಾ..."
ಉಟ್ಟಿದ್ದುದು ಕಲಾಬತ್ತಿನ ಸೀರೆ_ಹಳೆಯದು. ತೊಟ್ಟಿದ್ದುದು ಚಿತ್ತಾರದ
ಅರಿವೆಯ ರವಕೆ_ಅಗಲವಾಗಿಯೇ ಇತ್ತು ಕತ್ತು. ನಡುವಿಗಿಂತ ನಾಲ್ಕೆಳೆ ಕೂದಲಷ್ಟು
ಎಡಕ್ಕೆ ಬೈತಲೆ ತೆಗೆದು ಜಡೆ ಹಾಕಿ ಆಕೆ ಹೆರಳು ಇಳಿಬಿಟ್ಟಿದ್ದಳು. ಎಡ ಕಂಕುಳಲ್ಲಿ,
ಬಣ್ಣ ಬಣ್ಣದ ಬಟ್ಟೆಯ ಲಂಗ ತೊಡಿಸಿದ್ದ ಪುಟ್ಟ ಹೆಣ್ಣುಮಗು. ಮೇಲು ತುಟಿ
ಯನ್ನು ಸ್ವಲ್ಪ ಕೊಂಕಿಸಿ, ತನಗೆ ಸ್ವಾಗತ ಬಯಸಿದವರನ್ನೆಲ್ಲ ನೋಡುತ್ತ ಅದು ಪಿಳಿ
ಪಿಳಿ ಕಣ್ಣು ಬಿಡುತ್ತಿತ್ತು...ವಠಾರದ ಹೆಂಗಸರೆಲ್ಲ ತಮ್ಮ ಜಾತಿಯ ಆ ಇನ್ನೊಬ್ಬಳನ್ನು
ನೋಡಿದರು.
ಆ ಸಾಮಾನುಗಳೋ? ಬಟ್ಟೆಬರೆಯನ್ನೆಲ್ಲ ಸುತ್ತಿ ದುಡ್ಡದಾಗಿ ಕಟ್ಟೀದ್ದ ಹಾಸಿಗೆ.
ಒಂದೆರಡು ಕಡೆ ನಜ್ಜುಗುಜ್ಜಾಗಿದ್ದ ಹಳೆಯದೊಂದು ಟ್ರಂಕು, ಪಾತ್ರೆ ಸರಂಜಾಮ
ಗಳನ್ನು ತುಂಬಿಕೊಂಡಿದ್ದೊಂದು ಗೋಣಿಚೀಲ. ದೇವರ ಪಟ. ಗಾಜು-ಪಿಂಗಾಣಿ
ಪಾತ್ರೆಗಳನ್ನು ಹೊತ್ತಿದ್ದ ತೊಟ್ಟಿಲು. ನಾಲ್ಕಾರು ಡಬ್ಬಗಳು, ಕಾಲು ಕಿತ್ತು ಜೋಡಿ
ಚಾಪೆಯಲ್ಲಿ ಸುತ್ತಿದ್ದ ಪೊರಕೆಗಳೆರಡು.
ರಂಗಮ್ಮನ ಮನಸ್ಸಿನಲ್ಲಿ ನೆನೆಪಿನ ಉಯ್ಯಾಲೆ ತೂಗುತ್ತಲೇ ಇತ್ತು. ಏಳು ವರ್ಷ
ಗಳ ಹಿಂದೆ ಒಂದು ಜಟಕಾ ಗಾಡಿಯಲ್ಲಿ ಬಂದಿದ್ದ ಒಂದು ಸಂಸಾರವನ್ನು ಈ ಸಂಸಾರ
ದೊಡನೆ ಹೋಲಿಸದೆ ಇರುವುದು ಸಾಧ್ಯವಿರಲ್ಲಿಲ್ಲ. ಆ ದಂಪತಿ ವಯಸ್ಸಿನಲ್ಲಿ ಇವರಿಗಿಂತ
ಸ್ವಲ್ಪ ಕಿರಿಯರು. ಆ ಹೆಂಗಸಿಗೆ ಬೆಡಗು ಬಿನ್ನಾಣವೇನೂ ಇರಲಿಲ್ಲ. ಆಕೆ ಸಂಕೋಚದ
ಮುದ್ದೆಯಾಗಿದ್ದಳು. ಕಂಕುಳಲ್ಲಿ ಒಂದು ವರ್ಷ ವಯಸ್ಸಿನ ಗಂಡು ಮಗುವಿತ್ತು.
ಸಾಮಾನುಗಳೂ ಇಷ್ಟಿರಲ್ಲಿಲ್ಲ. ಮುಖದ ಮೇಲಿನ್ನೂ ಮಗುತನವೇ ಇದ್ದಂತೆ ತೋರು
ತ್ತಿದ್ದ ಆ ಗಂಡ ಪ್ರತಿಯೊಂದು ಸಣ್ನ ಪುಟ್ಟ ವಿಷಯಕ್ಕೂ ಹೆಂಡತಿಯನ್ನೇ ಕೇಳು
ತ್ತಿದ್ದ. ನಾರಾಯಣಿ ಮತ್ತು ನಾರಾಯಣಿಯ ಗಂಡ...
ವಠಾರದ ಬೇರೆ ಹೆಂಗಸರೂ ಅಷ್ಟೇ. ತಮ್ಮ ತಮ್ಮ ತಕ್ಕಡಿಯಲ್ಲಿ ಹೊಸ
ಸಂಸಾರದ ಒಡತಿಯನ್ನೂ ಒಡಯನನ್ನೂ ತೂಗಿ ನೋಡಿದರು.
ಶಂಕರನಾರಾಯಣಯ್ಯನಿಗಿಂತ ಮುಂದಿದ್ದ ಆತನ ಹೆಂಡತಿ ತನ್ನ ಗಂಡ ಬಾಡಿಗೆಗೆ
ಹಿಡಿದಿದ್ದ ಮನೆಯ ಒಳಹೊಕ್ಕು ನೋಡಿದಳು. ಇದನ್ನು ಗಮನಿಸಿದ ಕೆಲ ಹೆ೦ಗಸರು
ಮುಖಚೇಷ್ಟೆ ಮಾಡದಿರಲಿಲ್ಲ. ಹೊಸಬಳು ಅಡುಗೆ ಮನೆ, ಛಾವಣಿ, ನೆಲ, ಗೋಡೆ
ಗಳ ಪರೀಕ್ಷೆ ಮಾಡಿದಳು. ನೆಲವನ್ನು ಸಾರಿಸಿತ್ತು. ಗೋಡೆಗೆ ಅಲ್ಲಿ ಇಲ್ಲಿ ಸುಣ್ಣದ
ನೀರಿನ ಸ್ಪರ್ಶವಾದಂತಿತ್ತು.
ಭಾರದ ಸಾಮಾನುಗಳನ್ನು ಹೊರುವ ಕೆಲಸವನ್ನೆಲ್ಲ ಗುಂಡಣ್ಣನಿಗೆ ಬಿಟ್ಟು
ಶಂಕರನಾರಾಯಣಯ್ಯ ಹಗುರವಾದೆರಡು ಡಬ್ಬಗಳನ್ನು ಹೊತ್ತು ಒಳಬಂದ.
"ಸುಣ್ಣ ಬಳೆದಿದೆ ತಾನೆ?"
“ಓಹೋ !"
ಆ ಉದ್ಗಾರದಲ್ಲಿ ಅಣಕವಿತ್ತು.
ಒಂಟಿ ಎತ್ತಿನ ಗಾಡಿಹೊರಟುಹೋಯಿತು. ಮನೆಯ ಸಾಮಾನುಗಳೆಲ್ಲ ಒಳಕ್ಕೆ
ಬಂದವು. ಸಾಮಾನುಗಳನ್ನು ಹಿ೦ಬಾಲಿಸಿದ ಹುಡುಗರು ಬಾಗಿಲ ಮುಂದೆ
ನೆರೆದರು.
ಸಾಮಾನುಗಳನ್ನಷ್ಟೇ ನೋಡಿ, ಬಂದಿರುವುದು ಬಡ ಸಂಸಾರವೇ ಎಂದು
ತೀರ್ಮಾನಿಸಲು ವಠಾರದ ಹೆಂಗಸರಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ.
ಅಹಲ್ಯಾ ಮತ್ತು ರಾಧಾ ಕಾಮಾಕ್ಷಿಯ ಮನೆ ಸೇರಿ ಚರ್ಚೆ ನಡೆಸಿದರು. ಚಿತ್ರ ಬರೆ
ಯುವವರ ಮನೆಯೆಂದರೆ ಹಾಗಿರಬಹುದು ಹೀಗಿರಬಹುದು ಎಂದು ಅಹಲ್ಯಾ ತರ್ಕಿಸಿ
ದ್ದಳು. ಅಂಥದೇನೂ ಈಗ ಕಾಣಲಿಲ್ಲವೆಂದು ಆಕೆಗೆ ನಿರಾಸೆಯಾಗಿತ್ತು.
ಇನ್ನೂ ಏನಾದರೂ ಕೆಲಸವಿದೆಯೇನೋ ಎಂಬಂತೆ ಗುಂಡಣ್ಣ ನಿಂತೇ ಇದ್ದ.
ಅವನ ವ್ಯಕ್ತಿತ್ವವನ್ನು ಅಷ್ಟರಲ್ಲೆ ಸೂಕ್ಷ್ಮ ನಿರೀಕ್ಷಣೆಯಿಂದ ಅಳೆದು ನೋಡಿದ್ದ ಶಂಕರ
ನಾರಾಯಣಯ್ಯ ಹೇಳಿದ:
"ಪರವಾಗಿಲ್ಲ. ಇನ್ನು ನಾವೇ ಇಟ್ಕೋತೀವಿ. ಹೋಗಿ."
ಗುಂಡಣ್ಣ ಹುಡುಗರೆಡೆಯಲ್ಲಿ ಹಾದಿ ಬಿಡಿಸಿಕೊಂಡು ಹೊರಟ. 'ಉಪಕಾರ
ವಾಯ್ತು,' 'ತೊಂದರೆ ಕೊಟ್ಟೆ' ಎಂದೆಲ್ಲ ಗುಂಡಣ್ಣನಿಗೆ ವಂದನಾರ್ಪಣೆ ಮಾಡುವ
ಅಗತ್ಯವಿಲ್ಲವೆಂದು ಶಂಕರನಾರಾಯಣಯ್ಯ ಸುಲಭವಾಗಿ ತೀರ್ಮಾನಿಸಿದ್ದ .
ಹುಡುಗರೆಲ್ಲ ಮುತ್ತಿಕೊಂಡುದರಿಂದ, ಗಾಳಿ ಬೆಳಕು ಓಡಲು ಅವಕಾಶ ದೊರೆ
ಯದೆ ಮಗು ಅಳತೊಡಗಿತು
ಅಷ್ಟರಲ್ಲೆ ರಂಗಮ್ಮ ಅಲ್ಲಿಗೆ ಬಂದು ತಲುಪಿ, ಹುಡುಗರವೇಲೆ ಎರಗಿದರು.
"ಹೋಗ್ರೋ..ಇಲ್ಲೇನು ಕೋತಿ ಕುಣೀತಿದ್ಯೆ? ಹೂಂ... ಬೀದಿಗೆ ಹೋಗಿ
ಆಡ್ಕೊಳ್ಳೀ..."
ಹುಡುಗರು ಮನಸ್ಸಿಲ್ಲದ ಮನಸ್ಸಿನಿಂದ ಹೊರಹೋದರು.
ಸಂಸಾರದೊಡನೆ ರಂಗಮ್ಮನ ಸ್ನೇಹ ಆರಂಭವಾಯಿತು.
"ಮಗು ಆಳ್ತಿದೆಯೆಲ್ಲಾ. ಹಸಿವಾಗಿದೆಯೋ ಏನೋ..."
"ಅಯ್ಯೋ! ಅವಳಿಗೇನು ಧಾಡಿ? ಅಳ್ತಾ ಇರೋದೇ!"
ಆ ಹೆಂಗಸಿನ ಉತ್ತರ ಕೇಳಿ ರಂಗಮ್ಮ ಬೆಚ್ಚಿ ಬಿದ್ದರು. ಆದರೂ ಸಾವರಿಸಿ
ಕೊಂಡು ಮಗುವಿನೆದುರು ನಿಂತು, ತಮ್ಮ ಹಲ್ಲಿಲ್ಲದ ಬಾಯಿಯನ್ನು ತೋರಿಸುತ್ತ,
ಮುಖಚೇಷ್ಟೆ ಮಾಡಿದರು. ಉಸಿರಾಡಲು ಬೇಕಾದ ಗಾಳಿಯೂ ದೊರೆತು, ತಮಾಷೆ
ಯಾಗಿದ್ದೊಂದು ಮುಖವನ್ನೂ ಕಂಡು, ಮಗು ಅಳು ನಿಲ್ಲಿಸಿ ನಕ್ಕಿತು.
"ಥತ್ ಮು೦ಡೆ," ಎಂದು ರಂಗಮ್ಮ ಬಲು ಪ್ರೀತಿಯಿಂದ ಮಗುವಿನ ಗಲ್ಲ
ಮುಟ್ಟಿದರು. ಶಂಕರನಾರಾಯಣಯ್ಯ ಮತ್ತು ಆತನ ಹೆಂಡತಿ ಪರಸ್ಪರರನ್ನು
ನೋಡಿ ನಸುನಕ್ಕರು.
ಶಂಕರನಾರಾಯಣಯ್ಯ ಚಾಪೆಯ ಸುರುಳಿಯನ್ನು ಬಿಚ್ಚಿ, ಪೊರಕೆಗಳನ್ನು
ಮೂಲೆಗೆಸೆದು, ಚಾಪೆಯನ್ನು ಒಂದು ಬದಿಯಲ್ಲಿ ಹಾಸಿ ಹೇಳಿದ:
"ಕೂತ್ಕೊಳ್ಳಿ ರಂಗಮ್ನೋರೇ, ನಿಂತೇ ಇದೀರಲ್ಲಾ!"
"ಅಯ್ಯೋ! ಸರಿ ಹೋಯ್ತು. ಇದೇನು ಉಪಚಾರ? ನೀವಿನ್ನೂ ಸಾಮಾನು
ಗಂಟುಗಳನ್ನ ಬಿಚ್ಚೇ ಇಲ್ಲ."
"ಅದೇನು ಮಹಾ? ರಾತ್ರೆಯೆಲ್ಲ ಇದೆಯಲ್ಲ. ನಿಧಾನವಾಗಿ ಮಾಡ್ಕೋತೀವಿ."
ಆ ಮಾತು ಕೇಳುತ್ತ ರಂಗಮ್ಮನ ಹುಬ್ಬುಗಳು ಪರಸ್ಪರ ಸಮೀಪಿಸಿದುವು. ಈ
ದಂಪತಿಯ ಸಡಗರದಲ್ಲಿ ಆ ರಾತ್ರಿಯೆಲ್ಲಾ ವಿದ್ಯುದ್ದೀಪ ಉರಿಸಬೇಕಾಗಬಹುದೇನೋ
ಎಂದು ಅವರು ಚಿಂತಿಸಿದರು. ಆದರೆ ಆ ವಿಷಯ ಪ್ರಸ್ತಾಪಿಸಿ ಮೊದಲ ದಿನವೇ
ವಿರಸಕ್ಕೆ ಎಡೆಗೊಡಲು ಅವರು ಸಿದ್ಧರಿರಲಿಲ್ಲ.
ಆ ಶಂಕರನಾರಾಯಣಯ್ಯನೋ ಬೇಕು ಬೇಕೆಂದೇ ಹಾಗೆ ಹೇಳಿದ್ದ. ಎಷ್ಟು
ಹೊತ್ತಿಗೆ ಎಂಬುದು ಗೊತ್ತಿಲ್ಲವಾದರೂ ವಠಾರದ ಒಡತಿ ರಾತ್ರೆ ದೀಪಗಳನ್ನೆಲ್ಲ ಆರಿ
ಸುವ ಪದ್ಧತಿ ಇದೆಯೆಂದು ಮೊದಲ ಸಾರಿ ಅಲ್ಲಿಗೆ ಬಂದಾಗಲೇ ಆತ ತಿಳಿದುಕೊಂಡಿದ್ದ.
ರಂಗಮ್ಮನ ಮುಖದ ಮೇಲೆ ಮೂಡಿ ಮಾಯವಾದ ಕಳವಳ ಆತನಿಗೆ ಗೋಚರಿ
ಸದೆ ಇರಲಿಲ್ಲ. ಗಂಡನ ತುಂಟತನ ಹೆಂಡತಿಗೂ ಅರಿವಾಯಿತು.
ಬಂದವರನ್ನು ಸಂತುಷ್ಟಪಡಿಸುವ ಮಾತನ್ನೇ ರಂಗಮ್ಮ ಆಡಬಯಸಿದರು.
"ಸಾಮಾನು ಎತ್ತಿಟ್ಟ ತಕ್ಷಣ ಹೇಳೀಪ್ಪಾ. ನಲ್ಲಿ ಬೀಗ ತೆಗೀತೀನಿ. ನೀರು
ಹಿಡಿಕೊಡೀರಂತೆ."
ಶಂಕರನಾರಾಯಣಯ್ಯನೇನೊ "ಆಗಲಿ" ಎಂದ. ಆದರೆ ಆತನ ಹೆಂಡತಿ ಸುಮ್ಮ
ನಿರಲಿಲ್ಲ.
"ಓ! ಸಾಯಂಕಾಲ ಯಾವಾಗ್ಲೂ ನಲ್ಲಿಗೆ ಬೀಗ ಹಾಕ್ತೀರೇನು?"
ಶೇಷಾದ್ರಿಪುರದ ಬಿಡಾರದಲ್ಲಿ ಬಾವಿಯಿಂದಲೆ ನೀರು ಸೇದುತ್ತಿದ್ದವಳು ಆಕೆ.
ಆದರೆ ಹಾಗೆಂದು ಇಲ್ಲಿ ತಿಳಿಸಲಿಲ್ಲ.
"ಹೂನಮ್ಮಾ. ಹಾಗೇ ಬಿಟ್ಟರೆ ಹುಡುಗರು ನಲ್ಲಿ ತಿರುಗಿಸಿ ಬಿಡುತ್ವೆ. ಬೀದೀಲಿ
ಹೋಗೋರು-ಬರೋರೂ ನೀರಿಗೆ ಬಂದ್ಬಿಡ್ತಾರೆ."
"ಹೌದೌದು. ಗತಿ ಇಲ್ದೆ ಅಲೆಯೋರ ಕಾಟ ಜಾಸ್ತಿಯಾಗಿಬಿಟ್ಟಿದೆ...."
ಎಂದು ಶಂಕರನಾರಾಯಣಯ್ಯ, ಗೋಣಿಯಿಂದ ಸಾಮಾನುಗಳನ್ನು ಹೊರತೆಗೆಯುತ್ತ,
ಹೇಳಿದ.
"ಮನೇಲೇ ಇರ್ತೀನಪ್ಪಾ. ಸಾಮಾನು ತೆಗೆದಿಡೋದು ಮುಗಿದ್ಮೇಲೆ ಬನ್ನಿ,"
ಎಂದು ಹೇಳಿ ರಂಗಮ್ಮ ಹೊರಟು ಹೋದರು.
"ಕೂತ್ಕೋ ಚಂಪಾ. ಹ್ಯಾಗಿದಾರೆ ಮಾಲಿಕರು?"
ಹೆಂಡತಿಯೊಡನೆ ಮಾತನಾಡಿದ ಶಂಕರನಾರಾಯಣಯ್ಯನ ಸ್ವರದಲ್ಲಿ ಬದಲಾ
ವಣೆಯಾಗಿತ್ತು; ಸ್ವಾಭಾವಿಕವಾಗಿ, ನಯವಾಗಿತ್ತು.
"ನೀವಂತೂ ಒಳ್ಳೇ ಮನೇನೆ ಹುಡುಕಿದೀರಿ!"
"ಯಾಕೆ? ಆ ಕೊಂಪೆಗಿಂತ ಈ ವಠಾರ ವಾಸಿಯಲ್ವೇನು?"
"ಅಲ್ಲ ಅಂದ್ನೆ? ತಮಾಷೆಯಾಗಿದೆ ಮುದುಕಿ. ಆದರೆ ನೀರು ಲೈಟಿನ ಅವಸ್ಥೆ
ನೋಡಿದರೆ ದಿನಾ ಜಗಳವಾಗುತ್ತೇನೋ ಅಂತ ಭಯವಾಗ್ತಿದೆ."
"ಶ್! ಮೆಲ್ಲಗೆ ಮಾತ್ನಾಡೇ! ಎದುರುಮನೆ_ಪಕ್ಕದ್ಮನೆ ... ಗೋಡೆ ಏನು ದಪ್ಪ
ಗಿದೇಂತ ತಿಳಕೊಂಡ್ಯಾ...?"
ಚಂಪಾವತಿ ನಕ್ಕಳು.
"ಒಳ್ಳೇದೇ ಆಯ್ತು. ಸದ್ಯಃ ನಿಮ್ಮ ಸರಸ ಸಲ್ಲಾಪವಾದರೂ ಕಮ್ಮಿ
ಆಗುತ್ತೊ?"
ಬೆವರು ಸುರಿಯುತ್ತಿದ್ದ ಮುಖ. ಅದಕ್ಕೆ ತಗಲಿದ ಯಾವುದೋ ಪಾತ್ರೆಯ
ಮಸಿ. ಮುಂದಕ್ಕೆ ಇಳಿದ ಕ್ರಾಪು. ಆ ಪರಿಸ್ಥಿತಿಯಲ್ಲೂ ಆತ ಹೆಂಡತಿಯನ್ನು
ನೋಡಿ ತುಂಟತನದ ನಗೆ ನಕ್ಕ.
"ಬಾಗಿಲು ಸ್ವಲ್ಪ ಮರೆ ಮಾಡೇ."
"ಯಾಕೆ?"
"ಬೇಕು. ಬಾಗಿಲು ಮುಚ್ಬಿಟ್ಟು ಹತ್ತಿರ ಬಾ."
"ಓಹೋ! ನಿಮ್ಮಿಷ್ಟ ನೆರವೇರ್ದ ಹಾಗೆಯೇ. ಆ ತೊಟ್ಟಿಲಿಂದ ಒಂದಿಷ್ಟು
ಕನ್ನಡಿ ತಗೊಂಡು ನಿಮ್ಮ ಮುಖ ನೋಡ್ಕೊಳ್ಳಿ."
"ಸಾಕು! ಇಲ್ಲಿ ಬಾ ಅಂದ್ರೆ...."8
"ಬರೋಲ್ಲ."
"ಬಾರೇ ಇಲ್ಲಿ!"
"ಎದುರು ಮನೆ_ ಪಕ್ಕದ್ಮನೆಯವರಿಗೆ ಕೇಳ್ಸುತ್ತೆ."
ಶಂಕರನಾರಾಯಣಯ್ಯ ಉತ್ತರ ಕೊಡದೆ, ಮಗುವನ್ನೆತ್ತಿಕೊಂಡು ಮೂಲೆ
ಯಲ್ಲಿ ನಿಂತಿದ್ದ ಹೆಂಡತಿಯತ್ತ ನಡೆದ.
ಆ ಕ್ಷಣವೇ ಹೆಂಡತಿ ಗಟ್ಟಿಯಾಗಿ ಕೂಗಿ ಕರೆದಳು:
"ರಂಗಮ್ನೋರೆ!...."
ಮೀನಾಕ್ಷಮ್ಮ, ಪದ್ಮಾವತಿ, ಕಮಲಮ್ಮ, ಅಹಲ್ಯಾ, ಕಾಮಾಕ್ಷಿಯರೆಲ್ಲಾ
ತಮ್ಮ ತಮ್ಮ ಮನೆ ಬಾಗಿಲಿಗೆ ಬಂದರು. ಮಧುರವಾಗಿದ್ದರೂ ಗಟ್ಟಿಯಾಗಿದ್ದ ಹೊಸ
ಸ್ವರ. ಬಂದ ದಿನವೇ, ಬಂದ ಘಳಿಗೆಯಲ್ಲೇ. ಎಂತಹ ದಿಟ್ಟತನ!
ಶಂಕರನಾರಾಯಣಯ್ಯ "ಥೂ ನಿನ್ನ!" ಎಂದು ಅವಸರವಾಗಿ ಗೋಣಿ ಚೀಲ
ದತ್ತ ಸರಿದ. ಚಂಪಾ ಕುಲುಕುಲು ನಕ್ಕಳು.
ರಂಗಮ್ಮ ಬಂದೇಬಿಟ್ಟರು. ಹೊಸಬಳ ಧೈರ್ಯ ಅವರನ್ನೂ ಚಕಿತ
ಗೊಳಿಸಿತ್ತು.
"ಏನಮ್ಮಾ? ಕೂಗಿದ್ಯಾ?"
ಸುತ್ತು ಮುತ್ತು ಎಲ್ಲಿಂದಲೂ ಯಾವ ಸಪ್ಪಳವೂ ಇರಲಿಲ್ಲ. ವಠಾರದ ಆ ಭಾಗ
ವೆಲ್ಲಾ ಒಂದೇ ಕಿವಿಯಾಗಿ ಮಾರ್ಪಟ್ಟು ಹೊಸಬಳ ಉತ್ತರಕ್ಕಾಗಿ ಕಾದಿದ್ದಂತೆ ಕಂಡಿತು.
ರಂಗಮ್ಮ ಬರುವುದರೊಳಗೆ ನಗು ನಿಲ್ಲಿಸಿದ್ದ ಚಂಪಾ ಗಂಭೀರ ಮುಖಮುದ್ರೆ ತಳೆದಳು.
ಅಳುಕು ಸ್ವಲ್ಪವೂ ಆಕೆಯನ್ನು ಬಾಧಿಸಲಿಲ್ಲ.
"ಹೂಂ ಕಣ್ರೀ....ಒರಳು ಗುಂಡು ಇದೆಯೇಂತಾ?"
ಯಾವ ಸಂಕೋಚವೂ ಇಲ್ಲದೆ ಆ ಮಾತು ಬಂತು. ಆದರೆ ರಂಗಮ್ಮ ಅದನ್ನು
ನಿರೀಕ್ಷಿಸಿರಲಿಲ್ಲ.
"ಯಾಕೆ? ಇಲ್ಲಿಲ್ವೆ?"
"ನೋಡ್ದೆ. ಎಲ್ಲೂ ಕಾಣಿಸ್ಲಿಲ್ಲ,"
___ಎಂದಳು ಚಂಪಾ. ನಾಲ್ಕು ಹೆಜ್ಜೆ ಮುಂದೆ ಹೋಗಿ ಅಡುಗೆ ಮನೆಯೊಳಗೆ
ಹುಡುಕಿ ನೋಡುವ ಶಾಸ್ತ್ರವನ್ನೂ ಆಕೆ ಮಾಡಿದಳು.
ರಂಗಮ್ಮನಿಗೆ ಗಾಭರಿಯಾಯಿತು. ನಾರಾಯಣಿಯ ಗಂಡ ಎಲ್ಲಾದರೂ
ಗುಂಡುಕಲ್ಲನ್ನು ಒಯ್ದು ಬಿಟ್ಟನೇನೋ, ತನ್ನ ದೃಷ್ಟಿಗೆ ಈ ವರೆಗೂ ಆ ವಿಷಯ
ಗೋಚರವಾಗದೆ ಹೋಯಿತೇನೊ ಎಂದು ದಿಗಿಲಾಯಿತು. ಅವರ ದೃಷ್ಟಿ ಈಗ
ಮನೆ ತುಂಬ ಹರಡಿದ್ದ ಸಾಮಾನುಗಳತ್ತ ಹರಿಯಿತು. ರಂಗಮ್ಮನ ಸೂಕ್ಷ್ಮ
ದೃಷ್ಟಿ....
"ನೋಡಿ! ಅಲ್ಲಿದೆ!"

ರಂಗಮ್ಮ ಬೊಟ್ಟ ಮಾಡಿದತ್ತ ದಂಪತಿ ನೋಡಿದರು. ಹಾಸಿಗೆಯ ಕೆಳಗಿತ್ತು
ಗುಂಡುಕಲ್ಲು. ಅದರ ತಲೆ ಮಾತ್ರ ಕಾಣಿಸುತ್ತಿತ್ತು.
"ಓ! ಇದೆಯಪ್ಪ ಸದ್ಯಃ! ಸುಮ್ನೆ ತೊಂದರೆ ಕೊಟ್ಟ ಹಾಗಾಯ್ತಮ್ಮ ನಿಮಗೆ."
"ಅಯ್ಯೋ, ಇದೇನು ಮಹಾ ತೊಂದರೆ? ನಮ್ಮ ಮನೆಯೊಳಗೇ ನಾವು ಅಲ್ಲಿ
ಇಲ್ಲಿ ಓಡಾಡ್ದೆ ಇರೋಕಾಗುತ್ಯೆ?...ಅಲ್ವೆ ಗುಂಡುಕಲ್ಲನ್ನ ಯಾರು ತಗೊಂಡು
ಹೋಗ್ತಾರೆ ಹೇಳು?"
"ಹೇಳೋಕಾಗಲ್ಲಮ್ಮ ಈಗಿನ ಕಾಲ್ದಲ್ಲೀ..." ರಂಗಮ್ಮನಿಗಿಂತ ತಾನೇ ಹೆಚ್ಚು
ಅನುಭವಿ ಎನ್ನುವಂತೆ ಚಂಪಾ ಅಂದಳು.ಅಂಗಮ್ಮ, ಒಂದು ಕ್ಷಣ ಸುಮ್ಮನಾಗಿ,
ಮತ್ತೆ ಹೇಳಿದರು;
“ಅದೂ ನಿಜಾ ಅನ್ನು. ಆದರೆ, ಇಲ್ಲಿ ಯಾರನ್ನು ಬೇಕಾದರೂ ನೀನು ಕೇಳು
ನಮ್ಮ ವಠಾರದಲ್ಲಿ ಕಳ್ಳತನ ಆಗೋದೂಂತ್ಲೇ ಇಲ್ಲ, ಅಪ್ಪಿ ತಪ್ಪಿ ಹುಡುಗರೇನಾ
ದರೂ ಆಚೆ ಈಚೆಗೆ ಪಾತ್ರೆ ಗೀತ್ರೆ ಇಡ್ಬೇಕೇ ಹೊರತು-"
ಶಂಕರನಾರಾಯಣಯ್ಯನಿಗೆ ತಾಳ್ಮೆ ತಪ್ಪಿತ್ತು.ಆತ ಮನಸ್ಸನಲ್ಲೇ ರೇಗತೊಡ
ಗಿದ್ದ ಕೇಳಿಸುತ್ತಿದ್ದ ಒಣ ಹರಟೆಯನ್ನು ಸಹಿಸಲಾರದೆ ರಂಗಮ್ಮನ ಮಾತನ್ನು
ನಡುವಿನಲ್ಲೆ ಆತ ತಡೆದ:
"ಅಯ್ಯೋ! ವಠಾರ ಅಂದ್ಮಲೆ ಅದೆಲ್ಲಾ ಇಲ್ದೆ ಇರುತ್ಯೆ?...ಮನೇಲೆ
ಇರೀಮ್ಮ ನೀವು. ಬೇಗ್ನೆ ನೀರಿಗೆ ಬಂದ್ಬಿಡ್ತೀವಿ."
ಗಂಡನ ಅವಸ್ಥೆಯನ್ನು ಕಂಡು ಒಳಗಿಂದೊಳಗೇ ಸಂತೋಷಪಡುತ್ತಿದ್ದ ಚಂಪಾ
ರಂಗಮ್ಮನನ್ನು ಮತ್ತೂ ಸ್ವಲ್ಪ ಹೊತ್ತು ಅಲ್ಲಿಯೇ ನಿಲ್ಲಿಸಿಕೊಳ್ಳಲು ಬಯಸಿದಳು.
ಆಕೆ ಗೃಹಕೃತ್ಯಕ್ಕೆ ಸಂಬಂಧಿಸಿ ಕೇಳಿ ತಿಳಿದುಕೊಳ್ಳಬೇಕಾದ ಎಷ್ಟೋ ವಿಷಯಗಳಿದ್ದವು.
-"ಇಲ್ಲಿ ವರ್ತನೆ ಹಾಲು ಹಾಕ್ತಾರೆಯೆ?"
-"ಸೌದೆ ಡಿಪೋ ಎಲ್ಲಿದೆ?"
—"ಅಂಗಡಿ ಬೀದಿ ಎಷ್ಟು ದೂರ?"
-"ಅಲ್ಲಿ ತರಕಾರಿ ಸಿಗುತ್ತೇನು?"
ರಂಗಮ್ಮ ತಾಳ್ಮೆಯಿಂದ ಉತ್ತರವಿತ್ತು ಪ್ರತಿಯೊಂದಕ್ಕೂ ವಠಾರ ಎಷ್ಟೊಂದು
ಅನುಕೂಲವಾಗಿದೆ ಎಂಬುದನ್ನು ಮನಗಾಣಿಸಿ ಕೊಡಲು ಪ್ರಯತ್ನಪಟ್ಟರು.
ಹೊರಗೆ, ಈ ಸಂಭಾಷಣೆಗೆ ಕಿವಿಗೊಡುತ್ತ ನಿಂತಿದ್ದವರು, ಹೊಸಬಳ
ಧೈರ್ಯಕ್ಕೆ ಬೆರಗಾಗದಿರಲಿల్ల.

ಆಗಿನ್ನೂ ಆರು ಘಂಟೆ, ದೀಪ ಹಾಕಲು ಬಹಳ ಹೊತ್ತಿತ್ತು. ಅಲ್ಲದೆ,
ಪಶ್ಚಿಮದ ಸೂರ್ಯನ ಕೃಪೆಯಿಂದ ದೊರೆಯುತ್ತಿದ್ದ ಸ್ವಲ್ಪ ಬೆಳಕೂ ಅಲ್ಲಿ ಇಲ್ಲದೆ
ಇರಲಿಲ್ಲ, ಆದರೂ ಚಂಪಾ ತನ್ನದೊಂದು ಕೇಳಿಕೆಯನ್ನು ಮುಂದಿಟ್ಟು, ರಂಗಮ್ಮನಿಗೆ
'ಚುರುಕು ಮುಟ್ಟಿಸಿದಳು.
ದೀಪದ ಅವಸ್ಥೆ ಏನೆಂಬುದನ್ನು ಮೊದಲೇ ತಿಳಿದಿದ್ದ ಚಂಪಾ ಗಂಡನಿಗೆ
ಹೇಳಿದಳು:
"ದೀಪ ಹಾಕ್ಕೋಬಾರ್ದೆ? ಸಾಮಾನುಗಳೆಲ್ಲ ಇವೆಯೋ ಇಲ್ವೋ ಏನೂ ಕಾಣಿ
ಸೋದೇ ಇಲ್ಲ."
ಹೆಂಡತಿಯ ಆ ಮಾತಿಗಾಗಿ ಮನಸ್ಸಿನಲ್ಲೆ ಖುಷಿಯಾದ ಗಂಡ, "ಕರೆಂಟ್
ಇಲ್ಲಾಂತ ತೋರುತ್ತೆ" ಎಂದು ಹೇಳುತ್ತ, ರಂಗಮ್ಮನ ಮುಖ ನೋಡುತ್ತ, ವಿದ್ಯುತ್
ಗುಂಡಿಯನ್ನು ಮುಟ್ಟಿದ.
ರಂಗಮ್ಮ, ಆ ಸಂಭಾಷಣೆ ತಮಗೆ ಕೇಳಿಸದವರಂತೆ ಅತ್ತಿತ್ತ ನೋಡಿದರು.
ಚಂಪಾ ಕೇಳಿಸುವ ಹಾಗೆ ಅಂದಳು:
"ಸ್ವಲ್ಪ ದೀಪ ಹಾಕ್ತೀರಾ?"
ರಂಗಮ್ಮ 'ಹೂಂ' ಅನ್ನಲಿಲ್ಲ; 'ಊಹೂಂ' ಅನ್ನಲಿಲ್ಲ. ಚಕಾರವೆತ್ತದೆ ತಮ್ಮ
ಮನೆಗೆ ಹೋಗಿ ವಿದ್ಯುತ್ ಹಿಡಿಯನ್ನೆಳೆದರು. ಎಳೆದ ಮೇಲೆ "ದೀಪ ಬಂತೆ?"
ಎಂದು ಕೇಳಲೂ ಇಲ್ಲ. ಹುಬ್ಬುಗಂಟಿಕ್ಕಿ ಮನೆಯಲ್ಲೆ ಕುಳಿತರು.
ಇದನ್ನೆಲ್ಲ ನೋಡುತ್ತಿದ್ದ ವಠಾರದ ಹೆಂಗಸರು ಪೆಚ್ಚಾಗಿ ಹೋದರು.
ಕಾಂತಿಹೀನವಾಗಿದ್ದ ಬೆಳಕನ್ನು ನೋಡುತ್ತ ಚಂಪಾ ಅಂದಳು:
"ಎಷ್ಟೊಂದು ಶುಭ್ರವಾಗಿದೆ?"
ಗಂಡ ಹೇಳಿದ:
"ಪ್ರಚಂಡೆ ಕಣೇ ನೀನು. ಆ ವಯಸ್ಸಾದೋರ್ನ ಗೋಳು ಹುಯ್ಕೊಂಡೆಯಲ್ಲ!
ನರಕಕ್ಕೆ ಹೋಗ್ತಿ ನೋಡು!"
"ಮೆತ್ತಗೆ ಮಾತ್ನಾಡಿ..."
ಇಷ್ಟೆಲ್ಲವೂ ನಡೆಯುತ್ತದ್ದಾಗ ಮಗು ಸುತ್ತು ಮುತ್ತಲೆಲ್ಲ ಪಿಳಿ ಪಿಳಿ ನೋಡು
ತ್ತಲೇ ಇತ್ತು. ಉರಿಯತೊಡಗಿದ ದೀಪ ಕ್ಷಣ ಕಾಲ ಅದರ ಪಾಲಿಗೆ ದೊಡ್ಡ
ಆಕರ್ಷಣೆಯಾಯಿತು. ಆದರೆ, ಎಷ್ಟು ಹೊತ್ತಾದರೂ ತನ್ನ ಕಡೆಗೆ ಯಾರೂ ಗಮನ
ಕೊಡುತ್ತಿಲ್ಲವೆಂದು ಬೇಸರಗೊಂಡು ಅಳತೊಡಗಿತು.
ಶಂಕರನಾರಾಯಣಯ್ಯ ರೇಗುತ್ತ ಹೇಳಿದ:
"ಅಳಿಸ್ಬೇಡ ಮಗೂನ. ಯಾವ ಡಬ್ಬದಲ್ಲಿಟ್ಟಿದೀಯಾ ಬಿಸ್ಕತ್ತು ಪೊಟ್ಣಾನ?
ತೆಕ್ಕೊಡ್ಬಾರ್ದೇನು?"
ಚಂಪಾ ಪ್ರಯಾಸಪಟ್ಟು ಆ ಡಬ್ಬವನ್ನು ಗುರುತಿಸಿ, ಬಿಸ್ಕತ್ತು ಹೊರತೆಗೆದು,
ಮಗಳ ಬಾಯಿಗೆ ತುರುಕಿದಳು. ಕೈಗೊಂದು ಚೂರು ಕೊಟ್ಟು ಮಗುವನ್ನು ಚಾಪೆಯ
ಮೇಲೆ ಆಡಲು ಬಿಟ್ಟಳು. ತಾನು ಸೆರಗನ್ನು ಸೊಂಟಕ್ಕೆ ಬಿಗಿದು ಗಂಡನ ಜತೆಯಲ್ಲಿ
ಸಾಮಾನುಗಳನ್ನು ಎತ್ತಿಡತೊಡಗಿದಳು.
ವಠಾರಕ್ಕೆ ಒಬ್ಬೊಬ್ಬರಾಗಿ ಗಂಡಸರು ಹಿಂತಿರುಗು ಬಂದರು. ಕತ್ತಲಾಯಿತು.

ಹುಡುಗರೆಲ್ಲ ತಮ್ಮ ತಮ್ಮ ಮನೆಗಳನ್ನು ಸೇರಿದರು. ಹಕ್ಕಿಗಳ ಗೂಡಿನಲ್ಲಿ ಸಂಜೆ
ಹೊತ್ತು ಚಿಲಿಪಿಲಿ ಸದ್ದಾಗುವ ಹಾಗೆ, ಮನೆಗಳಿಂದ ವಿವಿಧ ವಯೋಮಾನದ ಮನುಷ್ಯ
ಸ್ವರಗಳು ಹೊರಟುವು.

ಪೋಲೀಸನ ಹೆಂಡತಿ "ಕಿಟ್ಟೀ ಕಿಟ್ಟೀ" ಎಂದು ಕೂಗುತ್ತ ಮುಂಭಾಗದಿಂದ
ಓಣಿಗೆ ಬಂದಳು.

"ಮೀನಾಕ್ಷಮ್ಮಾ, ನಮ್ಮ ಕಿಟ್ಟೀ ಇದಾನೇನ್ರಿ ನಿಮ್ಮನೇಲಿ?" ಎನ್ನುತ್ತ ಆಕೆ
ಓಣಿಯ ಕೊನೆಯನ್ನು ತಲುಪಿದಳು.

"ಇಲ್ಲ ಕಣ್ರೀ,ನಮ್ಮೋನು ಆಗ್ಲೇ ಬಂದ," ಎಂದು ಉತ್ತರವಿತ್ತುದಾಯ್ತು.
ಆದರೂ ಮೀನಾಕ್ಷಮ್ಮನ ಬಾಗಿಲ ಬಳಿ ಇಬ್ಬರೂ ಸೇರಿದರು.ಪ್ರಶ್ನೋತ್ತರಗಳಾ
ದುವು."ಅಡುಗೆ ಆಯ್ತೆ?","ಏನು ಮಾಡಿದ್ರಿ?",ನೀವೇನು ಮಾಡಿದ್ರಿ?"

ಆದರೂ ಪೋಲೀಸನ ಹೆಂಡತಿಯ ದ್ರಿಷ್ಟಿ ಎದುರು ಮನೆ ಕಡೆಗೆ ಇತ್ತು. ಗಂಡ
ಹೆಂಡತಿ ಸಾಮಾನುಗಳನ್ನೆತ್ತಿ ಇಡುತ್ತಿದ್ದುದನ್ನು ಆಕೆ ಈಕ್ಷಿಸಿದಳು. ಕಿಟ್ಟಿಯನ್ನು
ಹುಡುಕುವ ನೆಪ ಮಾಡಿ ಅಲ್ಲಿಗೆ ಬಂದುದೇ ಆ ಉದ್ದೇಶದಿಂದ.


ಗಂಡಸರೂ ಅಷ್ಟೆ. ಕಕ್ಕಸಿಗೆಂದು ಹೊರಟವರು ಕೊನೆಯ ಮನೆ ಬಂದಾಗ
ಒಳ್ಳಕ್ಕೆ ದೃಷ್ಟಿ ಬೀರುತ್ತಿದ್ದರು. ವ‌ಠಾರದಲ್ಲಿನ್ನು ತಮ್ಮ ಜತೆ ಇರಲು ಬಂದ ಹೊಸ
ಗಂಡಸು ಯಾರೆಂದು ತಿಳಿಯುವ ಸ್ವಾಭಾವಿಕ ಕುತೂಹಲ ಅವರಿಗೆ. ಗಂಡಸನ್ನು
ನೋಡಿದ ಮೇಲೆ,ಹಾಗೆಯೇ ಆತನ ಕೈ ಹಿಡಿದಾಕೆಯನ್ನೂ ಅವರು ನೋಡದೆ ಇರು
ತ್ತಿರಲಿಲ್ಲ.


ರಂಗಮ್ಮ ವಿಚಾರಿಸಿಕೊಳ್ಳಲು ಮತ್ತೆ ಬರಲಿಲ್ಲ.ಇದು ತನ್ನ ಹೆಂಡತಿಯ ಪ್ರಭಾವ
ಎಂಬುದು ಶಂಕರನಾರಾಯಣಯ್ಯನಿಗೆ ಸ್ಪಷ್ಟವಾಗಿತ್ತು.


ಕತ್ತಲಾಗಿ ಒಂದು ಘಳಿಗೆಯಾಗುವುದರೊಳಗೇ ಮನೆಗೊಂದು ಸ್ವರೂಪ ಬಂತು.
ಮೇಜು ಕುರ್ಚಿಗಲನ್ನೂ ಶಂಕರನಾರಾಯಣಯ್ಯ ಒಂದು ಮೂಲೆಯಲ್ಲಿ ನಿಲ್ಲಿಸಿದ.


ಮಗು ಚಾಪೆಯ ಮೇಲೆಯೆ ನಿದ್ದೆ ಮಾಡಿತ್ತು.ತಂದೆ ಆಯಾಸ ಪರಿಹಾರ
ಕ್ಕೆಂದು ಅದರ ಬಳಿಯಲ್ಲಿ ಕುಳಿತುಕೊಂಡ.ತನ್ನ ಕೊಳಕು ಕೈಯಿಂದ ಮಗುವನ್ನು
ಮುಟ್ಟಲು ಮನಸ್ಸಾಗಲಿಲ್ಲ.ಬಾಗಿ ನೋಡಿದಾಗ ಲಂಗದ ಕೆಳಭಾಗವೂ ಚಾಪೆಯೂ
ಒದ್ದೆಯಾಗಿದ್ದಂತೆ ಕಂಡಿತು.ಮಗುವಿನ ತಂದೆ,ಮಗುವಿನ ತಾಯಿಯನ್ನು ಗದರಿಸ
ಬಯಸಿದ.


"ನೋಡೆ,ನಿನ್ನ ಮಗಳು ಏನ್ಮಾಡಿದಾಳೇಂತ!"

ಚಂಪಾ,ದೂರದಿಂದಲೇ ಅದೇನೆಂದು ಊಹಿಸಿಕೊಂಡು ಹೇಳಿದಳು:

"ಅಷ್ಟೆ ತಾನೆ?ತೀಥ ಪ್ರೋಕ್ಷಣ;ಪಾವನವಾಯ್ತು ಮನೆ."

ತೊಟ್ಟಿಲಿನೊಳಗೆ,ಗೋಡೆಯನ್ನು ಅಲಂಕರಿಸಬೇಕಾದ ಕಟ್ಟು ಹಾಕಿದ ಚಿತ್ರ
ಗಳಿದ್ದುವು.ಅದನ್ನೆಲ್ಲಾ ಹೊರತೆಗೆದು ಗೋಡೆಗೆ ಮೊಳೆ ಬಡಿದು ತಗಲ ಹಾಕುವ
ಕೆಲಸದಲ್ಲಿತ್ತು. ಅದನ್ನು ಈಗಲೇ ಮಾಡೋಣವೆ ಬೇಡವೆ ಎಂದು ಅನಿಶ್ಚಯತೆ
ಯಿಂದ ತೊಟ್ಟಿಲನ್ನೆ ಶಂಕರನಾರಾಯಣಯ್ಯ ನೋಡಿದ. ಅದನ್ನು ಗಮನಿಸಿ ಚಂಪಾ
ಹೇಳಿದಳು:
"ಇವತ್ತಿಗೆ ಇಷ್ಟು ಸಾಕು. ಅದನ್ನೆಲ್ಲಾ ನಾಳೆ ಮಾಡುವಿರಂತೆ."
"ಹೂಂ. ಸೊಂಟ ನೋಯ್ತಿದೆ, ಯಾಕೋ..."
"ಎಷ್ಟೊಂದು ಕೆಲಸ ಮಾಡಿದೀರಿ, ಏನು ಕಥೆ! ನೋಯದೆ ಇರುತ್ಯೆ?"
"ನಿನಗೇನು ಹೇಳು, ಎಲ್ಲಾ ತಮಾಷೆಯೆ....
"ಚಂಪಾ ಒಂದು ಪೊರಕೆಯನ್ನೆತ್ತಿಕೊಂಡಳು.
"ಏಳಿ ಗುಡಿಸ್ಬಿಡ್ತೀನಿ. ನೀವು ಹೋಗಿ ಕೊಳಾಯಿ ಬೀಗ ತೆಗೆಸಿ."
"ಹೂಂ. ಬಿಂದಿಗೆ-ಬಕೀಟು ಎರಡು ತಗೊಂಡ್ಬಾ. ನನಗಂತು ಸ್ನಾನ
ಮಾಡಿಯೀ ತೀರ್ಬೀಕು."
"ಎಲ್ಮಾಡ್ತೀರಾ ಸ್ನಾನ?"
"ಬಚ್ಚಲು ಮನೆಯೇನೋ ಪಕ್ಕದಲ್ಲೆ ಇದೆ. ಇಷ್ಟು ಹೊತ್ತಿಗೆ ಕ್ಯೂನೂ
ಇರಲಾರದು."
ಚಂಪಾ ಹೊರಹೋಗಿ ಬಚ್ಚಲುಮನೆ ನೋಡಿ ಬಂದಳು.
"ಅಲ್ಲಿ ದೀಪ ಇಲ್ಲಾಂದ್ರೆ."
"ಹೋಗಲಿ ಬಿಡು. ಅಡುಗೆ ಮನೇಲು ಸ್ನಾನಕ್ಕೆ ಏರ್ಪಾಡಿದೆ. ನೀರು
ಹೋಗೋಕೆ ಮೋರಿ ಮಾಡಿದಾರೆ."
ಆತ ಎದ್ದು ರಂಗಮ್ಮನವರಲ್ಲಿಗೆ ಹೋದ. ದೇವರ ಸ್ಮರಣೆ ಮಾಡುತ್ತ ಕುಳಿ
ತಿದ್ದ ಅವರು ತಗ್ಗಿದ ಧ್ವನಿಯಲ್ಲಿ ಕೇಳಿದರು: <
"ಎಲ್ಲಾ ಕೆಲಸ ಮುಗಿಯಿತೆ?"
"ಮುಗೀತಾ ಬಂತು ರಂಗಮ್ನೋರೇ. ಸ್ವಲ್ಪ ನೀರು ಬೇಕಲ್ಲ."
ರಂಗಮ್ಮ ಎದ್ದು , ಗೋಡೆಯೊಳಗಿಸದ್ದ ಗೂಡಿನಿಂದ ಬೀಗದ ಕೈ ತೆಗೆದುಕೊಟ್ಟರು.
"ನೀರು ತುಂಬಿಸಿ ಆದ್ಮೇಲೆ ಬೀಗ ಹಾಕಿಟ್ಟು ಕೈನ ತಂದ್ಕೊಡೀಪ್ಪಾ."
"ಆಗಲಿ ರಂಗಮ್ನೋರೆ."
ರಂಗಮ್ಮ ಪುನಃ ಗೋಡೆಗೊರಗಿ ಕುಳಿತು ದೇವರ ಸ್ಮರಣೆಯಲ್ಲಿ ನಿರತರಾದರು.
ಆದರೆ, ರಾತ್ರಿಯ ಹೊತ್ತು ಕೊಳಾಯಿಯಿಂದ ವೇಗವಾಗಿ ಸುರಿಯುತ್ತಿದ್ದ ನೀರಿನ
ಸುಂಯ್ ಎಂಬ ಸದ್ದು ಅವರಿಗೆ ಕೇಳಿಸದೆ ಇರಲಿಲ್ಲ.
ಶಂಕರನಾರಾಯಣಯ್ಯ ಮೈತೊಳೆದುಕೊಂಡ. ಚಂಪಾ ಮುಖ ಕೈ ಕಾಲು
ತೊಳೆದುಕೊಂಡಳು.
ಸಂಜೆ ಮಗುವನ್ನೆತ್ತಿಕೊಂಡಿದ್ದ ಚಂಪಾಳನ್ನು ಕಂಡಾಗ ಹತ್ತಿರಕ್ಕೆ ಕರೆದು ಏನೋ
ಮಾಡಬೇಕೆಂದು ಗಂಡನಿಗೆ ತೋರಿತ್ತು. ಈಗ ಕೆಲಸ ಮಾಡಿ ಬಳಲಿದ ಮೇಲೆ, ಅವನಿಗೆ
ಆ ಅಪೇಕ್ಷೆಯೇ ಇರಲಿಲ್ಲ.
ಅಡ್ಡಪಂಚೆಯುಟ್ವು ಬೇರೆ ಜುಬ್ಬ ಧರಿಸುತ್ತ ಆತ ಹೇಳಿದ,
"ಇವತ್ತು ಎಷ್ಟಾಗುತ್ತೋ ಅಷ್ಟು ನೀರು ತುಂಬಿಸ್ಕೊಂಡ್ಬಿಡೇ. ನಾಳೆಯಿಂದ
ಬಿಂದಿಗೆ ಲೆಕ್ಕ ಹಿಡೀತಾರೆ."
"ಸರಿ! ಸರಿ!"
ಚಂಪಾ ಬಲಬದಿಯ ಮನೆಗೆ ಹೋಗಿ ಬಾಗಿಲಲ್ಲೆ ನಿಂತಳು.
ನಾಗರಾಜರಾಯ ಅಲ್ಲಿದ್ದ.
"ಯಾರೋ ಬಂದಿದಾರೆ ನೋಡೇ," ಎಂದು, ಅಡುಗೆ ಮನೆಯಲ್ಲಿದ್ದ ಹೆಂಡತಿಗೆ
ಆತ ಕರೆದು ಹೇಳಿದ.
ಪದ್ಮಾವತಿ ಹೊರಬಂದಳು. ಮುಗುಳುನಗುತ್ತಿದ್ದ ಚಂಪಾಳನ್ನು ಕಂಡು ಅರೆಕ್ಷಣರ
ಆಕೆಗೆ ಕಕ್ಕಾವಿಕ್ಕಿಯಾಯಿತು.
"ಏನಾದರೂ ಬೇಕಾಗಿತ್ತೆ?" ಎಂದು ಆಕೆ ಕೇಳಿದಳು.
"ನೀವು ದಿನಾಗಲೂ ಹಸುವಿನ ಸೆಗಣಿ ಎಲ್ಲಿಂದ ತರ್ತೀರಾ?"
"ಅದೊಂದು ಇಲ್ಲಿ ಸಿಗೋದು ಸ್ವಲ್ಪ ಕಷ್ಟವೇ. ಸಾಮಾನ್ಯವಾಗಿ ಬೆಳಗ್ಗೆ
ಹುಡುಗರನ್ನ ಬೀದಿ ಉದ್ದಕ್ಕೂ ಕಳಿಸ್ತೀವಿ. ಎಲ್ಲಿಯಾದರೂ ಸಿಗುತ್ತೆ, ಒಮ್ಮೆ ತಂದರೆ
ಐದಾರು ದಿವಸಕ್ಕೆ ಸಾಕಾಗುತ್ತೆ."
"ಓ.... ಹಾಗೇನು?... ಈಗ ಅಡುಗೆ ಮನೆ ಶುದ್ಧಿ ಮಾಡೋಕೆ ಒಂದು ಚೂರು
ಬೇಕಾಗಿತ್ತು. ಸ್ವಲ್ಪ ಕೊಡ್ತೀರಾ?"
"ಅದಕ್ಕೇನ್ರೀ, ತಾಳಿ ಕೊಡ್ತೀನಿ."
ಪದ್ಮಾವತಿ ಅದನ್ನು ತಂದುಕೊಟ್ವಳು. ಹೊಸಬಳೊಡನೆ ತಾನೇ ಮೊದಲು
ಮಾತನಾಡಿದವಳು, ಆಕೆಗೆ ನೆರವಾದಳು, ಎಂದು ಅವಳಿಗೆ ಸಂತೋಷ.
ಶಂಕರನಾರಾಯಣಯ್ಯ ಕೇಳಿದ:
"ಒಲೆ ಹಚ್ತೀಯೇನು?"
"ಯಾಕೆ, ಬೇಡ್ವೆ?"
"ಅದೇ ಯೋಚ್ನೆ ಮಾಡ್ತಿದೀನಿ."
"ಹೇಳಿ ಬೇಗ್ನೆ. ದೀಪದ ಗತಿ ಏನಾಗುತ್ತೋ ಆಮೇಲೆ."
"ನೀನು ಬಹಳ ವಿಷಯ ವಿಚಾರಿಸ್ಕೊಂಡೆ. ಆದರೆ ಒಂದನ್ನು ಮಾತ್ರ ಕೇಳಲಿಲ್ಲ
ನೋಡು."
"ಅದೇನೋ?"
"ಇಲ್ಲಿ ಹೋಟ್ಲು ಎಲ್ಲಿದೇಂತ?"
"ನಾನು ಯಾತಕ್ಕೆ ಕೇಳ್ಲಿ ಅದನ್ನ?"
"ಅದ್ಸರಿ ಅನ್ನು. ನನಗಂತೂ ಈ ವಠಾರ ಎಲ್ಲಿದೇಂತ ಗೊತ್ತಾಗೋಕ್ಮುಂಚೇನೆ
ಹೋಟ್ಲಿನ ಪರಿಚಯ ಆಗಿದೆ."
"ಬಿಡಾರ ಬಂದಿದೇವೆ ಅಂತ ಈಗ ಆವರಿಗೆ ಹೇಳ್ಬಿಟ್ಟು ಬರಬೇಕೇನೋ?"
"ನೋಡಿದ್ಯಾ_ ಎಷ್ಷು ಸರಿಯಾಗಿ ಊಹಿಸ್ಕೊಂಡೆ!"
"ನಡೀರಿ. ನಾನೂ ಬರ್ತೀನಿ."
"ರಂಗಮ್ಮನಿಗೆ ಗೊತ್ತಾದರೆ ನಾಳೇನೇ ನೋಟೀಸು ಕೊಡ್ತಾರೆ."
"ಅದೆಲ್ಲಾ ಸಾಕು. ಏನ್ಮಾಡೋಣಾಂತ ಈಗ? ಒಲೆ ಹಚ್ಚಲೋ ಬೇಡ್ವೋ?"
"ಆ ರೈಲುಚೆಂಬು ತಾ.ಹೋಟ್ಲಿಗೆ ಹೋಗಿ ಪೂರಿ ಪಲ್ಯಾನೋ ಚಪಾತೀನೋ
ಕಟ್ಟಿಸ್ಕೊಂಡು, ಕಾಫಿ ತಗೊಂಡ್ಬರ್ತೀನಿ."
"ನೀವು ಅಲ್ಲಿ ಕುಡಿಯೋಲ್ಲ ತಾನೆ?"
"ಎಷ್ಟೊಂದು ಹೊಟ್ಟೆ ಉರಿಯ ನಿಂಗೆ!"
"ಮಗೊಗೆ?"
"ಎಚ್ಚರವಾದರೆ ಇನ್ನೊ ಒಂದು ಚೊರು ಬಿಸ್ಕತ್ತು ಬಾಯಿಗೆ ಹಾಕಿ ಎರಡು
ಚಮಚ ಕಾಫಿ ಕು‍‍‍‍‍ಡಿಸೋದು."
"ಹೊಂ. ನಿಮ್ಕೈಲಿ ಬಚಾಯಿಸ್ಕೊಂಡೋರು ಯಾರು?"
"ಚಂಪಾ ಒಪ್ಪಿಗೆಯಿಂದೆಲೆ ರೈಲುಚೆಂಬನ್ನು ತಂದುಕೊಟ್ಟಳು.
"ಇನ್ನೊಂದು ಬಿಂದಿಗೆ ನೀರು ಹಿಡ್ಕೊಂಡ್ಬಿಡ್ತೀನಿ.ಬೀಗ ಹಾಕ್ಬಿಟ್ಟೇ ಹೋಗಿ."
ಶಂಕರನಾರಾಯಣಯ್ಯ ಚಿಲ್ಲರೆ ದುಡ್ದನ್ನು ಜೀಬಿಗೆ ಸೇರಿಸಿ, ರೈಲುಚೆಂಬನ್ನು
ಕೈಲೆತ್ತಿಕೊಂಡ. ಹೊರ ಒಂದು, ಕೊಳಾಯಿಗೆ ಬೀಗ ಹಾಕಿ, ಬೀಗದ ಕೈಯನ್ನು
ರಂಗಮ್ಮನ ಬಳಿಗೊಯ್ದ.
ರಂಗಮ್ಮ ನಿರ್ವಿಕಾರ ಸ್ವರದಲ್ಲಿ ಕೇಳಿದರು:
"ನೀರು ಆಯ್ತೆ?"
"ಆಯ್ತು."
ಆತನ ಕೈಲಿದ್ದ ರೈಲುಚೆಂಬು ನೋಡುತ್ತ ರಂಗಮ್ಮನೆಂದರು:
"ಹೊರಗೆ ಹೋದರೆ ವಾಪಸು ಬರುವಾಗ ಹಿತ್ತಿಲಗೇಟು ಭದ್ರವಗಿ ಹಾಕ್ಕೊ
ಳ್ಳೀಪ್ಸಾ."
"ಹೊಂ. ಹಾಕ್ಕೋತೀನಿ."
ಶಂಕರನಾರಾಯಣಯ್ಯ ಹೋಟೆಲಿಗೆ ಬಂದಾಗ, ಅಲ್ಲಿ ಬಾಗಿಲು ಮುಚ್ಚುವ
ಸಿದ್ದತೆ ನಡೆದಿತ್ತು.ಬೇರೆ ಯಾವ ತಿಂಡಿಯೂ ದೊರೆಯದ ಕೊನೆಯದಾಗಿ ಉಳಿದಿದ್ದ
ಚೌಚೌವನ್ನೇ ಒಂದು ಪಾವು ಕಟ್ಟಿಸಿಕೊಳ್ಳಬೇಕಾಯಿತು. ಕಾಫಿಯೆಂಬ ಹೆಸರಿನ ಒಂದು
ದ್ರವಕವನ್ನೇನೋ ಅಲ್ಲಿ ಕೊಟ್ಟರು. ಹತ್ತಿರದಲ್ಲೇ ಇದ್ದ ಅಂಗಡಿಯಿಂದ ನಾಲ್ಕು
ಪಚ್ಚಬಾಳೆ ಹಣ್ಣುಗಳನ್ನೂ ಒಂದು ಪ್ಯಾಕೇಟು ಚಾರ್ಮಿನಾರ್ ಸಿಗರೇಟನ್ನೂ ಅತ

ಕೊಂಡುಕೊಂಡ.
....ವಠಾರದ ಮನೆಯಲ್ಲಿ ಒಂದೊಂದಾಗಿ ದೀಪಗಳು ಆರತೊಡಗಿದ್ದುವು
ಪ್ಯಾಂಟು ‍‌ ‍‍‍‍‍‍ಷರಟು ಧರಿಸಿದ್ದ ಯುವಕನೊಬ್ಬ ಚರ್ಮದ ಕಡತಚೀಲವನ್ನು ಎದೆಗೊತ್ತಿ
ಕೊಂಡು ಠೀವಿಯಿಂದ ಮಹಡಿಯ ಮೆಟ್ಟಲೇರುತ್ತಿದ್ದ. ವಠಾರಕ್ಕೆ ಹಿಂತಿರುಗುತ್ತಿದ್ದ
ಶಂಕರನಾರಾಯಣಯ್ಯ ಗೇಟಿನ ಸದ್ದು ಮಾಡಿದಾಗ ಆ ಯುವಕ ತಡೆದು ನಿಂತು,
ಕೆಳಗೆ ತಿರುಗಿ, ನೋಡಿದ. ಆ ಕತ್ತಲಲ್ಲಿ ಒಳಬಂದವರು ಯಾರೆಂಬುದು ಆತನಿಗೆ ಸ್ಪಷ್ಟ
ವಾಗಿ ತಿಳಿಯಲಿಲ್ಲ. ಆತ್ಮವಿಶ್ವಾಸದ ಅಧಿಕಾರಯುಕ್ತ ಸ್ವರದಲ್ಲಿ ಆತ ಕೇಳಿದ:
"ಯಾರದು?"
ಶಂಕರನರಾಯಣಯ್ಯನೇನು ಕಡಮೆ ಆಸಾಮಿಯೆ?
"ನಾನು."
"ಸುಬ್ಬುಕೃಷ್ಣಯ್ಯ?"
"ಅಲ್ಲ. ಶಂಕರನಾರಾಯಣಯ್ಯ-ಹೊಸಬ."
"ಓ... ಕತ್ತಲೇಲಿ ಕಾಣಿಸ್ಲಿಲ್ಲ. ಕ್ಷಮಿಸಿ."
"ಏನೂ ಪರವಾಗಿಲ್ಲ."
ಯುವಕ ತನ್ನ ಹೆಸರು ಹೇಳದೆಯೇ ಮೇಲಕ್ಕೆ ಏರಿದ. ನೀನು ಯಾರೋ
ನಾಳೆ ನೋಡ್ಕೋತೀನಿ_ಎಂದು ಶಂಕರನಾರಾಯಣಯ್ಯ ಮನಸಿನಲ್ಲೆ ಅಂದುಕೊಂಡ.
ಆತನ ದೃಷ್ಟಿ ಗೋಡೆಯತ್ತ ಸರಿಯಿತು. 'ಮನೆ ಬಾಡಿಗೆಗೆ ಇದೆ' ಬೋರ್ಡು
ಅಲ್ಲಿದ್ದಂತೆ ತೋರಲಿಲ್ಲ. ರಂಗಮ್ಮ ಅದನ್ನು ತೆಗೆದು ಒಳಕ್ಕೆ ಒಯ್ದು ಬಿಟ್ಟಿದ್ದರು.
ಹಿತ್ತಿಲ ಗೇಟನ್ನು ಭದ್ರವಾಗಿ ಮುಚ್ಚಿ, ವಠಾರಕ್ಕೆ ಹಳಬನೇನೋ ಎಂಬಂತೆ
ಕತ್ತಲೆಯಲ್ಲಿ ದೃಢ ಹೆಜ್ಜೆಗಳನ್ನಿಡುತ್ತ ಆತ ಕೊನೆಯ ಮನೆ ಸೇರಿದ.
ಮನೆಯೊಳಗಿನಿಂದ ಅಗರಬತ್ತಿಯ ಘಮಘಮ ವಾಸನೆ ಬರುತ್ತಿತ್ತು. ಅಡುಗೆ
ಮನೆಯಲ್ಲಿ ದೇವರಿಗೂ ಜಾಗ ಮಾಡಿಕೊಟ್ಟು, ಆ ಪಠದ ಮುಂದೆ ದೀಪವನ್ನೂ
ಅಗರಬತ್ತಿಯನ್ನೂ ಹಚ್ಚಿಟ್ಟು, ಚಂಪಾ ದೇವರಿಗೆ ನಮಸ್ಕಾರ ಮಾಡಿದ್ದಳು.
ಗಂಡ ಬರುತ್ತಲೇ ಆಕೆ ಕೇಳಿದಳು:
"ಏನ್ರೀ, ಇಲ್ಲಿ ತುಳಸೀಕಟ್ಟೆ ಇದೆ ತಾನೆ?ಕಾಣಿಸ್ಲೇ ಇಲ್ಲ.'
"ಎಂಥಾ ಮಾತಾಡ್ತೀಯೆ! ವಠಾರದಲ್ಲಿ ತುಳಸೀಕಟ್ಟೆ ಇಲ್ದೆ! ಹೊರಗೆ ಹಿತ್ತಿ
ಲಲ್ಲೇ ಇದೆ_ಒಂದು ಮೂಲೇಲಿ."
"ಸರಿ ಹಾಗಾದರೆ" ಎನ್ನುತ್ತ ಚಂಪಾ ಹಾಸಿಗೆ ಹಾಸತೊಡಗಿದಳು.
"ಅದನ್ನ ಆಮೇಲೆ ಮಾಡು-ಕಾಫಿ ಆರಿ ಹೋಗುತ್ತೆ. ಅಲ್ಲಿ ತಿಂಡಿ ಎಲ್ಲಾ
ಆಗ್ಹೋಗ್ಬಿಟ್ಟಿತ್ತು. ನಮ್ಮ ಸೌಭಾಗ್ಯಕ್ಕೆ ಸಿಕಿದ್ದೇ ಇದು-ಚೌಚೌ."
"ಹೋಗಲಿ ಬಿಡಿ. ಇಷ್ಟು ಸಾಲ್ದೇನು? ಹಣ್ಣು ಬೇರೆ ತಂದಿದೀರಾ..."
...ರಾತ್ರೆಯ ಉಪಹಾರ ಮುಗಿಯಿತು.
9

ಎ‍ಚ್ಚರವಾಗದೆಯೆ ಇದ್ದ ಮಗುವಿಗೆ ಮೆತ್ತನ್ನ ಹಾಸಿಗೆ ದೊರೆಯಿತು.
ಶಂಕರನಾರಾಯಣಯ್ಯ ಒಂದು ಸಿಗರೇಟು ಸೇದುತ್ತ ಹಾಯಾಗಿ ಕುಳಿತ.
ಚಂಪಾ ಮಗುವನ್ನೂ ಮಗುವಿನ ತಂದೆಯ ಮುಖವನ್ನೂ ಪ್ರೀತಿಯಿಂದ ನೋಡಿದಳು.
ದೀಪ ಆರಿಹೋಯಿತು.
"ಇಲ್ಲಿ ನಾವು ದೀಪ ಆರಿಸ್ಬೇಕಾದ ತೊಂದರೇನೇ ಇಲ್ಲ," ಎಂದು ಶಂಕರನಾರಾ
ಯಣಯ್ಯ ನಕ್ಕ.
ನಗೆಯ ಶಾಖ ಚಂಪಾವತಿಗೂ ತಗಲಿತು.
ಗಂಡ ಹೆಂಡತಿ ಇಬ್ಬರೂ, ಹಾಸಿಗೆಯ ಮೇಲೆ ತಮಗೂ ಜಾಗ ಬೇಕೆಂದು,
ಮಗುವನ್ನು ಮೂಲೆಯಲ್ಲಿ ಮಲಗಿಸಿದರು.
ಹಗಲು ಬಯಸಿದ್ದನ್ನು ಈಗ ಆಕೆಯೇ ಕೊಟ್ಟಳು. ಅದನ್ನಾತ ಹುಸಿ ಮುನಿಸಿ
ನಿಂದ ವಾಪಸು ಮಾಡಿದ. ಆಕೆ ಮತ್ತೆ ಕೊಡಹೋಡಳು.
ಚಿತ್ರ ಬರೆಯುವ ಶಂಕರನಾರಾಯಣಯ್ಯ ಹೇಳಿದು:
"ಮೊದಲ ರಾತ್ರಿ."

ಬೆಳಗ್ಗೆ ಐದು ಘಂಟೆಯಿಂದಲೇ ಆಗುತ್ತಿದ್ದ ಸದ್ದು ಸಪ್ಪಳ ಕೊನೆಯ ಮನೆಯ

ದಂಪತಿಯನ್ನೂ ಎಚ್ಚರಗೊಳಿಸಿದುವು.
"ಈ ಮನೇಲಿ ನೀವು ಎಂಟು ಘಂಟೆವರೆಗೆ ನಿದ್ದೆ ಹೋದ ಹಾಗೆಯೇ," ಎಂದು
ಚಂಪಾ ಗಂಡನನ್ನು ಕುರಿತು ಹೇಳಿದಳು.
ಬೆಳಗಿನ ಬೆಚ್ಚಗಿನ ನಿದ್ದೆಗೆ ಅ‍ಷ್ಟು ಸುಲಭವಾಗಿ ಎಳ‍್ಳು ನೀರು ಬಿಡುವ ಹಾಗಿರ
ಲಿಲ್ಲ ಶಂಕರನಾರಾಯಣಯ್ಯ. ಹೆಂಡತಿಯ ಸಮೀಪಕ್ಕೆ ಸರಿಯುತ್ತ ನಿದ್ದೆಯ ಗೊಗ್ಗರ
ಧ್ವನಿಯಲ್ಲಿ ಆತ ಹೇಳಿದ:
"ಒಂದು ನಾಲ್ಕು ದಿವಸ. ಅಷ್ಟರಲ್ಲಿ ಅಭ್ಯಾಸವಾಗ್ಬಿಡುತ್ತೆ."
"ನಿಮ್ಮ ಸುಖ ಬಿಟ್ಟುಕೊಟ್ಟೀರಾ ನೀವು? ನಾನು ಮಾತ್ರ ಇಲ್ಲಿ ಇನ್ನು ಆರು
ಘಂಟೆಗೇ ಏಳ್ಬೇಕು."
"ರಾತ್ರಿ ಬೇಗ್ನೆ ಮಲಕೊಂಡ್ಬಿಡು."
"ನೀವು ಬಿಟ್ಟರೆ!"
ಆತ 'ಊ' ಎಂದು ಗಂಟಲಿನಿಂದ ಸ್ವರ ಹೊರಡಿಸುತ್ತ ಆಕೆಯ ಮೃದುವಾದ
ತೋಳಿಗೆ ತನ್ನ ಮೂಗನ್ನು ತೀಡಿದ.
ಪುಣ್ಯಾತ್ಮನಿಗೆ ಮತ್ತೆ ನಿದ್ದೆ ಬಂದುಬಿತ್ತಿದೆ. ಆ ಕತ್ತಲಲ್ಲೂ ಛಾವಣಿಯನ್ನೇ
ದಿತ್ತಿಸುತ್ತ, ವಠಾರದಿಂದ ಒಂದೊಂದಾಗಿ ಹೊರಬರುತ್ತಿದ್ದ ಬಗೆಬಗೆಯ ಸದ್ದುಗಳಿಗೆ
ಕಿವಿಗೊಡುತ್ತ, ನಿದ್ದೆ ಹೋಗಿದ್ದ ಮಗುವನ್ನು ಬಲತೋಳಿನಿಂದ ಬಳಸಿ ಚಂಪಾ
ಹೊತ್ತು ಕಳೆದಳು
...ಹೊರಗಿನಿಂದ ಯಾರದೋ ಸ್ವರ ಕೇಳಿಸಿತು.
"ಘಂಟೆ ಆರಾಯ್ತು. ಕಾಮಾಕ್ಷಿ ಮನೆ ಗಡಿಯಾರ ನೋಡ್ಕೊಂಡು ಬಂದೆ."
ಆರು ಆಗಿಹೋಯ್ತೆ? ಈ ವಠಾರದ ಗವಿಯೊಳಕ್ಕೆ ಬೆಳಕು ಇಳಿಯುವುದೇ
ತಡವೇನೋ?-ಎಂದು ಕೊಂಡಳು ಚಂಪಾ. ಮಲಗಿದ್ದು ಸಾಕೆಂದು ಎದ್ದು ಕುಳತಳು.
ಆಕೆಯ ಕಿವಿಗೆ ಬಿದ್ದ ಗಡಿಯಾರ ಎಂಬ ಪದ ಬೇರೆ ಯೋಚನೆಗಳಿಗೂ ಕಾರಣ
ವಾಯಿತು. ತನ್ನ ಬಾಣಂತಿತನದಲ್ಲಿ ಮಾರಾಟವಾಗಿ ಹೋಗಿತ್ತು ಗಂಡನ ಕೈ ಗಡಿಯಾರ.
ಆ ಬಳಿಕ ತಾನೆಷ್ಟು ಪೀಡಿಸಿದರೂ ಆತ ಹೊಸತೊಂದನ್ನು ಕೊಂಡುಕೊಳ್ಳಲಿಲ್ಲ. ಹಾಗೆ
ಕೊಂಡುಕೊಳ್ಳಲು ಹಣವಿರಲಿಲ್ಲ. ಅಲ್ಲಿಂದ ಇಲ್ಲಿಂದ ಆ ಕೆಲಸ ಈ ಕೆಲಸಕ್ಕೆಂದು
ಮುಂಗಡ ಪಡೆಯುತ್ತಿದ್ದ ಹಣದಿಂದಲೇ ಸಂಸಾರದ ವೆಚ್ಛ ಸಾಗುತಿತ್ತು. ಅದ
ರಲ್ಲಿಯೂ ನಾಲ್ಕು ಪುಡಿಕಾಸು ಎಂದಾದರೂ ಉಲಿದಾಗ, ತನಗಾಗಿ ಒಂದು ಸೀರೆ
ಯನ್ನೋ ರವಕೆ ಕಣವನ್ನೋ ಮಗುವಿನ ಲಂಗಕ್ಕಾಗಿ ಬಟ್ಟೆಯನ್ನೋ ಆತ ತರುತ್ತಿದ್ದ.
ಹಾಗೆ ತಂದಾಗ ಚಂಪಾವತಿಯ ಹೃದಯ ತುಂಬಿ ಬರುತ್ತಿತ್ತು. ಆದರೆ ತನ್ನ
ಸ್ವಂತಕ್ಕಾಗಿ ಆತ ಏನನ್ನೂ ಕೊಳ್ಳುತ್ತಿಲ್ಲವಲ್ಲಾ ಎಂದು ನೋವೂ ಆಗುತ್ತಿತ್ತು.
"ನಂಗೆ ಇದೆಲ್ಲಾ ಬೇಡೀಂದ್ರೆ.ಎಷ್ಟು ಸೀರೆ, ಎಷ್ತು ರವಕೆ-ಸಾಕು
ಇಷ‍್ಟೊಂದು," ಎಂದು ಗಂಡನೊಡನೆ ಆಕೆ ಜಗಳವಾಡಿದ್ದಳು.
"ನಿಂಗೆ ಬೇಡವಾದರೆ ಬೇರೆ ಯಾರಿಗಾದರೂ ಕೊಡ್ಲೇನು?"
-ಆತ ನಗುತ್ತ ಕೆಣಕಿ ಮಾತನಾಡಿದ್ದ.
"ಸಾಕು ತಮಾಷೆ.ಯಾವತ್ತೂಂದ್ರೆ ನೀವು ಗದಿಯಾರ ಕೊಂಡ್ಕೊಳ್ಳೋದು?"
-ಆಕೆ ರೇಗಿ ಕೇಳಿದ್ದಳು.
"ಗಡಿಯಾರದ ಯೋಚ್ನೆ ನಿಂಗೆ ಯಾತಕ್ಕೆ? ನೀನು ಹೇಳೋ ಹೊತ್ತಿಗೆ
ಮುಂಚೇನೆ ಮನೆ ಸೇರಿದ್ರೆ ಸಾಲ್ದೆ?"
ಗಂಡ ಹಾಗೆ ಹೇಳಿದಾಗ ತುಂಬು ನೋಟದಿಂದ ಅವನನ್ನು ತಾನು ನೋಡಿ
ದ್ದಳು. ಆತನೋ ಘಾಟಿ. ಆ ಪರಿಸ್ಥಿತಿಯ ಪೂಣ್ ಲಾಭ ಪಡೆದಿದ್ದ.
...ಚಂಪಾ ಬಿಚ್ಚಿದ್ದ ಕೂದಲ ರಾಶಿಯನ್ನು ಬಿಗಿ ಹಿಡಿದು ಗಂಟು ಹಾಕಿದಳು.
ಅಗಣಿ ತೆಗೆದು ಕದವನ್ನಿಷ್ಟು ಓರೆ ಮಾಡಿ ಇಣಕಿ ನೋಡಿ ಓಣಿಯುದ್ದಕ್ಕೂ ದೃಷ್ಟಿ
ಹಾಯಿಸಿದಳು ಹಾಗೆಯೇ ನಡು ಹಾದಿಯ ಮೂಲಕ ಮುಖ್ಯ ಮನೆಯನ್ನೂ ದಾಟಿ
ಹೊರ ಅಂಗಳಕ್ಕೆ ಹೋಗಿ,ವಠಾರದ ಆಚೆಗಿನ ಬೇರೆಯೇ ಒಂದು ಜಗತ್ತಿನಂತೆ ಕಂಡ.
ಆ ಬೀದಿ-ಮನೆಗಳನ್ನು ನೋಡಿದಳು.
ಆಕೆ ಅಲ್ಲಿ ನಿಂತಿದ್ದಂತೆಯೇ ವಠಾರದ ಹೆಂಗಸರು ಒಬ್ಬೊಬ್ಬರಾಗಿ ಬಂದು ತಮ್ಮ
ಬಿಂದಿಗೆಯನ್ನೋ ಬಕೀಟನ್ನೋ ಕೊಳಾಯಿಯಿಂದ ಮೊದಲ್ಗೊಂಡು ಒಂದರ
ಹಿಂದೊಂದಾಗಿ ಇರಿಸಿದರು. ಕೆಲವರು ತಮ್ಮ ಮನೆ ಗುರುತಿಗಾಗಿ ಬರಿಯ ಪಾತ್ರೆ
ಗಳನ್ನೂ ಇಟ್ಟರು.
ರಾತ್ರೆ ತನ್ನೊಡನೆ ಮಾತನಾಡಿದ ಪದ್ಮಾವತಿ ಬಂದಾಗ ಚಂಪಾ ಮುಗುಳು
ನಕ್ಕಳು
"ಇನ್ನು ಸ್ವಲ್ಪ ಹೊತ್ನಲ್ಲೇ ಕೊಳಾಯಿ ಬೀಗ ತೆಗೆದ್ಬಿಡುತ್ತಾರೆ ನಿಮ್ಮ ಬಿಂದಿ
ಗೇನು ಇಟ್ಬಿಡಿ, ಎಂದು ಪದ್ಮಾವತಿ ಹೊಸಬಳನ್ನು ಉದ್ದೇಶಿಸಿ ಹೇಳಿದಳು.
"ಹೊನ್ರಿ ಇಡ್ತಿನಿ ಎಂದಳು ಚಂಪಾವತಿ. ಅಷ್ಟಕ್ಕೆ ಮಾತು ನಿಲ್ಲಿಸಲಾರದೆ
ಅವಳೆಂದಳು.
"ನೀರಿಗೆ ಕ್ಯೂ ನಿಂತ್ಕೋಬೇಕು ಅಲ್ವೆ?
ಹಿ೦ದು ಮುಂದು ನೋಡಿ ಯಾರೊ ಇಲ್ಲವೆಂದು ಮನವರಿಕೆ ಮಾಡಿಕೊಂಡು
ಪದ್ಮವತಿ ಹೊಸಬಳನ್ನು ಉದ್ದೇಶಿಸಿ ಹೇಳಿದಳು.
"ಇಲ್ಲಿ ಇದೊಂದು ಗೋಳು.
ತಗ್ಗಿದ ಧ್ವನಿ. ಧ್ವನಿಯಲ್ಲಿ ಅಳುಕು.
"ಜಾಸ್ತಿ ಜನ ಇದ್ದ ಕಡೆ ಹೀಗೆಲ್ಲಾ ಮಾಡ್ಲೇಬೇಕಾಗುತ್ತೆ," ಎಂದು ನುಡಿದು,
ಪದ್ಮಾವತಿ ನಿಜ ವಿಷಯವನ್ನು ತಿಳಿಸಿದಳು:
"ಹೂಂ. ಮೊದ್ಲು ಮೀಟ್ರ ಇರ್ಲಿಲ್ವಂತೆ. ಆಗ ಎಷ್ಟು ಬೇಕಾದರೂ ಎಷ್ಟೊ
ತ್ತಿಗೆ ಬೇಕದರೊ ನೀರು ಹಿಡಕೋತಿದ್ರು. ಮೀ೨ಪಟರು ಬಂದ್ಮೇಲೆ ಬೀಗ ಹಾಕೋಕೆ
ಶುರು ಮಾಡಿದ್ದು, ಆಗಲೂ ಇಷ್ಟು ತಾಪತ್ರಯ ఇರಿಲ್ಲ, ಇಷ್ಟೆ ಹೊತ್ತು ಅಂತೇನೊ
ಇರಿಲ್ಲ, ಆಮೇಲೆ ನೀರು ಜಾಸ್ತಿ ಖರ್ಚಾಗುತ್ತೇಂತ ಗಲಾಟೆಯಾಯ್ತಮ್ಮ
ನಾನು ಮುಂಚೆ ನಾನು ಮುಂಚೆ ಅಂತ ಜಗಳ ಬೇರೆ.. ಗೊತ್ತೇ ಇದೆಯಲ್ಲ ನೀರಿನ
ಜಗಳ, ಇತ್ತಿಚೀಗೆ ನಾಲ್ಕೈದು ವರ್ಷಹಳಿಂದ ಹೀಗೆ ಕ್ಯೋ ನಿಲ್ಲೋಕೆ ರಂಗಮ್ಮ
ಕಲಿಸಿದ್ರು."
"ರಂಗಮ್ನೋರು ಕಲಿಸಿದ್ರೆ?"
ಉತ್ತರ ಕೊಡಲು ಹೊರಟ ಪದ್ಮಾವತಿಯ ಸ್ವರ ಮತ್ತಷ್ಟು ತಗ್ಗಿತು
"ಹೂಂ. ಅವರೇನೂಂತ ತಿಳಕೊಂಡ್ರಿ? ಒಂದು ದಿನ ಅವರು ಇಲ್ವೆ ಹೋಗ್ಲಿ
ಈ ವಠರಾ ನಡಿಯುತ್ಯ ಹೇಗೆ ನಡಿಯುತ್ಯೆ ಹೇಗೆ?"
"ಒಳಗೆ ಹೋಗ್ರೀನಪ್ಪ. ಮಗು ಎದ್ದಿದೆಯೋ ಏನೋ...?" ಎಂದು ಚಂಪಾ
ಅವಸರವಾಗಿ ತನ್ನ ಗೂಡಿನತ್ತ ಬಂದಳು.
ಮಗು ಎದ್ದಿರಲಿಲ್ಲ. ಹೇಗೂ ತಾನು ಕೊನೆಯವಳು: ನೀರಿಗೆ ಪಾತ್ರೆ ಆಮೇಲೆ
ಇಟ್ಟರಾಯ್ತು ಎ೦ದು ಒಲೆ ಹಚ್ಚಿದಳು. ಬಿಸಿ ನೀರು ಕಾಯಿಸುವುದಕ್ಕಾಗಿಯೇ ಇದ್ದ
ಸಣ್ಣ ಹ೦ಡೆಯಲ್ಲಿ ನೀರು ಕಾಯಿಸಿದಳು. ಸ್ನಾನವನ್ನೂ ಮಾಡಿ ಮುಗಿಸಿ ಕಾಫಿಗೆ
ನೀರಿಟ್ಟಳು. ಹಾಲಿನವಳನ್ನು ಗೊತ್ತು ಮಾಡುವ ಕೆಲಸವೊ೦ದಿತ್ತು. ಓಣಿಯೊಳಗೆ
ಹಾಲವ್ವ ಬರುವ ಸದ್ದಿಗೆ ಆಕೆ ಕಿವಿಗೊಟ್ಟಳು.
ಹಾಲವ್ವನಿಗೆ ಸ೦ಬ೦ಧಿಸಿದ ಸ೦ಭಾಷಣೆ_ಎಷ್ಟೊ೦ದು ಕಡೆ ಚ೦ಪಾ ಕೇಳಿದ್ದಳು
ಅದನ್ನು!ಆದರೆ ಎಲ್ಲ ಕಡೆಗಳಲ್ಲೂ ಆ ಮಾತುಕತೆಯ ರೀತಿಯೊ೦ದೇ.
ಈ ಓಣಿಗೆ ಬೇರೆ ಬೇರೆಯಾಗಿಯೇ ಇಬ್ಬರು ಬ೦ದರು. ಎದುರು ಮನೆ
ಗೊಬ್ಬಳು. ಪಕ್ಕದ ಮನೆಗೊಬ್ಬಳು.
ಸ್ವರಗಳು ಕೇಳಿಸಿದವು.
_"...ಅಯ್ಯೋ!ನೀರೇ!"
_"...ಇನ್ನೂ ಸ್ವಲ್ಪ ಹಾಕು."
_"...ಹೂ೦. ಕೊಸರು."
ಚ೦ಪಾ ಒ೦ದು ಲೋಟವನ್ನು ಕೈಯಲ್ಲಿ ಹಿಡಿದು ಬಾಗಿಲಿಗೆ ಬ೦ದು ನಿ೦ತಳು.
ತನ್ನ ಮನೆಯ ಬಾಗಿಲಲ್ಲಿ ಹಾಲು ಪಾತ್ರೆಯೊಡನೆ ಪದ್ಮಾವತಿ ಕೇಳಿದಳು:
"ಹಾಲು ಹಾಕಿಸ್ಕೋತೀರಾ?"
"ಹೂ೦ ಕಣ್ರಿ...."
ಪದ್ಮಾವತಿ ಹೊಸ ಬಿಡಾರದವರ ಪರವಾಗಿ ಮಾತನಾಡಿದಳು:
"ವರ್ತನೆ ಗೊತ್ಮಾಡ್ಕೊತೀಯೇನವ್ವಾ?"
ಹಾಲವ್ವ ಚ೦ಪಾವತಿಯನ್ನು ನೋಡುತ್ತಾ ಕೇಳಿದಳು:
"ಎಷ್ಟು ಬೇಕು?
ಉತ್ತರವನ್ನು ಹಾಲವ್ವಳೊಬ್ಬಳೆ ಅಲ್ಲ, ಸುತ್ತಲಿದ್ದ ಹಲವರು ಇದಿರು ನೋಡಿ
ದರು. ಹೊಸ ಮನೆಯವರು ಎಷ್ಟು ಹಾಲು ಕೂಳ್ಳುವರೆ೦ದು ತಿಳಿಯುವ ತವಕ.
ಹಾಲವ್ವಳೊಬ್ಬಳನ್ನೇ ನೋಡುತ್ತ ಚ೦ಪ ಅ೦ದಳು:
"ಒ೦ದು ಪಾವು."
"ಚ೦ಜೆಗೂ ಆಕೀಸ್ಕೊ೦ತೀರಾ?"
"ಇಲ್ಲ. ಬೆಳಗ್ಗೆ ಮಾತ್ರ."
ದಿನಕ್ಕೊ೦ದೇ ಪಾವು. ಇವರೂ ನಮ್ಮ ಹಾಗೆಯೇ ಎ೦ದುಕೊ೦ಡರು, ಚ೦ಪಾ
ವತಿಯ ಉತ್ತರ ಕೇಳಿದವರೆಲ್ಲ.
"ಅ೦ಗೇ ಮಾಡಿ."
"ಇವತ್ನಿ೦ದ್ಲೇ ಹಾಕು."
ಹಾಲವ್ವ ಅನುಮಾನಿಸಿದಳು.
"ಇನ್ನೂ ಹತ್ತು ಮನೆ ಐತವ್ವ" ಅಂದಳು.
"ಹತ್ತರ ಜತೇಲಿ ಹನ್ನೊಂದು. ಹೆಂಗೋ ಸುಧಾರಿಸ್ಕೊಂಡರಾಯ್ತು, ಕೊಟ್ಬಿ
ಡವ್ವಾ," ಎಂದು ಪದ್ಮಾವತಿಯೂ ಶಿಫಾರಸು ಮಾಡಿದಳು.
ಹಾಲವ್ವ ಒಂದು ಪಾವು ಅಳೆದಳು.
"ಹೆಂಗೆ?" ಎಂದಳು ಚಂಪಾ, ದರ ವಿಚಾರಿಸುತ್ತ.
ಹಾಲವ್ವ ಬುಟ್ಟಿಯನ್ನು ತಲೆಯ ಮೇಲಿರಿಸಿ ಎದ್ದು ನಿಂತು ಅಂದಳು:
"ಇವರೆಲ್ಲಾ ಎಂಗ್ಕೊಡ್ತಾರೊ ಆಂಗೆ. ಅವರ್ಗೊಂದು ನಿಮ್ಗೊಂದಾ? ರೂಪಾ
ಯಿಗೆ ಎಲ್ಡು ಸೇರು. ನೀರಾಲೂಂತ ಜಗಳ ಮಾತ್ರ ಕಾಯ್ಬಾರ್ದು. ಈಗ್ಲೆ
ಯೋಳಿದೀನಿ."
ನಿರುತ್ತರಳಾಗಿದ್ದ ಪದ್ಮಾವತಿ ಹಾಲವ್ವನ ಮಾತನ್ನು ಅಲ್ಲಗಳೆಯಲಿಲ್ಲ. ಚಂಪಾ
ಒಳಗೆ ಹೋಗಿ ಹಾಲನ್ನು ಬಿಸಿಗಿಟ್ಟಲು.
"ಏಳೀಂದ್ರೆ ಕಾಫಿ ಆರ್ಹೋಗುತ್ತೆ," ಎಂದು ಗಂಡನನ್ನು ಎರಡು ಮೂರು ಸಾರೆ
ಕರೆದು, ಎಬ್ಬಿಸಿದಳು.
ಕಾಫಿ ಕುಡಿದು ಶಂಕರನಾರಾಯಣಯ್ಯ ಅಳುತ್ತಲೇ ಇದ್ದ ಮಗುವನ್ನು ಸಂತೈ
ಸಲು ಯತ್ನಿಸಿದ. ಒಂದು ಸಿಗರೇಟು ಹಚ್ಚಿಕೊಂಡು ಉಂಗುರ ಉಂಗುರವಾಗಿ ಹೊಗೆ
ಯುಗುಳುತ್ತಾ ಅದನ್ನು ಮಗುವಿಗೆ ತೋರಿಸುತ್ತಾ ಆಟವಾಡಿಸಿದ.
ಆದರೆ ಆ ಮಗಳು ಅಳು ನಿಲ್ಲಿಸಿದ್ದು, ತಾಯಿ ಎತ್ತಿಕೊಂಡಾಗಲೇ.
"ನಿನ್ನ ಮಗಳೇನೇ. ಯಾವ ಸಂಶಯವೂ ಇಲ್ಲ."
"ಹೇಳಿದ್ದನ್ನೇ ಎಷ್ಟು ಸಾರೆ ಹೇಳ್ತೀರಾ?"
__ಚಂಪಾ ಗಂಡನನ್ನು ಟೀಕಿಸಿದಳು.
"ಹೋಗಿ ಏನಾದರೂ ತರಕಾರಿ ತಗೊಂಡ್ಬನ್ನಿ," ಎಂದು ಗಂಡನಿಗೆ ಕೆಲಸ
ಕೊಟ್ಟಳು.
ಅಷ್ಟರಲ್ಲಿ ಊರುಗೋಲಿನ ಟಕ್ ಟಕ್ ಸದ್ದಾಯಿತು. ಗಂಟಲಿನಿಂದ ಹೊರ
ಡುತ್ತಿದ್ದ ನರಳುವ ಸ್ವರ ಕೇಳಿಸಿತು. ಶಂಕರನಾರಾಯಣಯ್ಯ ಹೆಂಡತಿಯ ಮುಖ
ನೋಡಿದ. ಹೆಂಡತಿ ಗಂಡನ ಮುಖ ನೋಡಿದಳು.
ಮರುಕ್ಷಣವೇ ರಂಗಮ್ಮ ಬಾಗಿಲಲ್ಲಿ ಪ್ರತ್ಯಕ್ಷವಾದರು:
"ಚೆನ್ನಾಗಿದೀರೇನಪ್ಪ? ಎಲ್ಲಾ ಅನುಕೂಲವಾಗಿದ್ಯೆ?"
ಶಂಕರನಾರಾಯಣಯ್ಯನಿಗೆ ಕೈಲಿದ್ದ ಸಿಗರೇಟನ್ನು ಏನು ಮಾಡಬೇಕೋ ತಿಳಿ
ಯಲಿಲ್ಲ. ತನಗೆ ವಯಸ್ಸು ಮೂವತ್ತೈದು ಆಗಿದ್ದರೂ ರಂಗಮ್ಮನಂತಹ ವಯಸ್ಕ
ರೆದುರಲ್ಲಿ ತಾನು ಹುಡುಗನೇ ಎಂದು ಆತನಿಗೆ ಭಾಸವಾಗುತ್ತಿತ್ತು. ಆದರೆ ಆತ
ಸಿಗರೇಟನ್ನು ಆರಿಸಲಿಲ್ಲ. ಸ್ವಲ್ಪ ಮರೆಮಾಡಿ, ಕುಳಿತಲ್ಲಿಂದಲೇ ಹೇಳಿದ:
"ಓಹೋ. ಎಲ್ಲಾ ಸರಿಯಾಗಿಯೇ ಇದೆ. ಒಳಗ್ಬನ್ನಿ ರಂಗಮ್ನೋರೆ."

ರಂಗಮ್ಮನ ವಠಾರ
71

"ಇಲ್ಲವಪ್ಪ, ಬೆಟ್ಟದಷ್ಟು ಬಿದ್ದಿದೆ ಕೆಲಸ... ಎನ್ಮಾಡ್ತಿದಾಳೆ ಮಗಳು?"
"ನೋಡಿ, ಒಂದು ಸಲ ಪಿಟೀಲು ಬಾರಿಸಿ ಆಯ್ತು," ಎಂದು ಚಂಪಾ ಉತ್ತರ
ವಿತ್ತಳು.
"ಹೂಂ. ನೀರು ಎಲ್ಲರೂ ಹಿಡ್ಕೊಡದ್ದಾಯ್ತು... ಯಾರೋ ಒಬ್ಬಿಬ್ಬರು
ಮಾತ್ರ ಇದಾರೇಂತೆ ತೋರುತ್ತೆ. ನೀವು ಬಂದ್ಬಿಡೀಂತ ಹೇಳೋಕೆ ಬಂದೆ"
"ಬಂದೆ ರಂಗಮ್ನೋರೆ."
ರಂಗಮ್ಮ ಹಿಂತಿರುಗಿದೊಡನೆ ಶಂಕರನಾರಾಯಣಯ್ಯ ಕೇಳಿದ:
"ನಾನು ಹೋಗಿ ಮೂರು ಬಿ೦ದಿಗೆ ತ೦ದ್ಭಿಡೇನೇ?"
"ನಿಮ್ಮ ದಮ್ಮಯ್ಯ, ಅಷ್ಟು ಮಾಗ್ಡ್ಭೇಡಿ ಸದ್ಯಃ. ನೀರು ನೀವು ಹೊತ್ತದ್ದು
ಇವರೆಲ್ಲಾ ನೋಡ್ಬಿಟ್ರೆ ಆಘೋಯ್ತು?"
"ಹಾಗ೦ತೀಯಾ?"
"ಹೊ೦. ಹಾ೦ಗತೀನಿ...ಸಿಗರೇಟು ಸೇದ್ಕೊ೦ಡು ಇಲ್ಲೇ ಇರಿ. ಮಗೂನ
ನೋಡ್ಕೊಳ್ಳಿ ಸ್ವಲ್ಪ. ಬ೦ದ್ಬಿಟ್ಟೆ."
"ಆಗಲಿ, ಅಮ್ಮಣ್ಣಿ."
...ಚ೦ಪಾ ನೀರು ತು೦ಬಿಸಿಯಾದ ಮೇಲೆ, ಶ೦ಕರನಾರಾಯಣಯ್ಯ ಅ೦ಗಡಿ
ಬೀದಿಗೆ ಹೋಗಿ ತರಕಾರಿ ತ೦ದ. ಆತ ಹಿ೦ದಿರುಗುವಷ್ಟರಲ್ಲೆ ವಠಾರದ ಗ೦ಡಸರಲ್ಲಿ
ɻ ಹೆಚ್ಚಿನವರೆಲ್ಲ ಹೊರಹೋಗಿದ್ದರು. ಗು೦ಡಣ್ಣನೊಬ್ಬ ಗೇಟಿನ ಬಳಿ ನಿ೦ತು,
ಮುಗುಳ್ನಕ್ಕ. ಶ೦ಕರನಾರಾಯಣಯ್ಯ, ರಾತ್ರೆ ತನ್ನನ್ನು ಮಾತನಾಡಿಸಿದವನ ನೆನ
ಪಾಗಿ, ಮಹಡಿಯತ್ತ ನೋಡಿದ. ಮೂಲೆಯ ಕಿಟಿಕಿಯಿ೦ದ ಕುಡಿಮೂಸಿ ಇದೇ ಈಗ
ಚಿಗುರೊಡೆಯುತ್ತಿದ್ದ ಮುಖವೊ೦ದು ಆತನನ್ನು ನೋಡುತ್ತಿತ್ತು. ಹಾಗೆ ನೋಡು
ತ್ತಿದ್ದವನು ಜಯರಾಮು. ಈ ಹುಡುಗ ರಾತ್ರೆ 'ಯಾರದು?' ಎ೦ದು ತನ್ನನ್ನು
ಪ್ರಶ್ನಿಸಿರಲಾರ ಎನ್ನಿಸಿತು ಶ೦ಕರನಾರಾಯಣಯ್ಯುನಿಗೆ. ಆತ ಸಮಸ್ಯೆಯ ಪರಿಹಾರ
ಕ್ಕಾಗಿ ಗು೦ಡಣ್ಣನ ನೆರವು ಕೆಳಿದ.
"ನಿಮ್ಮ ಹೆಸರು ಗೊತ್ತಾಗಿಲ್ಲ."
"ಗು೦ಡಣ್ಣ ಅ೦ತ."
ಹೊಸಬರು ತಾವಾಗಿಯೇ ಆ ರೀತಿ ತನ್ನ ಪರಿಚಯ ಮಾಡಿಕೊ೦ಡರೆ೦ದು
ಗು೦ಡಣ್ಣನಿಗೆ ಹೆಮ್ಮೆ ಎನಿಸಿತು.
"ನನ್ನ ಹೆಸರು ಶ೦ಕರನಾರಾಯಣಯ್ಯ."
"ಗೊತ್ತು ರ೦ಗವೋರು ಮೊನ್ನೆಯೇ ಹೇಳಿದ್ರು."
"ಹಾಗೇನು? ಮಹಡೀ ಮೇಲೆ ಯಾರಿರ್ತಾರೆ ಗು೦ಡಣ್ಣ?"
"ಸ್ಕೂಲು ಹುಡುಗರು," ಎ೦ದು ತಾತ್ಸಾರದಿ೦ದ ಹೇಳಿ ಗು೦ಡಣ್ಣ ಮು೦ದು
ವರಿಸಿದ:
"ಆ ಕೊನೇಲಿ ಬುಕ್ ಏಜಂಟು ಪುಸ್ತಕ ಮಾರ್ತಾರೆ, ಅಲ್ಲಿ నింತಿದಾನಲ್ಲಾ
ಅವನೇ-ಅವರ ಮಗ ಜಯರಾವು."
ತನ್ನ ಪ್ರಸ್ತಾಪ ಬಂತೆಂದು ಜಯರಾಮು ಮುಖ ತಿರುಗಿಸಿದ. ಆದರೆ
ಗುಂಡಣ್ಣನ ಉತ್ತರದಿಂದ ಶಂಕರನಾರಾಯಣಯ್ಯನ ಸಮಸ್ಯೆ ಬಗೆಹರಿಯಲಿಲ್ಲ.
“ಬೇರೆ ಯಾರೊ ಇಲ್ವೇನು?"
"ಇದಾರೆ-ಚಂದ್ರಶೇಖರಯ್ಯ ಅಂತ ఒಬ್ರು ಇನ್‌ಶೊರೆಸ್ಸು...."
ಗುಂಡಣ್ಣನ ಮಾತು ಪೂರೈಸುವುದಕ್ಕೆ ಮುಂಚೆಯೇ ಶಂಕರನಾರಾಯಣಯ್ಯ
ಮನೆಯತ್ತ ಬೇಗ ಬೇಗನೆ ಕಾಲು ಹಾಕಿದ. ಆ ಯುವಕನೇ, ಸಂದೇಹವಿರಲಿಲ್ಲ.
ಪರಿಚಯ ಮಾಡಿಕೊಳ್ಳುವ ಯೋಚನೆ! ವಿಮಾ ಸಂಸ್ಥೆಯ ಪ್ರತಿನಿಧಿಯೊಡನೆ ಪರಿ
ಚಯವೇ? ವಠಾರದಲ್ಲಿ ತಾನು ದೂರವಿಡಬೇಕಾದ ವ್ಯಕ್ತಿ ಈ ಚಂದ್ರಶೇಖರಯ್ಯ
ಎಂದು ಆತ ಆ ಕ್ಷಣವೇ ತೀರ್ಮಾನಿಸಿದ.
ಹೊತ್ತು ಏರುತ್ತಿತ್ತು, ಹೆಂಗಸರು ಮಕ್ಕಳಿಂದಷ್ಟೇ ತುಂಬಿದ ವಠಾರ. ಇದು
ಹೊಸ ಜಾಗನಲ್ಲ. ಬಹಳ ದಿನಗಳಿಂದಲೂ ತಾನು ನೋಡುತ್ತ ಇದ್ದ ದೃಶ್ಯ-ಎಂದು
ಆತನೆಗೆ ಭಾಸವಾಯಿತು.
ಬಾಗಿಲಿನೊಳಕ್ಕೆ ಕಾಲಿಡುತ್ತ ಆತ ಹೇಳಿದ:
" ಏ ಚಂಪಾ.. ಇಷ್ಟು ಹೊತ್ತಿಗೆ ವಠಾರದಲ್ಲಿ ಗಂಡಸರು ಯಾರೂ ಇರಲ್ವಲ್ಲೇ!
ಇನ್ನು ನಾನೂ ಬೆಳಗ್ಗೆ ಎದ್ದ ತಕ್ಷಣ ಹೊರಟ್ಟಿಡಬೇಕು."
"ಯಾಕೋ?יי
"ಮತ್ತೆ! ನಾನು ವಠಾರದಲ್ಲೆ ಇದ್ದರೆ ಸುಮ ನಿರು ತರೆಯೇ ಇವರೆల్ల?"
"ಏನಾಡ್ತಾರೆ?"
“ಈ ಚಂಪಾ ಗಂಡನನ್ನ ಮನೇಲೆ ಇಟ್ಟೊಂಬಿಡ್ತಾ ಅಂತಾರೆ."
“ಸಾಕು ನಿಮ್ರಮಾಷೆ. ಬಾಗಿಲು ಅಡ್ಡ ಮಾಡಿ ಸ್ವಲ್ಪ ತರಕಾರಿ ಹೆಚ್ಚಿ
ಅದೇನು ತಂದಿದೀರೋ?”
"ನೋಡಿದ್ಯಾ ಚಾಕರೀನೊ ಮಾಡಿಸ್ಕೊತಾಳೆ-ಅಂತ ಅವರು ಹೇಳಿದ್ರೂ
ತಪ್ಪೇನು?"
ಶಂಕರನಾರಾಯಣಯ್ಯ ಹನ್ನೊಂದು ಘ೦ಟೆಯ ಹೊತ್ತಿಗೆ ಸಾನ ಊಟ
ಎರಡೂ ಮುಗಿಸಿ ಗಾಂಧಿನಗರಕ್ಕೆ ಹೊರಟ. ಕೋಹಿನೊರು ಹಂಚಿಕೆಗಾರರಿಗೋಸ್ಕರ,
ಆರು ತಿಂಗಳ ಅನಂತರ ಬಿಡುಗಡೆಯಾಗಲಿದ್ದ ಒಂದು ಹಿಂದೀ: ಚಲಚ್ಚಿತ್ರಕ್ಕೆ ಜಾಹೀ
ರಾತು ಚಿತ್ರ ಬರೆಯುವ ಕೆಲಸ ಆರಂಭವಾಗಿತ್ತು. ಮನುಷ್ಯರನ್ನು ಇದ್ದುದಕ್ಕಿಂತಲೂ
ನಾಲ್ಕು ಪಾಲು ಗಾತ್ರದಲ್ಲಿ ತೋರಿಸುವ ಚಿತ್ರಗಳು, ಬಟ್ಟೆಯ ಮೇಲೆ ಅಳತೆ ಕೋಲಿನ
ಆಧಾರದಿಂದ ಪ್ರತಿರೂಪವನ್ನು ಒಡಮೂಡಿಸಿ, ದೊಡ್ಡ ದೊಡ್ಡ ಬ್ರಷ್ ಹಿಡಿದು ಬಣ್ಣ
ಬಳೆಯುವ ಕೆಲಸ.
ಚಪ್ಪಲಿ ಮೆಟ್ಟಿಕೊಂಡು ಶಂಕರನಾರಾಯಣಯ್ಯ ಅಂಗಳಕ್ಕಿಳಿದ. ಚ೦ಪಾ
ಕೂಸನ್ನೆತ್ತಿಕೊ೦ಡು ಗೇಟನವರೆಗೂ ಆತನನ್ನು ಹಿ೦ಬಾಲಿಸಿ బంದಳು.
ಗೇಟಿನ ಹೊರಗೆ ಒಂದು ಕ್ಷಣ ನಿಂತು ಶಂಕರನಾರಾಯಣಯ್ಯ ಕೇಳಿದ:
"ಎನಾದರು ತರಬೇಕೇನು?"
"ದುಡು ಕೈಗೆ ಬರೋ ಲಕ್ಷಣ ಲಕ್ಷಣ ಇದೆಯೊ?"
"ಅದ್ಯಾ?ಕೆ ನಿ೦ಗೆ?
"ನ೦ಗೇನೂ ಬೇಡಿಪ್ಪಾ."
“ಸರಿ ಮತ್ತೆ!"
ಬಲು ಸುಲಭವಾಗಿ ರೇಗುವ ಗುಣವಿತ್ತು ಶಂಕರನಾರಾಯಣಯ್ಯನಿಗೆ. ಆತ
ರೇಗಿದೊಡನೆ ಚ೦ಪಾಗೆ ಸಂತೋಷವಾಗುತ್ತಿತ್ತು.
"ಹೋಗಲಿ. ಹಾದೀಲಿ ಎಲ್ಲಾದರೂ ಓ೦ದು ಕುಚ್ಚು ಹೂ ತನ್ನಿ."
"ಅಬ್ಬ!"
ವಠಾರದ ಮು೦ಭಾಗದ ಕಿಟಕಿಗಳಿ೦ದಲೂ ಬೀದಿಯಾಚಿಗಿನ ಎದುರು ಮನೆ
ಗಳಿ೦ದಲೂ-ಬೀದಿಯಲ್ಲಿ ನಡೆದು ಹೋಗುತ್ತಿದ್ದ ಕೆಲವರೂ-ರಂಗಮ್ಮನ ವಠಾರ
ದೆದುರು ಸಲ್ಲಾಪ ನಡೆಸುತ್ತಿದ್ದ ದ೦ಪತಿಯನ್ನು ನೋಡಿದರು. ಆ ದೃಷ್ಟಿಗಳ ಬಿಸಿ
ತಾಕುತ್ತಲೇ ಶಂಕರನಾರಾಯಣಯ್ಯ ಹೇಳಿದ :
“ಹೀಗೆ ನಾವು ನಿಂತು ಮಾತನಾಡೋದು ಸರಿಯಲ್ಲ ಕಣೇ."
"ಯಾಕೊ?"
“ನಾವು ಗಂಡ ಹೆಂಡತಿ ಅಲ್ಲಾ೦ತ ತಿಳಿಕೊಂಡಿಟ್ಟಾರು ಯಾರಾದರೂ!"
"ಓಹೋ!"
"ಗಂಡ ಹೆಂಡತಿ ಎಲ್ಲಿಯಾದರೂ ಇಷ್ಟು ಅನ್ಯೋನ್ಯವಾಗಿ ಇರ್ತಾರೇನು?"
"ಹೋಗೀಪಾ, ಸಾಕು ನಿಮ್ಮ ಚೇಷ್ಟೆ."
ಆತ ಬೀದಿಗಿಳಿಯುತ್ತಿದ್ದಂತೆ ಚಂಪಾ ಮೆಲುದನಿಯಲ್ಲಿ ಎಚ್ಚರಿಕೆಯ ಮಾತ
ನಾಡಿದಳು;
“ಸಾಯಂಕಾಲ ಜಾಗ್ರತೆ ಬ೦ದ್ಬಿಡಿ....."
ಹೆಂಡತಿಯೊಡನೆ ಮಾತನಾಡುತ್ತಿ ಶಂಕರನಾರಾಯಣಯ್ಯ ಮಹಡಿಯತ್ತ
ತಿರುಗಿ ನೋಡಲಿಲ್ಲ. ಚಂದ್ರಶೇಖರಯ್ಯ ಎಲ್ಲಾದರೂ ತನ್ನನ್ನು ಕಂಡು 'ನಮಸ್ಕಾರ'
ಎನ್ನಬಹುದೆಂದು ಆತ ಹೆದರಿದ್ದ.
ಚಂಪಾ ಒಳಹೋಗುತ್ತಿದ್ದಂತೆ ರಂಗಮ್ಮ ಕೇಳಿದರು:
"ದಿನಾ ಇಷ್ಟುಹೊತ್ತಿಗೆ ನಿಮ್ಮ ಯಜಮಾನರು ಕೆಲಸಕ್ಕೆ ಹೋಗ್ತಾರೋ?"
"ಹೂ೦ ಕಣ್ರಿ."

ವಾಪಸು ಬರೋದು?'
"ಸಾಯಂಕಾಲ."

ಈ ಹೊಸ ಸಂಸಾರದ ರೀತಿ ನೀತಿಗಳ ವಿಷಯವಾಗಿ ವಠಾರದಲ್ಲಿ ಆ ದಿನವೆಲ್ಲಾ

ಗುಜುಗುಜು ಟೀಕೆ ಟಿಪ್ಪಣಿಗಳಾದುವು.


ಕಾಗದ ಬರೆದಿದ್ದಂತೆ ಜಯರಾಮುವಿನ ತಂದೆ ಆ ತಿಂಗಳ ಕೊನೆಯಲ್ಲಿ ಬಂದರು. ಪುಸ್ತಕ ತುಂಬಿದ್ದ ದೊಡ್ಡ ಪೆಟ್ಟಿಗೆಯೂ ಅವರ ಜತೆಯಲ್ಲೇ ಇತ್ತು. ತಂದೆ ಪ್ರಕಾಶ ಕರಲ್ಲಿಗೆ ಆದನ್ನೊಯ್ದು ಲೆಕ್ಕ ಒಪ್ಪಿಸುವುದರೊಳಗಾಗಿ ಯಾವ ಪುಸ್ತಕಗಳಿವೆ ಎಂದೆಲ್ಲ ನೋಡಿಬಿಡಬೇಕೆಂದು ಜಯರಾಮುಗೆ ಅಪೇಕ್ಷೆಯಾಯಿತು. ರಾಧೆಯಂತೂ ಕಾದಂಬ ರಿಗಳ ಹುಚ್ಚಿ. ಅಣ್ಣ ತಂಗಿ ಇಬ್ಬರೂ ಸೇರಿ ಪೆಟ್ಟಿಗೆಯನ್ನು ಪರೀಕ್ಷಿಸಲು ಅಪ್ಪನ ಸಮ್ಮತಿ ಕೇಳಿದರು. ಮನೆಯಲ್ಲೆ ಇದ್ದರೂ ಇಲ್ಲದವರಂತೆ ವರ್ತಿಸುತ್ತಿದ್ದ ತಂದೆಗೆ, ಮಕ್ಕಳು ಹಾಗೆಲ್ಲ ಸಮ್ಮತಿ ಕೇಳುವುದು ಅಗತ್ಯವೆಂದೇ ತೋರಲಿಲ್ಲ. ಆದರೊ ಆ ಮಕ್ಕಳು ಚಿಕ್ಕವರಿದ್ದಾಗ, ಪುಸ್ತಕವೆಳೆದುಕೊಂಡು ಕಿತ್ತಾಡದಂತೆ ಎಚ್ಚರ ವಹಿಸಿ ರೊಢಿ

ಯಾಗಿದ್ದ ತಂದೆ ಈಗಲೂ ಅದೇ ಸ್ವರದಲ್ಲಿ ಅಂದರು:

"ಪುಸ್ತಕಗಳನ್ನು ಹುಷಾರಾಗಿ ಹಿಡೀರೀಪ್ಪಾ...ಕೊಳೆಯಾದರೆ ನನ್ನ ತಲೆಗೇ ಕಟ್ತಾರೆ. ಈಗಾಗ್ಲೇ ಕೊಂಡುಕೊಳ್ಳೋರು ಮುಟ್ಟಿ ಮುಟ್ಟಿ ಎಷ್ಟೋ ಪುಸ್ತಕ ಜಜಿ

ಬಿಜಿಯಾಗಿವೆ."

ತಾವು ಎಚ್ಚರದಿಂದ ಇರದೇ ಇದ್ದರೆ ಸಂಪಾದನೆಗೆ ಕತ್ತರಿ ಬೀಳುವ ಪ್ರಮೇಯ. ಜಯರಾಮುಗೆ ಅದೆಲ್ಲ ಈಗ ಅರ್ಥವಾಗುತ್ತಿತ್ತು. ಹಿಂದಿನಿಂದಲೂ ಆತ ಪುಸ್ತಕಗಳನ್ನು ಕೂಡಿಡುತ್ತಿದ್ದ. ಹಿಂದೆ ಹೊಸ ಹೊಸ ಪುಸ್ತಕ ಹೊತ್ತು ಮಾರಾಟಕ್ಕೆಂದು ತಂದೆ ಹೊರಟಾಗ, ಭಾರಿ ಬೆಲೆಯ ಕೆಲವನ್ನು ಬಿಟ್ಟು ಉಳಿದ ಪುಸ್ತಕಗಳನ್ನೆಲ್ಲ ಒಂದೊಂದು ಪ್ರತಿ ಜಯರಾಮು ಎತ್ತಿ ಇಡುತ್ತಿದ್ದ. ಆಗ, ಆದರಿಂದ ತಮಗೇ ನಷ್ಟವಾಗುವುದೆಂದು ಆತನಿಗೆ ಗೊತ್ತಿರಲಿಲ್ಲ. ಕ್ರಮೇಣ "ಜನ ಪುಸ್ತಕ ಕೊಳ್ಳೋದೇ ಕಡಿಮೆ ಯಾಗ್ಬಿಟ್ಟಿದೆ" ಎಂಬ ಮಾತು ಅಪ್ಪನ ಬಾಯಿಯಿಂದ ಬರುತ್ತಿತ್ತು. ಬೇಸರದ ಆ ಧ್ವನಿ ಕೇಳಿದಾಗ ಜಯರಾಮುಗೆ ತಾನು ಆ ಪುಸ್ತಕಗಳನ್ನು ಮುಟ್ಟುವುದೇ ತಪ್ಪು ಎನಿಸುತ್ತಿತ್ತು. ಒಮ್ಮೊಮ್ಮೆ ತನಗೆ ಪ್ರೀತಿಪಾತ್ರವೆನಿಸಿದ ಯಾವುದಾದರೂ ಪುಸ್ತಕ ವನ್ನು ಕಂಡು ಆತ "ಅಪ್ಪಾ, ಇದೊಂದನ್ನ ಇಟ್ಕೊಳ್ಲೇ ಅಪ್ಪ ?" ಎಂದರೆ,ತಂದೆ,"ಆ

ಪ್ರತಿ ಬೇಡವೋ. ಕೊಳೆಯಾಗಿರೋದು ತಗೊಳೋ" ಎನ್ನುತ್ತಿದ್ದರು. ಆ ಬಳಿಕ ಕೊಳೆಯಾದ ಪುಸ್ತಕಗಳನ್ನಷ್ಟೇ ಬಯಸುವುದು ಜಯರಾಮುಗೆ ಆಭ್ಯಾಸವಾಯಿತು.

ಆಣ್ಣ-ತಂಗಿ ಆ ದೊಡ್ಡ ಪೆಟ್ಟಿಗೆಯನ್ನು ತೆರೆದು ನೋಡಿದರು. ತಂದೆ ಹೋಗುತ್ತ ಒಯ್ದಿದ್ದ ಪುಸ್ತಕಗಳಲ್ಲಿ ಹೆಚ್ಚಿನವು ಹಾಗೆಯೇ ಇದ್ದುವು. ಪರ ಊರಿನ ಪ್ರಕಾಶಕರಿಂದ ಪಡೆದಿದ್ದ ಕೆಲವನ್ನು ಮಾತ್ರ ಈ ಮೊದಲು ಅಣ್ಣ-ತಂಗಿ ಕಂಡಿರಲಿಲ್ಲ.

ಓ! ಇದು ಚೆನ್ನಾಗಿದೇಂತ ತೋರುತ್ತೆ. ಅಲ್ವೆ ಅಣ್ಣ?" ಎಂದಳು ರಾಧಾ ಗಾತ್ರದೊಂದು ಕಾದರಿಬರಿಯನ್ನೆತ್ತಿಕೊಂಡು.

ತಂಗಿಯ ಪ್ರಶ್ನೆಗೆ ಅಣ್ಣ ಉತ್ತರ ಕೊಡಲಿಲ್ಲ. ಪುಸ್ತಕಗಳನ್ನು ನೋಡುತ್ತ ಅವನ ಹೃದಯ ಕುಗ್ಗಿ ಹೋಯಿತು. ಕಣ್ಣುಗಳಿಗೆ ಮಂಜು ಕವಿಯಿತು. ಈ ಸಲದ ಪ್ರವಾಸದಲ್ಲಿ ಹೆಚ್ಚು ಮಾರಾಟವಾಗಿಯೇ ಇಲ್ಲವೆಂಬುದು ಸ್ಪಷ್ಪವಾಗಿತ್ತು. ಆತ ತಂದೆಗೆ ಬೆನ್ನು ಮಾಡಿ ಪುಸ್ತಕಗಳೆದುರು ಸುಮ್ಮನೆ ಕುಳಿತ. ರಾಧೆಯೇ ಆರೇಳು ಪುಸ್ತಕ ಆರಿಸಿದಳು.

"ಅಣ್ಣ ಇಷ್ಹೂ ಇಟ್ಕೂಂಡ್ಬಿಡೋಣ್ವೆನೋ?"

-ಎಂದು ರಾಧಾ ಕೇಳಿದಳು.

ಜಯರಾಮು ಆಕೆ ತೋರಿಸಿದ ಪುಸ್ತಕಗಳನ್ನು ನೋಡಿದ. ಆವೆಲ್ಲವೂ ಮೈಸೂರಿನ ಪ್ರಕಟಣೆಗಳಾಗಿದ್ದವು. ತನ್ನದಲ್ಲವೆಂಬಂತೆ ಕಂಡ ಸ್ವರದಲ್ಲಿ ಆತ ಹೇಳಿದ:

"ಆಪ್ಪ ಇನ್ನೊಂದ್ಸಲ ಹೋಗೋವರೆಗೂ ಇಲ್ಲೇ ಇರತ್ತೆ. ಓದಿ ನೋಡಿದ ರಾಯ್ತು."

"ಯಾಕೆ,ನಮ್ಮನೇಲೇ ಇಟ್ಕೊಳ್ಳೋದು ಬೇಡ್ವಾ?"

"ಥೂ! ಇದೆಲ್ಲಾ ಕಚಡಾ ಪುಸ್ತಕ. ಯಾಕೆ ಮನೇಲಿ ಇಟ್ಕೂಳ್ಳೋದು?"

-ಎಂದು ಜಯರಾಮು, ನಿಜ ಸಂಗತಿ ಏನೆಂಬುದನ್ನು ವಿವರಿಸಲಾಗದೆಯೇ, ರೇಗಿ ಹೇಳಿದ.

ಮಕ್ಕಳ ಸಂಭಾಷಣೆಯನ್ನು. ಕೇಳುತ್ತಿದ್ದ ತಂದಗೆ ಮಗನ ವರ್ತನೆ ವಿಚಿತ್ರ ವೆನಿಸಿತು.

"ಏನೊ ಅದು?" ಎಂದು ಅವರು,ಮಗನ ಧ್ವನಿ ತನಗೆ ಇಷ್ಟವಾಗಲಿಲ್ಲ ಎಂಬು ದನ್ನು ಸೂಚಿಸಿದರು.

"ಏನೂ ಇಲ್ಲ," ಎಂದು ಜಯರಾಮು ದುಗುಡದ ಸ್ವರದಲ್ಲಿ ಊತ್ತರವಿತ್ತು, ಹೊರಕ್ಕೆ ಹೊರಟ.

"ಎಲ್ಲಿಗೆ ಹೋಗ್ತಿದೀಯೋ?"

-ತಾಯಿ ಕೂಗಿ ಕೇಳಿದರು.

ಜಯರಾಮು ತಿರುಗಿ ನೋಡಲಿಲ್ಲ. ದಡದಡನೆ ಮೆಟ್ಟಲಿಳಿಯುತ್ತ ಗಟ್ಟಿಯಾಗಿ ಹೇಳಿದ:

"ಇಲ್ಲೇ ವಾಚನಾಲಯಕ್ಕೆ ಹೋಗ್ಬರ್ತೀನಮ್ಮ."

"ಆದೇನು ವಾಚನಾಲಯವೋ ಮೂರು ಹೊತ್ತೊ ಅಲ್ಲಿಗೆ ಹೋಗ್ತೀನೀಂತ

ಸಾಯ್ತಿರ್ತಾನೆ," ಎಂದು ತಾಯಿ,ತಂದೆಗೆ ದೊರು ಕೊಟ್ಟಳು.

"ಹೋಗಲಿ ಬಿಡು,ಮಾರ್ಚ್ ಗಂಮ್ತೂಇದೆ ಕಟ್ಟೋಕಾಗಲ್ಲ ಇನ್ನು ಸೆಪ್ಟೆಂಬರ್ ತಾನೆ? ಟೈಮಿದೆ ."

"ವಾಚನಾಲಯಕ್ಕೆ ಎಲ್ಲಾ ಪೇಪರೂ ಬರುತ್ತಂತಪ್ಪ.ಆದರೆ ಹುಡುಗೀರು ಅಲ್ಲಿಗೆ ಹೋಗ್ಕೂಡ್ದಂತೆ," ಎಂದು ರಾಧಾ ತಂದೆಗೆ ಊರಿನ ಸಮಾಚಾರ ಒದಗಿಸಿದಳು.

"ಹುಡುಗಿರು ವಾಚನಾಲಯಕ್ಕೆ ಹೋಗೋದೂಂದು ಬಾಕಿ ಇದೆ ಇನ್ನು..." ಎಂದು ರಾಧೆಯ ತಾಯಿ ಬೇರೆ ಯಾವುದೋ ಬೇಸರವನ್ನು ಆ ಮಾತಿನಲ್ಲಿ ಪ್ರಕಟಿ ಸಿದಳು.

"ಮನೆ ಸಾಮಾನು ಎಲ್ಲಾ ಇದ್ಯೇನು?" ಎಂದು ತಂದೆ ವಿಚಾರಿಸಿದರು.

"ಹೂಂ" ಎಂದು ತಾಯಿ ಉತ್ತರ ಕೊಡುತ್ತಲೆ,ರಾಧಾ ಒಂದು ಹೊಸ ಕಾದಂಬರಿಯನ್ನೆತ್ತಿಕೊಂಡಳು.ತಾಯ್ತಂದೆಯರ ಆ ಸಂವಾದದಲ್ಲಿ ಆಕೆಗೆ ಆಸಕ್ತಿ ಇರಲಿಲ್ಲ.ನೆಲದಲ್ಲಿದ್ದ ಹಾಸಿಗೆಯ ಸುರುಳಿಯ ಮೇಲೆ ಗೋಡೆಗೊರಗೆ ಕುಳಿತು, ಕಾದಂಬರಿಯನ್ನು ಬರೆದವರ ಹೆಸರನ್ನೂಮ್ಮೆ ಗಮನಿಸಿ, ಮುನ್ನುಡಿಯ ಪುಟಗಳನ್ನು ಓದದೆಯೇ ಹಾರಿಸಿ, ಮೊದಲ ಅಧ್ಯಾಯದಿಂದಲೇ ಅರಂಭಿಸಿದಳು.ಸ್ವಲ್ಪ ಹೊತ್ತಿ ನೆಲ್ಲೆ ಆಕೆ ಕಾದಂಬರಿಯಲ್ಲಿ ತಲ್ಲೀನಳಾದಳು.

ಮಗಳು ಓದುತ್ತಿದ್ದಂತೆ ತಾಯಿ ತಂದೆಯರ ಸಂಭಾಷಣೆ ನಡೆಯಿತು.

"ನಾರಾಯಣೆ ತೀರ್ಕೊಂಡ್ಲು."

"ಯಾರು ನಾರಾಯಣೆ?"

"ಆ ಕೊನೇ ಮನೆ,ಗೊತ್ತಿಲ್ವೆ? ಸೌದೆ ಕದ್ದಳೊಂತ.."

"ಹೂಂ.ಹೂಂ...ಅಯ್ಯೋ ಪಾಪ...ಏನಾಗಿತ್ತು?"

"ಆದೇನೋ ಸುಡುಗಾಡು ಜ್ವರದ ಕಾಹಿಲೆ.....ನಾಲ್ಕರಲ್ಲಿ ಮೂರು ಚಿಕ್ಕ ಮಕ್ಕಳು. ಕೊನೇದಕ್ಕಂತೂ ಒಂದು ವರ್ಷ್ ಕೂಡಾ ಇಲ್ಲ..."

"ತ್ಸ್....ತ್ಸ್...ಹೂ...ಏನ್ಮಾಡೋಕಾಗುತ್ತೆ? ಯಾರ ಕೈಲಿದೆ ಹೇಳು ಇದೆಲ್ಲ?"

ಆತ ನಿಟ್ಟುಸಿರುಬಿಟ್ಟುದರಿಂದ ಸಂಭಾಷಣೆ ಸ್ವಲ್ಪ ಹೊತ್ತು ನಿಂತಿತು. ತುಸು ತಡೆದು ಆಕೆ ಹೇಳಿದಳು:

"ಕೆಳಗೆ ಯಾವುದಾದರೂ ಮನೆ ಖಾಲಿಯಾದರೆ ಕೊಡ್ತೀನೀಂತ ರಂಗಮ್ಮ ಹೇಳಿರ್ಲಿಲ್ವೆ?"

"ಹೂಂ,ಹೌದು."

"ಅದೇ-ನಾರಾಯಣೆ ಇದ್ದ ಮನೆ ಖಾಲಿಯಾಯ್ತು."

ಹಾಗೇನು? ಆದರೆ ಅದಕ್ಕೆ ಬಾಡಿಗೆ ಜಾಸ್ತಿ ನೇನೋ?"

"ಹೌದು.ಅಲ್ದೆ ಅದನ್ನ ಆಗ್ಲೆ ಬೇರೆಯವರಿಗೆ ಕೊಟ್ತಿಟ್ರು ಅನ್ನಿ, ಅದರೆ ರಂಗಮ್ನೋರು ನಮ್ಮನ್ನ ಕೇಳ್ಲೊ ಇಲ್ಲ."

"ರಂಗಮ್ನಿಗೆ ಗೊತ್ತಿಲ್ವೆ ನಮ್ಮ ಪರಿಸ್ಥಿತಿ? ಅದಕ್ಕೇ ಕೇಳ್ಲಿಲ್ಲ."

"ನಾನೂ ಸುಮ್ನಿದ್ದೆ. ಆ ವಿಷಯ ಪ್ರಸ್ತಾಪಿಸ್ಲಿಲ್ಲ.ಜಾಸ್ತಿ ಬಾಡಿಗೆ ಕೊಡೋ" ದೊಂದಾಯ್ತ್ತು, ಇದೇ ಬಾಡಿಗೆಗೆ ಬನ್ನಿ ಅಂದ್ರೂ...ಸಾವಿನ ಮನೆಗೆ...."

"ಅಯ್ಯೋ ಅದೆಲ್ವಾ ನೋಡೋಕಾಗುತ್ತೇನೆ ಈಗಿನ ಕಾಲ್ದಲ್ಲಿ?"

ತಾಯಿ ಸುಮ್ಮನಾದಳು.ಮಾತನಾಡಬೆಕಾದ ವಿಷಯಗಳೆಷ್ಟೋ ಇದ್ದುವು. ಅದರೆ ಮಗಳೆದುರಲ್ಲಿ ಅವುಗಳನ್ನು ಪ್ರಸ್ತಾಪಿಸುವ ಹಾಗಿರಲಿಲ್ಲ. ಆ ಕೊಠಡಿ ಮನೆ ಯಲ್ಲಿ ಏಕಾಂತವಾದರೂ ಎಲ್ಲಿಂದ ಬಂತು? ಹೀಗಾಗಿ,ಯಾವುದನ್ನು ಹೇಳಬಾರದು... ಹೇಳಬಹುದು ಎಂದು ಯೋಚಿಸಿ ಯೋಚಿಸಿ ಆಕೆ ಮಾತನಾಡುವಂತಾಯಿತು.

"ಎಷ್ಟು ದಿವಸ ಇರ್ತೀರ ಈ ಸಲ?"

"ಇರ್ತೀನಿ ಇನ್ನೊ ಮೂರು ನಾಲ್ಕು ದಿವಸ."

"ಅಷ್ಟು ಬೇಗ್ನೆ ಹೊರಡ್ಬೇಕೆ?"

ಅಷ್ಟೈಶ್ವರ್ಯದ ಸುಕವನ್ನು ಸುಟ್ಟಿತುಃ ಗಂಡನ ಸಾಮೂಪ್ಯವಾದರೂ ತನ್ನ ಪಾಲಿಗಿರಬಾರದೆ? ಎಂದು ವಯಸ್ಸಾದ ಆ ಜೀವ ಚಡಪಡಿಸಿತು.

"ಈ ಸಲ ಮಲೆನಾಡು ಕಡೆ ಹೋಗೋಣಾಂರತಿದೀನಿ. ಈಗ ಬೇಸಿಗೆ ಸ್ವಲ್ಪ ತಡವಾದರೂ ಮಳೆ ಬಂದ್ಬಿಡುತ್ತೆ. ಹೋದರೆ ಈಗ್ಲೋ ಹೋಗ್ಬೇಕು."

"ಹೊಂ."

ಅವರು ತಲೆತಗ್ಗಿಸಿ ಏನೋ ಯೋಚಿಸುತ್ತ ತಮ್ಮ ಅಂಗಾಂಗಗಳನ್ನು ನೋಡಿ ದರು. ಮಗಳತ್ತ,ಬಾಡಿದ ಮುಖದಿಂದ ದೃಷ್ಟಿ ಬೀರಿದರು.

ಮಗಳನ್ನು ಕೆಳಕ್ಕೆ ಕಳುಹೋಣವೆಂದು ತೋರಿತು ಆಕೆಗೆ. ಆದರೆ ಅದಕ್ಕಾಗಿ ಏನಾದರೊಂದು ಕಾರಣವನ್ನು ಸೃಷ್ಟಿಸಿ ಹೇಳಲು ಆ ತಾಯಿ ಸಮರ್ಥಳಾಗಿರಲಿಲ್ಲ.

"ಇನ್ನೇನು ಸಮಾಚಾರ ವಠಾರದ್ದು?"

"ವಠಾರದ್ದೇನು ಸಮಾಚಾರ? ಇದೆ ಹಾಗೆಯೇ."

ವಿಷಯ ಒರತೆ ಬತ್ತಿದಂತೆ ತೋರಿತು.

ರಾಧೆಯ ತಾಯಿ ತನ್ನ ಗಂಡನನ್ನು ಕಣ್ಣು ತುಂಬಾ ನೋಡಿದಳು. ಮತ್ತೆ ತಲೆ ಬಾಗಿಸಿ ನೆಲ ಕೆರೆಯುತ್ತ ಕುಳಿತಳು. ಅತ್ಮಗತವಾಗಿಯೇ ಏನನ್ನೋ ಆಕೆ ಗಟ್ಟಿಯಾಗಿ ಅನ್ನತೊಡಗಿದವಳು. ಮಾತುಗಳು ಕಡಿದು ಕಡಿದು ಬಂದವು.ಅಸ್ಪಷ್ಟವಾಗಿದ್ದರೂ ಅವರ ಕಿವಿಗಳೊಳಕ್ಕೆ ಆ ಮಾತುಗಳು ಉರಿಯುವ ನೋವನ್ನವಂಟುಮಾಡುತ್ತ ಇಳಿದುವು.

"ಹ್ಯಾಗಾಗಿದೀರಿ ಒಮ್ಮೆ ನೋಡ್ಬಾರ್ದೆ? ಹೊತ್ತು ಹೊತ್ತಿಗೆ ಊಟ ಇಲ್ಲ. ಸಿಕ್ಕಿದ್ದನ್ನ ತಿನ್ನೋದು...ಎಣ್ಣೆ ಸ್ನಾನ ಇಲ್ಲ...ನಾವೇನು ಮನುಷ್ಯ ಜನ್ಮವೋ

ಅಲ್ಲಾ"

"ಏನ್ಮಾಡ್ಲೇ ನಾನು?"

ಹೆಂಗಸು ನಿಟ್ಟುಸಿರು ಬಿಟ್ಟಳು.

ಅಷ್ಟರಲ್ಲಿ ಕಳಗಿನಿಂದ ಅಹಲ್ಯೆಯ ಸ್ವರ ಕೇಳಿಸಿತುಃ

"ರಾಧಾ,ಏ ರಾಧಾ,ಸ್ವಲ್ಪ ಬಾರೆ ಇಲ್ಲಿ."

ಕೇಳಿಸಿದರೂ ಓದುತ್ತಲಿದ್ದ ರಾಧಾ ಉತ್ತರ ಕೊಡದೆ ಸುಮ್ಮನಿದ್ದಳು.

"ರಾಧಾ ಬಾರೇ..."

ತಾಯಿಯೆಂದಳು ಮಗಳಿಗೆ:

"ಕರೆಯೋದು ಕೇಳಿಸಲ್ವೆನೇ? ಹೋಗು."

"ಊ...ನಾನು ಹೋಗೊಲ್ಲ...ಓದ್ಬೇಕು."

"ರಾತ್ರೆ ಓದಿದರಾಯ್ತು."

"ಊ...ದೀಪ ಇರೋಲ್ಲ ರಾತ್ರೆ."

"ನಾಳೆ ಓದೀಯಂತೆ."

ರಾಧಾ ಮತ್ತೊಮ್ಮೆ ಊ ಎಂದು ರಾಗ ಎಳೆಯುತ್ತಿದ್ದಂತೆಯೇ ಅಹಲ್ಯಾ ಸ್ವಲ್ವ ಗಟ್ಟಿಯಾಗಿಯೇ ಕರೆದಳು.

ರಾಧಾ ಪುಸ್ತಕವನ್ನು ತನ್ನ ಹಿಂದುಗಡೆ ಮರೆಮಾಡುತ್ತ ಎದ್ದು ನಿಂತು,ಮುಖ ವನ್ನಷ್ಟೆ ಕಿಟಿಕಿಯಿಂದ ಹೊರಹಾಕಿ,"ಯಾಕೆ?"ಎಂದಳು.

ಕೆಳಗೆ ನಿಂತಿದ್ದ ಅಹಲ್ಯೆ ತನ್ನ ಬಳೆಯನ್ನು ಮುಟ್ಟಿ ತೋರಿಸಿದಳು.ರಾಧೆಗೆ ಒಮ್ಮೆಲೆ ನೆನಪಾಯಿತು.ಮಲ್ಲೇಶ್ವರದ ಅಂಗಡಿ ಬೀದಿಯಿಂದ ಬಳೆ ಕೊಳ್ಳ ಬೇಕೆಂದಿದ್ದ ಅಹಲ್ಯೆಯ ಜತೆಯಲ್ಲಿ ತಾನೂ ಬರುವೆನೆಂದು ಹಿಂದಿನ ದಿನ ರಾಧಾ ಮಾತು ಕೊಟ್ಟಿದ್ದಳು.ಈಗ "ತಾಯಿ ಬಿಡೋದಿಲ್ಲ" ಎಂದು ನೆಪ ಹೇಳಿ ತಪ್ಪಿಸಿ ಕೊಳ್ಳುವ ಮನಸ್ಸಾಯಿತು.ಮಲ್ಲೇಶ್ವರದವರೆಗೆ ' ಹೋಗುವುದೆಂದರೆ ತಾಯಿ ಬೇಡ ವೆನ್ನೆ ಬಹುದೆಂಬ ಯೋಚನೆಯೂ ಹೊಳೆಯಿತು. "ತಾಳು ಅಮ್ಮನ್ನ ಕೇಳ್ತೀನಿ ಎನ್ನು ವಂತೆ ರಾಧಾ ಕೈಸನ್ನೆ ಮಾಡಿದಳು.

"ಏನೇ ಅದು?"

---ಎಂದಳು ರಾಧೆಯ ತಾಯಿ.

"ಅಹಲ್ಯೆ ಬಳೆ ಕೊಂಡ್ಕೋಬೇಕಂತೆ. ಮಲ್ಲೇಶ್ವರಕ್ಕೆ ಹೋಗೋಕೆ ನನ್ನನ್ನೂ ಕರೀತಿದಾಳೆ."

"ಅಷ್ಟೇನೇ? ಹೋಗ್ಬಾ."

ರಾಧೆ ನಿರುಪಾಯಳಾಗಿ,ಓದುತ್ತಿದ್ದ ಪುಟಕೊಂದು ಕಾಗದದ ಚೂರಿನ ಗುರು ತಿಟ್ಟು ಪುಸ್ತಕ್ಕವನ್ನು ಮಡಚಿ ತೆಗೆದಿರಿಸಿದಳು.

"ಕುಂಕುಮ ಇಟ್ಕೋ,"

---ಎಂದು ತಾಯಿ ಹೇಳುತ್ತಿದ್ದಂತೆಯೇ, ಆ ಕೆಲಸಕ್ಕಾಗಿಯೇ ರಾಧಾ
ರಂಗಮ್ಮನ ವಠಾರ
79

ಕನ್ನಡಿಯ ಮುಂದೆ ನಿಂತಳು.

ಆಕೆಯ ತಂದೆ ಕುಳಿತಲ್ಲಿಂದೆದ್ದು, ಗೋಡೆಗೆ ತೂಗುಹಾಕಿದ್ದ ತನ್ನ ಕೋಟಿನ ಜೇಬಿನಿಂದ ಆರಾಣೆ ಎಣಿಸಿ ತೆಗೆದು ಮಗಳ ಕೈಗಿಟ್ಟರು"

ನೀನೂ ಬಳೆ ಕೊಂಡೊವಾ, ಈ ಸಲವೂ ಏನೂ ತರೋಕಾಗ್ಲಿಲ್ಲ."

ಮತ್ತೂ ಆರು ಕಾಸನ್ನು ಕೊಟ್ಟರು.

"ಹಾಗೇ ಬರ್ತಾ ನಶ್ಯ ತಗೊಂಡ್ಡಾ"

"ನಾನು ನಶ್ಯ ಕೊಂಡ್ಕೊಂಡ್ರೆ ಅಹಲ್ಯ ನಗ್ತಾಳೆ"

ಸಾಕು, ಹೋಗೇ ಬಡಿವಾರ" ಎಂದು ತಾಯಿ ಗದರಿಸಿದಳು.

"ನಶ್ಯ ಗಂಡನಿಗಲ್ಲು, ಅಪ್ಪನಿಗೆ ಅಂತ ಹೇಳು!" ಎಂದು ಹೇಳಿ ತಂದೆ, ತಮ್ಮ ನಗೆಮಾತಿಗಾಗಿ ತಾವೇ ಸಂತೋಷಪಟ್ಟರು.

ರಾದಾ ನಾಚಿಕೆಯಿಂದ ಮುಖ ಕೆಂಪಗೆ ಮಾಡಿಕೊಂಡು ಹೊರಟು ಹೋದಳು.

ಮಗಳ ಮುಂದೆ ಅನಿರೀಕ್ಷಿತವಾಗಿ 'ಗಂಡ' ಎಂಬ ಮಾತು ಬಂದಿತ್ತು, ತಮಾಷೆ ಗಾಗಿ ತಾವೇ ಸಂತೋಷಪಟ್ಟರು. ರಾದಾ ನಾಚಿಕೆಯಿಂದ ಮುಖ ಕೆಂಪಗೆ ಮಾಡಿಕೊಂಡು ಹೊರಟು ಹೋದಳು.

ಮಗಳ ಮೊಂದೆ ಆನಿರೀಕ್ಷಿತವಾಗಿ 'ಗಂಡ' ಎಂಬ ಮಾತು ಬಂದಿತ್ತು. ತಮಾಷೆ ಗಾಗಿ ಹಾಗೆ ಹೀಳಿದ್ದರೂ ಬಳಿಕ ಅದರ ಯೋಚನೆಯೇನೂ ಅಷ್ಟು ತಮಾಷೆಯ ವಾಗಿರಲಿಲ್ಲ.

"ಬೆಳೆದಿದ್ದಾಳೆ, ವಯಸ್ಸಾಗಿದೆ. ಆದರೂ ಇನ್ನೂ ಮಗು ಇದ್ದ ಹಾಗೇ ಇದಾಳೇಂದ್ರೆ."

ಗಂಡ ಒಮ್ಮಲೆ ಮುಖ ಸಪ್ಪಗೆ ಮಾಡಿ ಕುಳಿತುದನ್ನು ಕಂಡು ಆಕೆಯೇ ಮುಂದುವರಿಸಿದಳು.

“ಅಹಲಾಗೆ ಗಂಡು ಹುಡುಕ್ತಾ ಇದಾರೆ."

"ರಾಧಾಗೆ ಹುಡುಕ್ಸಾ ಇಲಾಂತ ತಾನೆ ನೀನು ಹೇಳೋದು'

ಬೇಸರದ ಧ್ವನಿಯಲ್ಲಿ ಹೊರಟಿತು ಆ ಪ್ರಶ್ನೆ.

"ರೇಗ್ವೇಡಿ. ಅಹಲ್ಯ ರಾಧಾ ಇಬ್ಬರಿಗೊ ಒಂದೇ ವಯಸ್ಸು ಅಂತ ಹಾಗೆ ಹೇಳ್ವೆ, ಈ ಮಳೆಗಾಲಕ್ಕೆ ಹದಿನೆಂಟು ಹಿಡಿಯುತ್ತೆ."

"ಹೋಂ_"

“ಅರಸೀಕೆರೆ ಹತ್ರ ಯಾವುದೋ ಹಳ್ಳಿ ಕಡೆ ವರ ಇದೆ ಅಂತ ಏನೋ ಅಂದಿದ್ರಿ, ಹೋದ್ಸಾರೆ."

ಹೌದು ಹೋಗಿದೆ. ಆಗಿಲ್ಲ."

"ಅಗಿಲ್ಲ ಏನಾಯ್ತು? ಎಂದು ಪ್ರಶ್ನೆಯ ನೋಟ ಬೀರಿದಳು ತಾಯಿ.

"ನಮ್ಮಂಥ ನೂರು ಜನ ಬಡವರನ್ನ ಕೊಂಡೊಳ್ಳೋ ಹಾಗೆ ಮಾತಾಡ್ದ."

ಆಕೆ ನಿಟುಸಿರುಬಿಟ್ಟಳು.

"ಪುಸ್ತಕದ ಪೆಟ್ಟೇನೆಲ್ಲ ಅರಸೀಕೆರೇಲೆ ಬಿಟ್ಟ ಹೋಗಿದ್ದೆ-ಕುಚೇಲನ ಹಾಗೆ ಕಾಣ್ಭಾರದೊಂತ.

"ಹೋಗಲಿ ಬಿಡಿ, ಬಡ ಹುಡುಗರು ಯಾರೂ ಇಲ್ವೆ ?"

“ಬಡವರಾದ ಮಾತ್ರಕ್ಕೆ ವರದಕ್ಷಿಣೆ ಬಿಟ್ಕೊಡ್ತಾರೆ ಅಂದ್ಕೊಂಡ್ಯಾ?"

“ಹಾಗಲ್ಲ - "

“ತೀರಾ ನಿರ್ಗತಿಕನಿಗೆ ಕೊಟ್ಟು ಕೂಡಾ ಏನೇ ಪುರುಷಾರ್ಥ? ಸಾಲವೊ ಏನೋ ಮಾಡಿ ನಾವು ಕೊಡೋ ಐನೂರು ರೂಪಾಯಿ ಕರಗೋ ತನಕ ಮಜವಾಗಿರ್ತಾನೆ. ಆಮೇಲೆ ನಿನ್ಮಗಳ ಗತಿ?"

"ಏನೋಪ್ಪ, ನನಗೊಂದೂ ತಿಳೀದು. ನಮಗಿರೋದು ಒಂದೇ ಒಂದು ಹೆಣ್ಣು ಮಗು ಅಲ್ವೆ? ಕೆಳಗಿಳಿದ್ರೆ, ತಲೆ ಎತ್ಕೋಂಡು ನಡೆಯೋಕಾಗೋಲ್ಲ. ಏನೇನೋ ಅಂತಾರೆ."

“ಯಾರು ವಠಾರದೋರೆ?"

"ವಠಾರದೋರು, ಹೊರಗಿನೋರು, ಎಲ್ಲಾ .”

"ಅನ್ಲಿ ಬಿಡು, ಇದೇನು ಹತ್ತೊಂಭತ್ನೇ ಶತಮಾನವೇ?”

“ನೀವೇನೋ ಹಾಗೆ ಅಂದ್ಬಿಡ್ತೀರಾ.. ಆದರೆ... ನಾನು..."

ಆಳು. ಬಂದುಬಿಟ್ಟಿತು ಆಕೆಗೆ.

"ಅಳಬೇಡ್ವೆ, ದೇವರು ಬಿಟ್ಟು ಹಾಕೊಲ್ಲ, ಏನಾದರೂ ದಾರಿ ತೋರಿಸೇ ತೋರಿಸ್ತಾನೆ."

ಅಷ್ಟು ಹೊತ್ತಿಗೆ ಪಕ್ಕದ ಮನೆಯವನು ಇರುತ್ತಿರಲಿಲ್ಲ. ಕೊನೆಯ ಕೊಠ ಡಿಯ ವಿದ್ಯಾರ್ಥಿಗಳೂ ಇರುತ್ತಿರಲಿಲ್ಲ. ಅದನ್ನು ತಿಳಿದಿದ್ದ ಆಕೆ ಸ್ವಲ್ಪ ಗಟ್ಟಿಯಾ ಗಿಯೇ ಅತ್ತಳು.

ಅವರು ಬಾಗಿಲ ಬಳಿಗೆ ಹೋಗಿ ಅದನ್ನು ಮುಚ್ಚಿದರು, ಹೆಂಡತಿಯ ಹತ್ತಿರ ಬಂದು, ಆಕೆಗೆ ತಗಲಿಕೊಂಡೇ ಕುಳಿತರು. ಆಕೆಯ ಬಲಗೈಯನ್ನೆತ್ತಿ ಬೆರಳುಗಳನ್ನು ಮುಟ್ಟಿ ನೋಡಿದರು. ಇಪ್ಪತ್ತು ವರ್ಷಗಳಿಗೆ ಹಿಂದೆ ತುಂಬಾ ಸುಂದರಿಯಾಗಿದ್ದ ಆ ಜೀವ ಕಣ್ಣುಗಳೀಗ ಆಳಕ್ಕೆ ಇಳಿದಿದ್ದುವು. ಕಪೋಲಗಳು ಬತ್ತಿದ್ದುವು. ತಲೆಗೂದಲು ಬಿಳಿಯ ವರ್ಣಕ್ಕೆ ಬೇಗ ಬೇಗನೆ ತಿರುಗುತ್ತಿತ್ತು, ಹಿಂದಿನದೇ ನಿರ್ಮಲಾಂತಃಕರಣ ದಿಂದ, ಹಿಂದಿನದೇ ಆತ್ಮೀಯತೆಯಿಂದ ಹೆಂಡತಿಯ ಮುಂಗುರುಳನ್ನು ನೇವರಿಸಿ ಮೃದುವಾಗಿ ಅವರು ಅಂದರು..."

"ಅಳಬೇಡ ಚಿನ್ನ..."

ಮಕ್ಕಳಿಗೆ ತಿಳಿಯದಂತೆ, ತಾನೊಬ್ಬಳೆ ಇದ್ದಾ ಗ, ಇಲ್ಲವೆ ರಾತ್ರಿ ಮಕ್ಕಳು ನಿದ್ದೆ ಹೋದ ಮೇಲೆ ಆಕೆ ಆಗಾಗ್ಗೆ ಅಳುವುದಿತ್ತು, ಈಗ ಗಂಡನೆದುರು ತನ್ನ ದುಃಖದ ಸಾಕ್ಷವನ್ನಷ್ಟೆಕೊಟ್ಟು ಆಕೆ ಕಣ್ಣೊರೆಸಿಕೊಂಡಳು. ತನ್ನ ತಲೆಯನ್ನು ಗಂಡನ ಭುಜದ ಮೇಲೆ ಒರಗಿಸಿ, ಎಲ್ಲ ಸಂಕಟವನ್ನೂ ಮರೆಯಲು ಯತ್ನಿಸಿದಳು.

ತಮ್ಮನ್ನು ನಂಬಿ ಹಿಡಿದ ಜೀವ ಪರಿತಪಿಸುವುದನ್ನು ಕಂಡು ಹೃದಯವನ್ನು
ರಂಗಮ್ಮನ ವಠಾರ
81

ಗರಗಸದಿಂದ ಕುಯ್ಯುತ್ತಿದ್ದ ಹಾಗಾಯಿತು ಅವರಿಗೆ.
"ಚಿನ್ನ, ನಿನಗೆ ನಾನು ಸುಖ ಕೊಡಲೇ ಇಲ್ಲ."
ಭುಜದ ಮೇಲಿದ್ದ ತಲೆಯಲುಗಿತು. ತುಟಿಗಳೆಡೆಯಿಂದ ಮಾತು ಹೊರಡಲಿಲ್ಲ.
ಯಾವುದೋ ಯೋಚನೆಯ ನಡುವೆ ಅವರೆಂದರು:
"ಸದ್ಯಃ ಇಬ್ಬರೇ ಮಕ್ಕಳು..."
ಮಾತು ಹೊರಗೆ ನಿಂತರೂ,ಮನಸಿನೊಳಗೇ ಯೋಚನೆ ಮುಂದುವರಿಯಿತು:
ಇಬ್ಬರೇ ಮಕ್ಕಳು...ರಾಧಾ ಹುಟ್ಟಿದ ಅನಂತರ ಮತ್ತೊಮ್ಮೆ ತಾಯಿಯಾಗಲಿದ್ದ
ಆಕೆಗೆ ಗರ್ಭಸ್ರಾವವಾಯಿತು. ಆರೈಕೆ ಸರಿಯಾಗಿ ಆಗದೆ ಗರ್ಭಕೋಶದ ಕಾಹಿಲೆ
ಗಳಿಗೆ ಗುರಿಯಾದಳು. ದೀರ್ಘಕಾಲ ಕಳೆದ ಮೇಲೆ ಚೇತರಿಸಿಕೊಂಡಳು ನಿಜ,
ಆದರೆ ಮತ್ತೆ ತಾಯಿಯಾಗಲಿಲ್ಲ. ಹಾಗಾದುದು ದೇವರ ಕೃಪೆಯೇನೋ ಎಂದು
ಅವರಿಗೆ ಒಮ್ಮೊಮ್ಮೆ ಅನಿಸುತ್ತಿತ್ತು. ಅದಲ್ಲದೆ ಹೆಚ್ಚು ಮಕ್ಕಳೇನಾದರೂ ಆಗಿದ್ದರೆ
ಅವುಗಳ ಗತಿ? ಈಗ ಇರುವವರು ಒಬ್ಬರೇ......ಮಗಳಿಗೊಂದು ಮದುವೆಯಾಗಿ
ಮಗನಿಗೊಂದು ಕೆಲಸ ದೊರೆತರೆ, ತಮ್ಮ ಸಂಸಾರದ ದೊಡ್ಡ ಸಮಸ್ಯೆಗಳು ಬಗೆಹರಿದ
ಹಾಗೆಯೇ.
ಹೀಗೆಂದು ಅವರು ಯೋಚಿಸುತ್ತಿದ್ದರು. ಆಕೆ ಮಾತ್ರ ಕನಸಿನ ನಿದ್ದೆಯಲ್ಲಿ
ದ್ದಂತೆ ಕಣ್ಣುಮುಚ್ಚಿಕೊಂಡೇ ಇದ್ದಳು.
ತಮ್ಮ ಯೋಜನೆಗಳಿಗೊಂದು ಸುಂದರ ರೂಪವನ್ನು ಕೊಡಲೆತ್ನಿಸುತ್ತ
ಅವರೆಂದರು:
"ಇನ್ನು ಸ್ವಲ್ಪ ದಿವಸ ಈ ಕಷ್ಟ. ಯಾವಾಗಲೂ ಹೀಗೇ ಇರೋಲ್ಲ ಚಿನ್ನ."
'ಹೌದು' ಎಂದೋ, 'ಇದು ಹುಚ್ಚು ಮಾತು' ಎಂದೊ ಅನ್ನುವಂತೆ ಭುಜದ
ಮೇಲಿದ್ದ ಆಕೆಯ ತಲೆ ಅಲುಗಿತು.
ಕೊನೆಯ ಕೊಠಡಿಯ ಬೀಗ ತೆಗೆದ ಸಪ್ಪಳವಾಯಿತು. ಮಾತಿನ ಸದ್ದು. ಆಕೆ
ಒಮ್ಮೆಲೆ ಎಚ್ಚೆತ್ತು, ತಲೆ ಎತ್ತಿ, ಗಂಡನಿಂದ ದೂರ ಕುಳಿತಳು. ಕಳ್ಳತನದಲ್ಲೇನನ್ನೊ
ಮಾಡುತ್ತಿದ್ದವರ ಹಾಗಾಯಿತು ಆಕೆಯ ಸ್ಥಿತಿ.
"ಸ್ಕೂಲು ಹುಡುಗರು ಬಂದರೂಂತ ಕಾಣುತ್ತೆ."
__ಎಂದಳು ಆಕೆ. ಶಾಂತವಾಗಿತ್ತು ಅವಳ ಮುಖಮುದ್ರೆ.
ಆ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮ ಯೋಚನೆಯನ್ನೇ ಮುಂದು
ವರಿಸುತ್ತ ಅವರೆಂದರು:
"ಎಷ್ಟೊಂದು ಸೊರಗಿದ್ದೀಯಾ ನೀನು?"
"ನನಗೇನೂ ಆಗಿಲ್ಲ. ನಾನು ಚೆನ್ನಾಗಿದೀನಿ."
ಗಂಡ ಆಡಿದ ಅಮೃತದಂತಹ ಮಾತಿಗಾಗಿ ದೃಷ್ಟಿಯಿಂದಲೇ ಕೃತಜ್ಞತೆಯನ್ನು

11
ಸೂಚಿಸುತ್ತ ಆಕೆ ನಕ್ಕಳು.
"ಹಾಗಾದರೆ ನನಗೆ ದೃಷ್ಟಿದೋಷ ಅನ್ನು!"
ಆ ನಗೆ ಮಾತು ಆಕೆಯ ಹೃದಯವನ್ನು ಬೆಳಗಿತು. ಕಣ್ಣುಗಳು ಮಿನುಗಿದುವು.
"ಒಲೆ ಹಚ್ಚಿ ಒಂದಿಷ್ಟು ಕಾಫಿ ಮಾಡ್ಲಾ?"
"ಹೂಂ. ಮಾಡು."
ಅವರು ಜಯರಾಮುವಿನ ಚಾಪೆ ಬಿಡಿಸಿ ಮಲಗಿಕೊಂಡು ಛಾವಣಿಯತ್ತ
ನೋಡಿದರು. ಹೆಂಡತಿ ಒಲೆ ಹಚ್ಚುತ್ತಿದ್ದಂತೆ ಅವರೆಂದರು:
"ಮಳೆ ಬಂದರೆ ಹೋದ ವರ್ಷದ ಹಾಗೆ ಈ ವರ್ಷವೂ ಸೋರುತ್ತೆ ಅಲ್ವೆ?
ನೋಡು ಆ ಮೂಲೆ ಹಂಚುಗಳೆಲ್ಲಾ ಒಡೆದು ಹೋಗಿವೆ."
"ದುರಸ್ತಿ ಮಾಡಿಸ್ಬೇಕೂಂತ ಹೇಳ್ತಾ ಇದ್ರು ರಂಗಮ್ಮ."
"ಗುಂಡಣ್ಣನ ಕೈಲಿ ತಾನೆ ಮಾಡ್ಸೋದು?"
ಆಕೆಗೆ ನಗು ಬಂತು. ಕಳೆದ ವರ್ಷ ಒಡೆದು ಹೋಗಿದ್ದ ಹಂಚುಗಳನ್ನು ಸರಿ
ಪಡಿಸಬೇಕೆಂದು ರಂಗಮ್ಮ ಒಂದೆರಡು ಬಾರಿ ಗುಂಡಣ್ಣನನ್ನು ಮೇಲಕ್ಕೆ ಕಳುಹಿಸಿ
ದ್ದಳು. ಗುಂಡಣ್ಣನೋ 'ನಾನೊಲ್ಲೆ' ಎಂದು ಯಾವತ್ತೂ ಹೇಳಿದವನಲ್ಲ. ವಠಾರದ
ಎಲ್ಲ ಹುಡುಗರೆದುರು, ರಂಗಮ್ಮನಿಂದ ನಿರ್ದೇಶಿತನಾಗಿ ಆತ ಛಾವಣಿಯನ್ನೇರಿದ.
ಒಡೆದ ಹಂಚುಗಳ ಬದಲು ಹೊಸ ಹಂಚುಗಳನ್ನಿರಿಸಿದ. ಆದರೆ ಆತ ಏರಿ ಇಳಿಯುವ
ಗದ್ದಲದಲ್ಲಿ ಬೇರೆ ಹಂಚುಗಳು ಬಿರುಕು ಬಿಟ್ಟುವು!
ಅವರು ಕೇಳಿದರು:
"ಗುಂಡಣ್ಣ ಇನ್ನೂ ಇಲ್ಲೇ ಇದಾನೇನು?"
"ಇಲ್ದೆ ಎಲ್ಹೋಗ್ತಾನೆ?"
"ಶುದ್ಧ ಬೆಪ್ಪು. ಮೆದುಳೇ ಇಲ್ಲ ಪ್ರಾಣಿಗೆ."
ತಮ್ಮ ಮಕ್ಕಳ ವಿಷಯದಲ್ಲಿ ಅವರಿಗೆ ತುಂಬಾ ಅಭಿಮಾನವಿತ್ತು. ಜಯರಾಮು
ಇಂಟರ್ ಪರೀಕ್ಷೆಯಲ್ಲಿ ಒಂದೇ ಸಲ ಉತ್ತೀರ್ಣನಾಗದೆ ತೊಂದರೆ ಕೊಟ್ಟದ್ದು ನಿಜ.
ಆದರೆ, ಅದು ಬೇರೆ ವಿಷಯ. ಪ್ರಾಪಂಚಿಕ ಜ್ಞಾನಕ್ಕೆ ಸಂಬಂಧಿಸಿ ತನ್ನ ಓರಗೆಯವ
ರನ್ನೆಲ್ಲ ಆತ ಸುಲಭವಾಗಿ ಮೀರಿಸುತ್ತಿದ್ದನೆಂಬುದು ತಂದೆಗೆ ಗೊತ್ತಿತ್ತು.
ಅವರು ಮಗನನ್ನು ಕುರಿತು ಯೋಚಿಸಿದರು. ಆತ ದೊಡ್ಡ ವಿದ್ವಾಂಸನಾಗ
ಬೇಕೆಂಬುದು ಅವರ ಆಸೆಯಾಗಿತ್ತು. ಮುಂದೆ ವಿಶ್ವವಿದ್ಯಾನಿಲಯದಲ್ಲಿ ಆತ ಹಿರಿಯ
ಪ್ರಾಧ್ಯಾಪಕನಾಗಿ ತಮಗೆ ಗೌರವ ತರಬೇಕೆಂಬ ಬಯಕೆ ಅವರಿಗಿತ್ತು. ಆದರೆ ಈಗ
ಆ ಕನಸು ಕಾರ್ಯವಾಗುವ ಸುಳಿವೂ ಇರಲಿಲ್ಲ.
ಮಗನ ವಿಷಯ ಹೆಂಡತಿಯೊಡನೆ ಮಾತನಾಡಲು ಅವರು ಇಚ್ಛಿಸಿದರು.
"ಹ್ಯಾಗಿದಾನೆ ಜಯರಾಮು?"
"ಇತ್ತೀಚೆಗೆ ಯಾಕೋ ಒಂದು ಥರವಾಗಿದಾನೆ. ಮುಖದ ಮೇಲೆ ಕಳೇನೇ ಇಲ್ಲ."
ರಂಗಮ್ಮನ ವಠಾರ
83

"ಅವನಿಗೆ ಸ್ನೇಹಿತರು ಇದಾರೇನು ಯಾರಾದರೂ?"

"ಯಾರೂ ಕಾಣೆನಪ್ಪಾ. ಮನೆಗೆ ಬರೋದೇನೂ ತಡ ಮಾಡೋಲ್ಲ.ಸಾಮಾನ್ಯ ವಾಗಿ ಒಬ್ನೇ ಇರ್ತಾನೆ..."

"ಬೆಳೆಯೋ ಹುಡುಗ...ನಾವು ಅನುಭವಿಸ್ತಿರೋ ಪಾಡು ಅರ್ಥವಾಗಿದೇಂತ ತೋರುತ್ತೆ..."

ಅವರು ತಪ್ಪಾಗಿ ಊಹಿಸಿರಲಿಲ್ಲ.

ಮಗನ ಬಳಿಕ ಮಗಳ ಸರದಿ...'ಚಿಕ್ಕವಳು'ಎಂದು ಎಷ್ಟೇ ಸಮಾಧಾನ ಹೇಳಿ ಕೊಂಡರೂ ಈಗಲೇ ಹುಡುಗಿ ಬೆಳೆದುಬಿಟ್ಟಿದ್ದಾಳೆ. ಅವರಮ್ಮನದೇ ರೂಪು. ಯಾವುದರಲ್ಲಿ ಕಡಮೆ ಆಕೆ? ಐಶ್ವರ್ಯದಲ್ಲಿ ತಾನೆ? ಅದು ದೊಡ್ಡದ್ದಲ್ಲ. ನಾವು ಶ್ರೀಮಂತರೆಂದು ಹೆಳಿಕೊಂಡದ್ದೇ ಇಲ್ಲ ಯಾವತ್ತೂ...

ಪಕ್ಕದ ಕೊಠಡಿ ಮನೆಯಲ್ಲಿ ಒಬ್ಬಂಟಿಗನಾಗಿ ವಾಸಿಸುತ್ತಿರುವ ಆ ಯುವಕ. ತಾವು ಒಂದೆರಡು ಸಾರೆ ಮಾತನಾಡಿಸಿದ್ದರು. ಸಂಭಾವಿತನಾಗಿಯೇ ತೋರಿದ್ದ.

"ಪಕ್ಕದ ಮನೆಯಾತ__"

"ಏನು?"

ಅವರು ಒಂದನ್ನು ಯೋಚಿಸಿದರು. ಆಕೆಯೂ ಒಂದನ್ನು ಯೋಚಿಸಿದಳು. ಇಬ್ಬರು ಯೋಚಿಸಿದುದೂ ಒಂದೇ ಆಗಿತ್ತು.

"ಚೆನ್ನಾಗಿದಾನಾ?"

"ಇದಾನೆ, ಒಳ್ಳೆಯವನು ಪಾಪ. ಯಾರ ತಂಟೆಗೂ ಹೋಗೊಲ್ಲ."

ಅವರು ಮುಂದೆ ಮಾತನಾಡಲಿಲ್ಲ. ದೄಷ್ಟಿ ಛಾವಣಿಯನ್ನೇ ನೋಡುತ್ತಿದ್ದರೂ ಯೋಚನೆಗಳು ಒಂದನ್ನೊಂದು ಹಿಂಬಾಲಿಸಿ ದೂರ ದೂರ ಸಾಗಿದುವು.

ಆಕೆ ಹೇಳಿದಳು:

"ಏಳಿ, ಕಾಫಿ ಸೋಸಿದ್ದಾಯ್ತು."




ಜಯರಾಮು ವಾಚನಾಲಯಕ್ಕೆಂದು ಹೊರಟಿದ್ದ ನಿಜ. ಆದರೆ ಹತ್ತು ಹೆಜ್ಜೆ ಹೋದ ಮೇಲೆ ಆತ ತನ್ನ ಮನಸ್ಸು ಬದಲಾಯಿಸಿದ. ಕೇಳಿದ್ದ ಒಂದು ಪ್ರಶ್ನೆಗೆ ಸಂಪಾದಕರಿಂದ ಉತ್ತರ, ಬರೆದಿದ್ದ ಒಂದು ಓಲೆಗೆ ಮಕ್ಕಳ ಬಳಗದ ಅಣ್ಣನಿಂದ ಮಾರೋಲೆ, _ಇಷ್ಟನ್ನು ಆತ ಆ ವಾರದ ಪತ್ರಿಕೆಯಲ್ಲಿ ನಿರೀಕ್ಷಿಸಿದ್ದ. ಇಷ್ಟಲ್ಲದೆ ಎರಡು ಪತ್ರಿಕೆಗಳಿಗೆ ಎರಡು ಸಣ್ಣ ಕತೆಗಳನ್ನೂ ಆತ ಕಳುಹಿಸಿ ಬಹಳ ದಿನಗಳಾಗಿ ದ್ದುವು. ಜತೆಯಲ್ಲಿ ಅಂಚೆ ಚೀಟಿ ಇಟ್ಟಿದ್ದರೂ ಉತ್ತರ ಬಂದಿರಲಿಲ್ಲ. ಸ್ವೀಕೄತವಾಗಿರ ಬಹುದು; ಯಾವುದಾದರೊಂದು ವಾರಪತ್ರಿಕೆ ತೆರೆದೊಡನೆ ತನ್ನ ಕತೆಯೂ ಹೆಸರೂ ಕಣ್ಣಿಗೆ ಬೀಳಬಹುದು_ಎಂದು ಜಯರಾಮು ಆಸೆ ಕಟ್ಟಿಕೊಂಡಿದ್ದ. ಅದು ಆ ಏರಡು ಪತ್ರಿಕೆಗಳೂ ಹೊರಬೀಳುವ ದಿನ. ಬೇರೆ ವಾರವಾಗಿದ್ದರೆ ಜಯರಾಮು ಇಷ್ಟು ಹೊತ್ತಿಗೆ ಅಂಗಡಿ ಬೀದಿಯಲ್ಲಾಗಲೀ ವಾಚನಾಲಯದಲ್ಲಾಗಲೀ ಇರುತ್ತಿದ್ದ. ಆದರೆ ಈ ದಿನ ವಾರಪತ್ರಿಕೆಗಳನ್ನು ತೆರೆದು ನೋಡುವುದರಲ್ಲೂ ಆತನಿಗೆ ಆಸಿಕ್ತಿ ಇರಲಿಲ್ಲ.

ಜನರಿರುವ ಬೀದಿ ಬಿಟ್ಟು ಜಯರಾಮು ಕಾಲು ಹಾದಿ ಹಿಡಿದ. ಯಾರೂ ಜನ ರಿಲ್ಲದ ಜಾಗಕ್ಕೆ ದೂರ ಒಬ್ಬನೇ ಹೋಗಬೇಕೆಂದು ಅವನಿಗೆ ಬಯಕೆಯಾಯಿತು. ಯಾವುದೋ ಶಕ್ತಿ ನಗುನಗುತ್ತ ಒರಟು ಕೈಗಳಿಂದ ತನ್ನ ಕತ್ತನ್ನು ಹಿಸುಕಿ ಉಸಿರು ಕಟ್ಟಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಹೄದಯ ಭಾರವಾಗಿ ಮೈ ಕಾವೇರಿದಂತೆ ತೋರಿತು.

...ರೈಲು ಸೇತುವೆಯನ್ನು ತಲುಪಿದ ಜಯರಾಮು, ಮಣ್ಣು ದಿಬ್ಬಗಳನ್ನು ಹಾದು ಕೆಳಕ್ಕಿಳಿದ. ಪಾದದ ಬಳಿ ಸ್ವಲ್ಪ ಹರಿದಿದ್ದ ಪಾಯಜಾಮ, ಮಾಸಿದ ಅಂಗಿ, ಎಣ್ಣೆ ಬಾಚಣಿಗೆಗಳ ಸ್ಪರ್ಶವಿಲ್ಲದೆ ಇದ್ದರೂ ಓರಣವಾಗಿದ್ದ ಕ್ರಾಪು......ಕಂಬಿಗೆ ಅಡ್ಡವಾಗಿ ಹಾಕಿದ ಹಲಿಗೆಗಳು ಅನಂತವಾಗಿದ್ದವು. ಕಲ್ಲು ತಾಕಿ ಒಮ್ಮೊಮ್ಮೆ ನೋವಾದರೂ, ಹಲಿಗೆಯಿಂದ ಹಲಿಗೆಗೆ ಹೆಜ್ಜೆ ಇಡುತ್ತ ಯಶವಂತಪುರದತ್ತ ಜಯ ರಾಮು ನಡೆದ.

ನಿರ್ಜನವಾಗಿದ್ದ ಮಲ್ಲೇಶ್ವರದ ರೈಲು ನಿಲ್ದಾಣ ಹಿಂದೆ ಬಿತ್ತು. ಆ ಬಳಿಕ ರೈಲು ಗೇಟು, ಕಾವಲು ಮನೆ, ಒಂಟಿ ಮರ. ಬರಲಿದ್ದ ಕಡು ಬೇಸಗೆಗೆ ಆಗಲೆ ಹೆದರಿ ನೆಲದ ಮೈ ಸುಕ್ಕುಗಟ್ಟಿತ್ತು. ಸಂಜೆಯಾಗುತ್ತ ಬಂದಿದ್ದರೂ ವೄದ್ದ ಸೂರ್ಯ ಉಗ್ರ ನಾಗಿಯೇ ಇದ್ದ. ಜಯರಾಮು ಅಲ್ಲೇ ಎಡಕ್ಕೆ ಇಳಿದು ಕೆರೆಯನ್ನು ಬಳಸಿಕೊಂಡು ಎದುರಿಗಿದ್ದ ಬೆಟ್ಟವನ್ನೇರಿದ. ಎತ್ತರದಲ್ಲಿ ಬಂಡೆಗಲ್ಲುಗಳಿದ್ದುವು. ಜಯರಾಮು ತನ್ನ ಪರಿಚಯದ ಕಲ್ಲಿಗೆ ಒರಗಿ ಕುಳಿತ.

ವಾರಕೋಮ್ಮೆಯೋ ಎರಡು ವಾರಗಳಿಗೊಮ್ಮೆಯೋ ಜಯರಾಮು ಅಲ್ಲಿಗೆ ಬರುವುದಿತ್ತು. ಅದು ಮನಸ್ಸು ತುಂಬಾ ಉಲ್ಲಾಸವಾಗಿದ್ದಾಗ, ಇಲ್ಲಿವೆ ಬಹಳ ಪ್ರಕ್ಷುಬ್ಧಗೊಂಡಿದ್ದಾಗ. ಮನಸ್ಸು ಸಂತೋಷದಿಂದ ಚಿಲಿಪಿಲಿಗುಡುತ್ತಿದ್ದ ದಿನ, ಬಾಡಿದ್ದರೂ ಸರಿಯೆ ಚಿಗುರಿದ್ದರೂ ಸರಿಯೆ ನಿಸರ್ಗ ಸುಂದರವಾಗಿ ಕಾಣಿಸಿ ಆತ ನನ್ನು ತನ್ಮಯಗೊಳಿಸುತ್ತಿತ್ತು. ಮನುಷ್ಯನನ್ನು ಮಣ್ಣಿಗೆ ಬಿಗಿದಿರುವ ಅಗೋಚರ ತಂತುವಿನ ವಿಷಯ ಆತ ವಿಸ್ಮಯಗೊಳ್ಳುತ್ತಿದ್ದ. ಕರಿಯ ಬಂಡೆಗಳು ಆತನಿಗೆ ಪ್ರಿಯ ವಾಗಿ ತೋರುತ್ತಿದ್ದುವು. ಬೆರಳುಗಳಿಂದ ಅವುಗಳನ್ನು ಮುಟ್ಟಿ ನೋಡುತ್ತಿದ್ದ. ಮನಸ್ಸು ಬೇಸರವಾಗಿದ್ದಾಗ, ಸುತ್ತಮುತ್ತಲಿನ ಬರಿಯ ಶೂನ್ಯವೂ ಒಂದು ಬಗೆಯ

ನೆಮ್ಮದಿಯನ್ನು ಆತನಿಗೆ ದೊರಕಿಸುತ್ತಿತ್ತು.

ವಿಸ್ತಾರವಾದ ಬಂಡೆಗಲ್ಲು . ಕೆಳಗೆ ಒಂದೆಡೆ ಸಿಡಿಮದ್ದು ಹಾಕಿ ಒಂದಷ್ಟು ಭಾಗ
ವನ್ನು ಒಡೆದು ಒಯ್ದಿದ್ದರು. ಆದರೂ ಎಷ್ಟೊಂದು ಆಚಲವಾಗಿ ಗಂಭೀರವಾಗಿ
ಅದು ನಿಂತಿತ್ತು! ಏನಾದರೊಂದು ಘಟನೆಯಿಂದ ಹೃದಯಕ್ಕೆ ಆಘಾತವಾದಾಗ, ಮನ
ಸ್ಸಿಗೆ ನೋವಾದಾಗ, ಜಯರಾಮು "ಈ ಬಂಡೆ ಕಲ್ಲಿನ ಬಲ ನನಾಗಿರಬಾರದೆ?" ಎಂದು
ಕೊಳ್ಳುತ್ತಿದ್ದ.
ಪ್ರೌಢಶಾಲೆಯಲ್ಲಿದ್ದಾಗ ದೊಡ್ಡ ಹುಡುಗರು ಅವನಿಗೆ ಕೀಟಲೆ ಕೊಟ್ಟು ಗೇಲಿ
ಮಾಡುತ್ತಿದ್ದರು:
"ಏ ಹುಡುಗಿ!"
ಆಗ ಜಯರಾಮು ನೋಡಲು ಸುಂದರನಾಗಿದ್ದ. ಮುಟ್ಟಿದರೆ ಮುದುಡಿ
ಕೊಂಡು ತನ್ನಷ್ಟಕ್ಕೆ ಸುಮ್ಮನಿರುತ್ತಿದ್ದ. ತಾನು ದುರ್ಬಲನೆಂಬುದರ ಅರಿವಾದಾಗಲೆಲ್ಲ
ಅವನಿಗೆ ಅಳು ಬರುತ್ತಿತ್ತು.
ಆದರೆ ಕಾಲೇಜಿನ ಮೆಟ್ಟಿಲೇರುವ ಹೊತ್ತಿಗೆ ಅವನಲ್ಲಿ ಮಾರ್ಪಾಟಾಗಿತ್ತು.
ಮುಖದ ಮೇಲೆ ಹೇರಳವಾಗಿ ಮೂಡಿದ ತಾರುಣ್ಯ ಪೀಟಿಕೆಗಳು ಅವನ ಸೌಂದರ್ಯ
ದಿಂದ ಹುಡುಗಿತನವನ್ನು ಕಸಿದುಕೊಂಡುವು. ಕಾಲೇಜಿಗೆ ಬರಲು ಬರಿಗಾಲಿನಲ್ಲಿ
ಮೈಲು ಮೈಲುಗಳ ನಡಿಗೆ, ಬರಿಗೈ, ಬರಿಜೇಬು, ಇತರ ಹಲವಾರು ವಿದ್ಯಾರ್ಥಿಗಳ
ವಿಲಾಸಮಯ ಜೀವನದೊಡನೆ ತನ್ನದರ ಹೋಲಿಕೆ ಇವೆಲ್ಲ ತನ್ನ ಕುಟುಂಬದ ಇರುವಿ
ಕೆಯ ನಿಜಸ್ವರೂಪದ ಪರಿಚಯವನ್ನು ಆತನಿಗೆ ಮಾಡಿಕೊಟ್ಟುವು.
ಆ ಬಳಿಕ ಆತನ ದೃಷ್ಟಿ ಸುತ್ತುಮುತ್ತಲೂ ಹರಿದು, ತನ್ನ ಕುಟುಂಬದ ರೂಪು
ರೇಖೆಗಳೇ ಇದ್ದ ಇತರ ನೂರು ಕುಟುಂಬಗಳನ್ನು ಗುರುತಿಸಿತು. ತಮಗಿಂತ ಕಡು
ಬಡವರಾದ ಸಹಸ್ರ ಜನರನ್ನೂ ಕಂಡಿತು. ಸಂಖ್ಯೆಯಲ್ಲಿ ಅಲ್ಪರಾದ ಸುಖಜೀವಿ
ಭಾಗ್ಯವಂತರನ್ನೂ ಆತ ನೋಡಿದ. ಸಾಮರಸ್ಯವಿಲ್ಲದ ಜೀವನ....ದಿನನಿತ್ಯದ ಅನು
ಭವಗಳೊ! ಪ್ರತಿಯೊಂದು ಸೂಜಿ ಚುಚ್ಚಿದ ಹಾಗೆ ಅಚ್ಚೊತ್ತಿ ಹೋಗುತ್ತಿತ್ತು.
ತನ್ನ ಪ್ರೀತಿಯ ತಾಯಿ ಇತರ ಹಲವರಂತೆ ಯಾಕೆ ಮೈ ತುಂಬಿಕೊಂಡಿಲ್ಲ?
ಆಕೆಯ ಮುಖವನ್ನು ಯಾವಾಗಲೂ ದುಃಖದ ಮೋಡ ಯಾಕೆ ಕವಿದೇ ಇರುತ್ತದೆ?
ಇದು ಈಗೀಗ ಜಯರಾಮುಗೆ ಅರ್ಥವಾಗುತ್ತಿತ್ತು.
ತಂಗಿ ರಾಧೆಯನ್ನು ಆತ ತುಂಬಾ ಪ್ರೀತಿಸುತ್ತಿದ್ದ. ಮಕ್ಕಳು ಅನ್ಯೋನ್ಯ
ವಾಗಿರುವುದನ್ನು ಕಂಡು ತಾಯಿಗೆ ಸಮಾಧಾನ. ಆದರೆ ಆ ತಂಗಿ ಅವನ ಜತೆಯಲ್ಲೇ
ಸದಾ ಕಾಲವೂ ಇರುವುದು ಸಾಧ್ಯವಿರಲಿಲ್ಲ. ರಾಧಾ ಇನ್ನೊಬ್ಬರ ಮನೆಗೆ ಹೋಗ
ಬೇಕಾದ ವೇಳೆ ಸಮೀಪಿಸುತ್ತಿತ್ತು. ಅವಳಿಗಾಗಿ ಆ ವರೆಗೂ ಯಾವುದೇ ಮನೆಯ
ಬಾಗಿಲು ತೆರೆದಿಲ್ಲವಾದರೂ ನೋಡುತ್ತಿದ್ದ ಎಲ್ಲರ ದೃಷ್ಟಿಯಲ್ಲಿ ಮದುವೆಯ ದಿನ
ಹತ್ತಿರ ಬರುತ್ತಿತ್ತೆಂಬುದು ಸ್ಪಷ್ಟವಾಗಿತ್ತು.

ಈ ಸಲ ಪ್ರವಾಸದಿಂದ ಹಿಂತಿರುಗಿ ಬಂದ ತಂದೆ....ಒಂದು ಸಂಸಾರವನ್ನು

ಸಾಕಲು ಅವರು ಎಷ್ಟೊಂದು ಕಷ್ಟಪಡಬೇಕು! ತಂದೆ ಮತ್ತು ತಾಯಿ ...
ಜಯರಾಮು ಮನೆಯಿಂದ ಈ ಸಂಜೆ ಹೊರಟು ಬಂದುಬಿಟ್ಟಿದ್ದ, ಹೆತ್ತವರು
ತಮ್ಮ ಮಕ್ಕಳೆದುರು ಮಾತನಾಡಲಾಗದ ಎಷ್ಟೋ ವಿಷಯಗಳಿದ್ದುವು. ದಂಪತಿ
ಎಂದ ಮೇಲೆ ಅವರಿಗೆ ಏಕಾಂತ ಬೇಡವೆ? ರಾತ್ರಿಯಂತೂ ಆ ಕೊಠಡಿ_ಮನೆಯೊಳಗೆ
ಸಂಸಾರವೆಲ್ಲ ನಿದ್ದೆ ಹೋದಾಗ ಗೋಪ್ಯವೆಂಬುವುದಿಲ್ಲ. ಹಗಲಾದರೂ ಮಾತನಾಡಲು
ಅವರಿಗೆ ಅವಕಾಶವಿಲ್ಲದಿದ್ದರೆ?
'ರಾಧೆಗೇನೂ ತಿಳಿಯೋದೇ ಇಲ್ಲ. ಆಕೆ ಇನ್ನೂ ಹಸುಳೆ', ಎಂದುಕೊಂಡು ಜಯರಾಮು. ತಾನು ಆಕೆಯನ್ನು ಕರೆದುಕೊಂಡು ಬರಬೇಕಾಗಿತ್ತು, ಒಬ್ಬನೇ ಬಂದು ತಪ್ಪು ಮಾಡಿದೆ _ಎಂದು ಪರಿತಪಿಸಿದೆ.
ಜಯರಾಮುವಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಆತ ಪರೀಕ್ಷೆಯಲ್ಲಿ ಉತ್ತೀರ್ಣ
ನಾಗದೆ ಇರಲು ಇದೇ ಬಹಳ ಮಟ್ಟಿಗೆ ಕಾರಣವಾಗಿತ್ತು.
ಒಂದು ದಿನ ಅರ್ಥಶಾಸ್ತ್ರದ ಉಪನ್ಯಾಸಕರು ಕೇಳಿದ್ದರು:
"ಏನಪ್ಪಾ, ಓದೋಕೆ ಮನಸಿಲ್ವೆ?"
ಆ ಮಾತು ಕೇಳಿ ಜಯರಾಮುವಿನ ಮುಖ ಕೆಂಪಗಾಗಿತ್ತು. ಉತ್ತರ ಹೊರ
ಟಿರಲಿಲ್ಲ.
ಈಗಿನ ಕಾಲದ ಹುಡುಗರೆಲ್ಲ ಖಂಡಿತವಗಿಯೂ ಕೆಟ್ಟು ಹೋದರೆಂದು ನಂಬಿದ್ದ
ಸ್ವಲ್ಪ ವಯಸ್ಸಾಗಿದ್ದ ಆ ಅಧ್ಯಾಪಕರು ನೊಂದ ಧ್ವನಿಯಲ್ಲಿ ಹೇಳಿದ್ದರು:
"ಅನುಕೂಲವಿದ್ದರೆ ಎಷ್ಟು ವರ್ಷ ಬೇಕಾದರೂ ಇಲ್ಲೇ ಇರು. ಸಂತೋಷವೇ.
ಆದರೆ, ನಿನ್ನನ್ನ ನೋಡಿದರೆ, ಅನುಕೂಲವಿದ್ದ ಹಾಗೆ ಕಾಣಿಸೋದಿಲ್ಲ. ಕಲಿಯೋಕೆ
ಇಷ್ಟವಿಲ್ಲದೆ ಹೋದರೆ ಸುಮ್ಸುಮ್ನೆ ಹೆತ್ತವರ ಹೊಟ್ಟೆ ಉರಿಸಬಾರದಪ್ಪಾ."
ಜಯರಾಮುಗೆ ಅಳು ಬಂದಿತ್ತು. ಆದರೆ ಅದು ನಿರ್ಜನ ಪ್ರದೇಶವಾಗಿರಲಿಲ್ಲ
ವಾದ್ದರಿಂದ ಬಿಗಿದುಕೊಂಡ ಕುತ್ತಿಗೆಯ ನರಗಳು ಮತ್ತೆ ಸಡಿಲವಾದವು. ಆ ದಿನವೂ
ಜಯರಾಮು ಈ ಬೆಟ್ಟವನ್ನೇರಿ ಬಂದು,ಕತ್ತಲು ಆ ಭೂಮಿಯ ಮೇಲೆಲ್ಲ ಕರಿಯ
ತೆರೆ ಎಳೆಯುವವರೆಗೂ ಆಲ್ಲಿ ಕುಳಿತಿದ್ದ. ಯಾರೂ ಇಲ್ಲದೆ ಇದ್ದಾಗ ಕಣ್ಣೀರು
ಧಾರಾಕಾರವಾಗಿ ಹರಿದಿತ್ತು.
ಅಧ್ಯಾಪಕರು ನಿಜವಾದ್ದನ್ನೇ ಹೇಳಿದ್ದರು. ಪಾಠಗಳಲ್ಲಿ ಆತನಿಗೆ ಆಸಕ್ತಿ
ಇರಲಿಲ್ಲ. ಕಾಲೇಜಿನ ತರಗತಿಯ ನಾಲ್ಕು ಗೋಡೆಗಳೊಳಗಿದ್ದರೆ ಮಾತ್ರ ವಿದ್ಯಾವಂತ
ನಾಗುವುದು ಸಾಧ್ಯವೆಂಬುದನ್ನು ಅವನು ಒಪ್ಪುತ್ತಿರಲಿಲ್ಲ. ವಿದೇಶೀಯರು ಬಳುವಳಿ
ಯಾಗಿ ಕೊಟ್ಟು ಹೋಗಿದ್ದ ಈ ವಿದ್ಯಾಪದ್ಧತಿಯನ್ನು ಖಂಡಿಸುವ ಹಲವಾರು ಭಾಷಣ
ಗಳನ್ನು ಆತ ಕೇಳಿದ್ದ.ಈ ವಾದಸರಣಿ ಆತನಿಗೆ ಮೆಚ್ಚುಗೆಯಾಗಿತ್ತು. ಅವನಿಗೆ
ಇದ್ದ ಆಕರ್ಷಣೆ ಸಾಹಿತ್ಯವೊಂದೇ. ಪುಸ್ತಕಗಳ ಲೋಕದಲ್ಲಿ ಸುಖಿಯಾಗಿ ಇಲ್ಲವೆ
ದುಃಖಿಯಾಗಿ ವಿಹರಿಸುತ್ತ ಆತ ಕಷ್ಟಕೋಟಲೆಗಳ ವಾಸ್ತವ ಲೋಕವನ್ನು
ಮರೆಯುತ್ತಿದ್ದ.
ತಾನು ಈ ಸಲ ಪರೀಕ್ಷೆ ಕಟ್ಟದಿರುವುದೇ ಮೇಲು, ಈ ಓದು ಇಷ್ಟವಿಲ್ಲವೆಂದು
ತಂದೆ ಬಂದೊಡನೆ ಹೇಳಬೇಕು ಎಂದೆಲ್ಲ ಯೋಚಿಸುತ್ತ ಜಯರಾಮು ಮನೆಗೆ
ಮರೆಳಿದ್ದ ಆ ಸಂಜೆ.
"ಯಾಕೊ ಇಷ್ಟು ತಡ?"
-ಎಂದು ಜಯರಾಮುವಿನ ತಾಯಿ ಕೇಳಿದಳು. ಮಗ ಉತ್ತರ ಕೊಡಲಿಲ್ಲ
ವೆಂದು ಆಕೆ ಸಿಟ್ಟಾದಳು.
"ಮಾತು ಕೂಡ ಆಡ್ಬಾರ್ದೇನೊ?" ಎಂದು ತಾಯಿ ರೇಗಿ ನುಡಿದು, ತಾನು
ಒಡೆದು ಮಗಳ ಕೈಯಲ್ಲಿ ಓದಿಸಿ ದೇವರ ಪಠದ ಹಿಂದಿರಿಸಿದ್ದ ಕಾಗದವನ್ನು ಮಗನಿಗೆ
ಕೊಟ್ಟಳು.
"ನೋಡು, ನಿಮ್ಮಪ್ಪ ಕಾಗದ ಬರೆದಿದ್ದಾರೆ. ಪರೀಕ್ಷೆ ದುಡ್ಡು ಕಟ್ಟೋಕೇಂತ
ಮನಿಯಾರ್ಡರೂ ಕಳಿಸಿದ್ದಾರೆ."
ತಂದೆಯ ಕಾಗದ ಓದಿದ ಮಗನ ಮನಸ್ಸು ಕುಗ್ಗಿ ಹೋಹಿತು. ಆತನ ವಿದ್ಯಾ
ಭ್ಯಾಸಕ್ಕೂ ಆ ಪರೀಕ್ಷೆಗೂ ಅವರು ಅಷ್ಟೊಂದು ಮಹತ್ವ ಕೊಟ್ಟಿದ್ದರು! "ಇನ್ನು
ಮುಂದಕ್ಕೆ ಓದಿಸುವ ಸಾಮರ್ಥ್ಯ ನನಗಿಲ್ಲ. ಆದರೆ ನನ್ನ ಮಗ ಇಂಟರ್ ಪರೀಕ್ಷೆ
ಯಾದರೂ ಪಾಸಾಗಬೇಕು. ನೀನು ಬೇಗನೆ ಸಂಪಾದಿಸುವಂತಾಗಬೇಕು. ನಮ್ಮ
ಸಂಸಾರದ ಪರಿಸ್ಥಿತಿ ನಿನಗೆ ಗೊತ್ತೇ ಇದೆ..."
ಇಯಿ ಕೇಳಿದ್ದಳು:
"ನಿದ್ದೆ ಬಂತೆ ಜಯರಾಮೂ?"
ಆ ಪ್ರಶ್ನೆ ಕೇಳಿಸಿದ್ದರೂ ಉತ್ತರ ಕೊಡಲಿಲ್ಲ ಆತ. ಅತ್ತಿತ್ತ ಮಿಸುಕದೆ ಮಲ
ಗಿದ. ಯೋಚನೆಯಿಂದ ಆ ಮೆದುಳು ಭಣಗುಟ್ಟಿತು...ತಂದೆಯ ಬಯಕೆಯನ್ನು
ಪೂರೈಸುವುದಕ್ಕಾದರೂ ತಾನು ಓದಬೇಕು, ಉತ್ತೀರ್ಣನಾಗಬೇಕು, ಎಷ್ಟೆಂದರೂ
ಇನ್ನು ಕೆಲವು ತಿಂಗಳು ಮಾತ್ರ ಎಂದುಕೊಂಡ.
ಆದರೆ ಆ ತೀರ್ಮಾನವನ್ನು ಕಾರ್ಯಗತಗೊಳಿಸುವುದು ಸುಲಭವಾಗಿರಲಿಲ್ಲ.
ಮತ್ತೆ ಮತ್ತೆ ಜಯರಾಮು ಪರೀಕ್ಷೆಗೆ ಕುಳಿತುಕೊಳ್ಳಬೇಕಾಯಿತು. ತಂದೆ ಅವಾಚ್ಯ
ಮಾತುಗಳಿಂದ ಗದರಿಸಲಿಲ್ಲವಾದರೂ ಅವರಿಗೆ ತುಂಬಾ ದುಃಖವಾಗಿದೆ ಎಂಬುದನ್ನು
ಜಯರಾಮು ತಿಳಿದ.
ಒಮ್ಮೆ ಆತನ ತಂದೆ ಕೇಳಿದರು:
"ಷಾರ್ಟ್ ಹ್ಯಾಂಡ್ ಟೈಪ್ ರೈಟಿಂಗ್ ಕಲೀತಿಯೇನೋ?"
ಜಯರಾಮು ಉತ್ತರ ಕೊಡಲಿಲ್ಲ. ಆದರೆ ಆ ಕಲಿಯುವಿಕೆಯಿಂದ ಮುಖ್ಯ
ಪರೀಕ್ಷೆಗೆ ಭಂಗ ಬರಬಹುದೆಂದು ಅಳುಕಿ ಅವರೇ ಹೇಳಿದರು:
"ಈಗ ಬೇಡ. ಮೊದಲು ಪರೀಕ್ಷೆಯೊಂದು ಆಗಲಿ."
ಈ ಸಂಜೆ ತಾಯಿ ತಂದೆಯರಿಂದ, ತಂಗಿಯಿಂದ ದೂರ ಬಂದು ಕುಳಿತು ಜಯ
ರಾಮು ಅಂತರ್ಮುಖಿಯಾಗಿ ಬಹಳ ಹೊತ್ತು ಯೋಚಿಸಿದ.
ತಂದೆ ಬಡಕಲಾಗಿದ್ದರು. ಪ್ರವಾಸ ವ್ಯಾಪಾರದಿಂದ ಅವರ ಆರೋಗ್ಯ ಕೆಟ್ಟಿತ್ತು
ಇಳಿಮುಖವಾಗಿತ್ತು ಸಂಪಾದನೆ. ತನ್ನ ತಂಗಿಯ ಮದುವೆ...
ಮತ್ತೂ ಹಿಂದಕ್ಕೆ ಬಂಡೆಕಲ್ಲಿಗೊರೈಗಿ ಕಾಲುಗಳನ್ನು ಸಡಿಲವಾಗಿ ಚಾಚಿ ಜಯ
ರಾಮು ನಿಟ್ಟುಸಿರುಬಿಟ್ಟ.
ಹೇಗಿರುತ್ತಾರೆ ಮನುಷ್ಯರು! ಉದಾಹರಣೆಗೆ ರಂಗಮ್ಮ. ಅವರಲ್ಲಿ ಜಯ
ರಾಮು ಒಳ್ಳೆಯವೆಂದು ಭಾವಿಸಿದ್ದ ಎಷ್ಟೋ ಗುಣಗಳಿದ್ದುವು. ಕೆಟ್ಟ ಗುಣಗಳೂ
ಇದ್ದವು. ಅವರು ಕಷ್ಟಪಟ್ಟು ಮಕ್ಕಳನ್ನು ಬೆಳಸಿ ದೊಡ್ಡವರಾಗಿ ಮಾಡಿದ ಸಾಹಸದ
ಕತೆ ಕೇಳಿದಾಗ ಜಯರಾಮು ಬೆರಗಾಗಿದ್ದ. ಆದರೆ ರಂಗಮ್ಮ ವಯಸ್ಸಾದಂತೆ ಹೆಚ್ಚು
ಹೆಚ್ಚು ಜಿಪುಣರಾಗುತ್ತ ಬಂದಿದ್ದರು. ಹಣ ಎಂದರೆ ಎಷ್ಟೊಂದು ಪ್ರೀತಿ ಅವರಿಗೆ!
ಆ ನೀರು ಲೈಟುಗಳು ಲೆಕ್ಕ...
ಒಂದು ದಿನ ವಠಾರದ ಎಲ್ಲರ ಮುಂದೆ ಜಯರಾಮು ಅವರನ್ನು ಕೇಳಿದ್ದ :
"ಕಕ್ಕಸು ನೋಡಿದ್ರಾ ರಂಗಮ್ನೋರೆ?"
"ಏನಾಗಿದೆಯಪ್ಪಾ...?"
"ಥೂ ಥೂ... ಹೊಲಸೂಂದರೆ ಹೊಲಸು.."
"ಕಕ್ಕಸು ತೊಳೆಯೋಳು ಬರ್ಲಿಲ್ವೇನೊ?"
"ಬಂದಿದ್ಲು. ನೀವು ಕೊಡೋದು ನಾಲ್ಕೇ ಆಣೆ. ನಾಲ್ಕಾಣೆಗೆ ಎಷ್ಟು ತೊಳೀ
ಬೇಕೋ ಅಷ್ಟು ತೊಳೀತಾಳೆ."
ರಂಗಮ್ಮ ಸಿಟ್ಟಾಗಿ ಕೇಳಿದರು.
"ಇನ್ನೇನು? ಒಂದು ರೂಪಾಯಿ ಕೊಡ್ಲೆ ನಾನು?"
"ನೀವ್ಯಾಕೆ ಕೊಡ್ಬೇಕು? ಇಷ್ಟು ಸಂಸಾರ ಇಲ್ವೆ ಇಲ್ಲಿ? ಒಬ್ಬೊಬ್ಬರು ಬಾಡಿಗೆ
ಜತೇಲಿ ಎರಡೆರಡಾಣೆ ಕೊಡ್ಲಿ. ಆಗ ಒಂದು ರೂಪಾಯಿ ಕಕ್ಕಸು ತೊಳೆಯೋಳಿಗೆ
ಕೊಡೋಕೆ ಅಗಲ್ವೊ?"
ಅಲ್ಲಿದ್ದ ಹೆಂಗಸರೆಲ್ಲ ಜಯರಾಮುವನ್ನು ದುರುಗಟ್ಟಿ ನೋಡಿದರು. ಅದರೆ
ಅವನ ಕಣ್ಣುಗಳಲ್ಲಿ ತುಂಟತನ ಮಿನುಗುತ್ತಿದ್ದುದು ಕೆಲವರಿಗೆ ಕಾಣಿಸದಿರಲಿಲ್ಲ. ಆದರೆ
ಆ ವ್ಯಂಗ್ಯ ಅರ್ಥವಾಗದೆ ರಂಗಮ್ಮ ಎರಡೆರಡಾಣೆಯಂತೆ ಒಂದು ರೂಪಾಯಿ ಹನ್ನೆರ
ಡಾಣೆ ಜಮೆಯಾಗುವುದನ್ನೂ ಮುನಿಸಿಪಾಲಿಟಿಯವಳಿಗೆ ಎಂಟಾಣೆ ಕೊಟ್ಟರೂ ಒಂದೂ
ಕಾಲು ರೂಪಾಯಿ ಮಿಗುವುದನ್ನೂ ಮನಸ್ಸಿನಲ್ಲೆ ಲೆಕ್ಕ ಹಾಕಿದರು. ಅದೊಂದನ್ನೂ
ಹೊರಗೆ ತೋರಗೊಡದೆ ಅವರು ಗೊಣಗಿದರು:
"ಸರಿ, ಇನ್ನು ಅದೊಂದು. ಇವರೆಲ್ಲಾ ಬಾಡಿಗೆ ಒಮ್ಮೆ ಸರಿಯಾಗಿ ಕೊಟ್ಟರೆ
ಸಾಕಾಗಿದೆ."
ಮೇಲಿಂದ ಕಿಟಿಕಿ ಮೂಲಕ ಇಣಿಕಿ ನೋಡಿ ಜಯರಾಮುವಿನ ತಾಯಿ
ಕೇಳಿದ್ದಳು:
"ಏನೋ ಅದು ಗಲಾಟೆ?"
ಜಯರಾಮು ಮೇಲಕ್ಕೆ ಬಂದು, ಕೆಳಗೆ ಆದ ಸಂಭಾಷಣೆಯನ್ನು ತಾಯಿಗೂ
ಹೇಳಿ ಬಿದ್ದು ನಕ್ಕ. ಆಕೆಗೂ ನಗು ಬರದಿರಲಿಲ್ಲ. ಆದರೂ ಎಂದಿನಂತೆ ಆಕೆ
ಹೇಳಿದಳು:
"ವಯಸ್ಸಾದೋರ ಜತೇಲಿ ಹಾಗೆಲ್ಲ ಮಾತಾಡ್ಬಾರದಪ್ಪಾ."
ಆದರೆ ಅಂತಹ ತುಂಟ ಮಾತುಗಳಿಂದ ಸಂತೋಷವಾಗಿರುತ್ತಿದ್ದ ಜಯರಾಮು
ಮತ್ತೊಂದು ದಿನ ರಂಗಮ್ಮ ಒಬ್ಬರೇ ಇದ್ದಾಗ ಕೇಳಿದ್ದ:
"ನಾನು ಅವತ್ತು ಹೇಳಿದ ವಿಷಯ ಏನ್ಮಾಡಿದಿರಿ ರಂಗಮ್ನೋರೆ?"
"ಯಾವ ವಿಷಯ್ವೊ?"
"ಅದೇ-ಕಕ್ಕಸಿಂದು."
ಹಾಗೆ ಹೇಳಿದಾಗ ಗಾಂಭೀರ್ಯ ಮರೆಯಾಗಿ ನಗು ಬಂದು ಬಿಟ್ಟಿತ್ತು ಜಯ
ರಾಮುಗೆ. ಅದನ್ನು ಗಮನಿಸಿ ರಂಗಮ್ಮ ಅರೆಮನಸಿನಿಂದ ರೇಗುತ್ತ ಹೇಳಿದ್ದರು:
"ನಗ್ತೀಯೇನೋ? ಕೈಲಾಗದ ಮುದುಕಿ ಒಬ್ಬಳಿದಾಳೇಂತ ನಿನಗೆಲ್ಲಾ ತಮಾಷೆ
ಯಾಗ್ಬಿಟ್ಟಿದೆ ಅಲ್ವೇ? ತಾಳು ಬರ್ಲಿ ನಿಮ್ಮಪ್ಪ."
ಜಯರಾಮು ನಕ್ಕು, ರಂಗಮ್ಮನನ್ನು ಕೇಳಿದ:
"ಗೋದಿಗೀದಿ ಏನಾದರೂ ಇದ್ದರೆ ಕೊಡಿ. ಹಿಟ್ಟು ಮಾಡಿಸಿಕೊಂಡು ಬರ್ತೀನಿ."
ಆ ಕ್ಷಣ ರಂಗಮ್ಮನಿಗೆ ಬೇರೆ ಎಲ್ಲವೂ ಮರೆತು ಹೋಯಿತು. ಸ್ವಯಂಸೇವಕ
ನಾಗಿ ಬಂದ ಜಯರಾಮು ಅವರ ಪ್ರೀತಿಪಾತ್ರನಾದ.
ನಾರಾಯಣಿ ಸತ್ತಾಗ ಅಂತ್ಯಸಂಸ್ಕಾರಕ್ಕೆಂದು ರಂಗಮ್ಮ ಐದು ರೂಪಾಯಿ
ತೆಗೆದುಕೊಟ್ಟ ಸನ್ನಿವೇಶ, ಹಾಗೆಯೇ ಅಕ್ಕಪಕ್ಕದವರು ಕಾಹಿಲೆ ಬಿದ್ದಾಗ ಅವರು
ನಡೆಸುತ್ತಿದ್ದ ಆರೈಕೆ- ಅದೊಂದು ಚಿತ್ರವಾದರೆ, ನಾರಾಯಣಿಯ ಗಂಡ ಮಕ್ಕಳೊಡನೆ
ಮನೆ ಬಿಟ್ಟು ಹೊರಟು ಹೋಗುವಂತೆ ಅವರು ಮಾಡಿದ್ದು, ಖಾಲಿ ಮನೆಯನ್ನು
ನೋಡಲು ಯಾರಾದರೂ ಬಂದಾಗ ಅವರು ಒಪ್ಪುವಂತೆ ಒಲಿಸಲು ಆಕೆ ತೋರಿಸು
ತ್ತಿದ್ದ ವಾಕ್ಚಾತುರ್ಯ- ಇದು ಇನ್ನೊಂದು ಚಿತ್ರವಾಗಿತ್ತು.

ಹೀಗೆ ಪ್ರತಿ ಮನುಷ್ಯನನ್ನೂ ಜಯರಾಮು ಸೂಕ್ಷ್ಮವಾಗಿ ನಿರೀಕ್ಷಿಸಿ ತಿಳಿದು
ಕೊಳ್ಳುತ್ತಿದ್ದ. ಪ್ರತಿಯೊಬ್ಬನೂ ಒಳಿತು_ಕೆಡಕುಗಳ ಸಮ್ಮಿಶ್ರಣ. ಕೆಲವರಲ್ಲಿ ಒಳಿತು
ಹೆಚ್ಚು. ಕೆಲವರಲ್ಲಿ ಕೆಡುಕು. ಪ್ರತಿಯೊಬ್ಬರನ್ನೂ ಹಾಗೆ ತೂಗಿ ನೋಡಿದ ಮೇಲೆ
ಮತ್ತೊಂದು ಪ್ರಶ್ನೆ ಏಳುತ್ತಿತ್ತು, 'ಈ ಮನುಷ್ಯ ಹೀಗೇಕೆ?' ಶಂಕೆ ಸಂದೇಹಗಳು
12
90
ಸೇತುವೆ

ಮೂಡಿದಾಗಲೆಲ್ಲ ಜಯರಾಮು ಪುಸ್ತಕಗಳಲ್ಲಿ ವಿವರಣೆ ಹುಡುಕುತ್ತಿದ್ದ. ಆದರೆ
ಸಮರ್ಪಕ ಉತ್ತರ ಅಲ್ಲಿ ಪ್ರತಿ ಸಲವೂ ಸಿಗುತ್ತಿರಲಿಲ್ಲ.
ಮನಸ್ಸಿನ ಆ ಭಾವನೆಗಳಿಗೆ ಮಾತಿನ ರೂಪ ಕೊಟ್ಟು ಆತ ಕವಿತೆಗಳನ್ನು ಬರೆದ,
ತಂಗಿ ರಾಧಾಗೆ ಅವು ಅರ್ಥವಾಗಲಿಲ್ಲಿ. ಆದರೆ ಆಕೆಯ ದೃಷ್ಟಿಯಲ್ಲಿ ಅಣ್ಣ ನಿಸ್ಸಂದೇಹ
ವಾಗಿಯೂ ದೊಡ್ಡ ಕವಿಯಾಗಿದ್ದ. ಆಕೆ ಕೇಳಿದ್ದಳು:
"ಅಣ್ಣ, ಇದನ್ನೆಲ್ಲ ಅಚ್ಚು ಹಾಕಿಸಿ ಒಂದು ಪುಸ್ತಕ ಮಾಡಬಹುದು, ಅಲ್ವಾ ?"
"ಹುಚ್ಚಿ! ಅದಕ್ಕೆಲ್ಲಾ ದುಡ್ಬೇಕು."
ಆ ವಿಷಯ ರಾಧೆಗೆ ಅರ್ಥವಾಗಿರಲಿಲ್ಲ. ಆದರೆ 'ದುಡ್ಡು'ಎಂಬ ಪದ ಅವಳ
ಬಾಯಿ ಮುಚ್ಚಿಸಿತು. ತಮ್ಮ ಮನೆಯಲ್ಲಿ ದುಡ್ಡು ಇಲ್ಲ ಎಂಬುದಷ್ಟು ಆಕೆಗೆ ಗೊತ್ತಿತ್ತು.
ತಂದೆಯೂ ಒಮ್ಮೆ ಆ ಕವಿತೆಗಳನ್ನು ನೋಡಿದರು. ಆಗ ಜಯರಾಮ ಅವರ
ಮುಖವನ್ನೇ ಪರೀಕ್ಷಿಸಿದ. ಅವರು ಪುಟ ತಿರುವಿ ಹಾಕಿ, ಬಡ ಕನ್ನಡಕವನ್ನು ತೆಗೆ
ದಿಟ್ಟು, ಮಗನನ್ನೇ ದಿಟ್ಟಿಸಿ ಹೇಳಿದರು.
"ಹುಂ. ಪಾಠ ಓದೋದು ಬಿಟ್ಬಿಟ್ಟು, ತಲೆ ಕೆಡಿಸ್ಕೊಂಡು ಎಲ್ಲಾದರೂ ಕೂತೆ
ಅಂದ್ರೆ ...."
ಜಯರಾಮುಗೆ ಮುಖಕ್ಕೆ ಹೊಡೆದ ಹಾಗಾಯಿತು. ಆತ ಮೂಕನಾಗಿ ಹೋದ.
ಬಹಳ ಪುಸ್ತಕಗಳನ್ನೋದಿ ಸಾಹಿತ್ಯದ ಅಭಿರುಚಿಯಿದ್ದ ತಂದೆಯಿಂದ ಪ್ರೋತ್ಸಾಹದ
ಮಾತು ಬರುವುದೆಂದು ಆತ ನಿರೀಕ್ಷಿಸಿದ್ದು ಸುಳ್ಳಾಯಿತು. ತನ್ನ ಕಾವ್ಯಸೃಷ್ಟಿಗೆ ಇದೇ
ಕೊನೆ ಎಂದುಕೊಂಡ.
ಅದಾದ ಮೇಲೆ ಒಮ್ಮೆ ವಠಾರದಲ್ಲಿ ಸೌದೆ ಪ್ರಕರಣ ನಡೆಯಿತು. ಇನ್ನೊಬ್ಬರ
ಮನೆಯಿಂದ ಹಾರವನ್ನಲ್ಲ ಸೀರೆಯನ್ನಲ್ಲ ಎರಡು ತುಂಡು ಸೌದೆಯನ್ನು ಹೆಂಗ
ಸೊಬ್ಬಳು ಕದ್ದಳು. ಒಮ್ಮೆ ಒಳ್ಳೆಯವಳೆನಿಸಿಕೊಡಿದ್ದ ನಾರಾಯಣಿ ಆಗ ಕಳ್ಳಿ
ಯಾದಳು. ಎಂತೆಂತಹ ಹೀನ ಸ್ಥಿತಿಗೆ ಜನರನ್ನು ಬಡತನ ತಳ್ಳುತ್ತಿತ್ತು!
ಜಯರಾಮುವಿನ ಮೇಲೆ ಆ ಘಟನೆ ವಿಚಿತ್ರ ಪರಿಣಾಮವನ್ನು ಉಂಟು ಮಾಡಿತು. ನಾರಾಯಣಿಯನ್ನು ಲೇವಡಿ ಮಾಡಿದ ಹೆಂಗಸರೊಡನೆ ಆತ ಜಗಳವಾಡಿದ.
ಕಳವು ಮಾಡಿದ ಹೆಂಗಸಿನ ನೆರವಿಗೆ ಬಂದ ಹುಡುಗನನ್ನು ನೋಡಿ ಇತರರೆಲ್ಲ ನಕ್ಕರು.
ನೆಮ್ಮದಿ ಕೆಡಸಿಕೊಂಡ ಜಯರಾಮ ಹಾಗೆಯೇ ನಾಲ್ಕು ದಿನ ತಳ್ಳಿದ.
ಐದನೆಯ ದಿನ ಆತ ಕತೆ ಬರೆಯಲೆಬೇಕಯಿತು. "ಒಂದು ತುಂಡು ಸೌದೆ"
ಬರೆದು ಮುಗಿಸಿದ ಮೇಲೆ, ಅವನಿಗೆ ಹೃದಯ ಹಗುರವೆನಿಸಿತು.
ತಂಗಿ ರಾಧೆಯೇ ಎಂದಿನಂತೆ ಅದನ್ನು ಮೊದಲು ಓದಿದಳು, ಕುಣಿದಾಡಿದಳು
"ಅಯ್ಯೋ| ಎಷ್ಟು ಚೆನ್ನಾಗಿದೆ| ಅವರ ಮನೆ ಮುಂದೆ ನಿಂತ್ಕೊಂಡು ಓದ್ಬೇಕು
ಇದನ್ನ."
ಮಕ್ಕಳ ಸಂತೋಷ ತಾಯಿಯ ಎದೆಯಲ್ಲೂ ಅಸ್ಪಷ್ಟವಾಗಿ ಪ್ರತಿಧ್ವನಿಸದಿರ
ಲಿಲ್ಲ. ಆದರೂ ಆಕೆಯೆಂದಳು:
"ಹಾಗೇನೂ ಮಾಡ್ಬೇಡೀಪ್ಪ ಸದ್ಯ:"
ರಾಧೆ ಕೇಳಿದಳು:
"ಅಣ್ಣ, ಇದನ್ನ ಪತ್ರಿಕೆಗೆ ಕಳಿಸ್ಬಾರ್ದ ಅಣ್ಣ?"
ಕಳುಹಿಸಿ ನೋಡಬೇಕೆಂದು ಆತನಿಗೂ ಆಸೆಯಿತ್ತು. ಆದರೆ ಧೈರ್ಯವಿರಲಿಲ್ಲ.
ತನಗೆ ಮೆಚ್ಚುಗೆಯಾಗಿದ್ದ ಆ ಕತೆಯನ್ನು ದೊಡ್ದ ಪತ್ರಿಕೆಯ ಸಂಪಾದಕರು ಅಸ್ವೀಕೃತ
ವೆಂದು ಹಿಂತಿರುಗಿಸಬಹುದೆಂಬ ಭಯವಿತ್ತು.
ಪತ್ರಿಕೆಯಲ್ಲಿ ಆ ಕತೆ ಪ್ರಕಟವಾಗಿ ತನ್ನ ಹೆಸರೂ ಅಚ್ಚಾಗಿ ತನ್ನನ್ನು ಬರೆಹ
ಗಾರನೆಂದು ನಾಲ್ಕು ಜನ ಕರೆಯುವ ಕಲ್ಪನೆಯ ಚಿತ್ರ... ಅದು ಸೊಗಸಾಗಿತ್ತು... ಆ
ಆಸೆಯನ್ನು ಅದುಮಿ ಹಿಡಿಯುವುದು ಸಾಧ್ಯವಿರಲಿಲ್ಲ. ಕೊನೆಗೆ, ಅಗಲ ಕಿರಿದಾದ
ಒಂದು ಓಣಿಯಲ್ಲಿದ್ದ ಪುಟ್ಟ ಆಕೃತಿಯ ಪತ್ರಿಕೆಯಾದ 'ಕಥಾಪ್ರಿಯ' ನಿಗೆ ಜಯರಾಮು
ತನ್ನ ಕತೆಯನ್ನು ಕಳುಹಿಸಿಕೊಟ್ಟ. ಸ್ವತಃ ತಾನೇ ಆ ಸಂಪಾದಕರನ್ನು ಕಾಣುವ
ಸಾಹಸ ಮಾಡಲಿಲ್ಲ. ಆ ಅಮೂಲ್ಯ ಕೃತಿಯನ್ನು ರಚಿಸಿದವನು ಇನ್ನೂ ಬಾಲಕನೆಂದು
ತಿಳಿದರೆ ಅವರು ಅದನ್ನು ಪ್ರಕಟಿಸದೇ ಹೋಗಬಹುದೆಂಬ್ ಅಳುಕು.
ಮುಂದಿನ ತಿಂಗಳ "ಕಥಾಪ್ರೀಯ್"ನಿಗಾಗಿ ಕಾದು ಕುಳಿತದ್ದಾಯಿತು. ಅದರಲ್ಲಿ
ಅಚ್ಚಾಗಿರಲಿಲ್ಲ. ಜಯರಾಮು ಆ ಸಂಪಾದಕರಿಗೆ ಕಾಗದ ಬರೆದು ತನ್ನ ಹಸ್ತಪ್ರತಿಯ
ಬೇರೆ ಪ್ರಿಕೆಯವರು ಕೇಳಿದ್ದಾರೆ" ಎಂದು ಇನ್ನೊಂದು ಕಾಗದ ಬರೆದ. ಬೇಡವೆಂದು ಅವರು ತಿಳಿಸಿ
ಬೇರೆ ಪತ್ರಿಕೆಯವರು ಕೇಳಿದ್ದಾರೆ" ಎಂದು ಇನ್ನೊಂದು ಕಾಗದ ಬರೆದ. ಬೇಡವೆಂದು ಅವರು ತಿಳಿಸಲಿಲ್ಲ.
ಅನಂತರ ಬಂದ "ಕಥಾಪ್ರಿಯ" ಸಂಚಿಕೆಯಲ್ಲಿ "ಒಂದು ತುಂಡು ಸೌದೆ" ಅಚ್ಚಾ
ಗಿತ್ತು. ಬರೆದವರು: ಎಂ.ಎಸ್. ಜಯರಾಮು. ಅಣ್ಣ ತಂಗಿಯರ ಆನಂದಕ್ಕೆ
ಪಾರವೇ ಇರಲಿಲ್ಲ. ತಾಯಿಗೂ ಅದು ಹೊಸ ವಿಷಯವಾಗಿತ್ತು. ಆ ಪತ್ರಿಕೆಗಳಲ್ಲಿ
ಹೆಸರಾಂತ್ ಬರೆಹಗಾರರ ಕತೆಗಳಿರಲಿಲ್ಲ. ಆ ಕತೆಗಾಗಿ ತನಗೆ ನೀಡಿದ
ಪ್ರೋತ್ಸಾಹಕ್ಕಾಗಿ ವಂದಿಸಿ ಆತ ಆ ಸಂಪಾದಕರಿಗೆ ಇನ್ನೊಂದು ಕಾಗದ ಬರೆದ.
ಉತ್ತರ ಆಗಲೂ ಬರಲಿಲ್ಲ. ಆ ಕತೆಗಾಗಿ ತನಗೆ ಐದು ರೂಪಾಯಿ ಸಂಭಾವನೆ ಬಂದ
ಹಾಗೆ ಕನಸೂ ಬಿತ್ತು. ಆದರೆ ಕನಸಿನ ಲೋಕಕ್ಕೂ ವಾಸ್ತವ ಪರಿಸ್ಥಿತಿಗೂ ಹೋಲಿಕೆ
ಇರಲಿಲ್ಲ. ಸಂಭಾವನೆಯ ಹಣ ಹೋಗಲಿ, ಪತ್ರಿಕೆಯ ಒಂದು ಪ್ರತಿಯೂ ಆತನಿಗೆ
ಬರಲಿಲ್ಲ. ಆ ಪತ್ರಿಕೆಯನ್ನು ಹೆಚ್ಚು ಜನ ಓದಿದಂತೆಯೂ ತೋರಲಿಲ್ಲ. ಮಲ್ಲೇ
ಶ್ವರದ ಅಂಗಡಿ ಬೀದಿಯಲ್ಲಿ ಮಾತ್ರ ಒಂದು ಅಂಗಡಿಯಲ್ಲಿ ತಿಂಗಳ ಮೊದಲಲ್ಲಿ ಆರು
ಪ್ರತಿಗಳಿದ್ದುವು. ಒಂದನ್ನು ತಾನು ಕೊಂಡುಕೊಂಡಿದ್ದ. ಮತ್ತೆ ಎರಡು ವಾರ
ಬಿಟ್ಟು ಅತ್ತ ಹೋದಾಗ, ಊಳಿದ ಐದು ಪ್ರತಿಗಳೂ ಅಲ್ಲಿಯೇ ಇದ್ದುದು ಕಂಡುಬಂತು.
ಮತ್ತೊಮ್ಮೆ ಪ್ರವಾಸದಿಂದ ಹಿಂತಿರುಗಿದ ತಂದೆಯ ಕಣ್ಣಿಗೆ ಆ 'ಕಥಾಪ್ರಿಯ'
ಸ೦ಚಿಕೆ ಬೀಳದಿರಲಿಲ್ಲ. ಮಗನ ಕಥೆಯನ್ನೋದಿ ಅವರು ಏನನ್ನೂ ಹೇಳಲಿಲ್ಲ. ಆದರೆ
ಮತ್ತೊಮ್ಮೆ ಪ್ರವಾಸ ಹೊರಡುವ ಹೊತ್ತಿಗೆ ಅವರು ಅ೦ದರು:
"ಪಾಠ ಗೀಠ ಸರಿಯಾಗಿ ಓದ್ಕೊಳ್ತಾ ಇದೀಯೇನೋ ಜಯರಾಮು?"
"ಹೂನಪ್ಪಾ"
ಕತೆ ಬರೆದುದಕ್ಕೆ ತ೦ದೆಯ ಕ್ಯಲಿ ಭ್ಯಗಳ ಪ್ರತಿಫಲ ಸಿಗದಿದ್ದುದೇ ಆತನಿಗೆ
ದೊರೆತ ಉತ್ತೇಜನವಾಯಿತು ಪತ್ರಿಕೆಗಳನ್ನು ಈಗ ಹೆಚ್ಚು ಸೂಕ್ಷ್ಮವಾಗಿ ಪರಿಶೀಲಿಸಿ,
ಮಕ್ಕಳ ಪುಟ ಪ್ರಶ್ನೋತ್ತರ ವಿಭಾಗಗಳಲ್ಲಿ ಪ್ರಸಿದ್ದಿಗೆ ಬ೦ದ... ಸಾಹಿತ್ಯ ಕ್ಷೇತ್ರದಲ್ಲಿ
ಪ್ರಖ್ಯಾತನಾಗುವುದು ಸುಲಭಸಾಧ್ಯವಲ್ಲವೆ೦ಬುದು ಆತನಿಗೆ ಮನವರಿಕೆಯಾಗಿತ್ತು.
ಬರೆಯವವನಿಗೆ ನಿಸ್ಸ೦ಶಯವಾಗಿಯೂ ಪ್ರತಿಭೆ ಇರಬೇಕು: ಆದರೆ ಅಷ್ಟಿದ್ದರೆ
ಸಾಲದು, ಆತ ಶ್ರಮ ಪಡಬೆಕು: ದೀರ್ಘಕಾಲದ ಪರಿಶ್ರಮ, ಎಡಬಿಡದೆ ಸಾಧನೆ,
ಅಗಾಧವಾದ ತಾಳ್ಮೆ-ಇವು ಅವಶ್ಯ. ಜಯರಾಮುಗೆ ಇದು ಇಳಿದಿತ್ತು.
ತನಗೆ ಇಷ್ಟವಿಲ್ಲದೆ ಹೋದರೂ. ಜಯರಾಮುಗೆ ಇದು ತಿಳಿದಿತ್ತು.
ತನಗೆ ಇಷ್ಟವಿಲ್ಲದೆ ಹೋದರೂ ಜಯರಾಮು ಕಷ್ಟಪಟ್ಟು ಓದಿದ್ದ: ಪಾರೀಕ್ಷೆಗೆ
ಕುಳಿತಿದ್ದ: ಆದರೆ ಉತ್ತೀರ್ಣನಾಗಿರಲಿಲ್ಲ. ಅದಾದ ಮೆಲೆ 'ಮರಳಿ ಯತ್ನವ
ಮಾಡು.'
ಮು೦ದಿನ ಸೆಪ್ಟೆ೦ಬರ್ನಲ್ಲಿ ಉಳಿದೊ೦ದು ಭಾಗದಾಲ್ಲೂ ತೇರ್ಗಡೆಯಾಗಬಹು
ದೆ೦ಬ ನ೦ಬಿಕೆ ಅವನಿಗಿತ್ತು. ಆನ೦ತರ ಉದ್ಯೋಗ ದೊರಕಿಸಿಕೊ೦ಡು ತ೦ದೆಗೆ ನೆರ
ವಾಗಬೇಕು.
......ಕತ್ತಲಾಗುತ್ತ ಬ೦ದಿತ್ತು. ಬ೦ಡೆಗಲ್ಲಿಗೆ ಒರಗಿದ್ದ ಜಯರಾಮು ನೇರ
ವಾಗಿ ಕುಳಿತ. ಕುಳಿರು ಗಾಳಿ ಆತನ ಮೈ ಕೈಗಳ ಮೇಲೆ ಸುತ್ತಾಡಿತು. ದೂರದಲ್ಲಿ
ಬೀದಿಯ ಮನೆಗಳ ವಿದ್ಯುದ್ವೀಒಅಗಳು ಹತ್ತಿಕೊ೦ಡವು. ಚಿಕ್ಕ ರೈಲುಗಾಡಿ ಯಶವ೦ತ
ಪುರದಿ೦ದ ಮಲ್ಲೇಶ್ವರಕ್ಕೆ ಬುಸುಗುಟ್ಟಿಕೊ೦ಡು ಹೋಯಿತು.
ವಿಸ್ತಾರವಾಗಿ ಏಳೆ೦ಟು ಮೈಲುಗಳ ಉದ್ದಗಲಕ್ಕೆ ಹರಡಿಕೊ೦ಡಿದ್ದ ಬೆ೦ಗ
ಳೂರು, ಅಲ್ಲಿ ವಾಸಿಸುವ ಲಕ್ಷವಾಧಿ ಜನ. ಆ ಜನರಲ್ಲಿ ತಾನೊಬ್ಬ. ಸಾ೦ಜಿಯಾ
ದೊಡನೆ ನಗರದ ಸಹಸ್ರ ಸಹಸ್ರ ಮನೆಗಳಿಲ್ಲಿ ದೀಪಗಳುರಿಯುತ್ತಿದ್ದವು. ರಾತ್ರೆ,
ಒ೦ದರ ಆನ೦ತರ ಒ೦ದಾಗಿ, ನಿದ್ದೆ ಬ೦ತೆ೦ದು ಕಣ್ಣುಮುಚ್ಚಿಕೊಳ್ಳುತ್ತಿದ್ದವು.
ಇರುಳು ಕಳೆದು ಸೂರ್ಯೋದಯ. ಮತ್ತೆ ದಿನದ ದುಡಿಮೆ. ಎಲ್ಲವು ಹೊಟ್ಟೆಗಾಗಿ,
ಗೇಣು ಬಟ್ಟೆಗಾಗಿ.
ತಾನು ಸಾಹಿತ್ಯ ಸೃಷ್ಟಿಸಬೇಕು. ಆದರೆ ಸಾಹಿತ್ಯ ಸೃಷ್ಟಿಯೊ೦ದನ್ನೇ ಮಾಡುತ್ತ
ಲಿದ್ದರೆ, ಹೊಟ್ಟೆ ತು೦ಬುವುದು. ಅದಕ್ಕಾಗಿ ತಾನು ದುಡಿಯಬೇಕು. ದುಡಿತದ ಮಾರು
ಕಟ್ಟೆಯಲ್ಲಿ ತನ್ನ ಬೆಲೆಯನ್ನು ಹಚ್ಚಿಸಿಕೊಳ್ಳುವುದಕ್ಕೋಸ್ಕರ ಪರೀಕ್ಷೆಯಲ್ಲಿ ಉತ್ತೀರ್ಣ
ನಾಗಬೇಕು.
ಕಾಲು ಹಾದಿಯೂ ಕಾಣದಷ್ಟು ಕತ್ತಲಾಗಿತ್ತು.
ಒಮ್ಮೆ ಸೂರ್ಯ ಮರೆಯಾದನೆಂದರೆ ಕತ್ತಲು ಧಾವಿಸಿ ಬರುವುದು ಎಷ್ಟು
ಬೇಗನೆ!
ಜಯರಾಮು ಮನೆಯ ಕಡೆಗೆ ಹೊರಟ.
ರೈಲು ಹಾದಿ, ಒಂಟೆ ಮರ. ಕಾವಲು ಮನೆ, ನಿಲ್ದಾಣ...
ಎಡಬದಿಯಲ್ಲಿದ್ದ ಎತ್ತರದೊಂದು ದೊಡ್ದ ಮನೆಯಿಂದ ರೇಡಿಯೋ
ಹಾಡುತ್ತಿತ್ತು:
"ದುನಿಯಾ ರಂಗ್ ರಂಗೇಲಿ ಬಾಬಾ, ದುನಿಯಾ ರಂಗ್ ರಂಗೇಲಿ."
ಅದು ಯಾರ ಕಂಠವೋ ಜಯರಾಮುವಿಗೆ ತಿಳಿಯದು. ಆತನ ಮನೆಯಲ್ಲೇನೂ
ರೇಡಿಯೋ ಇರಲಿಲ್ಲ. ಆತ ಚಲಚ್ಚಿತ್ರಗಳ ಹುಚ್ಚನೂ ಅಲ್ಲ. ಮುಖ್ಯವಾಗಿ,
ಅಂತಹ ಹುಚ್ಚಿಗೆಲ್ಲ ಅಗತ್ಯವಾಗಿ ಬೇಕಾಗುವ ಹಣ ಅವನಲ್ಲಿರಲಿಲ್ಲ.
ಒಂದು ಸಂಸಾರಕ್ಕೆ ಒಳ್ಳೆಯ ಪುಸ್ತಕ ಭಂಡಾರದಷ್ಟೇ ಒಂದು ರೇಡಿಯೋ ಕೂಡ
ಆಗತ್ಯವೆಂಬುದು ಜಯರಾಮುವಿನ ಅಭಿಪ್ರಾಯವಾಗಿತ್ತು.
ಹಾಡು ಎಂದರೆ ಪ್ರಾಣಬಿಡುವ ರಾಧಾ ಎಷ್ಟೋ ಸಾರೆ ಹೇಳಿದ್ದಳು:
"ಅಣ್ಣಾ, ಒಂದು ರೇಡಿಯೋ ಇದ್ದರೆ ಚೆನ್ನಾಗಿರುತ್ತೆ, ಅಲ್ವಾ?"
ಅ ಕೊಠಡಿ ಮನೆಗೆ ಆದೊಂದು ಐಶ್ವರ್ಯ ಬೇರೆ-ರಂಗಮ್ಮನ ವಠಾರಕ್ಕೆ
ರೇಡಿಯೋ!
ವಠಾರದತ್ತ ನಡೆಯುತ್ತ ಜಯರಾಮು ಯೋಚಿಸಿದ:
'ಸಾಕಷ್ಟು ಸಂಪಾದನೆ ಇರುವವನೇ ತನ್ನ ತಂಗಿಗೆ ಗಂಡನಾಗಿ ದೊರೆತರೆ? ಒಂದು
ರೇಡಿಯೋ ಕೊಂಡುಕೊಳ್ಳುವ ಸಾಮರ್ಥ್ಯವಿರುವ ಪುಟ್ಟ ಸಂಸಾರಕ್ಕೇ ಆಕೆ ಗೃಹಿಣೆ
ಯಾದರೆ?'
ಜಯರಾಮು ಮನೆ ಸೇರಿದಾಗ ಅವನ ತಂದೆ ಊಟಕ್ಕೆ ಕುಳಿತುಕೊಂಡಿದ್ದರು. ಮಗನನ್ನು
ನೋಡಿ ಅವರೆಂದರು:
"ಅದೆಷ್ಟೊತ್ತೋ ಮನೇಗ್ಬರೋದು? ಹೂಂ... ಕೈಕಾಲು ತೊಳಕೊಂಡು ಬಾ."
ಮಗನಿಗೂ ತಾಯಿ ಬಟ್ತಲಿಟ್ಟಳು.
ಆವ ಲಕುಮೀ ರಮಣ.."
ಮೆಲ್ಲನೆ ತುಂಬಿ ಬರುತ್ತಿದ್ದ ಎದೆ, ಅಗಲವಾದ ಮುಖ, ಮಾಟವಾದ ಹುಬ್ಬು
ಗಳು. ಒಂದು ಕ್ಷಣವೂ ನಿಶ್ಚಲವಾಗಿ ನಿಲ್ಲದ ಕಣ್ಣುಗಳೆರಡು-
"ಹೂವ ತರುವರ ಮನೆಗೆ ಹುಲ್ಲು ತರುವಾ.."
ಸೊಗಸಾಗಿತ್ತು ಕಂಠ, ಮಗುವಿನ ಕೆಂಪು ಮುಖದ ಮೇಲೆ ಬಿಳಿಯ ಪೌಡರಿನ
ತೆರೆಯೆಳೆದು ಗುಳಿ ಬೀಳುತ್ತಿದ್ದ ಕೆನ್ನೆಗೆ 'ಉಮ್ಮ' ಕೊಟ್ಟು, ತನ್ನ ಪುಟ್ಟ ಕಾಲುಗಳ
ಮೇಲೆಯೇ ಅದು ನಿಲ್ಲುವಂತೆ ನೆರವಾಗುತ್ತಿದ್ದ ಚಂಪಾವತಿಗೆ ಅಹಲ್ಯೆಯ ಹಾಡು
ಕೇಳಿಸಿತು.
ಮಧುರ ಧ್ವನಿ ಓಣಿಯಲ್ಲಿ ಸಾಗಿಬಂದು ಕೊನೆಯ ಮನೆಯೊಳಕ್ಕೂ ಇಣಕಿ
ನೋಡಿತ್ತು. ಚಂಪಾ ಮಗುವನ್ನೆತ್ತಿಕೊಂಡು ಬಾಗಿಲ ಬಳಿ ನಿಂತು, ಎದುರುಗಡೆ
ಬಲಕ್ಕೆ ಹಾಯಿಸಿದಳು .
ಕನ್ನಡಿ ನೋಡಿ ಮುಗಿದು ಜಡಿಯನ್ನು ಎದೆಯ ಮೇಲಕ್ಕೆ ಎಳೆದುಕೊಳ್ಳುತ್ತಾ
ಅಹಲ್ಯಾ ತಲೆ ಎತ್ತಿದಳು. ಆಗ ಬಲಗಣ್ಣ ನೋಟಕ್ಕೆ ಚಂಪಾವತಿಯ ಸೀರೆಯ ಸೆರಗು
ಕಾಣಿಸಿತು. ರಾಗ ಅರ್ಧದಲ್ಲೇ ತುಂಡಾಯಿತು.
ಅಹಲ್ಯೆಯ ಮನೆ ಬಾಗಿಲ ಮುಂದೆ ನಿಂತು ಚಂಪಾ ಕೇಳಿದಳು:
"ಯಾಕಮ್ಮಾ ಹಾಡೋದು ನಿಲ್ಲಿಸ್ಬಿಟ್ರಿ?"
"ಎಲ್ಲಿ ನಾನೆಲ್ಲಿ ಹಾಡ್ತಿದ್ದೆ?"
"ಸಾಕ್ರೀ ಸಾಕ್ರೀ..ಪರವಾಗಿಲ್ಲ ನೀವು..."
ಅಡುಗೆಯ ಮನೆಯಲ್ಲಿದ್ದ ಅಹಲ್ಯೆಯ ತಾಯಿ ಬಾಗಿಲಿಗೆ ಬಂದು ಹೇಳಿದಳು:
"ಅದ್ಯಾಕಮ್ಮಾ ಮಗೂನ ಅವರು ಇವರು ಅಂತೀರಾ?"
ದೂರು ಕೊಡುವಂತೆ ಅಹಲ್ಯೆ ತಾನೂ ಅಂದಳು.
"ನೋಡಮ್ಮಾ ಎರಡುಮೂರು ಸಲ ನಾನೇ ಹೇಳ್ದೇ ಅವರಿಗೆ."
"ಅದು ನನ್ನದೊಂದು ಅಭ್ಯಾಸ," ಎಂದಳು ಚಂಪಾವತಿ ಕೊರಳು ಕೊಂಕಿಸುತ್ತಾ.
ಮಾತಿನ ನಡುವೆ ಮೌನ ಸುಳಿಯಬಾರದೆಂದು ಆಕೆ ಮುಂದುವರಿಸಿದಳು:
"ನಿಮ್ಮ ಮಗಳ ಕಂಠ ಚೆನ್ನಾಗಿದೆ ಕಣ್ರೀ."
ಅಹಲ್ಯೆ ತಾಯಿಗೆ ಹೆಮ್ಮೆ ಎನಿಸಿದರೂ ಅದನ್ನು ಆಕೆ ತೋರಿಸಿಕೊಳ್ಳಲಿಲ್ಲ.
"ಏನು ಚೆನ್ನಾಗಿದೆಯೋಮ್ಮ.ಯಾವುದೋ ಒಂದೆರಡು ದೇವರ ನಾಮ
ಕಲಿತ್ಕೊಂಡಿದ್ದಾಳೆ.ಇಲ್ಲಿ ಹೇಳ್ಕೊಡೋರು ಯಾರೂ ಇಲ್ಲ."
ಹಾಡು ಹೇಳಿಕೊಡುವುದು ಚಂಪಾವತಿಗೆ ಹೊಸ ವಿಷಯವಾಗಿರಲಿಲ್ಲ. ಆದರೆ
ವಠಾರಕ್ಕೆ ಬಿಡಾರ ಬಂದು ಒಂದೂವರೆ ತಿಂಗಳಾಗಿದ್ದರೂ ಹಾಡುವ ಇಚ್ಛೆ ಆವರೆಗೂ
ಆಗದೆ ಇದ್ದುದರಿಂದ, ಆಕೆಯ ಕಂಠದ ಪರಿಚಯವಿರಲಿಲ್ಲ ಬೇರೆಯವರಿಗೆ. ಕೊನೆಯ
ಮನೆಯ ಜೋಡಿ ಸ್ವಲ್ಪ ವಿಚಿತ್ರವಾಗಿ ಇತರರಿಗೆ ತೋರಿ ಬಂದುದರಿಂದ, ವಠಾರದೊಳ
ಗಿದ್ದರೂ ಅದೊಂದು ಬಿಡಾರ ಬೇರೆಯೇ ಎನ್ನುವ ಹಾಗೆ ಆಗಿತ್ತು
ಮನಸ್ಸಿನಲ್ಲಿಯೇ ಮುಂದಿನ ಹೆಜ್ಜೆಯನ್ನು ಲೆಕ್ಕ ಹಾಕಿ ಚಂಪಾ ಹೇಳಿದಳು:
"ನಿಮ್ಮ ಮಗಳು ಎಲ್ಲಿಗೋ ಹೊರಟ ಹಾಗಿದೆ."
ಅಹಲ್ಯೆ ಎದ್ದು ಕನ್ನಡಿಯನ್ನು ಎತ್ತಿಡುತ್ತ ಅಂದಳು:
"ಇಲ್ಲವಪ್ಪ. ನಾನೆಲ್ಲಿಗೂ ಹೋಗೋಲ್ಲ"
"ಅವಳಣ್ಣ ಬರೋ ಹೊತ್ತಾಯ್ತು,"ಎಂದು ಹೇಳಿ ಅಹಲ್ಯೆಯ ತಾಯಿ ಮತ್ತೆ
ಅಡುಗೆ ಮನೆಯೊಳಕ್ಕೆ ಹೋದಳು .
"ಅಹಲ್ಯಾ ನಮ್ಮನೆಗೆ ಬರ್ತಿರಾ ಸ್ವಲ್ಪ?"
ಚಂಪಾವತಿಯ ಆಹ್ವಾನವನ್ನು ಕೇಳಿ ಅಹಲ್ಯೆಗೆ ಆಸ್ಚರ್ಯವಾಗಿದೆ ಇರಲಿಲ್ಲ.
ಆದರೆ ಯಾವುದೋ ಅಸ್ಪಷ್ಟ ಕಾರಣಕ್ಕಾಗಿ ಆ ಹೊಸಬಳ ಬಗೆಗೆ ಗೌರವ ಭಾವವನ್ನು
ತಳೆದಿದ್ದ ಅಹಲ್ಯೆಗೆ ಆಕರೆಯಿಂದ ಸಂತೋಷವೂ ಆಯಿತು .ಆಕೆಯೆಂದಳು:
"ಒಂದ್ನಿಮಿಷ ಬಂದ್ಬಿಟ್ಟೆ...."
ಹತ್ತು ನಿಮಿಷ ತಡೆದು ಬಂದ ಅಹಲ್ಯಾ ಚಂಪಾವತಿಗೆ ಸುಂದರಿಯಾಗಿ ಕಂಡಳು.
ಸ್ವಚ್ಛವಾಗಿ ತೊಳೆದಿದ್ದ ಮುಖ ಪ್ರಸನ್ನವಾಗಿತ್ತು .ಅಗಲ ಕಿರಿದಾಗಿದ್ದ ತುಟಿಗಳು
ಒಂದಕ್ಕೊಂದು ಅಂಟಿ ಕುಳಿತಿದ್ದವು...ಪುಟ್ಟ ಬಾಯಿ ....
"ಇದೆಲ್ಲಾ ಗಂಡ ಬರುವವರೆಗೆ.ಆಮೇಲೆ!...."
-ಎಂದು ಚಂಪಾ ಮನಸಿನೊಳಗೇ ಅಂದುಕೊಂಡು ನಕ್ಕಳು.
"ಯಾಕ್ರೀ ಬಾ ಅಂದದ್ದು?"
ಚಂಪಾ ಚಾಪೆ ಹಾಸಿ ಹೇಳಿದಳು:
"ಕೂತ್ಕೊಳ್ಳಿ,ಹೇಳ್ತೀನಿ."
ಅಹಲ್ಯಾ ಕುಳಿತುಕೊಳ್ಳುತ್ತಾ ಅಂದಳು:
"ನಾನು ನಿಮಗಿಂತ ಚಿಕ್ಕೋಳು ಕಣ್ರೀ.ನೀವು ನನ್ನ ಹೋಗು, ಬಾ ಅಂತ
ಅನ್ಬೇಕು"
"ಒಂದು ಶರತದ ಮೇಲೆ."
"ಏನು?"
"ನೀವು ಈಗ ಹಾಡ್ಬೇಕು."
ಅಹಲ್ಯೆಯ ಮುಖ ಕೆಂಪೇರಿತು.
"ಹೋಗ್ರೀ, ನಿಮಗೊಂದು ತಮಾಷೆ. ನಾನು ಹೊರಟ್ಹೋಗ್ತೀನಿ."
"ಮಹಾ ಕೆಟ್ಟವಳಮ್ಮ ನೀನು. ಅದು ಹ್ಯಾಗೆ ಹೋಗ್ತೀಯೋ ನೋಡ್ತೀನಿ,"
ಎಂದು ಚಂಪಾವತಿ ಬಾಗಿಲಿಗೆ ಅಡ್ಡವಾಗಿ ನಿಂತಳು. ಸಲಿಗೆಯ ಏಕವಚನ ಅಹಲ್ಯೆಯ
ಸಂಕೋಚವನ್ನೆಲ್ಲಾ ದೂರ ಮಾಡಿತು. ಆಕೆಯನ್ನು ಎರಡು ಸಾರಿ ತೋರಿಸಲು ಕರೆದು
ಕೊಂಡು ಹೋಗಿದ್ದರು. ಆ ಎರಡು ಬಾರಿಯೂ ಆಕೆ ಹಾಡಿದ್ದಳು.ಆದರೆ
ನೋಡಿದವರಿಗೋ ಅವರ ಹಿರಿಯರಿಗೋ ಆಕೆ ಒಪ್ಪಿಗೆಯಾಗಿರಲಿಲ್ಲ. ಯಾರಾದರೂ
"ಹಾಡು" ಎಂದಾಗಲೆಲ್ಲ, ತಾನು ತಲೆ ತಗ್ಗಿಸಿಕೊಂಡು ಎರಡು ಕಡೆ ಹಾಡಿದ್ದ ನೆನಪು
ಆಕೆಗೆ ಆಗುತ್ತಿತ್ತು.
"ಎಲ್ಲಿ, ಹೇಳಮ್ಮಾ."
ಅಹಲ್ಯಾ ಕಣ್ಣೆವೆಗಳನ್ನು ಕುಣಿಸುತ್ತ ಅಂದಳು:
"ನೀವೂ ಒಂದು ಹಾಡೋ ಹಾಗಿದ್ರೆ, ನಾನು ಹಾಡ್ತೀನಿ."
"ನಾನು! ನಂಗೆ ಬರೋಲ್ವಮ್ಮ."
"ಬೂಶಿ ಬಿಡ್ತಿದೀರಾ. ಘಾಟಿ ಕಣ್ರಿ ನೀವು."
ಹುಡುಗಿಯ ಬಾಲಭಾಷೆ ತಮಾಷೆಯಾಗಿ ತೋರಿತು, ಮಗುವನ್ನೆತ್ತಿಕೊಂಡಿದ್ದ
ಚಂಪಾವತಿಗೆ.
"ನಿಜವಾಗ್ಲೂ ನಂಗೆ ಹಾಡೋಕೆ ಬರೋಲ್ಲ ಅಹಲ್ಯಾ."
"ಸುಳ್ಳು! ಸುಳ್ಳು!"
ಒಂದು ಕ್ಷಣ ಸುಮ್ಮನಿದ್ದು ಮುಗುಳ್ನಕ್ಕು ಚಂಪಾ ಹೇಳಿದಳು;
“ಆಗಲಮ್ಮ. ಒಪ್ದೆ : ನೀನು ನಗಬಾರು ನೋಡು."
ಚಿತ್ರಕಾರನ ಹೆಂಡತಿಗೆ ಹಾಡುಗಾರಿಕೆ ಖಂಡಿತವಾಗಿಯೂ ಗೊತ್ತಿರಬೇಕೆಂದು
ತಾನು ಮಾಡಿದ್ದ ಊಹೆ ಸರಿಯೆ ತಪ್ಪೆ ಎಂದು ತಿಳಿಯುವ ಹೋತ್ತು ಬ೦ತೆoದು,
ಅಹಲ್ಯೆಗೆ ಸಂತೋಷವಾಯಿತು. ಚಂಪಾವತಿಯ ಹಾಡನ್ನು ಕೇಳುವ ತವಕದಲ್ಲೆ
ಇದ್ದ ಆಕೆಯೆಂದಳು:
"ಯಾವುದು ಹೇಳ್ಲಿ?"
"ಯಾವುದಾದರೂ."
ಅಹಲ್ಯಾ, ದೇವರ ನಾಮದ ಬದಲು ತಾನು ಪ್ರೀತಿಸಿದ ಬೇರೊಂದು ಹಾಡ
ನ್ನೆತ್ತಿಕೊಂಡಳು:
"ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು..."
ಆ ಚರಣ ಮುಗಿದಾಗಲೊಮ್ಮೆ ಅಹಲ್ಯಾ ಚಂಪಾವತಿಯನ್ನು ದಿಟ್ಟಿಸಿ ನೋಡಿ
ದಳು. ಬಳಿಕ, ಗೋಡೆಯ ಒಂದು ಮೂಲೆಯತ್ತ ಕನಸು ಕಾಣುತ್ತಿದ್ದವಳಂತೆ
ನೋಡುತ್ತ, ಆಕೆ ಹಾಡಿದಳು.
ಕೇಳುತ್ತಿದ್ದವರ ಹೃದಯದ ತಂತಿಗಳನ್ನು ವಟುತ್ತಿದ್ದ ಮಧುರ ಸ್ವರ, ಭಾವ
ಪೂರ್ಣವಾದ ಅರ್ಥಪೂರ್ಣವಾದ ಮಾತುಗಳು. ಚಂಪಾ ತನ್ಮಯಳಾಗಿ ಕೇಳಿದಳು.
ನಿಂತಿದ್ದವಳು ಅಹಲ್ಯೆಗೆದುರು ಗೋಡೆಗೆ ಒರಗಿ ಕುಳಿತು ಕೇಳಿದಳು. ಆಕೆಯ ಮಗುವೂ
ತಾಯಿಯ ಎದೆಯ ಮೇಲೆ ತಲೆಯಿಟ್ಟು ಬೆಟ್ಟು ಚೀಪುತ್ತ, ಅಹಲ್ಯೆಯನ್ನೇ ನೋಡಿತು.
ಅಹಲ್ಯೆಯ ತಾಯಿಯೊಮ್ಮೆ ತನ್ನ ಬಾಗಿಲ ಬಳಿ ನಿಂತು ಹೋದಳು.
ಮೀನಾಕ್ಷಮ್ಮ ಹೊರಗೆ ಬಂದು ಒಂದು ನಿಮಿಷ ಅಹಲ್ಯೆಯ ಹಾಡಿಗೆ ಕಿವಿಗೊಟ್ಟಳು.
ಹಾಡು ಮುಗಿದೊಡನೆ,ಕೆಂಪೇರಿದ್ದ ಮುಖದಿಂದ ಅಹಲ್ಯಾ ಚಂಪಾವತಿ
ಯನ್ನು ನೋಡಿದಳು.
"ಸೊಗಸಾಗಿತ್ತು ಅಹಲ್ಯಾ. ಎಷ್ಟು ಚೆನ್ನಾಗಿ ಹಾಡ್ತೀಯಾ ನೀನು! ನನಗೆ
ಗೊತ್ತೇ ಇರ್ಲಿಲ್ಲ."
ಅಹಲ್ಯೆಯ ಹೃದಯ ಹಿಗ್ಗಿತು. ಚಂಪಾವತಿಗೆ ಆ ಹಾಡಿನ ಸಾಲುಗಳು ಅರ್ಥ
ವಾಗಿದ್ದುವು. ಅಹಲ್ಯೆಗೆ ಅವೆಲ್ಲಾ ತಿಳಿದಿದೆಯೋ ಇಲ್ಲವೋ ಎಂದು ಚಂಪಾ ಶಂಕಿಸಿ
ದಳು. ಅಹಲ್ಯೆಯನ್ನು ಉದ್ದೇಶಿಸಿ ಆಕೆಯೆಂದಳು:
"ರಾಗ ಭಾವಗಳು ಬೆರೆತಾಗ ಹಾಡು ಯಾವಾಗ್ಲೂ ಚೆನ್ನಾಗಿರುತ್ತೆ, ಅಲ್ವಾ?"
ಚಂಪಾವತಿ ಹೇಳಿದುದು ಪೂರ್ತಿಯಾಗಿ ಅರ್ಥವಾಗದೆ ಹೋದರು ಅಹಲ್ಯಾ
'ಹೂಂ'ಗುಟ್ಟಿದಳು. ಆದರೆ,ಕಿವಿಗೆ ಇಂಪಾಗಿದ್ದ ಹೊಗಳಿಕೆಯ ಬಲೆಯಲ್ಲಿ, ಚಂಪಾ
ಹಾಡಲು ಒಪ್ಪಿದ್ದುದನ್ನು ಅಹಲ್ಯಾ ಮರೆಯಲಿಲ್ಲ.
"ಇನ್ನು ನಿಮ್ಮದು."
"ಹಾಡ್ಲೆಬೇಕೇನು?"
"ಹೂಂ ಮತ್ತೆ."
ಚಂಪಾವತಿ ಮಗುವನ್ನು ಪಕ್ಕದಲ್ಲಿ ತನ್ನ ತೊಡೆಗೆ ಒರಗಿಸಿ ಕುಳ್ಳುರಿಸಿ ಮುಗು
ಳ್ನಕ್ಕಳು. ಹುಬ್ಬುಗಳು ಚಲಿಸಿದುವು. ಕಣ್ಣುಗಳು ಮಾತನಾಡಿದುವು. ತುಟಿಗಳು
ತೆರೆದುಕೊಂಡವು.
"ತಲ್ಲಣಿಸದಿರು ಕಂಡ್ಯ ತಾಳು ಮನವೇ..."

ಅಹಲ್ಯಾ ಹೊತ್ತಿಸಿದ ಕಿರುಹಣತೆಯಿಂದ ಸೊಡರು ಅಂಟಿಸಿಕೊಂಡು ದೊಡ್ಡ
ಹಣತೆಯೊಂದು ಶೋಭಾಯಮಾನವಾಗಿ ಉರಿಯತೊಡಗಿತು. ಎಷ್ಟೋ ದಿನಗಳಿಂದ
ಪೂರೈಸದೆ ಇದ್ದ ಬಕೆಯನ್ನು ಈಡೇರಿಸುವವಳ ಹಾಗೆ ಚಂಪಾ ಹಾಡಿದಳು. ಹಿಂದೆ
ಶಂಕರನಾರಾಯಣಯ್ಯನೆದುರು ಹಾಡಿದಾಗಲೆಲ್ಲ ಆತನ ಮುಗುಳುನಗು ಆಕೆಯ
ಹೃದಯವನ್ನು ಅರಳಿಸುತ್ತ ಉತ್ತೇಜನವೀಯುತ್ತಿತ್ತು. ಈ ದಿನ ಆತ ಎದುರಿಗಿರಲಿಲ್ಲ.
ಅಹಲ್ಯಾ ಕುಳಿತಿದ್ದಳು. ಆದರೂ ಮುಗುಳ್ನಗುತ್ತಿದ್ದ ತನ್ನ ಪ್ರೀತಿಪಾತ್ರ ಮುಖವನ್ನೇ
ತನ್ನೆದುರು ಕಲ್ಪಿಸಿಕೊಳ್ಳುತ್ತ ಚಂಪಾ ಮೈಮರೆತು ಹಾಡಿದಳು. ಹಾಡುತ್ತಿದ್ದಾಗ,
ಯಾವುದೋ ನೆರಳು ಓಣಿಯಲ್ಲಿ ಚಲಿಸಿದ ಹಾಗೆ ಅಸ್ಪಷ್ಟವಾಗಿ ಆಕೆಗೆ ಭಾಸವಾ
ಯಿತು. ಆದರೆ ಅದೊಂದರ ಗೊಡವೆಯೂ ಇಲ್ಲದೆ ಚಂಪಾ ಹಾಡಿದಳು. ಹಾಡು
ಮುಗಿದು ಆಕೆ ಅಹಲ್ಯೆಯತ್ತ ನೋಡಿದಳು. ಅಹಲ್ಯೆಯ ದೃಷ್ಟಿಯನ್ನೇ ಹಿಂಬಾಲಿಸಿ,
ಬಾಗಿಲಿನತ್ತ ಮುಖ ತಿರುವಿದಳು. ಆಗ ಚಂಪಾವತಿಗೆ ಗಲಿಬಿಲಿಯಾಯಿತು.
"ಅಯ್ಯೋ ಇದೇನು!"
13

ಅಲ್ಲಿ ಕಾಮಾಕ್ಷಿ, ಕಮಲಮ್ಮ, ಪದ್ಮಾವತಿ, ಉಪಾಧ್ಯಾಯರ ಹೆಂಡತಿ, ಆಕೆಯ
ನಾದಿನಿ ಸುಮಂಗಳಾ, ಪೋಲೀಸರಾಯನ ಧರ್ಮಪತ್ನಿ ನಿಂತಿದ್ದರು. ಮೀನಾಕ್ಷಮ್ಮ
ತನ್ನ ಮನೆ ಬಾಗಿಲಲ್ಲಿ, ಅಹಲ್ಯೆಯ ತಾಯಿಯೊಡನೆಯೂ ಪದ್ಮನಾಭಯ್ಯನ ಹೆಂಡತಿ
ಯೊಡನೆಯೂ ನಿಂತಿದ್ದಳು. ರಂಗಮ್ಮನವರ ಪಕ್ಕದ ಮನೆಯಲ್ಲಿದ್ದ ಓದುವ ಹುಡು
ಗರ ತಾಯಿ ಬಂದಿರಲಿಲ್ಲ. ಮಹಡಿ ಮೇಲಿನವರೂ ಬಂದಿರಲಿಲ್ಲ.
"ರಾಧಾ ಬಂದೇ ಇಲ್ಲ! ರಾಧಾನ್ನ ಕರಕೊಂಬರ್ತೀನ್ರಿ!"
___ ಎನ್ನುತ್ತ ಅಹಲ್ಯಾ ಗಡಬಡಿಸಿ ಎದು ಹೊರಕ್ಕೆ ಹಾರಿದಳು.
ಆವರೆಗೂ ರಂಗಮ್ಮನ ವಠಾರದಲ್ಲಿ ಸ್ವಲ್ಪಮಟ್ಟಿಗೆ ಚೆನ್ನಾಗಿ ದೇವರ ನಾಮ
ಹಾಡುತ್ತಿದ್ದವಳು ಕಮಲಮ್ಮ ಒಬ್ಬಳೇ.. ತನ್ನನ್ನು ಸುಲಭವಾಗಿ ಹಾಡುಗಾರಿಕೆಯಲ್ಲಿ
ಮೀರಿಸುವಂತಿದ್ದ ಚಂಪಾವತಿಯನ್ನು ಕಂಡು ಆಕೆಗೆ ಒಂದು ತರಹೆಯಾಯಿತು. ಆದರೂ
ಮನಸ್ಸಿನ ಭಾವನೆಗಳನ್ನು ಹೊರಗೆ ತೋರಿಸದೆಯೇ ಆಕೆ ಅಂದಳು;
"ಇನ್ನೊಂದು ಹಾಡು ಹೇಳ್ರೀ...ಇಷ್ಟು ದಿನ ಮುಚ್ಚಿಟ್ಟುಕೊಂಡಿದ್ದಿ
ರರ್ಲಿ!......."
ನಡುಗೋಲಿನ ಟಕ್ ಟಕ್ ಸದ್ದು ರಂಗಮ್ಮ ಬಂದರೆಂದು ಮುನ್ಸೂಚನೆ
ಕೊಟ್ಟಿತು, ರಂಗಮ್ಮ ಬಂದರು, ಆಕೆಯನ್ನು ಹಿಂಬಾಲಿಸಿ ರಾಜಮ್ಮ, ಆಹಲ್ಯೆ-ರಾಧೆ
ಯರು ಗುಂಪನ್ನು ತೂರಿಕೊಂಡು ಒಳಬಂದರು. ನಾರಾಯಣಿ ಸತ್ತ ದಿನ ಹಾಗೆ
ಹೆಂಗಸರು ಆ ಕೊನೆಯ ಮನೆಯ ಮುಂದೆ ಗುಂಪು ಕೂಡಿದ್ದರು. ಆ ಬಳಿಕ ಈಗ.
ಸ್ವಲ್ಪ ಹೊಸ ರೀತಿಯದಾಗಿದ್ದ ಶಂಕರನಾರಾಯಣಯ್ಯನ ಸಂಸಾರವನ್ನು
ಕಂಡು, 'ವಠಾರ ಅಂದ್ಮಲೆ ಎಲ್ಲಾ ತರಹ ಜನರೂ ಇದ್ದೇ ಇರ್ತಾರೆ' ಎಂದು ಸಮಾ
ಧಾನ ಪಟ್ಟಿದ್ದ ರಂಗಮ್ಮ ರಂಗಮ್ಮ ಹಾಡು ಕೇಳಿ ಚಕಿತರಾಗಿದ್ದರು. ರಂಗಮ್ಮನಿಗೆ ತಿಳಿಯದೆಯೇ
ಅವರ ವಠಾರದೊಳಗಿಂದ ಕೇಳಿಸಿದ ಹಾಡು!
ಅದು ಯಾರ ಕಂಠ ಎಂದು ತಿಳಿದಿದ್ದರೂ ಯಾರದು? ಎಂದು ಕೇಳುವ ಅಧಿ
ಕಾರವನ್ನು ಉಪಯೋಗಿಸುತ್ತಾ ರಂಗಮ್ಮ ಕೇಳಿದರು:
"ಯಾರೇ ಅದು ಹಾಡಿದ್ದು ?”
"ಹೊಸ ಬಿಡಾರದವರು ಕಣ್ರೀ" ಎಂದು ಎರಡು ಮೂರು ಸ್ವರಗಳು
ಹೇಳಿದುವು.
"ಯಾರು ಚಂಪಾವತೀನೆ?" ಎಂದು ರಂಗಮ್ಮ , ತಮ್ಮ ಸ್ವರವನ್ನು ಆದಷ್ಟು
ಇಂಪಾಗಿಡಲು ಯತ್ನಿಸುತ್ತ ಅಂದರು. ಅದಕ್ಕೇನೂ ಪ್ರತ್ಯುತ್ತರ ಬೇಕಾಗಿರಲಿಲ್ಲ.
ಕಮಲಮ್ಮನ ಹೊರತಾಗಿ ಬಾಗಿಲಲ್ಲಿ ನಿಂತಿದ್ದ ಇತರ ಹೆಂಗಸರೆಲ್ಲ ಒಳಗೆ ಬಂದು
ಚಾಪೆಯ ಮೇಲೂ ನೆಲದ ಮೇಲೂ ಕುಳಿತರು.
"ಒಳಗ್ಬನ್ನಿ ರಂಗಮ್ನೋರೆ," ಎಂದು ಕಾಮಾಕ್ಷಿ ಕರೆದಳು.
ರಂಗಮ್ಮ ಬಾಗಿಲಲ್ಲೇ ನಿಂತರು. ಚಿತ್ರ ಬರೆಯುವವನ ಹೆಂಡತಿ. ಏನಿದ್ದರೂ
ಈಗಿನ ಕಾಲದವಳು. ಇವಳದೆಲ್ಲಾ ಸಿನಿಮಾ ಸಂಗೀತ ಇರಬಹುದು ಎಂದು ಭಾವಿಸಿ
ದ್ದರು ರಂಗಮ್ಮ. ತಮ್ಮ ಅನುಮಾನ ಸರಿ ಎಂಬುದು ಸ್ಪಷ್ಟವಾಗಲೆಂದು ಅವರು
ಗೋಡೆಯನ್ನು ಆಧರಿಸಿ ನಿಂತು ಹಾಡು ಕೇಳಲು ಸಿದ್ಧರಾದರು.
ಚಂಪಾವತಿ ಸುಮ್ಮನಿದ್ದಳು. ಸನ್ನಿವೇಶ ರೂಪುಗೊಂಡ ರೀತಿ ಕಂಡು ಆಕೆಗೆ
ಸಂತೋಷವಾಯಿತು.
ಹೊರಗೆ ನಿಂತಿದ್ದ ಕಮಲಮ್ಮನೇ ಮತ್ತೊಮ್ಮೆ ಹೇಳಿದಳು:
"ಹೇಳೀಮ್ಮಾ ಇನ್ನೊಂದು ಹಾಡು."
ಹಾಗೆ ಒತ್ತಾಯ ಮಾಡಿದ ಸ್ವರ ಇಂಪಾಗಿರಲಿಲ್ಲ.
ಚಂಪಾ ಮುಗುಳ್ನಕ್ಕು ಆರಂಭಿಸಿದಳು:
"ಕಾಲಹರಣ ಮೇಲರಾ ಹರೇ ಸೀತಾರಾಮ..."
ನಿಜವಾಗಿಯೂ! ಎಷ್ಟೋ ಜನರಿಗಿದು ಆನಿರೀಕ್ಷಿತವಾಗಿತ್ತು. ಈ ಸುಪ್ರಸಿದ್ದ
ಕೀರ್ತನೆ ಚಂಪಾವತಿಯ ಬಾಯಿಯಿಂದ ಹೊರಡಬಹುದೆಂದು ಯಾರೂ ನಿರೀಕ್ಷಿಸಿರ
ಲಿಲ್ಲ. ನಿಂತಿದ್ದ ರಂಗಮ್ಮ ಅಲ್ಲಿಯೆ ಕುಳಿತರು. ರಾಜಮ್ಮ ಎದುರು ಮನೆಯ
ಗೋಡೆಗೆ ಒರಗಿಕೊಂಡಳು.
ಹಾಡು ಮುಗಿದಾಗ ಒಂದು ಕ್ಷಣ ಯಾರೂ ಮಾತನಾಡಲಿಲ್ಲ. ಕೇಳುವವರು
ಮೂಕರಾಗುವಾಗ ಆ ಮೌನದ ಅರ್ಥವೇನೆಂಬುದು ಚಂಪಾವತಿಗೆ ಗೊತ್ತಿತ್ತು. ಸದ್ಯಃ
ಆಕೆಯ ಮಗು ಅತ್ತಿರಲಿಲ್ಲ. ಹಾಡು ಮುಗಿಸಿದ ತಾಯಿಯ ಮುಖವನ್ನೆ ನೋಡಿ ಆ
ಪೋರಿ ನಕ್ಕಳು.
ಈ ಸಭೆ ಸೇರಲು ತಾನೇ ಕಾರಣಳೆಂಬ ಹೆಮ್ಮೆಯಿಂದ ಅಹಲ್ಯಾ ಹೇಳಿದಳು:
"ಒಂದು ಕನ್ನಡ ಹಾಡು ಹೇಳ್ರೀ!"
ಬೇರೆಯೂ ಯಾರೋ ಸ್ವರ ಕೂಡಿಸಿದರು:
"ದೇವರ ನಾಮ ಹೇಳ್ರೀ!"
ವಠಾರದ ಒಡತಿಯನ್ನು ಮೆಚ್ಚಿಸಿದುದಾಯಿತೆಂದು ತಿಳಿದ ಚಂಪಾ, ಮತ್ತಷ್ಟು
ಸಮಾಧಾನದಿಂದ ಹಾಡಿದಳು:
"ಸುಲಭ ಪೂಜೆಯ ಮಾಡಿ ಬಲವಿಲ್ಲದವರು
ನಳಿನ ನಾಭನ ಪಾದ ನಳಿನ ಸೇವಕರು........."
ಕೇಳಿದವರನ್ನು ಮುಗ್ಧಗೊಳಿಸುವ ಸಮ್ಮೋಹನ ಶಕ್ತಿ ಚಂಪಾವತಿಗೆ ಇತ್ತೆಂಬು
ದರಲ್ಲಿ ಸಂದೇಹವಿರಲಿಲ್ಲ.
ಈ ಹಾಡು ಮುಗಿದಾಗ ರಂಗಮ್ಮ ತಲೆದೂಗುತ್ತ ಎದ್ದರು.
"ಇದು ದೇವರ ವರ ಚಂಪಾವತಿ,ನೀನು ಭಾಗ್ಯವಂತೆ," ಎಂದು ಹೇಳಿ, ಅವರು
ತಮ್ಮ ಬಾಗಿಲಿನತ್ತ ನಡೆದರು. ರಾಜಮ್ಮನೂ ಆಕೆಯನ್ನು ಹಿಂಬಾಳಿಸಿದಳು.

ಆದರೆ ಉಳಿದವರು ಹೊರಡಲು ಸಿದ್ಧರಿರಲಿಲ್ಲ. ಗಂಡಸರು ಯಾರೋ ಒಬ್ಬಿ

ಬ್ಬರು ವಠಾರಕೆ ಹಿಂತಿರುಗಿದ ಹಾಗಾಯಿತು. ಅದರ ಹೆಂಗಸರು ಯಾರೊ ಅದನ್ನು
ಗಮನಿಸಲಿಲ್ಲ.
ಮೌನವನ್ನು ಮುರಿದು ಅವರೆಲ್ಲ ಮಾತನಾಡಿದರು.
—"ಎಷ್ಟು ಚೆನಾಗಿ ಹಾಡ್ರೀರಾ ಚಂಪಾವತಿ..."
_"ಇನ್ನೊಂದು ಹಾಡು ಹೇಳ್ರೀ."
_"ಹೇಳ್ತೀ ಇನ್ನೊಂದು."
ಚಂಪಾವತಿ ಹೊಗಳಿಕೆಗೆ ಬಲಿಯಾಗಲಿಲ್ಲ, ಬಲು ಎಚ್ಚರಿಕೆಯಿಂದ ಆಕೆ
ಯೆಂದಳು:
"ಇನ್ನು ನೀವು ಹಾಡ್ಬೇಕು ಯಾರಾದ್ರೂ."
ಯಾರೋ ಅಂದರು:
"ಅಹಲ್ಯಾ, ನೀನು ಹಾಡೇ."
"ಕಮಲಮ್ಮ, ನೀವು ಹಾಡ್ರೀ."
ಅಹಲ್ಯಾ ಲಜ್ಞಾವತಿಯಾಗಿ ಸುಮ್ಮನೆ ಕುಳಿತಳು. ಕಮಲಮ್ಮ ಪ್ರಯತ್ನ ಪೂರ್ವಕ
ಕವಾಗಿ ಮುಗುಳುನಗಲೆತ್ನಿ ಸುತ್ತ ಹೇಳಿದಳು;
"ಇವರೆದುರಿನಲ್ಲಿ ನಮ್ಮದೆಲ್ಲಾ ಏನಮ್ಮ?"
ಕಮಲಮ್ಮ ಹಾಗೆ ಹೇಳಿದರೂ, ಹಾಡೆಂದು ತನ್ನನ್ನು ಕೇಳಿದರಲ್ಲಾ ಎಂದು
ಆಕೆಗೆ ಸಂತೋಷವೇ ಆಗಿತ್ತು.
ಆ ಧ್ವನಿಯ ಸ್ವರೂಪ ಚಂಪಾವತಿಗೆ ಅಪರಿಚಿತವಾಗಿರಲಿಲ್ಲ, ಕಮಲಮ್ಮ
ವಠಾರದ ಗಾನವಿಶಾರದೆ ಎಂಬುದು ಸ್ಪಷ್ಟವಾಗಿತ್ತು, ಮಾನವ ಸಹಜವಾದ ಕುತೂ
ಹಲ, ಅಸೂಯೆ ಚಂಪಾವತಿಯಲ್ಲಾ ಮೂಡಿದುವು.. ನೋಡಿಯೇ ಬಿಡೋಣವೆಂದು
ಆಕೆ ಕಮಲಮ್ಮನನ್ನು ಒತ್ತಾಯಿಸಿದಳು.
"ಹೇಳಿ ಕಮಲಮ್ಮೊರೆ."
ಆ ಕೇಳಿಕೆಯನ್ನು ಇತರರು ಪುಷ್ಟೀಕರಿಸಿದರು.
ಸೋಲನ್ನೊಪ್ಪಿಕೊಳ್ಳುವ ಅಪೇಕ್ಷೆ ಇಲ್ಲದೆ ಕಮಲಮ್ಮ ಹಾಡಿದಳು;
"ಬಾರೇ ನೀ ವರಲಕ್ಸ್ಮಿ ದೀವಿಯೇ
ಶ್ರೀಹರಿ ಸತಿಯೆ ನೀ ಪ್ರೇಮದಿ
ಬಾರೇ ನೀ ವರಲಕ್ಸ್ಮಿ ದೇವಿಯೆ.
ಜನಿಸಿ ಕ್ಷೀರಸಾಗರದೊಳು ಹರಿಯ
ನೋಡಿ ಮೋಹಿಸಿದೆ ನೀ
ಪರಮ ಮಂಗಳೆ ಲಕ್ಸ್ಮಿದೇವಿ ನೀ
ಬಾರೇ.......
ತಾನು ಚೆನ್ನಾಗಿಯೇ ಹಾಡಿದೆನೆಂದು ಕಮಲಮ್ಮ ಅಂದುಕೊಂಡಳು. ಆದರೆ
ಹೊಸಬಳೆದುರು ಹಳಬಳಿಗೆ ಸೋಲಾಗಿತ್ತು. ಬೇರೆಯವರೇನೋ ಸುಮ್ಮನಿದ್ದರು.
ಆದರೆ, ತನ್ನ ಸ್ನೇಹಿತೆಯದೇ ಮೇಲಣ ಸ್ಥಾನವೆಂದು ಸ್ಪಷ್ಟವಾದ ಅಹಲ್ಯೆಗೆ ಮುಗುಳು
ನಗೆಯನ್ನು ಹತ್ತಿಕ್ಕುವುದು ಪ್ರಯಾಸವಾಯಿತು. ಆಕೆ ರಾಧೆಯ ತೊಡೆಯನ್ನು
ಮೆಲ್ಲನೆ ಚಿವುಟಿದಳು. ಅವರ ಕಣ್ಣುಗಳು ಪರಸ್ಪರ ಮಾತನಾಡಿಕೊಂಡುವು. ಚಂಪಾ
ವತಿಯ ಸೂಕ್ಷ್ಮ ದೃಷ್ಟಿಗೆ ಇದೆಲ್ಲ ಬೀಳದೆ ಇರಲಿಲ್ಲ. ಆಕೆ ಮಾತ್ರ ಗಂಭೀರವಾಗಿಯೇ
ಇದ್ದಳು.
ಕಮಲಮ್ಮ ಹಾಡು ಮುಗಿಸಿದೊಡನೆ ಆಕೆಯೆಂದಳು:
"ಚೆನ್ನಾಗಿ ಹಾಡಿದ್ರಿ ಕಣ್ರೀ..."
"ಅಯ್ಯೋ ನಮ್ಮದೆಲ್ಲ ಏನಮ್ಮಾ..."
ಇನ್ನೂ ಒಬ್ಬಿಬ್ಬರು ಗಂಡಸರು ವಠಾರಕ್ಕೆ ಹಿಂದಿರುಗಿದ ಹಾಗಾಯಿತು.ಆದರೆ
ಹೆಂಗಸರು ಮಿಸುಕಲಿಲ್ಲ.
"ನೀನು ಹಾಡಮ್ಮ ಅಹಲ್ಯಾ",ಎಂದಳು ಚಂಪಾವತಿ.
"ಅಣ್ಣ ಬಂದ," ಎನ್ನುತ್ತ ಉಪಾಧ್ಯಾಯರ ತಂಗಿ ಸುಮಂಗಳಾ ಎದ್ದು
ಹೋದಳು. ಉಪಾಧ್ಯಾಯರ ಹೆಂಡತಿ ಮಾತ್ರ ಕದಲಲಿಲ್ಲ.
ಹಾಡಲು ಸಿದ್ಧಳಾದ ಅಹಲ್ಯಾ, ರಾಧೆಯನ್ನು ನೋಡಿ ನಕ್ಕಳು.
ಅಷ್ಟರಲ್ಲಿ ಪೋಲೀಸನ ಮಗ ಬಂದು ಹೇಳಿದ:
"ಅಮ್ಮಾ, ಅಪ್ಪ ಬಂದ."
ಆದರೆ ಪೊಲೀಸನ ಹೆಂಡತಿ ಏಳಲಿಲ್ಲ.

ಅಹಲ್ಯಾ ಆರಂಭಿಸಿದಳು:
"ಹುಣ್ಣಿಮೆ ಚಂದಿರ ಬಂದಿಹನೆಂದು__"
ಮೊದಲ ಸಾಲು ಕೇಳುತ್ತಲೆ ರಾಧೆಯ ಮುಖ ಕೆಂಪೇರಿತು. ಅಹಲಾ
ಮುಗುಳುನಕ್ಕು ಮುಂದುವರಿಸಿದಳು:
"ತಿಂಗಳ ಪೂಜೆಯ ಸಲ್ಲಿಸಲೆಂದು
ಬಂದಳು ರಾಧೆ ಯಮುನೆಯ ತಡಿಗೆ....."
ತನ್ನ ಹೆಸರು ಬಂದೊಡನೆ ರಾಧಾ ಕೊರಳು ಕೊಂಕಿಸಿದಳು. ಹೆಂಗಸರೆಲ್ಲ
ಗೊಳ್ಳನೆ ನಕ್ಕರು. ನಗೆಯ ತೆರೆಗಳು ಏರಿ ಬರುತ್ತಿದ್ದಂತೆಯೇ ಅಹಲ್ಯಾ ಹಾಡಿದಳು:
"...ತೋರಿತು ಹೊಸ ಶೃಂಗಾರದ ನಡಿಗೆ
ಹುಣ್ಣಿಮೆ ಚಂದಿರ ಬಂದಿಹನೆಂದು..."
ಕಂಠದ ಮಾಧುರ್ಯಕ್ಕೆ ಕೌಮಾರ್ಯದ ಮೋಹಕ ಮುಗ್ಧತೆಯೂ ಸೇರಿ ಆ ಹಾಡು
ಅಲ್ಲಿದ್ದವರನ್ನು ಮರುಳುಗೊಳಿಸಿತು.
ನಿಂತಲ್ಲಿಂದಲೆ ವಠಾರದ ಹೆಬ್ಬಾಗಿಲತ್ತ ನೋಡಿದ ಮೀನಾಕ್ಷಮ್ಮ ಹೇಳಿದಳು:
"ಚಂಪಾವತೀ, ನಿಮ್ಮ ಯಜಮಾನ್ರು ಬಂದ್ರು ಕಣ್ರೀ."

ಮತ್ತೊಬ್ಬ ಗಂಡಸಿನ ಆಗಮನ. ಇನ್ನು ಏಳಲೇಬೇಕಲ್ಲಾ ಎಂದು ಹೆಂಗಸರು
ಚಂಪಾವತಿಯ ಮುಖವನ್ನುಮಿಕಿ ಮಿಕಿ ನೋಡಿದರು.
ಕುಳಿತಲ್ಲಿಂದಲೆ ಚಂಪಾವತಿ ಕೇಳಿದಳು;
"ಬ೦ದೇಬಿಟ್ರೇನು?"
ಹೆಬ್ಬಾಗಿಲಿಗೆ ಬಂದ ಶಂಕರನಾರಾಯಣಯ್ಯನಿಗೆ ಅಹಲೈಯ ಹಾಡಿನ ಸ್ವರ ಕೇಳಿ
ಸಿತು. ತನ್ನ ಮನೆಯ ಒಳ ಹೊರಗೆ ಜನ ಸೇರಿದ್ದರೆಂಬುದೂ ಅಸ್ಪಷ್ಟವಾಗಿ ಕಂಡಿತು.
ಆತ ಮುಗುಳುನಕ್ಕು, ಹಾಗೆಯೇ ಹಿಂತಿರುಗಿ ಹೊರಟು ಬಿಟ್ಟ.
"ವಾಪಸು ಹೋದ್ರು ಕಣ್ರಿ!"
ಆ ಹೆಂಗಸರಲ್ಲಿ ಕೆಲವರಿಗೆ ಆಶ್ಚರ್ಯವಾಯಿತು. ಕೆಲವರಿಗೆ ಚಂಪಾವತಿಯ
ಯಜಮಾನರು ಸಿಟ್ಟಾದರೇನೋ ಎಂದು ಅಳಕು.
ಆದರೆ ತನ್ನ ಗಂಡನನ್ನು ಚೆನ್ನಾಗಿ ತಿಳಿದಿದ್ದ ಚಂಪಾವತಿ ಹೇಳಿದಳು:
"ಹೊಗಲಿ ಬಿಡಿ. ಆಮೇಲೆ ಬರ್ತಾರೆ."
ಕುಳಿತಿದ್ದವರಲ್ಲಿ ಕೆಲವರೆಂದರು:
"ಕೊನೆಯದು ಒಂದು ನೀವೇ ಹೇಳಿ ಚಂಪಾವತಿ."
ಯಾವುದನ್ನು ಹೇಳುವುದು ಯೋಗ್ಯವೆಂದು ಚಂಪಾ ಒಂದು ಕ್ಷಣ
ಯೋಚಿಸಿದಳು.
"ಯಾವುದಾದರೂ ಮೈಸೂರು ಮಲ್ಲಿಗೆ ಹಾಡು ಹೇಳ್ಲೇನ್ರೀ?"
"ಓ! ಚೆನಾಗಿರುತ್ತೆ, ಅದನ್ನೇ ಹೇಳಿ," ಎಂದಳು ಅಹಲ್ಯಾ. ಕಮಲಮ್ಮ
ಮುಖ ಸ್ವಲ್ಪ ಸೊಟ್ಟಗೆ ಮಾಡಿದರು. ಆದರೆ ಆ ಹೆಂಗಸರಿಗೆ 'ಮೈಸೂರು ಮಲ್ಲಿಗೆ'
ಹಾಡುಗಳು ಅಪರಿಚಿತವಾಗಿರಲಿಲ್ಲ. ರಂಗಮ್ಮನೆದುರು 'ಆ ಹಾಡುಗಳು ಚೆನ್ನಾಗಿವೆ'
ಎಂದು ಹೇಳುವುದು ಸಾಧ್ಯವಿಲ್ಲದೆ ಹೋಗಿದ್ದರೂ ಕದ್ದು ತಿನ್ನುವ ಕೊಬ್ಬರಿ ಬೆಲ್ಲದ
ಹಾಗೆ ಅವು ಸಿಹಿಯಾಗಿದ್ದುವು.
ಚಂಪಾ ಪ್ರತಿಯೊಂದು ಪದಕ್ಕೂ ಜೀವ ತುಂಬಿ ಮೋಹಕವಾಗಿ ಹಾಡಿದಳು:
"ರಾಯರು ಬ೦ದರು ಮಾವನ ಮನೆಗೆ
ರಾತ್ರಿಯಾಗಿತ್ತು.
ಹುಣ್ಣಿಮೇ ಹರಿಸಿದ ಬಾನಿನ ನಡುವೆ
ಚಂದಿರ ಬಂದಿತ್ತು ತುಂಬಿದ ಚಂದಿರ ಬಂದಿತ್ತು..."
ಈ ಹಾಡು ಮುಕ್ತಾಯವೇ ಇಲ್ಲದೆ ಹೀಗೆಯೇ ಸಾಗಲಿ ಎನ್ನಿಸಿತು ಎಲ್ಲರಿಗೂ.
ಮಾವನ ಮನೆ, ರಾಯರು, ಪದುಮ....ಪ್ರತಿಯೊಬ್ಬರ ದಾಂಪತ್ಯ ಜೀವನದಲ್ಲೂ.
ಒಂದಲ್ಲ ಒಂದು ರೀತಿಯಲ್ಲಿ ಆ ಘಟ್ಟಗಳು ಕಳೆದಿದ್ದುವು. ಕವಿ ಹಾಡಿದಷ್ಟು ಪ್ರಿಯ

ವಾಗಿರಲಿಲ್ಲ ಯಾವುದೂ, ಮಾವನ ಮನೆಗೆ ರಾಯರು ಮೊದಲು ಬಂದಾಗ ಆದ
ವಿವಾದಗಳು, "ನಿಮ್ಮ ಮಗಳೇ ಬೇಡ...." "ಬೇರೆ ಮದುವೆ..." ಬಂದು ತಲಪಿ
ದೊಡನೆ, ನಡೆದ ಆಯಾಸದಿಂದ ಗಾಢವಾಗಿ ನಿದ್ದೆ ಹೋಗಿದ್ದ ಅಳಿಯ....ಒಂದೊಂದು
ಒಂದೊಂದು ತರಹೆ . ಆದರೂ ಅವರಿಗೆಲ್ಲ ಆ ಹಾಡು ಪ್ರಿಯವಾಗಿತ್ತು. 'ಪದುಮ'
ಎಂಬ ಪದ ಬಂದಾಗ ಪದ್ಮಾವತಿ ಮಗುವನ್ನೆತ್ತಿಕೊಂಡು ಎದ್ದು ನಿಂತಳು. ಆದರೆ
ಯಾರೂ ಅದನ್ನು ಗಮನಿಸಲಿಲ್ಲ. ಅಹಲ್ಯೆ ರಾಧೆಯರಿಗೆ ಅಂತಹ ಅನುಭವಗಳಿರ
ಲಿಲ್ಲ. ಆದರೂ ಆ ಹಾಡು ಇಂಥವೇ ಎಂದು ಹೇಳಲಾಗದ ಸವಿಯನ್ನು ಅವರಿಗೆ
ನೀಡುತ್ತಿತ್ತು.
ಹಾಡು ಮುಗಿಯಿತು. ಕತ್ತಲಾಗಿತ್ತು ಆಗಲೆ.
"ಸಾಕಮ್ಮ ಇನ್ನು, ಎಲ್ಲರೂ ಕೆಲಸ ಬಿಟ್ಬಿಟ್ಟು ಬಂದಿದೀರಾ..."
ಹೆಂಗಸರೆಲ್ಲಾ ಒಬ್ಬೊಬ್ಬರಾಗಿ ಹೊರಟು ಹೋದರು. ಆದರೆ ಅಹಲ್ಯಾ ಮತ್ತು
ರಾಧಾ ಏಳಲಿಲ್ಲ.
ಚಲಚ್ಚಿತ್ರ ನೋಡಲು ಅಹಲ್ಯೆಗೆ ಅವಕಾಶವೇ ಸಿಗುತ್ತಿರಲಿಲ್ಲ. ಆದರೆ ಚಲ
ಚ್ಚಿತ್ರದಹಾಡುಗಳೆಂದರೆ ಬಲು ಪ್ರೀತಿ. ಚಂಪಾವತಿಗೆ ಸಿನಿಮಾ ಹಾಡು ಖಂಡಿತ
ಬರುತ್ತಿರಬಹುದೆಂದು ಈಗ ಅವಳಿಗೆ ನಂಬಿಕೆಯಾಗಿತ್ತು. ಅಂಗಲಾಚುವ ಧ್ವನಿಯಲ್ಲಿ
ಆಕೆ ಕೇಳಿದಳು:
"ರೀ, ನಿಮಗೆ ಸಿನಿಮಾ ಹಾಡು ಬರಲ್ವೇನ್ರೀ?...ಒಂದು ಹಾಡು ಹೇಳ್ರಿ....
ಒಂದೇ ಸಾಕು."
ಚಂಪಾವತಿಗೆ ನಗು ಬಂತು.
"ಬೇಡಮ್ಮಾ...ರಂಗಮ್ನೋರಿಗೆ ಗೊತ್ತಾದರೆ ಎಲ್ಲಾದರು..."
"ಹುಂ. ಅವರೇನು ಮಾಡ್ತಾರೆ!"
"ಕಮಲಮ್ಮನಂತೂ..."
"ಹೋಗಲಿ ಬಿಡ್ರಿ. ಅದೊಂದು... ಒಂದು ಹೇಳೀಂದ್ರೆ."
"ಮೆತ್ತಗೆ ಹೇಳ್ಲಾ?"
"ಹೂಂ. ಹೂಂ. ಮೆತ್ತಗೆ ಹೇಳಿ."
"ಬಾಗಿಲು ಹಾಕೊಂಡು ಬಿಡಿ."
ಅಹಲ್ಯಾ ತಟಕ್ಕನೆದ್ದು ಬಾಗಿಲು ಹಾಕಿದಳು. ಹಾಗೆಯೇ ವಿದ್ಯುತ್ ಗುಂಡಿ
ಯನ್ನೂ ಅಮುಕಿದಳು. ಆದರೆ ರಂಗಮ್ಮ ದೀಪ ಹಾಕಿರಲಿಲ್ಲ.
ಕತ್ತಲೆಯಲ್ಲಿ ಚಂಪಾವತಿಯ ಮಗು ತಾಯಿಯನ್ನು ಬಿಗಿಯಾಗಿ ಅಪ್ಪಿಕೊಳ್ಳುತ್ತ
ಆ ಮೂವರ ಮುಖಗಳನ್ನೂ ನೋಡಿತು.
ಮೃದುವಾದ ಹತ್ತಿಯ ಅತಿ ಸೂಕ್ಷ್ಮ ಎಳೆಗಳು ಗಾಳಿಯಲ್ಲಿ ತೇಲಾಡಿದ ಹಾಗೆ
ಚಂಪಾವತಿಯ ಸ್ವರ ಹೊರಟಿತು. ಪುಟ್ಟ ಕಿಟಕಿಯ ಮೂಲಕ ಸೊಳ್ಳೆಗಳು ಟುಂಯ್
ಗುಡುತ್ತ ಬಂದವು. ಆದರೂ ಚಂಪಾ ಮೆಲುದನಿಯಲ್ಲಿ ಹಾಡಿದಳು:

"ನಚೊ ನಾಚೊ ಪ್ಯಾರೆ ಮನ್ ಕೆ ಮೋ....
ನಚೊ ನಾಚೊ..."
ಅಹಲ್ಯಾ ರಾಧೆಯರು ನಾಚಲಿಲ್ಲ. ಆ ಹಾಡಿನ ಅರ್ಥವೇನೆಂಬುದೂ ಅವರಿಗೆ
ಗೊತ್ತಿರಲಿಲ್ಲ. ಆದರೆ ಅದು ಸಿನಿಮಾ ಹಾಡು. ಅವರಿಗೆ ಗೊತ್ತಿದ್ದುದಷ್ಟೇ.
ಅದೊಂದು ಒಳ್ಳೆಯ ಸಿನಿಮಾ ಹಾಡು.
ಹಾಡು ಕೊನೆಯ ಸಾಲು ಬಂದಂತೆಯೇ ದೀಪ ಹತ್ತಿಕೊಂಡಿತು.
"ಸಾಕಮ್ಮಾ, ಇನ್ನು ಸಾಕು," ಎಂದಳು ಚಂಪಾ.
ರಾಧೆ ಅಹಲ್ಯೆಯರು ಹೊರಡಲೆಂದು ಬಾಹಿಲು ತೆರೆಯುವುದಕ್ಕೂ "ಅಹಲ್ಯಾ"
ಎಂದು ಆಕೆಯ ಅಣ್ಣ ರಾಮಚಂದ್ರಯ್ಯ ಕರೆಯುವುದಕ್ಕೂ ಸರಿ ಹೋಯಿತು.
ಹೊರಡುತ್ತಲಿದ್ದ ಅಹಲ್ಯೆಯನ್ನು ಚಂಪಾವತಿ ಕೇಳಿದಳು:
"ಅಹಲ್ಯಾ, ಆ ಹಾಡು ನಿನಗೆಲ್ಲಿ ಸಿಕ್ತೆ?"
"ಯಾವುದ್ರಿ?"
"ಅದೇ, ಒಳಗೆ ಬಾ ಯಾತ್ರಿಕನೆ...."
"ಓ ಅದಾ? ರಾಧೆಯ ಅಣ್ಣ ಯಾವುದರಲ್ಲೋ ನೋಡಿ ಬರಕೊಂಡು ಬಂದಿ
ದ್ನಂತೆ."
"ನನಗೂ ಸ್ವಲ್ಪ ಬರಕೊಡ್ತೀಯಾ?"
"ನಾನು ಬರಕೊಡ್ತೀನ್ರೀ," ಎಂದು ರಾಧಾ ಆ ಕೆಲಸ ಮಾಡಿಕೊಡಲು
ಒಪ್ಪಿದಳು.
ಹುಡುಗಿಯರು ಹೊರಹೋಗುತ್ತಲೆ ಚಂಪಾವತಿ ತಾನು ಮೆಚ್ಚಿದ ಆ ಹಾಡಿನ
ಮೊದಲ ಸಾಲನ್ನು ನೆನಪು ಮಾಡಿಕೊಳ್ಳುತ್ತಾ ಗುಣಗುಣಿಸಿದಳು.
"ಅವರಿಗೆ ಈ ಹಾಡು ಖಂಡಿತ ಇಷ್ಟವಾಗುತ್ತೆ", ಎಂದು ಆಕೆ ಮನಸ್ಸಿನಲ್ಲೆ
ಅಂದುಕೊಂಡಳು.

೧೦
ಮಹಡಿಯೇರಲೆಂದು ರಾಧಾ ಹೆಬ್ಬಾಗಿಲಿನತ್ತ ಬರುತ್ತಲಿದ್ದಂತೆ ಬಲಬದಿಯ
ಮೊದಲ ಮನೆಯಿಂದ ರೋದನ ಕೇಳಿಸಿತು.
"ಅಯ್ಯೋ ಹೊಡೀಬೇಡೀಂದ್ರೆ....ನಿಮ್ಮ ದಮ್ಮಯ್ಯ!"
ಹುಂ-ಹುಂ-ಹೂಂಕಾರ. ಡುಬ್-ಡುಬ್-ಗುದ್ದಿನ ಸದ್ದು.
"ಅಯ್ಯಯ್ಯೋ-ಅಮ್ಮಾ!ಸತ್ತೆ-ಸತ್ತೆ....."
ಆ ಮನೆಯಿಂದ ಹಾಗೆ ಅಳು ಬರುವುದು ಹೊಸ ವಿಷಯವಾಗಿರಲಿಲ್ಲ.
ಅದೊಂದು ಮನೆ, ಎದುರಿಗಿದ್ದ ಉಪಾಧ್ಯಾಯರದು, ಪಕ್ಕದಲ್ಲಿ ರಾಜಮ್ಮ ಮತ್ತು
ಮಕ್ಕಳ ಜಗಳ, ಕಮಲಮ್ಮನ ಗಂಡ ಊರಿಗೆ ಬಂದಾಗಲೊಂಮ್ಮೆ ವಿರಸ,ನಾಗರಾಜ
ರಾಯ-ಪದ್ಮಾವತಿಯರ ನಡುವೆ ಹುಣ್ಣಿಮೆ ಅಮಾವಾಸ್ಯೆಗೊಮ್ಮೆ ಕಲಹ...ಯಾವುದೂ
ಹೊಸತಾಗಿರಲಿಲ್ಲ, ಯಾರಿಗೂ ಅದರಲ್ಲಿ ವಿಶೇಷ ಅಸಕ್ತಿ ಇರಲಿಲ್ಲ. 'ಎಲ್ಲರ ಮನೆ
ದೋಸೆಯೂ ತೂತೇ' ಎಂದು ಸುಮ್ಮನಾಗುವುದೇ ಅಲ್ಲಿ ಕಂಡುಬರುತ್ತಿದ್ದ ಮುಖ್ಯ
ಪ್ರವ್ರತ್ತಿ. ಆದರೂ ಹೊಸ ಪ್ರಕರಣವಾದಾಗಲೆಲ್ಲ 'ಈ ಸಲ ಕಾರಣವೇನು?' ಎಂದು
ತಿಳಿಯುವ ಕುತೂಹಲ ಮಾತ್ರ ಹಲವರಲ್ಲಿ ಇರುತ್ತಿತ್ತು.
ಈ ಸಲವು ಮೊದಲ ಮನೆಗಳ ಕೆಲವರು,ಪೋಲೀಸನ ಮನೆಯಿಂದ ಬರು
ತ್ತಿದ್ದ ಸ್ವರಗಳಿಗೆ ಕಿವಿಗೊಟ್ಟರು.
"ಸ್ವಲ್ಪಾನಾದ್ರೂ ಮೈಮೇಲೆ ಪ್ರಜ್ನೆ ಬೇಡ ನಿಂಗೆ? ಹೋಗಿ ಸಂಗೀತ ಕಛೇರೀಲಿ
ಕೂತ್ಬಿಟ್ಟಿದಾಳೆ ಮಹಾರಾಣಿ. ಹುಂ!"
"ಇಲ್ಲಾ ಅಂದ್ರೆ....ಈಗ್ತಾನೇ ಹೋಗಿದ್ದೆ ಅಂದ್ರೆ..."
"ಮುಚ್ಚು ಬಾಯಿ!"
"ಅಯ್ಯೋ ಭಗವಂತಾ...."
ಭಗವಂತನನ್ನು ಕರೆದುದಕ್ಕಾಗಿ ಒದೆ.
"ಯಾರ್ಗೆ ಹೇಳಿದ್ದು ಬಾಯ್ಮುಚ್ಚೂಂತ?"
ಆ ಗಂಡಸು ಒಂದು ಕ್ಷಣ ಅಳುಕಿದಂತೆ ತೋರಿತು. ಮತ್ತೆ ಕೈಯ ಹೊಡೆತ.
"ನಿಮ್ಮ ದಮ್ಮಯ್ಯ....!"
"ಹೋಗ್ತೀಯಾ ಇನ್ನು?"
"ಖಂಡಿತಾ ಹೋಗೋಲ್ಲ....ಮಗುವಿನಾಣೆ...."
ಅಲ್ಲೆ ಹಿತ್ತಿಲ ಹೋಡೆಗೊರಗಿ ನಿಂತಿದ್ದ ಜಯರಾಮು ತಂಗಿ ಬರುತ್ತಿದ್ದುದನ್ನು
ನೋಡಿದ. ಆಕೆಯೂ ಅಣ್ಣನನ್ನು ಕಂಡು ಅವನ ಬಳಿಗೆ ಬಂದಳು. ಇಬ್ಬರೂ
ಕತ್ತಲೆಯಲ್ಲಿ ನಿಂತು, ಕಿಟಕಿಯ ಮೂಲಕ ಸ್ವಲ್ಪಸ್ವಲ್ಪವಾಗಿ ಕಾಣುತ್ತಿದ್ದ ದ್ರಶ್ಯವನ್ನು
ನೋಡಿದರು; ಕೇಳಿಸುತ್ತಿದ್ದ ಎಲ್ಲ ಮಾತುಗಳಿಗೂ ಕಿವಿಗೊಟ್ಟರು.
ಮಗುವಿನಾಣೆ....!
ಮೂವರು ಮಕ್ಕಳು ಹೆದರಿ ಗಡಗಡನೆ ನಡುಗುತ್ತ ಅಡುಗೆ ಮನೆ ಸೇರಿದ್ದರು.
ಹೊರಗೆ ನಿಂತಿದ್ದವರಿಗೆ, ಅಸಹಾಯಳಾಗಿ ನೆಲದ ಮೇಲೆ ಬಿದ್ದಿದ್ದ ಹೆಂಗಸು ಕಾಣು
ತ್ತಿರಲ್ಲಿಲ್ಲ. ಖಾಕಿಯ ಪೋಷಕು ಧರಿಸಿದ್ದ ಗಂಡಸು ಮಾತ್ರ ಅತ್ತಿತ್ತ ಚಲಿಸುವುದು
ಕಾಣಿಸುತ್ತಿತ್ತು.
ಇದರ ಹಿನ್ನಲೆ ಅಣ್ಣನಿಗೆ ತಿಳಿಯಲೆಂದು ತಂಗಿ ಹೇಳಿದಳು:
"ಕೊನೇ ಮನೆಯವರು ಒಂದೆರಡು ಹಾಡು ಹೇಳಿದ್ರು ಅಣ್ಣ. ಅದನ್ನ
ಕೇಳೋಕೆ ಈಕೆ ಬಂದಿದ್ರು ."
"ಗೊತಾಯ್ತು ಕಣೇ..."
"ಅಯ್ಯೋ!ಹ್ಯಾಗೆ ಹೊಡೀತಿದಾನೆ ಆತ!"
ಮತ್ತೆ ಹೊಸದಾಗಿ ಹೆಂಗಸಿನ ಧ್ವನಿ ಕಳಿಸಿತು:
"ಅಯ್ಯೋ ಹೋಡೇಬೇಡೀಂದ್ರೆ....ದಮ್ಮಯ್ಯ...."
ಜಯರಾಮು ಅವುಡುಕಚ್ಚಿ ಕಂಪಿಸುವ ಧ್ವನಿಯಲ್ಲಿ ಹೇಳಿದ:
"ಪಿಶಾಚಿ!ಬೆಲ್ಟು ಬಿಚ್ಛಿ ಹೊಡೀತಿದಾನೋ ಏನೋ...."
"ಥೂ!ಆತ ತುಂಬಾ ಕೇಟ್ಟೋನು."
"ಹೆಂಡತಿ ಅಂದರೆ ಕಾಲಿನ ಕಸ.ಇದು ಲಾಕಪ್ಪೊಂತ ತಿಳಕೊಂಡಿದಾನೆ. ಮ್ಯೆ
ಚರ್ಮ ಸುಲಿಯೋಕೆ ಅಲ್ಲಿ ಯಾರೂ ಇವತ್ತು ಸಿಗಲಿಲ್ವೇನೋ...."
"ಹೋಗಿ ರಂಗಮ್ನೋರನ್ನ ಕರೇಲೆ ಅಣ್ಣ?"
"ಬೇಡ ರಾಧಾ. ಇನ್ನೇನು ಅವರೇ ಬಂದ್ಬಿಡ್ತಾರೆ.
"ಜಯರಾಮು ರಂಗಮ್ಮನವರ ನಡೆ ನುಡಿಯನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದ.
ವಠಾರದಲ್ಲಿ ಜಗಳ ಆರಂಭವಾದರೆ ಆ ಕ್ಷಣವೇ ಅವರು ಬರುತ್ತಿರಲಿಲ್ಲ.ಪರಿಸ್ಥಿತಿ
ತೀಕ್ಷ್ಣತೆಯ ಘಟ್ಟವನ್ನು ದಾಟಿ ಇಳಿಮುಖವಾದಾಗ ರಂಗಮ್ಮ ಬಂದು ಸ್ವರವೇರಿಸಿ
ಮಾತನಾಡುತ್ತಿದ್ದರು:
"ಏನದು ಗಲಾಟೆ? ಈ ವಠಾರ ಕುಡುಕರ ಕೇರಿ ಕೆಟೋಯ್ತೆ!"
ಆಗಾಗ್ಗೆ ದೇಹದ ಉಗಿ ಹೊರಹೋಗಲು ಅವಕಾಶ ಕೊಡುವುದು ಅಗತ್ಯ
ಎಂಬುದು ಅವರ ಅಭಿಪ್ರಾಯವಾಗಿತ್ತು.
ಈ ದಿನವೂ ಅವರ ಬಂದು ಪೋಲೀಸನ ಮನೆ ಬಾಗಿಲಲ್ಲಿ ನಿಂತರು:
"ರಂಗಸ್ವಾಮೀ!ರಂಗಸ್ವಾಮೀ!ಏನ್ರೀ ಅದು?"
ಒಂದು ಕ್ಷಣ ಮೌನ. ಆ ಬಳಿಕ, ತನಗೆ ಸಹಾನುಭೂತಿ ತೋರುವವರು ಬಂದ
ರೆಂದು, ಹೆಂಗಸು ಬಾಗಿಲಿನ ಹೋರಗೂ ಕೇಳಿಸುವಂತೆ ಗಟ್ಟಿಯಾಗಿ ಅತ್ತಳು.
ಪೋಲೀಸ್ ಖಾತೆಯವನೆಂಬ ಕಾರಣದಿಂದ ಬಹುವಚನದ ಗೌರವ ಆತನಿಗೆ
ರಂಗಮ್ಮನಿಂದ ದೊರೆಯುತ್ತಿತ್ತು.
ಉತ್ತರ ಬಂದೇ ಇದ್ದುದನ್ನು ಕಂಡು ರಂಗಮ್ಮ ಮತ್ತೋಮ್ಮೆ ಕೇಳಿದರು:
"ರಂಗಸ್ವಾಮಿ ಏನಪ್ಪಾ ಅದು?"
ರಂಗಸ್ವಾಮಿ ಬಾಗಿಲು ತೆರೆಯದೆಯೇ ಹೇಳಿದ:
"ನೋಡಿ ರಂಗಮ್ನೋರೆ ಈಕೆ ಮಾಡಿರೋದು. ಇವತ್ತು ರಾತ್ರೆ ಡ್ಯೂಟಿ
ಇದೇಂತ ಆಗ್ಲೇ ಹೇಳಿದ್ದೆ. ಬಂದು ಒಂದು ತುತ್ತು ತಿಂದು ಹೋಗೋಣ ಅಂದರೆ,
ಇಲ್ಲಿ ಬಡಿಸೋವರಿಗೇ ಗತಿ ಇಲ್ಲ. ಸಂಗೀತ ಕೇಳೋಕೆ ಹೋಗಿದಾಳೆ ಈ
ಮಹಾರಾಯ್ತಿ...."
"ಹೋಗಲಿ ಬಿಡಪ್ಪಾ. ಆಷ್ಟಕ್ಕೆಲ್ಲಾ_"
"ನೀವು ಹೋಗಿ ರಾನ್ಗಮ್ನೋರೆ. ಹೊರಗೆ ದುಡಿಯೋ ಗಂಡಸಿನ ಕಷ್ಟ
ಯಾರಿಗೆ ಗೊತ್ತಾಗುತ್ತೆ?"
ಆ ಸಂಭಾಷಣೆ ಕೇಳಿಸುತ್ತಿದ್ದ ಉಪಧ್ಯಾಯರು ಹೆ೦ಡತಿಯತ್ತ ನೋಡಿದರು. ಓದುತ್ತಿದ್ದ ಇಬ್ಬರು ಹುಡುಗರೂ ಪರಸ್ಪರ ಮುಖ ನೋಡಿಕೊ೦ಡರು.ರಾಜಮ್ಮ
ಬಾಗಿಲು ಬಳಿ ನಿ೦ತರು.ಗು೦ಡಣ್ಣ ಬಾಗಿಸಿದ ತಲೆಯನ್ನು ಎತ್ತಲಿಲ್ಲ.
ಒಳಗೆ ನೆಲದ ಮೇಲೆ ಮುದುರಿದ್ದ ಹೆ೦ಗಸು ಎದ್ದು ಕುಳಿತಳು. ಬಾಗಿಲು
ತೆರೆಯಿತು.ಕೈಯಲ್ಲಿ ಪೇಟ ಹಿಡಿದುಕೊ೦ಡು ರ೦ಗಸ್ವಾಮಿ ಹೊರಬ೦ದ. ಕತ್ತಲಲ್ಲಿ
ಆ ಮುಖ ಯಾರಿಗೂ ಕಾಣಿಸಲಿಲ್ಲ.
"ಯಾಕಪ್ಪ ಹೊರಟ್ಬಿಟ್ರಿ?"-
_ಎ೦ದು ರ೦ಗಮ್ಮ ಕೇಳುತ್ತಿದ್ದ೦ತೆಯೇ ಆತ ಅ೦ಗಳ ದಾಟಿ ಬೀದಿಗಿಳಿದ.
ಒಳಗಿನಿ೦ದ ಹೆ೦ಗಸು ಗೋಳಾಡಿದಳು:
"ಊಟ ಮಾಡ್ದೇನೇ ಹೋಗ್ತಿದಾರೆ ರ೦ಗಮ್ನೋರೇ..
"ರಾಜಿ ಮಾಡಿಸಲೆ೦ದು ರ೦ಗಮ್ಮ ಕರೆದರು:
"ರ೦ಗಸ್ವಾವೂ!
ಗ೦ಡಸು ಕೇಳಲೇ ಎಲ್ಲ.' ಡ್ಯೂಟಿ'ಗಾಗಿ ಆತ ಹೊರಟು ಹೋದ.
ರ೦ಗಮ್ಮ ಸ೦ತ್ಯೆಸುವ ನುಡಿಗಳನ್ನಾಡುತ್ತಿದ್ದ೦ತೆಯೇ ಈಗ ರ೦ಗಸ್ವಾಮಿಯ
ಹೆ೦ಡತಿ, ಹೃದಯಪಾಟತ್ರೆಯನ್ನು ಆ ದಿನ ಮಟ್ಟಿಹಗೆ ಬರಿದುಗೋಳಿಸಲೆ೦ದು ತು೦ಬಿದ
ದುಂಖವನ್ನೆಲ್ಲ ಹೋರಕ್ಕೆ ಹರಿಸಿದಳು.
ಜಯರಾಮು ನಿಟ್ಟುಸಿರುಬಿಟ್ಟು ಬೇಸರದ ಧ್ವನಿಯಲ್ಲಿನ ಹೇಳಿದ:
"ನಡೀ ರಾಧಾ, ಮನೆಗೆ ಹೋಗೋಣ."
ಅವರು ಮಹಡಿಯ ಮೆಟ್ಲಲೇರುತ್ತಿದ್ದಂತೆಯೇ,ಶಂಕರನಾರಾಯಣಯ್ಯ
ಮತ್ತು ಚಂದ್ರಶೇಖರಯ್ಯ ಎಬ್ಬರೂ ವಠಾರಕ್ಕೆ ಬಂದರು.ಚಂದ್ರಶೇಖರಯ್ಯನ
ಕೈಯಲ್ಲಿ ಎಂದಿನಂತೆ ಕಡತಗಳಣನ್ನು ಹೊತ್ತ ಚರ್ಮದ ಚೀಲವಿತ್ತು.ಶಂಕರನಾರಾ
ಯಣಯ್ಯನ ಕೈಲೋಂದು ಹಸುರೆಲೆಯ ಪೊಟ್ಟಣವಿತ್ತು-ನಿತ್ಯದಂತೆಯೇ.
"ಬರ್ತೇನಿ ಶಂಕರನಾರಾಯಣಯ್ಯ. ಗುಡ್ ನೈಟ್ಎಂದು ಚಂದ್ರಶೇಖ
ರಯ್ಯನೆಂದ ಶಂಕರನಾರಾಯಣಯ್ಯ ಮಾರುತ್ತರವಿತ್ತ:
"ನಮಸ್ಕಾರ,ನಮಸ್ಕಾರ."
ಮಹಡಿಯನ್ನೇರತೊಡಗಿದ್ದ ಅಣ್ಣ ತಂಗಿಯರನ್ನು ಕಂಡು ಚಂದ್ರಶೇಖರಯ್ಯ
ಸ್ವಲ್ಪ ವೇಗವಾಗಿಯೇ ಹೆಜ್ಜೆ ಹಾಕಿದ. ಜಯರಾಮು ಮಾತನಾಡಿಸಲೇಬೇಕಾಯಿತು.
"ಇವತ್ತು ಬೇಗ್ನೆ ಬಂದ್ಬಿಟ್ಟಿದೀರಾಲ್ಲ ಚಂದ್ರಶೇಖರ್ ರವರೆ?"
"ಕೊನೇ ಮನೆಯವರು ಒಂದೆರಡು ಹಾಡು ಹೇಳಿದ್ರು ಅಣ್ಣ. ಅದನ್ನ
ಕೇಳೋಕೆ ಈಕೆ ಬಂದಿದ್ರು."
"ಗೊತ್ತಾಯ್ತು ಕಣೇ.."
"ಅಯ್ಯೋ ! ಹ್ಯಾಗೆ ಹೊಡೀತಿದಾನೆ ಆತ!"
ಮತ್ತೇ ಹೊಸದಾಗಿ ಹೆಂಗಸಿನ ಧ್ವನಿ ಕೇಳಿಸಿತು:
"ಅಯ್ಯೋ ಹೊಡೀಬೇಡೀಂದ್ರೇ...ದಮ್ಮಯ್ಯ.."
ಜಯರಾಮು ಅವುಡುಕಚ್ಚಿ ಕಂಪಿಸುವ ಧ್ವನಿಯಲ್ಲಿ ಹೇಳಿದ:
"ಪಿಶಾಚಿ!ಬೆಲ್ಟು ಹೊಡೀತಿದಾನೋ ಏನೋ.."
"ಥೂ!ಆತ ತುಂಬಾ ಕೆಟ್ಟೋನು."
"ಹೆಂಡತಿ ಅಂದರೆ ಕಾಲಿನ ಕಸ .ಇದು ಆಕಪ್ಪೂಂತ ತಿಳಕೊಂಡಿದಾನೆ.ಮೈ
ಚರ್ಮ ಸುಲಿಯೋಕೆ ಅಲ್ಲಿ ಯಾರೂ ಇವತ್ತು ಸಿಗಲಿಲ್ವೇನೋ.."
"ಹೋಗಿ ರಂಗಮ್ನೋರನ್ನ ಕರೀಲೇ ಅಣ್ಣ?"
"ಬೇಡ ರಾಧಾ.ಇನ್ನೇನು ಅವರೇ ಬಂದ್ಬಿಡ್ತಾರೆ."
ಜಯರಾಮು ರಂಗಮ್ಮನವರ ನಡೆ ನುಡಿಯನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದ.
ವಠಾರದಲ್ಲಿ ಜಗಳ ಆರಂಭವಾದರೆ ಆಕ್ಷಣವೇ ಅವರು ಬರುತ್ತಿರಲಿಲ್ಲ.ಪರಿಸ್ಥಿತಿ
ತೀಕ್ಷ್ಣತೆಯ ಘಟ್ಟವನ್ನು ದಾಟಿ ಇಳಿಮುಖವಾದಾಗ ರಂಗಮ್ಮ ಬಂದು ಸ್ವರವೇರಿಸಿ
ಮಾತನಾಡಿತ್ತಿದ್ದರು:
"ಏನದು ಗಲಾಟೆ? ಈ ವಠಾರ ಕುಡುಕರ ಕೇರಿ ಕೆಟ್ಹೋಯ್ತೆ!"
ಆಗಾಗ್ಗೆ ದೇಹದ ಉಗಿ ಹೊರಹೋಗಲು ಅವಕಾಶ ಕೊಡುವುದು ಅಗತ್ಯ
ಎಂಬುದು ಅವರ ಅಭಿಪ್ರಾಯವಾಗಿತ್ತು.
ಈ ದಿನವೂ ಅವರು ಬಂದು ಪೋಲೀಸನ ಮನೆ ಬಾಗಿಲಲ್ಲಿ ನಿಂತರು:
"ರಂಗಸ್ವಾಮಿ! ರಂಗಸ್ವಾಮಿ! ಏನ್ರೀ ಅದು?"
ಒಂದು ಕ್ಷಣ ಮೌನ.ಆ ಬಳಿಕ,ತನಗೆ ಸಹಾನುಭೂತಿ ತೋರುವವರು ಬಂದ
ರೆಂದು ,ಹೆಂಗಸು ಬಾಗಿಲಿನ ಹೊರಗೂ ಕೇಳಿಸುವಂತೆ ಗಟ್ಟಿಯಾಗಿ ಅತ್ತಳು .
ಪೋಲೀಸ್ ಖಾತೆಯವನೆಂಬ ಕಾರಣದಿಂದ ಬಹುವಚನದ ಗೌರವ ಆತನಿಗೆ
ರಂಗಮ್ಮನಿಂದ ದೊರೆಯುತ್ತಿತ್ತು.
ಉತ್ತರ ಬರದೇ ಇದ್ದುದನ್ನು ಕಂಡು ರಂಗಮ್ಮ ಮತ್ತೊಮ್ಮೆ ಕೇಳಿದರು :
"ರಂಗಸ್ವಾಮೀ, ಏನಪ್ಪಾ ಅದು?"
ರಂಗಸ್ವಾಮಿ ಬಾಗಿಲು ತೆರೆಯದೆಯೇ ಹೇಳಿದ :
"ನೋಡಿ ರಂಗಮ್ನೋರೆ ಈಕೆ ಮಾಡ್ತಿರೋದು.ಇವತ್ತು ರಾತ್ರಿ ಡ್ಯೂಟಿ
ಇದೇಂತ ಆಗ್ಲೇ ಹೇಳಿದ್ದೆ.ಬಂದು ಒಂದು ತುತ್ತು ತಿಂದು ಹೋಗೋಣ ಅಂದರೆ,
ಇಲ್ಲಿ ಬಡಿಸೋವರಿಗೇ ಗತಿ ಇಲ್ಲ.ಸಂಗೀತ ಕೇಳೋಕೆ ಹೋಗಿದಾಳೆ ಈ
ಮಹಾರಾಯ್ತಿ.."
"ಹೋಗಲಿ ಬಿಡಪ್ಪಾ.ಅಷ್ಟಕ್ಕೆಲ್ಲಾ -"
"ನೀವು ಹೋಗಿ ರಂಗಮ್ನೋರೇ. ಹೊರಗೆ ದುಡಿಯೋ ಗಂಡಸಿನ ಕಷ್ಟ
ಯಾರಿಗೆ ಗೊತ್ತಾಗುತ್ತೆ?"
ಆ ಸಂಭಾಷಣೆ ಕೇಳಿಸುತ್ತಿದ್ದ ಉಪಾಧ್ಯಾಯರು ಹೆಂಡತಿಯತ್ತ ನೋಡಿದರು.
ಓದುತ್ತಿದ್ದ ಇಬ್ಬರು ಹುಡುಗರೂ ಪರಸ್ಪರ ಮುಖ ನೋಡಿಕೊಂಡರು. ರಾಜಮ್ಮ
ಬಾಗಿಲ ಬಳಿ ನಿಂತರು.ಗುಂಡಣ್ಣ ಬಾಗಿಸಿದ ತಲೆಯನ್ನು ಎತ್ತಲಿಲ್ಲ.
ಒಳಗೆ ನೆಲದ ಮೇಲೆ ಮುದುರಿದ್ದ ಹೆಂಗಸು ಎದ್ದು ಕುಳಿತಳು .ಬಾಗಿಲು ತೆ
ರೆಯಿತು.ಕೈಯಲ್ಲಿ ಹಿಡಿದುಕೊಂಡು ರಂಗಸ್ವಾಮಿ ಹೊರಬಂದ.ಕತ್ತಲಲ್ಲಿ
ಆ ಮುಖ ಯಾರಿಗೂ ಕಾಣಿಸಲಿಲ್ಲ.
"ಯಾಕಪ್ಪಾ ಹೊರಟ್ಬಿಟ್ರಿ?"
-ಎಂದು ರಂಗಮ್ಮ ಕೇಳುತ್ತಿದ್ದಂತೆಯೇ ಆತ ಅಂಗಳ ದಾಟಿ ಬೀದಿಗಿಳಿದ.
ಒಳಗಿನಿಂದ ಹೆಂಗಸು ಗೋಳಾಡಿದಳು:
"ಊಟ ಮಾಡ್ದೇನೇ ಹೋಗ್ತಿದಾರೆ ರಂಗಮ್ನೋರೇ..."
ರಾಜಿ ಮಾಡಿಸಲೆಂದು ರಂಗಮ್ಮ ಕರೆದರು:
"ರಂಗಸ್ವಾಮಿ!"
ಗಂಡಸು ಕೇಳಲೇ ಇಲ್ಲ.'ಡ್ಯೂಟಿ'ಗಾಗಿ ಆತ ಹೊರಟು ಹೋದ.
ರಂಗಮ್ಮ ಸಂತೈಸುವ ನುಡಿಗಳನ್ನಾಡಿತ್ತಿದ್ದಂತೆಯೇ ಈಗ ರಂಗಸ್ವಾಮಿಯ
ಹೆಂಡತಿ,ಹೃದಯಪಾತ್ರೆಯನ್ನು ಆ ದಿನದ ಮಟ್ಟಿಗೆ ಬರಿದುಗೊಳಿಸಲೆಂದು ತುಂಬಿದ
ದುಃಖವನ್ನೆಲ್ಲ ಹೊರಕ್ಕೆ ಹರಿಸಿದಳು.
ಜಯರಾಮು ನಿಟ್ಟುಸಿರು ಬಿಟ್ಟು ಬೇಸರದ ಧ್ವನಿಯಲ್ಲಿ ಹೇಳಿದ:
"ನಡೀ ರಾಧಾ,ಮನೆಗೆ ಹೋಗೋಣ."
ಅವರು ಮಹಡಿಯ ಮೆಟ್ಟಿಲೇರುತ್ತಿದ್ದಂತೆಯೇ,ಶಂಕರನಾರಾಯಣಯ್ಯ
ಮತ್ತು ಚಂದ್ರಶೇಖರಯ್ಯ ಇಬ್ಬರೂ ವಠಾರಕ್ಕೆ ಬಂದರು.ಚಂದ್ರಶೇಖರಯ್ಯನ
ಕೈಯಲ್ಲಿ ಎಂದಿನಂತೆ ಕಡತಗಳನ್ನು ಹೊತ್ತ ಚರ್ಮದ ಚೀಲವಿತ್ತು.ಶಂಕರನಾರಾ
ಯಣಯ್ಯನ ಕೈಯಲ್ಲೊಂದು ಹಸುರೆಲೆಯ ಪೊಟ್ಟಣವಿತ್ತು-ನಿತ್ಯದಂತೆಯೇ.
"ಬರ್ತೀನಿ ಶಂಕರನಾರಾಯಣಯ್ಯ.ಗುಡ್ ನೈಟ್,"ಎಂದು ಚಂದ್ರಶೇಖ
ರಯ್ಯನೆಂದ.ಶಂಕರನಾರಾಯಣಯ್ಯ ಮಾರುತ್ತರವಿತ್ತ:
"ನಮಸ್ಕಾರ,ನಮಸ್ಕಾರ."
ಮಹಡಿಯನ್ನೇರತೊಡಗಿದ್ದ ಅಣ್ಣ ತಂಗಿಯರನ್ನು ಕಂಡು ಚಂದ್ರಶೇಖರಯ್ಯ
ಸ್ವಲ್ಪ ವೇಗವಾಗಿಯೇ ಹೆಜ್ಜೆ ಹಾಕಿದ.ಜಯರಾಮು ಮಾತನಾಡಿಸಲೇಬೇಕಾಯಿತು.

"ಇವತ್ತು ಬೇಗ್ನೆ ಬಂದ್ಬಿಟ್ಟಿದೀರಲ್ಲ ಚಂದ್ರಶೇಖರ್ರವರೆ?"
"ಬಂದ್ಬಿಟ್ಟೆ ಜಯರಾಂ."
"ಹೊಸ ಬಿಡಾರದವರ ಪರಿಚಯ ಮಾಡ್ಕೊಂಡ ಹಾಗಿದೆ."
"ಅಯ್ಯೋ ಅದೊಂದು ದುರಭ್ಯಾಸ."
ಮುಂದಿದ್ದ ರಾಧಾ ಮನೆಯತ್ತ ಸಾಗುತ್ತ ಹಿಂದಿರುಗಿ ನೋಡಿದಳು. ಕತ್ತಲು.
ಚಂದ್ರಶೇಖರಯ್ಯನ ಮುಖ ಸ್ಫಷ್ಟವಾಗಿ ಕಾಣಿಸಲಿಲ್ಲ. ಆದರೆ ಆ ಕಣ್ಣುಗಳೆರಡು
ತನ್ನನ್ನೇ ದಿಟ್ಟಿಸುತ್ತಿದ್ದಂತೆ ರಾಧೆಗೆ ಭಾಸವಾಗಿ, ಮುಖದಲ್ಲಿ ರಕ್ತ ಸಂಚಾರ ತೀವ್ರ
ವಾಯಿತು.
ಚಂದ್ರಶೇಖರಯ್ಯ ತನ್ನ ಬಾಗಿಲಿನ ಬೀಗಕ್ಕೆ ಕೀಲಿಕೈ ತಿರುವುತ್ತಿದ್ದಂತೆ ಜಯ
ರಾಮು ತಡೆದು ನಿಂತು ಕೇಳಿದ:
"ನಾಲ್ಕೈದು ದಿವಸದಿಂದ ನೀವು ಊರಿನಲ್ಲಿರ್ಲಿಲ್ಲಾಂತ ತೋರುತ್ತೆ."
"ಅಯ್ಯೊ, ಇಲ್ಲೇ ಇದೀನಿ ಒಂದು ವಾರದಿಂದ."
"ನಿಜವೆ!....."
"ಯಾಕೋ ಬರಬರುತ್ತಾ ಬೆಂಗಳೂರು ಬೊಂಬಾಯಿ ಆಗ್ತಿದೆ. ಪಕ್ಕದ್ಮನೇಲಿ
ಯಾರಿದಾರೆ ಅನ್ನೋದೇ ಗೊತ್ತಾಗ್ತಾ ಇಲ್ಲ...." ಎಂದು ಚಂದ್ರಶೇಖರಯ್ಯ ನಕ್ಕು
ಬಿಟ್ಟ. ಜಯರಾಮುವೂ ನಕ್ಕು, ತನ್ನ ಮನೆಯತ್ತ ಸಾಗಿದ. ಬೊಂಬಾಯಿಯೊಡನೆ
ಹೋಲಿಕೆ. ಜಯರಾಮು ಆ ದೊಡ್ಡ ಊರನ್ನು ಕಂಡಿರಲಿಲ್ಲ. ಚಂದ್ರಶೇಖರಯ್ಯನೋ
ಲೋಕಾನುಭವಿ. ಪಕ್ಕದ ಮನೆಯಲ್ಲಿ ಯಾರಿರುವರೆಂಬುದನ್ನೂ ತಿಳಿಯಲು ಬಯಸದೆ,
ಅಥವಾ ತಿಳಿಯಲಾಗದೆ, ಜನ ಆ ದೊಡ್ಡ ನಗರದಲ್ಲಿ ಜೀವಿಸುವುದನ್ನು ಜಯರಾಮು
ಚಿತ್ರಿಸಿಕೊಂಡ.
ಆತನ ತಾಯಿ ಪಿಸು ಧ್ವನಿಯಲ್ಲಿ ಕೇಳಿದರು:
"ಏನಂದ್ನೊ?"
"ಯಾರು?"
"ಶ್! ಪಕ್ಕದ್ಮನೆಯಾತ."
"ಏನೂ ಇಲ್ಲ!"
ತಾಯಿಯ ಪಿಸುಮಾತಿನಿಂದ ಜಯರಾಮುಗೆ ಆಶ್ಚರ್ಯವಾಯಿತು.ಮಗನ
ಉತ್ತರದಿಂದ ತಾಯಿಗೆ ನಿರಾಶೆಯಾಯಿತು."ಅಪ್ಪ ಬಂದಿಲ್ವಾ ಇನ್ನೂ?"ಎನ್ನುತ್ತ,
ಕಿಟಕಿಯಿಂದ ಹೊರಗಿಣಿಕಿ ಬೀದಿಯತ್ತ ನೋಡುತ್ತಿದ್ದ ತಂಗಿಯನ್ನು ದಿಟ್ಟಿಸಿದ ಜಯ
ರಾಮು, ಏನೋ ಹೊಳೆದವನಂತೆ ತಾಯಿಯತ್ತ ನೋಡಿದ. 'ಓ' ಎನ್ನುವಂತೆ
ಆತನ ಹುಬ್ಬುಗಳು ಮೇಲಕ್ಕೆ ಚಲಿಸಿದುವು. ಮರುಕ್ಷಣವೆ ಯೋಚನೆಯ ಮೋಡ
ಕವಿದು ಮುಖ ಬಾಡಿತು.
ಆಣ್ಣ-ತಾಯಿ ಇಬ್ಬರೊಡನೆಯೂ ರಾಧಾ ಅಂದಳು:
"ಆ ಕೊನೇ ಮನೆಯಾಕೆ ಚಂಪಾ ಎಷ್ಟು ಚೆನ್ನಾಗಿ ಹಾಡ್ತಾಳೇಂತ!ವ‌‍‍‍ಠಾರ
ದೋರೆಲ್ಲ ಜಮೆಯಾಗ್ಬಿ‌‌‍‍‍‍‌‌‌‍ಟ್ಟಿದ್ರು."
"ಕೆಳಗೇನೋ ಗಲಾಟೆಯಾಗ್ತಿತ್ತಲ್ಲೋ. ಮೆಲಕ್ಬನ್ನೀಂತ ನಿಮ್ಮಿಬ್ರನ್ನೂ ಕೂಗ್ದೆ
-ನಿಮಗೆ ಕೇಳಿಸ್ಲೇ ಇಲ್ಲ."
ತಾಯಿ ಮಾತು ಮುಗಿಸುತ್ತಲೆ ಜಯರಾಮುವೆಂದ:
"ಕೊನೇ ಮನೆಯೋರು ಹಾಡ್ತಿದ್ರು. ಅದನ್ನ ಕೇಳೋಕೆ ಹೋದ್ರೊಂತ
ತನ್ನ ಹೆಂಡತಿಗೆ ಪೋಲೀಸ್ ಸಾಹೇಬರು ಚೆನ್ನಾಗಿ ಶಿಕ್ಷೆ ಕೊಟ್ರು."
"ಅವನೊಬ್ಬ__"
ಏನೋ ಹೇಳಬೇಕೆಂದಿದ್ದರು ತಾಯಿ. ಆದರೆ ಮಾತು ಅಲ್ಲಿಗೆ ನಿಂತಿತು.......
ಕೆಳಗೆ ರಂಗಮ್ಮ ತಮ್ಮನ್ನು ಹಾದು ಮುಂದೆ ಹೋಗುತ್ತಿದ್ದ ಶಂಕರನಾರಾಯ
ಣಯ್ಯನನ್ನು ಕಂಡರು.
"ಈಗ ಬಂದಿರೇನಪ್ಪ?"
"ಹೂಂ ರಂಗಮ್ನೋರೆ."
ಮಾತು ಬೆಳೆಸಲು ಇಷ್ಟವಿಲ್ಲದೆ ಶಂಕರನಾರಾಯಣಯ್ಯ ಅಷ್ಟು ಹೇಳಿ ನೇರವಾಗಿ
ತನ್ನ ಬಾಗಿಲಿನತ್ತ ನಡೆದ. ಆದರೆ ರಂಗಸ್ವಾಮಿಯ ಹೆಂಡತಿ ಹಣೆಯ ಮೇಲೆ
ಕೈಯಿಟ್ಟು ಅಳುತ್ತಿದ್ದ ದೃಶ್ಯ ತೆರೆದ ಬಾಗಿಲಿನ ಎಡೆಯಿಂದ ಅತನಿಗೆ ಕಾಣಿಸದಿರಲಿಲ್ಲ.
ರಂಗಮ್ಮ ಅಳುತ್ತಿದ್ದಾಕೆಯನ್ನು ಸಂತೈಸಲು ಯತ್ನಿಸಿದರು.
"ಏಳಮ್ಮ ನೀನು. ಮಕ್ಕಳಿಗೆ ಬಡಿಸು.ನೀನೂ ಊಟ ಮಾಡಿ ನಿದ್ದೆ ಹೋಗು.
ಆತನೇನೊ ಇನ್ನು ಬರೋದಿಲ್ಲ. ಹೂಂ. ಏಳು ಏಳು!"
ಇಷ್ಟು ಹೇಳಿ ಅವರು ಅಸ್ಪಷ್ಟವಾಗಿ ಏನನ್ನೋ ಹೇಳುತ್ತ ತಮ್ಮ ಗೂಡನ್ನು
ಸೇರಿದರು.
.....ಒಳಗಿನಿಂದ ಆಗಣಿ ಹಾಕಿತ್ತು.
"ಬಾಗಿಲು!" ಎಂದು ಒರಟು ಒರಟಾಗಿ ಎಂದೂ ಕೂಗಿದವನಲ್ಲ ಶಂಕರ
ನಾರಾಯಣಯ್ಯ. ಬಾಗಿಲು ಮುಚ್ಚಿದಾಗ ಹೊರಗೆ ನಿಂತು, ಪ್ರೀತಿಯೇ ಮಾತಾಯಿ
ತೇನೋ ಎಂಬಂತೆ ಕರೆಯುತ್ತಿದ್ದ:
"ಚಂಪಾ!"
ಆ ಸ್ವರ ಕೇಳಿಸಿದ ಮನೆ ಹೆಂಗಸರಿಗೆಲ್ಲಾ ಕಸಿವಿಸಿಯಾಗುತ್ತಿತ್ತು. ಚಂಪಾವತಿ
ಭಾಗ್ಯವಂತೆ ಎಂದುಕೊಳ್ಳುತ್ತಿದ್ದರು:
ಆ ಭಾಗ್ಯವಂತೆಯೊ ಗಂಡ ತನ್ನ ಹೆಸರು ಹಿಡಿದು ಕರೆಯುವಂತೆ ಮಾಡ
ಬೇಕೆಂದೇ, ಕತ್ತಲಾಗುತ್ತಲೇ ಬಾಗಿಲು ಹಾಕುತ್ತಿದ್ದಳು. ಅಷ್ಟೇ ಅಲ್ಲ ಎರಡನೇ ಬಾರಿ
ಆತ ಕರೆಯಲೆಂದೇ,ಮೊದಲ ಸಲಕ್ಕೇ ಬಾಗಿಲು ತೆರೆಯುತ್ತಿರಲಿಲ್ಲ.
ಹೆಂಡತಿಯ ಈ ಹಂಚಿಕೆಯೊಂದೂ ತಿಳಿಯದ ಮುಗ್ಧನಾಗಿರಲಿಲ್ಲ ಶಂಕರ
ನಾರಾಯಣಯ್ಯ. ಆತನಿಗೂ ಈ ಬಗೆ ಇಷ್ಟವೇ.

"ಚಂಪಾ.."
ಮತ್ತಷ್ಟು ಮೃದುವಾದ, ಸ್ವಲ್ಪ ದೀರ್ಘವಾದ ಎರಡನೆಯ ಕರೆ.
ಮೊದಲ ಸಲ ಕರೆದಾಗಲೇ ಬಂದು ಬಾಗಿಲ ಹಿಂದೆಯೇ ನಿಂತಿದ್ದ ಚಂಪಾವತಿ
ಚಿಲಕ ತೆಗೆದು ಬಾಗಿಲು ತೆರೆದಳು. ಮೀನು ನೀರೊಳಕ್ಕೆ ನುಸುಳಿದ ಹಾಗೆ ಸದ್ದಿಲ್ಲದೆ,
ಆತ ಮನೆಯೊಳಕ್ಕೆ ಬಂದ. ನಿರೀಕ್ಷೆಯ ಮುಗುಳುನಗೆ ಆಕೆಯ ತುಟಿಗಳ ಮೇಲೆ
ಮೂಡಿ ಅರಳುತ್ತಿತ್ತು. ಆತ ಕಣ್ಣೆವೆ ಮುಚ್ಚಿ ತೆರೆಯುವದರೊಳಗೆ ಕದವನ್ನು
ಹಿಂದಕ್ಕೆ ತಳ್ಳಿ ಅಗಣಿ ಹಾಕಿದ;ಕೈಯಲ್ಲಿದ್ದ ಪೊಟ್ಟಣವನ್ನು ನೆಲದ ಮೇಲಿರಿಸಿದ; ಓಡಿ
ಹೋಗುವವಳಂತೆ ನಟಿಸುತ್ತಿದ್ದ ಚಂಪಾವತಿಯನ್ನು ಎರಡೂ ಬಾಹುಗಳಿಂದ ಸುತ್ತು
ವರಿದ. ಆತನ ದೃಷ್ಟಿ ಅರಳುತ್ತಲಿದ್ದ ಆ ತುಟಿಗಳ ಸೊಬಗಿನ ಮೇಲೆಯೇ ನೆಟ್ಟಿತು.
ಆಕೆಯ ಅರೆಮುಚ್ಚಿದ ಕಣ‍್ಣುಗಳು ಯಾವುದೋ ಸುಖಕ್ಕಾಗಿ ತುಟಿಗಳೊಡನೆ ಸ್ಪರ್ಧಿ
ಸಿದುವು. ಆತ ಬೆಳಕಿನೆದುರಲ್ಲಿ ಏನೂ ಕಾಣಿಸಬಾರದೆಂದು ಕಣ‍್ಣು ಮುಚ್ಚಿಯೇ ಕೊಟ್ಟ.
ಒಂದು, ಎರಡು, ಮೂರು...ನಾಲ್ಕು....
ಕಂಠದಿಂದ ಕುಲು ಕುಲು ಧ್ವನಿ ಹೊರಡಿಸುತ್ತ ಆಕೆಯೆಂದಳು:
"ಸುಸ್ತು, ಹೆಚ್ಚಾಯ್ತು ಇವತ್ತು!"
ಇಬ್ಬರೂ ತಮ್ಮನ್ನೇ ನೋಡುತ್ತಿದ್ದ ಮಗುವನ್ನು ಕಂಡರು, ಅಪ್ಪ ಅಮ್ಮ
ಅದೇನೋ ಮಾಡುತ್ತಿದ್ದುದನ್ನು ಆ ಮಗು ನೋಡಿ ನಕ್ಕಿತು.
ಹುಸಿಮುನಿಸಿನ ಧ್ವನಿಯಲ್ಲಿ ಚಂಪಾ ಅಂದಳು:
"ನೋಡಿ...ಮಗು...ನಾಚಿಕೇನೂ ಇಲ್ಲ ನಿಮಗೆ."
"ಹೋಗಲಿ ಬಿಡು. ತನ್ನ ತಾಯಿ ಎಂಥವಳೂಂತ ಈಗಿನಿಂದ್ಲೇ ಗೊತ್ತಾಗಲಿ
ಅದಕ್ಕೆ!"
"ಊಂ...ಆಗ್ಲೇ ಬಂದಿದ್ರಂತೆ. ಎಲ್ಲಿಗೆ ಹೋಗಿದ್ರಿ?"
"ಜನಾನಾ ಕಚೇರಿ ನಡೀತಾ ಇತ್ತು ಇಲ್ಲಿ. ಹೊರಟ್ಹೋ
"ಸಾಕು ತಮಾಷೆ."
"ಭರ್ಜರಿಯಾಗಿತ್ತೊ?"
"ಹೂಂ ಎಲ್ಲರಿಗೂ ಖುಶಿಯಾಯ್ತು."
"ಸರಿ ಇನ್ನು. ಹಾಡು ಹೇಳಿಯೇ ನೀರು ಬರಿಸು, ದೀಪ ತರಿಸು_ಅಂತಾರೆ
ನೋಡು!"
"ರಂಗಮ್ನೋರು ಬಂದಿದ್ರು."
"ಓ! ಅವರೆದುರು ಓ ಮೋರೆ ರಾಜಾಂತ ಹಾಡಿದ್ಯೇನು?"
"ಉಂಟೆ ಎಲ್ಲಾದರೂ? ಕಾಲಹರಣ ಮೇಲರಾ ಹರೇ ಹಾಡ್ಪೆ."
"ಭೇಷ್."
"ಅವರು ಹೋದ್ಮೇಲೆ__"
"ಗೊತ್ತು ಬಿಡು. ಹಾ ಪ್ರಿಯಾ ಪ್ರಶಾಂತ ಹೃದಯಾ ಹಾನಿ_"
"ಥೂ_ಥೂ...ಮೈಸೂರು ಮಲ್ಲಿಗೇದು ಹಾಡ್ದೆ."
"ಬೇರೆ ಗವಾಯಿಗಳೂ ಇದ್ರೋ?"
"ಇಲ್ದೆ ಇರ್ತಾರ್ಯೆ? ಆದರೆ ಕೊನೇಲಿ_"
"ಏನಾಯ್ತು?"
"ಹಾಡು ಕೇಳೋಕೆ ಬಂದಿದ್ಲೂಂತ ಮೊದಲ್ನೇ ಮನೆ ಯಜಮಾನ ಹೆಂಡತಿಗೆ
ಹೊಡೆದ್ನಂತೆ."
ಬರುತ್ತ ತಾನು ಕಂಡ ದೃಶ್ಯ......ಶಂಕರನಾರಾಯಣಯ್ಯನಿಗೆ ಸ್ಪಷ್ಟವಾಯಿತು
ಈಗ.
"ಅವನಾ_ ಪೋಲಿಸ್ನೋನು! ಅವನ ಪಿಂಡ."
ಪೊಟ್ಟಣವನ್ನು ಬಿಚ್ಚಿ ಚಂಪಾ ಹೂವಿನ ಸುವಾಸನೆಯನ್ನು ಒಳಕ್ಕೆಳೆದು ಶ್ವಾಸ
ಕೋಶಗಳನ್ನು ತುಂಬಿಕೊಂಡಳು. ಆ ಕ್ಷಣ ಮತ್ತೊಮ್ಮೆ ಗಂಡನ ಎದೆಯಲ್ಲಿ ಒರಗುವ
ಮನಸ್ಸಾಯಿತು. ಆದರೆ ಆಗಲೆ ಅತಿಯಾಗಬಾರದೆಂದು ಆಕೆ ಮನಸ್ಸನ್ನು ಬಿಗಿಹಿಡಿದು
ಅಡುಗೆ ಮನೆಯತ್ತ ಹೋದಳು.
"ಆ ದೀಪಾನ ಇನ್ನೂ ಸ್ವಲ್ಪ ಈಚೆಗೆ ತರಬೇಕೂಂದ್ರೆ."
ಆತ ಬಟ್ವೆ ಬದಲಾಯಿಸಿ, ಬಲ್ಬಿನ ಮೇಲುಗಡೆ ಒಂದು ದಾರವನ್ನು ಕಟ್ಟಿ
ಅಡುಗೆ ಮನೆಯ ಛಾವಣಿಯತ್ತ ಎಳೆದು ಬಿಗಿದ. ನಡುವಿನ ಗೋಡೆಗೆ ನೇರವಾಗಿ
ದೀಪ ಬಂದು, ಎರಡೂ ಕಡೆ ಒಂದೇ ಸಮನೆ ಬೆಳಕು ಬಿತ್ತು.
"ಸಾಕೇನೆ?"
"ಹೂಂ. ಸಾಕು. ಸರಿಯಾಗಿದೆ."
ತನ್ನ ಬಡಕಲು ಕುರ್ಚಿಯ ಮೇಲೆ ನಿಂತಿದ್ದ ಶಂಕರನಾರಾಯಣಯ್ಯ ಕೆಳಕ್ಕೆ
ಧುಮುಕುತ್ತ ಹೇಳಿದ:
"ಈಗ ಅಡ್ಡಗೋಡೆ ಮೇಲೆ ಇಟ್ಟ ಹಾಗಾಯ್ತು."
ಚಂಪಾ ನಕ್ಕಳು.
ಆ ದಿನ ತಾನು ಮಾಡಿದ ಕೆಲಸ; ನಡೆದ ಮಾತುಕತೆ; ಹಳೆಯ ಸ್ನೇಹಿತ
ನೊಬ್ಬನ ಸಂದರ್ಶನ; ಹಿಂದೆ ವಾಸವಾಗಿದ್ದ ಮನೆಯ ಪ್ರದೇಶದ ಪರಿಚಿತರೊಬ್ಬರು
ಭೇಟಿಯಾದದ್ದು....ಚಂದ್ರಶೇಖರಯ್ಯನ ಜತೆಯಲ್ಲಿ ಕಾಫಿ ಕುಡಿದದ್ದು....
ಪ್ರತಿಯೊಂದರ ವರದಿಯನ್ನೂ ಆತ ಹೆಂಡತಿಗೆ ಒಪ್ಪಿಸಿದ. ಆಕೆ ಹೂಂಗುಟ್ಟುತ್ತಾ
ಅಡುಗೆ ಮಾಡಿದಳು. ಅನ್ನ ಬೆಂದಿತು. ತಿಳಿಸಾರು ಸಿದ್ಧವಾಯಿತು.
ಚಂಪಾ ಹಾಸಿಗೆ ಹಾಸಿದಳು. ತನ್ನ ತೊಡೆಯ ಮೇಲೆಯೇ ನಿದ್ದೆ ಹೋಗಿದ್ದ
ಮಗುವನ್ನು ಶಂಕರನಾರಾಯಣಯ್ಯ ಹಾಸಿಗೆಯ ಮೇಲೆ ಮಲಗಿಸಿದ.
ಗಂಡ ಹೆಂಡತಿ ಇಬ್ಬರೂ ಊಟಕ್ಕೆ ಕುಳಿತು ಒಬ್ಬರಿಗೊಬ್ಬರು ಬಡಿಸುತ್ತ
ಉಂಡರು.
ಊಟ ಮುಗಿದು ಅವರು,ಸುವಾಸಿತ ಅಡಿಗೆ ಪುಡಿ ಬಾಯಿಗೆ ಹಾಕಿಕೊಂಡರು.
ಶಂಕರನಾರಾಯಣಯ್ಯ ಸಿಗರೇಟು ಹಚ್ಚಿದ.
ಅಷ್ಟರಲ್ಲಿ ಓಣಿಯಿಂದ ರಂಗಮ್ಮನ ಸ್ವರ ಕೇಳಿಸಿತು.
"ಆಗ್ತಾ ಬಂತೇನ್ರೇ?ಇನ್ನು ಹತ್ನಿಮಿಷ.ದೀಪ ಆರಿಸ್ತೀನಿ".
ದಂಪತಿ ಮಲಗಿಕೊಂಡು ಆ ವಿಷಯ ಈ ವಿಷಯ ಮಾತನಾಡಿದರು. ಅಷ್ಟ
ರಲ್ಲೇ ದೀಪ ಆರಿತು.ಹೊರಳಿ,ಪರಸ್ಪರ ಮುಖಗಳನ್ನು ಸಮೀಪಕ್ಕೆ ತಂದರು.
ಪಿಸುಮಾತಿನ ಸಂಭಾಷಣೆ ಮತ್ತೂ ನಡೆಯಿತು.
"ಎದುರು ಸಾಲ್ನಲ್ಲಿ ಎರಡ್ನೇ ಮನೆ ಇಲ್ವಾ-ಅಲ್ಲಿಯ ಹುಡುಗಿ ಅಹಲ್ಯಾ-"
"ಹೂಂ.ಏನು?"
"ಎಷ್ಟು ಚೆನ್ನಾಗಿ ಹಾಡ್ತಾಳೇಂತ.ಇವತ್ತೊಂದು ಹೊಸ ಹಾಡು ಹಾಡಿದ್ಲು.
ತುಂಬಾ ಸೊಗಸಾಗಿತ್ತು."
"ಯಾವುದು- ಅಂದು ತೋರ್ಸು."
"ಇನ್ನೂ ಬರ್ಕೊಂಡಿಲ್ಲಾಂದ್ರೆ."
"ಗೊತ್ತಮ್ಮಾ.ಮೊದಲ್ನೇ ಸಾಲು ಹೇಳು,ಸಾಕು.ಯಾವ ಹಾಡೂಂತ
ನೋಡ್ತೀನಿ."
ಮಲಗಿದ್ದಲ್ಲಿಂದಲೇ ಪಿಸುದನಿಯಲ್ಲೇ ಮೊದಲ ಸಾಲನ್ನು ಚಂಪಾ ಅಂದಳು:
"ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು........"
ಶಂಕರನಾರಾಯಣಯ್ಯ ಸುಮ್ಮನಿದ್ದ.ಚಂಪಾ ಕೇಳಿದಳು:
"ಹ್ಯಾಗಿದೆ?ಚೆನ್ನಾಗಿಲ್ವಾ?" "ಚೆನ್ನಾಗಿದೆ.ನಾನು ಕೇಳೇ ಇರ್ಲಿಲ್ಲ ಈವರೆಗೂ."
"ನಾಳೆ ದಿವಸ ಪೂರ್ತಿ ಹಾಡ್ತೀನಿ."
"ಚಂಪಾ!"
ಎಷ್ಟೊಂದು ವೈವಿಧ್ಯಪೂರ್ಣವಾಗಿ ಆ ಹೆಸರನ್ನು ಆತ ಉಚ್ಚರಿಸುತ್ತಿದ್ದ!
ಒಂದೊಂದು ಸ್ವರಕ್ಕೂ ಒಂದೊಂದು ಅರ್ಥ.ಈ ಸಲ ಕರೆದ ಧ್ವನಿಯ ಅರ್ಥವೇ
ನೆಂಬುದು ಅವಳಿಗೆ ಗೊತ್ತಿತ್ತು.ಆಕೆ ಮಾತನಾಡಲಿಲ್ಲ.ರಾಗವೆಳೆದಳು:
"ಊ..."
"ನಾನು ಯಾತ್ರಿಕ.ನೀನು ಕಲೆಯ ಬಲೆ."
"ಊ..."

ರಾಗವೆಳೆಯುತ್ತಲೇ ಚಂಪಾವತಿ ತನ್ನೊಂದು ತೋಳಿನಿಂದ ಆತನ ಕತ್ತನ್ನು
ರಂಗಮ್ಮನ ವಠಾರ
113

ಬಳಸಿಕೊಂಡಳು
.....ಬಲಪಾರ್ಶ್ವದ ಮನೆಯಲ್ಲಿ ಪದ್ಮಾವತಿ ಚಪಡಿಸುತ್ತಿದ್ದಳು, ನಿದ್ದೆ
ಬಾರದೆ. ಗಂಡ ನಾಗರಾಜರಾಯ ಗೊರಕೆ ಹೊಡೆಯುತ್ತಿದ್ದ.ಮಕ್ಕಳು ಎಂದೋ
ಮಲಗಿದ್ದೂವು. ಆ ಸಂಜೆ ಚಂಪಾವತಿಯ ಹಾಡುಗಳನ್ನು ಕೇಳಿದಾಗಿನಿಂದ ಆಕೆಯ
ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು. ಮದುವೆಯ ಮೊದಲಿನ ಅನಂತರದ ದಿನ
ಗಳೆಲ್ಲ ನೆನಪಿಗೆ ಬಂದುವು. ಸವಿಯಾದುದು ಎಷ್ಟೊಂದು ಅಲ್ಪವಾಗಿತ್ತು ಅದರಲ್ಲಿ!
ಪದ್ಮಾವತಿ ಬುದ್ಧಿವಂತೆ. ನಾರಾಯಣಿ ಇದ್ದ ಮನೆಗೆ ಬಿಡಾರ ಬಂದವರು ಶ್ರೀಮಂತ
ರಲ್ಲವೆಂಬುದನ್ನು ಆಕೆ ಸುಲಭವಾಗಿ ತಿಳಿದುಕೊಂಡಿದ್ದಳು. ಆದರೂ ಎಷ್ಟೊಂದು
ಅನ್ಯೋನ್ಯವಾಗಿದ್ದರು ಇಬ್ಬರೂ!
ಅಂತಹ ಪ್ರೀತಿ ತನಗೆ ದೊರೆತಿರಲ್ಲಿಲ್ಲ.
ಒಪ್ಪಿದ ಮೊದಲ ಗಂಡಿಗೇ ಹೆತ್ತ ತಾಯಿ ತಂದೆ ತನ್ನನ್ನು ಧಾರೆಯೆರೆದು
ಕೊಟ್ಟು ತಮ್ಮ ಪಾಲಿನ ಕರ್ತವ್ಯವನ್ನು ಪೂರೈಸಿದ್ದರು. ಗಂಡನ ಆಯ್ಕೆಯ ವಿಷಯ
ದಲ್ಲಿ ಆಕೆ ಹೇಳುವುದೇನೂ ಇರಲಿಲ್ಲ. ಪಾಲಿಗೆ ಬಂದದ್ದನ್ನೇ ಪಂಚಾಮೃತವೆಂದು
ಸ್ವೀಕರಿಸಿದ್ದಳು.
ಪ್ರತಿಯೊಂದೂ ಯಾಂತ್ರಿಕವಾಗಿಯೆ ನಡೆಯುತ್ತಿತ್ತು, ಆ ಸಂಸಾರದಲ್ಲಿ . ಉಡು
ವುದು- ಉಣ್ಣುವುದು, ಪ್ರೀತಿಸುವುದು- ಮಕ್ಕಳನ್ನು ಹೊತ್ತು ಪೋಷಿಸುವುದು, ಪ್ರತಿ
ಯೊಂದೂ. ಮಾತೂ ಅಷ್ಟೇ. ಆ ನಾಗರಾಜರಾಯ ಅತಿ ಮಿತಭಾಷಿ. ಒಮ್ಮೆ
ಹೇಳಿದ ಮಾತುಗಳೇ ಪ್ರತಿದಿನವೂ ಮತ್ತೆ ಮತ್ತೆ.
ಪಕ್ಕದ ಮನೆಯಲ್ಲಿ ಪಿಸುಮಾತು ನಡೆದೇ ಇತ್ತು. ಕಮಲಮ್ಮ ಪದ್ಮಾವತಿಗೆ
ಹೇಳಿದ್ದರು:
"ಈ ಸರಸವೆಲ್ಲಾ ಮಾಡಿಕೊಂಡ ಹೊಸದರಲ್ಲಿ ಕಣ್ರೀ."
"ಅವರಿಗೆ ಮದುವೆ ಆಗಿ ಆಗ್ಲೇ ಐದು ವರ್ಷ ಆಯ್ತಂತೆ ಕಮಲಮ್ಮ."
"ತಾಳಿ ಸ್ವಲ್ಪ. ಬಗಲಿಗೊಂದು ಬೆನ್ನಿಗೊಂದು ಆ ಪಕ್ಕಕ್ಕೊಂದು ಈ ಪಕ್ಕ
ಕ್ಕೊಂದು ಮಕ್ಕಳಾಗ್ಲಿ."
ಕಮಲಮ್ಮನ ನಾಲ್ಕು ಮಕ್ಕಳು ಕೈಬಿಟ್ಟು ಹೋಗಿದ್ದವು.ಆ ಸಂಕಟದಿಂದ
ಮನಸ್ಸು ಸದಾ ಕಹಿಯಾಗಿದ್ದರೂ ಮನುಷ್ಯ ಸ್ವಭಾವವನ್ನಾಕೆ ಸ್ವಲ್ಪಮಟ್ಟಿಗೆ ಚೆನ್ನಾ
ಗಿಯೇ ತಿಳಿದಿದ್ದಳು. ಸ್ವತಃ ಸುಖ ಕಂಡಿರದ ಜೀವ ಇನ್ನೊಬ್ಬರ ಸುಖವನ್ನು ನೋಡಿ
ಕರುಬುತ್ತಿರಲಿಲ್ಲ ನಿಜ. ಆದರೆ ಅಂತಹ ಯಾವ ಸುಖವೂ ಸ್ಥಿರವಲ್ಲವೆಂಬುದು ಮಾತ್ರ
ಆಕೆಯ ದೃಢ ನಂಬಿಕೆಯಾಗಿತ್ತು.
ಪಕ್ಕದ ಮನೆಯಲ್ಲಿ ಕತ್ತಲಲ್ಲಿ ದಂಪತಿ ಸಣ್ಣನೆ ನಕ್ಕ ಹಾಗೆ ಸದ್ದು.ನಿಜವೊ-
ಭ್ರಮೆಯೊ.ಪಿಸು ಮಾತು ಕೇಳಿಸುತ್ತಿರಲಿಲ್ಲ.ಮಾತು ನಿಂತಿತು ಎಂದ ಮೇಲೆ-

15

ಪದ್ಮಾವತಿ ಪಕ್ಕಕ್ಕೆ ಹೊರಳಿದಳು. ಮೂಗು ದಿ೦ಬನ್ನು ಸೋ೦ಕಿತು. ಎಣ್ಣೆ
ಜಿಡ್ಡಿನ ವಾಸನೆ ದಿ೦ಬಿನಿ೦ದ ಹೊರಟು ಮೂಗನ್ನು ಹೊಕ್ಕಿತು. ಆಕೆ ನಿಟ್ಟುಸಿರು
ಬಿಟ್ಟಳು. ದಯೆ ತೋರದೇ ಇದ್ದ ನಿದ್ದೆಯನ್ನು ಇದಿರು ನೋಡುತ್ತ ಆಕೆ ಕಣ್ಣೆವೆ
ಗಳನ್ನು ಮುಚ್ಚಿಕೊ೦ಡು ಮಲಗಿದಳು.
...ಆ ಮನೆಯಾಚೆ ಕಮಲಮ್ಮನಿಗೆ ಅದೇ ಅಗ ನಿದ್ದೆ ಬ೦ದಿತ್ತು. ಹಿಟ್ಟು
ರುಬ್ಬಿ ದಣಿದ ಜೀವಕ್ಕೆ ಸಾಮಾನ್ಯವಾಗಿ ನಿದ್ದೆ ಬರುವುದು ತಡವಾಗುತ್ತಿರಲಿಲ್ಲ. ಅದರೆ
ಈ ದಿನ ಇತರ ದಿನಗಳಿಗಿ೦ತ ಪ್ರತ್ಯೇಕವಾಗಿತ್ತು. ಆವರೆಗೂ ಆ ವಠಾರದಲ್ಲಿ ದೇವರ
ನಾಮ ಹಾಡಲು ಆಕೆಯನ್ನು ಬಿಟ್ವರೆ ಬೇರೆ ಯಾರೂ ಇರಲಿಲ್ಲ. ಅ೦ತೂ ಮಕ್ಕಳಿಲ್ಲದ
ಹೆ೦ಗಸೆ೦ದು ಯಾರೂ ಆಕೆಯನ್ನು ತಾತ್ಸಾರ ಮಾಡುತ್ತಿರಲಿಲ್ಲ.
ದೊಡ್ಡವರಾದ ಮಕ್ಕಳು ತನ್ನ ಮಾತು ಕೇಳಲಿಲ್ಲವೆ೦ದು, ಅವರೊಡನೆ ಜಗಳ
ವಾಡಿ ಅತ್ತು ರ೦ಪ ಮಾಡಿದ್ದ ರಾಜಮ್ಮ ಒಮ್ಮೆ ಹೀಗೂ ಅ೦ದಿದ್ದಳು:
"ಹೆತ್ತು, ಸಾಕಿ, ಕೊನೆಗೆ ಆ ಮಕ್ಕಳ ಕೈಲೇ ಹಿ೦ಸೆ ಅನುಭೋಗಿಸೋದ್ಕಿ೦ತ
ಮಕ್ಕಳಾಗ್ದೇ ಇದ್ರೆ ಮೇಲು ಕಮಲಮ್ಮ."
"ಎ೦ಥ ಮಾತು ಆಡ್ತೀರಮ್ಮ ನೀವು. ಉ೦ಟೆ ಎಲ್ಲಾದ್ರೂ_"
ಹಾಗೆ ಕಮಲಮ್ಮ ಆಗ ರಾಜಮ್ಮನಿಗೆ ಹೇಳಿದ್ದಳು. ರಾಜಮ್ಮನಿಗೆ 'ಅವರ'
ನೆನಪಾಗಿತ್ತು.
"ನನಗೆ ಈ ಗತಿ ಮಾಡಿ ಹೊರಟ್ಹೋದ್ರು ಪುಣ್ಯಾತ್ಮ," ಎ೦ದು ಅವಳು
ಗೋಳಾಡಿದಳು.
ಹೀಗೆ ಕಮಲಮ್ಮನೊಡನೆ ಮನಸ್ಸು ಬಿಚ್ಚಿ ಮಾತನಾಡದವರೇ ಇರಲಿಲ್ಲ. ಸ್ವತಃ
ಕಮಲಮ್ಮ ಸಿರಿವ೦ತಿಕೆಯ ಸುಖವನ್ನು ಕ೦ಡಿರಲಿಲ್ಲ. ತಾಯ್ತನದ ಸುಖವೂ ಇರಲಿಲ್ಲ
ಅವಳ ಪಾಲಿಗೆ. ಆದರೂ ಅವಳು ಒಳ್ಳೆಯವಳಾಗಿಯೆ ಉಳಿದಿದ್ದಳು.
ಚ೦ಪಾವತಿಯ ಕ೦ಠಮಾಧುರ್ಯವನ್ನು ಕೇಳಿದಾಗ ಅಸೂಯೆಯೇ ಎನ್ನು
ವ೦ತಹ ಭಾವನೆ ಅವಳಲ್ಲಿ ಮೂಡಿತ್ತು. ಬದಲಾಗುತ್ತಿದ್ದ ಮುಖಚರ್ಯೆಯನ್ನು ತಡೆ
ಹಿಡಿಯುವುದು ಸಾಧ್ಯವಾಗಿರಲಿಲ್ಲ. ಚ೦ಪಾವತಿಯನ್ನು ಮೂದಲಿಸಿ ಮಾತನಾಡ
ಬೇಕೆ೦ದೂ ಮನಸ್ಸಾಗಿತ್ತು.
ಆದರೆ ಮನೆಗೆ ಬ೦ದ ಮೇಲೆ, ಶಾ೦ತ ಚಿತ್ತಳಾಗಿ ಯೋಚಿಸಿದ ಮೇಲೆ,ಹೊಸ
ಬಳ ಕಲಾ ಸ೦ಪತ್ತು ತನ್ನದಕ್ಕಿ೦ತ ಹಿರಿಯದೆ೦ಬುದು ಆಕೆಗೆ ಮನದಟ್ಟಾಯಿತು. ಆಗ,
ಮಾಯವಾಗಿದ್ದ ಮನಸ್ಸಿನ ನೆಮ್ಮದಿ ಮರಳಿ ಬ೦ತು. ಹೀಗಾಗಿ, ನಿದ್ದೆ ಬರುವುದು
ಎ೦ದಿಗಿ೦ತ ಸ್ವಲ್ಪ ತಡವಾದರೂ ಹೆಚ್ಚು ಹೊತ್ತೇನೂ ಹಿಡಿಯಲಿಲ್ಲ.
...ಕಮಲಮ್ಮನ ಮನೆಯಾಚೆಗಿನ ಕಾಮಾಕ್ಷಿ ಗ೦ಡ ಬ೦ದೊಡನೆ ಚ೦ಪಾವತಿ
ಯನ್ನು ಮುಕ್ತಕಠದಿ೦ದ ಹೊಗಳಿದಳು.

"ಎ೦.ಎಸ್.ಸುಬ್ಬಲಕ್ಷ್ಮೀನ ಮೀರಿಸ್ತಾರೆ ನೋಡಿ ಬೇಕಾದರೆ."

"ಸರಿ. ಮು೦ದೆ?"
"ಗಾನ ಸರಸ್ವತಿ ಒಲಿದಿದಾಳೇ೦ದ್ರೆ ಅವರಿಗೆ."
"ಸರಿ. ಇನ್ನೊಬ್ಬರನ್ನ ಹೊಗಳೋದರಲ್ಲೇ ಆಯಿತು ನಿನ್ನದೆಲ್ಲಾ. ನೀನೂ
ಒ೦ದೆರಡು ಹಾಡು ಕಲಿ ನೋಡೋಣ."
ನಾರಾಯಣ ತಮಾಷೆಗೆ ಹೀಗೆ ಅ೦ದರೂ ಕಾಮಾಕ್ಷಿಗೆ ದುಃಖ ಬ೦ತು. ಅದಕ್ಕೆ
ಕಾರಣವಿಷ್ಟೆ. ಆಕೆಯ ಕ೦ಠ ಇ೦ಪಾಗಿರಲಿಲ್ಲ.ತವರು ಮನೆಯಲ್ಲಿ ಮದುವೆಗೆ ಮು೦ಚೆ,
ಒ೦ದೆರಡು ಹಾಡನ್ನಾದರೂ ಕಲಿಯಬೇಕೆ೦ದು ಆಕೆ ಬಹಳ ಪ್ರಯತ್ನಪಟ್ವಿದ್ದಳು.ಅದು
ನಗೆಗೀಡಾದ ಪ್ರಯತ್ನ. ಆಗ ತ೦ದೆ ಹೇಳಿದ್ದರು:
"ಹೋಗಲಿ ಬಿಡೇ ಕಾಮೂ. ಹಾಡು ಬರದಿದ್ದರೆ ಅಷ್ಟೇ ಹೋಯ್ತು.
ಯಾವನೇ ಆಗ್ಲಿ, ಇಷ್ಟ ಇದ್ರೆ ಕಟ್ಕೋತಾನೆ: ಇಲ್ಲಿದ್ರೆ ಮುಚ್ಕೊ೦ಡು ಹೊರಟೋ
ಗ್ತಾನೆ."
ನಾರಾಯಣ ತನ್ನನ್ನು ನೋಡಲು ಬ೦ದಾಗ, ರೇಡಿಯೋ ಉದ್ದಕ್ಕೂ ಕಿರಿಚು
ತ್ತಲೇ ಇರುವ೦ತೆ ಕಾಮಾಕ್ಷಿಯ ತ೦ದೆ ಮಾಡಿದರು. 'ನಮ್ಮ ಹಸೂಗೆ ಹಾಡೋದಕ್ಕೂ
ಬರುತ್ತೆ' ಎ೦ದು ಗುಣವಿಶೇಷವನ್ನು ಬಣ್ಣಿಸುವ ಪ್ರಮೇಯ ಬ೦ದಿರಲಿಲ್ಲ. ನಾರಾಯಣ
ನಿಗೆ ಕಾಮಾಕ್ಷಿಯ ಯೌವನ, ಸೌ೦ದರ್ಯ, ಒನಪು ವಯ್ಯಾರ ಬೇಕಾದುವು.
ಗ೦ಡನ ಮನೆಯಲ್ಲಿ ರೇಡಿಯೋ ಇರಲಿಲ್ಲ. ಹೇಳಿಕೊಳ್ಳುವ ಸೌಕರ್ಯಗಳಿರ
ಲಿಲ್ಲ. ನಗರದಲ್ಲಿ ಆತ ಒ೦ಟಿಯಾಗಿದ್ದ. ಅತ್ತೆ ನಾದಿನಿ ಭಾವ ಮ್ಯೆದುನ೦ದಿರ
ಗೊ೦ದಲವಿಲ್ಲದೆ ಕಾಮಾಕ್ಷಿಗೆ ಸದಾ ಕಾಲವೂ ಪತಿಯೊಡನೆ ಏಕಾ೦ತ ದೊರೆಯಿತು.
ಆಕೆಗೂ ನಾರಾಯಣನ ರೂಪು,ಯೌವನ, ಠೀವಿ ಠೇ೦ಕಾರ ಬೇಕಾಗಿದ್ದುವು.
ಆದರೂ ತನಗೆ ಹಾಡಲು ಬರದೆ೦ದು ಗ೦ಡ ಟೀಕಿಸಿದಾಗ ಕಾಮಾಕ್ಷಿಯ ಮನ
ಸ್ಸಿಗೆ ನೋವಾಯಿತು. ಆಕೆ ತಟಕ್ಕನೆ ಮಾತು ನಿಲ್ಲಿಸಿ, ಮೂದೇವಿಯಾಗಿ ಕುಳಿತಳು.
ಮುಖ ಊದಿಕೊ೦ಡು ಕಣ್ಣುಗಳಲ್ಲಿ ಒರತೆಯೊಸರಿತು.
ನಾರಾಯಣ ತಡ ಮಾಡಲಿಲ್ಲ. ಕಾಮಾಕ್ಷಿಯನ್ನೆಳೆದುಕೊ೦ಡ ಅಡುಗೆ ಮನೆಗೆ
ಹೋಗಿ ರಮಿಸಿದ.
"ತಪ್ಪಾಯ್ತು ಕಾಮಿ. ನಿನ್ನ ಹಾಡು ತಗೊ೦ಡು ನಾನೇನು ಮಾಡ್ಲೇ? ನ೦ಗೆ
ನೀನು ಕಣೇ ಬೇಕಾಗಿರೋದು. ಅಯ್ಯೋ ರಾಮ..."
"ಮತ್ತೆ ಯಾಕೆ ಹಾಗ೦ದ್ರಿ?"
"ನನ್ನ ಚಿನ್ನ, ಇನ್ನೊಬ್ಬಳ್ನ ಯಾತಕ್ಕೆ ಹೊಗಳ್ಬೇಕೂ೦ತ ಹಾಗ೦ದೆ."
"ಹೋಗಿ ನೀವು."
"ಹೋಗ್ಲೇನು?"
ಕಾಮಾಕ್ಷಿ ನಾಲಿಗೆ ಹೊರ ಚಾಚಿ ಗ೦ಡನನ್ನು ಅಣಕಿಸಿದಳು. ಗ೦ಡ ಅಣಕಿಸು

ತ್ತಿದ್ದ ಬಾಯಿಗೆ ಬುದ್ಧಿ ಕಲಿಸಿದ. ರಾಜಿಯಾಯಿತು.

ಊಟ ಮುಗಿಸಿ ಸರಸ ಸಲ್ಲಾಪಗಳು ನಡೆದು ಅವರು ನಿದ್ದೆ ಹೋದರು.
...ಎದುರು ಸಾಲಿನ ಮನೆಗಳಲ್ಲಿ ಯಾರಿಗೂ ಎಚ್ಚರವಿರಲಿಲ್ಲ.
...ಮೂಲ ಕಟ್ಟಡದ ಮೇಲು ಮನೆಗಳಲ್ಲಿ ಓದುವ ಹುಡುಗರೂ ಜಯರಾಮು
ಮನೆಯವರೂ ನಿದ್ದೆ ಹೋಗಿದ್ದರು.ಚಂದ್ರಶೇಖರಯ್ಯ ಮಾತ್ರ ಸೆಖೆ ತಡೆಯಲಾರದೆ,
ಪಾಯಿಜಾಮ_ಬನೀನುಗಳನ್ನಷ್ಟೇ ತೊಟ್ಟು,ಹೊರಗೆ ಮಹಡಿಯ ಮೆಟ್ಟಲ ಮೇಲೆ,
ಒಂದಾದ ಮೇಲೋಂದು ಸಿಗರೇಟು ಸೇದುತ್ತ ಕುಳಿತಿದ್ದ. ಸರಪಳಿ ಸಿಗರೇಟುಗಳನ್ನು
ಸುಡುತ್ತಾ ಹಾಗೆ ಕುಳಿತಿದ್ದರೆ, ತಾನು ತುಂಬಾ ಯೋಚನೆಗಳಿಗೇನೂ ಕೊರತೆ ಇರ
ಲಿಲ್ಲ...ಮುಂದಿನ ತಿಂಗಳಲ್ಲಿ ತನಗೆ ದೊರೆಯಬಹುದಾದ ಕಮಿಷನು. ತನ್ನೊಡನೆ
ಸ್ಪರ್ಧಿಸುತ್ತಿದ್ದ ಬೇರೆ ಕಂಪೆನಿಯ ಪ್ರತಿನಿಧಿಗಳು, ತಾನು ದೂರದಿಂದಲೆ ಕಂಡು ಬರಿದೆ
ಬಯಸಿದ್ದ ಇಬ್ಬರು ಮೂವರು ಹುಡುಗಿಯರು..ಕೆಟ್ಟ ಬೇಸಗೆ, ಬೆವರು. ಗಾಳಿಯೇ
ಇಲ್ಲ...ನಿದ್ದೆ ಬರುವುದು ಕಷ್ಟವಾಗಿತ್ತು. ಬಲು ಕಷ್ಟವಾಗಿತ್ತು.
ಕೆಳಗೆ ಉಪಾಧ್ಯಾಯರು ಹೆಂಡತಿ ಮಕ್ಕಳೊಡನೆ ಮಲಗಿದ್ದರು. ಅವರ ತಂಗಿ
ಸುಮಂಗಳೆಗೆ ಮಾತ್ರ ನಿದ್ದೆ ಬಂದಿರಲ್ಲಿಲ. ಜಗಳಾಡಿ ಗಂಡನ ಮನೆಯಂದ ಬಂದಿದ್ದ
ಹುಡುಗಿ. ಭಿನ್ನಾಭಿಪ್ರಾಯಗಳ ಕಾವೆಲ್ಲ ದೀರ್ಘ ಕಾಲದ ವಿರಹದಿಂದ ತಣ್ಣಗಾಗಿತ್ತು.
ಮತ್ತೊಮ್ಮೆ ಗಂಡನ ಸಾವೂಪ್ಯವನ್ನು ಆಕೆ ಬಯಸುತ್ತಿದ್ದಳು. ಆ ಗಂಡ ಅನಾಗರಿಕ
ನಂತೆ ತುಂಬಾ ಒರಟಾಗಿ ವರ್ತಿಸುತ್ತಿದ್ದ ನಿಜ. ಆದರೆ ಆ ಒರಟುತನವೇ ಸುಖ
ಎನ್ನುತ್ತಿತ್ತು ಆಕೆಯ ದೇಹ. ದೇಹದ ಜತೆಯಲ್ಲಿ ಮನಸ್ಸೂ ಸೋಲನ್ನೋಪ್ಪಿ
ಕೊಂಡಿತ್ತು.ಗಂಡನ ಮನೆಯವರಂತೂ ಬಿಗಿಯಾಗಿದ್ದರು. ಅಂದ ಮೇಲೆ ತಾನೊ
ಬ್ಬಳೇ ಹೋಗುವಂತಿರಲಿಲ್ಲ. ಅಣ್ಣ ಕರೆದುಕೊಂಡು ಹೋಗಬೇಕು; ಗಂಡನ ವನೆ
ಯನ್ನು ಹೊಕ್ಕು ಅಲ್ಲಿ ಸಂಧಾನ ನಡೆಸಬೇಕು. ಅದು ಬೇಸಗೆಯ ರಜದಲ್ಲಿ ಮಾತ್ರ
ಸಾಧ್ಯ.
ಆ ದಿನಗಳು ದೂರವಿರಲಿಲ್ಲ. ಆದರಿ ರಜೆಯ ಆರಂಭ ಸಮಿಪಿಸಿದಂತೆ,
ಹಗಲು ರಾತ್ರೆಗಳೆಲ್ಲ ಹೆಚ್ಚು ದೀರ್ಘವಾದಂತೆ ಸುಮಂಗಳೆಗೆ ತೋರಿತು.
...ಪಕ್ಕದ ಮನೆಯಲ್ಲಿ ಇಬ್ಬರು ಹುಡುಗರೂ ಶುಭ್ರವಾಗಿ ಬೆಳಕು ಕೊಡುತ್ತಿದ್ದ
ಕಂದೀಲು ಉರಿಸಿ, ಕೆಲವೇ ದಿನಗಳಲ್ಲಿ ಶುರುವಾಗಲಿದ್ದ ಪರೀಕ್ಷೆಗಾಗಿ ಸಿದ್ಧತೆ
ನಡೆಸಿದ್ದರು.
ಆ ಮನೆಯ ಎದುರು ಕಡೆಯಲ್ಲಿ ರಾಜಮ್ಮ ತನ್ನ ಮಕ್ಕಳೊಡನೆ ನಿದ್ದೆ
ಹೋಗಿದ್ದಳು.
ಅವರ ಬಲಭಾಗದಲ್ಲೆ ಮೊದಲ ಮನೆ ರಂಗಸ್ವಾಮಿಯದು. ಆತನ ಹೆಂಡತಿ
ಮಕ್ಕಳಿಗೆ ಉಣಬಡಿಸಿ ಮಲಗಿಸಿದಳು. ತಾನು ಮುಟ್ಟಲಿಲ್ಲ. ಹಾಗೆಯೇ ಚಾಪೆಯ
ಮೇಲೆ ಭಾವಣಿ ನೋಡುತ್ತ ಮಲಗಿಕೊಂಡಳು.
ಏಟು ತಿಂದು ಮೈ ಕೈ ನೋವಿನಿಂದ ಮಗ್ಗುಲು ಹೊರಳುವುದೂ ಕಷ್ಟ ಸಾಧ್ಯ
ವಾಗಿತ್ತು. ಕಣ್ಣುಗಳು ಉರಿಯುತ್ತಿದ್ದುವು. ಉಸಿರು ಬಿಸಿಯಾಗಿತ್ತು.
"ಹೀಗಾಯಿತಲ್ಲಾ ನನ್ನ ಗತಿ," ಎಂದು ಮನಸ್ಸಿನಲ್ಲೆ ಗೋಳಾಡುತ್ತ ಆಕೆ
ಹೊತ್ತು ಕಳೆದಳು.

೧೨

ಪರೀಕ್ಷೆ ಮುಗಿದು ಮಹಡಿಯ ಮೇಲಿನ ಹುಡುಗರು ಕೊಠಡಿ ತೆರವು ಮಾಡಿ
ಊರಿಗೆ ಹೋದರು. ಕೆಳಗಿನ ಮನೆಯ ತಾಯಿ ಮುಂದೆಯೂ ಮನೆ ತನಗೆ ಬೇಕೆಂದು
ಹೇಳಿ,ಬೀಗ ತಗಲಿಸಿ, ಮಕ್ಕಳೊಡನೆ ಊರಿಗೆ ತೆರಳಿದಳು.
ರಂಗಮ್ಮ, 'ಮನೆ ಬಾಡಿಗೆಗೆ ಇದೆ' ಬೋರ್ಡನ್ನು ಹೊರಕ್ಕೆ ತೆಗೆದರು. ಸೊಗ
ಸಾದೊಂದು ಬೋರ್ಡು ಬರೆದುಕೊಡುವೆನೆಂದು ಶಂಕರನಾರಾಯಣಯ್ಯ ಹಿಂದೆ ಹೇಳಿ
ದ್ಧನ್ನು ಅವರು ಮರೆತಿರಲಿಲ್ಲ. ಅವಕಾಶ ಒದಗಿದಾಗ ಆ ವಿಷಯ ಪ್ರಸ್ತಾಪಿಸಿದರಾಯಿ
ತೆಂದು ಅವರು ಅವರೆಗೂ ಸುಮ್ಮನಿದ್ದರು.
ಶಂಕರನಾರಾಯಣಯ್ಯನಿನ್ನೂ ಮನೆಯಲ್ಲೇ ಎದ್ದ. ಬೆಳಗಿನ ಹೊತ್ತು.
ರಂಗಮ್ಮ ರಟ್ಟಿನ ಬೋರ್ಡಿನೊಡನೆ ಅಲ್ಲಿಗೆ ಬಂದರು.
"ಏನಪ್ಪಾ, ಇದ್ದೀರಾ?"
"ಬನ್ನಿ ರಂಗಮ್ನೋರೆ,"
ರಂಗಮ್ಮನವರ ಕೈಲಿದ್ದುದನ್ನು ನೋಡಿ ಅವರು ಬಂದುದರ ಉದ್ದೇಶ ಶಂಕರ
ನಾರಾಯಣಯ್ಯನಿಗೆ ಅರ್ಥವಾಯಿತು.
"ಆ ದಿವಸ ಅದೇನೊ ಬರ್ಕೊಡ್ತೀನೀಂತ ಹೇಳಿದ್ರಿ."
"ಹೌದಲ್ಲ, ಮರ್ತೇಹೋಗಿತ್ತು. ಇಲ್ಕೊಡಿ. ಬರಕೊಡ್ತೀನಿ."
"ಮನೆ ಖಾಲಿಯಾಗ್ಬಿಟ್ಟಿದೆ. ಸದ್ಯಃ ಇದನ್ನೇ ತೂಗಹಾಕ್ತೀನಿ. ಬೇಗ್ನೆ ಬೇರೆ
ಬರ್ಕೊಟ್ಬಿಡಿ."
"ಖಾಲಿಯಾಯ್ತೇನು_ಯಾವುದು?"
"ಅದೇ ಮೇಲ್ಗಡೇದು, ಹುಡುಗರು ಓದ್ತಾ ಇರ್ಲಿಲ್ವೆ?"
"ಓ ಅದಾ?"
"ಯಾವಾಗ ಬರೀತೀರಪ್ಪಾ?"
"ನಾಳೇನೇ."

ರಂಗಮ್ಮ ಹೊರಹೋಗಿ, ಸದ್ಯಕ್ಕೆ ಅದೇ ಇರಲೆಂದು,ಹಳೆಯ ಬೋರ್ಡನ್ನೇ

ತೂಗ ಹಾಕಿದರು. ಬೋರ್ಡು ನೋಡಿದೊಡನೆಯೇ ಯಾರಾದರೂ ಈ ಸಲ ಬರ
ಬಹುದೆಂದು ರಂಗಮ್ಮ ನಂಬಿರಲಿಲ್ಲ. ಯಾಕೆಂದರೆ ಬಾಡಿಗೆಗಿದ್ದುದು ಅನುಕೂಲಗಳಿದ್ದ
ಮನೆಯಲ್ಲ, ಬರಿಯ ಕೊಠಡಿ ಮನೆ . ಮುಂದೆ ಶಾಲೆಗಳು ಆರಂಭವಾಗಿ ಬೇರೆ
ಹುಡುಗರು ಬರುವವರೆಗೂ ಹಾಗೆಯೇ ತೆರವಾಗಿ ಉಳಿದರೂ ಉಳಿಯೆತೇ.
"ರಜಾ ತಗೋಂಡು ಇಲ್ಲೇ ಇದ್ಬಿಟು ಬೋಡು ಬರಕೋಡೀಂದ್ರೆ,"
___ಚಂಪಾ ಗಂಡನಿಗೆ ಹೇಳಿದಳು .
"ಹೂಂ, ಹೌದು. ಬೇರೇನೂ ಕೆಲಸ ಇಲ್ಲ ನಂಗೆ,"ಎಂದು ಆತ ನಟನೆಯ
ಸಿಡುಕನ್ನು ತೋರಿದ.
ಆದರೆ ಆ ಸಂಜೆ ಮನೆಗೆ ಬಂದಾಗ, ಕರಿಯ ಬಣ್ಣ ಬಳಿದಿದ್ದ ಒಂದು ಡಬ್ಬದ
ತುಂಡನ್ನೂ ನುಣುಪಾಗಿದ್ದೊಂದು ಪುಟ್ಟ ಹಲಿಗೆಯನ್ನೂ ಮನೆಗೆ ತಂದ.
"ಚಿಕ್ಕದು ಯಾರಿಗೆ?"
ಎಂದು ಚಂಪಾವತಿ ಕಳಿದಳು .
"ಆ ಚಂದ್ರಶೆಖರಯ್ಯನಿಗೆ ಹೆಸರು ಬರ್ಕೊಡ್ತೀನೀಂತ ಹೇಳಿದ್ದೆ."
"ಅದೂ ಬಿಟ್ಟೀನೊ?"
"ಇದು ಲಂಚ. ವಿಮೆಯ ವಿಷಯ ನನ್ನ ಹತ್ತಿರ ಯಾವತ್ತೂ ಪ್ರಸ್ತಾಪ
ಮಾಡೋದಿಲ್ಲಾಂತ ಆತ ಮಾತು ಕೊಟ್ಟದ್ದಕ್ಕೆ!"
"ಸರಿ! ಸರಿ!"
ಮರುದಿನ ಬೆಳಗ್ಗೆ ಬ್ರಷ್ ಎಣ್ಣೆ- ಬಣ್ಣಗಳು ಉಪಯೋಗಕ್ಕೆ ಸಿದ್ಧವಾದುವು.
ಶಂಕರನಾರಾಯಣಯ್ಯ ಕರಿಯ ಡಬ್ಬದ ಮೇಲೆ ಬರೆದ:
ಮನೆ ಬಾಡಿಗೆಗೆ ಇದೆ
ರಂಗಮ್ಮ ಬಂದು ನೋಡಿಕೊಂಡು ಹೋದರು.
"ಇನ್ನೂ ಒಣಗ್ಬೇಕು. ನಾಳೆ ತಗೊಂಡು ಹೋಗಿ", ಇಂದು 'ಪೇಂಟರ್'
ಶಂಕರನಾರಾಯಣಯ್ಯ ಹೇಳಿದ.
ಆತ ಅಷ್ಟು ಬರೆದಿಟ್ಟುದನ್ನು ಆ ದಿನವೆಲ್ಲ ವಠಾರದ ಅವರಿವರು ಬಂದು ನೋಡು
ತ್ತಲೇ ಇದ್ದರು.
ಮರುದಿನ 'ಮನೆ ಬಾಡಿಗೆಗೆ ಇದೆ' ಎಂಬುದರೆ ಕೆಳಗೆ 'ಒಳಗಡೆ ವಿಚಾರಿಸಿ'
ಎಂದು ಸಣ್ಣ ಅಕ್ಷರದಲ್ಲಿ ಶಂಕರನಾರಾಯಣಯ್ಯ ಬರೆದ.
"ರಂಗಮ್ಮನವರು ವಿಚಾರಿಸೀಂತೆ ಬರೀಬಾರದಾಗೆತ್ತೆ?
__ಚಂಪಾವತಿ ಗಂಡನನ್ನು ಲೇವಡಿ ಮಾಲೆತ್ನಿಸುತ್ತ ಹೇಳಿದಳು.
ಆ ಸಂಜೆ ಶಂಕರನಾರಾಯಣಯ್ಯ ಮನೆಗೆ ಬಂದ ಮೇಲೆ ಹೊಸ ಬೋರ್ಡು

ವಠಾರದ ಹೊರಗಿನ ಗೋಡೆಯನ್ನು ಅಲಂಕರಿಸಿತು. ಬೆನ್ನ ಹಿಂದೆ ಇಲ್ಲವೆ ಎದೆಗೆ
ಅಡ್ಡವಾಗಿ ಕೈ ಕಟ್ಟಿ ನಿಂತಿದ್ದ ವಠಾರದ ಹುಡುಗರ ಎದುರಲ್ಲಿ ಸ್ವತ: ಶಂಕರನಾರಾ

ಯಣಯ್ಯನೇ ಬೋರ್ಡನ್ನು ಅನಾವರಣಾ ಮಾಡಿದ.
"ಹಲಿಗೆಯಾದರೆ ಮಳೇಲಿ ನೆನೆದು ಹೊಗುತ್ತೆ. ಇದು ಡಬ್ಬ. ಮಿಸು
ಕೋದಿಲ್ಲ" ಎಂದು ಶಂಕರನಾರಾಯಣಯ್ಯ ವಿವರಿಸಿದ.
ರಂಗಮ್ಮನ ಸಂತೋ‌‌ಷಕ್ಕೆ ಪಾರವಿರಲಿಲ್ಲ. ಬಾಲ್ಯದಲ್ಲಿ ಅವರ ಮನೆಯಲ್ಲಿ
ಒಮ್ಮೆ ಹಸು ಈದಾಗ ಅದಷ್ಟೆ ಸಂತೋಷ ಇಲ್ಲಿ ಅವರಿಗಾಯಿತು.
ಹುಡುಗರೆಲ್ಲ ಚೆದರಿದ ಮೇಲೆ ಜಯರಾಮು ಕೆಳಗೆ ಬಂದವನು ಬೋರ್ಡನ್ನು
ನೋಡಿದ. ಅಕ್ಷರಗಳು ಮುದ್ದಾಗಿದ್ದುವು.
ಮರುದಿನ ಚಂದ್ರಶೇಖರಯ್ಯನ ಹೆಸರು_ಹಲಿಗೆ ಸಿದ್ದವಾಯಿತು .ಇಂಗ್ಲಿಷಿನಲ್ಲಿ
"ಚಂದರ್ ಶೇಖರ್" ಎಂದು ಶಂಕರನಾರಾಯಣಯ್ಯ ಬರೆದಿದ್ದ . ಅದು ಚಂದ್ರ
ಶೇಖರಯ್ಯನ ಕಿಟಿಕಿಯ ಪಕ್ಕದಲ್ಲಿ ವಿರಾಜಮಾನವಾಯಿತು.
ಸಂಜೆ ತಡವಾಗಿ ಮನೆಗೆ ಬಂದ ಜಯರಾಮು ಹೊಸ ಬೋರ್ಡನ್ನೂ ನೋಡಿದ.
ಆ ಅಕ್ಷರಗಳೂ ಸೊಗಸಾಗಿದ್ದುವು.
ತಾನು ಪೇಂಟರ್ ಶಂಕರನಾರಾಯಣಯ್ಯನನ್ನು ಮಾತನಾಡಿಸಲೇಬೇಕೆಂದು
ಜಯರಾಮು ತೀರ್ಮಾನಿಸಿದ.
ಅದಕ್ಕೆ ಮತ್ತೊಂದು ದಿನ ಕಳೆಯಬೇಕಾಯಿತು.ಆ ಸಂಜೆ ಜಯರಾಮು
ಗೇಟಿನ ಬಳಿ ನಿಂತು ಆತ ಬರುವುದನ್ನು ಇದಿರುನೋಡಿದ. ಸವೀಪ ಬರುತ್ತಲೆ
ಜಯರಾಮು ಕೈಮುಗಿದ.
"ನಮಸ್ಕಾರ."
"ನಮಸ್ಕಾರ."
ತಾನು ಮಾತನಾಡಿಸಿದ್ದನ್ನು ಕಂಡು ಶಂಕರನಾರಾಯಣಯ್ಯನಿಗೆ ಆಶ್ಚರ್ಯ
ವಾಗಬಹುದು ಎಂದುಕೊಂಡಿದ್ದ ಜಯರಾಮು. ಆದರೆ ಆತ ಹಳೆಯ ಸ್ನೇಹಿತರಿಗೆ
ಮರುವಂದನೆ ಮಾಡುವ ಹಾಗೆ ಮುಗುಳ್ನಕ್ಕ.
"ಹೊಸ ಪರಿಚಯ ," ಎಂದ ಜಯರಾಮು, ಸ್ವಲ್ಪ ಸಂಕೋಚದಿಂದಲೇ.
"ನೀವು ಜಯರಾಮು ಅಲ್ವೆ?"
"ಯಾರು ಹೇಳಿದ್ರು?"
"ಇಷ್ಟು ದಿವಸದಿಂದ ನೋಡ್ತಾ ಇದೀನಿ. ನನಗೆ ಆಷ್ಟೊ ಗೊತ್ತಾಗಲ್ವೇನ್ರಿ?....
ನೀವು ಕತೆ ಗಿತೆ ಬರೀತೀರಂತೆ."
"ಓ! ಇಲ್ಲಪ್ಪ!"
"ಸುಳ್ಳು!"
ಶಂಕರನಾರಾಯಣ್ಯನಿಗೆ ಇಷ್ಟೆಲ್ಲ ಹೇಗೆ ತಿಳಿಯಿತೆಂದು ಜಯರಾಮುಗೆ
ಆಶ್ಚರ್ಯ. ತನ್ನ ತಂಗಿ ಹೇಳಿರಬಹುದೆಂಬ ಸಂದೇಹ ಮೂಡಿತು. ಆದರೆ ಆ

ಸಂದೇಹ ಸರಿ ಎಂದು ಭಾವಿಸಲು ಮನಸ್ಸು ಒಪ್ಪಲಿಲ್ಲ.

ವಾಸ್ತವವಾಗಿ ಇಷ್ಟೆಲ್ಲವನ್ನೂ ರಾಧೆ ಚಂಪಾವತಿಗೆ ಹೇಳಿದ್ದಳು; ಚಂಪಾವತಿ
ಗಂಡನಿಗೆ ವರದಿಯೊಪ್ಪಿಸಿದ್ದಳು.
ನೇರವಾಗಿ ಮನೆಗೆ ಹೋಗುವ ಆತುರದಲ್ಲಿದ್ದರೂ, ಶಂಕರನಾರಾಯಣಯ್ಯ
ಒಂದು ಕ್ಷಣ ತಡೆದು ನಿಂತ.
"ಏನು, ಇಲ್ಲಿ ನಿಂತಿದ್ರಿ?" ಎಂದು ಆತ ಜಯರಾಮುವನ್ನು ಕೇಳಿದ. ಯಾಕೆ
ನಿಂತುದು ಎಂದು ಊಹಿಸುವಷ್ಟು ದಕ್ಷ ಮನಃಶಾಸ್ತ್ರಜ್ಞ ಶಂಕರನಾರಾಯಣಯ್ಯ
ನಾಗಿರಲಿಲ್ಲ. ಯಾಕೆಂಬುದನ್ನು ಜಯರಾಮುವೂ ಹೇಳುವಂತಿರಲಿಲ್ಲ.
"ಹೀಗೇ"
ಜಯರಾಮುವಿನ ದೃಷ್ಟಿ ಬೋರ್ಡುಗಳತ್ತ ಸರಿಯಿತು. ಶಂಕರನಾರಾಯಣ
ಯ್ಯನೂ ಅತ್ತ ನೋಡಿದ.
"ತುಂಬಾ ಚೆನ್ನಾಗಿವೆ. ನೀವು ಚೆನ್ನಾಗಿ ಬರೀತೀರಿ."
"ಈ ಬೋರ್ಡುಗಳೆ? ಅಯ್ಯೋ!"
ತನ್ನ ಕೃತಿಯ ಬಗೆಗೇ ಆತನಿಗಿದ್ದ ತಾತ್ಸಾರ ಜಯರಾಮುವನ್ನು ಚಕಿತ
ಗೊಳಿಸಿತು.
"ನೀವು ಬರೆದಿರೋ ಚಿತ್ರಗಳನ್ನು ನಾನು ನೋಡಿಲ್ಲ"
"ಚಿತ್ರಗಳು? ನಾನು ಕಲಾವಿದ ಅಂತ ತಿಳಕೊಂಡ್ರೇನು? ಹಾಗೇನಾದ್ರೂ
ನಾನು ಅಂದೆ ಅಂದ್ರೆ, ನಿಜವಾದ ಕಲಾವಿದರು ತಮಗೆ ಮಾನಹಾನಿಯಾಯ್ತೂಂತ ನನ್ನ
ಮೇಲೆ ಮೊಕದ್ದಮೆ ಹೂಡಬಹುದು!"
ಆ ಸ್ವರದಲ್ಲಿ ವ್ಯಂಗ್ಯವಿತ್ತು, ನೋವಿತ್ತು. ಆ ನಗೆ ಮಾತಿನ ತೆರೆಯ ಹಿಂದೆ
ಸಂತೋಷವನ್ನು ಜಯರಾಮು ಕಾಣಲಿಲ್ಲ. ತನ್ನೆದರು ನಿಂತಿದ್ದ ವ್ಯಕ್ತಿಯ ರಹಸ್ಯ
ವನ್ನು ಭೇದಿಸಬಯಸುವವನಂತೆ ಜಯರಾಮು ಆತನನ್ನೇ ನೆಟ್ಟ ದೃಷ್ಟಿಯಿಂದ
ನೋಡಿದ.
"ನಾನು ವರ್ಣಚಿತ್ರ ತೈಲಚಿತ್ರ ಬರೆಯೋಲ್ಲ ಜಯರಾಮು. ಚಿತ್ರ ಬರೆದು
ಬದುಕೋಕೆ ಆಗೋದಿಲ್ಲ. ನಾನು ಬರೆಯೋದು ಸಿನಿಮಾ ಪೋಸ್ಟರು. 'ಶನಿ
ಮಹಾತ್ಮ್ಯೆ'ಯ ದೊಡ್ಡ ಬೋರ್ಡು ನೋಡಿದೀರೋ ಇಲ್ವೊ? ಆನಂದರಾವ್
ಸರ್ಕಲಿನಲ್ಲೂ ಮೆಜೆಸ್ಟಿಕಿನಲ್ಲೂ ಕಟ್ಟಿ ನಿಲ್ಲಿಸಿದ್ದಾರೆ. ಆ ದೇವರ ಚಿತ್ರ ಬರೆದೋನು
ನಾನೇ. ಇನ್ನೊಂದನ್ನೂ ನೀವು ನೋಡಿರಬೇಕು. 'ಜಣಕ್ ಜಣಕಾಂತ-ಮೈಕೈ
ಬಿಟ್ಕೊಂಡು ಕುಣಿಯೋದು. ಅದನ್ನ ಬರೆದೋನೂ ನಾನೇ."
ಏನನ್ನೋ ಮಾತನಾಡಬೇಕೆಂದು ಜಯರಾಮು ಯತ್ನಿಸಿದ. ಆದರೆ ನಾಲಿಗೆ
ಗಂಟಲು ಆರಿಹೋಗಿದ್ದುವು.
ತನ್ನೊಳಗೆ ಇನ್ನೂ ಹಸುರಾಗಿಯೇ ಇದ್ದ ಗಾಯವೊಂದನ್ನು ಕೆದಕಿದಂತಾಗಿ

ಶಂಕರನಾರಾಯಣಯ್ಯ ಅಷ್ಟು ಮಾತನಾಡಿದ್ದ. ಅದಕ್ಕೆ ಎಂತಹ ಪ್ರತ್ಯುತ್ತರ ಬಂದೀ

ತೆಂಬ ಯೋಚನೆ ಅವನಿಗಿರಲಿಲ್ಲ. ಪ್ರತ್ಯುತ್ತರವನ್ನಾತ ಅಪೇಕ್ಷಿಸಲೂ ಇಲ್ಲ.
"ಬರ್ತೀನಿ" ಎಂದಷ್ಟೇ ಹೇಳಿ ಆತ ಹೆಬ್ಬಾಗಿಲನ್ನು ದಾಟಿ ನಡು ಹಾದಿಯಲ್ಲಿ
ಸಾಗಿ ಓಣಿಯೊಳಕ್ಕೆ ಕಾಲಿಟ್ಟ.
ಪಾದಗಳು ಬೇರುಬಿಟ್ಟು ನೆಲದೊಳಗೆ ಇಳಿದಿದ್ದುವೇನೋ ಎಂಬಂತೆ ಶಿಲಾ
ಪ್ರತಿಮೆಯಾಗಿ ಸ್ವಲ್ಪ ಹೊತ್ತು ಜಯರಾಮು ನಿಂತ.
ಶಂಕರನಾರಾಯಣಯ್ಯನೊಡನೆ ತನ್ನ ಅಣ್ಣ ಮಾತನಾಡುತ್ತಿದ್ದುದನ್ನು ಮೇಲಿ
ನಿಂದಲೆ ಕಂಡಿದ್ದ ರಾಧಾ ಕರೆದಳು:
"ಅಣ್ಣ, ಬಾರೋ...ಬಾ ಅಣ್ಣ."
ಅವರಿಬ್ಬರು ಅದೇನೇನು ಮಾತನಾಡಿದರೆಂದು ತಿಳಿಯುವ ಕುತೂಹಲದಿಂದ
ರಾಧೆಗೆ ನಿಂತಲ್ಲಿ ನಿಲ್ಲಲಾಗುತ್ತಿರಲಿಲ್ಲ.
ಇನ್ನೇನು ಬರುವ ಹೊತ್ತು, ಬಾಗಿಲು ಮುಚ್ಚಬೇಕು, ಎಂದು ಚಂಪಾ ಯೋಚಿ
ಸುತ್ತಿದ್ದಾಗಲೇ ಶಂಕರನಾರಾಯಣಯ್ಯ ಒಳಗೆ ಬಂದುಬಿಟ್ಟು. ಪುಟ್ಟ ಮಗು ತಂದೆಗೆ
ಸ್ವಾಗತ ಬಯಸಿತು. ಅದನ್ನು ಎತ್ತಿಕೊಂಡು ಆತ ಅಡುಗೆಮನೆಯೊಳಕ್ಕೆ ನುಗ್ಗಿದ.
ಒಮ್ಮೆ ಬೀರಿದ ನೋಟದಿಂದಲೇ ಚಂಪಾವತಿ ತಿಳಿದುಕೊಂಡಳು: ಗಂಡ ಎಂದಿ
ನಂತಿರಲಿಲ್ಲ! ಆತನ ಮನಸ್ಸು ಉದ್ವಿಗ್ನವಾಗಿತ್ತೆಂಬುದನ್ನು ಮುಖದ ಬಣ್ಣ ತೋರಿ
ಸುತ್ತಿತ್ತು.
ಊದುಕೊಳವೆಯನ್ನೆತ್ತಿಕೊಂಡು ಸೌದೆ ತುಂಡುಗಳೆಡೆಗೆ ಚಂಪಾವತಿ "ಫ಼ೂ...
ಫ಼ೂ..." ಎಂದಳು. ನಡುವೆ ಮುಖ ತಿರುಗಿಸಿ ಗಂಡನನ್ನು ನೋಡಿ ಕೇಳಿದಳು:
"ಏನಾಯ್ತು?"
"ಏನಿಲ್ಲ. ನಾನು ಬರೆದಿರೋ ಕಲಾಕೃತಿಗಳ ವಿಷಯ ಆ ಹುಡುಗ ಜಯ
ರಾಮು ಕೇಳ್ದ!"
"ಯಾರು ರಾಧೆ ಅಣ್ಣನೇ?"
"ಹೂಂ. ಮಡದಿ ಮೇಲಿರೋನು."
"ಸರಿ. ನಿವೇನಂದಿರಿ?"
"ಶನಿಮಹಾತ್ಮ್ಯೆ ದೇವರ ಚಿತ್ರ ನಾನು ಬರೆದದ್ದು ಅಂದ!"
ಚಂಪಾ ಮಾತನಾಡಲಿಲ್ಲ. ತಾನು ದೊಡ್ಡ ಕಲಾವಿದನಾಗಬೇಕೆಂದು ಶಂಕರ
ನಾರಾಯಣಯ್ಯ ಹಿಂದೆ ಕನಸು ಕಂಡುದಿತ್ತು. ಆದರೆ ಕಲಾವಿದನಾಗಿ ಈ ಪ್ರಪಂಚ
ದಲ್ಲಿ ಬಾಳ್ವೆ ನಡೆಸುವುದು ಕಷ್ಟಸಾಧ್ಯವೆಂಬುದು ಆತನಿಗೆ ಮನವರಿಕೆಯಾಗಲು ಹೆಚ್ಚು
ಕಾಲ ಹಿಡಿದಿರಲಿಲ್ಲ. ಕಹಿ ಮನಸ್ಸು ಮಾಡಿ ಸಿಕ್ಕವರನ್ನೆಲ್ಲ ನಿಂದಿಸುತ್ತ ಕುಳಿತುಕೊಳ್ಳದೆ,
ಶಂಕರನಾರಾಯಣಯ್ಯ ವಾಸ್ತವವಾದಿಯಾಗಿ ಸಿನಿಮಾ ಪೋಸ್ಟರುಗಳ ಚಿತ್ರಕಾರನಾದ,

ಅವನ ಜತೆಯಲ್ಲಿ ಬೇರೆ ಇಬ್ಬರು ದುಡಿಯುತ್ತಿದ್ದರು. ಅವರೆಲ್ಲಿ ಏನು ಚಿತ್ರ ಬರೆದರೂ
ಕೆಳಗೆ ಹಾಕುತ್ತಿದ್ದ ಸಹಿ ಒಂದೇ- ರೂಪ್ ಆರ್ಟ್ಸ್. ಆ ಸಂಸ್ಥೆಯ ಒಡೆಯ ಚಿತ್ರಕಾರ
ನಾಗಿರಲಿಲ್ಲ. ಆದರೆ ಆತ ಸಮರ್ಥನಾದ ಕೊಳ್ಳುವ-ಮಾರುವ, ಮಾರಾಟವನ್ನೇ
ರ್ಪಡಿಸುವ ಯುವಕನಾಗಿದ್ದ. ಅವನ ಸ್ವಂತದ್ದೇ ಆದ ಜಾಹೀರಾತು ಸಂಸ್ಥೆಯೊಂದಿತ್ತು.
ಮೂರು ವರ್ಷಗಳ ಉದ್ಯಮದ ಬಳಿಕ ನಾಲ್ಕು ಕಾಸು ಸುಲಭವಾಗಿ ಆತನ ಕೈಯಲ್ಲಿ
ಓಡಾಡುವಂತಾಗಿತ್ತು. ಆ ಸಂಸ್ಥೆಯ ಚಲಿಸುವ ಒಂದು ಯಂತ್ರ ಶಂಕರನಾರಾಯ
ಣಯ್ಯ. ಆ ಕೆಲಸ ಎಷ್ಟೋ ವೇಳೆ ನೀರಸವಾಗಿ ಆತನಿಗೆ ತೋರಿದರೊ, ಆ ಆವರಣ
ದೊಳಗೇ ಒಂದಿಷ್ಟು ರಸಿಕತೆಯನ್ನು ತುಂಬಲೆತ್ನಿಸುತ್ತ, ಕಲೆಯನ್ನು ಹೊಟ್ಟೆ ಹೊರೆ
ಯುವ ಸಾಧನವಾಗಿ ಬಳಸಿ ಆತ ಕಾಲ ಕಳೆಯುತ್ತಿದ್ದ.
ಹೀಗಿದ್ದರೂ ಆಗೊಮ್ಮೆ ಈಗೊಮ್ಮೆ ಕೈಗೊಡದ ಬಯಕೆಗಳು ಕಣ್ಣು ತೆರೆದು
ಆತನನ್ನುಮಾತನಾಡಿಸುತ್ತಿದ್ದುವು.
ಆಗ ಹೇಗೆ ವರ್ತಿಸಬೇಕೆಂಬುದು ಚಂಪಾವತಿಗೆ ಗೊತ್ತಿತ್ತು.
ಅಂತಹದೇ ಸನ್ನಿವೇಶವಾದ ಈ ಸಂಜೆ...
ಚಂಪಾ ಮೆಲುದನಿಯಲ್ಲಿ ಕೇಳಿದಳು:
"ಸೌತೆಕಾಯಿ ಇದೆ. ಏನು ಮಾಡ್ಲಿ?"
"ಏನಾದರು ಮಾಡೇ."
"ಕೋಸಂಬರಿ ಮಾಡ್ಲೇನು?"
"ಹೂಂ."
ಒಲೆಯ ಎದುರು ಮಗುವನ್ನೆತ್ತಿಕೊಂಡು ಗೋಡೆಗೊರಗಿ ಕುಳಿತಿದ್ದ ಗಂಡಸಿನತ್ತ
ಸರಿದಳು ಚಂಪಾ.
"ಎಷ್ಟೊಂದು ಮುದ್ದಿಸೋದು ಮಗೂನ. ಇಲ್ಕೊಡಿ!"
ಮಗುವನ್ನೆತ್ತಿಕೊಂಡು ಆಕೆ ಬದಿಗೆ ಸರಿದಳು. ಬಾಹುಗಳಿಂದ ಗಂಡನ ಕೊರ
ಳನ್ನು ಬಳಸಿ ಮುಖಕ್ಕೆ ಮುತ್ತು ಕೊಟ್ಟಳು- ಮತ್ತೊಂದು.
"ನನ್ನ ದೇವರಿಗೆ ನೋವಾಯ್ತಲ್ಲ- ಅದಕ್ಕೆ."
ತನ್ನ ತೋಳಿನಿಂದ ಆಕೆಯನ್ನು ಶಂಕರನಾರಾಯಣಯ್ಯ ಆಧರಿಸಿದ. ಉಳಿದು
ದೆಲ್ಲ ಆತನಿಗೆ ಮರೆತು ಹೋಯಿತು.
"ಅಯ್ಯೋ! ಅದೇನೊ ಸದ್ದಾಯ್ತು. ಯಾರು ಬಂದರೊ?"
-ಎಂದು ಚಂಪಾ ಗಡಬಡಿಸಿ ಎದ್ದು ಹೊರಬಂದಳು. ಒಳಗೆ ಕಾಲಿರಿಸಿದ್ದ
ಅಹಲ್ಯಾ ಸರಕ್ಕನೆ ಹಿಂತಿರುಗಿ ಹೋಗುತ್ತಿದ್ದುದು ಕಾಣಿಸಿತು.
ಕರೆದು ನಿಲ್ಲಿಸಬೇಕೆಂದು ಆಕೆಯ ಹೆಸರು ನಾಲಿಗೆಯ ತುದಿಗೆ ಬಂದರೂ ಚಂಪಾ
ತನ್ನನ್ನು ತಾನೇ ತಡೆದಳು.
ಒಳಕ್ಕೆ ಹಿಂತಿರುಗಿದ ಹೆಂಡತಿಯನ್ನು ಶಂಕರನಾರಾಯಣಯ್ಯ ಕೇಳಿದ:
"ಯಾರು ಚಂಪಾ?"
"ಅಹಲ್ಯಾ ಕಣ್ರೀ, ನೋಡಿದಳೋ ಏನೋ?"
"ಏನನ್ನ?"
"ನಾಚಿಕೆ ಇಲ್ಲ ನಿಮಗೆ..."
"ನಿನಗಿದೆ, ಅಲ್ಲ?"
"ಹೋಗ್ರಿ."
"ನೋಡಲಿ ಬಿಡು. ಕಲಿತ್ಕೋತಾಳೆ. ಹಾಡು ಹ್ಯಾಗೂ ಹೇಳಿಕೊಡ್ತಿದೀಯಾ.
ಇದನ್ನೂ-"
"ಸಾಕು, ಥೂ!"
ಒಲೆಯ ಉರಿ ಮತ್ತೊಮ್ಮೆ ಆರಿ ಹೋಗಿತ್ತು. ಚಂಪಾ ಊದುಕೊಳವೆಯನ್ನೆತ್ತಿ
ಕೊಂಡಳು. ಶಂಕರನಾರಾಯಣಯ್ಯ ಸೌತೆಕಾಯಿ ಹೆಚ್ಚತೊಡಗಿದ
...ಹೊರಗೆ ಹೆಸರು-ಹಲಿಗೆ ಗೋಡೆಗೆ ತಗಲಿ ತೂಗುತ್ತಿತ್ತು.
'ಚಂದರ್ ಶೇಖರ್.'
ಚಂದ್ರಶೇಖರಯ್ಯನೆಂದುಕೊಂಡ:
'ಒಳ್ಳೇ ಶಂಕರನಾರಾಯಣಯ್ಯ. ಹೆಸರು ಹಲಿಗೆ ಬರಕೊಡೀಂತ ತಮಾಷೆಗೆ
ಅಂದಿದ್ರೆ ಬರೆದೇ ಬಿಟ್ಟಿದ್ದಾನೆ!.
ಮೋಜು. ರಂಗಮ್ಮನ ವಠಾರದಲ್ಲೊಂದು ಕೊಠಡಿ ಮನೆಗೆ ಹೆಸರು-ಹಲಿಗೆ:
ಹರಿದ ಸೀರೆ ಹಳೆಯ ಚಪ್ಪಲಿಗಳ ಕರಿಯ ಹೆಂಗಸು ಕೈಯಲ್ಲಿ ವ್ಯಾನಿಟಿಬ್ಯಾಗ್ ಹಿಡಿದ
ಹಾಗಿತ್ತು.
ಆ ಮನೆಯನ್ನು ಬಿಟ್ಟುಬಿಡಬೇಕೇಂದು ಎಷ್ಟೋ ಸಾರೆ ಆತ ಯೋಚಿಸಿದ್ದ. ಆದರೆ
ಬೇರೆ ಒಳ್ಳೆಯ ಕೊಠಡಿಯನ್ನು ಹುಡುಕಲು ಆತನಿಗೆ ಬಿಡುವೇ ದೊರೆತಿರಲಿಲ್ಲ. ಬಿಡು
ವಿದ್ದಾಗ ಆಯಾಸವೆನಿಸುತಿತ್ತು. ಆಯಾಸವಿಲ್ಲದೆ ಇದ್ದಾಗ ಹಾಳು ಬೇಸರ. 'ಯಾವು
ದಾದರೂ ಸಿನಿಮಾ ನೋಡೋಣ' ಎನಿಸುತ್ತಿತ್ತು.
ಅಗತ್ಯದ ಕೆಲಸವಿದ್ದರೆ ಉತ್ಸಾಹದಿಂದ ಒಂದೇ ಸಮನೆ ಆತ ದುಡಿಯುತ್ತಿದ್ದ.
ಪ್ರವಾಸ ಹೊಗುತ್ತಿದ್ದ. ದನಿವೆಂಬುದನ್ನೇ ಅವನು ಅರಿಯ. ಅದು ಮುಗಿದು
ಒಮ್ಮೆ ಕಾಲುಚಾಚಿದನೆಂದರೆ, ಚಂದ್ರಶೇಖರಯ್ಯ ಮಹಾ ಸೋಮಾರಿ. ಊಟ
ಮಾಡುವುದಕ್ಕೂ ಹೋಟೆಲಿಗೆ ಹೊತ್ತಿಗೆ ಸರಿಯಾಗಿ ಹೂಗುತ್ತಿರಲಿಲ್ಲ. ತಡವಾಗಿ
ಹೋಗಿ, ಊಟವಿಲ್ಲವೆಂದು, ಪಕ್ಕದ ಹೋಟೆಲಿನಲ್ಲಿ ತಿಂಡಿ ತಿಂದು ಕಾಫಿ ಕುಡಿಯು
ತ್ತಿದ್ದ. ನೈರ್ಮಲ್ಯ ಆತನಿಗೆ ಇಷ್ಟವಾದರೂ ಅದನ್ನು ಕಾಪಾಡಲು ಆತ ಪ್ರಯತ್ನಿಸು
ತ್ತಿರಲಿಲ್ಲ. ಎಂದಾದರೊಮ್ಮೆ ಕೊಠಡಿಯನ್ನು ಅಚ್ಚುಕಟ್ಟಾಗಿಡಲು ಅವನು ಯತ್ನಿಸು
ವುದಿತ್ತು. ಆದರೆ ಒಂದೆರಡು ದಿನಗಳಲ್ಲಿ ಎಲ್ಲವು ಮೊದಲಿನಂತೆಯೇ ಮಾರ್ಪಡು
ತ್ತಿದ್ದುವು.
ಮದುವೆಯಾಗಿದೆಯೆಂದು ಸುಳ್ಳು ಹೇಳಿ ಕೊಠಡಿ ಮನೆ ದೊರಕಿಸಿಕೊಂಡ.
ಬಳಿಕ, ನಿಜ ಸಂಗತಿ ರಂಗಮ್ಮನಿಗೆ ಗೋತ್ತಾಗಿತ್ತು. ರಂಗಮ್ಮ ರೇಗುತ್ತಿದ್ದಾಗಲೂ
ತಮಾಷೆಯಾಗಿಯೇ ಇರಲು ಅತ ಯತ್ನಿಸುತ್ತಿದ್ದ.
ವಠಾರದಲ್ಲಿ ಉಂಟಾದ ಪ್ರಕ್ಷುಬ್ದ ಪರಿಸ್ಥಿತಿ ಶಾಂತವಾಗಿ ಎಷ್ಟೋ ದಿನಗಳಾದ
ಮೇಲೆ, ಪಕ್ಕದಮನೆಯಾತ ಒಳ್ಳೆಯವನು ಎಂದು ಜಯರಾಮಮುವಿನ ತಾಯಿ ಪ್ರಮಾಣ
ಪತ್ರ ಕೊಟ್ಟ ಮೇಲೆ, ರಂಗಮ್ಮ ಒಂದು ದಿನ ಹೇಳಿದ್ದರು:
"ಚಂದ್ರಶೇಖರಯ್ಯ, ನೀವು ಇಷ್ಟೆಲ್ಲಾ ಓದಿದೋರು,ಬುದ್ದಿವಂತ. ಕೈತುಂಬಾ
ಸಂಪಾದನೆ ಇದೆ. ಹೀಗಿದ್ದೂ ಈ ತರಹೆ ಇದೀರಲ್ಲಾ..."
ವಿಷಯವೇನೆಂದು ಊಹಿಸಿ, ಅವನ ಮುಖ ನಸುಗೆಂಪಾಯಿತು.
"ಯಾವ ಥರ ಇದೀನಿ ರಂಗಮ್ನೋರೆ?"
"ಎಷ್ಟು ದೀನಾಂತ ಈ ಕೆಟ್ಟ ಹೋಟ್ಲುಟ ಮಾಡ್ತೀರಪ್ಪಾ?"
ಹೋಟೆಲು ಊಟ ಚೆನ್ನಾಗಿರುತ್ತರೆಂದು ಹೇಳಿದ ಒಬ್ಬ ಮನುಷ್ಯ ಪ್ರಾಣಿ
ಯನ್ನು ಚಂದ್ರಶೇಖರಯ್ಯ ಆವರೆಗೆ ನೋಡಿರಲಿಲ್ಲ.
"ಏನಾಗಿದೆ ರಂಗಮ್ನೋರೆ?"
"ನಿಮ್ಮ ಅವಸ್ಥೆನೋ ನೀವೋ...ದೇವರಿಗೇ ಪ್ರೀತಿ."
ಚಂದ್ರಶೇಖರಯ್ಯ ನಕ್ಕು ಕೇಳಿದ:
"ನಾನು ಏನ್ಮಾಡಿದ್ರೆ ನಿಮಗಿಷ್ಟವಾಗುತ್ತೆ ಹೇಳಿ?"
"ಬಾಯಿಬುಟ್ಟು ಹೇಳ್ಬೇಕೇನಪ್ಪಾ ಅದನ್ನೂ? ಇನ್ನೂ ಹೀಗೇ ಇರ್ಬೇಡಿ...
ನೀವೇನು ಚಿಕ್ಕ ಹುಡುಗ್ನೆ ಈಗ? ಬೇಗ್ನೆ ಒಳ್ಳೆ ಹೆಣ್ಣು ನೋಡಿ ಮದುವೆ ಮಾಡಿ
ಕೊಳ್ಳಿ, ನಿಮ್ಮ ತಂದೆ ತಾಯಿ ಅದು ಹ್ಯಾಗೆ ಸಹಿಸಿಕೊಂಡಿದಾರೊ?"
ಅವರು ಸಹಿಸಿಕೊಂಡಿರಲಿಲ್ಲ. ಹಿರಿಯ ಮಗನಾದ ಚಂದ್ರಶೇಖರಯ್ಯ ಮನೆಗೆ
ಬಂದಾಗಲೆಲ್ಲ ಅವನನ್ನು ಅವರು ಗೋಳು ಹುಯ್ಯುತ್ತಿದ್ದರು. ಆಳು ಕಾಳು ಇಟ್ಟು
ಕೊಂಡು ಮನೆತನದ ಅಲ್ಪ ಆಸ್ತಿಯ ಉಸ್ತುವಾರಿ ಮಾಡುತ್ತಿದ್ದ ಆತನ ತಮ್ಮನಿಗೂ
ಅಣ್ಣನನ್ನು ಕಂಡರಾಗುತ್ತಿರಲಿಲ್ಲ. ಆ ತಮ್ಮನಿಗೆ ಆಗಲೆ ಮದುವೆಯಾಗಲು ಮನ
ಸ್ಸಿತ್ತು. ಹಿರಿಯರು ಸೋದರರಿಬ್ಬರಿಗೂ ಹುಡುಗಿಯರನ್ನು ನೋಡಿ ಇಟ್ಟಿದ್ದರು.
ಆದರೆ ಅಣ್ಣ ಅವಿವಾಹಿತನಾಗಿ ಇರುವಷ್ಟು ಕಾಲ ತಮ್ಮ ಸುಮ್ಮನಿರಬೇಕಾಗಿತ್ತು.
ಚಂದ್ರಶೇಖರಯ್ಯನೇನೋ ಹೇಳಿದ್ದ:
"ಅವನಿಗೆ ಮದುವೆ ಮಾಡಿಸ್ಬಿಡಿ. ಕಾಗದ ಬರೀರಿ. ಬಂದು ಹೋಗ್ತೀನಿ."
"ನಿನಗೆ?"
"ನನಗೆ ಈಗ್ಬೇಡ...."
.... ಕಿರ್ ಕಿರ್ರೆನ್ನುತ್ತಿದ್ದ ಕಬ್ಬಿಣದ ಮಂಚದ ಮೇಲೆ ಅತ್ತಿತ್ತ ಹೊರಳುತ್ತ
ಚಂದ್ರಶೇಖರಯ್ಯ ಕಿಟಕಿಯ ಮೂಲಕ ಹೊರಗೆ ನೋಡಿದ. ಒಂದು ಚೂರು ಅಕಾಶ
ಕಾಣಿಸುತ್ತಿತ್ತು. ಅಲ್ಲಿ ಹಲವು ನಕ್ಷತ್ರಗಳು ಮಿನುಗುತ್ತಿದ್ದವು.

'ಈಗ ಬೇಡ'-ಎಂದು ಧೈರ್ಯವಾಗಿ ಹೇಳಿ ಬಂದಿದ್ದ ನಿಜ. ಹಿಂದೆಯೇನೋ,
ಮದುವೆಯಾಗುವುದರಲ್ಲಿ ಅರ್ಥವಿಲ್ಲ ಎಂತ ಆತ ಖಡಾಖಂಡಿತವಾಗಿ ವಾದಿಸುತ್ತಿದ್ದ.
ಈಗ ವಾದಿಸುತ್ತಿರಲಿಲ್ಲ. ಮದುವೆ ಅನಿವಾರ್ಯವೆಂದು ಬಾಯಿ ತೆರೆದು ಹೇಳುತ್ತಿರ
ಲಿಲ್ಲವಾದರೂ ಹಾಗೆಂದು ಅತನಿಗೆ ಆಗಲೇ ಮನವರಿಕೆಯಾಗಿತ್ತು.
ಆ ಯೋಚನೆ ಬಂದಾಗಲೆಲ್ಲ ರಾಧಾ ಈಗ ಅವನ ಕಣ್ಣೆದುರು ನಿಂತಂತಾಗು
ತ್ತಿತ್ತು. ತಾನು ಬಂದ ಹೊಸತಿನಲ್ಲಿ, ಇದೊಂದು ಬರಿಯ ಹುಡುಗ ಎಂದು ಆತ
ಸುಮ್ಮನಿದ್ದ. ಆದರೆ ಈ ಎರಡು ವರ್ಷಗಳಲ್ಲಿ ಆಕೆ ಎಷ್ಟೊಂದು ಬೆಳೆದುಬಿಟ್ಟಿದ್ದಳು.
ಒಂಟಿ ಇಟ್ಟಿಗೆಯ ಗೋಡೆಯಾಚೆ ನಿದ್ದೆ ಹೋಗಿತ್ತು ಆ ಸಂಸಾರ....ಜಯ
ರಾಮು... ರಾಧಾ.

೧೩

ಬೇಸೆಗೆಯ ಬೇಗೆಗೆ ಊರು ಬೇಯುತ್ತಿದ್ದಾಗಲೇ ಒಮ್ಮೆಲೆ ಒಂದು ಸಂಜೆ ಮಳೆ
ಹನಿಯಿತು.
"ಮಳೆ ಬಂತು! ಮಳೆ ಬಂತು!" ಎಂದು ವಠಾರದ ಹುಡುಗರೆಲ್ಲ ಕುಣಿದರು.
ರಂಗಮ್ಮನೂ ಹೆಬ್ಬಾಗಿಲ ಬಳಿ ನಿಂತು ಒದ್ದೆಯಾಗುತ್ತಿದ್ದ ಅಂಗಳವನ್ನು ನೋಡಿದರು.
ಮಳೆ ಬರತೊಡಗಿದಾಗ ಅವರ ಮುಖ ಎಂದೂ ಗೆಲುವಾಗುತ್ತಿರಲಿಲ್ಲ.

ಆ ದಿನ ಹನಿ ಮಳೆ ಅಷ್ಟಕ್ಕೆ ನಿಂತಿತು.
ರಂಗಮ್ಮ ಸಮಾಧಾನದ ನಿಟ್ಟುಸಿರು ಬಿಟ್ಟು ಒಳಕ್ಕೆ ಬಂದರು.
ಕರಿಯ ಮೋಡಗಳು ಕರಗಿ ಹೋಗಿ, ಅರಳೆ ರಾಶಿ ತೋರಿ ಬಂದು, ಶುಭ್ರ
ಆಕಾಶ ಕಾಣಿಸಿಕೊಂಡು, ಹೊಂಬಿಸಿಲು ಭೂಮಿಯ ಮೇಲೆ ಬಿತ್ತು.
"ಹೋ ಹೋ ಹೋ ಹೋ!" ಎಂದು ಹುಡುಗರು ಗದ್ದಲ ಮಾಡುತ್ತ ಅಂಗಳ
ಬಿಟ್ಟು ಬೀದಿಗಿಳಿದರು.
ರಂಗಮ್ಮನಿಗೆ ಗೊತ್ತಿತ್ತು. ಇದು ಆರಂಭ ಮಾತ್ರ. ಕಷ್ಟದ ದಿನಗಳ ಮುಂದಿ
ದ್ದುವು. ಪ್ರತಿವರ್ಷವೂ ಆ ದುಸ್ಥಿತಿಯ ಪುನರಾವರ್ತನೆ ಆಗುತ್ತಲೇ ಇದ್ದು, ರಂಗಮ್ಮ
ನಿಗೇನೋ ಬಹಳ ಮಟ್ಟಿಗೆ ಅದು ರೂಢಿಯಾಗಿತ್ತು. ಆದರೂ ಮಳೆಗಾಲದಲ್ಲಿ
ರಂಗಮ್ಮನ ವಠಾರ ಕಳೆಗೆಟ್ಟು ಹೋಗುತ್ತಿದ್ದುದನ್ನು ಅವರು ಕಾಣುತ್ತ ಬಂದಿದ್ದರು.
ದೇವರ ಮುಂದೆ ಕುಳಿತಾಗ, "ಮಳೆಗಾಲ ಸುಲಭವಾಗಿ ಕಳೆದುಹೋಗಲಪ್ಪಾ ಪರ
ಮಾತ್ಮಾ" ಎಂದು ಹೆಚ್ಚಿನ ಪ್ರಾರ್ಥನೆಯನ್ನು ಸೇರಿಸುತ್ತಿದ್ದರು.
ಮತ್ತೆ ನಾಲ್ಕು ದಿನ ಹನಿ ಬೀಳಲಿಲ್ಲ.
ಐದನೆಯ ದಿನ ಮಳೆ ಗುಡುಗು ಮಿಂಚುಗಳ ಆರ್ಭಟದೊಡನೆ ಬಂತು.ಬೆಂಗ
ಳೂರಿನ ತುಂತುರು ಹನಿಯಾಗಿ ಬರದೆ ಮಲೆನಾಡಿನ ಘನಘೋರ ಮಳೆಯಾಗಿ ಸುರಿ
ಯಿತು. ರಂಗಮ್ಮ ಸಪ್ಪೆಮೋರೆ ಹಾಕಿಕೊಂಡು, ತಮ್ಮ బలದೊಳಗೆ ಸೋರದೇ
ಇದ್ದ ಜಾಗದಲ್ಲಿ ಬೆಚ್ಚಗೆ ಕುಳಿತರು.
ರಂಗಮ್ಮನ ವಠಾರದಲ್ಲಿ ಹೆಚ್ಚಿನ ಮನೆಗಳೆಲ್ಲಾ ಸೋರುತ್ತಿದ್ದುವು. ಮಳೆ ಸುರಿ
ಯುತ್ತಿದ್ದಾಗಲೆಲ್ಲಾ 'ಥೂ! ಹಾಳು ಮನೆ...ಬೇಗನೇ ಬೇರೆಲ್ಲಿಗಾದರೂ ಹೋಗ್ಬೇಕು'
ಎಂದು ಉದ್ಗಾರ ತೆಗೆಯದವರು ಇರಲಿಲ್ಲ.
ಈ ಸಲವೂ ಅಷ್ಟೆ, ಹಾವಳಿ ಮಾಡುತ್ತ ಸುರಿದುದು ಪ್ರತಿ ವರ್ಷಕ್ಕಿಂತ
ಬೇರೆಯಲ್ಲದ ಮಳೆ.
ಜಯರಾಮು, ರಾಧಾ, ಅವರ ತಾಯಿ ಸೋರುತ್ತಿದ್ದ ನಾಲ್ಕಾರು ಕಡೆಗೆಲ್ಲ
ಪಾತ್ರೆಗಳನ್ನಿಟ್ಟರು. ಪಕ್ಕದ ಕೊಠಡಿ-ಮನೆಯ ಚಂದ್ರಶೇಖರಯ್ಯ ಹೊರ
ಹೋಗಿದ್ದ.
"ಪಕ್ಕದ್ಮನೆಯೊಳಗೆ ಮಳೆ ನೀರು ಬಿದ್ದು ಎಲ್ಲಾ ಒದ್ದೆಯಾಗಿ ಹೋಗುತ್ತೆ
ಅಲ್ವೆ ಅಣ್ಣ?”
ಆ ಪ್ರಶ್ನೆಯೊಡನೆ ರಾಧಾ ಜಯರಾಮುವಿನ ಮುಖ ನೋಡಿದಳು. ಆದರೆ
ಆತನ ಪ್ರಶ್ನಾರ್ಥಕ ದೃಷ್ಟಿಯನ್ನು ಎದಿರಿಸಲಾರದೆ, ನೀರು ಸುರಿಯುತ್ತಿದ್ದ ಛಾವಣಿ
ಯತ್ತ దిಟ್ಟಿಸಿದಳು.
ತಾಯಿ ರಾಧೆಯ ಮಾತಿಗೆ ಅರ್ಥ ಕಲ್ಪಿಸುವ ಗೊಡವೆಗೆ ಹೋಗದೆ
ಹೇಳಿದಳು:
"ಅದೇನೇನು ಹರವಿದಾನೋ ಮಹಾರಾಯಾ.."
ಮಹಡಿಯ ಕೆಳಗಿನ ನಾಲ್ಕು ಮನೆಗಳಷ್ಟೇ ಮಳೆಯನ್ನು ಸ್ವಲ್ಪ ಮಟ್ಟಿಗಾದರೂ
ತಡೆಹಿಡಿದು ಇದಿರಿಸುತ್ತಿದ್ದುವು.
ರಂಗಸ್ವಾಮಿ 'ಡ್ಯೂಟಿ'ಯ ಮೇಲೆ ಹೋಗಿದ್ದ. ಉಪಾಧ್ಯಾಯರು ತಂಗಿ
ಸುಮ೦ಗಳೆಯನ್ನು ಕರೆದುಕೊಂಡು ಭಾವನ ಊರಿಗೆ ತೆರಳಿದ್ದರು. ಆ ಎರಡೂ ಮನೆ
ಗಳ ಒಡತಿಯರು ಗಾಳಿ ಬೀಸಿದಾಗ ಒಳಬರುತ್ತಿದ್ದ ಮಳೆಯನ್ನು ತಡೆಯಲೆಂದು ಕಿಟಿಕಿ
ಗಳನ್ನು ಮುಚ್ಚಿದರು. ಹಾಗೆ ಮುಚ್ಚಿದ ಮೇಲೂ ಕಿಟಿಕಿಯ ಎಡೆಗಳಿಂದ ಇಳಿದು
ಒಳಕ್ಕೆ ಹರಿಯುತ್ತಿದ್ದ ನೀರನ್ನು ಅವರು ಬಟ್ಟೆ ಅದ್ದಿ ಪಾತ್ರೆಗೆ ಹಿಂಡಿದರು.
ಅವಾಂತರವಾಗುತ್ತಿದ್ದುದು ಓಣಿ ಮನೆಗಳಲ್ಲಿ. ನೀರು ಓಣಿಯಿಂದ ಸರಿಯಾಗಿ
ಹೊರಗೆ ಹರಿಯದೆ ಮನೆಗಳೊಳಕ್ಕೆ ಬರುತ್ತಿತ್ತು. ಹೆಂಚಿನ ಬಿರುಕುಗಳಿಂದೆಲ್ಲ ನೀರು
ಸುರಿಯುತ್ತಿತ್ತು. ಎದುರಿನ ಎರಡು ಮನೆಗಳಿಗಾದರೆ, ಗಾಳಿ ಬೀಸುತ್ತ ಮಳೆ ಬಂದಾಗ
ಮಾತ್ರ ತೊಂದರೆ. ಓಣಿ ಮನೆಗಳಲ್ಲಿ, ಗಾಳಿ-ಮಳೆ ಜತೆಯಾಗಿಯೇ ಬಂದರೆ
ಅಷ್ಟೊಂದು ಅಪಾಯವಿರಲಿಲ್ಲ. ಹೆಚ್ಚಿನ ನೀರು ಛಾವಣಿ ಹೊರಕ್ಕೆ ಹರಿಯು
ರಂಗಮ್ಮನ ವಠಾರ
127

ತ್ತಿತ್ತು. ಮಳೆಯಷ್ಟೇ ಬಲವಾಗಿ ಸುರಿದಾಗ ಮಾತ್ರ ಆ ಮನೆಗಳು ಕೆರೆಗಳಾಗುತ್ತಿ
ದ್ದುವು. ಗೋಡೆ ತೊಯ್ದು ಎಲ್ಲಿ ಉರುಳುವುದೋ ಎಂದು ಭಯವಾಗುತ್ತಿತ್ತು. ಒಲೆ
ಒದ್ದೆಯಾಗುತ್ತಿತ್ತು.
ಎಷ್ಟೋ ವರ್ಷಗಳ ಅನುಭವವಿದ್ದವರು ಈ ಸಲವೂ ಗೊಣಗುತ್ತ ಸೋರುವ
ನೀರನ್ನು ಹಿಡಿಯಲು ಎಂದಿನಂತೆ ಯತ್ನಿಸಿದರು. ಈ ವರ್ಷದ ಮಳೆಗೆ ಹೊಸತಾಗಿ
ಸೋರಿದ ಜಾಗಗಳನ್ನು ಗುರುತಿಸಿದರು.
ಪರಿಸ್ಥಿತಿ ಹೀಗಿದ್ದರೂ ವಠಾರದ ಹಳಬರೆಲ್ಲ ಬಕೀಟುಗಳನ್ನೋ ಬಾಯಿ ಅಗಲ
ವಿದ್ದ ಪಾತ್ರೆಗಳನ್ನೋ ತಂದು ಛಾವಣಿಯಿಂದ ಕೆಳಕ್ಕೆ ಹರಿಯುವ ನೀರು ಬೀಳುತ್ತಿದ್ದ
ಕಡೆ ಇಟ್ತರು.ಹಾಗೆ ಹಿಡಿದ ನೀರಿಗೆ ಅವರು ದುಡ್ದು ಕೊಡಬೇಕಾದ ಅಗತ್ಯ
ವಿರಲಿಲ್ಲ!
ಚಂಪಾ ವಠಾರದಲ್ಲಿ ಅನುಭವಿಸಿದ ಮೊದಲ ಮಳೆ ಇದು. ಸೋರುವ
ಮನೆಯನ್ನೇನೋ ಹಿಂದೆಯೂ ಆಕೆ ಕಂಡಿದ್ದಳು.ಆದರೆ ರಂಗಮ್ಮನ ವಠಾರದ ಮನೆ
ಹಿಂದಿನ ದಾಖಲೆಗಳನ್ನೆಲ್ಲ ಮೀರಿಸುವ ಹಾಗಿತ್ತು.
ಮಗು ಅಳತೊಡಗಿತು.ಮೀಜಿನ ಮೇಲೆ ಸೋರುತ್ತಿರಲಿಲ್ಲ.ಚಂಪಾ
ಹಾಸಿಗೆ, ಬಟ್ಟೆ ಬರೆಗಳನ್ನು ಅದರ ಮೇಲಿಸಿದಳು.ಇದ್ದ ಪಾತ್ರೆಗಳನ್ನೆಲ್ಲ ಸೋರು
ತ್ತಿದ್ದ ಜಾಗಗಳಿಗೆ ಸಮನಾಗಿ ಹಂಚಿದಳು.ಹುಬ್ಬು ಗಂಟಿಕ್ಕಿ ಮಗುವನ್ನೆತ್ತಿ
ಕೊಂಡಳು.
"ಅಳಬೇಡ.ಅಳಬೇಡ್ವೆ...."ಎಂದು ಸಂತೈಸುವ ಮಾತನ್ನಾಡಿದಳು.
ಈ ಸೌಭಾಗ್ಯ ತನಗೊಬ್ಬಳಿಗೇ ಮೀಸಲಾಗಿರಲಾರದು ಎಂದು ಸಮಾಧಾನಪಟ್ಟು
ಕೊಂಡಳು.ಬಾಗಿಲ ಬಳಿ ಬಂದಾಗ,ಸ್ವಲ್ಪ ಬಾಗಿ ನೋಡಿದಾಗ,ಮಳೆಯ ನೀರು
ಹಿಡಿಯಲೆಂದು ಓಣಿ ಮನೆಗಳವರು ಬಕೀಟು,ಪಾತ್ರೆಗಳನ್ನಿಟ್ಟುದನ್ನು ಕಂಡಳು.ನಗು
ಬಂತು.ತಾನೂ ಒಂದು ಬಕೀಟು ತಂದು,ತನ್ನ ಮನೆಯ ಛಾವಣಿಯಿಂದ ಧಾರೆ
ಕಟ್ಟಿ ಸುರಿಯುತ್ತಿದ್ದ ನೀರನ್ನು ಹಿಡಿದಳು.ಮಳೆಯ ಧಾರೆಯ ಆಚೆ ಎದುರು ಮನೆ
ಬಾಗಿಲಲ್ಲಿ ಮೀನಾಕ್ಷಿ ನಿಂತಿದ್ದಳು.ಹೊಸ ಬಿಡಾರದವಳ ಅನುಭವವನ್ನು ಕಂಡು ಆಕೆಗೆ
ನಗು.ಚಂಪಾವತಿ ಸಿಟ್ಟಾಗಲಿಲ್ಲ;ತಾನು ನಕ್ಕಳು.
ಸಂಜೆಯ ಹೊತ್ತಿಗೆ ಮಳೆ ನಿಂತಿತು. ಗಂಡಸರು ಮನೆಗೆ ಬಂದು,ಹೆಂಗಸರ
ಗೊಣಗಾಟಕ್ಕೆ ಕಿವಿಕೊಟ್ಟರು.
ಆ ರಾತ್ರಿ ರಂಗಮ್ಮ ಹೊರಗೆ ಬರಲೇ ಇಲ್ಲ.ಊಟವಾಯ್ತೆ? ಅಡುಗೆ ಏನು?
ಎಂದು ಯಾರನ್ನೂ ಅವರು ವಿಚಾರಿಸಲಿಲ್ಲ.
ಆ ಬೀದಿಯುದ್ದಕ್ಕೂ ದೀಪ ಆರಿಹೋಯಿತು.ನಡುರಾತ್ರಿಯಲ್ಲಿ ಎಲ್ಲಾ
ದರೂಬಂದು ಬಿಡಬಹುದೆಂದು ರಂಗಮ್ಮ ವಿದ್ಯುತ್ ಹಿಡಿಯನ್ನು ಮೇಲಕ್ಕೆ

ತಳ್ಳಿಬಿಟ್ಟರು.

ತಣ್ಣಗಿದ್ದ ನೆಲದ ಮೇಲೆ ಗಂಡಸರು ಮಕ್ಕಳಿಗಾಗಿಯೂ ತಮಗಾಗಿಯೂ ಚಾಪೆ
ಹಾಸಿಗೆಗಳನ್ನು ಹೆಂಗಸರು ಹಾಸಿದರು.
"ಸುಡುಗಾಡು ಮನೆ!" ಎಂದ ಶಂಕರನಾರಾಯಣಯ್ಯ.
"ಹಾಗನ್ಬೇಡಿ. ರಾತ್ರಿ ಹೊತ್ತು ಕೆಟ್ಟ ಮಾತು..."ತನ್ನ ಅಸಹಾಯತೆಗಾಗಿ
ನೊಂದಿದ್ದ ಗಂಡನನ್ನು ಸಂತೈಸಲೆಂದು ಚಂಪಾ ಮೃದುವಾಗಿ ಮಾತನಾಡಿದಳು.
"ಈ ವಠಾರದಲ್ಲಿ ಜಾಸ್ತಿ ದಿನ ಇರೋಕಾಗೊಲ್ಲ ಚಂಪಾ."
"ಒಳ್ಳೇ ಮನೆ ಸಿಕ್ಕಿದಾಗ ಹೋದರಾಯ್ತು."
"ಆ ಹೆಣ್ಣಿನ ಧ್ವನಿ ದೃಢವಾಗಿರಲಿಲ್ಲ. ಹೆಚ್ಚು ಬಾಡಿಗೆ ಕೊಟ್ಟು ಒಳ್ಳೆಯ ಮನೆಗೆ
ಹೋಗುವ ಶಕ್ತಿ ತಮಗಿಲ್ಲವೆಂದು ಅವರಿಬ್ಬರೂ ತಿಳಿದಿದ್ದರು.
"ನೋಡು. ಇದೇ ನಾನು ನಿನಗೆ ಕೊಡ್ತಿರೋ ಸುಖ."
"ಶ್.....ಮಾತಾಡ್ಬೇಡಿ."
ಗಂಡನ, ತನ್ನ ಮತ್ತು ಮಗುವಿನ ಮೇಲೆ ಬೆಚ್ಚಗಿನ ಹೊದಿಕೆಯನ್ನಾಕೆ ಬಿಗಿ
ಯಾಗಿ ಎಳೆದುಕೊಂಡಳು.
ಆದರೆ ನಡುರಾತ್ರಿಯ ಮೇಲೆ ಮತ್ತೆ ಮಳೆ ಬಂತು. ವಠಾರದ ಸಂಸಾರಗಳು
ಎದ್ದು ಕುಳಿತುಕೊಳ್ಳಬೇಕಾಯಿತು.
ಮರುದಿನವೆಲ್ಲ ರಂಗಮ್ಮ ತನ್ನಷ್ಟಕ್ಕೆ ಗೊಣಗುತ್ತ ಓಡಾಡಿದರು. ಅವರು
ಯರನ್ನೂ ಮಾತನಾಡಿಸಲಿಲ್ಲ. ಯಾರೂ ಅವರನ್ನು ಮಾತನಾಡಿಸಲಿಲ್ಲ.
ಮಧ್ಯಾಹ್ನದ ಬಳಿಕ ಬಿಸಿಲು ಬಂತು. ರಂಗಮ್ಮ ಮೆಲ್ಲನೆ ಹೊರಬಂದು ಹೆಂಗಸ
ರತ್ತ ನಡೆದರು; ಮೌನವನ್ನು ಮುರಿದರು.
__"...ಬಹಳ ಸೋರುತ್ತೇನಮ್ಮ?"
__"...ಅದೇನು ಸುಡುಗಾಡು ಹೆಂಚೋ."
__"...ಹೆಂಚು ಇರಿಸಿದ್ದು ಸರಿಯಾಗ್ಲಿಲ್ಲಾಂತ ಎಂಟು ವರ್ಷದ ಕೆಳಗೆ
ಮತ್ತೊಮ್ಮೆ ಎತ್ತಿ ಹಾಸಿದ್ದಾಯ್ತು."
__"ಏನಪ್ಪಾ ಮಾಡೋದು? ಒಂಟಿ ನಾನು.ಏನಾಗುತ್ತೆ ನನ್ಕೈಲಿ?"
ಹೆಂಗಸರೆಲ್ಲ ಒಂದೇ ರೀತಿಯಾಗಿ ಉದ್ದುದ್ದವಾಗಿ ಉತ್ತರ ಕೊಟ್ಟರು. ಒಂದಂ
ಗುಲ ಜಾಗವೂ ಬೆಚ್ಚಗಿರಲಿಲ್ಲ....ಒಂದು ನಿಮಿಷವೂ ರಾತ್ರೆ ಯಾರೂ ನಿದ್ದೆ ಮಾಡ
ಲಿಲ್ಲ..... ಇತ್ಯಾದಿ.
ರಂಗಮ್ಮನ ಎಡಪಕ್ಕದಲ್ಲಿದ್ದ ಮೂಲ ಕಟ್ಟಡದ ಒಂದು ಮನೆ-ಇಬ್ಬರು
ವಿದ್ಯಾರ್ಥಿಗಳೂ ಅವರ ತಾಯಿಯೂ ಇದ್ದುದು-ಸೋರುತ್ತಿರಲಿಲ್ಲ.
"ಅಲ್ಲಿಯಾದರೂ ನೀವು ಕೆಲವರು ಹೋಗಿ ಮಲಕ್ಕೋಬಹುದಾಗಿತ್ತು ಕಣ್ರಿ...
ಆದರೆ ಆಕೆ ಬೀಗ ಹಾಕ್ಕೊಂಡು ಹೋಗಿದಾಳೆ.ಏನ್ಮಾಡೋಕಾಗುತ್ತೆ?

"ರಂಗಮ್ಮ ಮಾತಿಗೆ ಹಾಗೆ ಹೇಳಿದರು ಅಷ್ಟೆ. ಮಕ್ಕಳೊಡನೆ ಆ ತಾಯಿ ಊರಿಗೆ

ಹೋದಾಗ ಬರಲಿದ್ದ ಮಳೆಯ ನೆನಪು ರಂಗಮ್ಮನಿಗೆ ಆಗಿತ್ತು. ಆದರೆ ಅವರು ಬೀಗದ
ಕೈ ಕೇಳಿರಲಿಲ್ಲ. ಬಾಡಿಗೆ ಸಂದಾಯವಾದ ಮನೆಯ ಬೀಗದ ಕೈ ಕೇಳುವುದೆಂದರೇನು?
ಅಥವಾ ಕೇಳಿ ಇಸಕೊಂಡಿದ್ದರೂ ಎಷ್ಟು ಜನರಿಗೆ ಆ ಜಾಗವನ್ನು ಕೊಟ್ಟು ತೃಪ್ತಿ
ಪಡಿಸುವದು ಸಾಧ್ಯವಿತ್ತು?
ರಂಗಮ್ಮ ಹಲವಾರು ರಟ್ಟುಗಳ ಚೂರುಗಳನ್ನು ಸಂಗ್ರಹಿಸಿ ಇಟ್ಟಿದ್ದರು, ಮಗನ
ನೆರವಿನಿಂದ. ಪ್ರತಿಯೊಂದು ಮನೆಗೂ ನಾಲ್ಕುನಾಲ್ಕನ್ನು ಹಂಚಲು ಅವರು
ಮುಂದಾದರು.
"ಗುಂಡಣ್ಣಾ, ಒಳಗೇ ನಿಂತ್ಕೊಂಡು ಸೋರೋ ಹೆಂಚು ಯಾವುದೂಂತ
ನೋಡಿ ಇದನ್ನೆಲ್ಲಾ ಇಡ್ತೀಯೇನಪ್ಪಾ?"
ಪರೋಪಕಾರಿಯಾದ ಗುಂಡಣ್ಣ, ರಂಗಮ್ಮನ ಅಪೇಕ್ಷೆಯಂತೆ ಸಿದ್ಧನಾದ.
ಆದರೆ ಆತನಿಗೆ, ಛಾವಣಿಯ ಮೇಲಕ್ಕೆ ಹೋಗಿ ಸರಿಪಡಿಸೆಂದು ರಂಗಮ್ಮ ಹೇಳಲಿಲ್ಲ.
ಬೇರೆ ಯಾರೂ ಸೂಚಿಸಲಿಲ್ಲ.
"ಮೊದಲ್ನೇ ದಿವಸದ ಮಳೆಗೆ ಮಾತ್ರ ಹೀಗಾಗುತ್ತೆ" ಎಂದು ಬೇರೆ, ರಂಗಮ್ಮ
ಚಂಪಾವತಿಯ ಎದುರು ಅಂದರು. ವಠಾರದ ಹಳಬರಿಗೆ ಆ ವಿಷಯದ ನಿಜರೂಪ
ತಿಳಿದಿತ್ತು. ರಂಗಮ್ಮ ಹೇಳಿದೊಡನೆ ನಂಬುವ ಮುಗ್ಧೆಯೂ ಚಂಪಾವತಿಯಾಗಿ
ರಲಿಲ್ಲ.
ಅನಂತರ ಪ್ರತಿ ಸಂಚೆಯೂ ಮಳೆ ಸುರಿಯಿತು. ಸಂಚೆ ಬಂದ ಮಳೆ ರಾತ್ರಿ
ಬಹಳ ಹೋತ್ತಿನ ತನಕವೂ ಇರುತ್ತಿತ್ತು. ಸೋರುವುದು ತಪ್ಪಲಿಲ್ಲ.
ನಗರದಲ್ಲಿ ಬೆಚ್ಚಗಿನ ಮನೆಗಳಿದ್ದವರು ಗೊಣಗುತ್ತಿದ್ದರು.
"ಹಗಲು ಯಾಕೆ ಬರುತ್ತೋ ಈ ಮಳೆ. ಸಾಯಂಕಾಲವಂತೂ ಪಿಕ್ಚರಿಗೆ,
ವಾಕಿಂಗಿಗೆ ಯಾವುದಕ್ಕೂ ಹೋಗೋ ಹಾಗಿಲ್ಲ. ನಾವೆಲ್ಲ ನಿದ್ದೆ ಹೋದ ಮೇಲೆ
ರಾತ್ರೆ ಈ ಮಳೆ ಬರಬಾರ್ದೆ?"
ಆದರೆ ರಂಗಮ್ಮನ ವಠಾರದವರು ಹೇಳುತ್ತಿದ್ದುದೇ ಬೇರೆ:
"ಈ ಮಳೆ ಹಗಲಾದರೂ ಬಂದು ಹೋಗಲಪ್ಪಾ. ರಾತ್ರೆ ಬರದೇ ಇರ್ಲಿ.
ಮಕ್ಕಳು ಮರಿ ರಾತ್ರೆ ಹೋತ್ತು ಬೆಚ್ಚಗಿದ್ದು ನಿದ್ದೇನಾದರೂ ಮಾಡುವಂತಾಗಲಪ್ಪಾ."
ಆದರೆ ಮಳೆ ಇವರು ಯಾರ ಅಪೇಕ್ಷೆಯನ್ನೂ ಪರಿಶೀಲಿಸಿದಂತೆ ತೋರಲಿಲ್ಲ.
ಅದು ತನಗಿಷ್ಟ ಬಂದಂತೆ ಸುರಿಯುತ್ತಿತ್ತು.
ಮಳೆಯ ಕಾಟದೊಡನೆ, ವಠಾರಕ್ಕೆ ಕಂಬಳಿ ಹುಳಗಳ ಪ್ರವೇಶವಾಯಿತು.
ಹೆಂಚಿನ ಎಡೆಗಳಲ್ಲೂ ಗೋಡೆಯ ಮೂಲೆಗಳಲ್ಲೂ ಅವು ಮನೆ ಮಾಡಿದುವು. ಜೊರೋ
ಎಂದು ಮಳೆ ಸುರಿಯುತ್ತಿದ್ದರೆ ಟಪ್ಪ ಟಪ್ಪ ಎಂದು ಕಂಬಳಿ ಹುಳಗಳು ಕೆಳಕ್ಕೆ ಉರುಳು
ತ್ತಿದ್ದುವು.

17

ಕಂಬಳಿ ಹುಳಕ್ಕೆ ಸಂಬಂಧಿಸಿದ ಮೊದಲ ಆರ್ತನಾದದ ಕೀರ್ತಿ ಈ ವರ್ಷ ಕಾಮಾ
ಕ್ಷಿಗೆ ಸಂದಿತು. ಮೆಲಿನಿಂದ ಬಿದ್ದ ಕಂಬಳಿ ಹುಳು ಆಕೆಯ ಕಿವಿಯನ್ನು ಸವರಿಕೊಂಡು
ಕೆಳಕ್ಕೆ ಉರುಳಿತು. ಐದು ನಿಮಿಷಗಳೂ ಆಗಿರಲಿಲ್ಲ. ತುರಿಸುತ್ತಲಿದ್ದಂತೆ ಕಿವಿ
ದಪ್ಪಗಾಯಿತು; ಮರದ ತುಂಡಿನಂತಾಯಿತು.
"ಅಯ್ಯಯ್ಯೊ-ಇನ್ನೇನು ಗತಿ?" ಎಂದು ಆಕೆ ಕೂಗಾಡಿದಳು.
ಅದರಿಂದೇನೂ ಅಪಾಯವಿಲ್ಲವೆಂದು ರಂಗಮ್ಮ ವಿವರಿಸಿದರು.
"ಒಂದಿಷ್ಟು ಬಿಸಿನೀರಿನ ಶಾಖ ಕೊಟ್ಟು ಕೊಬರಿ ಎಣ್ಣೆ ಸವರು, ಸರಿ
ಹೋಗುತ್ತೆ." ಎಂದು ಅವರು ಗೃಹವೈದ್ಯ ಹೇಳಿಕೊಟ್ಟರು.
ಅಷ್ಟರಲ್ಲಿ ಬೇರೆ ಹುಡುಗರೂ ಕಿರಿಚಿಕೊಂಡರು. ಹುಡುಗರಿಗೆ, ಹುಳಗಳ ಹರಿ
ದಾಟವನ್ನಷ್ಟೆ ಕಂಡು ತೃಪ್ತಿಯಾಗಿರಲಿಲ್ಲ. ಕೋಲುಗಳಿಂದ ಅವುಗಳನ್ನು ಮುಟ್ಟಿ
ಕೆದಕಿದರು. ಬೆರಳುಗಳಿಂದ ಪರೀಕ್ಷಿಸಿ ನೋಡಿದರು. ಪರಿಣಾಮ_ಕೋಲಾಹಲ.
ಚಂಪಾ ತನ್ನ ಪುಟ್ಟ ಕಂದನನ್ನು ಕಂಬಳಿ ಹುಳಗಳಿಂದ ಜೋಪಾನವಾಗಿಡಲು
ತುಂಬಾ ಶ್ರಮಪಡಬೇಕಾಯಿತು.
ಇತರರ ಗದ್ದಲ ಕಡಮೆಯಾದ ಮೇಲೂ ಕಾಮಾಕ್ಷಿಯ ಸ್ವರ ಕೇಳಿಸುತ್ತಿತ್ತು.
"ಅವರು ಬರ್ಲಿ. ನಾನಿನ್ನು ಒಂದು ಘಳಿಗೇನೂ ಈ ಮನೇಲಿ ಇರೋದಿಲ್ಲ,
ಇವತ್ತೇ ನನ್ನ ತವರೂರಿಗೆ ಹೊರಟ್ಹೋಗ್ತೀನಿ...."
ಕಕ್ಕಸಿಗೆಂದು ತಂಬಿಗೆ ಹಿಡಿದು ಹೊರಟು ಬಂದು ಜಯರಾಮು ಓಣಿಯಲ್ಲಿ
ನಿಂತು, ರಂಗಮ್ಮನವರನ್ನು ನೋಡುತ್ತ ಹೇಳಿದ:
"ವಠಾರ ಕೆಟ್ಹೋಯ್ತು ರಂಗಮ್ನೋರೇ, ವಠಾರ ಕೆಟ್ಟು ಹೋಯ್ತು."
"ಏನೋ ಅದು?"
"ಈ ಮಳೆ_ಕಂಬಳಿ ಹುಳ ಥೂ ಥೂ ಥೂ."
ರಂಗಮ್ಮ, ಹಲ್ಲುಗಳು ಕಡಮೆಯಾಗಿದ್ದ ಒಸಡನ್ನು ಅಮುಕುತ್ತಾ, ಜಯ
ರಾಮುವನ್ನು ದುರುಗುಟ್ಟಿ ನೋಡಿದರು. ಜಯರಾಮು ಆ ನೋಟವನ್ನು ಲೆಕ್ಕಿಸದೆಯೇ
ಮಾತನಾಡಿದ:
"ಕಂಬಳಿ ಹುಳ ಬಂದು ಜನರೂ ಕೆಟ್ಹೋದ್ರು..."
"ಸಾಕು ಕಣೋ."
"ನಾನ್ಹೇಳ್ತೀನಿ ರಂಗಮ್ನೋರೆ. ಈ ವಠಾರಾನ ರಿಪೇರಿ ಮಾಡಿಸೋಕೆ ಆಗೋದೇ
ಇಲ್ಲ."
"ಆಗದಿದ್ರೆ ಅಷ್ಟೇ ಹೋಯ್ತು."
"ಇದಕ್ಕಿರೋದು ಒಂದೇ ಉಪಾಯ ರಂಗಮ್ನೋರೆ. ಈ ಮನೆಗಳ್ನೆಲ್ಲಾ ಕಿತ್ತು
ಹಾಕಿಸಿ, ಈ ಹದಿನಾಲ್ಕು ಹದಿನೈದರ ಬದಲು ನಾಲ್ಕು ಮನೆ ತಾರಸೀದು ಸೊಗಸಾಗಿ

ಕಟ್ಟಿಸಿ."

ರಂಗಮ್ಮ ಕೋಪ-ಸಂಕಟಗಳನ್ನು ತಡೆಯಲಾರದೆ, ಜಯರಾಮುವಿನ ಕಿವಿ
ಹಿಂಡಲೆಂದು ಧಾವಿಸಿ ಬಂದರು. ಆದರೆ ಆತ ಕಕ್ಕಸಿಗೆ ಓಡಿಹೊದ.
ರಂಗಮ್ಮ ಗಟ್ಟಿಯಾಗಿ ಕೂಗಾಡಿದರು:
"ತಾರಸಿ ಮನೆ ಕಟ್ಟಿಸೋಕೆ ನನ್ಹತ್ರ ದುಡ್ಡಿಲ್ಲ. ನಾನು ಯಾರನ್ನೂ ವಠಾರ
ದಲ್ಲಿ ಕಟ್ಟಿ ಹಾಕಿಲ್ಲ. ಬೇಕಾದೋರು ಇರಿ-ಬೇಡವಾದೋರು ಹೋಗಿ!... ನಾನು
ಮಾತ್ರ ಬಂಗ್ಲೇಲಿದೀನೇನು? ನಿಮ್ಮ ಹಾಗೆ ನಾನೂ ಇಲ್ವೇನು ಈ ವಠಾರದಲ್ಲೇ?"
ಯಾರೂ ಮಾತನಾಡಲಿಲ್ಲ. ರಂಗಮ್ಮ ಹಾಗೆ ಕೂಗಾಡತೊಡಗಿದನ್ನು ಕಂಡು
ಎಲ್ಲರಿಗೂ ಸಂತೋಷವಾಯಿತು. ಅವರೆಲ್ಲ ಕೋಲುಗಳಿಗೆ ಪೊರಕೆ ಕಟ್ಟಿ ಕಂಬಳಿ
ಹುಳಗಳನ್ನು ಗುಡಿಸಲು ಮುಂದಾದರು.
ಕತ್ತಲಾಯಿತು. ಇನ್ನು ಒಂದು ಕ್ಷಣವೂ ಇಲ್ಲಿ ಇರಲಾರೆನೆಂದು ಕೂಗಾಡಿದ
ಕಾಮಾಕ್ಷಿ ಗಂಡನ ಮುಖ ನೋಡಿದ ಮೇಲೆ ತೆಪ್ಪಗಾದಳು. ಕಿವಿಯೂ ತುಸು ಮೃದು
ವಾದಂತೆ ಕಂಡಿತು. ಗಂಡ ಅದನ್ನು ಮುಟ್ಟಿದ ಮೇಲೆ ಆಕೆಗೆ ಸ್ವಲ್ಪ ಹಾಯೆನಿಸಿತು. ಆ
ಸಂಜೆ ಆತನೇ ಅಡುಗೆಯ ಕೆಲಸಕ್ಕಿಳಿದ. ಕುದಿಯುತ್ತಿದ್ದ ಸಾರಿಗೆ ಕಂಬಳಿ ಹುಳ ಬೀಳ
ಬಹುದೆಂಬ ಹೆದರಿಕೆಯಿಂದ ಅದನ್ನು ಮುಚ್ಚಿಯೇ ಇಡಬೇಕಾಯಿತು. ಆದರೆ ಕೊತ
ಕೊತ ಎನ್ನುತ್ತಿದ್ದ ಬಿಸಿ ನೀರು ಮತ್ತು ಬೇಳೆ ಮುಚ್ಚಳವನ್ನು ನೂಕಿಕೊಂಡು ಪ್ರತಿ
ಬಾರಿಯೂ ಹೊರಕ್ಕೆ ಹರಿಯುತ್ತಿದ್ದುವು.
"ಇದರ ಮನೆ ಹಾಳಾಯ್ತು!" ಎಂದು ನಾರಾಯಣ ಶಪಿಸಿದ. ಆದರೆ ನಿರ್ದಿಷ್ಟ
ವಾಗಿ ಯಾವುದನ್ನು ಕುರಿತು ತಾನು ಶಪಿಸಿದ್ದೆಂಬುದು ಆತನಿಗೇ ಗೊತ್ತಿರಲಿಲ್ಲ.
ಮಳೆ ಬಿಸಿಲುಗಳ ನಡುವೆ ನೆಗಡಿ, ಕೆಮ್ಮು, ಜ್ವರಗಳು ವಠಾರಕ್ಕೆ ಭೇಟಿ
ಕೊಟ್ಟುವು. ಮಕ್ಕಳು ಮಲಗಿದರು. ದೊಡ್ಡವರನ್ನೂ ಆ ಕಾಯಿಲೆಗಳು ಕಾಡಿದುವು.
ವಠಾರದ ಜನ ಔಷಧಿಗಾಗಿ ಮ್ಯುನಿಸಿಪಲ್ ಆಸ್ಪತ್ರೆಗೆ ಹೋಗಿ ಬಂದರು.
ಸ್ವತಃ ರಂಗಮ್ಮನೂ ಒಂದೆರಡು ದಿನ ಮಲಗಿದ್ದರು.
"ಮಗನಿಗೆ ಕಾಗದ ಬರೀಬೇಕೇ?" ಎಂದು ಅವರನ್ನು ಕೇಳಿದ್ದಾಯ್ತು.
"ಏನೂ ಬೇಡ. ಇದೆಲ್ಲಾ ಎರಡು ದಿವಸದ ಕಾಹಿಲೆ. ಎದ್ಬಿಡ್ತೀನಿ," ಎಂದು
ರಂಗಮ್ಮ ಆತ್ಮವಿಶ್ವಾಸದಿಂದ ಹೇಳಿದರು.
ಕಮಲಮ್ಮ, ಪದ್ಮಾವತಿ, ಮೀನಾಕ್ಶಮ್ಮ, ಪದ್ಮನಾಭಯ್ಯನ ಹೆಂಡತಿ, ಅಹಲ್ಯೆಯ
ತಾಯಿ-ಯಾರಾದರೊಬ್ಬರು ರಂಗಮ್ಮನ ಬಳಿಯಲ್ಲೇ ಇದ್ದು ಸೇವೆ ಮಾಡಿದರು.
ಬಂದು ವಿಚಾರಿಸಿಕೊಂಡು ಹೋಗುವ ವಿಷಯದಲ್ಲಿ ವಠಾರದ ಯಾರೂ ಹಿಂದಾಗಲಿಲ್ಲ.
ರಾಜಮ್ಮ ತನ್ನ ಕಂಪೌಂಡರ್ ಮಗನಿಗೆ ಹೇಳಿ ರಂಗಮ್ಮನಿಗೆ ಔಷಧಿ ತರಿಸಿದಳು,
ಆದರೆ ಆ ಸೀಮೆ ಔಷಧಿಯನ್ನು ರಂಗಮ್ಮ ಕುಡಿಯಲಿಲ್ಲ.

ತಾವೇ ಹೇಳಿದ್ದಂತೆ, ಎರಡು ದಿವಸ ಕಳೆದು ಮೂರನೆಯ ದಿನವೇ ಅವರು
ಎದ್ದು ಕುಳಿತರು. ರಂಗಮ್ಮ ನಕ್ಕಾಗ, ಎಲ್ಲರಿಗೂ ಸಂತೋಷವಾಯಿತು.

ಮೀನಾಕ್ಷಮ್ಮ ಚಂಪಾವತಿ ಹೇಳಿದಳು:
"ರಂಗಮ್ಮ ಗಟ್ಟಿ ಜೀವ ಕಣ್ರೀ. ಎಂಥ ಕಾಹಿಲೇನೇ ಬರ್ಲಿ. ಹುಷಾರಾಗಿ
ಏಳ್ತಾರೆ."
ಅಹಲ್ಯೆಯ ಅಣ್ಣ ರಾಮಚಂದ್ರಯ್ಯ ನೋಡಲು ಹೃಷ್ಟಪುಷ್ಟನಾಗಿಯೇ ಇದ್ದ.
ಆತ ಕಾಹಿಲೆ ಬೀಳಬಹುದೆಂದು ಯಾರೂ ಭಾವಿಸಿರಲಿಲ್ಲ. ಒಂದು ಸಂಜೆ ಹಿಂತಿರು
ಗಿದವನು "ಮೈ-ಕೈ ನೋವು" ಎಂದ. "ಹಸಿವಿಲ್ಲ, ಊಟ ಬೇಡ" ಎಂದು ಬೆಚ್ಚನೆ
ಹೊದ್ದು ಮಲಗಿದ. ಮೈ ಕಾದು ಕೆಂಡವಾಯಿತು. ತಾಯಿ ಗಾಬರಿಯಾದಳು.
ಕಾಯಿಲೆ ಎಂಬ ಪದಕ್ಕೆ ಸಾವು ಎಂಬ ಅರ್ಥವೇ ಆಕೆಗೆ ತೋರುತ್ತಿದ್ದುದು. ಆಕೆಯ
ಗಂಡ ತೀರಿಕೊಂಡಿದ್ದುದೂ ಹಾಗೆಯೇ. ಮಗ ಒಪ್ಪಲಿಲ್ಲವೆಂದು ಆಕೆ ಕೇಶಮುಂಡನ
ಮಾಡಿಸಿಕೊಂಡಿರಲಿಲ್ಲ. "ಯಾವುದಾದರೂ ಕ್ಷೇತ್ರಕ್ಕೆ ಹೋಗಿ ಮಾಡಿಸ್ಕೋಬೇಕು"
ಎಂದು, ಕೇಳಿದವರಿಗೆ ಹೇಳುತಿದ್ದಳು. 'ಸಕೇಶಿಯಾಗಿ ಉಳಿದದ್ದಕ್ಕೆ ದೇವರು ಈ
ಶಿಕ್ಷೆ ಕೊಡುತ್ತಿದ್ದಾನೆಯೆ?' ಎಂದು ಆ ತಾಯಿ ಮನಸ್ಸಿನಲ್ಲೆ ಹೆದರಿದಳು.
ಬಂದು ನೋಡಿದ ಚಂಪಾ ಅಂದಳು:
"ಔಷಧಿ ತರೋಕೆ ತಡಮಾಡ್ಬೇಡಿ."
ಕಂಗಾಲಾಗಿದ್ದ ತಾಯಿ ಕೇಳಿದಳು:
"ಎಲ್ಲಿಂದ ತರೋಣ್ವೆ ಅಹಲ್ಯಾ? ಮುನಿಸಿಪಾಲ್ಟಿ ಆಸ್ಪತ್ರೆಯಿಂದ್ಲೇನೇ!"
ಆಕೆಯ ಗಂಡನಿಗೆ- ಅಹಲ್ಯೆಯ ತಂದೆಗೆ- ಅಲ್ಲಿಂದಲೇ ತಂದಿದ್ದರು.
"ಬೇಡಮ್ಮ. ಮಲ್ಲೇಶ್ವರದಲ್ಲಿ ಒಬ್ರು ಡಾಕ್ಟರಿದಾರೆ."
"ನಿಂಗೆ ಗೊತ್ತೆ ಅಹಲ್ಯಾ?"
ಅಹಲ್ಯೆ ತಡವರಿಸಿ ಹೇಳಿದಳು:
"ರಾಜಮ್ಮನವರ ಮಗ ಅಲ್ಲೇ ಕೆಲಸ ಮಾಡ್ತಾರಮ್ಮ."
ಅಹಲ್ಯೆಯ ತಾಯಿ ಅಳುತ್ತ ರಾಜಮ್ಮನವರಲ್ಲಿಗೆ ಹೋದಳು.
"ಏನಾದರೂ ಮಾಡಿ ರಾಜಮ್ಮ. ನಿಮ್ಮ ಮಗನಿಗೆ ಹೇಳಿ."
"ಅಳಬೇಡಿ. ಯಾಕೆ ಅಳ್ತೀರಾ?" ಎಂದು ರಾಜಮ್ಮನ ಮಗ ವೆಂಕಟೇಶ ಆ
ತಾಯಿಯನ್ನು ಹಿಂಬಾಲಿಸಿ ಬಂದ. ರಾಮಚಂದ್ರಯ್ಯನ ನಾಡಿ ಹಣೆ ಮುಟ್ಟಿ
ನೋಡಿದ. ಅಹಲ್ಯಾ ಸಜಲನಯನೆಯಾಗಿ ವೆಂಕಟೇಶನನ್ನೇ ನೋಡಿದಳು.
"ಡಾಕ್ಟರನ್ನ ಕರಕೊಂಡು ಬರ್ಬೇಕೇನಪ್ಪಾ?" ಎಂದು ತಾಯಿ ಕೇಳಿದಳು.
"ಈಗೇನು ಬೇಡಿ. ಒಂದೆರಡು ದಿವಸ ಔಷಧಿ ತಗೊಳ್ಲಿ. ಆಮೇಲೆ ಬೇಕಾ
ದರೆ ಡಾಕ್ಟರನ್ನು ಕರಕೊಂಡ್ಬರ್ತೀನಿ."
"ದುಡ್ಡು ಎಷ್ಟು ಕೊಡ್ಬೇಕಪ್ಪ ಈಗ?"
"ಈಗ ಬೇಡಿ. ಆಮೇಲೆ ಕೊಟ್ಟೀರಂತೆ...ಶೀಷೆ ಇದೆಯೇನು?"

"ಇದೆ."

"ನನ್ಜತೇಲಿ ಯಾರಾದರೂ ಬನ್ನಿ. ಔ‍ಷಧಿ ಕೊಡಿಸ್ತೀನಿ."
ತಾಯಿ ಮಗಳ ಮುಖ ನೋಡಿದಳು.
"ಹೋಗಿ ತರ್ತೀಯಾ ಅಹಲ್ಯಾ?"
"ಹೂಂ."
"ಒಬ್ಬಳೇ ಬರೋಕಾಗುತ್ತಾ ವಾಪಸ್ಸು?"
"ಹೂಂ."
ಅಹಲ್ಯಾ ವೆಂಕಟೇಶನ ಹಿಂದೆ ಹೊರಟು ಹೋದಳು. ವಠಾರದ ಹಲವರು
ಅದನ್ನು ನೋಡಿದರು. ರಾಮಚಂದ್ರಯ್ಯ ಕಾಹಿಲೆ ಮಲಗಿದ್ದ. ಯಾರೂ ಮಾತ
ನಾಡಲಿಲ್ಲ.
ಅಹಲ್ಯಾ ಔಷಧಿ ತಂದಾಗ, ಮಗನ ಯೋಚನೆಯಲ್ಲೇ ಇದ್ದ ತಾಯಿ, 'ಒಬ್ಬಳೇ
ಬರೋದು ಕಷ್ಟವಾಯ್ತೇ?' ಎಂದು ಮಗಳನ್ನು ಕೇಳಲಿಲ್ಲ.
ಔಷಧಿ ಸೇವನೆ ಕ್ರಮವಾಗಿ ನಡೆಯಿತು.
ಮಾರನೆಯ ದಿನವೂ ವೆಂಕಟೇಶನ ಜತೆಯಲ್ಲಿ ಅಹಲ್ಯೆ ಆಸ್ಪತ್ರೆಗೆ ಹೋದಳು.
ಜ್ವರ ಹಾಗೆಯೇ ಇತ್ತು.
ಮೂರನೆಯ ಸಂಜೆ ಪುಟ್ಟ ಕಾರೊಂದು ವಠಾರರೆದುರು ಬೀದಿಯಲ್ಲಿ ನಿಂತಿತು.
'ಯಾರೋ ವಿಳಾಸ ತಪ್ಪಿ ಬಂದಿರಬೇಕು,' ಎಂದುಕೊಂಡರು, ಹೊರಗೇ
ನಿಂತಿದ್ದ ರಂಗಮ್ಮ.
ರಂಗಮ್ಮನ ವಠಾರದ ಮುಂದೆ ಕಾರು ನಿಂತಿದನ್ನು ಬೀದಿಯ ಆಚೆಗಿನವರೂ
ವಠಾರದವರೂ ಜತೆಯಾಗಿಯೇ ನೋಡಿದರು.
ವೆಂಕಟೇಶ ಹೊರಕ್ಕಿಳಿದಾಗ, ಕಾರು ತಮ್ಮ ವಠಾರಕ್ಕೇ ಬಂದುದೆಂದು ತಿಳಿದು
ರಂಗಮ್ಮನಿಗೆ ಸಂತೋಷವಾಯಿತು. ಆತನ ಕೈಯಲ್ಲಿ 'ಬ್ಯಾಗ್' ಇತ್ತು. ಅವನ
ಹಿಂದೆ ಡಾಕ್ಟರು ಬಂದರು.
ಆಗ ಎಲ್ಲರಿಗೂ ರಾಮಚಂದ್ರಯ್ಯನನ್ನು ನೋಡಲು ಡಾಕ್ಟರು ಬಂದರೆಂಬುದು
ಸ್ಪಷ್ಟವಾಯಿತು. ರಾಜಮ್ಮ ಬೀಗುತ್ತ ಮಗನ ಹಿಂದೆ ತಾನೂ ನಡೆದಳು.
ವಠಾರವನ್ನು ನೋಡಿ 'ಹುಂ' ಎಂದರು ಡಾಕ್ಟರು. ರೋಗಿಯನ್ನು ಆಸ್ಪತ್ರೆಗೆ
ಸಾಗಿಸಬೇಕಾಗುವುದೇನೋ ಅನಿಸಿತು ಅವರಿಗೆ. ಪರೀಕ್ಷಿಸಿದರು. ಅವರು ಮುಖ
ಗಂಟಿಕ್ಕಲಿಲ್ಲ ಎಂದು ವೆಂಕಟೇಶನಿಗೆ ಸಮಾಧಾನ.
"ಛಳಿ ಜ್ವರ. ಮಲೇರಿಯಾ. ಇನ್ನೆರಡೇ ದಿವಸ. ಇಳಿದು ಹೋಗುತ್ತೇ,"
ಎಂದು ಡಾಕ್ಟರು ವೆಂಕಟೇಶನನ್ನೂ ರೋಗಿಯ ತಾಯಿ ಮತ್ತು ತಾಯಿಯ ಮಗಳನ್ನೂ
ನೋಡುತ್ತ ಹೇಳಿದರು.
ಮತ್ತೆ ಕಾರಿನತ್ತ ಹೋಗುತ್ತ ಅವರೆಂದರು:

"ಇದೇ ಏನಯ್ಯಾ ನಿನ್ನ ವಠಾರ? ಮೈ ಗಾಡ್! ಹುಂ!"

ವೆಂಕಟೀಶಯ್ಯ ಲಜ್ಜೆಗೊಂಡು ನಕ್ಕ.
ಅಹಲ್ಯಾ ದಿನವೂ ವೆಂಕಟೇಶನ ಜತೆಗೆ ಹೋಗಿ ಔಷಧಿ ತಂದಳು. ಜ್ವರ ಇಳಿ
ಯಿತು. ವೆಂಕಟೇಶ ಟಾನಿಕ್ ಕೊಡಿಸಿದ. ರಾಮಚಂದ್ರಯ್ಯ ಮೊದಲಿನಂತೆ ಓಡಾಡು
ವಂತಾದ.
ಅವನ ತಾಯಿ ಕೇಳಿದಳು:
"ಔಷಧೀದು ಎಲ್ಲಾ ಒಟ್ಟಿಗೆ ಎಷ್ಟಾಯಿತು?"
"ನಾಲ್ಕು ರೂಪಾಯಿ" ಎಂದ ವೆಂಕಟೇಶ. ಆ ತಾಯಿ ನಂಬಲಿಲ್ಲ.
"ಅಷ್ಟೇನೇ?"
ಆಕೆಯ ಕಡೆ ನೋಡದೆಯೇ ವೆಂಕಟೇಶ ಹೇಳಿದ:
"ಹೌದು, ಅಷ್ಟೆ."

೧೪

ಶಾಲೆ ಕಾಲೇಜುಗಳು ಆರಂಭವಾದೊಡನೆ, ಖಾಲಿ ಇದ್ದ ಕೊಠಡಿಯನ್ನು
ಬಾಡಿಗೆಗೆ ಹಿಡಿಯಲು ರಂಗಮ್ಮನ ವಠಾರಕ್ಕೆ ಹುಡುಗರು ಬಂದರು. ಎಂದಿನಂತೆಯೇ
ಈ ಸಲವೂ ಬ್ರಾಹ್ಮಣ ಹುಡುಗರಿಗೇ ಕೊಠಡಿಯನ್ನು ಕೊಡಲು ರಂಗಮ್ಮ ಯತ್ನಿಸಿ
ದರು. ಆದರೆ ಎಂದಿನಂತೆಯೇ ಈ ಸಲವೂ ಯತ್ನ ಸಫಲವಾಗಲಿಲ್ಲ. ಪರ ಊರಿನ
ಬ್ರಾಹ್ಮಣ ಹುಡುಗರು, ಬಾಡಿಗೆ ಹದಿಮೂರು ರೂಪಯಿ ಎಂದೊಡನೆ ಅಲ್ಲಿಂದ ಕಂಬಿ
ಕೀಳುತ್ತಿದ್ದರು. ಒಳ್ಳೆಯ ಬ್ರಾಹ್ಮಣ ಹುಡುಗರು ಬಂದರೆ ಒಂದು ರೂಪಾಯಿ ಕಡಿಮೆ
ಮಾಡೋಣವೆಂಬ ಯೋಚನೆಯೂ ರಂಗಮ್ಮನಿಗೆ ಬಂತು. ಆದರೆ ಹಾಗೆ ಭೇದ ಭಾವ
ತೋರುವುದು ಸರಿಯಲ್ಲವೆಂದು ಆ ಯೋಚನೆಯನ್ನು ಅವರು ಬಿಟ್ಟುಕೊಟ್ಟರು.
ಒಂದು ಸಂಜೆ ಮೂವರು ಹುಡುಗರು ಬಂದು ಹೇಳಿದರು:
"ರಂಗಮ್ನೋರನ್ನು ನೋಡಬೇಕಾಗಿತ್ತು."
ರಂಗಮ್ಮ ಅವರನ್ನು ಒಳಗೆ ಕರೆಯದೆ ತಾವೇ ಹೊರಗೆ ಬಂದರು.
"ಯಾರಪ್ಪ ನೀವು?"
"ಬಳ್ಳಾಪುರ ನಮ್ಮೂರು. ಪರಮೇಶ್ವರಪ್ಪ ಒಂದು ಕಾಗದ ಕೊಟ್ಟಿದಾರೆ."
ಆ ಹುಡುಗರಲ್ಲೊಬ್ಬ ಮಡಚಿದ್ದೊಂದು ಲಕೋಟೆಯನ್ನು ಹೊರ ತೆಗೆದ.
"ಯಾರು ಪರಮೇಶ್ವರಪ್ಪ?"
"ಅವರು ಹೋದ ವರ್ಷ ಇಲ್ಲೇ ಓದ್ಕೊಂಡಿದ್ರು."

"ಓ ಪರಮೇಶ್ವರಪ್ನಾ?" ಎಂದು ರಂಗಮ್ಮ ರಾಗವೆಳೆದರು. ಹಿಂದಿನ ವರ್ಷ

ಮೇಲಿನ ಕೊಠಡಿಯಲ್ಲಿ ವಾಸವಾಗಿದ್ದವರ ಮುಖ್ಯಸ್ಥ ತಮಗೆ ಕಾಗದ ಬರೆದಿದ್ದಾನೆಂದು
ಅವರಿಗೆ ಹೆಮ್ಮೆ ಎನಿಸಿತು. ಕಾಗದ ಕೊಡಲು ಕೈ ಚಾಚಿದ ಹುಡುಗನನ್ನು ನೋಡುತ್ತ
ಅವರೆಂದರು;
"ಅದೇನು ಬರೆದಿದ್ದಾನೋ ನೀವೇ ಸ್ವಲ್ಪ ಓದೀಪ್ಪ."
ಪರಮೇಶ್ವರಪ್ಪ ತನ್ನ ಊರಿನ ಹುಡುಗರ ಪರಿಚಯ ಮಾಡಿಕೊಟ್ಟು, ತಾನು
ಹಿಂದೆ ಇದ್ದ ಕೊಠಡಿಯನ್ನು ಬೇರೆ ಯಾರಿಗೂ ಕೊಡದೆ ಆ ಹುಡುಗರಿಗೇ ಕೊಡ
ಬೇಕೆಂದು ಕೇಳಿಕೊಂಡಿದ್ದ. 'ಬೇಡುವ ಆಶೀರ್ವಾದಗಳು' ಎಂದೇನೂ ಬರೆದಿರಲಿಲ್ಲ.
ಆದರೆ 'ಇತಿ ನಮಸ್ಕಾರಗಳು' ಎಂದು ತಿಳಿಸಿದ್ದ.
ಓದಿಯಾದ ಮೇಲೆ ಆ ಕಾಗದವನ್ನು, ಕೈ ಸ್ವಲ್ಪ ಕೆಳಕ್ಕೆ ಒಡ್ಡಿ, ರಂಗಮ್ಮ ಇಸ
ಕೊಂಡರು.
"ಬಾಡಿಗೆ ಎಷ್ಟೂಂತ ಗೊತ್ತೇನಪ್ಪ?"
"ಪರಮೇಶ್ವರಪ್ಪ ಹೇಳಿದಾರೆ...ಹದಿಮೂರು ರೂಪಾಯಿಂತ."
ಉಳಿದ ಶರತುಗಳನ್ನೂ ರಂಗಮ್ಮ ವಿವರಿಸಿದರು.
"ಪರಮೇಶ್ವರಪ್ಪ ವಿಶ್ವಾಸವಿಟ್ಟು ಬರೆದಿದಾನೆ ಅಂದ್ಮೇಲೆ ಕೊಡದೆ ಇರೋ
ಕಾಗುತ್ತೋ? ಅವನಿಗೆ ಪಾಸಾಯ್ತು ಅಲ್ವೆ?"
"ಅವರಿಗೆ ಪಾಸಾಯ್ತು. ಬೇರೆ ಇಬ್ಬರಿಗೆ ಒಂದೊಂದು ಪಾರ್ಟು ಹೋಗಿದೆ.
ಸೆಪ್ಟೆಂಬರಿಗೆ ಕಟ್ತಾರೆ"
ರಂಗಮ್ಮನಿಗೆ ಆ ವಿವರವೊಂದೂ ಅರ್ಥವಾಗಲಿಲ್ಲ.
"ಅಂತೂ ಚೆನ್ನಾಗಿದಾನಲ್ಲ,ಅಷ್ಟೇ ಸಂತೋಷ. ನಮ್ಮ ವಠಾರದಲ್ಲಿ ಓದಿದ
ಹುಡುಗರಿಗೆಲ್ಲ ದೊಡ್ಡ ಕೆಲಸ ಸಿಕ್ಕಿಯೇ ಸಿಗುತ್ತೆ."
ರಂಗಮ್ಮ ಪ್ರಯಾಸಪಟ್ಟು ಮಹಡಿಯ ಮೆಟ್ಟಲುಗಳನ್ನೇರಿ ಆ ಹುಡುಗರನ್ನು
ಕರೆದೊಯ್ದು ಕೊಠಡಿ ತೋರಿಸಿದರು. ಕಾಗದ ಕೊಟ್ಟವನು ಹದಿಮೂರು ರೂಪಾಯಿ
ಗಳನ್ನು ಎಣಿಸಿ ಕೊಟ್ಟ, ತಮ್ಮ ಸಾಮಾನು ತರಲೆಂದು ಇಳಿದು ಹೋದ ಹುಡುಗರನ್ನು
ಜಯರಾಮು ಮತ್ತು ರಾಧಾ ನೋಡಿದರು.
ಶಂಕರನಾರಾಯಣಯ್ಯ ಬರೆದಿದ್ದ 'ಮನೆ ಬಾಡಿಗೆಗೆ ಇದೆ. ಒಳಗಡೆ ವಿಚಾರಿಸಿ'
ಬೋರ್ಡು ರಂಗಮ್ಮನ ಮನೆಯೊಳಕ್ಕೆ ಹೋಯಿತು.
ಹುಡುಗರ ಕೈಯಲ್ಲಿ ರಂಗಮ್ಮ ಕರಾರು ಪತ್ರ ಬರೆಸುವ ಪದ್ಧತಿ ಇರಲಿಲ್ಲ. ಆದರೆ
ರಾತ್ರೆ ಸುಬ್ಬುಕೃಷ್ಣಯ್ಯನನ್ನು ಕರೆಸಿ ಪರಮೇಶ್ವರಪ್ಪ ಬರೆದಿದ್ದ ಕಾಗದವನ್ನು
ಮತ್ತೊಮ್ಮೆ ಓದಿಸಿದರು.

"ನೋಡು ಬ್ರಾಹ್ಮಣನಲ್ದೇ ಇದ್ದರೆ ಏನಾಯ್ತು? ಈ ಊರು ಬಿಟ್ಟು
ಹೋದ್ಮೇಲೂ ರಂಗಮ್ಮನ ವಠಾರವನ್ನ ಆತ ಮರೆತಿಲ್ಲ. ಎಷ್ಟೊಂದು ವಿಶ್ವಾಸ
ಇಟ್ಕೊಂಡಿದಾನೆ!"

ಒಂದು ಕ್ಷಣ ತಡೆದು ಪ್ರಶಂಸೆಯನ್ನು ರಂಗಮ್ಮ ಮತ್ತೂ ಮುಂದುವರೆಸಿದರು:
"ಒಳ್ಳೆ ಹುಡುಗ ಪರಮೇಶ್ವರಪ್ಪ. ಯಾವ ಗಲಾಟೇನೂ ಇರ್ಲಿಲ್ಲ. ರಾತ್ರೆ
ಯೆಲ್ಲಾ ದೀಪ ಉರಿಸ್ದೇನೇ ಪ್ಯಾಸ್ ಮಾಡ್ಕೊಂಡ."
ಸುಬ್ಬುಕೃಷ್ಣಯ್ಯನೆದ್ದು, ರಂಗಮ್ಮನನ್ನು ಅವರ ಯೋಚನೆಗಳ ಪಾಡಿಗೆ ಬಿಟ್ಟು,
ಊಟಕ್ಕೆ ಹೊರಟ.
...ರಂಗಮ್ಮನ ಪಕ್ಕದ ಮನೆಯಾಕೆಯೂ ಮಕ್ಕಳೊಡನೆ ಬಂದಳು. ಒಬ್ಬನಿಗೆ
ತೇರ್ಗಡೆಯಾಗಿತ್ತು. ಇನ್ನೊಬ್ಬ ಅಷ್ಟು ಭಾಗ್ಯವಂತನಾಗಿರಲಿಲ್ಲ.
...ಜಯರಾಮುವಿನ ತಂದೆ ಮತ್ತೊಂದು ಪ್ರವಾಸ ಮುಗಿಸಿ ಮನೆಗೆ ಬಂದರು.
"ಈ ಮಳೇಲಿ ಇನ್ನು ಎರಡು ತಿಂಗಳು ಹೊರಗೆ ಕಾಲು ಹಾಕೋ ಹಾಗೇ ಇಲ್ಲ.
ಉಸ್ಸಪ್ಪ!" ಎಂದು ಉದ್ಗಾರ ತೆಗೆದರು.
ಸೆಪ್ಟೆಂಬರ್ ತಿಂಗಳನ್ನು ಇದಿರು ನೋಡುತ್ತಾ, ಕೊನೆಯ ಹಂತವನ್ನು ದಾಟಿ
ಮುಗಿಸಲು ಜಯರಾಮು ಸಿದ್ಧತೆ ನಡೆಸಿದ.
ಹಸ್ತ ಸಾಮುದ್ರಿಕದ ಪದ್ಮನಾಭಯ್ಯ ಅಳಿಯನೂರಿಗೆ ಹೋಗಿ, ತಿಂಗಳು ತುಂಬಿದ್ದ
ಮಗಳನ್ನು ಗೌರಿಹಬ್ಬಕ್ಕೆಂದು ಕರೆದು ತಂದ. ಮೈ ತುಂಬಿ ಮುದ್ದಾಗಿದ್ದ ಆಕೆಯನ್ನು
ಕಂಡು ಕಾಮಾಕ್ಷಿಗೆ ಒಂದು ವಿಧವಾಯಿತು. ಆಕೆಗೆ ಪದ್ಮನಾಭಯ್ಯನ ಮಗಳ ಪರಿ
ಚಯವೂ ಇರಲಿಲ್ಲ. ಎರಡು ದಿನ ಹಾಗೆಯೇ ಇದ್ದ ಮೇಲೆ ಅಹಲ್ಯಾ ಅವರಿಬ್ಬರಿಗೂ
ಪರಿಚಯ ಮಾಡಿಸಿಕೊಟ್ಟಳು. ಪದ್ಮನಾಭಯ್ಯನ ಮಗಳು ಪರಮಸುಖಿಯೇನೂ
ಆಗಿರಲಿಲ್ಲ. ಆಕೆಯ ಗಂಡ ಒಳ್ಳೆಯವನಾಗಿದ್ದ. ಆದರೆ ಆತನದೇನೂ ಮನೆಯಲ್ಲಿ
ನಡೆಯುತ್ತಿರಲಿಲ್ಲ. ಇತರರು ಅವಳಿಗೆ ಹಿಂಸೆ ಕೊಡುತ್ತಿದ್ದರು. ಆ ಕಥೆಯನ್ನೆಲ್ಲ
ಕೇಳುತ್ತ, ಕಾಮಾಕ್ಷಿ ತಾನೇ ಪರವಾಗಿಲ್ಲ ಎಂದುಕೊಂಡಳು.
ಪದ್ಮನಾಭಯ್ಯ ಅಲ್ಲೇ ಇದ್ದರೂ ವಠಾರದವರು ಯಾರೂ ಅವನಿಗೆ ಕೈ ತೋರಿ
ಸಲು ಬರಲಿಲ್ಲ. ಹಿತ್ತಲ ಗಿಡ ಮದ್ದಲ್ಲ. ಅಲ್ಲದೆ ವಠಾರದವರ ಕೈ ಓದುವ ಇಷ್ಟವೂ
ಆತನಿಗಿರಲಿಲ್ಲ.
ಚಂದ್ರಶೇಖರಯ್ಯನ ಹೆಸರು_ಹಲಿಗೆ ಅವನ ಕಣ್ಣಿಗೆ ಬಿತ್ತು . ಎದುರು ಬದಿಯ
ಕೊನೆಯ ಮನೆಯವರ ಖ್ಯಾತಿ ಕಿವಿಗೆ ಬಿತ್ತು. ಪದ್ಮನಾಭಯ್ಯ ಶಂಕರನಾರಾಯಣಯ್ಯನ
ಪರಿಚಯ ಮಾಡಿಕೊಂಡ.
"ನೀವು ನನಗೊಂದು ಬೋರ್ಡು ಯಾಕೆ ಬರಕೊಡ್ಬಾರ್ದು?"
"ಓಹೋ! ಅದಕ್ಕೇನು? ಬರೆಯೋಣ_ಬರೆಯೋಣ."
"ಪಾಮಿಸ್ಟ್ರಿ ಬೋರ್ಡು ಒಂದಿದ್ರೆ ಚೆನ್ನಾಗಿರುತ್ತೆ. ಅಲ್ಲ ಅಂತೀರಾ?"
"ಚಿನ್ನಾಗಿರುತ್ತೆ! ನೀವು ಎರಡಡಿ ಉದ್ದ ಒಂದಡಿ ಅಗಲದ್ದು ಒಳ್ಳೇ ಹಲಿಗೆ
ಸಂಪಾದಿಸ್ಕೊಂಡು ಬನ್ನಿ."

"ನೀವು ಕೆಲಸ ಮಾಡೋ ಕಡೆ ಯಾವುದಾದರೂ ಚೂರು..."

"ಇಲ್ಲ. ಅಲ್ಲಿ ಬಟ್ಟೆ ಮೇಲೆ ಬರೆಯೋದು."
ಹಲಿಗೆ ಸಿಗದೆ ಬೋರ್ಡಿನ ಯೋಚನೆಯನ್ನು ಆತ ಬಿಟ್ಟುಕೊಡಬಹುದು ಎಂದು
ಭಾವಿಸಿದ್ದ ಶಂಕರನಾರಾಯಣಯ್ಯ. ಅದು ಸುಳ್ಳಾಯಿತು. ಊರೆಲ್ಲ ಸುತ್ತಾಡಿ
ಪದ್ಮನಾಭಯ್ಯ ಮೂರು ಕಾಸು ಕೊಡದೆಯೇ ಒಂದು ಹಲಿಗೆ ದೊರಕಿಸಿಕೊಂಡು
ಬಂದ.
ಶಂಕರನಾರಾಯಣಯ್ಯನೆಂದ:
"ಬೋರ್ಡು ಅದೇನೂಂತ ಬರೀಬೇಕೋ ಅದನ್ನ ಕಾಗದದ ಮೇಲೆ ಬರಕೊಡಿ."
ಆತ ಬರೆದುಕೊಟ್ಟ.
'ಪಾಮಿಸ್ಟ್ರಿ ಪ್ರೊಫೆಸರ್ ಪದ್ಮನಾಭಯ್ಯ.'
ಶಂಕರನಾರಾಯಣಯ್ಯ ಪ್ರಯಾಸಪಟ್ಟು ನಗು ತಡೆದುಕೊಂಡು ಹೇಳಿದ:
"ಇದೇ ಸರಿಯಾಗಿದೆ ಅಂತೀರಾ?"
"ಹೂಂ. ಹೂಂ. ಹಾಗೇ ಇರಬೇಕು."
ಎರಡು ದಿನಗಳಲ್ಲಿ ಬೋರ್ಡು ಸಿದ್ಧವಾಯಿತು. ಬರೆದುದಕ್ಕೆ ಪ್ರತಿಫಲದ
ಮಾತನ್ನು ಯಾರೂ ಆಡಲಿಲ್ಲ. ರಂಗಮ್ಮನಿಗೆ, ಪದ್ಮನಾಭಯ್ಯ ಬೋರ್ಡು ತೂಗ
ಹಾಕುವ ಯೋಚನೆ ಹಿಡಿಸಲಿಲ್ಲ. ಅಲ್ಲದೆ ಪದ್ಮನಾಭಯ್ಯನ ಮನಸ್ಸಿನೊಳಗೇ ಇದ್ದ
ಅಂಜಿಕೆಯೂ ನಿಜವಾಯಿತು. ವಠಾರದ ಹೊರಗಿನ ಗೋಡೆಗಳಲ್ಲೆಲ್ಲೂ ಬೋರ್ಡುನ್ನು
ತೂಗಹಾಕುವಂತಿರಲಿಲ್ಲ.
"ಜಗಳಕ್ಕೆ ಕಾರಣ. ಅದೆಲ್ಲಾ ಬೇಡೀಪ್ಪಾ," ಎಂದು ಖಡಾಖಂಡಿತವಾಗಿ
ರಂಗಮ್ಮ ಹೇಳಿದರು.
ಆದರೂ ಎದೆಗುಂದದೆ ಪದ್ಮನಾಭಯ್ಯ, ಬೀದಿಗೆ ಕಾಣಿಸುವಂತೆ ಹಿತ್ತಿಲ
ಗೋಡೆಯ ಮೂಲೆಯಲ್ಲಿ ಬೋರ್ಡನ್ನು ಒರಗಿಸಿದ.
ಚಂಪಾ ಕೇಳಿದಳು:
"ಬೋರ್ಡು ಬರೆದದ್ದಕ್ಕೆ ಏನಾದರೂ ಬಂತೇಂದ್ರೆ?"
ಶಂಕರನಾರಾಯಣಯ್ಯ ಉತ್ತರವಿತ್ತ:
"ಪ್ರೊಫೆಸರುಗಳು ದುಡ್ಡು ಕೊಡ್ತಾರೇನೆ?"
ಚಂಪಾವತಿ ನಕ್ಕು ನುಡಿದಳು:
"ಅದರ ಬದಲು ಅವರಿಗೊಂದಿಷ್ಟು ‍ಕೈನಾದರೂ ತೋರಿಸ್ಬಾರ್ದೆ?"
"ಕೈ ತೋರಿಸಿ ಅವಲಕ್ಷಣ ಅನ್ನಿಸ್ಕೊಳ್ಲೇನು?"
"ಏನಿಲ್ಲ. ನಿಮ್ಮ ಕೈ ನೋಡಿ,ಎಲ್ಲಾ ಚೆನ್ನಾಗಿದೇಂತ ಆತ ಅನ್ನದೇ ಇದ್ದರೆ
ಆಮೇಲೆ ಹೇಳಿ!"
"ಹೌದು ಅಷ್ಟು ಸೊಗಸಾಗಿ ಬೋರ್ಡು ಬರೆದಿರೋ ಕೈ!"

18

ಮೂರನೆಯ ದಿನ ಬೆಳಗು ಮುಂಜಾನೆ ಬೋರ್ಡು ಅಲ್ಲಿರಲಿಲ್ಲ. ರಾತ್ರೆ
ಹೊತ್ತು ಯಾರೋ ಎಗರಿಸಿಕೊಂಡು ಹೋಗಿದ್ದರು. ಅಳುವ ಹಾಗಾಯಿತು ಪದ್ಮ
ನಾಭಯ್ಯನಿಗೆ. ಅವಾಚ್ಯ ಪದಗಳ ಪ್ರಯೋಗವೆಲ್ಲ ಮುಗಿದ ಮೇಲೆ ಆತ ಗುಮ್ಮೆಂದು
ಸುಮ್ಮನಾದ. ವಠಾರದ ಎಷ್ಟೋ ಮನೆಗಳಲ್ಲಿ ಆ ಪ್ರಕರಣದಿಂದಾಗಿ ಜನ ನಕ್ಕು ನಕ್ಕು
ಆರೋಗ್ಯವಂತರಾದರು. ಪದ್ಮನಾಭಯ್ಯನ ಹೆಸರು ಪ್ರೊಫೆಸರ್ ಎಂದು
ಮಾರ್ಪಟ್ಟಿತು.
ಅದಾದ ಮಾರನೆಯ ದಿನ ಪದ್ಮನಾಭಯ್ಯನ ಅಳಿಯ ಬಂದು ಗರ್ಭಿಣಿ ಹೆಂಡತಿ
ಯನ್ನು ಕರೆದೊಯ್ದ...
...ಚಂಪಾವತಿ ತುಂಬಾ ಖುಶಿಯಾಗಿದ್ದಳು. ಶಂಕರನಾರಾಯಣಯ್ಯನಿಗೆ ಅರ್ಥ
ವಾಗಲಿಲ್ಲ.
"ಯಾಕೆ ಹಾಗೆ ನನ್ನನ್ನೇ ನೋಡ್ತಿದ್ದೀಯಾ?"
"ಎಲ್ನೋಡ್ದೆ?"
ಹಾಗೆ ಕೇಳಿ,ಗಟ್ಟಿಯಾಗಿ ಚಂಪಾ ನಕ್ಕಳು.
ರಹಸ್ಯ ಬಹಳ ಹೊತ್ತು ಬಗೆಹರಿಯಲೇ ಇಲ್ಲ.
ದೀಪ ಆರಿದಾಗಲಿನ್ನೂ ಹಾಸಿಗೆ ಬಿಡಿಸಿರಲಿಲ್ಲ. ಕತ್ತಲಲ್ಲೆ ಹಾಸುತ್ತ ಚಂಪಾ
ಹೇಳಿದಳು:
"ಇವತ್ತು ಪ್ರೊಫೆಸರ್ ರ ಅಳಿಯ ಬಂದಿದ್ರೂಂದ್ರೆ..."
"ಅಂತೂ ಬೋರ್ಡು ಬರೆಸಿ ಬಿರುದು ಗಿಟ್ಟಿಸ್ಕೊಂಡು!"
"ಹೂಂ. ಆ ಅಳಿಯ ಪ್ರೊಫೆಸರ್ ಮಗಳ್ನ ಕರಕೊಂಡು ಹೋದ."
"ಆಕೆ ಬಸುರೀಂತ ಹೇಳಿದ್ಯಲ್ಲೇ ನೀನು?"
"ಹೌದು. ಅದಕ್ಕೇ ಕರಕೊಂಡು ಹೋದ. ಅನುಕೂಲಸ್ಥ ಅಂತ ತೋರುತ್ತೆ.
ಜಗಳ ಆಯ್ತು,ಚೊಚ್ಚಲ ಬಾಣಂತನ ಇಲ್ಲೇ ಆಗ್ಲಿ ಅಂದರು ಪ್ರೊಫೆಸರ್ ಹೆಂಡತಿ.
ಬೇಡ,ನಮ್ಮೂರಲ್ಲಿ ಒಳ್ಳೇ ಆಸ್ಪತ್ರೆ ಇದೆ. ಅಲ್ಲಿಗೇ ಕರಕೊಂಡು ಬಾ ಅಂದಿದಾರೆ
ನಮ್ಮಮ್ಮ_ಎಂದು ಅಳಿಯ. ಹುಡುಗಿ ಎದ್ದೇ ಬಿಟ್ಟಳು ಗಂಡನು ಜತೆಗೆ."
"ಭೇಷ್!"
ಆಮೇಲೆ ಚಂಪಾ ಮಾತನಾಡಲಿಲ್ಲ.ತಲೆಗಳು ದಿಂಬುನ್ನು ಸೋಂಕಿದುವು.
ಒಮ್ಮೆಲೆ ಶಂಕರನಾರಾಯಣಯ್ಯ ಏನೋ ಹೊಳೆದವನಂತೆ ಅಂದ:
"ಚಂಪಾ!"
"ಏನು?"
"ಈ ತಿಂಗಳು ನೀನು ಹೊರಗೆ ಕೂತೇ ಇಲ್ವಲ್ಲೇ!"
ಚಂಪಾ ನಗೆ ತಡೆದುಕೊಂಡು ಹೇಳಿದಳು:

"ಇಲ್ಲ.ಅದ್ದಕ್ಕೆ?"

ಆಕೆ ಆ ಸಂಜೆಯೆಲ್ಲ ವಿಚಿತ್ರವಾಗಿ ತನ್ನನ್ನು ನೋಡುತ್ತಿದ್ದುದು, ಪದ್ಮನಾ
ಭಯ್ಯನ ಮಗಳ_ಅಳಿಯನ ಪ್ರಸ್ತಾಪ, ಪ್ರತಿಯೊಂದೂ ಆತನಿಗೆ ಅರ್ಥವಾಯಿತು.
ಮೊದಲೇ ತಿಳಿಯದೆ ಹೋದೆನೆಂದು ತನ್ನ ಬಗ್ಗೆ ತಾನೇ ರೇಗುತ್ತ ಆತನೆಂದ:
"ಏನೂ ಇಲ್ಲ. ಅದಕ್ಕೆ?"
"ಇನ್ನೇನು ಹೇಳ್ಬೇಕು ನಿಮಗೆ?"
"ಕೆಟ್ಟವಳು!"
"ನೀವೇ ಕೆಡಿಸ್ದೋರು!"
ಮತ್ತೂ ಸ್ವಲ್ಪ ಸಂದೇಹಿಸುತ್ತ ಆತ ಕೇಳಿದ:
"ನಿಜವೇನೆ ಹಾಗಾದರೆ?"
"ಅಷ್ಟು ತಿಳೀದೇನೋ ನಿಮಗೆ!"
ಚಂಪಾ ನಕ್ಕಳು. ಆತ ಆ ನಗುವನ್ನು ನಿಲ್ಲಿಸಿದ. ತನಗೆ ನಿದ್ದೆ ಬಂದಿಲ್ಲವೆಂದು
ಮಗು ಅತ್ತಿತು.
....ಊರೂರು ಸುತ್ತಿ ಆಗ್ಗಾಗೆ ಬರುತ್ತಿದ್ದ ಕಮಲಮ್ಮನ ಗಂಡ, ಹೆಂಡತಿ
ಯನ್ನು ಪ್ರೀತಿಸುವುದಿತ್ತು_ಮನಸ್ಸು ತೃಪ್ತಿಯಾಗುವವರೆಗೆ. ಆ ಬಳಿಕ ಕಮಲಮ್ಮನ
ಪಾಡು ಕಮಲಮ್ಮನಿಗೆ. ಆತ ಮಧ್ಯ ವಯಸ್ಸಿನ ಕಟುಮಸ್ತಾದ ಆಸಾಮಿ.
ಕಮಲಮ್ಮನನ್ನು ಬಿಟ್ಟುಬಿಡುವ,ಬೇರೆ ಮದುವೆ ಮಾಡಿಕೊಳ್ಳುವ,ಯೋಚನೆ
ಆತನಿಗೆ ಎಷ್ಟೋ ಸಾರೆ ಬಂದಿತ್ತು. ಆದರೆ ಯಾವುದೋ ಸಂಸ್ಕಾರ ಅಡ್ಡ ಬಂದು,
"ಛೆ! ಹಾಗೆ ಮಾಡಬಾರದು"ಎಂದಿತ್ತು ಪ್ರತಿಸಲವೂ.
ಅದೇ ಸಂಸ್ಕಾರದ ಫಲವಾಗಿಯೇ ಒಮ್ಮೊಮ್ಮೆ, ಕ್ರೂರವಾಗಿದ್ದರೂ ಸತ್ಯ
ವಾಗಿದ್ದ ಮಾತುಗಳು ಆತನ ಬಾಯಿಯಿಂದ ಹೊರಡುತ್ತಿದ್ದುವು.
"ವೈದಿಕ ವೃತ್ತಿ ಹುಂ!ನಿಜವಾಗಿ ನೋಡಿದರೆ ಇದು ತಿರುಪೆ ಎತ್ತೋದು."
ಅಥವಾ...
"ಹಾಡಿದ್ದೇ ಹಾಡ್ಕೊಂಡು ಬರೋಲ್ವೆ ತಂಬೂರಿ ದಾಸ? ಹಾಗೆ ನಮ್ಮ ಮಂತ್ರ
ಪಠಣ."
ಆತನಿಗೆ ಹೆಚ್ಚಿನ ವಿದ್ವತ್ತಿರಲಿಲ್ಲ. ಸಂಸ್ಕೃತ_ಕನ್ನಡ_ಯಾವುದರಲ್ಲೂ ಆಳವಾದ
ಅಭ್ಯಾಸವಿರಲಿಲ್ಲ.ತನ್ನ ವೃತ್ತಿ ಸಾಗಿಸಿಕೊಂಡು ಹೋಗಲು ಎಷ್ಟು ಬೇಕೋ ಅಷ್ಟೆ.
ಆದರೆ ತನ್ನ ವೈಯಕ್ತಿಕ ಇರುವಿಕೆಗಾಗಿ ಲೋಕದ ಮೇಲೆಯೇ ಮುನಿದುಕೊಂಡಿದ್ದ.
ಆತ ವಕ್ರಾಚಾರ್ಯನಾಗಿದ್ದ. ಸ್ನೇಹಿತರು, ಸಂಬಂಧಿಕರು ಇಲ್ಲವೆ ಕಮಲಮ್ಮನೊಡನೆ
ಮಾತನಾಡಿದಾಗಲೆಲ್ಲ ಆತನ ಮಾತು ವಕ್ರವಾಗಿರುತ್ತಿತ್ತು.

ಇನ್ನು ತಮಗೆ ಮಕ್ಕಳಾಗುವುದಿಲ್ಲವೆಂಬುದು,ಮಕ್ಕಳಾದರೂ ಉಳಿಯುವುದಿಲ್ಲ
ವೆಂಬುದು, ಕಮಲಮ್ಮನಿಗೆ ಖಚಿತವಾಗಿತ್ತು. ಹೆಂಗಸರ ಕಾಹಿಲೆಗಳನ್ನೆಲ್ಲ ಗುಣ
ಪಡಿಸುವ ದೊಡ್ಡ ಲೇಡಿ ಡಾಕ್ವರೊಬ್ಬರ ವಿಷಯ ಒಮ್ಮೆ ಯಾರೋ ಪ್ರಸ್ತಾಪಿಸಿದ್ದರು.

ಆದರೆ ಆ ಡಾಕ್ಟರ ಜಾತಿ ಬೇರೆ. ಅದಲ್ಲದೆ ಅದು ನೂರಿನ್ನೂರು ರೂಪಾಯಿ ವೆಚ್ಚದ
ಬಾಬು. ಆ ವಿಷಯವನ್ನು ಗಂಡನ ಕಿವಿ ಮೇಲೆ ಹಾಕಿ ಕಮಲಮ್ಮ ಸುಮ್ಮನಾಗಿದ್ದಳು.
ಆತ ಗದರಿ ನುಡಿದಿದ್ದ:
"ಮಾರವಾಡಿ ಕಾಲು ಹಿಡಿದು ಸಾಲ ತರಬೇಕು ಅಂತೀಯೇನು?ಲೇಡಿ
ಡಾಕ್ಟರು!..."
"ನಾನೆಲ್ಲಿ ಹಾಗಂದೆ? ಸುಮ್ನೆ ಹೇಳ್ದೆ ಅಷ್ಟೆ."
ಡಾಕ್ಟರು ಯಾವ ಜನವಾದರೇನು? ಮನುಷ್ಯರು ತಾನೇ? ತಾನು ಬರಿಗೈ ಬಡವ
ಎಂದು ಹೇಳಿಕೊಂಡರೆ ರೋಗ ಪರೀಕ್ಷೆಗೇನೂ ಖರ್ಚಾಗಲಾರದು-ಎಂದು ಆತ
ಯೋಚಿಸಿದ. ಆದರೆ ಪರೀಕ್ಷೆಯಾದ ಮೇಲೆ ಔಷಧಿ ತರಬೇಕು. ಅದಕ್ಕೆ ಬೇಕು
ದುಡ್ಡು. ಎಷ್ಟು ರೂಪಾಯಿಯೋ ಏನೋ. ಆ ಚಿಂತೆ ಆತನನ್ನು ಕಾಡಿತು.
"ಮನುಷ್ಯನ ಕೈಲಿ ಏನಿದೆ? ಎಲ್ಲಾ ಆ ಭಗವಂತನ ಇಚ್ಛೆ. ಆ ಮಹಾರಾಯ
ಅದೇನು ಬರೆದಿದ್ದಾನೋ?" ಎಂದು ಆತ ಹೆಂಡತಿಗೆ ಹೇಳಿದ.
ಆದರೆ, ಹೊರಗೆ ಹಾಗೆ ಹೇಳಿದರೂ ಮನಸ್ಸಿನೊಳಗೆ ಆಸೆ ಇದ್ದೇ ಇತ್ತು.
'ಅನುಕೂಲವಾದಾಗ ಒಮ್ಮೆ ಪರೀಕ್ಷೆ ಮಾಡಿಸಬೇಕು' ಎಂದು ತೀರ್ಮಾನಿಸಿದ್ದ. ಆದರೆ
ಇಷ್ಟು ವರ್ಷಗಳಾದರೂ ಅನುಕೂಲವಾಗಿಯೇ ಇರಲಿಲ್ಲ.
ಒಂಟಿಯಾಗಿಯೇ ಅಸಂಖ್ಯ ರಾತ್ರೆಗಳನ್ನು ಕಳೆದು ಅಭ್ಯಾಸವಾಗಿದ್ದ
ಕಮಲಮ್ಮ....
....ಈ ರಾತ್ರೆ ಆಕೆ ಒಂಟಿಯಾಗಿರಲಿಲ್ಲ. ಗಂಡ ಬಂದಿದ್ದ.
ಗಂಡ ಬಂದೊಡನೆ ಸರಸ ಸಲ್ಲಾಪಗಳಾದುವೆಂದು ಅರ್ಥವಲ್ಲ. ಅಂತಹ
ಅಭ್ಯಾಸವನ್ನು ಆ ವಕ್ರಾಚಾರ್ಯ ಇಟ್ಟಿರಲಿಲ್ಲ. ದಾಂಪತ್ಯ ಜೀವನದ ಮೊದಲ ವರ್ಷಗಳ
ಸುಖವೀಗ ಗತಕಾಲದ ನೆನಪು ಮಾತ್ರ. ಆದರೆ ಆ ನೆನಪು ಕೂಡ ಒಂದು ಶತಮಾನದ
ಹಿಂದಿನ ಕತೆಯೇನೋ ಎನ್ನುವ ಹಾಗೆ ಮಾಸಿಹೋಗಿತ್ತು.
ಗಂಡ ಊರಿಗೆ ಬಂದಾಗ ಕಮಲಮ್ಮ ಆತನ ಜತೆಯಲ್ಲಿ ಮಲಗುತ್ತಿದ್ದಳು.
ಆದರೆ, ಗಂಡನ ರೋಮ ತುಂಬಿದ ವಕ್ಷಸ್ಥಲದ ಮೇಲೆ ಮುಖವಿಟ್ಟು ಅಳಬೇಕೆಂದು
ಆಕೆಗೆ ತೋರುತ್ತಿರಲಿಲ್ಲ. ಹೃದಯದ ದುಗುಡವನ್ನು ಬಿಚ್ಚಿಟ್ಟು ಹೆಂಡತಿಯೊಡನೆ
ಮಾತನಾಡಬೇಕೆಂದು ಆತನಿಗೂ ಅನಿಸುತ್ತಿರಲಿಲ್ಲ.
ಮಲಗಿದೊಡನೆ ಏನೋ ನೆನಪಾಗಿ ಈ ಸಲ ಆತ ಕೇಳಿದ:
"ಈ ತಿಂಗಳ ಬಾಡಿಗೆ ಕೊಟ್ಟೆಯೇನು?"
"ಹೂಂ."
"ಇಲ್ಲಿ ಮಳೆ ಚೆನ್ನಾಗಿ ಬಿತ್ತೆ?"
"ಹೌದು."

"ರಂಗಮ್ಮ ಈ ವರ್ಷವೂ ಭಾವಣಿ ದುರಸ್ತಿ ಮಾಡಿಸ್ಲಿಲ್ಲ."

"ಇಲ್ಲ."
ಮಾತು ನಿಂತಿತು. ಮತ್ತೆರಡು ನಿಮಿಷಗಳಲ್ಲಿ ಆತ ಗೊರಕೆ ಹೊಡೆಯುವುದು
ಕೇಳಿಸಿತು.

೧೫

ಆ ವರ್ಷ ವಠಾರಕ್ಕೆ ಬಂದ ಮೂವರು ಹುಡುಗರಿಗೂ ಬೆಂಗಳೂರು ಹೊಸ
ದಾಗಿತ್ತು. ಅಂತಹ ವಠಾರ ಜೀವನವೂ ಹೊಸದು. ಅವರಲ್ಲಿಬ್ಬರು ಊರಲ್ಲಿದ್ದಾಗ
ಕತೆ ಕಾದಂಬರಿಗಳಲ್ಲಿ ಬೆಂಗಳೂರಿನ ವಿಷಯ ಸಾಕಷ್ಟು ಓದಿ ನಾಲಿಗೆ ಚಪ್ಪರಿಸಿದ್ದರು.
ಈಗ ಬೆಂಗಳೂರು ಜೀವನ ಮೈಗೂಡಲು ಅವರಿಗೆ ಹೆಚ್ಚು ಕಾಲ ಹಿಡಿಯಲಿಲ್ಲ.
ಇನ್ನೊಬ್ಬ_ ಪರಮೇಶ್ವರಪ್ಪನ ಕಾಗದ ತಂದುಕೊಟ್ಟು ರಂಗಮ್ಮನೊಡನೆ
ಮಾತನಾಡಿದ ಹುಡುಗ_ ಒಳ್ಳೆಯವನಾಗಿದ್ದ. ಆದರೆ ಆತ ಪುಸ್ತಕದ ಕೀಟ. ಪಠ್ಯ
ಪುಸ್ತಕಗಳ ಹೊರಗೆ ಬೇರೆ ಪ್ರಪಂಚವಿದೆ ಎಂಬುದನ್ನು ಎಂದೂ ಒಪ್ಪಿದವನಲ್ಲ. ಎರಡು
ವಾರಗಳಿಗೊಮ್ಮೆ ತಪ್ಪದೆ ಊರಿಗೆ ಕಾಗದ ಬರೆಯುತ್ತಿದ್ದ. ನಿಯಮಕ್ಕೆ ಮೀರಿ
ಹೋಟೆಲುಗಳಿಗೆ ಭೇಟಿ ಕೊಡುತ್ತಿರಲಿಲ್ಲ. ಸಂಜೆ ಒಬ್ಬನೇ ತಿರುಗಾಡಲು ಹೋಗು
ತ್ತಿದ್ದ. ಆದರೆ ಆಗಲೂ ಕಂಕುಳಲ್ಲೊಂದು ಪುಸ್ತಕವಿರುತಿತ್ತು. ಕತ್ತಲಾದೊಡನೆ
ಕೊಠಡಿಗೆ ಹಿಂತಿರುಗುತಿದ್ದ.
ಸೂಕ್ಷ್ಮ ನಿರೀಕ್ಷೆಯಲ್ಲಿ ಸಮರ್ಥನಾದ ಜಯರಾಮುವಿಗೆ ಈ ಹುಡುಗನ ಗುಣ
ತಿಳಿಯಿತು. ಸ್ನೇಹಿತರನ್ನು ಗಳಿಸಿಕೊಳ್ಳುವ ಆತುರವೇನೂ ಜಯರಾಮುವಿಗೆ ಇರ
ಲಿಲ್ಲವಾದರೂ, ಒಂದೇ ವಠಾರವೆಂದ ಮೇಲೆ ಮಾತನಾಡಿಸದೆ ಇರಬಾರದೆಂದು
ಭಾವಿಸಿದೆ.
ವಠಾರಕ್ಕೆ ಅಂಚೆಯವನು ಬರುತ್ತಿದ್ದುದು ಎಂದಾದರೊಮ್ಮೆ. ಹೊರ ಅಂಗಳ
ದಲ್ಲಿ ಯಾರಾದರೂ ಇದ್ದರೆ, ಆ ಬೀದಿಯಲ್ಲಿ ಅಂಚೆಯವನು ಹಾದು ಹೋದಾಗ
ಎಲ್ಲರ ಕಣ್ಣುಗಳೂ ಅವನ ಕಡೆ ತಿರುಗುತ್ತಿದ್ಧವು. ಆತ ವಠಾರದೊಳಕ್ಕೆ ಬರುವ ಕೃಪೆ
ತೋರಿದ ದಿನ, ಎಲ್ಲರ ಕತ್ತುಗಳೂ ನೀಳವಾಗುತ್ತಿದ್ದುವು. ಕಾಗದ ತಮ್ಮದಿರಬಹುದು,
ತಮ್ಮದೇ ಇರಬೇಕು ಎಂದು ಪ್ರತಿಯೊಂದು ಮನೆಯವರೂ ಭಾವಿಸುತ್ತಿದರು. ಆಗ
ರಂಗಮ್ಮನೂ ಹೊರ ಬಂದು, ಕಾಗದ ಯಾವುದಾದರೂ ಮನೆಯ ಒಳಹೋಗುವು
ದನ್ನು ನೋಡುತ್ತಿದ್ದರು. ಆಗ ಇತರರಿಗೆ ನಿರಾಶೆಯಾಗುತ್ತಿತ್ತು. ಆದರೂ ಅಪ್ಪಿ
ತಪ್ಪಿ ತಮ್ಮ ಕಾಗದವೇ ಆ ಮನೆಯೊಳಗೆ ಹೋಗಿರಬಹುದೆಂಬ ಶಂಕೆ ಕೆಲವರಿಗೆ ತಲೆ

ದೋರದೆ ಇರುತ್ತಿರಲಿಲ್ಲ. ಹೀಗಾಗಿ, ಕಾಗದ ಬಂದು ಯಾವುದಾದರೂ ಮನೆ ಸೇರಿ

ಐದು ನಿಮಿಷಗಳಾಗುವವರೆಗೂ ಅವರು ಕಾಯುತ್ತಿದ್ದರು.
ಒಂದು ದಿನ ಅಂಚೆಯವನು ಗೇಟಿನ ಹೊರಗೆ ನಿಂತು, ಒಂದು ಲಕೋಟೆ
ಯನ್ನು ಕೈಯಲ್ಲೆತ್ತಿ ಹಿಡಿದ. ಹಲವು ಮುಖಗಳು ಸ್ವಾಗತ ಬಯಸಿದುವು.
ಅಂಚೆಯವನು ಕೇಳಿದ:
"ಇಲ್ಲಿ ರಾಜಶೇಖರ ಅಂತ ಯಾರಿದಾರೆ? ಪಿ.ವೈ.ರಾಜಶೇಖರ."
"ಯಾರೂ ಇಲ್ವಲ್ಲಾ!" ಎಂದರು ಒಬ್ಬಿಬ್ಬರು ಹೆಂಗಸರು.
"ಮಹಡಿ ಮೇಲಿರೋರೋ ಏನೋ," ಎಂದಳು ಇನ್ನೊಬ್ಬಳು.
"ಅವರು ಚಂದ್ರಶೇಖರಯ್ಯ ಕಣೇ," ಎಂದು ಮತ್ತೊಬ್ಬಳು ಸಂದೇಹ ಪರಿಹರಿ
ಸಿದ್ದೂ ಆಯಿತು.
"ಅವರಲ್ಲ, ಅವರಲ್ಲ," ಎಂದು ಅಂಚೆಯವನೂ ಧ್ವನಿಗೂಡಿಸಿದ.
ಮೇಲೆ ಪರೀಕ್ಷೆಗೆ ಓದ್ದುತ್ತ ಕುಳಿತಿದ್ದ ಜಯರಾಮು ಅಂಚೆಯವನನ್ನು ನೋಡಿ
ಕೆಳಕ್ಕೆ ಇಳಿದು ಬಂದ. ಅಂಚೆಯವನು ಮತ್ತೊಮ್ಮೆ ತನ್ನ ಪ್ರಶ್ನೆಯನ್ನು ಕೇಳಿ
ದ್ದಾಯಿತು.
ಆ ಕಾಗದ, ಹೊಸತಾಗಿ ಬಂದ ವಿದ್ಯಾರ್ಥಿಗಳದಿರಬಹುದೆಂದು ಜಯರಾಮು
ವಿಗೆ ಹೊಳೆಯಿತು. ಹೊರಗೆ ಬರುತ್ತಿದ್ದ ರಂಗಮ್ಮನನ್ನು ಉದ್ದೇಶಿಸಿ ಆತ ಕೇಳಿದ:
"ಹೊಸದಾಗಿ ಬಂದಿರೋರಲ್ಲಿ ರಾಜಶೇಖರ ಅಂತ ಒಬ್ರಿದಾರೆ. ಅಲ್ವೆ
ರಂಗಮ್ನೋರೆ?"
"ಅದೇ ಆ ಓದೋ ಹುಡುಗರ ಪೈಕಿ?"
"ಹೂಂ. ಹೌದು."
"ಇದಾನೆ__ಇದಾನೆ."
ಅಂಚೆಯವನು ಕಾಗದವನ್ನು ಜಯರಾಮುವಿಗೆ ಕೈಗೆ ಕೊಟ್ಟು ಹೊರಟು
ಹೋದ.
ತನಗೆ ಕಾಗದ ಬರೆಯುವಂತಹ ನೆಂಟರಿಷ್ಟರು ಯಾರೂ ಇಲ್ಲದೆ ಇದ್ದ ರಾಜಮ್ಮ
ಕೇಳಿದಳು:
"ಯಾವೂರಿಂದ ಬಂದಿದೆ?"
ಜಯರಾಮು ಮಾತನಾಡಲಿಲ್ಲ. ಆ ಹೆಂಗಸರನ್ನೆಲ್ಲ ಆತ ದುರದುರನೆ ನೋಡಿ,
ಕಾಗದದೊಡನೆ ಮಹಡಿಯ ಮೆಟ್ಟಲುಗಳನ್ನೇರಿದ.
ಲಕೋಟೆಯ ಮೇಲೆ ವಿಳಾಸ ಬರೆದಿತ್ತು:
ಪಿ.ವೈ.ರಾಜಶೇಖರನಿಗೆ, ರಂಗಮ್ಮನ ವಠಾರ, ಶ್ರೀರಾಮಪುರ, ಬೆಂಗಳೂರು
ಸಿಟಿ. ಸಿಟಿಯ ಮುಂದೆ ಕತ್ತರಿ ಗುರುತು ಹಾಕಿ ನಾಲ್ಕು ಚುಕ್ಕೆ ಇಟ್ಟಿದ್ದರು. ಅದರ
ಕೆಳಗೆ ಕೆಂಪು ಮಸಿಯಲ್ಲಿ ಬೆಂಗಳೂರು ಎಂದು ಇಂಗ್ಲಿಷಿನಲ್ಲಿತ್ತು. ಅದನ್ನು ಆಂಚೆ

ಯವರು ಬರೆದಿರಬೇಕು ಎಂದು ಜಯರಾಮು ಊಹಿಸಿಕೊಂಡ.

ಅವನ ಕಲ್ಪನೆ ಆ ವಿವಿಧ ಪದಗಳ ಸುತ್ತಲೂ ಸ್ವಲ್ಪ ಹೊತ್ತು ಸುಳಿದಾಡಿತು.
ಅದು ಹುಡುಗು ಕೈ ಬರಹ. ದುಂಡಗಿತ್ತು. ರಾಜಶೇಖರನ ತಮ್ಮ ಬರೆದಿದ್ದನೇನೊ?
ಅಥವಾ ತಂಗಿ?..... ಆ ಮೂವರಲ್ಲಿ ಯಾವನು ರಾಜಶೇಖರ? ಆ ಕಾಗದದಲ್ಲಿ ಏನಿ
ದೆಯೊ? ತನ್ನ ತಂದೆ ತನಗೆ ಬರೆಯುವಂತೆ ಅವನ ತಂದೆ ಆತನಿಗೆ ಬರೆದಿರಬಹುದಲ್ಲವೆ?
ಕಾಗದದ ಒಕ್ಕಣೆಯನ್ನು ಊಹಿಸಿಕೊಳ್ಳುವುದು ಜಯರಾಮುವಿಗೆ ಕಷ್ಟ
ವಾಗಿರಲಿಲ್ಲ:
'ಕುಶಲ' ಎಂದಿರಬಹುದು ಮೇಲ್ಗಡೆ. ಇಲ್ಲವೆ, ಕಾಗದದ ಮೂಲೆಯಲ್ಲಿ 'ಕ್ಷೇಮ'
ಎಂದು ಬರೆದು ಕೆಳಗೆ ಎರಡು ಗೆರೆ ಎಳೆದಿರಬಹುದು.....ಚಿ||ಗೆ ಮಾಡುವ
ಆಶೀರ್ವಾದ....ನಾವು ಇಲ್ಲಿ ಎಲ್ಲರೂ ಕ್ಷೇಮ....ನಿನ್ನ ಕ್ಷೇಮದ ಬಗ್ಗೆ ಬರೆಯುತ್ತಿರು.....
ಹಾಗೆ ಕಾಗದ ಬರೆದ ತಂದೆ....ರಾಜಶೇಖರನ ತಂದೆಯನ್ನು ಚಿತ್ರಿಸಿಕೊಳ್ಳಲು
ಜಯರಾಮು ಯತ್ನಿಸಿದ. ಆ ಆಕೃತಿ ಅಷ್ಟು ಸ್ಪಷ್ಟವಾಗಿ ಮೂಡಲಿಲ್ಲ. ತನ್ನ
ಯೋಚನೆಗಳನ್ನು ಕಂಡು ಆತನಿಗೆ ನಗು ಬಂತು.
ರಾಧಾ ಬಾಗಿಲಿನಿಂದ ಹೊರಕ್ಕೆ ಇಣಕಿ ನೋಡಿ ಕೇಳಿದಳು:
"ಯಾರದಣ್ಣ ಕಾಗದ?"
"ನಮಗಲ್ವೆ," ಎಂದ ಜಯರಾಮು, ತನ್ನ ಯೋಚನೆಗಳನ್ನು ನಿಲ್ಲಿಸಿ. ಆ ಸ್ವರ
ದಲ್ಲಿ ಸಿಡುಕಿತ್ತು. ವಠಾರದ ಇತರ ಹೆಂಗಸರು ಹಾಗೆ ತನ್ನ ತಂಗಿಯೂ ಅತಿ ಕುತೂಹಲಿ
ಯಾಗುವುದು ಆತನಿಗೆ ಇಷ್ಟವಿರಲಿಲ್ಲ.
ಜಯರಾಮು ಮೊದಲ ಕೊಠಡಿಯ ಬಾಗಿಲು ಸಂದಿಯೊಳಗಿಂದ ಲಕೋಟೆ
ಯನ್ನು ಒಳಕ್ಕೆ ತಳ್ಳಿದ.
ತರಗತಿ ಮುಗಿದೊಡನೆ ಎಂದಿನಂತೆ ಬಂದವನು ಆ ಹುಡುಗನೇ. ಕಾಲಲ್ಲಿ
ಚಪ್ಪಲಿ ಇಲ್ಲದೆ, ಆತ ಮೆಟ್ಟಲೇರಿದರೆ ಸದ್ದಾಗುತ್ತಿರಲಿಲ್ಲ. ಬಾಗಿಲ ಬೀಗವನ್ನೂ
ಸಾವಧಾನವಾಗಿ ತೆಗೆಯುತ್ತಿದ್ದ.
ಕಿಟಕಿಯ ಬಳಿ ಕುಳಿತಿದ್ದ ಜಯರಾಮುಗೆ, ಆ ಹುಡುಗ ಬಂದುದು ತಿಳಿಯಿತು.
ಆತನೇ ರಾಜಶೇಖರನಿರಬಹುದು; ಕಾಗದ ತೆರೆದು ಓದುತ್ತಿರಬಹುದು ಎಂದು ಜಯ
ರಾಮು ಕಲ್ಪಿಸಿಕೊಂಡ. ಸ್ವಲ್ಪ ಹೊತ್ತದ ಮೇಲೆ ಎದ್ದು, ಆ ಹುಡುಗನನ್ನು ಮಾತ

ನಾಡಿಸೋಣವೆಂದು ಆ ಕೊಠಡಿಯತ್ತ ಸಾಗಿದ.
ಚಾಪೆಯ ಮೇಲೆ ಕುಳಿತುಕೊಂಡು ತಲೆಬಾಗಿಸಿ ಎರಡನೆಯ ಸಾರೆ ಕಾಗದ ಓದು
ತ್ತಿದ್ದ ಹುಡುಗ ಮುಖವೆತ್ತಿ ಬಾಗಿಲಿನತ್ತ ದಿಟ್ಟಿಸಿದ. ತಾನು ಎಷ್ಟೋ ದಿನಗಳಿಂದ
ನೋಡುತ್ತಲಿದ್ದ ವಠಾರದವನು ಅಲ್ಲಿ ನಿಂತಿದುದನ್ನು ಕಂಡು ಆ ಹುಡುಗನಿಗೆ ಸಂಕೋ
ಚವೂ ಆಯಿತು, ಸಂತೋಷವೂ ಆಯಿತು. ಎದ್ದು ನಿಂತು ಆತ ಹೇಳಿದ:
"ಒಳಗ್ಬನ್ನಿ."
"ಪರವಾಗಿಲ್ಲ....ಅಂಚೆಯವನು ಒಂದು ಕಾಗದ ತಂದ್ಕೊಟ್ಟ. ಒಳಗೆ ಹಾಕ್ದೆ. ಸಿಗ್ತೇನು?"
"ಓ__ಸಿಕ್ತು."
"ನೀವೇನಾ ರಾಜಶೇಖರ ಅಂದರೆ?"
"ಹೌದು. ಒಳಗ್ಬನ್ನಿ. ನಿಮ್ಮ ಹೆಸರು ಜಯರಾಮು ಅಲ್ವಾ?"
"ಹೌದು.ಜಯರಾಂ ಅಂತ," ಎಂದು ಸ್ವಲ್ಪ ತಿದ್ದುವ ಧ್ವನಿಯಲ್ಲಿ ಜಯ
ರಾಮು ಹೇಳಿದ. ತನ್ನ ತಾಯಿ ಹೆಸರು ಹಿಡಿದು ಕರೆಯುವುದನ್ನು ಕೇಳಿ ತಿಳಿದು
ಕೊಂಡಿರಬೇಕು ಎಂದು ಲೆಕ್ಕ ಹಾಕಿದ.
ಜಯರಾಮು ಒಳಗೆ ಬರಲಿಲ್ಲವೆಂದು ರಾಜಶೇಖರ ನಿಂತೇ ಇದ್ದ. ಆತನ
ದೃಷ್ಟಿ ಜಯರಾಮು ಹಿಡಿದಿದ್ದ ಪುಸ್ತಕದತ್ತ ಹೋಯಿತು. ತಾನು ಸೆಪ್ಟೆಂಬರ್ ವೀರ
ನೆಂದು ಹೇಳಬೇಕಾದ ಹೊತ್ತು ಬಂತು ಎಂದುಕೊಂಡ ಜಯರಾಮು.
ಮಾತು ಮುಂದುವರಿಸಬೇಕೋ ಬೇಡವೊ ಎಂದು ಸಂಕೋಚಪಡುತ್ತಲೆ ರಾಜ
ಶೇಖರ ಕೇಳಿದ:
"ನೀವು ಕ್ಲಾಸಿಗೆ ಹೋಗೊಲ್ವೊ?"
"ಇಲ್ಲಾರಿ ಸೆಪ್ಟೆಂಬರ್ಗೆ ಕಟ್ಟಿದೀನಿ."
"ಬಿ.ಎಸ್.ಸೀನೆ?"
ಇದು ನುಂಗಲಾರದ ತುತ್ತು ಎನ್ನಿಸಿತು ಜಯರಾಮುಗೆ.
"ಅಲ್ಲ. ಇಂಟರ್. ಒಂದು ಪಾರ್ಟಿದೆ, ಅಷ್ಟೆ."
ಕಣ್ಣುಗಳನ್ನು ಮಿನುಗಿಸುತ್ತ ರಾಜಶೇಖರ ಕೇಳಿದ:
"ನಿಮಗೆ ಪರಮೇಶ್ವರಪ್ಪ ಗೊತ್ತಾ?"
ಪರಮೇಶ್ವರಪ್ಪನ ವಿಷಯವಾಗಿ ಆ ಹುಡುಗನಿಗೆ ತುಂಬ ಗೌರವ ಎಂಬುದು ಆ
ಧ್ವನಿಯಿಂದಲೆ ಸ್ಪಷ್ಟವಾಗುತ್ತಿತ್ತು.
"ಹೌದು ಹೋದ ವರ್ಷ ಇಲ್ಲೇ ಇದ್ರು."
"ಅವರ ಸಹಾಯದಿಂದಲೇ ನಮಗೆ ಈ ಕೊಠಡಿ ಸಿಗ್ತು."
ಪರಮೇಶ್ವರಪ್ಪ ರಂಗಮ್ಮನಿಗೆ ಕಾಗದ ಬರೆದಿದ್ದ ವಿಷಯವಂತೂ ಜಯ
ರಾಮುಗೆ ಗೋತ್ತಿತ್ತು.
"ಪರಮೇಶ್ವರಪ್ಪ ಈಗೇನು ಮಾಡ್ತಾರೆ?"
"ಓ_ಅವರು ಬೆಳಗಾಂವಿಗೆ ಹೊರಟ್ಹೋದ್ರು. ವಕೀಲಿ ಓದ್ತಾರಂತೆ."
"ಅದ್ಯಾಕೆ, ಅಷ್ಟು ದೂರ?"
"ಅಲ್ಲಿ ಮೇಷ್ಟ್ರ ಕೆಲಸ ಸುಲಭವಾಗಿ ಸಿಗ್ತದಂತೆ. ಅವನ್ನೂ ಮಾಡ್ಕಂಡು ವಕೀಲಿ
ಓದ್ತಾರಂತೆ."
"ಓ...ಹಾಗಾ?"
ಸಂಭಾಷಣೆ ಮುಂದುವರಿಸಲು ಬೇರೆ ವಿಷಯವಿಲ್ಲದೆ ರಾಜಶೇಖರ

ತಡವುತ್ತಿದ್ದಂತೆ ಕಂಡಿತು. ಜಯರಾಮುವಂತೂ ಮೊದಲೇ ಕಡಮೆ ಮಾತಿನ
ಮಹಾನುಭಾವ.
"ಆಗಲಿ, ಬರ್ತೀನಿ ರಾಜಶೇಖರ್."
"ಹೂಂ."
ಜಯರಾಮು ತನ್ನ ಬಾಗಿಲಿನತ್ತ ತಿರುಗಿದೊಡನೆಯೇ ರಾಜಶೇಖರ ಕರೆದುದು
ಕೇಳಿಸಿತು.
"ಸಾರ್__ಒಂದ್ನಿಮಿಷ."
ಜಯರಾಮು ತಿರುಗಿ ನೋಡಿದ. ಕಾಗದವನ್ನು ಕೈಲಿ ಹಿಡಿದಿದ್ದಂತೆಯೇ ರಾಜ
ಶೇಖರ ತನ್ನ ಕೊಠಡಿಯ ಹೊರಕ್ಕೆ ಬಂದಿದ್ದ. 'ಸಾರ್' ಸಂಬೋಧನೆಯಿಂದ ಜಯ
ರಾಮುಗೆ ಹೇಗೆ ಹೇಗೋ ಆಯಿತು.
"ಏನು?"
"ನಾಳೆ ನನಗೊಂದು ಮನಿಯಾರ್ಡರ್ ಬರುತ್ತೆ. ಇಲ್ಲಿಗೆ ಪೋಸ್ಟ್ ಬರೋದು
ಎಷ್ಟು ಘಂಟೆಗೆ_ಹೇಳ್ತೀರಾ?"
"ಮನಿಯಾರ್ಡರೆ? ಅದೆಲ್ಲಾ ಬರೋದು ಎರಡ್ನೇ ಪೋಸ್ಟ್ ನಲ್ಲಿ. ಈ ಬೀದಿಗೆ
ಸುಮಾರು ಎರಡು ಘಂಟೆಗೆ ಬರ್ತಾನೆ."
ರಾಜಶೇಖರನ ಮುಖ ಸಪ್ಪಗಾಯಿತು.
"ನನಗೆ ಕ್ಲಾಸಿದೆಯಲ್ಲಾ?"
"ಏನು ಮಾಡೋ ಹಾಗೂ ಇಲ್ಲ. ನಾಳೆ ಒಂದ್ಹೊತ್ತು ನೀವು ರಜಾ
ತಗೋಬೇಕು."
ಆ ಪರಿಸ್ಥಿತಿ ರಾಜಶೇಖರನಿಗೆ ಇಷ್ಟವಿರಲಿಲ್ಲ. ಜಯರಾಮು ಮತ್ತೂ ಅಂದ:
"ಬೇರೆ ಉಪಾಯವೇ ಇಲ್ಲ. ಇನ್ಮೇಲಿಂದ ಮನಿಯಾರ್ಡರೆಲ್ಲಾ ಕಾಲೇಜು
ಆಡ್ರೆಸಿಗೇ ತರಿಸ್ಕೊಳ್ಳಿ.?"
ಪರ ಊರಿನ ಎಷ್ಟೋ ಹುಡುಗರು ಹಾಗೆ ಮಾಡುವುದನ್ನು ಜಯರಾಮು
ಕಂಡಿದ್ದ.
"ಹೂಂ. ಹಾಗೇ ಮಾಡ್ಬೇಕು...." ಎಂದು ಬಾಡಿದ ಮುಖದೊಡನೆ ರಾಜ
ಶೇಖರ ಒಳಹೋದ. ಔಪಚಾರಿಕವಾದ 'ಥ್ಯಾಂಕ್ಸ್' ಪದಪ್ರಯೋಗವೆಲ್ಲ ಆತನಿಗೆ
ಮರೆತು ಹೋಯಿತು. ತನ್ನನ್ನು ಸಾರ್ ಎಂದು ಕರೆಯಬಾರದೆಂದು ಹೇಳಬೇ
ಕೆಂದಿದ್ದ ಜಯರಾಮು. ಆದರೆ ರಾಜಶೇಖರ ಅಷ್ಟು ಬೇಗನೆ ಒಳಸೇರಿಬಿಟ್ಟುದರಿಂದ
ಅದು ಸಾಧ್ಯವಾಗಲಿಲ್ಲ. ಇನ್ನೊಮ್ಮೆ ಕಂಡಾಗ ತಪ್ಪದೆ ಹೇಳಬೇಕು ಎಂದು ಜಯ
ರಾಮು ಮನಸ್ಸಿನಲ್ಲೆ ಅಂದುಕೊಂಡ.
.....ಆ ಕೊಠಡಿಯ ಉಳಿದಿಬ್ಬರು ಹುಡುಗರು ರಾಜಶೇಖರನ ಹಾಗಿರಲಿಲ್ಲ.

19

ಅವರಲ್ಲೊಬ್ಬ-ದೇವಯ್ಯ-ಒಂದು ತಿಂಗಳೊಳಗೆ ಕಾಲೇಜಿನ ಸೊಗಸುಗಾರನಾದ.
"ಇದು ಸುಡುಗಾಡು ರೂಮು. ಮುಂದಿನ ಟರ್ಮಿನ ಹೊತ್ತಿಗೆ ಕಾಲೇಜು
ಹಾಸ್ಟೇಲಿಗೇ ಸೇರ್ಕೊಂತೀನಿ." ಎಂದು ಆತ ಪದೇ ಪದೇ ಹೇಳುವುದಿತ್ತು. ಆತನ
ತಾಯಿ ತಂದೆ ರಾಜಶೇಖರನಲ್ಲಿ ವಿಶ್ವಾಸವಿಟ್ಟಿದ್ದರು. ಅವನ ಸಹವಾಸದಲ್ಲಿ ತಮ್ಮ
ಹುಡುಗ ಕೆಡಲಾರನೆಂಬುದು ಅವರು ಇಟ್ಟುಕೊಂಡಿದ್ದ ಆಸೆ. ಆದರೆ ಸ್ವತಃ ಸದ್ಗುಣಿ
ಯಾದರೂ ಮತ್ತೊಬ್ಬರ ಮೇಲೆ ಪ್ರಭಾವ ಬೀರುವಂತಹ ವ್ಯಕ್ತಿತ್ವ ರಾಜಶೇಖರನಿಗೆ
ಇರಲಿಲ್ಲ.
ಆ ಹುಡುಗ ದಿನ ಬಿಟ್ಟು ದಿನ, ಒಮ್ಮೊಮ್ಮೆ ದಿನವೂ, ಸಿನಿಮಾ ನೋಡುತ್ತಿದ್ದ.

ರಾಜಶೇಖರ ಹೇಳುವುದಿತ್ತು:
"ಕಣ್ಣಿಗೆ ಕೆಟ್ದು ಕಣಪ್ಪ. ಎಷ್ಟೂಂತ ನೋಡ್ತೀಯಾ?"
"ಓಗ್ಲಿ ಬಿಡು. ಕಣ್ಣಿಗೆ ಕನ್ನಡಕ ಆಕಿಸ್ಕೊಂಡ್ರಾಯ್ತು."
ಮೊದಮೊದಲು ದೇವಯ್ಯ ರಾಜಶೇಖರನಿಗೆ ತಿಳಿಯದಂತೆ ಹೊರಗೆ ಸಿಗರೇಟು
ಸೇದುತ್ತಿದ್ದ, ಕ್ರಮೇಣ ಅವನೆದುರೇ ಸೇದಿದ. ಆಗಲೂ ರಾಜಶೇಖರ ಒಳ್ಳೆಯ
ಮಾತು ಹೇಳಲು ಪ್ರಯತ್ನಿಸಿದ್ದುಂಟು.
"ಯಾಕಪ್ಪ ಸಿಗರೇಟು ಸೇದ್ತೀಯಾ? ಕ್ಷಯರೋಗ ಬತ್ತದೆ ನೋಡು!"
"ಸಾಕು ಬಿಡೋ. ಊರ ಹೊರ್ಗೆ ಸಾಂಟೋರಿಯಂನೋಡಿದ್ಯೊ ಇಲ್ವೊ?"
ಒಂದು ದಿನ ಕೊಠಡಿಯಲ್ಲೇ ಆತ ಸೆಗರೇಟು ಹಚ್ಚಿದಾಗ ರಾಜಶೇಖರನಿಗೆ
ರೇಗಿತು.
"ಬೇಡಪ್ಪೋ. ಆರ್ಸು. ಆರ್ಸು."
"ಯಾಕೆ? ಬೆಂಕಿ ಅತ್ಕೊಂತದಾ ಮನೆಗೆ?"
"ಲೇ, ಆರ್ಸೋ. ಆಯಮ್ಮಂಗೆ ಗೊತ್ತಾದ್ರೆ ನಮ್ನೆಲ್ಲಾ ಓಡಿಸ್ತಾರೆ."
"ಅದು ಹೆಂಗೆ ಓಡಿಸ್ತಾರೆ? ಬಿಟ್ಟೀ ಕುಂತಿದೀವಾ ಇಲ್ಲಿ? ಬಾಡಿಗೆ ಕೊಡ
ಲ್ವೇನು?"
"ಬ್ರಾಂಬರ ಮನೆ ಕಣಪ್ಪಾ...."
ರಾಜಶೇಖರ ಆ ಬಾಣವೆಸೆದ, ಅದಾದರೂ ತಾಗಬಹುದೆಂದು.
"ನೋಡಿದೀನಿ ಬಿಡು. ಪಕ್ಕದ್ಮನೆಯೋರು ಸೇದಲ್ವಾ?"
ದೇವಯ್ಯನೊಡನೆ ಎದುರು ವಾದಿಸಿ ಗೆಲ್ಲುವುದು ಸಾಧ್ಯವಿರಲಿಲ್ಲ.
ಆತ ಪಾಠಗಳಿಗೆ ಗಮನ ಕೊಡುತ್ತಿರಲಿಲ್ಲ. ತಡವಾಗಿ ಏಳುತ್ತಿದ್ದ.
ರಾಧೆಯನ್ನು ನೋಡಿ ಒಂದೆರಡು ಬಾರಿ ಮುಗುಳ್ನಗುವುದಕ್ಕೂ ದೇವಯ್ಯ
ಯತ್ನಿಸಿದ. ಒಮ್ಮೆ ಹಾಗೆ ಮಾಡಿದಾಗ ರಾಧೆ ಜಯರಾಮುಗೆ ದೂರು ಕೊಟ್ಟಳು.
ಆತಹೊರಬಂದು ಎರಡು ನಿಮಿಷ ಆ ಹುಡುಗನನ್ನೇ ಎವೆಯಿಕ್ಕದೆ ನೋಡಿದ.
ಆದರೆ ಆ ನೋಟದಿಂದೇನೂ ಪರಿಣಾಮವಾಗಲಿಲ್ಲ.

ಒಂದು ರಾತ್ರೆ ದೇವಯ್ಯ ಸ್ವಲ್ಪ ತಡವಾಗಿ ಬಂದ. ಸಿಳ್ಳು ಹಾಕುತ್ತಾ ಮೆಟ್ಟ
ಲೇರಿದ. ದೀಪ ಆರಿಸುವ ಹೊತ್ತಾಯಿತೆಂದು ಕೊನೆಯ 'ಗಸ್ತಿ' ಮಾಡುತ್ತ ಹೆಬ್ಬಾ
ಗಿಲಿಗೆ ಬಂದ ರಂಗಮ್ಮನಿಗೆ ಆ ಸಿಳ್ಳು ಕೇಳಿಸಿತು. 'ಓದುವ ಹುಡುಗರ ಪೈಕಿ'ಯೇ
ಇರಬೇಕೆಂದು ರಂಗಮ್ಮನಿಗೆ ಖಚಿತವಾಯಿತು.
ಅವರು ಸ್ವರವೆತ್ತಿ ಕೂಗಾಡಿದರು:
"ಯಾರದು___ಸಿಳ್ಳು ಹಾಕ್ತಿರೋದು?"
ಉತ್ತರ ಬರಲಿಲ್ಲ.
ರಂಗಮ್ಮನ ರೇಗುತ್ತ ಅಂದರು:
"ಇದೇನು ಸಂತೇ ಬೀದಿ ಕೆಟ್ಹೋಯ್ತೆ? ಮಾನ ಮರ್ಯಾದೆ ಒಂದೂ ಬೇಡ್ವೆ
ಯಾರಪ್ಪಾ ಅದು? ಸಿಳ್ಳು ಹಾಕೋವಷ್ಟು ಸೊಕ್ಕು ಬಂದಿರೋದು ಯಾರಿಗಪ್ಪ?"
ಎದುರಿನ ಹಾಗೂ ಮೇಲ್ಗಡೆಯ ಸಂಸಾರಗಳು ಮೌನವಾಗಿ ರಂಗಮ್ಮನ
ಮಾತಿಗೆ ಕಿವಿಗೊಟ್ಟುವು!
ರಾಧಾ ಅಣ್ಣನಿಗೆಂದಳು:

"ಆ ಹುಡುಗ್ನೇ ಇರ್ಬೇಕು"
ಆ ಹುಡುಗ__ಎಂದರೆ ರಾಧೆಯನ್ನು ನೋಡಿ ಮುಗುಳುನಕ್ಕಿದ್ದವನು. ತಂಗಿಯ
ಊಹೆ ಸರಿ ಎಂಬ ವಿಷಯದಲ್ಲಿ ಜಯರಾಮುಗೆ ಸಂದೇಹವಿರಲಿಲ್ಲ.
ದೇವಯ್ಯ ಮಾತನಾಡಲಿಲ್ಲ. ರಾಜಶೇಖರನ ಎದೆ ಡವಡವನೆ ಹೊಡೆದು
ಕೊಂಡಿತು. ಮತ್ತೊಬ್ಬನಿಗೂ ಗಾಬರಿಯಾಯಿತು. ಆದರೆ ಸಿಳ್ಳು ಹಾಕಿದ ಸದ್
ಗೃಹಸ್ಥ ಬೂಟ್ಸು ತೆಗೆದೆಸೆದು, ಅರ್ಥವಾಗದಂತೆ ಏನನ್ನೋ ಗೊಣಗುತ್ತಾ, ಚಾಪೆಯ
ಮೇಲೆ ಉರುಳಿಕೊಂಡ. ಆದಷ್ಟು ಬೇಗನೆ ಈ ವಠಾರ ಬಿಟ್ಟು ಹೋಗಬೇಕೆಂಬ
ಅವನ ಯೋಚನೆ ಬಲವಾಯಿತು. "ಈ ವಠಾರದಲ್ಲಿ ಓದಲು ಅನುಕೂಲವಿಲ್ಲ.
ಹಾಸ್ಟೆಲಿಗೆ ಸೇರ್ಕೊ ಅಂತ ಪ್ರೊಫೆಸರು ಹೇಳಿದ್ದಾರೆ," ಎಂದೆಲ್ಲ ತಂದೆಗೆ ಬರೆಯ
ಬೇಕೆಂದು ನಿರ್ಧರಿಸಿದ.
ಮೂರನೆಯವನು ಚಿಕ್ಕ ಹುಡುಗ. ಮೊದಲ ಬಾರಿ ಬೆಂಗಳೂರಿಗೆ ಬಂದಾಗ
ಸಿಂಹದ ಬೋನಿನ ಬಾಗಿಲ ಬಳಿ ತಂದು ಬಿಟ್ಟು ಹಾಗಾಗಿತ್ತು ಅವನ ಸ್ಥಿತಿ. ಷೋಕಿ
ಹುಡುಗನ ಜತೆಗಾರನಾಗಿ ಅವನ ಬೇಗನೆ ಚಿಗುರಿಕೊಂಡ. ಆದರೆ ಆ ಹುಡುಗ
ಬಡವ. ಆಗಾಗ್ಗೆ ದೇವಯ್ಯ ಆತನನ್ನು ಕರೆಯುತ್ತಿದ್ದ.
"ಏ, ಬಾರೋ, ಪಿಕ್ಚರ್ ನೋಡ್ಕೊಂಬರಾನ."
"ನೀನ್ಹೋಗು: ನಾ ಒಲ್ಲೆ."
"ಅದ್ಯಾಕೆ ಬೆಕ್ಕಿನ್ಮರಿ ಅಂಗೆ ಅಮರ್ಕೊಂತಿಯಾ ರೂಮ್ನಲ್ಲಿ? ಬಾ-ಬಾ.....
ಟಿಕೆಟಿನ ದುಡ್ಡು ನಾ ಕೊಡ್ತೀನಿ."
ಚಿಕ್ಕ ಹುಡುಗ ದೊಡ್ಡವನೊಡನೆ ಸಿನಿಮಾ ನೊಡಲು ಹೋದ. ಆದರೆ ಆತನ

ಜತೆಯಲ್ಲಿ ಸಿಗರೇಟು ಸೇದಲಿಲ್ಲ. ದೊಡ್ಡವನು ಹುಡುಗಿಯರನ್ನು ನೋಡಿ ನಗೆ
ಮಾತನಾಡಿದಾಗ ಚಿಕ್ಕವನು ನಕ್ಕನೇ ಹೊರತು, ತಾನು ಸ್ವತಃ ಯಾವ ಮಾತನ್ನೂ
ಅಡలిల్ల.
ಚಿಕ್ಕವನು ಸಹವಾಸದೋಷದಿಂದ ಕೆಟ್ಟು ಹೋಗುತ್ತಿದ್ದಾನಲ್ಲಾ ಎಂದು ರಾಜ
ಶೆಖರನಿಗೆ ಕೆಡುಕೆನಿಸಿತ್ತು
ಆದರೆ ಅವನು ಕೆಟ್ಟು ಹೋಗಲಿಲ್ಲ. ಆ ಪುಟ್ಟ ಹುಡುಗನಿಗೆ ಬೇಗನೆ ಪಂದ್ಯಾ
ಟದ ಹುಚ್ಚು ಹಿಡಿಯಿತು. ಎಚ್ಚರದಲ್ಲವೂ ನಿದ್ದೆಯಲ್ಲೂ ಆತ ಕ್ರಿಕೆಟ್ ಮಂತ್ರ
ಜಪಿಸಿದ. ಸ್ವತಃ ಕಣಕ್ಕಿಳಿಯದಿದ್ದರೂ ಕ್ರಿಕೆಟ್ ಪ್ರೇಮಿಯಾದ.
ಆಟಗಳಲ್ಲಿ ಆಸಕ್ತಿಯಿಲ್ಲದ ರಾಜಶೇಖರನಿಗೆ ಆ ಹುಡುಗನ ಕ್ರಿಕೆಟ್ ಪ್ರೇಮ
ಒಪ್ಪಿಗೆಯಾಗದೆ ಹೋದರೂ, ದೇವಯ್ಯನ ಪೋಲಿತನಕ್ಕಿಂತ ಇದು ಸಹಸ್ರ ಪಾಲು
ಮೇಲು ಎನ್ನುವುದು ಅತನ ಅಭಿಪ್ರಾಯವಾಗಿತ್ತು,
ರಂಗಮ್ಮ ಬೇಗ ದೀಪ ಆರಿಸುತ್ತಿದ್ದುದರಿಂದ ರಾಜಶೇಕರನಿಗೆ ಓದಿಕೊಳ್ಳಲು
ಕಷ್ಟವಾಯಿತು. ಒಂದು ರೂಪಾಯಿ ಕೊಟ್ಟ ಆತ ಬೆಡ್‌ಲ್ಯಾಂಪ್ ಕೊಂಡು ತಂದ.
ಆತ ತರುತ್ತಲಿದ್ದಾಗ ಅದನ್ನು ನೋಡಿದ ಜಯರಾಮು ಕೇಳಿದ:
"ರಾತ್ರೆ ಓದೋಕೆ ದೀಪ ಇಲ್ದೆ ತೊಂದರೆ ಆಗುತ್ತೆ ಅಲ್ವೆ?"
"ಹೂಂ. ಕಣ್ರೀ."
'ಸಾರ್' ಹೊರಟು ಹೋಗಿತ್ತು. ಅವರು ಆತ್ಮೀಯ ಗೆಳೆಯರಾಗದೆ ಹೋದರೂ
ಒಳ್ಳೆಯ ಪರಿಚಿತರಾಗಿದ್ದರು.
"ನಮ್ಮನೇಲೂ ಅಂಥದೇ ಓಂದಿದೆ."
ಇನ್ನು ರಾಜಶೇಖರ ಒಂದು ಶೀಷೆ ಸೀಮೆ ಏಣೆ ತರಬೇಕು. ಅದಕ್ಕಾಗಿ ಖಾలి
ಶೀಷೆಯೊಂದನ್ನು ಕೊಳ್ಳಬೇಕು. ತಮ್ಮ ಮನೆಯಲ್ಲಿ ಒಂದು ಖಾಲಿ ಶೀಷೆ ಇದ್ದುದು
ಜಯರಾಮೂಗೆ ನೆನಪಾಗಿ, ಅದನ್ನು ಆತನಿಗೆ ಕೊಟುಬಿಡೋಣವೆನಿಸಿತು. ಆ ವಿಚಾರ
ಮಾತನಾಡಬೇಕೆಂದು ನಾಲಿಗೆ ಸಿದ್ಧವಾಗುತ್ತಿದ್ದಾಗಲೆ 'ತಡೆ' ಎಂದಿತು ಮೆದುಳು.
'ಹಳೇ ಪೇಪರ್-ಶೀಷೆ'ಯವನಿಗೆ ಅದನ್ನು ಮಾರಬೇಕೆಂದು ರಾಧಾ ಆಗಲೇ ಲೆಕ್ಕ
ಹಾಕಿದ್ದಳು. ಅವರ ಮನೆಯ, ಮುಖ ನೋಡುವ ಕನ್ನಡಿ ಒಡೆದು ಹೋಗಿತ್ತು.
ದುಡ್ಡು ಕೂಡಿಟ್ಟು ಅದಷ್ಟು ಬೇಗನೆ ಮತ್ತೊಂದನ್ನು ಕೊಳ್ಳಬೇಕೆಂಬುದು ರಾಧೆಯ
ಯೋಜನೆ...ಅದೇ ಸರಿಯಾಗಿತ್ತು. ಔದಾರ್ಯವನ್ನು ತೋರಿಸೋಣವೆಂದು ಭಾವಿ
ಸಿದ್ದ ಜಯರಾಮು ಆ ಯೋಚನೆಯನ್ನು ಬಿಟ್ಟುಕೊಟ್ಟು ತೆಪ್ಪಗಾದ.
ಅದರೆ ಅ ಬೆಡ್‌ಲ್ಯಾಂಪಿನ ಅಗತ್ಯದ ವಿಷಯವಾಗಿ ಕೊಠಡಿಯಲ್ಲಿ ಏಕಾಭಿಪ್ರಾ
ಯುವಿರಲಿಲ್ಲ. ಅಷ್ಟೇ ಅಲ್ಲ. ಹೊಸ ದೀಪ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು
ತೀವ್ರಗೊಳಿಸಿತು.

ರಾಜಶೇಖರನ ಸ್ವರವನ್ನೆ ಅಣಕಿಸುತ್ತ ದೇವಯ್ಯ ಹೇಳಿದ:

"ಆ ದೀಪ ಉರಿಸ್ಬೇಡವೋ ಮಾರಾಯ. ಕಣ್ಣಿಗೆ ಕೆಟ್ದು."
ರಾಜಶೇಖರ ಉತ್ತರ ಕೊಡಲಿಲ್ಲ.
"ನಮಗೆ ನಿದ್ದೆ ಬರದ ಹಾಗೆ ಮಾಡ್ತೀಯಪ್ಪ ನೀನು!"
ದೇವಯ್ಯ ಹೊಸ ಅಸ್ತ್ರ ಪ್ರಯೋಗಿಸಿದ.
ಆದರೆ ಚಿಕ್ಕವನು ಅವನ ಜತೆ ಸೇರಲಿಲ್ಲ.
"ನಂಗೆ ಪರವಾಗಿಲ್ಲ. ದೀಪ ಇದ್ರೂ ನಿದ್ದೆ ಬತ್ತದೆ. ನಮ್ಮನೇಲಿ ದೀಪ ಉರಿ
ಸ್ಕಂಡೆ ಮಲಕ್ಕೋತೀವಿ." ಎಂದ.
"ಬೆಳಕಿಗೆ ರಟ್ಟು ಅಡ್ಡ ಇಡ್ತೀನಿ. ಯಾರಿಗೂ ತೊಂದ್ರೆ ಆಗೋದಿಲ್ಲ ಬಿಡು."
ಆದರೆ ದೇವಯ್ಯ ಮಾತಿನಲ್ಲಿ ಸೋಲಲು ಇಷ್ಟಪಡಲಿಲ್ಲ. ಪುಸ್ತಕಕ್ರಿಮಿ, ಮಹಾ
ಪಂಡಿತ, ಮೆರಿಟ್ ಸ್ಕಾಲರ್_ಎಂದೆಲ್ಲ ರಾಜಶೇಖರನನ್ನು ಲೇವಡಿ ಮಾಡಿದ.
"ಪರೀಕ್ಷೆ ಬರ್ಲಿ. ಆಗ ಗೊತ್ತಾತದೆ,"ಎಂದು ರಾಜಶೇಖರ ಎಚ್ಚರಿಕೆಯ
ಮಾತನ್ನಾಡಿದ.
ಆ ಸ್ವರ ಕೇಳಿ ಚಿಕ್ಕ ಹುಡುಗನಿಗೆ ಭಯವಾಯಿತು. ಆತ ಹೇಳಿದ:
"ನಾನೂ ಓದ್ಕೊಬೇಕು."
ನಿದ್ದೆ ಹೋಗಲು ಸಿದ್ದನಾಗುತ್ತ ದೇವಯ್ಯ ಚಿಕ್ಕವನ ಸ್ವರವನ್ನೂ ಅಣಕಿಸಿದ:
"ಓಹೋಹೋಹೋ... ನಾನೂ ಓದ್ಕೊಬೇಕು. ಭಪ್ಪರೇ ವಿದ್ಯಾಪ್ರವೀಣ!"
ರಾಜಶೇಖರನಿಗೆ ಇದು ಸಹನೆಯಾಗಲಿಲ್ಲ.
"ನೀನು ಹೀಗೆಲ್ಲಾ ಆಡೋದು ನಿಮ್ತಂದೆಗೆ ಗೊತ್ತಾದ್ರೆ ನಿನ್ನ ಚಮ್ಡ ಸುಲೀ
ತಾರೆ ನೋಡ್ಕೊ."
ನಿಜ ಸಂಗತಿಯನ್ನೇ ಹೇಳಿದ್ದ ರಾಜಶೇಖರ. ಆ ಹುಡುಗನ ತಂದೆಯ ಸಿಡುಕು
ಪ್ರವೃತ್ತಿ ಆತನಿಗೆ ಗೊತ್ತೇ ಇತ್ತು. ಆದರೆ ತಂದೆಯ ನೆನಪು ಮಾಡಿ ಕೊಟ್ಟುದು ಆ
ಹುಡುಗನಿಗೆ ರುಚಿಸಲಿಲ್ಲ. ಆತ ಸುಟ್ಟುಬಿಡುವ ಕಣ್ಣುಗಳಿಂದ ರಾಜಶೇಖರನನ್ನು
ನೋಡುತ್ತಾ ಹೇಳಿದ:
"ಅದೇನೋ ಅದು? ನಮ್ತಂದೆಗೆ ಕಾಗದ ಬರೀಬೇಕೂಂತ ಮಾಡಿದೀಯಾ?
ಸಿ.ಐ.ಡಿ.ಕೆಲ್ಸ! ಅಂಥಾದ್ದೇನಾದ್ರೂ ಮಾಡ್ದೆ ಅಂದ್ರೆ_"
ರಾಜಶೇಖರ ಹೆದರಲಿಲ್ಲ. ಆದರೆ ಅವನಿಗೆ ಬೇಸರವಾಯಿತು, ಕಾಲು ಗಂಟೆ
ಆತ ಹೊಸ ದೀಪದ ಬೆಳಕಿನಲ್ಲಿ ಓದಲು ಯತ್ನಿಸಿದ. ಆದರೆ ದುಗುಡ ಒತ್ತರಿಸಿ ಬಂದು
ದೃಷ್ಟಿ ಮಸುಕಾಯಿತು. ಎಷ್ಟೊಂದು ಉತ್ಸಾಹದಲ್ಲಿ ಹೊಸ ದೀಪವನ್ನು ಕೊಂಡು
ತಂದಿದ್ದ ಆತ! ಈಗ ಎಳ್ಳಷ್ಟೂ ಉತ್ಸಾಹ ಉಳಿದಿರಲಿಲ್ಲ. ಪುಸ್ತಕ ಮಡಚಿ ದೀಪ
ಆರಿಸಿ ಆತ ಚಾಪೆಯ ಮೇಲೆ ಉರುಳಿಕೊಂಡ. ತಲೆದಿಂಬು ಕಣ್ಣೀರಿನಿಂದ ತೊಯ್ದು
ಹೋಯಿತು.

ಮೊದಲು ಚಿಕ್ಕವನು ನಿದ್ದೆ ಹೋದ. ದೊಡ್ಡವನು ಉದ್ರಿಕ್ತವಾಗಿದ್ದ ಮನ

ಸ್ಸನ್ನು ನಿದ್ದೆಯ ಹೊದಿಕೆಯೊಳಗೆ ಮುಚ್ಚಲೆತ್ನಿಸುತ್ತ, ಅತ್ತಿತ್ತ ಹೊರಳಾಡಿದ.
ರಾಜಶೇಜರನಿಗೆ ಬಹಳ ಹೊತ್ತು ನಿದ್ದೆ ಬರಲೇ ಇಲ್ಲ. ಬಂದ ಆರಂಭದಲ್ಲಿ
ಅವನು ಆಸೆ ಕಟ್ಟಿಕೊಂಡಿದ್ದ_ತಮ್ಮ ಊರಿನ ತಾವು ಮೂವರು ಜತೆಯಾಗಿಯೇ
ಸ್ನೇಹದಿಂದ ಇರಬೇಕೆಂದು. ಆ ಆಸೆ ಈಗ ಇರಲಿಲ್ಲ. ತನ್ನಿಂದ ಬಲು ದೂರ ಸಾಗಿದ್ದ
ಆ ಜತೆಗಾರ ತನ್ನ ತಂದೆಯನ್ನು ಒಪ್ಪಿಸಿ ಕಾಲೇಜು ಹಾಸ್ಟೆಲಿಗೇ ಹೋಗುವ ಸಂಭವ
ವಿತ್ತು. ಹಾಗೆ ಹೋದರೆ ಕೊಠಡಿಯ ಬಾಡಿಗೆಯ ಪೂರ್ತಿ ಭಾರ ಉಳಿದಿಬ್ಬರ ಮೇಲೆ
ಬೀಳುವುದು. ಜತೆಗಿರಲು ಬೇರೊಬ್ಬ ವಿದ್ಯಾರ್ಥಿ ಸುಲಭವಾಗಿ ಸಿಗುವ ಸಂಭವ
ವಿರಲಿಲ್ಲ.
ಮುಂದಿನ ವರ್ಷವಾದರೂ ಉಚಿತ ವಿದ್ಯಾರ್ಥಿನಿಲಯದಲ್ಲಿ ಜಾಗ ದೊರಕಿಸಿ
ಕೊಳ್ಳಲು ತಾನು ಯತ್ನಿಸಬೇಕೆಂದು ರಾಜಶೇಖರ ಅಂದುಕೊಂಡ.
ನಾಲ್ಕು ಅಡಿಗಳ ಅಂತರದಲ್ಲಿ ಮಲಗಿದ್ದ ಸಹಪಾಠಿಯೊಡನೆ ಹೃದಯ ತೆರೆದು
ಮಾತನಾಡಬೇಕೆಂದು ಆಸೆಯಾಯಿತು, ಅತ್ತು ಮನಸ್ಸು ತಿಳಿಯಾಗಿದ್ದ ರಾಜಶೇಖರನಿಗೆ,
ಆದರೆ ಆ ಸಹಪಾಠಿಗೆ ನಿದ್ದೆ ಬಂದಿತ್ತು,ಅಷ್ಟರಲ್ಲೆ.
.....ಈ ವರ್ಷ ರಂಗಮ್ಮ ಮಹಡಿಯ ಮೇಲಿನ ವಿದ್ಯಾರ್ಥಿಗಳ ವಿಷಯದಲ್ಲಿ
ಒಳ್ಳೇ ಅಭಿಪ್ರಾಯ ತಳೆಯಲಿಲ್ಲ. ಹುಡುಗರಲ್ಲೊಬ್ಬ ಸಿಗರೇಟು ಸೇದುತ್ತಿದ್ದುದೂ
ಅವರಿಗೆ ಗೊತ್ತಾಯಿತು. ನಾಲ್ಕು ದಿನ'ಕಾಲ ಕೆಟ್ಟುಹೋಯ್ತೆಂದು' ಅವರು ಗೊಣ
ಗಿದರು. ಆ ಬಳಿಕ,'ಬಾಡಿಗೆ ಸರಿಯಾಗಿ ಬರ್ತಿದೇಂತ ಸುಮ್ಮನಿದೀನಿ' ಎಂದು ತನಗೆ
ತಾನೇ ಸಮಾಧಾನ ಹೇಳಿಕೊಂಡರು.
ಬಂದ ಆರಂಭದಲ್ಲಿ ಮೂವರು ಹುಡುಗರೂ ವಠಾರಾದ ಕಕ್ಕಸನ್ನು ಉಪಯೋಗಿ
ಸಲು ಯತ್ನಿಸಿದ್ದರು.ಆದರೆ ಅಲ್ಲಿ ಕ್ಯೂ ನಿಂತು ಎರಡು ದಿನಗಳಲ್ಲೇ ಅವರಿಗೆ
ಸಾಕೋಸಾಕು ಅನ್ನಿಸಿಹೋಯಿತು. ಆ ಬಳಿಕ ಪ್ರತಿಯೊಂದಕ್ಕೂ ಅವರು ಹೋಟೆ
ಲನ್ನೇ ಆವಲಂಬಿಸಿದರು. ರಾಜಶೇಖರ ಬೆಳಗ್ಗೆ ಒಂದು ಬಕೀಟು ನೀರನ್ನಷ್ಟು ಒಯ್ದು
ಮೇಲಿಡುತ್ತಿದ್ದ. ಬಾಯಾರಿದಾಗ ಕುಡಿಯುವುದಕ್ಕೂ ಓದಿನ ನಡುವೆ ತೂಕಡಿಸಿದಾಗ
ಕಣ್ಣಿಗೆ ಮುಟ್ಟಿಸುವುದಕ್ಕೂ ಅದು ಉಪಯೋಗವಾಗುತ್ತಿತ್ತು.
ಹೋಟೆಲಿನ ಊಟ ಸೇರದೆ ಚಿಕ್ಕವನು ನಾಲ್ಕು ದಿನ ವಾಂತಿಸಭೇದಿಯಿಂದ ನರ
ಳಿದ್ದೂ ಆಯಿತು.
"ಹುಡುಗ ಹ್ಯಾಗಿದಾನೆ?" ಎಂದು ರಂಗಮ್ಮ ರಾಜಶೇಖರನನ್ನು ಒಂದೆರಡು
ಸಾರಿ ವಿಚಾರಿಸಿ,ಸುಮ್ಮನಾದರು. ಬಡಕಲಾಗಿದ್ದ ಪುಟ್ಟ ಹುಡುಗ ದಿನಕ್ಕೆ ಆರೇಳು
ಸಾರಿ,ಕಕ್ಕಸಿಗೆಂದು ಓಣಿ ದಾಟಿ ಬರುತ್ತಿದ್ದುದನ್ನು ಅವರು ಕಂಡರು.
"ಅದೇನೂಂತ ಇಷ್ಟು ಚಿಕ್ಕ ಹುಡುಗರನ್ನ ಅಷ್ಟು ದೂರ ಕಳಿಸ್ತಾರೋ,
ಎಂದು ರಂಗಮ್ಮ ಈಗಿನ ವಿದ್ಯಾಪದ್ಧತಿಯ ವಿಷಯದಲ್ಲೇ ಅಸಮ್ಮತಿ ಸೂಚಿಸಿದರು.
ರಾಜಶೇಖರ ಎಡೆಬಿಡದೆ ಆ ಹುಡುಗನ ಆರೈಕೆ ಮಾಡಿದ. ಕಾಹಿಲೆ ಗುಣವಾಗಿ
ಹುಡುಗ ಬೇಗನೆ ಚೇತರಿಸಿಕೊಂಡಾಗ, ರಾಜಶೇಖರನಿಗೆ ಸಮಾಧಾನವಾಯಿತು.
ಚಿಕ್ಕವನು ನಾಲ್ಕು ದಿನ ರಜೆ ಪಡೆದು ಊರಿಗೆ ಹೋಗಿ ಬಂದ.
...ಆದರೆ ರಂಗಮ್ಮ ಆ ಹುಡುಗರ ವಿಷಯವಾಗಿ ಕಟು ಮಾತು ಆಡಬೇಕಾದ
ಮತ್ತೊಂದು ಸನ್ನಿವೇಶ ಒದಗಿ ಬಂತು. ಅದಕ್ಕೆ ಕಾರಣ ದೇವಯ್ಯ.
ರಾಧೆಯ ಯೋಚನೆಯನ್ನು ಬಿಟ್ಟುಕೊಟ್ಟ ಆ ಹುಡುಗನ ಕಣ್ಣುಗಳು ವಿಶ್ರಾಂತಿ
ಇಲ್ಲದೆ ಅತ್ತಿತ್ತ ಹೊರಳಿದ್ದುವು. ಎದುರು ಬದಿಯ ಮೂಲೆಯಲ್ಲಿದ್ದ ಮಹಡಿಯ
ದೊಡ್ಡ ಮನೆಯ ಹುಡುಗಿಯನ್ನು ಆತ ಕಂಡ. ಮೊದಮೊದಲು ಏನೋ ಎತ್ತವೋ
ಎಂದು ಸ್ವಲ್ಪ ಅಳುಕು ಆತನನ್ನು ಬಾಧಿಸಿತು. ಆದರೆ ಕ್ರಮೇಣ ಅವನ ಅಭಿಪ್ರಾಯ
ಗಳು ನಿರ್ಧಿಷ್ಟ ರೂಪ ತಳೆದುವು. ಎಲ್ಲ ಹುಡುಗಿಯರೂ ಒಂದೇ-ನೋಡಿ
ಮುಟ್ಟಿ ಆನಂದಿಸಬೇಕಾದ ಬೊಂಬೆಗಳು, ಎಂಬುದು ಅವನ ಅಭಿಪ್ರಾಯಗಳಲ್ಲಿ
ಒಂದು. ಆತನಿಗಿದ್ದುದು ನೋಟದ ಅನುಭವ ಮಾತ್ರ. ಆತ ಹೇಳಿಕೊಳ್ಳುವ ಸ್ಫುರಡಟ೨ಅಟ
ದ್ರೂಪಿಯೇನೂ ಆಗಿರಲಿಲ್ಲ. ಆದರೆ ತಾನು ಅತ್ಯಂತ ಸುಂದರವಾದ ಯುವಕ, ಯಾವ
ಹುಡುಗಿಯಾದರೂ ಸರಿಯೇ ತನ್ನನ್ನು ಕಂಡು ಮೋಹಿಸಲೇಬೇಕು-ಎಂಬುದು ಅವನ
ಧೃಢ ನಂಬಿಕೆಯಾಗಿತ್ತು.
ಅಷ್ಟು ಆತ್ಮವಿಶ್ವಾಸವಿದ್ದ ದೇವಯ್ಯ ಎದುರು ಬೀದಿಯ ಶ್ರೀಮಂತ ಹುಡುಗಿಗೆ
ಕಾಣಿಸುವಂತೆ ಕಿಟಕಿಯ ಬಳಿ ನಿಂತುಕೊಳ್ಳತೊಡಗಿದ. ಬಾಲ್ಕನಿಗೆ ಆಗಾಗ್ಗೆ ಬರುತ್ತಿದ್ದ
ಆ ಹುಡುಗಿ ದೇವಯ್ಯನನ್ನು ನೋಡಿದಳು.ಆದರೆ ಮುಖದ ಮೇಲೆ ಯಾವ ಭಾವನೆ
ಯನ್ನು ತೋರ್ಪಡಿಸಲಿಲ್ಲ. ದೇವಯ್ಯ ಮುಂದಿನ ಹೆಜ್ಜೆಯೆಂದು ಆ ಹುಡುಗಿಯನ್ನು
ನೋಡಿ ಹಲ್ಲು ಕಿರಿದ.ಹುಡುಗಿ ದುರದುರನೆ ವಠಾರದತ್ತ ನೋಡಿದಳು.
"ಕಿಟಕಿಯಿಂದೀಚೆಗೆ ಬಾರೋ. ಓದಕ್ಕೆ ಕಾಣ್ಸಲ್ಲ.."ಎಂದು ರಾಜಶೇಖರ
ಎರಡು ಸಾರಿ ದೂರಿಕೊಂಡ ಮೇಲೆ ದೇವಯ್ಯ ಹೊರಬಂದು ವಠಾರದ ಮಹಡಿ
ಮೆಟ್ಟುಲುಗಳ ಮೇಲೆ ನಿಂತು ನೋಡತೊಡಗಿದ.
ಇದು ಜಯರಾಮುವಿನ ದೃಷ್ಟಿಗೆ ಬಿತ್ತು. ಆ ಹುಡುಗಿಯ ವಿಷಯವಾಗಿ
ಆತನಿಗೆ ತೀರಾ ಕೆಟ್ಟ ಅಭಿಪ್ರಾಯವೂ ಇರಲಿಲ್ಲ; ಅಷ್ಟು ಒಳ್ಳೆಯ ಅಭಿಪ್ರಾಯವೂ
ಇರಲಿಲ್ಲ.ಆದರೆ ದೇವಯ್ಯನ ವಿಷಯದಲ್ಲಿ ಮಾತ್ರ ಮನಸ್ಸು ವ್ಯಗ್ರವಾಯಿತು.
ದೇವಯ್ಯ ನಿಧಾನವಾಗಿ ನಯವಾಗಿ ವರ್ತಿಸಿದ್ದರೆ,ಪರಿಸ್ಥಿತಿ ವಿಕೋಪಕ್ಕೆ
ಹೋಗುತ್ತಿರಲಿಲ್ಲ.ಆದರೆ ಆತನದು ಆತುರ ಪ್ರಕೃತಿ,ಎಲ್ಲಿಲ್ಲದ ಅವಸರ.ಆ ಹುಡುಗಿ
ಕಾಲೇಜಿಗೆ ಹೊರಟಾಗ ಪ್ರತಿ ದಿನವೂ ಬೆಳಗ್ಗೆ ಆಕೆಯ ಹಿಂದೆ ಬಸ್‌ಸ್ಟಾಪಿನವರೆಗೂ
ಹೋದ.
ಒಮ್ಮೆ ಆಕೆ "ಕೋತಿ!"ಎಂದು ಬಯ್ದಳು.
ದೇವಯ್ಯನಿಗೆ ಮುಖಭಂಗವಾಯಿತು.ಇವಳ ಜಂಭ ಎಷ್ಟರ ತನಕ ಇರುತ್ತೋ
ಒಂದು ಕೈ ನೋಡಿಯೇ ಬಿಡಬೇಕು ಎಮಧೂ ತೀರ್ಮಾನಿಸಿದ
ದೃಷ್ಟಿದಾಳಿ ಏಕಪ್ರಕಾರವಾಗಿ ನಡೆಯಿತು.
ಒಂದು ದಿನ ಆತ ವಠಾರದ ಮೆಟ್ಟಲುಗಳ ಮೇಲೆ ನಿಂತು ನೋಡುತ್ತಿದ್ದಂತೆ
ಒಬ್ಬಾಕೆ ಒಳಬಂದು "ಅಮ್ಮಣ್ಣೀ"ಎಂದು ರಂಗಮ್ಮನನ್ನು ಕರೆದಳು. ಆಕೆ ಆ ದೊಡ್ಡ
ಮನೆಯ ಕೆಲಸದವಳೆಂಬುದು ದೇವಯ್ಯನಿಗೆ ಗೊತ್ತಾಗಲಿಲ್ಲ.
ಆಕೆ ತಂದ ಸಂದೇಶ ಕೇಳಿ ರಂಗಮ್ಮ ಕಿಡಿಕಿಡಿಯಾದರು.
"ಎಂಥಾ ಹಲ್ಕಾ ಹುಡುಗ್ರು ಸೇರ್ಕೊಂಡುವಪ್ಪಾ ಈ ವರ್ಷ.."ಎಂದು ಆಕೆ
ಆಕ್ರೋಶ ಮಾಡಿದರು.
ಆ ಸದ್ದು ಕೇಳುತ್ತಲೇ ಗಾಬರಿಯಾಗಿ ದೇವಯ್ಯ ಕೊಠಡಿಯೊಳಕ್ಕೆ ಓಡಿದ.
ರಂಗಮ್ಮ ಬಲು ಪ್ರಯಾಸದಿಂದ ಮೆಟ್ಟಲೇರಿ ಬಂದರು.
"ಯಾರೋ ಅದು?ಯಾಕಪ್ಪಾ ಹೀಗ್ಸಾಯ್ತೀರಾ? ನಿಮಗೆ ಅಕ್ಕ ತಂಗಿ ಇಲ್ವೇ
ನಪ್ಪಾ ಯಾರಿಗೂ?ನಮ್ಮ ವಠಾರಕ್ಕೆ ಕೆಟ್ಟ ಹೆಸರು ತರ್ತೀರಲ್ಲಪ್ಪಾ ನೀವು!"
ದೇವಯ್ಯನ ಮುಖ ಕಪ್ಪಿಟ್ಟಿತ್ತು. ಚಿಕ್ಕ ಹುಡುಗ ಆಶ್ಚರ್ಯದ ನೋಟದಿಂದ
ದೊಡ್ಡವನನ್ನು ನೋಡಿದ್ದ. ರಂಗಮ್ಮ ಹೇಳುತ್ತಿದ್ದು ದು ಜಯರಾಮುಗೆ ಕೇಳಿಸುತ್ತಿದೆ
ಯಲ್ಲ. ಈ ವಠಾರದಲ್ಲಿನ್ನು ತಲೆ ಎತ್ತದ ಹಾಗೆ ಆಯಿತಲ್ಲಾ ಎಂದು ರಾಜಶೇಖರ
ಮನಸ್ಸಿನೊಳಗೆ ಗೋಳಾಡಿದ.
ನಾಲ್ಕೈದು ನಿಮಿಷ ಹೇಳಿದ್ದನ್ನೆ ಹೇಳಿ ರಂಗಮ್ಮ ಕೊನೆಯ ಎಚ್ಚರಿಕೆ
ಕೊಟ್ಟರು:
"ಇದೇ ಆಖೈರು. ಇನ್ನೊಂದ್ಸಲ ಹೀಗೇನಾದ್ರೂ ಆದ್ರೆ ಈ ರೂಮು ಬಿಟ್ಟು
ನೀವು ಹೊರಟ್ಹೋಗ್ಬೇಕು. ತಿಳೀತಾ?ಹುಷಾರಾಗಿರಿ!"
ರಂಗಮ್ಮ ಮೆಲ್ಲನೆ ಕೆಳಕ್ಕಿಳಿದರು. ಗದ್ದಲ ಕೇಳಿ ಹೊರಬಂದಿದ್ದ ಚಂಪಾವತಿ
ಯನ್ನು ನೋಡಿ ಅವರೆಂದರು:
"ನನಗೆ ಗೊತ್ತು, ಆ ಜನವೇ ಹಾಗೆ."
ವಿಷಯ ಏನೆಂದು ತಿಳಿದ ಚಂಪಾ ಅಂದಳು:
"ಆ ಜನ ಅಂತ ಏನು ರಂಗಮ್ನೋರ? ಬ್ರಾಹ್ಮಣ ಹುಡುಗರೇನು ಕಡಿಮೇನೇ?
ಹುಡುಗರು ಅಂದ್ರೆ ಯಾವಾಗಲೂ ಅಷ್ಟೇ. ಈಗಿನೋರಲ್ಲಿ ಸ್ವಲ್ಪ ಪೋಲಿತನ
ಜಾಸ್ತಿ."
"ಪೋಲಿತನ ಅಲ್ಲ ಚಂಪಾ, ಭಂಡತನ-ಭಂಡತನ!"

೧೬

ಜಯರಾಮುವಿನ ಪರೀಕ್ಷೆ ಮುಗಿದು ನವರಾತ್ರಿ ಹಬ್ಬ ಬಂತು.
ಹಬ್ಬ ಬಂದಾಗಲೆಲ್ಲ ರಂಗಮ್ಮನಿಗೆ ಮಕ್ಕಳು ಮೊಮ್ಮಕ್ಕಳನ್ನು ನೋಡುವ

ಬಯಕೆ ಹೆಚ್ಚುತ್ತಿತ್ತು. ಆದರೆ ಈ ಸಲ ಯಾರೂ ಬರಲಿಲ್ಲ.
ಮಂಜು ಕವಿದ ಒಂದು ಮುಂಜಾನೆ ರಂಗಮ್ಮನೆಂದರು:
"ಮಳೆ ಹೋಯ್ತೂಂತ ಕಾಣುತ್ತೆ."
ಹೊರಗೆ ತೋರಿಸದೆ ಇದ್ದರೂ ಒಳಗೆ ,ಮಳೆ ನಿಂತಿತಲ್ಲಾ ಎಂದು ಅವರೆಗೆಷ್ಟೋ
ಸಮಾಧಾನವೆನಿಸಿತ್ತು.
ನಾದಿನಿ ಹೋದಂದಿನಿಂದ ಉಪಾಧ್ಯಾಯರ ಹೆಂಡತಿ ಕಷ್ಟಕ್ಕೆ ಒಳಗಾಗಿದ್ದಳು.
ಐದು ಜನ ಮಕ್ಕಳಿದ್ದ ಆ ಸಂಸಾರದ ಗೃಹಕೃತ್ಯವನ್ನು ಒಬ್ಬಳಿಂದಲೇ ನೆರವೇರಿಸಿ
ಕೊಂಡು ಹೋಗುವುದು ಸುಲಭವಾಗಿರಲಿಲ್ಲ. ಸಾಲದುದಕ್ಕೆ ಅವಳ ಆರೋಗ್ಯವೂ
ಸರಿಯಾಗಿರಲಿಲ್ಲ. ಈ ವರ್ಷ ವರ್ಗ ಬೇರೆ ಆಗುವುದೆಂದು ಕಿಂವದಂತಿ ಹುಟ್ಟಿಕೊಂಡು
ಲಕ್ಷ್ಮೀನಾರಾಯಣಯ್ಯ ಗಾಬರಿಯಾಗಿದ್ದರು. ಈ ಸಲ ಬೀಸುತ್ತಿದ್ದ ದೊಣ್ಣೆಯಿಂದ
ತಪ್ಪಿಸಿಕೊಳ್ಳಲಾಗುವುದಿಲ್ಲವೆಂಬುದು ಅವರಿಗೆ ಸ್ಪಷ್ಟವಾಗಿತ್ತು.
"ಮುಂದಿನ ಏಪ್ರಿಲ್ ಹೊತ್ತಿಗೆ ವರ್ಗವಾದರೂ ಆಗಬಹುದು" ಎಂದು ಲಕ್ಷ್ಮೀ
ನಾರಾಯಣಯ್ಯ ರಂಗಮ್ಮನಿಗೆ ಸುದ್ದಿ ತಿಳಿಸಿದರು.
"ವರ್ಗವಾದರೂ ಎಲ್ಲಾದರೂ, ಹತ್ತಿರಕ್ಕೇ ಆಗುತ್ತೆ. ಸಂಸಾರವನ್ನೆಲ್ಲಾ ಇಲ್ಲೇ
ಬಿಟ್ಟಿರ್ರ್ತೀನಿ," ಎಂದು ಮುಂದಿನ ಯೋಜನೆಯನ್ನೂ ಲಕ್ಷ್ಮೀನಾರಾಯಣಯ್ಯ ತಿಳಿ
ಸಿದ್ದರಿಂದ, 'ಮನೆ ಬಾಡಿಗೆಗೆ ಇದೆ' ಬೋರ್ಡಿನ ವಿಚಾರ ರಂಗಮ್ಮ ಯೋಚಿಸಿಲಿಲ್ಲ.
............
ಈ ನಡುವೆ ವಠಾರದ ನೆಮ್ಮದಿಯನ್ನು ಕದಡಿದೊಂದು ಪ್ರಕರಣ ನಡೆದು
ಹೋಯಿತು.
ಅದು ಆರಂಭವಾದುದು ನೀರಿನ ನಲ್ಲಿಯ ಬಳಿ. ರಾಧೆಯ ಬಕೀಟಿನ ಹಿಂದೆ
ರಾಜಮ್ಮನ ಬಿಂದಿಗೆ ಇತ್ತು, ಆನಂತರ ಅಹಲೈಯ ಸರದಿ.
"ಒಂದು ರಾಶಿ ಬಟ್ಟೆ ಬಿದ್ದಿದೆ ಒಗೆಯೋಕೆ. ನಾನು ಮೊದಲು ನೀರು ಹಿಡಕೋ
ತೀನಿ ಕಣೇ," ಎಂದು ಅಹಲ್ಯಾ ರಾಧೆಗೆ ಹೇಲಿದರು. ರಾಧೆ ಬೇಡವೆನ್ನಲಿಲ್ಲ. ಅವ
ರಿಬ್ಬರೂ ಸ್ಥಳ ಬದಲಿಸಿಕೊಂಡರು. ತಟ್ಟೆಯಲ್ಲಿ ಉಪ್ಪಿಟ್ಟು ತುಂಬಿ ವೆಂಕಟೇಶನಿಗೆ
ಕೊಟ್ಟು ಬಂದ ರಾಜಮ್ಮನಿಗೆ, ಅಹಲ್ಯಾ ತನಗಿಂತ ಮುಂದಾಗಿ ನಿಂತಿದ್ದುದು ಕಂಡಿತು.
ಆಕೆ ಏನಾಗಿತ್ತೆಂಬುದನ್ನು ಗಮನಿಸದೆ ಅಹಲ್ಯೆಯತ್ತ ಧಾವಿಸಿದಳು.
"ಅಹಹಹಾ ನೀನೇ! ನಡಿ ಹಿಂದೆ!" ಎಂದು ಅಹಲ್ಯೆಯ ತೋಳು ಹಿಡಿದು ಆಕೆ
ಎಳೆದಳು.
ಆಗ ಕೊಳಾಯಿಯ ಬಳಿ ಇದ್ದ ಪದ್ಮಾವತಿಯೆಂದಳು:
"ನನ್ನದಾಯ್ತು. ಇನ್ನು ಹಿಡಕೊಳ್ಳೀಮ್ಮಾ."
ಅಹಲ್ಯಾ ತನ್ನ ಬಿಂದಿಗೆ ಇಡಬೇಕು. ಆದರೆ ರಾಜಮ್ಮ ಬಿಡಲೊಲ್ಲಳು. ಅಹಲ್ಯಾ

20

ದೃಷ್ಟಿದಾಳಿ ಏಕಪ್ರಕಾರವಾಗಿ ನಡೆಯಿತು.
ಒಂದು ದಿನ ಆತ ವಠಾರದ ಮೆಟ್ಟಲುಗಳ ಮೇಲೆ ನಿಂತು ನೋಡುತ್ತಿದ್ದಂತೆ
ಒಬ್ಬಾಕೆ ಒಳಬಂದು "ಅಮ್ಮಣ್ಣೀ"ಎಂದು ರಂಗಮ್ಮನನ್ನು ಕರೆದಳು. ಆಕೆ ಆ ದೊಡ್ಡ
ಮನೆಯ ಕೆಲಸದವಳೆಂಬುದು ದೇವಯ್ಯನಿಗೆ ಗೊತ್ತಾಗಲಿಲ್ಲ.
ಆಕೆ ತಂದ ಸಂದೇಶ ಕೇಳಿ ರಂಗಮ್ಮ ಕಿಡಿಕಿಡಿಯಾದರು.
"ಎಂಥಾ ಹಲ್ಕಾ ಹುಡುಗ್ರು ಸೇರ್ಕೊಂಡುವಪ್ಪಾ ಈ ವರ್ಷ.."ಎಂದು ಆಕೆ
ಆಕ್ರೋಶ ಮಾಡಿದರು.
ಆ ಸದ್ದು ಕೇಳುತ್ತಲೇ ಗಾಬರಿಯಾಗಿ ದೇವಯ್ಯ ಕೊಠಡಿಯೊಳಕ್ಕೆ ಓಡಿದ.
ರಂಗಮ್ಮ ಬಲು ಪ್ರಯಾಸದಿಂದ ಮೆಟ್ಟಲೇರಿ ಬಂದರು.
"ಯಾರೋ ಅದು?ಯಾಕಪ್ಪಾ ಹೀಗ್ಸಾಯ್ತೀರಾ? ನಿಮಗೆ ಅಕ್ಕ ತಂಗಿ ಇಲ್ವೇ
ನಪ್ಪಾ ಯಾರಿಗೂ?ನಮ್ಮ ವಠಾರಕ್ಕೆ ಕೆಟ್ಟ ಹೆಸರು ತರ್ತೀರಲ್ಲಪ್ಪಾ ನೀವು!"
ದೇವಯ್ಯನ ಮುಖ ಕಪ್ಪಿಟ್ಟಿತ್ತು. ಚಿಕ್ಕ ಹುಡುಗ ಆಶ್ಚರ್ಯದ ನೋಟದಿಂದ
ದೊಡ್ಡವನನ್ನು ನೋಡಿದ್ದ. ರಂಗಮ್ಮ ಹೇಳುತ್ತಿದ್ದು ದು ಜಯರಾಮುಗೆ ಕೇಳಿಸುತ್ತಿದೆ
ಯಲ್ಲ. ಈ ವಠಾರದಲ್ಲಿನ್ನು ತಲೆ ಎತ್ತದ ಹಾಗೆ ಆಯಿತಲ್ಲಾ ಎಂದು ರಾಜಶೇಖರ
ಮನಸ್ಸಿನೊಳಗೆ ಗೋಳಾಡಿದ.
ನಾಲ್ಕೈದು ನಿಮಿಷ ಹೇಳಿದ್ದನ್ನೆ ಹೇಳಿ ರಂಗಮ್ಮ ಕೊನೆಯ ಎಚ್ಚರಿಕೆ
ಕೊಟ್ಟರು:
"ಇದೇ ಆಖೈರು. ಇನ್ನೊಂದ್ಸಲ ಹೀಗೇನಾದ್ರೂ ಆದ್ರೆ ಈ ರೂಮು ಬಿಟ್ಟು
ನೀವು ಹೊರಟ್ಹೋಗ್ಬೇಕು. ತಿಳೀತಾ?ಹುಷಾರಾಗಿರಿ!"
ರಂಗಮ್ಮ ಮೆಲ್ಲನೆ ಕೆಳಕ್ಕಿಳಿದರು. ಗದ್ದಲ ಕೇಳಿ ಹೊರಬಂದಿದ್ದ ಚಂಪಾವತಿ
ಯನ್ನು ನೋಡಿ ಅವರೆಂದರು:
"ನನಗೆ ಗೊತ್ತು, ಆ ಜನವೇ ಹಾಗೆ."
ವಿಷಯ ಏನೆಂದು ತಿಳಿದ ಚಂಪಾ ಅಂದಳು:
"ಆ ಜನ ಅಂತ ಏನು ರಂಗಮ್ನೋರ? ಬ್ರಾಹ್ಮಣ ಹುಡುಗರೇನು ಕಡಿಮೇನೇ?
ಹುಡುಗರು ಅಂದ್ರೆ ಯಾವಾಗಲೂ ಅಷ್ಟೇ. ಈಗಿನೋರಲ್ಲಿ ಸ್ವಲ್ಪ ಪೋಲಿತನ
ಜಾಸ್ತಿ."
"ಪೋಲಿತನ ಅಲ್ಲ ಚಂಪಾ, ಭಂಡತನ-ಭಂಡತನ!"

೧೬

ಜಯರಾಮುವಿನ ಪರೀಕ್ಷೆ ಮುಗಿದು ನವರಾತ್ರಿ ಹಬ್ಬ ಬಂತು.
ಹಬ್ಬ ಬಂದಾಗಲೆಲ್ಲ ರಂಗಮ್ಮನಿಗೆ ಮಕ್ಕಳು ಮೊಮ್ಮಕ್ಕಳನ್ನು ನೋಡುವ

ಬಯಕೆ ಹೆಚ್ಚುತ್ತಿತ್ತು. ಆದರೆ ಈ ಸಲ ಯಾರೂ ಬರಲಿಲ್ಲ.
ಮಂಜು ಕವಿದ ಒಂದು ಮುಂಜಾನೆ ರಂಗಮ್ಮನೆಂದರು:
"ಮಳೆ ಹೋಯ್ತೂಂತ ಕಾಣುತ್ತೆ."
ಹೊರಗೆ ತೋರಿಸದೆ ಇದ್ದರೂ ಒಳಗೆ ,ಮಳೆ ನಿಂತಿತಲ್ಲಾ ಎಂದು ಅವರೆಗೆಷ್ಟೋ
ಸಮಾಧಾನವೆನಿಸಿತ್ತು.
ನಾದಿನಿ ಹೋದಂದಿನಿಂದ ಉಪಾಧ್ಯಾಯರ ಹೆಂಡತಿ ಕಷ್ಟಕ್ಕೆ ಒಳಗಾಗಿದ್ದಳು.
ಐದು ಜನ ಮಕ್ಕಳಿದ್ದ ಆ ಸಂಸಾರದ ಗೃಹಕೃತ್ಯವನ್ನು ಒಬ್ಬಳಿಂದಲೇ ನೆರವೇರಿಸಿ
ಕೊಂಡು ಹೋಗುವುದು ಸುಲಭವಾಗಿರಲಿಲ್ಲ. ಸಾಲದುದಕ್ಕೆ ಅವಳ ಆರೋಗ್ಯವೂ
ಸರಿಯಾಗಿರಲಿಲ್ಲ. ಈ ವರ್ಷ ವರ್ಗ ಬೇರೆ ಆಗುವುದೆಂದು ಕಿಂವದಂತಿ ಹುಟ್ಟಿಕೊಂಡು
ಲಕ್ಷ್ಮೀನಾರಾಯಣಯ್ಯ ಗಾಬರಿಯಾಗಿದ್ದರು. ಈ ಸಲ ಬೀಸುತ್ತಿದ್ದ ದೊಣ್ಣೆಯಿಂದ
ತಪ್ಪಿಸಿಕೊಳ್ಳಲಾಗುವುದಿಲ್ಲವೆಂಬುದು ಅವರಿಗೆ ಸ್ಪಷ್ಟವಾಗಿತ್ತು.
"ಮುಂದಿನ ಏಪ್ರಿಲ್ ಹೊತ್ತಿಗೆ ವರ್ಗವಾದರೂ ಆಗಬಹುದು" ಎಂದು ಲಕ್ಷ್ಮೀ
ನಾರಾಯಣಯ್ಯ ರಂಗಮ್ಮನಿಗೆ ಸುದ್ದಿ ತಿಳಿಸಿದರು.
"ವರ್ಗವಾದರೂ ಎಲ್ಲಾದರೂ, ಹತ್ತಿರಕ್ಕೇ ಆಗುತ್ತೆ. ಸಂಸಾರವನ್ನೆಲ್ಲಾ ಇಲ್ಲೇ
ಬಿಟ್ಟಿರ್ರ್ತೀನಿ," ಎಂದು ಮುಂದಿನ ಯೋಜನೆಯನ್ನೂ ಲಕ್ಷ್ಮೀನಾರಾಯಣಯ್ಯ ತಿಳಿ
ಸಿದ್ದರಿಂದ, 'ಮನೆ ಬಾಡಿಗೆಗೆ ಇದೆ' ಬೋರ್ಡಿನ ವಿಚಾರ ರಂಗಮ್ಮ ಯೋಚಿಸಿಲಿಲ್ಲ.
............
ಈ ನಡುವೆ ವಠಾರದ ನೆಮ್ಮದಿಯನ್ನು ಕದಡಿದೊಂದು ಪ್ರಕರಣ ನಡೆದು
ಹೋಯಿತು.
ಅದು ಆರಂಭವಾದುದು ನೀರಿನ ನಲ್ಲಿಯ ಬಳಿ. ರಾಧೆಯ ಬಕೀಟಿನ ಹಿಂದೆ
ರಾಜಮ್ಮನ ಬಿಂದಿಗೆ ಇತ್ತು, ಆನಂತರ ಅಹಲೈಯ ಸರದಿ.
"ಒಂದು ರಾಶಿ ಬಟ್ಟೆ ಬಿದ್ದಿದೆ ಒಗೆಯೋಕೆ. ನಾನು ಮೊದಲು ನೀರು ಹಿಡಕೋ
ತೀನಿ ಕಣೇ," ಎಂದು ಅಹಲ್ಯಾ ರಾಧೆಗೆ ಹೇಲಿದರು. ರಾಧೆ ಬೇಡವೆನ್ನಲಿಲ್ಲ. ಅವ
ರಿಬ್ಬರೂ ಸ್ಥಳ ಬದಲಿಸಿಕೊಂಡರು. ತಟ್ಟೆಯಲ್ಲಿ ಉಪ್ಪಿಟ್ಟು ತುಂಬಿ ವೆಂಕಟೇಶನಿಗೆ
ಕೊಟ್ಟು ಬಂದ ರಾಜಮ್ಮನಿಗೆ, ಅಹಲ್ಯಾ ತನಗಿಂತ ಮುಂದಾಗಿ ನಿಂತಿದ್ದುದು ಕಂಡಿತು.
ಆಕೆ ಏನಾಗಿತ್ತೆಂಬುದನ್ನು ಗಮನಿಸದೆ ಅಹಲ್ಯೆಯತ್ತ ಧಾವಿಸಿದಳು.
"ಅಹಹಹಾ ನೀನೇ! ನಡಿ ಹಿಂದೆ!" ಎಂದು ಅಹಲ್ಯೆಯ ತೋಳು ಹಿಡಿದು ಆಕೆ
ಎಳೆದಳು.
ಆಗ ಕೊಳಾಯಿಯ ಬಳಿ ಇದ್ದ ಪದ್ಮಾವತಿಯೆಂದಳು:
"ನನ್ನದಾಯ್ತು. ಇನ್ನು ಹಿಡಕೊಳ್ಳೀಮ್ಮಾ."
ಅಹಲ್ಯಾ ತನ್ನ ಬಿಂದಿಗೆ ಇಡಬೇಕು. ಆದರೆ ರಾಜಮ್ಮ ಬಿಡಲೊಲ್ಲಳು. ಅಹಲ್ಯಾ

20

ಮತ್ತು ರಾಧಾ ಅದೇನನ್ನೋ ಹೇಳಲು ಹೊರಟರು. ಆದರೆ ಸ್ವರವೇರಿಸಿ ಬೈಯು
ವುದರಲ್ಲೆ ನಿರತಳಾದ ರಾಜಮ್ಮನಿಗೆ ಅದು ಒಂದೂ ಕೇಳಿಸಲಿಲ್ಲ. ಕಲಿಕಾಲದ ಹುಡುಗಿ
ಯರು ಬಜಾರಿಗಳೆಂದು ಆಕೆ ಸಾರಿದಳು. ಹಿಡಿಯುವರಿಲ್ಲದೆ ನೀರು ವೃಥಾ ಹರಿದು
ಹೋಯಿತು.
ಗದ್ದಲ ಕೇಳಿ ಬಂದ ರಂಗಮ್ಮ ಆಕ್ರೋಶ ಮಾಡಿದರು:
"ಅಯ್ಯೊ ನಮ್ಮಪ್ಪಾ! ನೀರು ಸುರಿದು ಹೋಗ್ತಾ ಇದೆಯಲ್ಲೇ!"
ತಾಯಿಯ ಸ್ವರ ಕೇಳಿ ವೆಂಕಟೇಶ ಉಪ್ಪಿಟ್ಟನ್ನು ಅರ್ಧದಲ್ಲೇ ಬಿಟ್ಟು ಹೊರ
ಬಂದ. ಆತನನ್ನು ನೋಡುತ್ತಲೆ ಅಹಲ್ಯಾ ಅಳತೊಡಗಿದಳು.
"ಹೋಗ್ಲಿ. ನಾನೇ ಹಿಡಕೊತೀನಿ", ಎಂದು ರಾಧಾ ತನ್ನ ಬಕೀಟನ್ನು ಕೊಳಾ
ಯಿಯ ಕೆಳಗಿಟ್ಟಳು.
ರಾಜಮ್ಮ ಗಟ್ಟಿಯಾಗಿ ಕಿರಿಚಿಕೊಳ್ಳುತ್ತ ಆ ಬಕೀಟನ್ನು ಪಕ್ಕಕ್ಕೆ ತಳ್ಳಿದರು. ಆ
ಗಲಾಟೆಯ ಮಧ್ಯೆ ನಿಜ ಸಂಗತಿ ರಾಜಮ್ಮನಿಗೆ ಹೊಳಿಯಿತು. ಅಹಲ್ಯಾ ರಾಧೆಯರು
ಸ್ಥಳಗಳನ್ನು ಮಾತ್ರ ಬದಲಾಯಿಸಿಕೊಂಡಿದ್ದರೆಂಬುದು ಸ್ಪಷ್ಟವಾಯಿತು. ತಪ್ಪು ತನ್ನ
ದೆಂದು ಗೊತ್ತಾದೊಡನೆ ಅವಳು ಮತ್ತಷ್ಟು ಗಟ್ಟಿಯಾಗಿ ಕೂಗಾಡಿದಳು:
"ರಾಮ ರಾಮಾ! ಈ ಹುಡುಗಿಯರು ಹೊಡೆಯೋಕೇ ಬರ್ತಾವಲ್ಲೇ!"
ಬೀದಿಯಲ್ಲೂ ಜನ ಗುಂಪು ಕಟ್ಟಿಕೊಂಡು ವಠಾರದತ್ತ ನೋಡತೊಡಗಿದರು.
ವೆಂಕಟೇಶ ತಾಯಿಗೆ ಹೇಳಿದ:
"ನೀನು ಬಾಮ್ಮ ಒಳಕ್ಕೆ. ಎಲ್ಲರ್ದೂ ಆದ್ಮೇಲೆ ನೀರು ಹಿಡ್ಕೊ."
ಮಗನೂ ಹುಡುಗಿಯರ ಪಕ್ಷ ವಹಿಸಿದ್ದನ್ನು ಕಂಡು ರಾಜಮ್ಮನಿಗೆ ರೇಗಿ
ಹೋಯಿತು.
"ಅಯ್ಯೋ ಮುಂಡೇಗಂಡಾ! ನೀನೂ ನಿಮ್ಮಮ್ಮನಿಗೆ ಅಂತಿಯೇನೋ!" ಎಂದು
ರಾಜಮ್ಮ ತನ್ನ ಬಿಂದಿಗೆ ಎತ್ತಿಕೊಂಡಳು.
"ಈ ನಲ್ಲಿ ನೀರೇ ಬೇಡ. ಬೀದಿ ಕೊಳಾಯಿಯಿಂದ ತರ್ತೀನಿ,"ಎಂದು ಹೇಳಿ
ಅವಳು ಎದುರುಗಡೆ ದೊಡ್ಡ ಮಹಲಿನ ಹೊರಭಾಗದಲ್ಲಿದ್ದ ಬೀದಿ ಕೊಳಾಯಿಯತ್ತ
ಸಾಗಿದಳು.
ವಠಾರದ ಕೊಳಾಯಿಯನ್ನು ಆಗಲೆ ನಿಲ್ಲಿಸಿಬಿಟ್ಟಿದ್ದರು ರಂಗಮ್ಮ. ರಾಜಮ್ಮ
ಹೊರಟು ಹೋದ ಮೇಲೆ ಅವರು ಮತ್ತೊಮ್ಮೆ ನಲ್ಲಿ ತಿರುಗಿಸಿದರು. ರಾಧಾ ನೀರು
ಹಿಡಿದಳು. ಅಹಲ್ಯಾ ಅಳುತ್ತಾ ಒಳಹೋದ ಮೇಲೆ ಆಕೆಗೆ ಒಂದೇಟು ಕೊಟ್ಟು,
ಮಗಳ ಬದಲು ಆಕೆಯ ತಾಯಿ ಹೊರ ಬಂದಳು.
ವೆಂಕಟೇಶ ಕೋಪದಿಂದ ಮುಖ ಊದಿಸಿಕೊಂಡು, ಉಪ್ಪಿಟ್ಟನ್ನು ಅರ್ಧದಲ್ಲೇ
ಬಿಟ್ಟು, ಚಪ್ಪಲಿ ಮೆಟ್ಟಿ ಹೊರಟು ಹೋದ.

ಬೀದಿಯ ಕೊಳಾಯಿ ತೆರವಾಗಿರಲಿಲ್ಲ. ಶ್ರೀಮಂತರ ಮನೆಯ ಮಾಲಿಯೂ

ಜವಾನರೂ ನೀರು ಹಿಡಿದು ಒಳಕ್ಕೊಯ್ದು ಹೂ ಗಿಡಗಳಿಗೆ ಚಿಮುಕಿಸುತ್ತಿದರು.
ಬೀದಿಯ ಕೊಳಾಯಿಯ ನೀರಿಗೆ ದುಡು ಕೊಡಬೇಕಾಗಿರಲಿಲ್ಲಿವಾದ್ದರಿಂದ ಅದನ್ನೇ
ಹೊದೋಟಕ್ಕಗಿ ಆ ದೊಡ್ಡ ಮನೆಯವರು ಉಪಯೋಗಿಸುವುದು ಸಹಜವಾಗಿತ್ತು.
"ಒಂದೆರಡು ಬಿಂದಿಗೆ ನೀರು ಹಿಡ್ಕೋತೀನಪ್ಪಾ," ಎಂದು ರಾಜಮ್ಮ
ಆಂಗಲಾಚಿದಯಳು.
"ಒಂದ್ಗಂಟೆ ಒತ್ತು ಬಿಟ್ಕಂಬನ್ನಿ," ಎಂದನೊಬ್ಬ. ಇನ್ನೊಬ್ಬ ಹೇಳಿದ:
"ವಠಾರದ ಕೊಳಾಯಿ ಕೆಟ್ಟೋಗೈತೆ?"
ಆ 'ಶೂ- ಮುಂಡೇವು'ಗಳೆದುರು ಬೇಡುತ್ತ ನಿಲ್ಲುವುದು ಮಾನಗೇಡೆಂದು
ರಾಜಮ್ಮ ಬುಸುಗುಟ್ವಿಕೊಂಡು ವಠಾರಕೈ ವಾಪಸು ಬಂದಳು. ಮನೆಯೊಳಗೇ ಇದ್ದು,
ಎಲ್ಲರದೂ ಆದ ಬಳಿಕ ತಾನು ನೀರು ಹಿಡಿದುಕೊಂಡಳು.
...ಅಷ್ಟೇ ಆಗಿದ್ದರೆ ಅದು ನಾಲ್ಕು ದಿನಗಳೊಳಗೆ ಮರೆತು ಹೋಗಬೇಕಾದ
ಸಾಮಾನ್ಯ ವಿಷಯವಾಗುತ್ತಿತು.
ಆದರೆ ಅದು ಅಷ್ಟೇ ಆಗಿರಲಿಲ್ಲ.
ಹಾಗೆಂದು ಮೊದಲು ಕಂಡು ಹಿಡಿದವಳು ಚಂಪಾ.
ಒಂದು ಮಧ್ಯಾಹ್ನ 'ಚಂದ್ರಲೇಖಾ' ಚಿತ್ರದ ಮ್ಯಾಟಿನಿ ಪ್ರದರ್ಶನ ನೋಡಲು
ಚಂಪಾವತಿಯ ನಾಯಕತ್ವದಲ್ಲಿ ವಠಾರದಿಂದ ಒಂದು ತಂಡ ಸೆಂಟ್ರಲ್ ಟಾಕೀಸಿಗೆ
ಹೊರಟಿತು. ಬರಲು ಬಹಳ ಜನ ಒಪ್ಪಿದ್ದರೂ ಹೊರಟಾಗ ಅವರಿದ್ದುದು ಚಂಪಾ
ವತಿಯ ಮಗುವನ್ನೂ ಸೇರಿಕೊಂಡು ಆರು ಜನ. ರಾಧಾ ಅಹಲ್ಯಾ, ಕಾಮಾಕ್ಷಿಯರ
ಉತ್ಸಾಹ ಹೇಳತೀರದು. ಮೀನಾಕ್ಷಮ್ಮನ ಮಗ ಆ ಚಿತ್ರವನ್ನು ಹಿಂದೆಯೇ ನೋಡಿದ್ದ.
ಅತನಿಗೆ ಒಂದಾಣೆ ಲಂಚ ಕೊಟ್ಟು ತಾಯಿ ಒಬ್ಬಳೇ ಗುಂಪಿನ ಜತೆ ಹೊರಟಳು.
ಚಂಪಾವತಿ ಮಗಳನ್ನೆತ್ತಿಕೊಂಡು ಬಂದಳು.
ಈಗ ಸ್ವಲ್ಪ ಸಮಯದಿಂದ ಅಹಲ್ಯೆಯ ಮುಖದ ಮೇಲೊಂದು ಕಳೆ ಇದ್ದು
ದನ್ನು ಚಂಪಾ ಕಂಡಿದ್ದಳು. ಹುಡುಗಿ ಬೆಳೆಯುತ್ತಿರುವುದರಿಂದ ಹಾಗೆ ಎಂದಷ್ಟೇ
ವಿವರಣೆ ಕೊಡಲು ಚಂಪಾ ಸಿದ್ಧಳಿರಲಿಲ್ಲ, ಆ ಕಳೆಯ ಅರ್ಥವೇನೆಂಬುದು ಆಕೆಗೆ
ಗೊತ್ತಿತ್ತು. ಪ್ರಾಯಶಃ ಹೀಗಿದೆಯೇನೋ ಎಂದು ಆಕೆ ಊಹಿಸಿಕೊಂಡಳು. ಆ
ಊಹೆ , ಇತರ ಎಷ್ಟೋ ವಿಷಯಗಳಂತೆ, ಮನಸಿನೊಂದು ಮೂಲೆಯಲ್ಲಿ ವಿಶ್ರಾಂತಿ
ಪಡೆಯಿತು.
ಅವರೆಲ್ಲ ರಾಜಾ ಮಿಲ್ಲನ್ನು ಬಳಸಿಕೊಂಡು ನಡೆದೇ ಹೋದರು. ನಡೆಯುತ್ತಿ
ದ್ದಾಗ ತಮ್ಮನ್ನು ನೋಡುತ್ತಿದ್ದ ಗಂಡಸರ ನೋಟಗಳು ಅವರಿಗೆ ಹೊಸದಾಗಿರಲಿಲ್ಲ.
ಅಹಲ್ಯೆ ಚಂಚಲಳಾಗಿ ಬಾರಿ ಬಾರಿಗೂ ಅತ್ತಿತ್ತ ನೋಡುತ್ತಿದ್ದಳು. ಯಾರನ್ನೋ
ಹುಡುಕುವ ಹಾಗಿತ್ತು ಆಕೆ....

ಅದನ್ನು ಗಮನಿಸಿದ ಚಂಪಾ ಮುಗುಳ್ನಕ್ಕಳು.

ಚಿತ್ರ ಆವರೆಲ್ಲರಿಗೂ ತುಂಬಾ ಹಿಡಿಸಿತು. ಆಗಲೆ ಆರೂವರೆ ಘಂಟೆಯಾಗಿತ್ತು.
ಗಂಡ ಅಷ್ಟರಲ್ಲೇ ಬಂದಿರಬೇಕೆಂದು ಕಾಮಾಕ್ಷಿ ಚಡಪಡಿಸಿದಳು. ಆದರೂ "ಮಲ್ಲೇ
ಶ್ವರದ ಅ೦ಗಡಿ ಬೀದಿ ಮೇಲಿಂದ ಹೋಗೋಣ್ವೇನ್ರಿ?" ಎ೦ದು ಚ೦ಪಾ ಕೇಳಿದಾಗ
ಯಾರೂ ಬೇಡವೆನ್ನಲಿಲ್ಲ.
ಅಂಗಡಿ ಬೀದಿ ತಲಪಿದಾಗ, ಯಾವುದೋ ಬೋರ್ಡಿನತ್ತ ಬೊಟ್ಟುಮಾಡತ್ತ
ರಾಧಾ ಅ೦ದಳು:
"ಅದೇ ನೋಡಿ ಡಾಕ್ಟರ್ ಶಾಪು. ಆ ದಿವಸ ಅಹಲ್ಯಾ ಮನೆಗೆ ಬಂದಿರ್ಲಿಲ್ವೆ?-
ಆ.ಡಕ್ಟರು."
"ರಾಜುಮ್ಮನ ಮಗ ಕೆಲಸ ಮಾಡ್ತಿರೋ ಶಾಪಾ?" ಎಂದು ಮೀನಾಕ್ಷಮ್ಮ ಅತ್ತ.
ನೋಡುತ್ತ ಕೇಳಿದರು. ಚಂಪಾ-ಕಾಮಾಕ್ಷಿಯರೂ ನೋಡಿದರು.
"ಹೂಂ. ಅದೇ," ಎಂದಳು ರಾಧಾ.
ಚಂಪಾ ಸರಕ್ಕನೆ ದ್ರಷ್ಟಿ ತಿರುಗಿಸಿ ಅಹಲ್ಯೆಯನ್ನು ದಿಟ್ಟಿಸಿದಳು. ಲಜ್ಜೆ-ಕಾತರ
ಗಳ ಸಮ್ಮಿಶ್ರಣದ ಸೊಬಗು... ಆ ಔಷಧಾಲಯದತ್ತ ಕಣ್ಣೆತ್ತಿ ನೋಡುವುದಕ್ಕೂ
ಅಧೈರ್ಯ. ಅರ್ಥವಾಯಿತು ಚಂಪಾವತಿಗೆ.
ಅಹಲ್ಯಾ ಮೊದಲಿನಂತೆ ಮಾತನಡತೊಡಗಿದ್ದು, ಬೇರೆ ಬೀದಿಗೆ ಅವರೆಲ್ಲ
ಕಾಲಿಟ್ಟ ಮೇಲೆಯೇ.
ಆ ರಾತ್ರೆ, ಒಂದೆಡೆ ಕಾಮಾಕ್ಶಿ ರಾಜುಕುಮಾರಿಯ ಸಾಹಸಗಳನ್ನು ನಾರಾಯಣ
ನಿಗೆ ಬಣ್ಣಿಸುತ್ತಿದ್ದಂತೆಯೇ, ಇನ್ನೊಂದೆಡೆ ಚಂಪಾ ತನ್ನ ಸಂಶೋಧನೆಯನ್ನು ಗಂಡನಿಗೆ
ತಿಳಿಸಿದಳು.
ಇದು ಸಿನಿಮಾದ ಪ್ರೇಮಕಥೆಯಾಗಿರಲಿಲ್ಲ, ವಾಸ್ತವವಾಗಿತ್ತು.
"ವೆಂಕಟೇಶ ಒಳ್ಳೆಯವನೇ...ಅಲ್ಲ ಅಂತಿಯಾ?" ಎಂದು ಶಂಕರನಾರಾಯ
ಣಯ್ಯ ಹೆಂಡತಿಯನ್ನು ಕೇಳಿದ. ಚಂಪಾವತಿಗೆ, ನಲ್ಲಿ ನೀರಿಗಾಗಿ ಜಗಳವಾದಾಗ
ವೆಂಕಟೇಶ ಹುಡುಗಿಯರ ಪಕ್ಷ ವಹಿಸಿದ್ದು ನೆನಪಾಗಿ ನಗು ಬಂತು.
"ಒಳ್ಳೆಯವನೇ!" ಎನ್ನುತ್ತ, ಆ ಘಟನೆಯನ್ನು ಚಂಪಾ ಗಂಡನಿಗೆ ನೆನಪು
ಮಾಡಿಕೊಟ್ಟಳು.
"ಆತನಿಗೆ ಉದ್ಯೋಗ ಬೇರೆ ಇದೆ. ನಾವು ಪಟ್ಟ ಸುಖ ಅವರು ಅನುಭವಿಸ್ಬೇ
ಕಾದ್ದಿಲ್ಲ!"
ಶಂಕರನಾರಾಯಣಯ್ಯ ಚಂಪಾವತಿಯರ ಸಂಬಂಧವೊ ಹಾಗೆಯೇ ಆರಂಭ
ವಾಗಿತ್ತು. ಆದರೆ ಆಗ ಶಂಕರನಾರಾಯಣಯ್ಯ ನಿರುದ್ಯೋಗಿಯಾಗಿದ್ದ ಕಡುಬಡವ.
ವಿವಾಹ ಸಾಧ್ಯಾವಾಗಲು ಕೆಲವು ವರ್ಷಗಳ ಕಾಲ ಅವರು ಕಾದಿರಬೇಕಾಯಿತು. ಅದು
ಯಮಸಂಕಟ. ಆ ಸುಖವನ್ನು ವೆಂಕಟೇಶ-ಅಹಲ್ಯೆಯರು ಅನುಭವಿಸಬೇಕಾದು

ದಿರಲಿಲ್ಲಿ.

"ಆದರೆ ಅವನಣ್ಣ ಒಬ್ಬನಿದಾನಲ್ಲಾ ವಿಘ್ನೇಶ್ವರ?"
"ಯಾರು ಗುಂಡಣ್ನೆ? ಅವನಿಗೊಂದು ಮದುವೆ ಬೇರೆ!"
ಅದೂ ಹೌದೆನ್ನಿಸಿತು ಚಂಪಾವತಿಗೆ. ಅಹಲ್ಯೆಗೆ ತಾನು ಬೆಂಬಲವಾಗಿ ನಿಂತು
ಆಕೆಯನ್ನು ಸುಖಿಯಾಗಿ ಮಾಡಲು ಯತ್ನಿಸಬೇಕೆಂದು ತೀರ್ಮಾನಿಸಿ ಚಂಪಾ ನಿದ್ದೆ
ಹೋದಳು.
...ಹಾಗೆ ಬೆಂಬಲವಾಗಿ ನಿಲ್ಲಲು ಅವಕಾಶವೇ ಇಲ್ಲದ ಹಾಗೆ ಆನಿರೀಕ್ಷಿತವಾ
ದುದು ನಡೆದು ಹೋಯಿತು.
ಆ ಸಂಜೆ. ಹೊರಗೆ ಹಿತ್ತಲಲ್ಲಿ ಬೀದಿಯ ಬಳಿ ಉಪಾಧ್ಯಾಯರ ಹೆಂಡತಿ
ಮಗುವನ್ನಾಡಿಸುತ್ತ ನಿಂತಿದ್ದಳು. ಒಬ್ಬರ ಮುಖ ಇನ್ನೊಬ್ಬರಿಗೆ ಅಸ್ಪಷ್ಟವಾಗಿ ಮಾತ್ರ
ಕಾಣಿಸುವಷ್ಟು ಕತ್ತಲಾಗಿತ್ತು. ಬೀದಿಯ ದೀಪಗಳು ಹತ್ತಿಕೊಂಡಿದ್ದುವು. ಬೀದಿ
ಯುದ್ದಕ್ಕೂ ಕೆಳಕ್ಕೆ ನೋಡುತ್ತಿದ್ದ ಉಪಾಧ್ಯಾಯರ ಹೆಂಡತಿ ಅವರಿಬ್ಬರನ್ನೂ
ಕಂಡರು. ಅಹಲ್ಯಾ ಮತ್ತು ವೆಂಕಟೇಶ, ಪರಸ್ಪರ ಮುಟ್ಟಿಕೊಂಡೇ ಇದ್ದರೇನೋ
ಎನ್ನುವಂತೆ ಒಬ್ಬರಿಗೊಬ್ಬರು ಸಮೀಪವಾಗಿಯೇ ನಡೆದು ಬರುತ್ತಿದ್ದರು.
ಬೇರೆ ಯಾರಾದರು ಇರಬಹುದೆಂದು ಸಂಶಯ ಬಂದು ಮತ್ತೂ ಸ್ವಲ್ಪ ಹೊತ್ತು ಆಕೆ ತಡೆ
ದಳು. ಅವರೇ. ಸಂದೇಹವೇ ಇರಲಿಲ್ಲ. ಆಕೆಯ ಮೆದುಳು ಬೇಗ ಬೇಗನೇ ಕೂಡಿಸಿ
ಕಳೆದು ನೋಡಿತು. ಹೌದು! ಸಂಜೆಯೆಲ್ಲಾ ಅಹಲ್ಯೆಯನ್ನು ಆಕೆ ವಠಾರದಲ್ಲಿ
ನೋಡಿಯೇ ಇರಲಿಲ್ಲ. ಆತನಿಗಂತೂ ಭಾನುವಾರ. ಪ್ರತಿಯೊಂದು ಸ್ಪಷ್ಟ
ವಾಗಿತ್ತು!
ವೆಂಕಟೇಶನನ್ನು ಬಿಟ್ಟು ಅಹಲ್ಯೆಯೊಬ್ಬಳೆ ಈಗ ಬೇಗನೆ ನಡೆಯುತ್ತಿದ್ದಂತೆ
ಕಂಡಿತು.
ಉಪಾಧ್ಯಾಯರ ಹೆಂಡತಿ ಮಗುವನ್ನೆತ್ತಿಕೊಂಡು ರಾಜಮ್ಮನ ಮನೆಗೆ ಧಾವಿಸಿ
ದಳು. ಗುಂಡಣ್ಣ ಅಲ್ಲಿರಲಿಲ್ಲ. ಇದ್ದವಳು ಮುದುಕಿ ಒಬ್ಬಳೇ.
"ರಾಜಮ್ಮ!ರಾಜಮ್ಮ!"
"ಯಾರು? ಏನು?"
ಬಲು ಪ್ರಯಾಸದಿಂದ ಉಸಿರು ಬಿಡುತ್ತ, ಆಕೆ ತಾನು ಕಂಡುದನ್ನು ರಾಜಮ್ಮ
ನಿಗೆ ಹೇಳಿದಳು. ಕೊಳಾಯಿಯ ಬಳಿ ತನಗೆ ಅವಮಾನವಾದ ದಿನದಿಂದ ಉಗುಳು
ನುಂಗಿಯೇ ಇದ್ದ ರಾಜಮ್ಮ್ ಹೆಡೆ ಮೆಟ್ಟಿದ ನಾಗಿಣಿಯಾದಳು. ಆಕೆ ಬಾಗಿಲ ಬಳಿ
ಬಂದು ನಿಂತಳು. ಉಪಧ್ಯಾಯರ ಹೆಂಡತಿ ತನ್ನ ಮನೆ ಗೋಡೆ ಬಾಗಿಲ ಹಿಂದೆ
ಆವಿತಕೊಂಡಳು.
ಅಹಲ್ಯಾ ಅಂಗಳಕ್ಕೆ ಬಂದು, ಬೇಗ ಬೇಗನೆ ನಡುಮನೆಯ ಹಾದಿಯನ್ನು
ದಾಟಿ ಓಣಗಿಳಿದಳು. ಕತ್ತಲಲ್ಲಿ ನಾಲ್ಕು ಕಣ್ಣುಗಳು ತನ್ನನೇ ನೋಡುತ್ತಿದ್ದುದು

ಆಕೆಗೆ ಕಾಣಿಸಲಿಲ್ಲ.

ಮತ್ತೆ ಎರಡು ನಿಮಿಷಗಳಲ್ಲಿ ವೆಂಕಟೇಶ ಬಂದ. ಆತನನ್ನು ಮನೆಯೊಳಕ್ಕೆ
ಬರಬಿಡುತ್ತ ತಾಯಿ ಕೂಗಾಡಿದಳು.
"ನನ್ನ ಮಾನ ಕಳೀಬೇಕೂಂತ ಮಾಡಿದೀಯೇನೋ ಮುಂಡೇಗಂಡ!"
ಇಂತಹ ವಿಷಯಗಳಲ್ಲಿ ತಪ್ಪೆಲ್ಲಾ ಹುಡುಗಿಯರದೇ ಎಂಬುದು ಆಕೆಯ ನಿಶ್ಚಿತ
ಅಭಿಪ್ರಾಯ. ತನ್ನ ಮಗನನ್ನು ಬಲೆಗೆ ಕೆಡವಲು ಮುಂದಾದ ಪಾಪಿಯನ್ನು ದಂಡಿ
ಸಲು ಕೈಯಲ್ಲಿ ಪೊರಕೆ ಹಿಡಿದು ಆಕೆ ಹೊರಟಳು.
ಮನೆಯ ದೀಪಗಳೆಲ್ಲ ಬೆಳಗಿದವು. ವಠಾರವೆಲ್ಲ ಓಣಿಗೆ ಇಳಿಯಿತು. ರಾಜಮ್ಮ
ನಡು ಓಣಿಯಲ್ಲಿ ನಿಂತು ಗುಡುಗಿದಳು:
"ಎಲ್ಲಿ ಆ ಗಯ್ಯಾಳಿ ಅಹಲ್ಯಾ! ಬಾರೇ ಇಲ್ಲಿ! ನನ್ಮನೇನ ಮುಳುಗಿಸ್ಬೇಕೂಂತ
ಮಾಡಿದೀಯೇನೆ?"
ಸಂದರ್ಭವೇನೆಂದು ಊಹಿಸಿಕೊಂಡ ಚಂಪಾವತಿಯ ಹೃದಯ ತಣ್ಣಗಾಯಿತು.
ಆಕೆ ರಾಜಮ್ಮನನ್ನು ತಡೆಯಬೇಕೆಂದು ಅಂದಳು:
"ನಮ್ಮನೇ ಒಳಗ್ಬನ್ನೀಮ್ಮಾ, ಏನು ಸಮಾಚಾರ?"
"ನೀವು ಸುಮ್ನಿರಿ! ಯಾರೂ ನನ್ನ ತಡೀಬೇಡಿ! ಇವತ್ತು ಇವರ ಮಾನ
ಮರ್ಯಾದೆಯೆಲ್ಲಾ ಧೂಳೆಬ್ಬಿಸಿಬಿಡ್ತೀನಿ. ಕೆಟ್ಟ ರಂಡೆ!"
ರಾಮಚಂದ್ರಯ್ಯ ಮನೆಯಲ್ಲಿರಲಿಲ್ಲ. ಇದೇನು ಗಂಡಾಂತರ ಬಂತೆಂದು ಆತನ
ತಾಯಿ ನಡುಗಿದಳು. ರಾಜಮ್ಮನ ಬಾಯಿ ಮುಚ್ಚಿಸೋಣವೆಂದು ಅಹಲ್ಯೆಯ
ತಾಯಿ ಮಗಳನ್ನು ಕರೆದಳು.
"ಇಲ್ಲಿ ಬಾರೇ ಅಹಲ್ಯಾ! ಏನ್ಮಾಡ್ಕೊಂಡು ಬಂದ್ಯೇ?"
ಏನು ಮಾಡಿಕೊಂಡು ಬಂದಿರಬಹುದೆಂದು ಆಗಲೇ ಊಹಿಸಿದ್ದ ರಾಜಮ್ಮ,
ವಠಾರದ ಹೆಂಗಸರೆಲ್ಲರ ಮುಂದೆ, ಹೆಂಗಸರ ಹಿಂದೆ ನಿಂತಿದ್ದ ಕೆಲವರು ಗಂಡಸರಿಗೂ
ಕೇಳಿಸುವಂತೆ, ಅಂದಳು:
ನನ್ನ ಹೆಣ ಎತ್ತೋಕ್ಮುಂಚೇನೇ ವೆಂಕಟೇಶನ ಮೇಲೆ ಬಲೆ ಬೀಸಿದಾಳಲ್ರೀ ಈ
ಢಾಕಿಣಿ!ವಠಾರನ ಯಾಕಮ್ಮ ಹೊಲಸೆಬ್ಬಿಸ್ತೀಯೇ? ಬೇಕಿದ್ರೆ ಬೇರೆ ಬೀದಿಗೆ
ಹೋಗಿ ಅಂಗಡಿ ತೆರಕೋ!"
ಅಹಲ್ಯೆಯ ತಾಯಿ ಎಂದೂ ಧೈರ್ಯಪ್ರಕೃತಿಯವಳಾಗಿರಲಿಲ್ಲ. ರಾಜಮ್ಮನ
ಮಾತು ಕೇಳಿ ಅವಳ ಜಂಘಾಬಲ ಉಡುಗುಹೋಯಿತು. ಆದರೂ ಆಕೆ ಅಹಲ್ಯೆಯ
ತುರುಬು ಹಿಡಿದು ಹೊರಕ್ಕೆಳೆದು ಧಪಧಪನೆ ಗುದ್ದಿದಳು.
"ಅದೇನು ಬೊಗಳೇ! ಇಂಥಾಮಾತು ಕೇಳೋ ಹಾಗೆ ಮಾಡಿದ್ಯಲ್ಲೇ!"
"ನಾನೇನು ಮಾಡಿಲ್ಲಮ್ಮಾ, ಏನೂ ಮಾಡಿಲ್ಲ" ಎಂದು ಅಹಲ್ಯಾ
ರೋದಿಸಿದಳು.

ವೆಂಕಟೇಶ ಬಿರುಗಾಳಿಯಂತೆ ನುಗ್ಗಿ ತನ್ನ ತಾಯಿಯ ರಟ್ಟೆ ಹಿಡಿದೆಳೆದು
ರಂಗಮ್ಮನ ವಠಾರ
159

ಅರಚಿದ:
"ನಡಿಯಮ್ಮಾ ಒಳಗೆ. ನಿನಗೆ ಹುಚ್ಚು!"
"ನನಗೆ ಹುಚ್ಚು!ಹುಚ್ಚು!ತಾಯಿಗೇ ಹೊಡೆಯೋಕೆ ಬರ್ತಿಯಲ್ಲೋ ಪಾಪಿ!"
ರಾಜಮ್ಮ ಅಳತೊಡಗುತ್ತಾ ಕೈಯಲ್ಲಿದ್ದ ಪೊರಕೆಯಿಂದ ಮಗನಿಗೆ ಬಾರಿಸಿ
ದಳು.......
ಇನ್ನು ತಾವು ಓಣಿಗೆ ಪ್ರವೇಶಿಸಬಹುದೆಂದು ನಿರ್ಧರಿಸಿ ರಂಗಮ್ಮ ಹೊರಕ್ಕೆ
ಬಂದು, ಎತ್ತರದ ಧ್ವನಿಯಲ್ಲಿ ಗದರಿದರು:
"ಏನಿದು ಗಲಾಟೆ? ವಠಾರಕ್ಕೆ ಪೋಲೀಸ್ನೋರ್ನ ಕರಕೊಂಡು ಬರ್ಬೇಕೂಂತ
ಮಾಡಿದೀರೋ ಹ್ಯಾಗೆ? ಇಷ್ಟು ಬುದ್ಧಿ ಇಲ್ದೆ ಹೋಯ್ತೆ ನಿಮಗೆ? ಏನು ಸಮಾ
ಚಾರ? ಬನ್ನಿ ಇಲ್ಲಿ__ನಮ್ಮನೇಗೆ ಬನ್ನಿ...ರಾಜಮ್ಮ,ಅಹಲ್ಯಾ_ಎಲ್ರೂ ಬನ್ನಿ."
ರಂಗಮ್ಮನ ಮನೆ ತುಂಬಿ ಹೋಯಿತು. ಅಹಲ್ಯೆಯನ್ನು ಎಳೆದುಕೊಂಡು
ಬಂದರು. ವೆಂಕಟೇಶ, ಉಟ್ಟ ಬಟ್ಟೆಯಲ್ಲೆ_ಬರಿಗಾಲಲ್ಲೆ "ರಾಕ್ಷಸರು! ಪಿಶಾಚಿಗಳು!"
ಎಂದು ಶಪಿಸುತ್ತ ವಠಾರದಿಂದ ಹೊರಹೋದ.
ಅಹಲ್ಯಾ ಅಳುತ್ತಳುತ್ತ ಹೇಳಿದಳು:
"ಏನೂ ಇಲ್ಲ ರಂಗಮ್ನೋರೆ ನನ್ನ ಸ್ನೇಹಿತೆ ಇಂದಿರಾ ಮನೆಗೆ ಹೋಗಿದ್ದೆ.
ಸೇತುವೆ ದಾಟ್ತಿದ್ದಾಗ ರಾಜಮ್ಮನ ಮಗನೂ ಬಂದ್ರು......ಇಷ್ಟು ದೂರ ಒಂದೇ
ರಸ್ತೇಲಿ ನಡಕೊಂಡು ಬಂದ್ವಿ."
'ರಾಜಮ್ಮನ ಮಗ' ಎಂದಿದ್ದಳು ಹುಡುಗಿ ;'ವಂಕಟೇಶ' ಎಂದಲ್ಲ.
ಸ್ವಲ್ಪ ದೂರ ನಡೆದು ಬಂದರೆಂಬುದೇನೋ ನಿಜವೇ.
"ಅಷ್ಟಕ್ಕೆ ಇಷ್ಟೆಲ್ಲಾ ರಂಪ ಮಾಡ್ಬೇಕೆ?" ಎಂದು ಚಂಪಾವತಿ ಸಂಧಿ ಸಾಧಿಸಿ
ಒಳ್ಳೆಯ ಮಾತನ್ನು ಆಡಿದಳು.
"ಔಷಧಿ ತರೋಕೆ ಅವತ್ತೆಲ್ಲಾ ಜತೇಲೆ ಕಳಿಸ್ತಿರ್ಲಿಲ್ವೇನೊ?" ಎಂದು ಕಾಮಾ
ಕ್ಷಿಯೂ ಅಹಲ್ಯೆಯ ಬೆಂಬಲಕ್ಕೆ ಬಂದಳು.
ಅಹಲ್ಯೆ ಆಡಿದುದು ಸತ್ಯವಿರಲಿ ಸುಳ್ಳಿರಲಿ, ಆ ಪ್ರಕರಣವನ್ನು ಮುಂದಕ್ಕೆ
ಬೆಳೆಯಗೊಡಲು ರಂಗಮ್ಮ ಬಿಡುವಂತಿರಲಿಲ್ಲ. ವಠಾರದ ಒಳ್ಳೆ ಹೆಸರಿಗೆ ಮಸಿ ಬಳೆಸಿ
ಕೊಳ್ಳಲು ಅವರು ಸಿದ್ಧರಿರಲಿಲ್ಲ. ಅಷ್ಟರಲ್ಲೇ ಬೇರೊಂದು ಯೋಚನೆಯೂ ಅವರಿಗೆ
ಹೊಳೆಯಿತು. ಅದನ್ನು ಕಾರ್ಯಗತಗೊಳಿಸುವುದಕ್ಕೆ ಪೂರ್ವಭಾವಿಯಾಗಿ ವಠಾರ
ದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅವರು ಉದ್ಯುಕ್ತರಾದರು.
"ಅಹಲ್ಯಾ,ಬಾಮ್ಮ ಇಲ್ಲಿ. ಇದು ದೇವರ ಪಠ. ಇದನ್ನು ಮುಟ್ಟಿ ಆಣೆ
ಮಾಡಿ ಹೇಳು."
ಅಹಲ್ಯಾ ಹಾಗೆ ಮಾಡಿದಳು.

"ರಾಜಮ್ಮ, ಇಷ್ಟಕ್ಕೆ ಸಾಕು. ಆಗಿರೋದ್ನೆಲ್ಲಾ ಎಲ್ಲರೂ ಮರೆತ್ಬಿಡಿ...ಹೋಗಿ
160
ಸೇತುವೆ

ಇನ್ನು,ಹೋಗಿ. ಹೋಗಮ್ಮ ಅಹಲ್ಯಾ."
..ಮನೆಗೆ ಬಂದು ರಾಮಚಂದ್ರಯ್ಯ ವಿಷಯ ತಿಳಿದು, ಇಂಥವರ ಮೇಲೆಯೇ
ಎಂದಿಲ್ಲದೆ,ರೇಗಾಡಿದ.
ಗದ್ದಲವಾದಾಗ ಜಯರಾಮು_ರಾಧಾ ಇಬ್ಬರೂ ಮನೆಯಲ್ಲಿರಲಿಲ್ಲ.
ಬಂದೊಡನೆ ರಾಧಾ`, ಸುದ್ದಿ ಕೇಳಿ, ಚಂಪಾವತಿಯಲ್ಲಿಗೆ ಬಂದು ಅದೇನೆಂದು
ವಿಚಾರಿಸಿದಳು.
ಚಂಪಾ ಚುಟುಕಾಗಿ ಹೇಳಿ,ಅಂದಳು:
"ಏನೋ ಆಯ್ತು ಬಿಡು. ಅದನ್ನೆಲ್ಲಾ ಮನಸ್ಸಿಗೆ ಹಚ್ಕೋಬಾರದು."
ಆದರೆ ತನ್ನ ಗೆಳತಿಯ ಮೇಲೆ ಆರೋಪ ಹೊರಿಸಿದ ರಾಜಮ್ಮನನ್ನು ಕ್ಷಮಿಸಲು
ರಾಧಾ ಸಿದ್ಧಳಿರಲಿಲ್ಲ. ಸಾಮಾನ್ಯವಾಗಿ ಶಾಂತಳಾಗಿಯೇ ಇರುತ್ತಿದ್ದ ರಾಧಾ ಆ ದಿನ
ಔಡುಗಚ್ಚಿ ಅಂದಳು:
"ತಾಳಿ! ಆ ಮುದಿ ಗೂಬೆಗೆ ಮಾಡ್ತೀನಿ ಒಂದಿವ್ಸ!"....
ಮನೆಗೆ ಬಂದ ಮೇಲೆ ಆದುದೆಲ್ಲವನ್ನೂ ತಿಳಿದ ಶಂಕರನಾರಾಯಣಯ್ಯನಿಗೆ
ತುಂಬಾ ಕೆಡುಕೆನಿಸಿತು.
ವೆಂಕಟೇಶ ಬಹಳ ಹೊತ್ತಾದರೂ ಬರಲಿಲ್ಲವೆಂದು ರಾಜಮ್ಮ ಗಾಬರಿ
ಯಾದಳು.
"ಹೋಗಿ ಹುಡ್ಕೋ ಗುಂಡಾ," ಎಂದು ದೊಡ್ಡ ಮಗನಿಗೆ ಹೇಳಿದಳು.
"ನಿನಗೆ ಬುದ್ಧಿ ಇಲ್ಲವಮ್ಮ," ಎಂದು ಹೇಳಿ ಗುಂಡಣ್ಣ ಹಾಸಿಗೆ ಸುರುಳಿ
ಬಿಚ್ಚಿ ಮಲಗಿಕೊಂಡ.
ತನ್ನ ದೊಡ್ಡ ಮಗನ ಕೈಲಿ ಎಂದೂ ಅಂತಹ ಮಾತು ಕೇಳದೆ ಇದ್ದ ರಾಜಮ್ಮ
ತನ್ನ ದೈವವನ್ನು ಹಳಿಯುತ್ತ ಅಳುತ್ತ ಕುಳಿತಳು.
ನಡುರಾತ್ರೆಯ ಹೊತ್ತಿಗೆ ವೆಂಕಟೇಶ ಮನೆಗೆ ಬಂದ.
.....ವೆಂಕಟೇಶ_ಅಹಲ್ಯೆಯರ ವಿಷಯದಲ್ಲಿ ಚಂಪಾ ತೋರಿದ್ದು ಬರಿಯ
ಕನಿಕರವನ್ನು. ಆದರೆ ರಂಗಮ್ಮ ತಾವು ಮನಸ್ಸಿನಲ್ಲಿ ಲೆಕ್ಕ ಹಾಕಿದ್ದನ್ನು ಕೃತಿಗಿಳಿಸಲು
ಹೊರಟರು.
ಆದರೆ ರಾಜಮ್ಮ ಖಂಡ ತುಂಡವಾಗಿ ಹೇಳಿದಳು.
"ಯಾರು? ಆ ಸಕೇಶಿ ಮಗಳನ್ನೆ? ಆ ಬಜಾರಿ ಲೌಡೀನ ಸೊಸೆಯಾಗಿ
ಕರಕೋ ಅಂತ ನನಗೆ ಅಂತೀರಾ? ಈ ವಿಷಯ ಇನ್ನೊಮ್ಮೆ ಎತ್ಬೇಡಿ ರಂಗಮ್ನೋರೆ!"
ತಮಗೆ ಅವಮಾನವಾಯಿತೆಂದುಕೊಂಡರು ರಂಗಮ್ಮ.
ವಿಧವೆಯಾದ ಎದುರುಮನೆಯಾಕೆಯ ಕೇಶರಾಶಿಯನ್ನು ದಿನವೂ ನೋಡು
ತ್ತಿದ್ದ ರಾಜಮ್ಮ ಆಕೆಯ ಮಗಳನ್ನೆ ಸೊಸೆಯಾಗಿ ತರುವುದು ಸಾಧ್ಯವಿತ್ತೆ? ರಾಮ
ಚಂದ್ರಯ್ಯ ಕಾಹಿಲೆ ಮಲಗಿದಾಗ ವಿಷಯ ಬೇರೆಯಾಗಿತ್ತು. ತನ್ನ ಮಗ ವೆಂಕಟೇಶನ
ಹಿರಿಮೆಯನ್ನು ತೋರಿಸುವುದಕ್ಕಾಗಿ ಆತ ಆ ಮನೆಯವರಿಗೆ ನೆರವಾಗುವಂತೆ ರಾಜಮ್ಮ
ಮಾಡಿದ್ದಳು. ಆ ಸಹಾಯದ ಪರಿಣಾಮ ಈ ರೀತಿಯಾಗಬಹುದೆಂಬ ಸಂದೇಹ
ಒಂದಿಷ್ಟಾದರೂ ಇದ್ದಿದ್ದರೆ ಆಕೆ ಅದಕ್ಕೆ ಆಸ್ಪದವೀಯುತ್ತಿರಲಿಲ್ಲ.
ರಂಗಮ್ಮ ಮಾಡುವಂತಹದೇನೂ ಉಳಿಯಲಿಲ್ಲ.ಅವರು ಸೋಲನ್ನೊಪ್ಪ
ಬೇಕಾಯಿತು.
ರಂಗಮ್ಮನ ರಾಯಭಾರದ ವಿವರ ತಿಳಿದ ಮೇಲೆ ಚಂಪಾವತಿಯೂ ನಿರಾಶ
ಳಾದಳು.
ವೆಂಕಟೇಶ ತಾಯಿಯ ಮಾತನ್ನು ಮೀರಿ ಹೋಗುವಷ್ಟರ ಧೈರ್ಯವಂತನಾಗಿರ
ಲಿಲ್ಲ. ಇಬ್ಬರು ಮಕ್ಕಳಿಗಾಗಿಯೂ ರಾಜಮ್ಮ ಕನ್ಯಾನ್ವೇಷಣೆ ನಡೆಸಿದಳು. ಮನಸ್ಸು
ಕಹಿಯಾಗಿದ್ದ ವೆಂಕಟೇಶ ಹೇಳಿದ:
"ನೀನು ಮದುವೆ ಮಾತೆತ್ತಿದರೆ ಈ ಮನೆ ಬಿಟ್ಟು ಹೋಗ್ತೀನಿ."
ಹಾಗೆ ಹೆದರಿಸಿದವನು, 'ಮದುವೆಯಾದರೆ ಅಹಲ್ಯೆಯನ್ನೇ'ಎಂದು ಹೇಳಲಿಲ್ಲ.
ಸೊರಗುತ್ತಿದ್ದ ಅಹಲ್ಯೆಯನ್ನು ಸೂಕ್ಷ್ಮವಾಗಿ ಚಂಪಾ ನಿರೀಕ್ಷಿಸಿದಳು.ವೆಂಕಟೇಶ
ನೊಡನೆ ಸಂಪರ್ಕ ಬೆಳಸಲು ಆಕೆ ಯತ್ನಿಸಿದಂತೆಯೇ ತೋರಲಿಲ್ಲ.
'ಇವರಿಬ್ಬರ ನಡುವೆ ಯಾವ ಮಾತುಕತೆಯೂ ಆಗಿಯೇ ಇಲ್ಲವೇನೋ . ತುಟಿ
ಗಳು ಹೋಗಲಿ,ಕಣ್ಣುಗಳೇ ಪರಸ್ಪರ ಮಾತನಾಡಿದಂತಿಲ್ಲ.ಅಷ್ಟರಲ್ಲೇ ಸುತ್ತಿಗೆ ಏಟು
ಹೊಡೆದು ಅಪ್ಪಚ್ಚಿ ಮಾಡಿದ್ದಾಯ್ತು'...ಎಂದು ಚಂಪಾ ಮನಸ್ಸಿನೊಳಗೇ ಅಂದು
ಕೊಂಡು ನಿಟ್ಟುಸಿರುಬಿಟ್ಟಳು.
ಆದಾದ ಒಂದುವರೆ ತಿಂಗಳಲ್ಲಿ ಅಹಲ್ಯೆಯ ಮದುವೆಯಾಯಿತು. ವಠಾರದ
ಹೊರಗೆ ಊರ ದೇವಸ್ಥಾನದಲ್ಲಿ ನಡೆಯಿತು,ಮದುವೆ. ಆಕೆ ಗಂಡನೊಡನೆ ಚನ್ನ
ಪಟ್ಣಕ್ಕೆ ಹೊರಟು ನಿಂತಳು. ವರ,ರಾಮಚಂದ್ರಯ್ಯನ ಹಳೆಯ ಸಹಪಾಠಿ.ಅಹಲ್ಯೆಯ
ತಾಯಿಯ ಕಡೆಯವರು ಬಂದು ನಿಂತು ಮದುವೆ ಮಾಡಿಸಿದರು.
ರಾಧಾ ಕೊನೆಯ ನಿಮಿಷದವರೆಗೂ ಅಹಲ್ಯೆಯ ಜೊತೆಯಲ್ಲೇ ಇದ್ದಳು.
ಅಹಲ್ಯೆಯನ್ನು ಬೀಳ್ಕೊಡುವಾಗ ತನಗೆ ಅಳು ಬಂದುದನ್ನು ಕಂಡು ಚಂಪಾ
ವತಿಗೆ ಆಶ್ಚರ್ಯವಾಯಿತು. ಆಕೆ ಕಂಪಿಸುವ ಧ್ವನಿಯಲ್ಲಿ ಅಂದಳು:
"ಹೋಗಿ ಬರ್ತೀಯಾ ಅಹಲ್ಯಾ? ಪ್ರಪಂಚದಲ್ಲಿ ಕೆಟ್ಟದ್ದೂ ಇದೆ_ ಒಳ್ಳೇದೂ
ಇದೆ.ಕೆಟ್ಟದನ್ನಷ್ಟೇ ಜ್ಞಾಪಿಸ್ಕೋಬೇಡವಮ್ಮ_ಮನಸ್ಸಿಗೆ ಆಗಿರೋ ನೋವನ್ನೆಲ್ಲಾ
ಮರೆತ್ಬಿಡು...ಬರ್ತೀಯಾ?...ನಮ್ಮನ್ನ ಮರೀಬೇಡವಮ್ಮ."
ಅಹಲ್ಯಾ ಅಳುತ್ತ ರಂಗಮ್ಮನ ವಠಾರದಿಂದ ಹೊರಟು ಹೋದಳು.
ಇದನ್ನೆಲ್ಲಾ ನೋಡುತ್ತಿದ್ದ ಜಯರಾಮುವಿಗೆ ಬೇಕು ಬೇಕೆಂದೇ ಯಾರೋ
ಕಾದ ಕಬ್ಬಿಣದಿಂದ ತನ್ನ ಹೃದಯದ ಮೇಲೆ ಬರೆ ಎಳೆದಂತಾಯಿತು. ಅವನ ಮುಖ

21
162
ಸೇತುವೆ

ಬಾಡಿತು. ಗೆಳತಿ ಹೊರಟುಹೋದಳೆಂದು ಅಳುತ್ತಲಿದ್ದ ರಾಧೆಯನ್ನು ಅವಳ ಪಾಡಿಗೆ
ಬಿಟ್ಟು, ಕೆರೆಯಾಚೆ ಇದ್ದ ಬಂಡೆ ಕಲ್ಲುಗಳ ಗುಡ್ಡದತ್ತ ಆತ ಸಾಗಿದ.
ವಠಾರದ ಇತಿಹಾಸದಲ್ಲಿ ಇದು ಮೂರನೆಯ ಮದುವೆಯಾದರೂ, ಇಂತಹ
ಹಿನ್ನೆಲೆಯಲ್ಲಿ ಸಮಾರಂಭ ಹೀಗೆ ಜರಗಿದ್ದು ಇದೇ ಮೊದಲು. ಹೀಗಾಗಿ ರಂಗಮ್ಮ
ನಿಗೆ ತುಂಬಾ ಬೇಸರವಾಯಿತು. ಆ ದಿನವೆಲ್ಲಾ ಅವರು ಏನನ್ನೋ ಗೊಣಗುತ್ತಲೇ
ಇದ್ದರು.
ರಾಜಮ್ಮ ಅಡುಗೆ ಮನೆಯಿಂದ ಹೊರಗೆ ಬರಲಿಲ್ಲ.
ಜಯರಾಮುವಿನ ತಾಯಿ ರಾಧೆಯನ್ನು ನೋಡುತ್ತ ಜೋಲುಮೋರೆ ಹಾಕಿ
ಕುಳಿತಳು.
ವೆಂಕಟೇಶ ಆ ಬಳಿಕ ಸ್ವಲ್ಪ ದಿನ ಮೌನವಾಗಿದ್ದ. ಕ್ರಮೇಣ ಚೇತರಿಸಿಕೊಂಡು
ಹಿಂದಿನಂತೆ ಓಡಾಡಿದ. ಆದರೆ ಸಿಡುಕುತನವೊಂದು ಆತನಿಗೆ ಗಟ್ಟಿಯಾಗಿ ಅಂಟಿ
ಕೊಂಡಿತು. ಆತ ತಾಯಿಯೊಡನೆ ಸದಾ ಕಾಲವೂ ಒರಟಾಗಿಯೇ ವರ್ತಿಸಿದ.

೧೭
ಬೇರು ಕಿತ್ತು ಬೇರೆ ಕಡೆ ಮಣ್ಣು ಪಾತ್ರೆಯಲ್ಲಿ ನೆಟ್ಟ ಗಿಡ ಎಷ್ಟೆಂದರೂ ಅಷ್ಟೆ.
ಸರಿಯಾದ ಆರೈಕೆ ಇಲ್ಲದ ಮೇಲಂತೂ ಅವರ ಅವಸ್ಥೆ ಹೇಳುವುದು ಬೇಡ.
ವಠಾರದ ಹೆಚ್ಚಿನ ಸಂಸಾರಗಳೆಲ್ಲ ಅಂಥವು. ಹಲವರು ಕೆಲವು ತಲೆಮಾರು
ಗಳಿಂದ ಬೆಂಗಳೂರಲ್ಲೇ ಒಂದಲ್ಲ ಒಂದು ಕಡೆ ಬದುಕಿದವರು. ಕೆಲವರು ಹಳ್ಳಿಗಳಿಂದ
ಬಂದು ನೆಲೆಸಿದವರು. ಆದರೆ ಅಂಥವರಲ್ಲಿ ಹೆಚ್ಚಿನವರು ತಮ್ಮಹಿಂದೆ ಏನನ್ನೂ
ಬಿಟ್ಟು ಬಂದವರಲ್ಲ.
ಇದಕ್ಕೆ ಅಪವಾದವಾಗಿದ್ದ ಒಂದು ಸಂಸಾರವೆಂದರೆ ರಂಗಮ್ಮನ ಬಲಬದಿಗೆ
ಇದ್ದ ತಾಯಿ_ಮಕ್ಕಳು. ಕೋಲಾರದ ಕಡೆಯ ಆ ಕುಟುಂಬ ತೇಲುತ್ತಿದ್ದ ದೋಣಿ
ಯಾಗಿರಲಿಲ್ಲ. ಅವರಿಗೆ ಒಂದಿಷ್ಟು ಜಮೀನಿತ್ತು. ಆದರೆ ಅವರು ಶ್ರೀಮಂತರೇನೂ
ಅಲ್ಲ.
ಶ್ರೀಮಂತರು ಆ ವಠಾರದಲ್ಲಿ ನೆಲೆಸುವುದಿಲ್ಲವೆಂಬುದು ರಂಗಮ್ಮನಿಗೂ
ಗೊತ್ತಿತ್ತು. ಇತರ ಸಂಸಾರಗಳಿಗೂ ಗೊತ್ತಿತ್ತು. ಆದರೆ ವೆಂಕಟಸುಬ್ಬಮ್ಮನದು
ಜಮೀನ್ದಾರರ ಕುಟುಂಬ ಎಂಬ ಅಂಶವನ್ನು ಅವರು ಗನಮನಿಸಿದ್ದರು. ಆ ಜಮೀನು
ದಾರಿಕೆ ವೆಂಕಟಸುಬ್ಬಮ್ಮನ ಸೀರೆಯಲ್ಲಿ ಆಭರಣದಲ್ಲಿ ಕಂಡು ಬರದೆ, ಅವರೆಲ್ಲರಿಗೆ

ನಿರಾಸೆಯಾಗಿತ್ತು.
ರಂಗಮ್ಮನ ವಠಾರ
163

ಶ್ರೀರಾಮಪುರದವರೇ ಒಬ್ಬರು ಬಂದು ಬಾಡಿಗೆಗೆ ಗೊತ್ತುಮಾಡಿ ಹೋಗಿದ್ದರು.
ವೆಂಕಟಸುಬ್ಬಮ್ಮನ ವ್ಯಕ್ತಿತ್ವ ಇತರರ ದೃಷ್ಟಿಯಲ್ಲಿ ಸ್ವಲ್ಪ ವಿಚಿತ್ರವಾಗಿತ್ತು.
ಆಕೆ ವಠಾರದ ಹೆಂಗಸರೊಡನೆ ಬೆರೆಯುತ್ತಿರಲಿಲ್ಲ. ಹರಟೆಗೆ ಬರುತ್ತಿರಲಿಲ್ಲ. ಇನ್ನೊ
ಬ್ಬರ ವಿಷಯ ತಿಳಿದುಕೊಳ್ಳಲು ಕುತೂಹಲ ತಳೆಯುತ್ತಿರಲಿಲ್ಲ. ಒಂದು ಮಾತಿಗೆ
ಒಂದೇ ಉತ್ತರ. ಎಷ್ಟು ಬೇಕೋ ಅಷ್ಟು. ಆಕೆ ಒಂದು ದಿನವಾದರೂ ಸ್ವರವೇರಿಸಿ
ಮಾತನಾಡಿದ್ದನ್ನು ಇಲ್ಲವೆ ಗಟ್ಟಿಯಾಗಿ ನಕ್ಕುದನ್ನು ಯಾರೂ ಕಂಡಿರಲಿಲ್ಲ. ಮನೆ
ಯೋಳಗೂ ಅಷ್ಟೆ. ಮಕ್ಕಳ ಜತೆಯಲ್ಲೂ ಮೃದುವಾಗಿಯೆ ಮಾತನಾಡುತ್ತಿದ್ದಳು.
ಅಲ್ಲಿ ತಾಯಿ ಮಕ್ಕಳು ಜಗಳವಾಡುವುದನ್ನು ನೋಡಿದವರೇ ಇಲ್ಲ.
"ವೆಂಕಟಸುಬ್ಬಮ್ಮನೋರೇ, ಇದೀರೇನು?" ಎಂದು ಕೇಳುವ ಪ್ರಮೇಯವೇ
ಇರಲಿಲ್ಲ. ಆಕೆ ಯಾವಾಗಲೂ ಮನೆಯಲ್ಲೇ ಇರುತ್ತಿದ್ದಳು.
ಹೀಗಾಗಿ ಬಾಗಿಲ ಬಳಿ ನಿಂತು ಯಾವಳಾದರೂ ಹೆಂಗಸು ಕೇಳುತ್ತಿದ್ದುದಿತ್ತು:
"ಏನ್ಮಾಡ್ತಿದೀರಿ ವೆಂಕಟಸುಬ್ಬಮ್ಮ?"
ಈ ಪ್ರಶ್ನೆಯನ್ನು ಕೇಳಿದಾಗಲೆಲ್ಲ ಸಮಯಕ್ಕೆ ಅನುಸರಿಸಿ ಉತ್ತರಗಳು ಬದ
ಲಾಗುತ್ತಿದ್ದುವು.
"ಕಾಫಿಗೆ ಇಟ್ಟಿದೀನಿ. ಹುಡುಗರು ಬರೋ ಹೊತ್ತಾಯ್ತು."
ಇಲ್ಲವೆ___
"ಹುಡಗರಿಗೆ ಊಟಕ್ಕಿಡ್ತಾ ಇದೀನಮ್ಮ."
ಅಥವಾ___
"ಹುಡುಗರಿಗೆ ಹಾಸಿಗೆ ಹಾಸ್ತಾ ಇದೀನಿ, ರಂಗಮ್ನೋರೆ."
ಯಾವಾಗ ನೋಡಿದರೂ ಹುಡುಗರು-ಹುಡುಗರು. ಮಕ್ಕಳನ್ನು ಬಿಟ್ಟರೆ ಬೇರೆ
ಬದುಕೇ ಇರಲಿಲ್ಲ ಆ ಜೀವಕ್ಕೆ. ಆಕೆಯದು ಸೊರಗಿದ ಶರೀರ, ಮುಖ ಸದಾ
ಕಾಲವೂ ಬಾಡಿರುತ್ತಿತ್ತು. ಬೇರೆ ಬೇರೆ ಕಾಲೇಜುಗಳಲ್ಲಿ ಓದುತ್ತಿದ್ದರೂ ಅಣ್ಣ
ತಮ್ಮಂದಿರು ಜತೆಯಾಗಿಯೇ ಮನೆಗೆ ಮರಳುತ್ತಿದ್ದರು . ಅವರು ಹಿಂತಿರುಗಲು
ಇನ್ನೂ ಅರ್ಧ ಗಂಟೆ ಇದೆ ಎನ್ನುವಾಗಲೇ ವೆಂಕಟಸುಬ್ಬಮ್ಮ ಹೊರ ಅಂಗಳದ ಗೇಟಿಗೆ
ಆತುಕೊಂಡು ನಿಂತುಬಿಡುತ್ತಿದ್ದಳು. ದೂರದಲ್ಲಿ ಮಕ್ಕಳನ್ನು ಕಂಡೊಡನೆಯೆ ಆಕೆಯ
ಬಾಯಿಯಿಂದ ಮಾತು ಹೊರಡುತ್ತಿತ್ತು:
"ಹುಡುಗ್ರು ಬರ್ತಾ ಇದಾರೆ."
ಹತ್ತಿರ ಯಾರಾದರೂ ಇರಲಿ, ಇಲ್ಲದೆ ಇರಲಿ, ಆ ಮಾತನ್ನು ಆಕೆ ಹೇಳಿಯೇ
ಹೇಳುತ್ತಿದ್ದಳು. ಮೊದಮೊದಲು ದಿನವೂ ಅದನ್ನು ಕೇಳಿ ಇತರ ಹೆಂಗಸರಿಗೆ ತಮಾಷೆ
ಎನಿಸುತ್ತಿತ್ತು. ಕ್ರಮೇಣ ವೆಂಕಟಸುಬ್ಬಮ್ಮನ ಆ ಮಾತಿಗೆ ಲಕ್ಷ್ಯ ಕೊಡುವುದನ್ನೇ
ಹೆಂಗಸರು ಕಡಮೆ ಮಾಡಿದರು.

ಪ್ರತಿ ತಿಂಗಳೂ ಐದನೆಯ ತಾರೀಕಿಗೆ ಸರಿಯಾಗಿ ವೆಂಕಟಸುಬ್ಬಮ್ಮ ಬಾಡಿಗೆ
164
ಸೇತುವೆ

ಕೊಡುತ್ತಿದ್ದಳು. ಆಕೆ ಹಿಡಿಯುತ್ತಿದ್ದ ಮೂರು ಬಿಂದಿಗೆ ಹೆಚ್ಚಿನ ನೀರಿನ ಎಂಟಾಣೆಯೂ.
ರಂಗಮ್ಮನಿಗೆ ಬರುತ್ತಿತ್ತು.
"ಎಲ್ಲರೂ ಹೀಗೆಯೇ ಹೊತ್ತಿಗೆ ಸರಿಯಾಗಿ ಬಾಡಿಗೆ ಕೊಟ್ಟರೆ ಎಷ್ಟು ಚೆನ್ನಾ
ಗಿರುತ್ತೆ," ಎಂದು ರಂಗಮ್ಮ ಇತರರ ಕಿವಿಗೆ ಬೀಳುವಂತೆ ವೆಂಕಟಸುಬ್ಬಮ್ಮನನ್ನು
ಹೊಗಳುತ್ತಿದ್ದರು.
ಮೌನದ ಚಿಪ್ಪಿನೊಳಗೆ ಮುದುಡಿಯೇ ಇರುತ್ತಿದ್ದ ವೆಂಕಟಸುಬ್ಬಮ್ಮನನ್ನು ಮನಸ್ಸಿನ
ಹಿಂದೆ ಏನೇನಿದೆಯೆಂದು ತಿಳಿಯಲು ಆರಂಭದಲ್ಲಿ ರಂಗಮ್ಮ ಕುತೂಹಲಿಯಾಗಿದ್ದರು.
ಬಹಳ ಕಾಲದ ಸಾಮಿಪ್ಯದ ಬಳಿಕ ಮಾತ್ರ. ವೆಂಕಟಸುಬ್ಬಮ್ಮನ ಬಾಯಿ ಬಿಡಿಸುವುದು
ಸಾಧ್ಯವಾಯಿತು. ಒಂದು ದಿನ ಮಧ್ಯಾಹ್ನ ಅಳುತಳುತ ಆ ಹೆಂಗಸು ಹೇಳಿದ ಸ್ವಪರಿ
ಚಯವೆಲ್ಲ ಕಣ್ಣೀರಿನ ಕಥೆಯೇ.
ಸ್ವಲ್ಪ ಜಮೀನು ಇತ್ತೆಂಬುದು ನಿಜ. ಎಚ್ಚರಿಕೆಯಿಂದಿದ್ದರೆ ಸುಖವಾಗಿ ದಿನ
ಕಳೆಯಲು ಆದು ಸಾಕಾಗುತ್ತಿತ್ತು. ಆದರೆ ಅವರ ಯಜಮಾನರು ದುಂದು ವೆಚ್ಚಕ್ಕೆ
ಪ್ರಖ್ಯಾತರಾಗಿದ್ದರು. ಹಳ್ಳಿಯಲ್ಲಿರುವುದರ ಬದಲು ಅವರು ಪೇಟೆಯಲ್ಲಿ ಮನೆ
ಮಾಡಿದರು.
"ಅಷ್ಟೇ ಅಲ್ಲ ರಂಗಮ್ನೋರೆ, ಎರಡ್ನೆ ಮದುವೇನೂ ಮಾಡ್ಕೊಂಡ್ರು."
“ಹಾಗೇನು?" ಎಂದರು ರಂಗಮ್ಮ, 'ನಿನ್ನ ಹಾಗೆ ಸಪ್ಪಗಿದ್ದರೆ ಬೇರೆ ಮದುವೆ
ಮಾಡಿಕೊಳ್ಳದೇನು ಮಾಡಿಯಾರು? ಎಂದು ಮನಸಿನೊಳಗೇ ಅಂದುಕೊಂಡರು.
"ಆಕೆಗೆ ಎಷ್ಟು ಜನ ಮಕ್ಕಳು?"
"ಇಬ್ಬರು, ರಂಗಮ್ನೋರೆ. ಎರಡೂ ಹೆಣ್ಣು.”
ಸವತಿಯ ಸಂತಾನ ಹೆಣ್ಣೆoದು ಸಮಾಧಾನಪಡುವುದಷ್ಟೇ ಉಳಿದಿದ್ದುದು
ವೆಂಕಟಸುಬ್ಬಮ್ಮನಿಗೆ!
"ಹೋಗಲಿ, ಎಲ್ಲಾ ಅನ್ಯೋನ್ಯವಾಗಿ ಇದೀರಿ ತಾನೆ?"
“ಹೂಂ.”
ಅದು ನಿಜವಾಗಿರಲಿಲ್ಲ, ಗಂಡನ ಮನೆಯಲ್ಲಿ ವೆಂಕಟಸುಬ್ಬಮ್ಮ ಬರಿಯ
ಪರಿಚಾರಿಕೆಯ ಮಟ್ಟಕ್ಕೆ ಇಳಿದಿದ್ದಳು.
"ಧರ್ಮಾತ್ಮ ಮಕ್ಕಳು ಓದೋಕಾದರೂ ವ್ಯವಸ್ಥೆ ಮಾಡಿದಾನಲ್ಲ."
“ಹೂಂ."
ಅದು ನಿಜವಾಗಿರಲಿಲ್ಲ. ಹಿರಿಯ ಹೆಂಡತಿ ತನ್ನ ಆಭರಣಗಳನ್ನೆಲ್ಲ ಮಾರಿ
ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ನಿರ್ವಹಿಸುತ್ತಿದ್ದಳು.
ಮಕ್ಕಳ ಪ್ರಸ್ತಾಪ ಬಂದಾಗ ಆಕೆಯೆಂದಳು;
"ದೊಡ್ಡ ಹುಡುಗನ ಮೇಲೆ ಯಜಮಾನರಿಗೆ ತುಂಬಾ ಪ್ರೀತಿ."

ಎಂತಹ ಅಲ್ಪ ಸಂತೋಷಿ ಆ ವೆಂಕಟಸುಬ್ಬಮ್ಮ!

"ದೇವರಿದಾನಮ್ಮ, ಮುಪ್ಪಿನಲ್ಲಿ ಮಕ್ಕಳೇ ಅಲ್ವೆ ನಮ್ಮನ್ನ ನೋಡಿ
ಕೊಳ್ಳೋದು?"
ರಂಗಮ್ಮನ ಮಾತು ಕೇಳಿದರೆ, ಆಕೆಗಂತೂ ಮುಪ್ಪು ಇನ್ನೂ ಬಂದೇ ಇಲ್ಲ
ವೇನೋ ಎನ್ನಬೇಕು ಯಾರಾದರೂ! ಆದರೂ ವಾಡಿಕೆಯ ಒಳ್ಳೆಯ ಮಾತೆಂದು
ರಂಗಮ್ಮ ಅದನ್ನು ಅಂದರು.
ವೆಂಕಟಸುಬ್ಬಮ್ಮನನ್ನು ಕುರಿತು ಅಷ್ಟೆಲ್ಲವನ್ನೂ ರಂಗಮ್ಮ ಬೇರೆ ಹೆಂಗಸರಿಗೆ
ಹೇಳಲಿಲ್ಲ. ಆದರೂ ದಿನ ಕಳೆದಂತೆ ಹೇಗೋ ಹೇಗೋ ಒಂದೊಂದೇ ಅಕ್ಷರವಾಗಿ
ಆ ವಿಷಯ ವಠಾರದಲ್ಲಿ ಹರಡಿಕೊಂಡಿತು.
"ಅಯ್ಯೋ ಪಾಪ!"
-ಎಂದರು ಎಷ್ಟೋ ಹೆಂಗಸರರು. ತನ್ನ ಗಂಡನನ್ನು ಹತೋಟಿಯಲ್ಲಿಟ್ಟು
ಕೊಳ್ಳಲಾರದೇ ಹೋದ ಆ ಹೆಂಗಸಿನ ಬಗೆಗೆ ಅವರೆಲ್ಲರಿಗೂ ಕನಿಕರವೆನಿಸಿತು.
ಒಂದು ದಿನ ಪೋಲೀಸ್ ರಂಗಸ್ವಾಮಿಯ ಹೆಂಡತಿ ಒಂದು ಬಟ್ಟಲು ಬೇಳೆ
ಸಾಲ ಕೇಳಲೆಂದು ವೆಂಕಟಸುಬ್ಬಮ್ಮನ ಬಾಗಿಲ ಮುಂದೆ ನಿಂತಳು. ಎಂಜಿನಿಯರಿಂಗ್
ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ ಆಗಲೆ ಹೊರಟು ಹೋಗಿದ್ದ. ಚಿಕ್ಕವನು ಹೊರ
ಡಲು ಹೊತ್ತಾಯಿತೆಂದು ಅವಸರ ಅವಸರವಾಗಿ ಉಣ್ಣುತ್ತಿದ್ದ.
"ಏನ್ಮಾಡ್ತಿದೀರಿ ವೆಂಕಟಸುಬ್ಬಮ್ಮ?" ಎಂದು ರಂಗಸ್ವಾಮಿಯ ಹೆಂಡತಿ
ಅಂದಳು.
"ಬಡಿಸ್ತಾ ಇದ್ದೀನಿ, ಬಂದ್ಬಿಟ್ಟೆ ಕಣ್ರೀ.
ಆದರೆ ಆಕೆ ಹೊರಬರುವುದರೊಳಗೇ ವಠಾರದೆದುರು ಒಂದು ಜಟಕಾ ಗಾಡಿ
ನಿಂತಿತು. ಮಧ್ಯ ವಯಸ್ಸು ದಾಟಿದ್ದ ಭಾರೀ ಗಾತ್ರದ ಬಿಳಿ ಮೀಸೆಯ ದೊಡ್ಡ
ರುಮಾಲಿನ ಗೃಹಸ್ಥರೊಬ್ಬರು ಕೆಳಕ್ಕಿಳಿದು ಗಾಡಿಯನ್ನು ಕೇಳಿದರು.
"ಇದೇ ಏನಯ್ಯ?"
"ಹೂಂ ಸಾಮಿ."
ಎಡಗೈಯಲ್ಲಿ ಕೊಡೆ ಬಲಗೈಯಲ್ಲಿ ಧೋತರದ ಅಂಚು.ಎಕ್ಕಡ ಮೆಟ್ಟಿ
ಕೊಂಡು ಅವರು ಅನುಮಾನಿಸುತ್ತಾ ಅಂಗಳ ಸೇರಿದರು.
'ಯಾರೋ ಬಂದ್ರು,' 'ಯಾರೋ ಬಂದ್ರು' ಎಂದು ಸುದ್ದಿ ವಠಾರ ತುಂಬ
ಕುಪ್ಪಳಿಸಿತು.
ರಂಗಸ್ವಾಮಿಯ ಹೆಂಡತಿಯನ್ನು ನೋಡಲು ಬಾಗಿಲಿಗೆ ಬಂದ ವೆಂಕಟಸುಬ್ಬ
ಮ್ಮನೂ ಹೊರಕ್ಕೆ ಇಣುಕಿದಳು. ಒಮ್ಮೆಲೆ ಅವಳ ಮುಖ ಅಷ್ಟಗಲವಾಯಿತು.
"ಅಯ್ಯೋ ! ನಮ್ಮ ಯಜಮಾನ್ರು." ಎಂದು ಆಕೆ ಪಿಸುದನಿಯಲ್ಲಿ ಅಂದು,
ಉಣ್ಣುತ್ತಿದ್ದ ಮಗನಿಗೆ ಕೇಳಿಸುವಂತೆ ಹೇಳಿದಳು.

"ನಿಮ್ಮಪ್ಪ ಬಂದ್ರು ಕಣೋ".

ಹಾಗೆ ಹೇಳಿ ಸೆರಗು ಸರಿಪಡಿಸಿಕೊಳ್ಳುತ್ತ ಆಕೆ ಹೆಬ್ಬಾಗಿಲಿನತ್ತ ಸರಿದಳು.
ಬಂದ 'ಯಜಮಾನರು' ಹೆಂಡತಿಯನ್ನು ನೋಡಿದರು. ಮುಗುಳುನಗೆ ಆ ಮುಖವನ್ನು
ಅಲಂಕರಿಸಿದಂತೆ ತೋರಿತು. ಹೆಂಡತಿಯನ್ನು ಹಿಂಬಾಲಿಸಿ ಅವರು ಒಳಕ್ಕೆ ಕಾಲಿರಿ
ಸಿದರು.
ಸಾಲ ಕೇಳಲು ಬಂದಾಕೆ ಆಗ ಬಾಗಿಲಲ್ಲಿರಲಿಲ್ಲ. ವೆಂಕಟಸುಬ್ಬಮ್ಮನ ಗಂಡ
ಬಂದ ಸುದ್ದಿಯನ್ನು ಮನೆ ಮನೆಗೂ ತಿಳಿಸುವ ಕಾರ್ಯದಲ್ಲಿ ನಿರತಳಾಗಿದ್ದಳು.
ಯಜಮಾನರು ರುಮಾಲು ತೆಗೆದಿರಿಸಿ ಹೆಂಡತಿ ಹಾಸಿದ ಚಾಪೆಯ ಮೇಲೆ ಕುಳಿ
ತರು. ಮಗನತ್ತ ನೊಡುತ್ತ ಕೇಳಿದರು:
"ಸ್ಕೂಲ್ಗೆ ಹೋಗೋ ಹೊತ್ತಾಗ್ಲಿಲ್ವೇನೋ?"
ಅವರ ದೃಷ್ಟಿಯಲಿ ಸ್ಕೂಲು_ಕಾಲೇಜು ಎಲ್ಲಾ ಒಂದೇ.
"ಇನ್ನು ಹೊರಟ್ಬಿಡ್ತಾನೆ. ಕಂಠಿ ಆಗ್ಲೇ ಹೋದ," ಎಂದು ತಾಯಿಯೇ
ಉತ್ತರವಿತ್ತಳು.
ಮಗ ಕೈ ತೊಳೆದು, ಪುಸ್ತಕಗಳನ್ನೆತ್ತಿಕೊಂಡು, "ಬರ್ತ್ತಿನಪ್ಪಾ-ಅಮ್ಮಾ
ಬರ್ತೀನಿ," ಎಂದು ಹೀಳಿ ಹೊರಕ್ಕೆ ಧಾವಿಸಿದ.
ವೆಂಕಟಸುಬ್ಬಮ್ಮನ ಯಜಮಾನರು ಮನೆಯೊಳಗಿನ ಕತ್ತಲೆಯನ್ನು ಕಂಡು
ಮೂಗು ಮುರಿದರು.
"ಇದೊಳ್ಳೇ ಮನೆ!" ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
"ಇಲ್ಲಿ ಒಳ್ಳೇ ಮನೆ ಸಿಗೋದೇ ಕಷ್ಟ," ಎಂದಳು ವೆಂಕಟಸುಬ್ಬಮ್ಮ.
ಆ ಬಾಗಿಲಿನ ಎದುರಿನೆಂದ ಆತ್ತಿತ್ತ ಹಾದು ಹೋಗುವ ಹೆಂಗಸರ ಸಂಖ್ಯೆ
ಒಮ್ಮೆಲೆ ಹೆಚ್ಚಿತು. ಅವರೆಲ್ಲ ಒಳಗೆ ಕುಳಿತ್ತಿದ್ದ ಗಂಡಸಿನತ್ತ ದೃಷ್ಟಿ ಬೀರಿದರು. ಹೆಂಗ
ಸರ ದೃಷ್ಟಿರನ್ನು ಎದುರಿಸುವುದರಲ್ಲಿ ವೆಂಕಟಸುಬ್ಬಮ್ಮನ ಯಜಮಾನರು ಎಂದೂ
ಹಿಂದಾದವರಲ್ಲ
"ಅಂತೂ ಪರವಾಗಿಲ್ಲ ವಠಾರ!" ಎಂದರು ಯಜಮಾನರು, ಅಷ್ಟೊಂದು ಜನ
ತಮ್ಮನ್ನು ನೋಡುತ್ತಾ ಅತ್ತಿತ್ತ ಹೋದ ಬಳಿಕ.
ನಡೆಗೋಲಿನ ಸದ್ದಾಯಿತು. ರಂಗಮ್ಮ ಬಂದು ಬಾಗಿಲ ಬಳಿ ನಿಂತರು.
"ಇವರೇ ರಂಗಮ್ನೋರು," ಎಂದಳು ವೆಂಕಟಸುಬ್ಬಮ್ಮ. ಆಕೆಯ ಯಜ
ಮಾನರು ಮುಗುಳ್ನಕ್ಕರು. ಅವರನ್ನು ನೋಡಿ ರಂಗಮ್ಮನೂ ನಕ್ಕರು.
"ಯಾವಾಗ ಬರೋಣವಾಯ್ತು?"
"ಇದೇ ಈಗ ಬಸ್ನಲ್ಲಿ ಬಂದೆ."
"ವಠಾರಕ್ಕೆ ಬರ್ತಿರೋದು ಇದು ಮೊದಲ್ನೇ ಸಲ."
"ಹೌದು."

ರಂಗಮ್ಮ, ಆ ಗಂಡಸನ್ನು ಮಾತಿನಿಂದ ತಿವಿದು ನೋಡಲು ಬಯಸಿದರು.

"ಹೋದ ವರ್ಷವೆಲ್ಲಾ ಬೆಂಗಳೂರಿಗೆ ಬರ್ಲೇ ಇಲ್ವೇನೋ?"
"ಇಲ್ಲ, ಒಂದೂವರೆ ವರ್ಷದ ಮೇಲಾಯ್ತು ಬೆಂಗಳೂರಿಗೆ ಬಂದು."
ಹೆಂಡತಿ ಮಕ್ಕಳನ್ನು ಹೀಗೆ ಬಿಟ್ಟಿದ್ದ ಈತನಿಗೆ ನಾಚಿಕೆ ಎಂಬುದೇನೂ ಇಲ್ಲ
ವೆಂಬುದು ಸ್ಪಷ್ಟವಾಗಿತ್ತು. 'ಒಳ್ಳೇ ಗಂಡಸು! ಎಂದು ಮನಸ್ಸಿನಲ್ಲೇ ಅಂದುಕೊಂಡು
ರಂಗಮ್ಮ ಏನನ್ನೋ ಗೊಣಗಿದರು.
"ಆಗಲಿ, ಈಗಲಾದರೂ ಬಂದಿರಲ್ಲ, ಸಂತೋಷ," ಎಂದು ನುಡಿದು ರಂಗಮ್ಮ
ಟೀಕೆ ಅಷ್ಟು ಸಾಕೆಂದು ಮುಂದೆ ನಡೆದರು. ಹೆಬ್ಬಾಗಿಲು ಸಮೀಪಿಸುವುದರೊಳಗೇ
ಅವರ ಸ್ವರ ಕೇಳಿಸಿತು.
"ಯಾವುದೋ ಹಸು ಒಳಕ್ಕೆ, ಬಂದ್ಬಿಟ್ಟಿದೆ! ಯಾರೇ ಅದು ಗೇಟು ತೆರ್ದಿಟ್ಟು
ಬಂದಿರೋದು? ಹೈ....ಹೈ....!"
ತನ್ನ ಗಂಡ ತೆರೆದಿಟ್ಟು ಬಂದಿರಬೇಕೆಂದು ವೆಂಕಟಸುಬ್ಬಮ್ಮನಿಗೆ ಹೊಳೆಯಿತು.
ಆದರೆ ಆ 'ಯಜಮಾನ'ರಿಗೆ ಅದು ಅರ್ಥವಾಗಲಿಲ್ಲ. ಹೆಂಗಸರ ಅಂತಹ ಕೂಗಾಟ
ಗಳಿಗೆ ಗಮನ ಕೊಡುವ ಅಭ್ಯಾಸವೇ ಅವರಿಗೆ ಇರಲಿಲ್ಲ.
"ಕೋಟು ಬಿಚ್ಬಾರ್ದೆ? ಸ್ನಾನಕ್ಕೆ ನೀರಿಡ್ತೀನಿ...." ಎಂದು ವೆಂಕಟಸುಬ್ಬಮ್ಮ
ಗಂಡನನ್ನು ಉದ್ದೇಶಿಸಿ ಹೇಳಿದಳು.
"ಏನೂ ಬೇಡ, ಸ್ನಾನಮಾಡ್ಕೊಂಡೇ ಬಂದೆ."
ಹುಡುಗರ ಊಟವಾಗಿತ್ತು. ಆಕೆ ಇನ್ನೂ ಏನನ್ನೂ ತೆಗೆದುಕೊಂಡಿರಲಿಲ್ಲ.
"ಊಟಕ್ಕೇಳಿ ಹಾಗಾದರೆ."
ತನ್ನ ಪಾಲಿನ ಊಟವನ್ನು ಹೆಂಡತಿ ಕೊಡುತ್ತಾಳೆಂದು ಆ ಗಂಡನಿಗೆ ಗೊತ್ತಿತ್ತು.
'ನಿನಗೇನು ಮಾಡ್ತೀಯಾ?' ಎಂದು ಆತ ಕೇಳಲಿಲ್ಲ. ಮತ್ತೊಮ್ಮೆ ಬೇಯಿಸುತ್ತಾಳೆ
ಎಂಬುದನ್ನೂ ಅವರು ತಿಳಿದಿದ್ದರು.
ತಂಬಿಗೆ ನೀರನ್ನೆತ್ತಿಕೊಂಡು ಓಣಿಯುದ್ದಕ್ಕೂ ಅವರು ಅತ್ತಿತ್ತ ದೃಷ್ಟಿ ಹಾಯಿ
ಸುತ್ತ ಹೋಗಿ ಬಂದರು. ಮಾತಿಲ್ಲದೆಯೇ ಅವರ ಊಟ ಮುಗಿಯಿತು. ಹೆಂಡತಿ
ಕೊಟ್ಟ ಅಡಿಕೆ ಪುಡಿಯನ್ನಷ್ಟು ಬಾಯಿಗೆ ಹಾಕಿಕೊಂದು ಅವರು ಮತ್ತೆ ಕೋಟಿಗೆ ಕೈ
ಹಾಕಿದರು.
"ಇದೇನು ಹೊರಟೇಬಿಟ್ರಾ?"
"ಹೂಂ. ಕೋರ್ಟಿಗೆ ಹೋಗ್ಬೇಕು. ಆ ದಿವಸ ಡಿಕ್ರಿ ಆಗಿರ್ಲಿಲ್ವೆ? ಅದರ
ಅಪೀಲು ಇವತ್ತು."
"ಆಮೇಲೆ ಬರ್ತೀರಿ ತಾನೆ?"
"ಇಲ್ಲ. ಸಾಯಂಕಾಲ ಐದು ಘಂಟೆ ಬಸ್ಸಿಗೇ ಹೋಗ್ಬೇಕು."
ವೆಂಕಟಸುಬ್ಬಮ್ಮನಿಗೆ ಅಳು ಚಿಮ್ಮಿ ಬಂದು, ಸ್ವರ ಗಂಟಲಲ್ಲೆ ಉಡುಗಿತು.

ಆದರೂ ಪ್ರಯಾಸಪಟ್ಟು ಆಕೆ ಸುಧಾರಿಸಿಕೊಂಡಳು. ತನಗೋಸ್ಕರ ಆತ ರಾತ್ರೆ ನಿಲ್ಲು

ವುದಿಲ್ಲ ಎಂಬುದಂತೂ ಗೊತ್ತೆ ಇತ್ತು. ಸವತಿ ಆತನಿಗಾಗಿ ಅಲ್ಲಿ ಕಾಯುತ್ತಿದ್ದಳು.
ಕಣ್ಣಿಗೆ ಕತ್ತಲ್ಲು ಕವಿದ ಹಾಗಾಯಿತು ಆಕೆಗೆ.
"ಕಂಠೀನ ನೋಡೋಲ್ವೆ?"
"ಎಷ್ಟು ಹೊತ್ತಿಗೆ ಬರ್ತಾನೆ?"
"ಆರು ಘಂಟೆಗೆ."
"ಮತ್ತೆ! ಕಡೆ ಬಸ್ಸು ಐದು ಘಂಟೆಗೇ ಹೊರಡುತ್ತ."
ವೆಂಕಟಸುಬ್ಬಮ್ಮನ ಬತ್ತಳಿಕೆ ಬರಿದಾಗಿತು. ಒಂದು ಕಾಲದಲ್ಲಿ ತನ್ನೊಬ್ಬಳ್ಳ
ಸೊತ್ತೇ ಆಗಿದ್ದ ಆ ಜೀವವನ್ನು ಕಾತರದ ದೃಷ್ಟಿಯಿಂದ ಆಕೆ ನೋಡಿದಳು.
ಆಕೆಯ ಗಂಡ ಕೊಡೆಯನ್ನು ಕೈಗೆತ್ತಿಕೊಂಡರು. ಚಪ್ಪಲಿಗಳತ್ತ ಪಾದಗಳು
ಚಲಿಸಿದುವು.
"ಏನಾದರೂ ದುಡ್ಡು ಬೇಕೇನು?"
ಈ ಪ್ರಶ್ನೆಯಿಂದ ವೆಂಕಟಸುಬ್ಬಮ್ಮನ ಸ್ವಾಭಿಮಾನ ಕೆರಳಿತು.
"ಬೇಡಿ. ಇದೆ."
"ಸರಿ ಹಾಗಾದರೆ. ಬರ್ತೀನಿ."
"ಹುಡುಗರು ಇದ್ದಿದ್ದರೆ ಜಟಕಾ ತರಿಸಬಹುದಾಗಿತ್ತು."
"ಬೇಡ, ಹಾದಿ ಗೊತ್ತಿದೆ. ಅಂಗಡಿ ಬೀದಿಗೆ ನಡೆಕೊಂಡು ಹೋಗಿ ಅಲ್ಲಿಂದ
ಬಸ್ನಲ್ಲಿ ಹೋಗ್ತೀನಿ."
ಅಷ್ಟು ಹೇಳಿ ವೆಂಕಟಸುಬ್ಬಮ್ಮನ ಯಜಮಾನರು ಬೀದಿಗಿಳಿದು ಹೊರಟೇ
ಹೋದರು."
ಕುಸಿದು ಬೀಳುವ ಹಾಗಾಯಿತೆಂದು ಆ ಹೆಂಗಸು ಕ್ಷಣಕಾಲ ಬಾಗಿಲಿಗೊರಗಿ
ನಿಂತುಕೂಂಡಳು. ಆಮೇಲೆ ಅಡುಗೆ ಮನೆಗೆ ಹೋಗಿ, ಸೀರೆಯ ಸೆರಗನ್ನು ಕಣ್ಣು
ಗಳಿಗೆ ಒತ್ತಿಕೊಂಡು ಎರಡು ನಿಮಿಷ ಮೌನವಾಗಿ ಅತ್ತಳು. ಆಗ ಮತ್ತೆ ಅನ್ನ
ಬೇಯಿಸುವ ಗೋಜಿಗೆ ವೆಂಕಟಸುಬ್ಬಮ್ಮ ಹೂಗಲ್ಲಿಲ್ಲ. ಊಟ ಮಾಡಬೇಕೆಂದೇ
ಆಕೆಗೆ ಅನಿಸಲ್ಲಿಲ್ಲ.
ವೆಂಕಟಸುಬ್ಬಮ್ಮನ ಯಜಮಾನರು ಅಷ್ಟು ಬೇಗ ಹೊರಟು ಹೋದರೆಂದು
ತಿಳಿದು ರಂಗಮ್ಮನಿಗೆ ಅಶ್ಚರ್ಯವಾಯಿತು. ಹೊರಟಾಗ ತನಗೊಂದು ಮಾತು ಹೇಳಿ
ಹೋಗಲಿಲ್ಲವೆಂದು ಮನಸ್ಸಿನೊಳಗೆ ಕುಟುಕಿತು. ತಾನು ಎನು ಹೇಳಿದರೂ ವೆಂಕಟ
ಸುಬ್ಬಮ್ಮನಿಗೆ ನೋವಾಗುವುದೆಂದು ತಿಳಿದು, ರಂಗಮ್ಮ ನಿಟ್ಟುಸಿರನ್ನಷ್ಟೆ ಬಿಟ್ಟು ಸುಮ್ಮ
ನಾದರು.
ಅದಾಗಿ ಬಹಳ ದಿನಗಳು ಕಳೆದರೂ, ಊರಿನಿಂದ ಬಂದ ವೆಂಕಟ್ಟಸುಬ್ಬಮ್ಮನ
ಯಜಮಾನರು ರಾತ್ರೆ ನಿಲ್ಲದೆ ಸಂಜೆಯೇ ಹೊರಟು ಹೋದ ವಿಷಯ ಮಾತ್ರ

ವಠಾರದ ಯಾರಿಗೂ ಮರೆತು ಹೂಗಲ್ಲಿಲ್ಲ. ಅವರೆಲ್ಲ ತಮ್ಮ ತಮ್ಮಮ್ಮೊಳಗೇ ವೆಂಕಟ

ಸುಬ್ಬಮ್ಮನ ವಿಷಯವಾಗಿ ಸಹಾನುಭೂತಿಯ ಮಾತನ್ನಾಡಿದರು.
ಆ ತಾಯಿ ಮಾತ್ರ ಮಕ್ಕಳ ಸೇವೆಯಲ್ಲಿ ಎ೦ದಿನ೦ತೆಯೇ ನಿರತಳಾದಳು.
....ಮತ್ತೊಮ್ಮೆ ಒ೦ದು ಜಟಕಾ ವಠಾರದೆದುರು ಬ೦ದು ನಿ೦ತಿತು. ನಡು
ಮಧ್ಯಾಹ್ನ ಆಗ. ತಲೆಯ ಮೇಲೆ ಜರಿ ರುಮಾಲು, ಉಣ್ಣೆಯ ಕೋಟು, ಕಚ್ಚೆಪ೦ಚೆ,
ಕೈಯಲ್ಲಿ ಛತ್ರಿ, ಕಾಲಲ್ಲಿ ಚುರುಚುರು ಸದ್ದಾಗುತ್ತಿದ್ದ ಭಾರೀ ಎಕ್ಕಡ. ದೇಹ ಎತ್ತರ
ವಾಗಿದ್ದರು ಕ್ಷೀಣವಾಗಿತ್ತು. ಬಿಳಿ ಮೀಸೆ ಇದ್ದರೂ ಅದನ್ನು ಮಾಟವಾಗಿ ಎರಡು
ಬದಿಗಳಿಗೆ ವಿ೦ಗಡಿಸಿರಲಿಲ್ಲ.
ಆತ ಜಟಕಾ ಗಾಡಿಯಿ೦ದಿಳಿದು ಅತ್ತಿತ್ತ ನೋಡುತ್ತಿದುದ್ದನ್ನು ಮೊದಲು ಕ೦ಡ
ರಾಜಮ್ಮ, 'ನಮ್ಮ ಜನವಲ್ಲ, ಯಾರೋ ಬೇರೆ.ವಿಳಾಸ ತಪ್ಪಿದೆಯೇನೋ'ಎ೦ದು
ಕೊ೦ಡಳು.
ಆದರೆ ಆ ಸದ್ಗೃಹಸ್ಥ ವಠಾರದ ಗೇಟನ್ನೇ ಸಮೀಪಿಸಿದರು:
"ಅಮ್ಮಣ್ಣಿ,ರ೦ಗಮ್ನೋರ ವಠಾರ ಅ೦ದರೆ ಇದೇ ಅಲ್ಲವ್ರಾ?"
ಅಮ್ಮಣಿ ಎ೦ಬ ಪದ ಕೇಳಿ ರಾಜಮ್ಮ ಸುಪ್ರಸನ್ನಳಾದಳು.
"ಹೌದು. ಇದೇ. ಯಾರು ಬೇಕಾಗಿತ್ತು?"
"ರ೦ಗಮ್ನೋರ್ನ ರವಷ್ಟು ನೋಡ್ಬೇಕು."
"ತಾಳಿ. ಹೋಗಿ ಹೇಳ್ತೀನಿ"
ರಾಜಮ್ಮ ಸುದ್ದಿ ಮುಟ್ಟಿಸಿದವಳು. "ನಿಮ್ಮ ಮಗನ ಕಡೆಯಿ೦ದ ಬ೦ದಿದಾರೋ.
ಏನೋ" ಎ೦ದು ತನ್ನ ಸ್ವ೦ತದ ಊಹೆಯನ್ನೂ ಮು೦ದಿಟ್ಟಳು.
ರ೦ಗಮ್ಮ ಬೇಗ ಬೇಗನೆ ನಡೆಗೋಲನ್ನೂರಿಕೊ೦ಡು ಬ೦ದರು.
"ಯಾರಪ್ಪಾ. ಎಲ್ಲಿ೦ದ್ಬ೦ದ್ರಿ?"
"ಇಲ್ಲಿ ರಾಜಶೇಖರ ಅ೦ತ ಒಬ್ಬ ಹುಡುಗ ಇಲ್ಲವ್ರಾ?"
"ಹೌದು, ಇದಾನೆ."
"ಅವನ ಜತೇಲಿ ದೇವಯ್ಯ ಅ೦ತ ಒಬ್ಬ-"
"ಹೌದು, ದೇವಯ್ಯಾ೦ತಿದಾನೆ."
"ನಾನು ದೇವಯ್ಯನ ತ೦ದೆ."
"ಹಾಗೋ? ಬನ್ನಿ-ಬನ್ನಿ-"
ಆದರೆ ಬ೦ದಿದ್ದ ಗೌಡರು ಕುಳಿತುಕೊಳ್ಳುವುದಕ್ಕೂ ಸರಿಯಾದ ಜಾಗವಿರಲಿಲ್ಲ.
ಅಧಿಕಾರಿಗಳು ಯಾರಾದರೂ ಬಂದರೆ, ಜಾತಿ ಮತ ಯೋಚನೆ ಮಾಡದೆ ರ೦ಗಮ್ಮ
ಅವರನ್ನು ತಮ್ಮ ಮನೆಗೆ ಕರೆದೊಯ್ಯುವುದಿತ್ತು. ಬ೦ದವರನ್ನು ಹಾಗೆಯೇ ನಿಲ್ಲ
ಗೊಡುವುದು ಸರಿಯಲ್ಲವೆ೦ದು ರ೦ಗಮ್ಮ ಈಗಲೂ ಕರೆದರು:
"ಒಳಗ್ಬನ್ನಿ."

22

ಆದರೆ ಗೌಡರು ಬರಲಿಲ್ಲ.
"ಬ್ಯಾಡಿ. ಇಲ್ಲೇ ಇರ್ತೀನಿ. ನಮ್ಮ ದೇವಯ್ಯ..."
ರಂಗಮ್ಮ ಆತನ ಮಾತಿಗೆ ಕಿವಿಗೊಡದೆ, ಪೋಲೀಸ್ ರಂಗಸ್ವಾಮಿಯ ಹುಡುಗ
ನನ್ನು ಕಳುಹಿಸಿ ಚಂಪಾವತಿಯ ಮನೆಯಿ೦ದ ಕುರ್ಚಿ ತರಿಸಿದರು. ಗೌಡರು ಹೆಬ್ಬಾಗಿಲ
ಬಳಿಯಲ್ಲೆ ಕುರ್ಚಿಯ ಮೇಲೆ ಆಸೀನರಾದರು. ರಂಗಮ್ಮನೂ ಗೋದಡೆಗೊರಗಿ ಬಾಗಿಲ
ಬಳಿ ಕುಳಿತುಕೊ೦ಡರು.
ಆಗ ಹುಡುಗ ದೇವಯ್ಯನ ತಂದೆಯಲ್ಲವೆ ಈತ? ಎಷ್ಟೊಂದು ಸಾರಿ ತಮ್ಮ
ಮನಸ್ಸಿನ ನೆಮ್ಮದಿಯನ್ನು ಕದಡಿತ್ತು ಆ ವಿಧ್ಯಾರ್ಥಿಗಳ ಕೊಠಡಿ! 'ನನಗೆ ಯಾಕೆ
ಇದೆಲ್ಲ? ಹಾಳಾಗಿ ಹೋಗಲಿ' ಎಂದು ಅವರೆಗೂ ರಂಗಮ್ಮ ಸುಮ್ಮನಾಗಿದ್ದರು.
ಆದರೆ ಈಗ, ಹೆತ್ತ ತಂದೆಯೇ ಕೇಳುತ್ತಿದ್ದಾಗ, ತಮ್ಮ ಹೃದಯದಲ್ಲಿದುದನ್ನೆಲ್ಲ ಆತ
ನೆದುರು ತೋಡಿಕೊಳ್ಳಲು ರಂಗಮ್ಮನಿಗೆ ಅಪೇಕ್ಶೆಯಾಯಿತು. ಅಲ್ಲದೆ ಆ ಹುಡುಗ
ನನ್ನು ಒಳ್ಳೆಯ ಹಾದಿಗೆ ತರಲು ಸ್ವತಃ ತಾವೂ ಎಷ್ಟೊಂದು ಪ್ರಯತ್ನಪಟ್ಟೆವೆ೦ಬು
ದನ್ನು-ಸ್ವಲ್ಪ ಉಪ್ಪು ಖಾರ ಹಚಿಯೇ- ಆತನಿಗೆ ತಿಳಿಸಲು ಅವರು ಬಯಸಿದರು.
"ನಿಮ್ಮ ಹುಡುಗನ ವಿಷಯ ಏನಪ್ಪ ಹೇಳ್ಲಿ ನಾನು?" ಎಂದು ಆರ೦ಭಿಸಿ
ರ೦ಗಮ್ಮ , ಸ್ವಲ್ಪ ಹೊತ್ತು ತಡೆದು, ಹೇಳುತ್ತಿರುವುದೊ೦ದೂ ತಮಗೆ ಪ್ರಿಯವಲ್ಲ
ವೆ೦ಬ೦ತೆ ತಲೆಯಾಡಿಸಿ, ಮನಸ್ಸಿನಲ್ಲಿದ್ದುನ್ನೆಲ್ಲ ಹೇಳಿಯೇ ಬಿಟ್ಟರು.
ಅದನ್ನು ಕೇಳುತ್ತಿದ ಆ ಸದ್ಗೃಹಸ್ಥರ ಮುಖ ಸಪ್ಪಗಾಯಿತು. ಹೃದಯ
ಭಾರವಾಯಿತು; ಅವರು ದೀರ್ಘವಾಗಿ ಶ್ವಾಸವೆಳೆದರು.
ಗೌಡರು ಮಾತಿಲ್ಲದೆ ಕುಳಿತಿದ್ದುದನ್ನು ಕ೦ಡು, ತಾವು ಆಡಿದುದು ಅತಿಯಾಯಿ
ತೇನೋ ಎ೦ದು ರ೦ಗಮ್ಮನಿಗೇ ವ್ಯಾಕುಲವಾಯಿತು.
"ಆದರೆ ಇದನ್ನೆಲ್ಲ ಮನಸ್ಸಿಗೆ ಹಚ್ಕೋಬಾರ್ದು. ಚಿಕ್ಕ ಹುಡುಗ, ಇನ್ನೂ ಬುದ್ಢಿ
ತಿಳೀದು....ಒ೦ದೆರಡು ಸಾರೆ ಬಯ್ದು ಬುದ್ಢಿವಾದ ಹೇಳಿದ್ರೆ ತಿದ್ಕೋತಾನೆ."
"ಅದೇನು ತಿದ್ಕೋತಾನೋ," ಎ೦ದಷ್ಟೇ ಉತ್ತರ ಬ೦ತು.
ಒ೦ದು ಕ್ಷಣ ತಡೆದು, ಏನೋ ನಿರ್ಧಾರಕ್ಕೆ ಬ೦ದವರ೦ತೆ ಗೌಡರೆ೦ದರು:
"ಎಷ್ಟೊತ್ತೊಗೆ ಬತ್ತವೆ ಹುಡುಗ್ರು?"
"ಸಾಯ೦ಕಾಲ ಆರು ಘ೦ಟೆಗೆಲ್ಲಾ ಸಾಮಾನ್ಯವಾಗಿ ಬ೦ದ್ಬಿಡ್ತಾರೆ. ರಾಜ
ಶೇಖರನೇನೋ ತಪ್ಪದೆ ಬರ್ತಾನೆ. ನಿಮ್ಹುಡುಗ__"
ಗೌಡರು ಕುಳಿತಲ್ಲಿ೦ದ ಎದ್ದರು:
"ಆಗಲ್ರಮ್ಮ. ಸಿಟ್ಟೀ ಕಡೆ ಒಸಿ ಕೆಲಸ ಇದೆ. ಮುಗಿಸ್ಕೊ೦ಡು ಬತ್ತೀನಿ.
"ಅಷ್ಟು ಎತ್ತರವಾಗಿದ್ದ ಗೌಡರು ರ೦ಗಮ್ಮನ ಮಾತು ಕೇಳಿ ಅಷ್ಟರಲ್ಲೆ ಸ್ವಲ್ಪ
ಕುಗ್ಗಿ ಹೋಗಿದ್ದರು. ಅವರು ಬೀದಿಗಿಳಿದು ಮರೆಯಾದುದನ್ನು ನೋಡುತ್ತಲಿದ್ದ

ರ೦ಗಮ್ಮನಿಗೆ ಕಸಿವಿಸಿ ಎನಿಸಿತು.

"ನಾನು ಇಷ್ಟೆಲ್ಲಾ ಹೇಳಾಬಾರದಿತ್ತೇನೋ. ಆ ಎದುರುಮನೆ ಹುಡುಗಿ
ವಿಷಯಾನಾದರೂ ಬಿಡಬಹುದಾಗಿತ್ತು. ಓದ್ಸೋದನ್ನೇ ನಿಲ್ಲಿಸಿ ಬಿಡ್ತಾನೋ ಏನೋ,"
ಎಂದು ಅವರು ಮನಸ್ಸಿನಲ್ಲೆ ಪರಿತಪಿಸಿದರು.
ವೆಂಕಟಸುಬ್ಬಮ್ಮನ ಯಜಮಾನರು ಬಂದಾಗ ತೋರಿದಷ್ಟು ಕುತೂಹಲವನ್ನು
ದೇವಯ್ಯನ ತಂದೆ ಬಂದಾಗ ವಠಾರದ ಹೆಂಗಸರು ತೋರಲಿಲ್ಲ. ಆದರೂ ರಂಗಮ್ಮನ
ಮಾತಿಗೆ ಕಿವಿಗೊಡುತ್ತಾ ಕುಳಿತಿದ್ದ ವಯಸ್ಸಾಗಿದ್ದ ಗೌಡರನ್ನು-ಮಹಡಿಯ ಮೇಲಿನ
ಹುಡುಗರಲ್ಲೊಬ್ಬನ ತಂದೆಯನ್ನು-ನೋಡುವ ಕೆಲಸವನ್ನಷ್ಟು ಮಾಡಿದರು.
ಅಷ್ಟೇ ಆಗಿದ್ದರೆ, ಆ ಸಂದರ್ಶನವನ್ನು ಅವರು ಮರೆತು ಬಿಡುತ್ತಿದ್ದರು. ಆದರೆ
ದೇವಯ್ಯನ ತಂದೆ ಅದಕ್ಕೆ ಅವಕಾಶ ಕೊಡಲಿಲ್ಲ.
ವೆಂಕಟಸುಬ್ಬಮ್ಮನ ಯಜಮಾನರು ತಮ್ಮ, ಹುಡುಗರನ್ನು ಸರಿಯಾಗಿ ಮಾತ
ನಾಡಿಸದೆಯೇ ಹೊರಟು ಹೋದರು. ಆದರೆ ದೇವಯ್ಯನ ತಂದೆ ತಮ್ಮ ಹುಡುಗ
ನನ್ನು ಸರಿಯಾಗಿಯೆ ಮಾತನಾಡಿಸಲೆಂದು ಸಂಜೆ ವಾಪಸು ಬಂದರು.
ಆಗ ಕೊಠಡಿಯಲ್ಲಿದ್ದವರು ರಾಜಶೇಖರ ಮತ್ತು ಚಿಕ್ಕ ಹುಡುಗ ಮಾತ್ರ.
ದೇವಯ್ಯನ ತಂದೆಯ ಆಗಮನ ವಾರ್ತೆಯನ್ನು ರಂಗಮ್ಮನಿಂದ ತಿಳಿದ ರಾಜಶೇಖರ
ನಿಗೆ ಗಲಿಬಿಲಿ ಎನಿಸಿತ್ತು. ನವರಾತ್ರಿಯ ಹಬಕ್ಕೆ ದೇವಯ್ಯನೂ ಚಿಕ್ಕ ಹುಡುಗನೂ
ಊರಿಗೆ ಹೋಗಿದ್ದರು. ಊರಿನಿಂದ ಹಿಂತಿರುಗಿದ ಮೇಲೆ ದೇವಯ್ಯನ ಹಾರಾಟ
ಸ್ವಲ್ಪ ಕಡಿಮೆಯಾಗಿತ್ತು. ಕಾಲೇಜ್ ಹಾಸ್ಟೆಲಿಗೆ ಸೇರುವ ಪ್ರಸ್ತಾಪವನ್ನು ಮತ್ತೆ
ಮಾಡಲಿಲ್ಲ. ಆದರೆ ಕೆಟ್ಟ ಅಭ್ಯಾಸಗಳನ್ನು ಆತ ಬಿಟ್ಟುಕೊಡಲೂ ಇಲ್ಲ.
ದೇವಯ್ಯ ಸೇದಿ ಎಸೆದಿದ್ದ ಸಿಗರೇಟು ಚೂರುಗಳನ್ನು ರಾಜಶೇಖರ ಹೆಕ್ಕಿ
ತೆಗೆದು ಕೊಠಡಿಯನ್ನು ಶುದ್ಧಗೊಳಿಸಿದ್ದ.
ಕೊಠಡಿಗೆ ಬಂದ ಗೌಡರು ಮೌನವಾಗಿದ್ದರು. ಆ ಮೌನವನ್ನು ಕಂಡು ರಾಜ
ಶೇಖರನ ಭಯ ಹೆಚ್ಚಿತು.
"ಆಯ್ಯೊ, ಇವರು ಮಾತನ್ನಾದರೂ ಆಡಬಾರದೆ?"
-ಎಂದು ರಾಜಶೇಖರ ಮನಸಿನೊಳಗೇ ಸಂಕಟಪಟ್ಟ.
ಗೌಡರು ಕೊಠಡಿಯಲ್ಲಿದ್ದ ಕನ್ನಡ ಪಠ್ಯ ಪುಸ್ತಕವನ್ನೋದುತ್ತ ಮಗನ ಚಾಪೆಯ
ಮೇಲೆ ಕುಳಿತರು. ಮಗನ ಆಗಮನದ ನಿರೀಕ್ಷೆಯಲ್ಲಿ ಗೌಡರಿದ್ದುದನ್ನು ತಿಳಿದ
ರಂಗಮ್ಮ ಕತ್ತಲಾದೊಡನೆಯೇ, ಎಂದಿಗಿಂತ ಸ್ವಲ್ಪ ಬೇಗನೆ, ದೀಪ ಹಾಕಿದರು.
ಏಳೂವರೆ ಹೊತ್ತಿಗೆ ದೇವಯ್ಯ ಕೊಠಡಿಗೆ ಬಂದ. ತಂದೆಯನ್ನು ಕಂಡೊಡನೆ
ದೇಹದ ಕಸುವೆಲ್ಲ ಹೊರಟು ಹೋದಂತಾಯಿತು ಅವನಿಗೆ.
"ಎಷ್ಟು ಹೊತ್ತಿಗೋ ಮನೇಗ್ಬರೋದು?" ಎಂದು ಗುಡುಗುತ್ತ ಗೌಡರು
ಎದ್ದು ನಿಂತು ಮಗನ ಸಮೀಪಕ್ಕೆ ಬಂದರು.

ತಪ್ಪಿಸಿಕೊಳ್ಳಲು ಹಾದಿಯೇ ಇಲ್ಲದ ಅಪರಾಧಿಯ ಹಾಗಾಯಿತು ದೇವಯ್ಯನ

ಸ್ಥಿತಿ. ತಾವು ಬರುವ ವಿಷಯವನ್ನು ತಂದೆ ಮೊದಲೇ ಬರೆದು ತಿಳಿಸಿದೆ ಈ ಸ್ಥಿತಿ
ಯೊದಗಿತಲ್ಲಾ ಎಂದು ಆತ ಹಲುಬಿದ. ಏನಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ
ತಿಳಿಯುವುದರೊಳಗೇ ಆತನಿಗೇ ಏಟುಗಳು ಬಿದ್ದುವು. ತಂದೆ ಮಗನಿಗೆ ಅಂಗೈ ಬೀಸಿ
ಹೊಡೆದರು; ಮುಷ್ಟಿಯಿಂದ ಗುದ್ದಿದರು; ತನ್ನ ಕಾಲು ಹಿಡಿಯಲು ಬಂದವರನ್ನು
ಪಾದದಿಂದ ತುಳಿದರು. ತಮ್ಮ ಕುಲಕ್ಕೆ ಮನೆತನಕ್ಕೆ ಕಳಂಕಪ್ರಾಯನಾದ ಆ ಮಗನನ್ನು
ಮನಸ್ವೀ ಬಯ್ದರು. ದೇವಯ್ಯ ಯಾವ ರಕ್ಷಣೆಯೂ ದೊರೆಯದೆ "ಅಮ್ಮಾ-ಅಮ್ಮಾ-
ಸತ್ತೇ ಸತ್ತೇ," ಎಂದು ಕೂಗಾಡಿದ.
ರಾಜಶೇಖರನೂ ಚಿಕ್ಕ ಹುಡುಗನೂ ಗಡಗಡನೆ ನಡುಗುತ್ತ ಮೂಲೆ ಸೇರಿದರು.
ಜಯರಾಮು ತನ್ನ ತಾಯಿಯೊಡನೆ ಆ ಕೊಠೊಡಿಯ ಬಾಗಿಲಿನ ಎದುರು ಬಂದು
ನಿಂತ. ಕೆಳಗಿನಿಂದ ಚಿಕ್ಕ ಪುಟ್ಟ ಹುಡುಗರು ದೇವಯ್ಯನ ಚೀರಾಟದ ಸದ್ದು ಕೇಳಿ
ಮೇಲಕ್ಕೆ ಓಡಿ ಬಂದರು. ಗೌಡರು ಶರೀರದ ಆದ್ಯಂತ ಕಂಪಿಸುತ್ತಿದ್ದರು. ನೆಲದ
ಮೇಲೆ ಮೂಲೆಯಲ್ಲಿ ಮುದುರಿ ಕುಳಿತು ತನ್ನ ಮಗ ಎಳೆಯ ಮಗುವಿನಂತೆ ಅಳತೊಡ
ಗಿದುದನ್ನು ಕಂಡಾಗ, ಗೌಡರ ರೋಷ ಮೆಲ್ಲೆನೆ ಕರಗಿತು.
ಹೊಡೆತ ನಿಂತಿತೆಂದು ಜಯರಾಮು ತನ್ನ ತಾಯಿಯೊಡನೆ ಹಿಂತಿರುಗಿದ. ಇಷ್ಟು
ಬೇಗನೆ ತಮಾಷೆ ಮುಗಿಯಿತಲ್ಲಾ ಎಂದು ನೆರೆದಿದ್ದ ಹುಡುಗರಿಗೆ ನಿರಾಶೆಯಾಗಿ,
ದೇವಯ್ಯನಿಗೆ ಏಟು ಬಿದ್ದ ಸುದ್ದಿಯನ್ನು ಕೆಳಗೆ ವಠಾರದಲ್ಲಿ ಪ್ರಸಾರ ಮಾಡಲು
ಅವರು ಇಳಿದು ಹೋದರು.
ಗೌಡರು ತಮ್ಮ ಹೃದಯದ ಅಳಲನ್ನು ಯಾರೂ ತಿಳಿದುಕೊಳ್ಳಲಾರರೆಂದು
ಮನಸಿನೊಳಗೇ ಕೊರಗುತ್ತ, ಅಸಹನೀಯವಾಗುತ್ತಾ ಬಂದಿದ್ದ ಮೌನವನ್ನು ಮುರಿದು,
ಹೇಳಿದರು:
"ಇವತ್ನಿಂದ್ಲೇ ನೀನು ಸುಧಾರಿಸಿದ್ರೆ ಬದುಕ್ದೆ. ಇಲ್ಲೆ ಓದ್ರೆ ನನ್ಮ್ಗಗ ಸತ್ತಾಂತ
ತಿಳ್ಕಂತೀನಿ."
ರಾಜಶೇಖರನ ಕಡೆಗೆ ತಿರುಗಿ ಅವರೆಂದರು:
"ಏನಪ್ಪಾ, ದೇವೂನ ಒಂದಿಷ್ಟು ನೋಡ್ಕೊ ಅಂದ್ರೆ ಇಂಗ್ಮಾಡೋದಾ ನೀನು?"
ರಾಜಶೇಖರ ಉತ್ತರ ಕೊಡಲಾರದೆ ಹೋದ.
ಗೌಡರು ರುಮಾಲನ್ನು ತಲೆಗೇರಿಸಿ ಕೆಳಕ್ಕಿಳಿದು ರಂಗಮ್ಮನನ್ನು ಕರೆದರು.
"ನಾನು ಓಗ್ಬರ್ತಿನಿ ತಾಯೀ"
"ಆಗಲಪ್ಪಾ. ಈವಾಗ್ಲೇ ಹೊರಡ್ತೀರಾ?"
"ರಾತ್ರೆ ಗಾಡಿಗೆ ಓಯ್ತೀನಿ. ನಮ್ಮ ಹುಡುಗನ ಮೇಲೆ ಒಂದಿಷ್ಟು ನಿಗಾ
ಮಡಗಿರಿ ಅವ್ವಾ...ದೊಡ್ಡೋನು ಊರಲ್ಲೇ ಹೊಲ ನೋಡ್ಕೊಂತ ಅವ್ನೆ. ಇವ್ನು
ಎರಡ್ನೇಯೋನು. ಒಂದಿಷ್ಟು ಓದಿ ಅಭಿವೃದ್ಧಿಗೆ ಬರ್ಲೀಂತ ಆಸೆ."

"ಆಗಲಪ್ಪಾ ಆಗಲಿ. ನಾನು ಹೇಳ್ತಿರ್ತೀನಿ. ನಮ್ಮ ವಠಾರದಲ್ಲಿ ಈವರೆಗೆ

ಓದಿದೋರೆಲ್ಲ ಒಳ್ಳೊಳ್ಳೆ ಕೆಲಸದಲ್ಲಿದ್ದಾರೆ."
"ಬರ್ತೀನಿ ತಾಯಿ," ಎಂದು ಮತ್ತೊಮ್ಮೆ ಹೇಳಿ ಗೌಡರು ಹೊರಟು
ಹೋದರು.
....ಪಿತೃಭಕ್ತಿ ಪುತ್ರವಾತ್ಸಲ್ಯದ ವಿವಿಧ ರೂಪಗಳು ಜಯರಾಮುವಿನ ಕಣ್ಣೆ
ದುರು ಕಟ್ಟಿದಂತಾಗಿ, ಆ ರಾತ್ರೆ ಬಹಳ ಹೊತ್ತು ಆತನಿಗೆ ನಿದ್ದೆ ಬರಲಿಲ್ಲ. ಕತೆಯಲ್ಲಿ
ಓದುವುದಕ್ಕಿಂತಲೂ ವಾಸ್ತವತೆಯಲ್ಲಿ ಬದುಕು ಎಷ್ಟೊಂದು ರುದ್ರತರ ಎಂದು ಯೋಚಿ
ಸುತ್ತ ಆತ ಮಲಗಿದ.
ರಾಜಶೇಖರನೂ ಚಿಕ್ಕ ಹುಡುಗನೂ ಊಟ ಮಾಡಿ ಬಂದರು. ಮೈಕೈ
ನೋಯುತ್ತಿದ್ದ ದೇವಯ್ಯ ಮುಸುಕೆಳೆದುಕೊಂಡು ಹಾಸಿಗೆಯ ಮೇಲೆ ಉರುಳಿದ.
ಆತನನ್ನು ಮಾತನಾಡಿಸಲು ರಾಜಶೇಖರ ಮಾಡಿದ ಯತ್ನಗಳೆಲ್ಲ ವಿಫಲವಾದುವು.
...ದಿನಗಳು ಕಳೆದುವು. ದೇವಯ್ಯ ಹೊತ್ತಿಗೆ ಸರಿಯಾಗಿ ಈಗ ಕೊಠಡಿಗೆ
ಬರುತ್ತಿದ್ದ.ದುಂದು ವೆಚ್ಚ ಮಾಡುತ್ತಿರಲಿಲ್ಲ. ಸಿಗರೇಟು ಸೇದುವುದು ಕಡಮೆ
ಯಾಯಿತು. ಪಾಠ ಪುಸ್ತಕಗಳನ್ನೋದುವ ಪ್ರಯತ್ನವನ್ನೂ ಆತ ಮಾಡುತ್ತಿದ್ದು
ದನ್ನು ರಾಜಶೇಖರ ಗಮನಿಸಿದ.
ತಂದೆ ಬಂದು ಹೋದ ಮೊದಲಲ್ಲಿ ಕೆಲವು ದಿನ ರಾಜಶೇಖರನೊಡನೆ ದೇವಯ್ಯ
ಮಾತನಾಡಲೇ ಇಲ್ಲ. ಒಂದು ದಿನ ಅವನ ಅಂತರ್ಯದ ಬೇಗುದಿ ಸ್ಛೋಟ
ವಾಯಿತು.
"ನನ್ಮೇಲೆ ಚಾಡಿ ಹೇಳಿ ನಿಂಗೇನಪ್ಪಾ ಬಂತು?"
ಅಂತಹ ಪ್ರಶ್ನೆಯನ್ನು ರಾಜಶೇಖರ ನಿರೀಕ್ಷಿಸಿರಲಿಲ್ಲ. ತನ್ನ ವಿಷಯದಲ್ಲಿ
ದೇವಯ್ಯ ಹಾಗೆ ತಪ್ಪು ತಿಳಿಯಬಹುದೆಂದು ಆತ ಕನಸಿನಲ್ಲೂ ಭಾವಿಸಿರಲಿಲ್ಲ.
"ಇಲ್ಲಪ್ಪೋ. ನಾನು ಹೇಳಿಲ್ಲ!"
ಅದು ನಿಜವೆಂದು ಚಿಕ್ಕವನು ಸಾಕ್ಷ್ಯ ನುಡಿದ.
ರಂಗಮ್ಮನೇ ವರದಿ ಕೊಟ್ಟಿರಬೇಕೆಂಬುದು ಸ್ಪಷ್ಟವಾಯಿತು. ದೇವಯ್ಯ ಆ
ಮುದುಕಿ ಕಣ್ಣಿಗೆ ಬಿದ್ದಾಗಲೆಲ್ಲ ಆಕೆಯನ್ನು ನುಂಗಿಬಿಡುವವನಂತೆ ನೋಡುತ್ತಿದ್ದ.
ಒಂದು ಸಂಜೆ, ಪದ್ಮಾವತಿಯ ಜತೆಯಲ್ಲಿ ಅಂಗಳದಲ್ಲಿ ನಿಂತಿದ್ದ ರಂಗಮ್ಮ,
ಕೊಠಡಿಗೆ ಹೋಗುತ್ತಿದ್ದ ದೇವಯ್ಯನನ್ನು ಕಂಡು, ಕೇಳಿದರು:
"ಏನಪ್ಪಾ ನಿಮ್ತಂದೆ ಕಾಗದ ಬರೆದಿದಾರೇನು?"
"ಹೂಂ."
ಉತ್ತರ ಚುಟುಕಾಗಿತ್ತು. ಅದೂ ಗೊಗ್ಗರ ಧ್ವನಿಯಲ್ಲಿ.
"ಊರಲ್ಲೆಲ್ಲಾ ಚೆನ್ನಾಗಿದಾರೊ?"
"ಹೂಂ."

ಮತ್ತೆ ಮೊದಲಿನಂತೆಯೇ.
174
ಸೇತುವೆ

ಹುಡುಗ ಮೆಟ್ಟಲೇರಿ ಹೋದ ಬಳಿಕ ರಂಗಮ್ಮ ನೊಂದುಕೊಂಡು ಧ್ವನಿಯಲ್ಲಿ
ಹೇಳಿದರು:
"ನನ್ಮೇಲೆ ಕೋಪ ಆತನಿಗೆ_ಗೌಡ ಬಂದಾಗ ದೂರು ಹೇಳ್ದೆ ಅಂತ. ನನಗೇನು
ದ್ವೇಷವೆ? ಆ ಹುಡುಗನಿಗೆ ಒಳ್ಳೇದಾಗ್ಲೀಂತ್ಲೇ ಅಲ್ವೆ ನಾನು ಹೇಳಿದ್ದು?"
ಪದ್ಮಾವತಿ, ತನ್ನ ಮೈಗೆ ಅಂಟಿಕೊಂಡಿದ್ದ ಮಗುವನ್ನು ಎರಡೂ ಕೈಗಳಿಂದ
ಮತ್ತಷ್ಟು ಬಿಗಿಯಾಗಿ ತನ್ನೆಡೆಗೆ ಎಳೆದುಕೊಳ್ಳುತ್ತ, ಮುಗುಳ್ನಕ್ಕಳು.

೧೮
ಚಳಿಗಾಲ ಬಂದಾಗ ರಂಗಮ್ಮ ಮೈತುಂಬ ಕಂಬಳಿ ಹೊದೆದುಕೊಳ್ಳುತ್ತಿದ್ದರು.
ನರನಾಡಿಗಳಲ್ಲಿ ರಕ್ತ ಸಂಚಾರ ಕ್ಷೀಣವಾಗಿ ಅವರಿಗೆ ತುಂಬಾ ಸಂಕಟವಾಗುತ್ತಿತ್ತು.
ಈ ಸಲ ಅವರೆಂದರು:
"ಅಸಾಧ್ಯ ಚಳಿ ಈ ವರ್ಷ! ಅಸಾಧ್ಯ ಚಳಿ!"
ಆದರೆ ಇದೇ ಮಾತನ್ನು ಅವರು ಪ್ರತಿ ವರ್ಷವೂ ಹೇಳುತ್ತಿದ್ದರು. ಪ್ರತಿ
ಯೊಂದು ಸಲವೂ 'ಈ ವರ್ಷದ ಚಳಿ ಅಸಾಧ್ಯ' ಎಂದೇ ಅವರಿಗೆ ತೋರುತ್ತಿತ್ತು.
ಹೆಚ್ಚು ಕಡಮೆ ಪ್ರತಿ ಮುಂಜಾನೆಯೂ ಇಬ್ಬನಿ ಬೀಳುತ್ತಿತ್ತು. ಬೇಗನೆ ಎಚ್ಚರ
ವಾದರೂ ರಂಗಮ್ಮ ಮನೆಯಿಂದ ಹೊರಬರುತ್ತಿರಲಿಲ್ಲ. ಸೂರ್ಯನ ಬೆಳಕು ಓಣಿ
ಯೊಳಕ್ಕೆ ಬರುವವರೆಗೂ ಅವರು ಗಂಟಲಿನಿಂದ ಒಂದೇ ಸಮನೆ ಏನಾದರೂ ಸದ್ದು
ಹೊರಡಿಸುತ್ತ ಕುಳಿತುಬಿಡುತ್ತಿದ್ದರು.
ಪೋಲೀಸ್ ರಂಗಸ್ವಾಮಿಯ ಹುಡುಗ, ಮೀನಾಕ್ಷಮ್ಮನ ಮಗ, ಇಲ್ಲವೆ ಉಪಾ
ಧ್ಯಾಯರ ಮಕ್ಕಳು ಬಂದು ಕೂಗಿ ಕರೆಯುತ್ತಿದ್ದರು:
"ಅಜ್ಜೀ....ಎದ್ದಿಲ್ವೆ ಅಜ್ಜೀ?....ಹಾಲು ಬಂತು ಅಜ್ಜೀ..."
ಅಂತಹ ದಿನಗಳಲ್ಲಿ ರಂಗಮ್ಮನ ಪರವಾಗಿ ಕಮಲಮ್ಮನೇ ಹಾಲು ಹಾಕಿಸಿ
ಕೊಳ್ಳುತ್ತಿದ್ದಳು.
ಅದನ್ನು ಆಮೇಲೆ ಇಸಕೊಳ್ಳುತ್ತ ರಂಗಮ್ಮನೆನ್ನುತ್ತಿದ್ದರು:
"ಏನು ಹಾಲು ಕೊಡುತ್ತೇಂತ ಈ ಚಳಿಗೆ ಹಿಂಡ್ತಾರೋ...."
ಡಿಸೆಂಬರ್ನಲ್ಲೊಂದು ರಾತ್ರೆ, ಮುಂಜಾನೆ, ಚಳಿ ವಿಪರೀತವಾಗಿತ್ತು. 'ಆಹ್'
ಎಂದು ಉಸಿರುಬಿಟ್ಟರೆ ಸಾಕು, ಬಾಯಿಯಿಂದ ಉಗಿ ಹೊರಡುತ್ತಿತ್ತು.
ಆ ಬೆಳಗ್ಗೆ ಎಷ್ಟು ಹೊತ್ತಾದರೂ ರಂಗಮ್ಮ ಏಳಲೇ ಇಲ್ಲ.

ಎಷ್ಟು ಸಾರೆ ಬಾಗಿಲು ತಟ್ಟಿದರೂ ಉತ್ತರ ಬರಲಿಲ್ಲ. ಕಮಲಮ್ಮ ಗಾಬರಿ

ಗೊಂಡು ಮೀನಾಕ್ಷಮ್ಮನ ಮನೆಗೆ ಓಡಿದಳು. ಗಂಡಸರಲ್ಲಿ ಹೆಚ್ಚಿನವರಲ್ಲ ಕೆಲಸಕ್ಕೆ
ಹೊರಟು ಹೋಗಿದ್ದು, ಉಳಿದಿದ್ದವರು ಸುಬ್ಬುಕೃಷ್ಣಯ್ಯ ಮತ್ತು ಶಂಕರನಾರಾ
ಯಣಯ್ಯ ಮಾತ್ರ . ಇಬ್ಬರೂ ಧಾವಿಸಿ ಒಂದು ಬಾಗಿಲು ತಟ್ಟಿದರು. ಪ್ರಯೋಜನ
ವಾಗಲಿಲ್ಲ.
"ಇನ್ನೇನಪ್ಪಾ ಮಾಡೋದು?" ಎಂದು ಸುಬ್ಬುಕೃಷ್ಣಯ್ಯ .
ಶಂಕರನಾರಾಯಣಯ್ಯ ತನ್ನ ಕುರ್ಚಿ ತಂದಿಟ್ಟು ಅದರ ಮೇಲೆ ನಿಂತು ಎರಡು
ಹಂಚುಗಳನ್ನು ಎತ್ತಿಟ್ಟ. ಸೂರ್ಯನ ಬೆಳಕು ಕಟ್ಟೆಯೊಡೆದ ಕೆರೆಯ ಹಾಗೆ ರಂಗಮ್ಮನ
ಮನೆಯೊಳಕ್ಕೆ ನುಗ್ಗಿತು.
ಆದರೆ ಅಷ್ಟು ಹೊತ್ತಿಗಾಗಲೆ ಎದ್ದುಬಿಟ್ಟಿದ್ದರು ರಂಗಮ್ಮ. ಬಾಗಿಲ ವರೆಗೆ
ತೆವಳಿ ಬಂದು ಅಗಣಿ ತೆರೆದರು. ಹೊರಗಿದ್ದವರಿಗೆ ಕಂಡುಬಂದುದು, ಒಂದೇ ರಾತ್ರೆ
ಯಲ್ಲಿ ಬಹಳ ಕುಗ್ಗಿ ಹೊಗಿದ್ದ ರಂಗಮ್ಮ. ಅವರ ಕಣ್ಣುಗಳು ಹನಿಗೂಡಿದ್ದುವು.
ನೆರೆದಿದ್ದ ಎಲ್ಲರನ್ನೂ ಉದ್ದೇಶಿಸಿ ಮಾತನಾಡುವ ಶಕ್ತಿ ತಮಗಿಲ್ಲವೆನ್ನುವಂತೆ ಸುಬ್ಬು
ಕೃಷ್ಣಯ್ಯನನ್ನೇ ನೋಡುತ್ತ ಅವರೆಂದರು:
"ಕಾಲು ಕಣೋ. ಎರಡೂ ಕಾಲೂ ಹಿಡಕೊಂಬಿಡ್ತು. ಮಡಚೋಕೇ ಆಗ್ಲಿಲ್ಲ.
ವಯಸ್ಸಾಯ್ತು. ಇನ್ನು ತುಂಬ ಕಷ್ಟಾನಪ್ಪಾ".
"ಮಗನಿಗೆ ಕಾಗದ ಬರೀಬೇಕೇನು?" ಎಂದು ಕೇಳಿದ ಸುಬ್ಬುಕೃಷ್ಣಯ್ಯ,
ಬರಯಬೇಕೆಂದಾದರೆ ಬರೆದುಕೊಟ್ಟೇ ಕೆಲಸಕ್ಕೆ ಹೊಗೋಣವೆಂದು.
ಆದರೆ ರಂಗಮ್ಮ ಬೇಡವೆಂದರು:
"ಛೆ! ಛೆ! ನನಗೇನಾಗಿದೆ?" ಸ್ವಲ್ಪ ಚಳಿಯಾಯ್ತು ಅಷ್ಟೆ ...."
ಅವರ ದೃಷ್ಟಿ ಛಾವಣಿಯತ್ತ ಹೋಯಿತು. ಶಂಕರನಾರಾಯಣಯ್ಯ ಮೌನ
ವಾಗಿ ಮತ್ತೊಮ್ಮೆ ಕುರ್ಚಿಯನ್ನೇರಿ ಹಂಚುಗಳನ್ನು ಮೊದಲಿದ್ದಲ್ಲೇ ಇರಿಸಿದ.
ಆ ದಿನ ರಂಗಮ್ಮ ಮನೆಗೆಲಸಗಳನ್ನು ನಿಧಾನವಾಗಿ ಮಾಡಿದರು.
"ಒಂದು ದಿನ ಹೀಗೆ ಚಳೀಲಿ ಮೈ ಹೆಪ್ಪುಗಟ್ಟಿ ಸತ್ತೇ ಹೋಗ್ತೀನಿ ನಾನು "
ಎಂದು, ಬಿಸಿಲು ಚೆನ್ನಾಗಿ ಬಂದ ಮೇಲೆ, ರಂಗಮ್ಮ ಹೇಳಿದರು.
........ ದಿನಗಳುರುಳಿದವು. ಚಳಿಗಾಲ ಹಿಮ್ಮೆಟ್ಟಿತು. ಹೊಸ ವರ್ಷದ ವಿವಿಧ
ಕ್ಯಾಲೆಂಡರುಗಳು ವಠಾರದ ಮನೆಗೋಡೆಗಳನ್ನು ಅಲಂಕರಿಸಿದುವು.
ಇಂಟರ್ ಪಾಸ್ ಮಾಡಿದ ಜಯರಾಮು, ಎರಡು ತಿಂಗಳ ಕಾಲ ಕೆಲಸಕ್ಕಾಗಿ
ಅಲೆದ. ಪ್ರತಿ ಸಲವೂ ಯಾರನ್ನಾದರೂ ಭೇಟಿ ಮಾಡಿದಾಗಲೆಲ್ಲ, ಈ ಸಲ ಸಿಕ್ಕಿಯೇ
ಸಿಗುತ್ತದೆ ಎಂದು ತೋರುತ್ತಿತ್ತು. ಅದು ಅಶಾವಾದದ ಬಳ್ಳಿ ಬಿಟ್ಟಿದ್ದ ಒಂಟಿ ಹೂ.
ಭ್ರಮೆ ಎಂದು ಅದರ ಹೆಸರು. ಉದ್ಯೋಗ ಜಯರಾಮುವಿನ ಪಾಲಿಗೆ ಮಿಸುನಿ
ಜಿಂಕೆಯಾಯಿತು. ರಾತ್ರೆ ಕನಸಿನಲ್ಲೂ ಮರಕೊಳಿಸುವ ಹಾಗೆ ಹಗಲು ಯಾರು

ಯಾರೋ ಸೀಸದ ಮಾತುಗಳನ್ನು ಅವನ ಕಿವಿಯೊಳಕ್ಕೆ ಎರಕು ಹುಯ್ಯುತ್ತಿದ್ದರು.

__"ನೀನು ಪದವೀಧರನಲ್ಲ."
__"ಜಾತಿ?"
__"ಷಾರ್ಟ್ ‌ಹ್ಯಾಂಡ್ ಟೈಪ್‌ರೈಟಿಂಗ್ ತಿಳೀದು ಹಾಗಾದ್ರೆ?"
ಆತ ಪದವೀಧರನಾಗುವ ಮಾತೇ ಇರಲಿಲ್ಲ.
ಜಾತಿಯ ವಿಷಯದಲ್ಲಿ ಆತನೇನೂ ಮಾಡುವಂತಿರಲಿಲ್ಲ.
ಆದರೆ ಕೊನೆಯದು ಸಾಧ್ಯವಿತ್ತು.
ಶೀಘ್ರಲಿಪಿಯನ್ನೂ ಟೈಪು ಮಾಡುವದನ್ನೂ ಕಲಿಸಿಕೊಡುವ ಶಾಲೆಗೆ ಆತ
ವಿದ್ಯಾರ್ಥಿಯಾಗಿ ಹೋದ.
ಆತನ ಬರವಣಿಗೆ ನಡೆದೇ ಇತ್ತು. ಅಹಲ್ಯೆಯ ಮದುವೆಯನ್ನು ಹಿನ್ನೆಲೆ
ಯಾಗಿಟ್ಟು ಹೃದಯಸ್ಪರ್ಶಿಯಾದೊಂದು ಕತೆಯನ್ನು ಆತ ಬರೆದ. ಅದನ್ನೋದುತ್ತ
ರಾಧಾ ಒಂದೇ ಸಮನೆ ಕಣ್ಣೀರು ಸುರಿಸಿದಳು. ಅದನ್ನು ಪತ್ರಿಕೆಗೆ ಕಳುಹಿಸಬೇಕೆಂದಿದ್ದ
ಜಯರಾಮು. ಆದರೆ ರಾಧಾ ಬಿಡಲಿಲ್ಲ. "ಇದನ್ನು ಬೇರೆ ಯಾರೂ ಓದಬಾರದಣ್ಣ."
ಎಂದಳು. ಅಹಲ್ಯೆಯ ಬಗೆಗೆ ತನ್ನ ತಂಗಿ ತೋರಿದ ಪ್ರೀತಿಯನ್ನು ಕಂಡು ಜಯ
ರಾಮು ಮೂಕನಾಗಿ ಹೋದ.
ಉದ್ಯೋಗದ ಬೇಟೆ ಹಲವಾರು ಕಥಾವಸ್ತುಗಳನ್ನು ಆತನಿಗೆ ಒದಗಿಸಿತು.
'ದಿನಚರಿ ಕತೆಗಳು' ಎಂದು ಹೆಸರಿಟ್ಟು ಆ ಅನುಭವಗಳನ್ನೆಲ್ಲ ಆತ ಟಿಪ್ಪಣಿ ಮಾಡುತ್ತ
ಹೋದ. ಆದರೆ ಅದರಿಂದ ದುಡ್ಡು ಬರುತ್ತಿರಲಿಲ್ಲ.
ಶಂಕರನಾರಾಯಾಣಯ್ಯ ಹೇಳಿರಲಿಲ್ಲವೆ ಒಂದು ದಿನ?
"ಚಿತ್ರ ಬರೆದರೆ ದುಡ್ಡು ಬರೋದಿಲ್ಲ ಜಯರಾಮು."
ಆ ಮಾತು ಸಾಹಿತ್ಯದ ವಿಷಯದಲ್ಲೂ ಸತ್ಯವಾಗಿತ್ತು. ಆದರೆ ಬರವಣಿಗೆಯನ್ನು
ಬಿಟ್ಟುಕೊಡುವುದು ಮಾತ್ರ ಸಾಧ್ಯವಿರಲಿಲ್ಲ.
....ಎರಡು ತಿಂಗಳ ಅನಂತರವೊಂದು ಸಂಜೆ, ವಠಾರಕ್ಕೆ ಬೇಗನೆ ಹಿಂದಿರುಗಿದ
ಚಂದ್ರಶೇಖರಯ್ಯ, ಜಯರಾಮುವನ್ನು ಕರೆದು ಕೇಳಿದ:
ನಮ್ಮ ವಿಮಾ ಸಂಸ್ಥೆ ಕಚೇರೀಲಿ ಒಂದು ಗುಮಾಸ್ತೆ ಕೆಲಸ ಖಾಲಿ ಬಿದ್ದಿದೆ.
ಬರ್ತೀರೇನು?_"
ಅದೇನೋ ಕನಸಿನ ಸಂಭಾಷಣೆಯೆಂಬಂತೆ ಜಯರಾಮು ಉತ್ತರಿಸಿದ:
"ಓ ಬರ್ತೀನಿ. ಯಾವ ಕೆಲಸ ಮಾಡೋದಕ್ಕೂ ಸಿದ್ಧವಾಗಿದೀನಿ ನಾನು."
"ಸಂಬಳ ಕಮ್ಮಿ. ಈಗ ನಲ್ವತ್ತೈದು ಕೊಡ್ತಾರೆ. ಒಂದು ವರ್ಷ ಆದ್ಮೇಲೆ
ಖಾಯಂ ಮಾಡೋ ವಿಷಯದ ಪರಿಶೀಲನೆ. ಖಾಯಂ ಆದರೆ, ಸಂಬಳ ಜಾಸ್ತಿ
ಮಾಡ್ತಾರೆ. ಬೇಕಿದ್ದರೆ ನಿಮ್ಮ ತಂದೆಗೆ ಕಾಗದ ಬರೆದು ಕೇಳಿ. ಆದರೆ ತಡವಾಗ
ಬಾರದು. ತಮ್ಮ ತಮ್ಮವರಿಗೇ ಕೆಲಸ ಕೊಡಿಸೋಕೆ ಅಲ್ಲಿ ಪ್ರಯತ್ನ ಪಡೋ ಜನ
ಬೇಕಾದಷ್ಟಿದಾರೆ." "ಅದೆಲ್ಲ ಯೋಚಿಸ್ವೇಕಾದ್ದಿಲ್ಲ ಚಂದ್ರಶೇಖರಯ್ಯ. ನಮ್ಮ ತಂದೇನ ಈ ವಿಷಯ
ದಲ್ಲಿ ಕೇಳೋ ಅಗತ್ಯವೇ ಇಲ್ಲ."
"ಹಾಗಾದ್ರೆ ನಾಳೇನೆ ಒಂದು ಅರ್ಜಿ ಬರಕೊಡಿ."
"ಹೂಂ. ಬರಕೊಡ್ತೀನಿ."
ಆಮೇಲೆ ಜಂದ್ರಶೇಖರಯ್ಯ ಮೌನವಾದ. ತಾನು ಕೃತಜ್ಞತೆಯನ್ನರ್ಪಿಸಿಲ್ಲ
ಜಯರಾಮು ಕಸಿವಿಸಿಗೊಂಡ. ಆದರೆ ಏನನ್ನು ಹೇಳಬೇಕೇಂದು ತೋಚಲಿಲ್ಲ.
ಏನನ್ನೋ ಹೇಳಲು ಹೊರಟಾಗ ನಾಲಿಗೆ ತಡವರಿಸಿತು.
"ನೀವು ಮಾಡ್ತಿರೋ ಉಪಕಾರ ಎಂಥದೂಂತ ಖಂಡಿತ ಊಹಿಸಲಾರಿರಿ ಚಂದ್ರ
ಶೇಖರಯ್ಯ."
ಆತ ನಕ್ಕುಬಿಟ್ಟ.
"ಇನ್ನೂ ಕೆಲಸವೇ ಸಿಕ್ಕಿಲ್ವಲ್ಲ ಜಯರಾಮು. ಆಮೇಲೆ ಥ್ಯಾಂಕ್ಸ್ ಕೊಡಿ."
ಜಯರಾಮು ತನ್ನ ಮನೆಯೊಳಕ್ಕೆ ಹೋಗಿ, ತಾಯಿಗೂ ತಂಗಿಗೂ ತಾನು
ಬರೆಯಲಿರುವ ಹೊಸ ಅರ್ಜಿಯ ವಿಷಯ ತಿಳಿಸಿದ. ಆ ತಾಯಿಯ ಮುಖದ ಮೇಲೆ
ಆಸೆಯ ಮುಗುಳುನಗೆ ಮೂಡಿತು. ಯಾವ ಬಗೆಯ ಕೆಲಸ? ಕಚೇರಿ ಎಲ್ಲಿರೋದು?
ಎಂದೆಲ್ಲ ವಿವರವಾಗಿ ಕೇಳಿ ರಾಧಾ ಅವನನ್ನು ಬೇಸರಪಡಿಸಿದಳು.
ಬೇರೆಯೂ ಒಂದು ಯೋಚನೆ ಹೊಳೆದು ರಾಧಾ ಕೇಳಿದಳು:
"ವಿಮಾ ಸಂಸ್ಥೆಯ ಕತೆ ಯಾರೂ ಬರೆದೇ ಇಲ್ಲ, ಅಲ್ವೆ ಅಣ್ಣ? ನೀನು ಅದನ್ನು
ಬರೆದರೆ ಚೆನ್ನಾಗಿರುತ್ತೆ."
.....ಬಟ್ಟೆ ಬದಲಾಯಿಸುತ್ತಿದ್ದ ಚಂದ್ರಶೇಖರಯ್ಯ ತಾಯಿ ಮಕ್ಕಳ ಸಂವಾದ
ಕೇಳಿಸುವುದೇನೋ ಎಂದು ಕಿವಿಗೊಟ್ಟ. ತನ್ನ ವಿಷಯವಾಗಿ ಅವರೇನು ಮಾತನಾಡು
ತ್ತಿದ್ದರೆಂದು ತಿಳಿಯುವ ಆತುರ ಆತನಿಗೆ. ಆದರೆ ಏನೂ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ.
ರಾಧೆಯ ಕೀಟಲೆ ನಗೆ, ಜಯರಾಮುವಿನ ಹುಸಿ ಮುನಿಸಿನ ಉತ್ತರ ....
"ನೀವು ಮಾಡ್ತಿರೋ ಉಪಕಾರ ಎಂಥದೂಂತ ಖಂಡಿತ ಊಹಿಸ್ಲಾರಿರಿ ಚಂದ್ರ
ಶೇಖರಯ್ಯ..."
ಹುಚ್ಚು ಹುಡುಗ. ನಾಳೆಯ ದಿನ ಆ ಕೆಲಸ ದೊರೆತು, ರಾಧೆಯೂ ರಾಧೆಯ
ತಾಯ್ತಂದೆಯರೂ ತನ್ನ ಬಗೆಗೆ ಒಳ್ಳೆ ಮಾತನ್ನಾಡುವಾಗ ತನಗೆ ಆಗುವ ಸಂತೋಷ
ಎಷ್ಟೆಂಬುದನ್ನು ಊಹಿಸುವುದು ಅವನಿಂದ ಸಾಧ್ಯವೆ?
ಚಂದ್ರಶೇಖರಯ್ಯ ಮದುವೆಯಾಗಲು ತೀರ್ಮಾನಿಸಿದ್ದ. ಆ ತೀರ್ಮಾನಕ್ಕೆ
ಇದೇ ಕಾರಣವೆಂದು ಯಾವುದಾದರೂ ಒಂದನ್ನಷ್ಟೇ ಎತ್ತಿ ತೋರಿಸುವುದು ಸಾಧ್ಯವಿರ
ಲಿಲ್ಲ. ಊರಿನಲ್ಲಿ ಹಿರಿಯರು ಆಡುತ್ತಿದ್ದ ನಿಂದೆಯ ನುಡಿಗಳನ್ನು ಕೇಳಿ ಕೇಳಿ ಆತನಿಗೆ
ಸಾಕಾಗಿತ್ತು.ಆದರೆ ಅದಕ್ಕಿಂತಲೂ ಮುಖ್ಯವಾಗಿ ಆತನ ಯೌವನ ಕೇಳುತ್ತಿತ್ತು:

23
'ಒಂಟಿಯಾಗಿಯೇ ಎಷ್ಟು ದಿನ ಇರೋದು ಸಾಧ್ಯ?' ಒಂದು ಹೆಣ್ಣು ಜೀವನದ ಸ್ನೇಹ

ವನ್ನು ಆತನ ಮನಸ್ಸು ದೇಹಗಳೆರಡೂ ಬಯಸುತ್ತಿದ್ದುವು, ಅದಕ್ಕೆಲ್ಲ ಕಳಶವಿಡುವಂತೆ
ಅಹಲ್ಯೆಯ ವಿವಾಹ ಪ್ರಕರಣ ಆತನ ಮೇಲೆ ಬಲವಾದ ಪರಿಣಾಮವನ್ನುಂಟು
ಮಾಡಿತ್ತು. ಪ್ರೀತಿಯ ವಿಷಯ, ವಿವಾಹದ ವಿಷಯ,ಅಹಲ್ಯೆ_ವೆಂಕಟೇಶರು ಒಬ್ಬ
ರೊಡನೊಬ್ಬರು ಮಾತನಾಡಿದ್ದರೋ ಇಲ್ಲವೋ, ಆತನಿಗೆ ತಿಳಿಯದು. ಆದರೆ ಅಷ್ಟೆಲ್ಲ
ರಂಪವಾದ ಮೇಲೆ, "ಅಹಲ್ಯೆಯನ್ನೇ ಮದುವೆಯಾಗ್ತೇನೆ" ಎಂದು ವೆಂಕಟೇಶ ಹೇಳ
ಬೇಗಿತ್ತು. ಆದರೆ ಆತ ಆಂತಹ 'ಗಂಡಸುತನ' ತೋರಲಿಲ್ಲ. ಅದಕ್ಕಾಗಿ ಆತನ
ನ್ನೆಂದೂ ಚಂದ್ರಶೇಖರಯ್ಯ ಕ್ಷಮಿಸಲಾರ. ಜಯರಾಮುವಿನೆದುರು ವೆಂಕಟೇಶನನ್ನು
ಒಂದೆರಡು ಸಾರಿ ಬೈದು ಚಂದ್ರಶೇಖರಯ್ಯ ಸ್ವಲ್ಪ ತೃಪ್ತಿಪಟ್ಟುಕೊಂಡಿದ್ದ. ಏನಾದರೂ
ನೆಪ ಮಾಡಿಕೊಂಡು ರಾಮಚಂದ್ರಯ್ಯನೊಡನೆ ಆತ್ಮೀಯವಾಗಿ ಆಗಾಗ್ಗೆ ಮಾತ
ನಾಡಿದ್ದ. ಆದರೆ ಆ ಪ್ರಕರಣ ಸ್ವತಃ ಅವನಿಗೇ ಸವಾಲು ಹಾಕಿತ್ತು: 'ನಿನ್ನ ವಿಷಯ
ವೇನು? ರಾಧೆಯ ಬಗ್ಗೆ ನಿನ್ನ ಅಭಿಪ್ರಾಯವೇನು?'
ಆ ಅಭಿಪ್ರಾಯಕ್ಕೆ ಸಂಬಂಧಿಸಿ ಅವನ ಮನಸ್ಸಿನಲ್ಲಿ ಈಗ ಯಾವ ಶಂಕೆಯೂ
ಉಳಿದಿರಲಿಲ್ಲ.
ಈ ಬೀದಿಯಲ್ಲಿ ಬಸ್ಸುಗಳಲ್ಲಿ ಹುಡುಗಿಯರನ್ನು ನೋಡಿದರೂ ರಾಧೆಯ ನೆನಪು
ಆತನಿಗೆ ಆಗುತ್ತಿತ್ತು. ದಾಂಪತ್ಯ ಜೀವನದ ಯೋಚನೆಗಳು ಮೂಡಿದಾಗಲೆಲ್ಲ
ರಾಧೆಯೇ ಕಣ್ಣೆದುರು ನಿಲ್ಲುತ್ತಿದ್ದಳು.
ಚಂದ್ರಶೇಖರಯ್ಯ ತನಗೆ ತಾನೇ ಪ್ರಶ್ನಿಸಿಕೊಂಡ:
'ರಾಧೆಯಿಲ್ಲದೆ ಹೋಗಿದ್ದರೆ, ಖಾಲಿಯಾದ ಜಾಗವನ್ನು ಜಯರಾಮುಗೆ
ಕೊಡಿಸ್ತಿದ್ದೆಯೇನು?'
ಅವನ 'ಅಹಂ' ಎಂದಿತು:
"ಓಹೋ, ಕೊಡಿಸ್ತಿದ್ದೆ.'
ಅದು ಆತ್ಮವಂಚನೆಯ ಉತ್ತರ ಎಂಬುದು ಅವನಿಗೆ ಗೊತ್ತಿತ್ತು.
ಜಯರಾಮುಗೆ, ಚಂದ್ರಶೇಖರಯ್ಯ ಪ್ರತಿನಿಧಿಯಾಗಿ ದುಡಿಯುತ್ತಿದ್ದ ವಿಮಾ
ಸಂಸ್ಥೆಯ ಕಚೇರಿಯಲ್ಲಿ ಕೆಲಸ ಸಿಕ್ಕಿತು.
ಆತನ ತಾಯಿ, ದೇವರೆದುರು ತುಪ್ಪದ ದೀಪ ಹಚ್ಚಿಟ್ಟು ಮಗ ಮಂಡಿಯೂರಿ
ಕೈಮುಗಿಯುವಂತೆ ಮಾಡಿದಳು.
ಬೇಗನೆ ಹೊರಟುಬರಲು ತನ್ನ ಗಂಡನಿಗೆ ಕಾಗದ ಬರೆಯಬೇಕೆಂದು ಆಕೆ
ಯೋಚಿಸಿದಳು. ಆದರೆ ಅದರ ಅಗತ್ಯವಿಲ್ಲವೆಂಬುದು ತನಗೇ ಹೊಳೆದು, ಕೆಲಸ
ಸಿಕ್ಕಿದ ವಿಷಯವನ್ನಷ್ಟೇ ಬರೆದು ತಿಳಿಸುವಂತೆ ಜಯರಾಮುಗೆ ಹೇಳಿದಳು: 'ಚಂದ್ರ
ಶೇಖರಯ್ಯ ಕೆಲಸ ಕೊಡಿಸಿದ್ದು' ಎಂಬುದನ್ನೂ ಬರೆಯುವಂತೆ ಸೂಚಿಸದಿರಲಿಲ್ಲ.
ಆ ತಾಯಿ ಕೆಳಕ್ಕಿಳಿದು ತಾನು ಸಂಧಿಸಿದವರಿಗೆಲ್ಲ ಆ ಸುದ್ದಿ ಹೇಳುತ್ತ ಬಂದಳು. "ನಮ್ಮ ಜಯರಾಮುಗೆ ಕೆಲಸ ಸಿಗ್ತು."
ನಮ್ಮ ರಾಧಾಗೆ ಗ೦ಡು ಗೊತ್ತಾಯ್ತು ಎನ್ನುವಾಗ ಇರಬಹುದಾದ ಸ೦ತೋ
ಷದ ಧ್ವನಿಯಿತ್ತು ಆ ಮಾತಿನಲ್ಲಿ.
ಅದರ ಜತೆಯಲ್ಲಿ ಇನ್ನೊ೦ದು ವಾಕ್ಯವನ್ನು ಆಕೆ ಹೇಳಿದಳು:
"ಚ೦ದ್ರಶೇಖರಯ್ಯ ಕೊಡಿಸಿದ್ರು. ಅವರ ಕಚೇರೀಲೇ ಕೆಲಸ.
ರಂಗಮ್ಮ ಆಕೆಗೆ ಅಂದರು:
"ಹಾಗೆಯೇ ಮಗಳ ಮದುವೇನೂ ಒಂದು ಮಾಡಿಸ್ಬಿಡಮ್ಮ."
ಬೇರೆ ದಿನವಾಗಿದ್ದರೆ, ಆ ಮಾತು ಕೇಳಿದೊಡನೆಯೇ ಆಕೆಯ ಮುಖ ಬಾಡು
ತ್ತಿತ್ತು. ಈ ದಿನ ಹಾಗಾಗಲಿಲ್ಲ. ಧೈರ್ಯದಿಂದಲೆ ಆಕೆಯೆಂದಳು:
"ಆಗಲಿ ರಂಗಮ್ನೋರೇ. ನಿಮ್ಮ ಆಶೀರ್ವಾದವಿದ್ದರೆ ಅದೂ ಒಂದು ದಿನ
ಆದೀತು, ನೋಡೋಣ."
ಅಣ್ಣನಿಗೆ ಕೆಲಸ ಸಿಕ್ಕಿತೆಂದು ರಾಧಾ ಕುಣಿದಾಡಿಳು.
ಚಂದ್ರಶೇಖರಯ್ಯನನ್ನು ರಾತ್ರೆ ಊಟಕ್ಕೆ ಕರೆಯಬೇಕೆಂದು ಗೊತ್ತಾಯಿತು.
ಆದರೆ ಸಂಜೆಯಾದರೂ ಆತನ ಸುಳಿವೇ ಇರಲ್ಲಿಲ. ಜಯರಾಮು ಆತ ಇರಬಹುದಾದ
ಜಾಗಗಳಲ್ಲೆಲ್ಲ ಸುತ್ತಾಡಿ, ಒಂದೆಡೆ ಅವನನ್ನು ಕಂಡು, ಕರೆದುಕೊಂಡು ಬಂದ.
...........ಹಿಗ್ಗುತ್ತಿದ್ದ ಹೃದಯವನ್ನು ಬಿಗಿಯಾಗಿ ಹಿಡಿದು ಚಂದ್ರಶೇಖರಯ್ಯ
ಊಟ್ಟಕ್ಕೆ ಕುಳಿತ. ಮೂರು ವರ್ಷಗಳಿಂದ ಪಕ್ಕದ ಮನೆಯಲ್ಲೇ ಇದ್ದ ಆತ, ಮೊದಲ
ಬಾರಿ ಕಂಡ ಅಪರಿಚಿತರ ಮನೆಯಲ್ಲಿ ಕುಳಿತವನಂತೆ, ಸಂಕೊಚದಿಂದ
ವರ್ತಿಸಿದ.
ರಾಧಾ ಅಣ್ಣನಿಗೂ ಚಂದ್ರಶೇಖರಯ್ಯನಿಗೂ ಬಡಿಸುತ್ತ ಹೋದಳು. ಆತ
ರಾಧೆಯನ್ನು ತಲೆಯೆತ್ತಿ ಕೂಡಾ ನೋಡದೆ ಊಟ ಮಾಡಿದ.
ಕೊಠಡಿಗೆ ಹಿಂತಿರುಗಿದ ಚಂದ್ರಶೇಖರಯ್ಯನಿಗೆ ಅಂತಹ ನಿರ್ಮಲ ಒಲವನ್ನು
ದೊರಕಿಸಿಕೊಂಡ ತಾನು ಸುಖಿಯೆಂದು ತೋರಿತು. ಸಿಗರೇಟಿನ ನೆನಪಾಯಿತಾದರೂ,
ಸೇದಲು ಮನಸ್ಸಾಗಲಿಲ್ಲ.

೧೯

ಬಿಸಿಲು ಚೆನ್ನಾಗಿ ಬೀಳತೊಡಗಿದಂತೆ ನಿತ್ಯದ ಉತ್ಸಾಹದಿಂದ ರಂಗಮ್ಮ
ಓಡಾಡಿದರು.
"ಈ ವರ್ಷವಾದರೂ ಬೆಂಗಳೂರಿಗೆ ವರ್ಗವಾಗುವಂತೆ ಪ್ರಯತ್ನಿಸಬೇಕು," ಎಂದು ಆಗಾಗ್ಗೆ ಕಾಗದದಲ್ಲಿ ರಂಗಮ್ಮ ಮಗನಿಗೆ ಷರಾ ಬರೆಸುವುದಿತ್ತು. ಅದು ಎಷ್ಟೋ
ವರ್ಷಗಳಿಂದ ಅವರು ಬರೆಸುತ್ತಲೇ ಬಂದ ಒಕ್ಕಣೆ.
'ಪಾಮಿಸ್ಟ್ರಿ ಪ್ರೊಫೆಸರ್ ಪದ್ಮನಾಭಯ್ಯ' ರಂಗಮ್ಮನ ಕೈ ನೋಡಿ ಭವಿಷ್ಯ ನುಡಿ
ದಿರಲಿಲ್ಲ ನಿಜ. ಆದರೆ, ರಂಗಮ್ಮನನ್ನು ಬಿಟ್ಟು ವಠಾರ ಇದ್ದೀತು ಎಂದು ಹೇಳುವ
ಸಾಹಸ ಮಾಡಲು ಯಾರೂ ಸಿದ್ಧರಿರಲಿಲ್ಲ.
ಜಾಗೃತಾವಸ್ಥೆಯಿರಲಿ, ಸ್ವಪ್ನಾವಸ್ಥೆಯಿರಲಿ - ರಂಗಮ್ಮನ ಹೆಚ್ಚಿನ ಆಯುಸ್ಸೆಲ್ಲ
ವಠಾರದ ಚಿಂತನೆಯಲ್ಲಿ ಕಳೆದು ಹೋಗುತಿತ್ತು.
"ನಿಮ್ಮ ವಠಾರದಲ್ಲಿ ಎಷ್ಟು ಸಂಸಾರಗಳಿವೆ ರಂಗಮ್ನೋರೆ?" ಎಂದು ಯಾರಾ
ದರು ಕೇಳಿದರೆ, ಅವರು ಕೊಡುತ್ತಿದ್ದ ಉತ್ತರ:
"ಹದಿನಾಲ್ಕು."
"ಹದಿನೈದಲ್ವೆ ಅಜ್ಜಿ?"
-ಎಂದು ಯಾರಾದರೂ ತಿದ್ದಲು ಹೋಗುವುದಿತ್ತು. 'ಅಜ್ಜಿ' ಎಂಬ ಸಂಬೋ
ಧನೆ ಅವರಿಗೆ ಪ್ರಿಯವಾಗಿರಲಿಲ್ಲ. ಸ್ವಲ್ಪ ರೇಗುತ್ತ, ಅವರು ಸಾರುತ್ತಿದರು:
"ಹದಿನೈದಲ್ಲ, ಹದಿನಾಲ್ಕೇ!"
ನಿಜವಾಗಿ, ಅವರದನ್ನೂ ಸೇರಿಸಿ ಸಂಸಾರಗಳಾಗುತ್ತಿದ್ದುವು. ಆದರೆ
ಅವರ ಲೆಕ್ಕದ ರೀತಿ ಬೇರೆ. ಹದಿನಾಲ್ಕು ಸಂಸಾರಗಳು ತಮ್ಮ ಮನೆಯಲ್ಲಿವೆ, ವಠಾರ
ದಲ್ಲಿವೆ, ಎಂದು ಅವರು ಸಾಧಿಸುತ್ತಿದ್ದರು.
ಸ್ವಲ್ಪ ಕಾಲದ ಹಿಂದೆ ನಡೆದ ಅಹಲ್ಯಾ-ವೆಂಕಟೇಶರ ಪ್ರಕರಣವನ್ನು ರಂಗಮ್ಮ
ಮರೆತಿರಲಿಲ್ಲ. ಅದರಿಂದ ಅವರ ಮನಸ್ಸಿಗೆ ತುಂಬಾ ನೋವಾಗಿತ್ತು. ರಾಜಮ್ಮ ತನ್ನ
ಮಾತಿಗೆ ಬೆಲೆ ಕೊಡಲಿಲ್ಲವೆಂಬುದು ಆಗಾಗ್ಗೆ ಅವರಿಗೆ ನೆನಪಾಗುತಿತ್ತು.
ಅದನ್ನು ಮರೆಸುವಂತಹ ಒಳ್ಳೆಯ ಕೆಲಸವನ್ನೇನಾದರೂ ಮಾಡಲು ಅವರು
ಹಾತೊರೆಯುತ್ತಿದ್ದರು.
ಹಿಂದೆಯೇ ಅವರ ಮನಸ್ಸಿನೊಳಗಿದ್ದು ಮೂಲೆ ಸೇರಿದ್ದ ವಿಷಯ ಚಳಿಗಾಲದ
ಅನಂತರ ಹೊಂಬಿಸಿಲಿನಲ್ಲಿ ಗರಿಗೆದರಿಕೊಂಡು ಹೊರಬಂತು.
ಒಂದು ಸಂಜೆ ಹೊರ ಅಂಗಳದಲ್ಲಿ ನಿಂತಿದ್ದ ಅವರು ವಠಾರಕ್ಕೆ ಹಿಂತಿರುಗುತ್ತಿದ್ದ
ಚಂದ್ರಶೇಖರಯ್ಯನನ್ನು ಕಂಡರು. ಆತ ಇತ್ತೀಚಿಗೆ ಇಸ್ತ್ರಿ ಹಾಕಿದ್ದ ತನ್ನ ಹಳೆಯ
ಗ್ಯಾಬರ್ಡೀನ್ ಸೂಟನ್ನು ತೊಟ್ಟಿದ್ದ. ರಂಗಮ್ಮನ ಕಣ್ಣಿಗೆ ಸಿಂಗರಿಸಿದ ಮದುವಣಿಗನ
ಹಾಗೆಯೇ ಅವನು ಕಂಡ.
"ಏನು ಚಂದ್ರಶೇಖರಯ್ಯ, ನಿಮ್ಮ ಹತ್ತಿರ ಮಾತನಾಡೋಣ ಅಂದ್ರೆ ನಿಮಗೆ
ಒಂದು ನಿಮಿಷವೂ ಪುರುಸೊತ್ತೇ ಇಲ್ವಲ್ಲಾ?" ಎಂದು ರಂಗಮ್ಮ ಪೀಠಿಕೆ ಹಾಕಿದರು.
"ಪುರುಸೊತ್ತು ನಿಮಗಿರೊಲ್ಲಾಂತ ನಾನೇ ಬಂದು ಮಾತಾಡ್ಸೊಲ್ಲ. ಅಷ್ಟೆ,"
ಎಂದು ಚಂದ್ರಶೇಖರಯ್ಯ ವಿವರಣೆ ಕೊಟ್ಟ, ರಂಗಮ್ಮ ನಿಲ್ಲಿಸಿಕೊಂಡು ಭೈರಿಗೆ ಕೊರೆಯುವರೇನೊ ಎ೦ಬ ಭಯದಿ೦ದ, ಮಹಡಿ ಮೆಟ್ಟಲುಗಳನ್ನೇರತೊಡಗಿದ.
"ಕೆಳಗೆ ನಮ್ಮನೇಗ್ಬನ್ನಿ ಸ್ವಲ್ಪ," ಎ೦ದು ರ೦ಗಮ್ಮ ಕರೆದರು. ಅವರ ದೃಷ್ಟಿಗೆ,
ಕೊನೆಯ ಕಿಟಿಕಿಯಲ್ಲಿ ರಾಧೆಯ ಮುಖ ಮಸುಕುಮಸುಕಾಗಿ ತೋರಿತು.
ಬೇರೆ ಉಪಾಯವಿಲ್ಲದೆ ಚ೦ದ್ರಶೇಖರಯ್ಯ ಬೂಟ್ಸು ಬಿಚ್ಚಿಟ್ಟು ಬಟ್ಟೆ ಬದ
ಲಾಯಿಸಿ ರ೦ಗಮ್ಮನ ಮನೆಗೆ ಹೋದ. ಸುಬ್ಬುಕೃಷ್ಣಯ್ಯ ಬರುವುದರೊಳಗೇ ಮೊದಲ
ವಾಚನವನ್ನು ಮುಗಿಸಬೇಕಾದ ಕಾಗದವಿರಬಹುದು; ಮನೆಗ೦ದಾಯಕ್ಕೆ ಸ೦ಬ೦ಧಿಸಿದ
ನಗರ ಸಭೆಯಿ೦ದ ನೋಟೀಸು ಬ೦ದಿರಬಹುದು- ಎ೦ದು ಚ೦ದ್ರಶೇಖರಯ್ಯ ಯೋಚಿ
ಸಿದ್ದ.ಆದರೆ ಅದೊ೦ದೂ ಇರಲಿಲ್ಲ.
"ಸುಮ್ನೆ ಕರೆದ. ಬಹಳ ದಿವಸವಾಯ್ತು ನಿಮ್ಜತೇಲಿ ಮಾತನಾಡಿ,"ಎ೦ದು
ರ೦ಗಮ್ಮ ನಗೆ ಬೀರಿದರು. ಇಷ್ಟು ವಯಸ್ಸಾದ ಮೇಲೆ ನಕ್ಕಾಗಲೂ ನೋಡಲು
ಚೆನ್ನಾಗಿರತ್ತದೆ೦ಬ ಅವರು ನ೦ಬಿಕೆ ಆಶ್ಛರ್ಯಕರವಾಗಿತ್ತು.
ಚ೦ದ್ರಶೇಖರಯ್ಯನೂ ಮುಗುಳ್ನಕ್ಕ.
"ಏನಪ್ಪಾ ,ಆರೋಗ್ಯವಾಗಿದೀರಾ? ಊರಿ೦ದೇನಾದರೂ ಕಾಗದ ಬ೦ತೆ?"
ಇಷ್ಟರಲ್ಲೆ ಚ೦ದ್ರಶೇಖರಯ್ಯನಿಗೆ, ರ೦ಗಮ್ಮ ಮು೦ದೆ ಪ್ರಸ್ತಾಪಿಸಲಿದ್ದ ವಿಷಯ
ಯಾವುದೆ೦ಬುದು ತಿಳಿಯಿತು. ಬೇರೆ ದಿನಗಳಲ್ಲಾದರೆ ತೇಲಿಸಿ ಮಾತನಾಡುತ್ತಿದ್ದವನು
ಈ ದಿನ ಸ್ವಲ್ಪ ತಬ್ಬಿಬ್ಬಾದ.
"ಮೊನ್ನೆ ಒ೦ದು ಕಾಗದ ಬ೦ದಿತ್ತು."
"ಏನ್ಹೇಳ್ತಾರೆ ನಿಮ್ಮ ತ೦ದೆ?ಮದುವೆ ಬೇಡ,ಹಾಗೇ ಇದ್ಬಿಡೂ೦ತ್ಲೊ?"
ಚ೦ದ್ರಶೇಖರಯ್ಯ ಆ ಕ್ಷಣವೆ, ತಾನು ಹೇಗೆ ಮು೦ದುವರಿಯಬೇಕೆ೦ಬುದನ್ನು
ನಿರ್ಧರಿಸಿದ.
"ಹಾಗೇನಿಲ್ಲ ರ೦ಗಮ್ನೋರೆ. ಬೇಗ್ನೆ ಮಾಡ್ಕೊ ಅ೦ತ್ಲೇ ಅಪ್ಪ ಹೇಳ್ತಾನೆ.
ಆದರೆ ಸರಿಯಾದ ಹುಡುಗಿ ಸಿಗ್ಬೇಕಲ್ಲ?"
ಆತನ ಉತ್ತರದ ಧ್ವನಿಯಲ್ಲಾದ ಬದಲಾವಣೆಯನ್ನು ಗಮನಿಸಿ ರ೦ಗಮ್ಮ
ಹಿಗ್ಗಿದರು.
"ಅದೇನು ಹಾಗ೦ದ್ರೆ? ಈ ಭೂಮಿ ಮೇಲೆ ನಿಮಗೆ ಬೇಕಾದ ಹುಡುಗೀನೇ
ಇಲ್ವೆ?"
"ಎಲ್ಲಾದ್ರೂ ಇದ್ರೆ ಪ್ರಯೋಜನವೇನು? ಹೊರಗೆ ಮದುವೆ ಮಾಡ್ಕೊ೦ಡು
ಈ ವಠಾರ ಬಿಟ್ಟು ಹೋಗು ಅ೦ತೀರೇನು?"
ರ೦ಗಮ್ಮನಿಗೆ ಏನು ಹೇಳಬೇಕೋ ತೋಚಲಿಲ್ಲ. ತಮ್ಮ ಮನಸ್ಸಿನಲ್ಲಿದ್ದುದೇ
ಆತನ ಮನಸ್ಸಿನಲ್ಲಿಯೂ ಇದೆಯೇ ಎ೦ದು ತಿಳಿಯಲು ಅವರು ಕಾತರರಾದರು.
"ಹಾಗಾದ್ರೆ ಈ ವಠಾರದಲ್ಲೇ ಯಾವುದಾದರೂ ಹುಡುಗಿ ಇದ್ರೆ ಗೊತ್ತು
ಮಾಡೋಣ್ವೇನು?" ಹೇಳಬೇಕಾದ್ದನ್ನು ನಗೆಗೀಡಾಗುವ೦ತೆ ಹೇಳಿದೆನೇನೋ ಎ೦ದು ಅಳುಕುತ್ತ
ಚ೦ದ್ರಶೇಖರಯ್ಯನೆ೦ದ:
"ಮಾಡಿ, ಆಗಿಹೋಗ್ಲಿ."
ವಠಾರದಲ್ಲಿ ಮದುವೆಯನ್ನಿದಿರು ನೋಡುತ್ತಿರುವ ಹುಡುಗಿ ರಾಧೆಯೊಬ್ಬಳೇ
ಎ೦ದು ಯಾರಿಗೆ ಗೊತ್ತಿರಲಿಲ್ಲ?
"ಹಾಗಾದರೆ ನಿಮ್ಮ ಜಾತಕ ಒ೦ದಿಷ್ಟು ತ೦ದ್ಕೊಡಿ."
"ಜಾತಕ ಇಲ್ವಲ್ಲಾ."
"ಊರಲ್ಲೂ ಇಲ್ವೆ?"
"ಇದೆ. ತರಿಸ್ಕೊಡ್ತೀಸಿ."
.......ಆ ಬಳಿಕ ಕೆಲವು ದಿನ ರ೦ಗಮ್ಮ ಗೆಲುವಾಗಿದ್ದರು. ಯಾರಿಗೂ ಅವರು
ಬಾಯಿ ಬಿಟ್ಟು ಏನನ್ನೂ ಹೇಳಲಿಲ್ಲ. ಗುಪ್ತ ಸ೦ಧಾನಗಳು ಮಾತ್ರ ನಡೆದುವು.
......ಅಹಲ್ಯೆ ಗ೦ಡನ ಮನೆಗೆ ಹೊರಟು ಹೋದ ಬಳಿಕ, ರಾಧೆ ಚ೦ಪಾವತಿಗೆ
ಹೆಚ್ಚು ಆಪ್ತಳಾದ ಸ್ನೇಹಿತೆಯಾದಳು. ಆಕೆಗೆ ಹಾಡು ಬರುತ್ತಿರಲಿಲ್ಲ. ಆದರೆ
ಹಾಡಿನ ಪುಸ್ತಕವನ್ನು ತ೦ದು ಆಕೆ ಚ೦ಪಾವತಿಗೆ ಕೊಡುತ್ತಿದ್ದಳು. ಓದಲೆ೦ದು
ಕಾದ೦ಬರಿಗಳನ್ನು ತರುತ್ತಿದ್ದಳು.
ಶ೦ಕರನಾರಾಯಣಯ್ಯನೀಗ ಬೇಗನೆ ಮನೆಗೆ ಬರುತ್ತಿದ್ದ; ತಡವಾಗಿ ಕೆಲಸಕ್ಕೆ
ಹೋಗುತ್ತಿದ್ದ. ಚ೦ಪಾ ತು೦ಬಿದ ಗರ್ಭಿಣಿ. ಆತ ಹೊಸ ಗಡಿಯಾರ ಕೊ೦ಡು
ತ೦ದಿರಲಿಲ್ಲ. ಆದರೆ ಸಾಲಮಾಡಿ ಹೆ೦ಡತಿಯನ್ನು ಹೆರಿಗೆ ಆಸ್ಪತ್ರೆಗೆ ಸೇರಿಸಲು ಸಿದ್ಧ
ನಾಗಿದ್ದ.
"ಬೇಡವೇ ಬೇಡ! ಇಲ್ಲಿಯೇ ಹೆರಿಗೆಯಾಗಲಿ!" ಎ೦ದು ಚ೦ಪಾ ಹಟತೊಟ್ಟಳು.
ಅವರ ಮಗಳೀಗ ಪುಟ್ಟ ಹೆಜ್ಜೆಗಳನ್ನಿಡುತ್ತ, ತೊದಲು ಮಾತನಾಡುತ್ತಿದ್ದ
ದಿಟ್ಟೆ. ಆಕೆಯನ್ನು ಪ್ರೀತಿಯಿ೦ದ ನೋಡುತ್ತ ಶ೦ಕರನಾರಾಯಣಯ್ಯ ಹೇಳಿದ:
"ಬರೋದೂ ಹೆಣ್ಣು ಮಗುವೇ ಆದರೆ ಎಷ್ಟು ಚೆ೦ದ!"
ಈ ಗ೦ಡಸಿನ ಆಳ ಕ೦ಡವರಿಲ್ಲ ಎ೦ಬ೦ತೆ ಚ೦ಪಾ ದುರುಗುಟ್ಟಿಕೊ೦ಡು ಆತ
ನನ್ನೇ ನೋಡಿ ಅ೦ದಳು:
"ಏನೂ ಬೇಡಿ. ನ೦ಗೆ ಗ೦ಡು ಮಗೂನೇ ಬೇಕು."
"ಯಾಕೆ? ನಾನೆಲ್ಲಾದರೂ ಓಡಿಹೋದರೆ, ನಿನ್ನನ್ನು ಸಾಕೋದಕ್ಕಾದರೂ
ಇರ್ಲಿ೦ತಾನೋ?"
ಚ೦ಪಾ ತಾನು ಓದುತ್ತಿದ್ದ ಕಾದ೦ಬರಿಯನ್ನು ಕುಳಿತಲ್ಲಿ೦ದಲೇ ಆತನ ಎದೆಗೆ
ಎಸೆದಳು. ಬಿದ್ದ ರಭಸಕ್ಕೆ ಹೊದಿಕೆ ಮಡಚಿಹೋದ ಆ ಪುಸ್ತಕವನ್ನೆತ್ತಿಕೊ೦ಡು ಆತ
ನೆ೦ದ:
"ಚ೦ಪಾ ಕಪಿಚೇಷ್ಟೆ ಮಾಡ್ದೆ ಸುಮ್ನಿರು. ಆಯಾಸ ಆಗುತ್ತೆ ಅನ್ನೋದಾದ್ರೂ. ತಿಳೀಬೇಡ್ವೆ?"
ಆಕೆ ಸುಮ್ಮನಾದಳು. ಆತ ಆ ಪುಸ್ತಕವನ್ನು ನೋಡುತ್ತ ಹೇಳಿದ:
"ಹೀಗೆಲ್ಲಾ ನೀನು ಪುಸ್ತಕ ಎಸೆದ್ರೆ, ಮುಂದೆ ರಾಧಾ ತಂದುಕೊಡೋದೇ
ಇಲ್ಲ, ನೋಡು."
ಚಂಪಾವತಿಗೆ ರಾಧೆಯ ನೆನಪಾಯಿತು. ತಾನು ಪ್ರಸ್ತಾಪಿಸಬೇಕಾಗಿದ್ದ ವಿಷಯ
ವನ್ನು ಯೋಚಿಸಿ ಆಕೆ ಮುಗುಳ್ನಕ್ಕಳು. ಆ ಮುಗುಳುನಗುವನ್ನು ನೋಡಿ ಶಂಕರ
ನಾರಾಯಣಯ್ಯ ಅದರ ಹಿಂದೆ ಬರುತ್ತಲಿದ್ದ ಮಾತುಗಳನ್ನು ನಿರೀಕ್ಷಿಸಿದ.
"ನಿಮ್ಮ ಸ್ನೇಹಿತ ಚಂದ್ರಶೇಖರಯ್ಯನಿಗೆ ಇನ್ನೂ ಮದುವೆ ಇಲ್ಲ ಅಲ್ವೆ?"
"ಇಲ್ಲ, ನಿನ್ನ ಮಗಳ‍್ನ ಕೊಡೋಣಾಂತಿದೀಯೇನು?"
"ರಾಧಾ ಮನೆ ಪಕ್ಕದಲ್ಲೇ ಆತ ಇರೋದು."
"ಪಾಪ! ಇವತ್ತು ಗೊತ್ತಾಯ್ತೇನೊ?"
ಚಂಪಾ ಮಾತನಾಡಲಿಲ್ಲ. ಅಹಲ್ಯೆಗೆ ಆದ ಅನುಭವ ರಾಧೆಗೂ ಆಗಬಹು
ದೆಂದು ಆಕೆ ಹೆದರಿದಳು. ಹಾಗಾಗಬಾರದು, ಹಾಗಾಗದಿರಲಿ-ಎಂಬ ಹಾರೈಕೆ
ಅವಳದು.
ಚಂಪಾ ತಲೆ ಎತ್ತಿ ಗಂಡನ ಮುಖವನ್ನೇ ದಿಟ್ಟಿಸಿದಳು.
ಶಂಕರನಾರಾಯಣಯ್ಯ ಮೃದುವಾದ ಸ್ವರದಲ್ಲಿ ಮಾತನಾದಡಿದ:
"ಚಂಪಾ, ಸುಮ್ನೆ ಏನಾದರೂ ಯೋಚ್ನೆ ಮಾಡ್ಬೇಡ."
"ನಿಮ್ಮಸ್ನೇತ. ಯಾವತ್ತಾದರೂ ಮಾತನಾಡಿಸಿ ನೋಡಿ.
"ಹೂಂ."
ಚಂಪಾವತಿಗೆ ಸಮಾಧಾನವಾಯಿತು.
.........ಆ ವಾರವೇ ಒಂದು ಸಂಜೆ ಚಂದ್ರಶೇಖರಯ್ಯ ಹೋಟೆಲಿನಲ್ಲಿ ಶಂಕರ
ನಾರಾಯಣಯ್ಯನಿಗೆ ಕಾಣಲು ಸಿಕ್ಕಿದ. ಚಂಪಾವತಿ ಹೇಳಿದ್ದುದನ್ನು ನೆನಸಿಕೊಳ್ಳುತ್ತ
ಶಂಕರನಾರಾಯಣಯ್ಯ ಮಾತು ಹೇಗೆ ಆರಂಭಿಸಬೇಕೆಂದು ಚಡಪಡಿಸಿದ. ಚಂದ್ರ
ಶೇಖರಯ್ಯ ಏನೆಂದುಕೊಳ್ಳುವನೋ ಎಂದು ಸಂಕೋಚವೆನಿಸಿತು. ಹೆಸರು-ಹಲಿಗೆ
ಬರೆದುಕೊಟ್ಟದ್ದಕ್ಕಾಗಿ ಚಂಪಾ "ನಿಮ್ಮ ಸ್ನೇಹಿತ" ಎಂದು ಹೇಳುತ್ತಿದ್ದಳಾದರೂ,
ಹೇಳಿಕೊಳ‍್ಳುವಂತಹ ‌ಸ್ನೇಹವೇನೂ ಅವರ ನಡುವೆ ಬೆಳೆದಿರಲಿಲ್ಲ. ಹೆಚ್ಚಾಗಿ ಬೆರೆ
ಯಲು ಬಿಡುವು ದೊರೆಯದೆ ಇರುತ್ತಿದ್ದುದೇ ಅದಕ್ಕೆ ಕಾರಣ.
ಚಂದ್ರಶೇಖರಯ್ಯ ಸಿಗರೇಟು ಕೊಟ್ಟ. ಶಂಕರನಾರಾಯಣಯ್ಯ ಕಡ್ಡಿಕೊರೆದು
ಇಬ್ಬರದಕ್ಕೂ ಹಚ್ಚಿದ. ಹೋಟೆಲಿನ ಆ ಮೂಲೆಯಲ್ಲಿ ಅಷ್ಟಾಗಿ ಜನರೂ ಇರಲಿಲ್ಲ.
"ಇನ್ನೊಂದು ಒನ್-ಬೈ-ಟು ಕಾಫಿ ತಗೊಳೋಣ‍್ವೆ?" ಎಂದು ಚಂದ್ರಶೇಖ
ರಯ್ಯ ಕೇಳಿದ. ಶಂಕರನಾರಾಯಣಯ್ಯ ಸಮ್ಮತಿಸೂಚಕವಾಗಿ ತಲೆಯಾಡಿಸಿದ. ಮಾತು ಆರಂಭಿಸಲು ವಾತಾವರಣ ಅನುಕೂಲವಾಗಿದ್ದಂತೆ ಕಂಡಿತು.
"ಚಂದ್ರಶೇಖರಯ್ಯ, ನಿಮ್ಮನ್ನು ಒಂದು ವಿಷಯ ಕೇಳ‍್ಬೇಕೂಂತ. ತಪ್ಪು
ತಿಳ್ಕೊಳ್ಳೊಲ್ಲ ತಾನೆ?"
"ಕೇಳಿ, ಅದಕ್ಕೇನು?"
"ವಿಷಯ ವೈಯಕ್ತಿಕ."
"ಏನೂ ಪರವಾಗಿಲ್ಲ. ನಾನಂತೂ ನನ್ನ ವೃತ್ತೀಲಿ ಯಾವಾಗ್ಲೂ ವೈಯಕ್ತಿಕ
ಪ್ರಶ್ನೆನೇ ಕೇಳೋದು."
ಶಂಕರನಾರಾಯಣಯ್ಯನಿಗೆ ನಗು ಬಂತು.
"ನೀವು ಯಾಕೆ ಮದುವೆ ಮಾಡ್ಕೋಬಾರದು?"
"ಮಾಡ್ಕೊಂಡರಾಯ್ತು. ಮದುವೆಯಾದೋರೆಲ್ಲ ವಠಾರದಲ್ಲಿ ಅನುಭವಿ
ಸ್ತಿರೋ ಸುಖ ಕಾಣಿಸೋಲ್ವೆ?"
"ಅದೇನೋ ನಿಜ ಅನ್ನಿ."
ಶಂಕರನಾರಾಯಣಯ್ಯನಿಗೆ ಗೊತ್ತಿತ್ತು. ಅದು ಪೂರ್ತಿ ನಿಜವಾಗಿರಲಿಲ್ಲ.
ತಾನಿರಲಿಲ್ಲವೆ? ತಾನು ದಾಂಪತ್ಯ ಜೀವನವನ್ನು ರೌರವ ನರಕವೆಂದು ಭಾವಿಸಿದ್ದನೆ?
ಆದರೆ, ಸಂಸಾರ ಸುಖದ ವಿಷಯವಾಗಿ ತನ್ನ ಅಭಿಪ್ರಾಯ ಬೇರೆ ಎಂಬುದನ್ನು ಅಲ್ಲಿ
ಬಹಿರಂಗವಾಗಿ ಹೇಳಲು ಆತ ಸಮರ್ಥನಾಗಿರಲಿಲ್ಲ.
ಬಲು ಹಿತಕರವಾಗಿದ್ದ ಆ ಸಂಭಾಷಣೆಯನ್ನು ದೀರ್ಘಗೊಳಿಸೋಣವೆಂದು
ಚಂದ್ರಶೇಖರಯ್ಯ ಹಾಗೆ ಹೇಳಿದ್ದರೆ, ಆ ಶಂಕರನಾರಾಯಣಯ್ಯ ಮಾತನ್ನೇ ನಿಲ್ಲಿಸಿ
ಬಿಟ್ಟಿದ್ದ! ಆತನ ಬಾಯಿ ತೆರೆಸಲು ತಾನೇ ಮಾತನಾಡಬೇಕಾಯಿತು.
"ಆದರೆ, ಗಂಡಸಾಗಲಿ ಆಯುಷ್ಯವೆಲ್ಲ ಒಂಟಿಯಾಗೇ ಇರಬೇಕೊಂತ ನನ್ನ
ಅಭಿಪ್ರಾಯವಲ್ಲ."
ಅಷ್ಟು ಹೇಳಿ, ಹುಡುಗ ಮೇಜಿನ ಮೇಲಿರಿಸಿ ಹೋದ ಕಾಫಿಯ ಗ್ಲಾಸನ್ನು
ಚಂದ್ರಶೇಖರಯ್ಯ ಕೈಗೆತ್ತಿಕೊಂಡ.
ನಿರಾಶನಾಗಬೇಕಾದ್ದಿಲ್ಲ ಎಂದುಕೊಳ‍್ಳುತ್ತ ಶಂಕರನಾರಾಯಣಯ್ಯ ಹೇಳಿದ:
"ನೀವು ಮದುವೆ ಮಾಡ್ಕೋಳ್ಳೋ ಹಾಗಿದ್ದರೆ ನಮ್ಮ ಕಡೇದೊಂದು ಹುಡುಗಿ
ಇದೆ."
ಚಂದ್ರಶೇಖರಯ್ಯನ ಮುಖ ಒಮ್ಮೆಲೆ ಗಂಭೀರವಾಯಿತು. ಇನ್ನು ಆ ಮಾತು
ಕತೆಯನ್ನು ಬರಿಯ ತಮಾಷೆಯಾಗಿ ಪರಿಗಣಿಸುವಂತಿರಲಿಲ್ಲ.
"ಕ್ಷಮಿಸಿ ಶಂಕರನಾರಾಯಣಯ್ಯ, ನನಗೆ ಹುಡುಗಿ ಗೊತ್ತಾಗಿದೆ. ಇನ್ನು
ನಾಲ್ಕು ತಿಂಗಳಲ್ಲೇ ಮದುವೆ."
"ಸಂತೋಷ!"
ಶಂಕರನಾರಾಯಣಯ್ಯ ನಕ್ಕರೂ, ರಾಧೆಗಾಗಿ ಚಂಪಾವತಿಯನ್ನು ಸಂತೋಷ ಪಡಿಸುವುದಕ್ಕಾಗಿ ತಾನೇನನ್ನೂ ಮಾಡಲಾಗಲಿಲ್ಲವಲ್ಲ ಎಂದು ಆತನಿಗೆ ಸಂಕಟವಾಯಿತು.
ಆ ದುಃಖವನ್ನು ನುಂಗುವಂತೆ ಗ್ಲಾಸಿನಲ್ಲಿದ್ದ ಕಾಫಿಯನ್ನು ಒಂದೇ ಗುಟುಕಿಗೆ ಕುಡಿದ.
ಬಲವಾಗಿ ಒಂದು ದಮ್ ಸಿಗರೇಟನ್ನು ಸೇದಿದ.
ಶಂಕರನಾರಾಯಣಯ್ಯನ ಕಡೆಯ ಹುಡುಗಿಯ ಬಗ್ಗೆ ಚಂದ್ರಶೇಖರಯ್ಯನಿಗೆ
ಕನಿಕರವಾಯಿತು.
"ಸೋ ಸಾರಿ ಶಂಕರನಾರಾಯಣಯ್ಯ. ನನ್ನದೆಲ್ಲ ಆಗ್ಹೋಯ್ತು."
"ಏನೂ ಪರವಾಗಿಲ್ಲ. ನೀವು ಮದುವೆ ಮಾಡ್ಕೋಬೇಕೂಂತ ನಿರ್ಧಾರ
ಮಾಡಿದೀರಲ್ಲ-ಅದೇ ಸಂತೋಷ."
"ನನ್ನ ಗೊತ್ತಿನಲ್ಲಿ ಯಾವುದಾದರೂ ಗಂಡು ಇದ್ದರೆ ಹೇಳ್ತೀನಿ."
"ಓ ಯೆಸ್, ದಯವಿಟ್ಟು ಹೇಳಿ. ಉಪಕಾರವಾಗುತ್ತೆ."
"ಹೊರಡೋಣ್ವೊ?ಮನೆ ಕಡೆ ತಾನೆ?"
"ಹೌದು.ನಡೀರಿ."
......ಮನೆ ಸೇರಿದ ಮೇಲೆ ಶಂಕರನಾರಾಯಣಯ್ಯ ಬೇಸರದ ಧ್ವನಿಯಲ್ಲಿ
ಹೇಳಿದ:
"ಚಂದ್ರಶೇಖರಯ‍್ಯನಿಗೆ ಆಗ್ಲೇ ಮದುವೆ ಗೊತ‍್ತಾಗ್ಬಿಟ್ಟಿದೆ ಕಣೇ."
"ಆ ವಿಷಯ ನಿಮಗಿಂತ ಮುಂಚೆ ನನಗೇ ತಿಳೀತು."
ಸಂತೋಷದ ಧ್ವನಿ. ಅದು ಅರ್ಥವಾಗದೆ ಹೆಂಡತಿಯ ಮುಖವನ್ನು ಆತ
ಮಿಕಿಮಿಕಿ ನೋಡಿದ. ಚಂಪಾ ಕೇಳಿದಳು:
"ಅದ್ಯಾಕೆ ಹಾಗೆ ನೋಡ್ತಿದೀರಾ?"
"ರಾಧೆ ವಿಷಯ ಆತನ ಜತೇಲಿ ಪ್ರಸ್ತಾಪಿಸ್ಬೇಕೂಂತ ನೀನು ಹೇಳಿದ್ದ ಹಾಗೆ
ನೆನಪು."
"ಹೌದು. ಏನಾಯ್ತು?"
"ಏನೂ ಆಗೋದು? ನೀನು ಸಲಹೆ ಮಾಡಿದ್ದೇ ತಡವಾಯ್ತು. ಅಂತೂ ರಾಧೆಗೆ
ಭಾಗ್ಯ ಇಲ್ಲ."
"ರಾಧೆಗೆ ಭಾಗ್ಯ ಇಲ್ಲ? ಅದೇನ್ರೀ ಹಾಗಂದ್ರೆ? ಅವಳೇ ಕಣ್ರೀ ಹುಡುಗಿ!"
"ಯಾರು-ಚಂದ್ರಶೇಖರಯ್ಯ..."
"ಮದುವೆ ಪ್ರಸ್ತಾಪ ಮಾಡೋಕೆ ಹೋದೋರು ಹುಡುಗಿ ಯಾರೂಂತ ಕೂಡಾ
ಕೇಳ್ಲಿಲ್ವೆ ನೀವು?"
'ಬೇಸ್ತು ಬಿದ್ದ' ಗಂಡನನ್ನು ಕಂಡು ಚಂಪಾವತಿಗೆ ಮೋಜೆನಿಸಿತು. ಆಕೆ ಬಿದ್ದು
ಬಿದ್ದು ನಕ್ಕಳು. ಆದರೆ ನಗೆಯ ಸುಖವನ್ನು ಬೇಕಾದ ಹಾಗೆ ಅನುಭವಿಸಲು ಆಕೆಯ ದೇಹ ಸಿದ್ಧವಿರಲಿಲ್ಲ. ಉಸಿರಿಗಾಗಿ ಆಕೆ ಅರ್ಧದಲ್ಲೇ ತಡೆದು ನಿಂತಳು:

24
ಹೆಂಡತಿಯ ದೇಹಸ್ಥಿತಿಯನ್ನು ಗಮನಿಸುತ್ತ ಗಂಡನೆಂದ:

"ಅಂತೂ ನಿನ್ನ ಬಯಕೆ ಈಡೇರಿತೊ ಇಲ್ವೊ?"
"ಆದರೆ ಯಾರಿಗೂ ಹೇಳ್ಬೇಡಿ. ಇದು ರಹಸ್ಯ!"
ಹಿರಿಯರಿಗೆ ತಿಳಿಯದೆಯೇ ಏನಾದರೂ ಸಂಭವಿಸಿದೆಯೋ ಏನೋ ಅನ್ನಿಸಿತು ಶಂಕರನಾರಾಯಣಯ್ಯನಿಗೆ.
"ಹಾಗಂದ್ರೆ?"
"ರಂಗಮ್ಮ ಬಂದು ಗುಟ‍್ಟಾಗಿ ಹೇಳಿದ್ರು. ಅವರದೇ ಅಂತೆ ರಾಯಭಾರ. ಆದರೆ
ಇನ್ನೂ ಎರಡು ತಿಂಗಳು ಯಾರಿಗೂ ಹೇಳ್ಬಾರ್ದು ಅಂದ್ರು."
"ಹಾಗೋ?"
"ಮೀನಾಕ್ಷಮ್ಮ, ಕಮಲಮ್ಮ, ಪದ್ಮಾವತಿ, ಕಾಮಾಕ್ಷಿ-ಪ್ರತಿಯೊಬ್ಬರ
ಹತ್ರಾನೂ ಹಾಗೇನೇ ಗುಟ್ಟಾಗಿ ರಂಗಮ್ಮ ಹೇಳಿ ಹೋದ್ರು."
ಇದು ತನ್ನ ಸರದಿಯೆಂದು, ಶಂಕರನಾರಾಯಣಯ್ಯ ಬಿದ್ದು ಬಿದ್ದು ನಕ್ಕ.

೨೦

ನಾರಾಯಣಿ ಸತ್ತು ಒಂದು ವರ್ಷವಾಗಿತ್ತು ಆಗಲೆ. ಪ್ರತಿಯೊಬ್ಬರ ವಯಸ್ಸೂ
ಹಿಂದಿಗಿಂತ ಒಂದು ವರ್ಷ ಹೆಚ್ಚಿತ್ತು.
"ಎಷ್ಟು ಬೇಗ ಕಾಲ ಕಳೆದ್ಹೋಗುತ್ತೆ!" ಎಂದು ರಂಗಮ್ಮ ತಮ್ಮಷ್ಟಕ್ಕೇ
ಆಶ್ಚರ್ಯ ವ್ಯಕ್ತಪಡಿಸಿದರು.
ಉಪಾಧ್ಯಾಯ ಲಕ್ಷ್ಮೀನಾರಾಯಣಯ್ಯಗೆ ಮಾಗಡಿಗೆ ವರ್ಗವಾದ ವಾರ್ತೆ
ಬಂತು. ಒಬ್ಬರೇ ಹೋದರಾಯಿತೆಂದು ಮೊದಲು ಯೋಚಿಸಿದ್ದರೂ ತೀರ್ಮಾನ
ಮಾಡುವ ಹೊತ್ತು ಬಂದಾಗ ಸಂಸಾರವನ್ನೂ ಜತೆಯಲ್ಲೇ ಕರೆದೊಯ್ಯುವುದು
ಮೇಲೆಂದು ಅವರು ನಿರ್ಧರಿಸಿದರು.
"ಈ ತಿಂಗಳ ಕೊನೇಲಿ ಮನೆ ಖಾಲಿ ಮಾಡ್ತೀನಿ ರಂಗಮ್ನೋರೆ," ಎಂದು
ಲಕ್ಷ್ಮೀನಾರಾಯಣಯ್ಯ ತಿಳಿಸಿದರು.
"ಬೆಂಗಳೂರಿಗೇ ವಾಪಸು ವರ್ಗವಾದಾಗ ನಿಮ್ಮ ವಠಾರದಲ್ಲೇ ಈ ಮನೆಯನ್ನೇ
ನೀವು ಕೊಡ್ಬೇಕು!" ಎಂದು ವಿನಂತಿಯನ್ನೂ ಮಾಡಿದರು.
"ಆಗಲಪ್ಪಾ ಆಗಲಿ," ಎಂದು ರಂಗಮ್ಮ ಅನ್ನದಿರಲಿಲ್ಲ.
ಆದರೆ ಅವರ ವಯಸ್ಸು ಆಗಲೆ ಎಣಿಕೆ ಹಾಕಿತು; ಎಡಬದಿಯ ಮೊದಲ ಮನೆ
ಗಿನ್ನು ಹತ್ತೊಂಭತ್ತು ರೂಪಾಯಿ ಬಾಡಿಗೆ; ಬೇಗನೆ ವಿವಾಹವಾಗಲಿರುವ ಚಂದ್ರ ಶೇಖರಯ್ಯನಿಗೆ ಅದನ್ನು ಕೊಡಬೇಕು; ಜಯರಾಮುಗೆ ಮದುವೆಯಾಗಿ ಆತ ಪ್ರತ್ಯೇಕ
ಸಂಸಾರ ಹೂಡುವವರೆಗೆ ಅವರೆಲ್ಲ ಜತೆಯಾಗಿ ಇದ್ದರೂ ಇದ್ದರೇ. ಅಂತೂ ಮೇಲಿನ
ಕೊಠಡಿ ಮನೆಗಳು ಖಾಲಿಯಾದರೆ ಅವುಗಳನ್ನೆಲ್ಲಾ ಓದುವ ಹುಡುಗರಿಗೇ ಬಿಟ್ಟುಬಿಡ
ಬೇಕು. ಬೇಸಗೆಯ ರಜಾದಲ್ಲಿ ಹುಡುಗರಿಂದ ಬಾಡಿಗೆ ಸಿಗುತ್ತಿರಲಿಲ್ಲ. ಹಾಗೆ ನಷ್ಟ
ವಾಗದಂತೆ, ತಿಂಗಳ ಬಾಡಿಗೆಯನ್ನೇ ಸ್ವಲ್ಪ ಹೆಚ್ಚಿಸಿದರಾಯ್ತು...
ಚಂದ್ರಶೇಖರಯ್ಯನೊಡನೆ ಇದನ್ನೆಲ್ಲ ಮಾತನಾಡಿ, ಇನ್ನೆರಡು ದಿನ ಬಿಟ್ಟು
ಕೊಂಡು 'ಮನೆ ಬಾಡಿಗೆಗೆ ಇದೆ' ಬೋರ್ಡನ್ನು ಹೊರಗೆ ತೂಗಹಾಕುವುದು ಮೇಲೆಂದು
ಅವರು ಅಂದುಕೊಂಡರು.
...ಚಂಪಾವತಿಗೆ ಬೇನೆ ಬರಿತ್ತಿತ್ತು. ವಠಾರದವರೆಲ್ಲಾ "ನಾವು ನೋಡ್ಕೋ
ತೇವೆ," "ನಾವು ನೋಡ್ಕೋತೇವೆ" ಎಂದು ಆಶ್ವಾಸನೆ ಕೊಟ್ಟರೂ ಶಂಕರನಾರಾ
ಯಣಯ್ಯ ದಾದಿಯೊಬ್ಬಳನ್ನು ಗೊತ್ತುಮಾಡಿದ. ಆ ದಾದಿ ತಮ್ಮ ಜನವಲ್ಲವೆಂದು
ತಿಳಿದರೂ ವಠಾರದವರು ಆಕ್ರೋಶ ಮಾಡಲಿಲ್ಲ.
ಆ ಸಂಜೆ ಪೋಲೀಸ್ ರಂಗಸ್ವಾಮಿ ಕೆಂಗಣ್ಣು ಉರಿಸಿಕೊಂಡು ಮನೆಗೆ ಬಂದ.
ರಾಜಾ ಮಿಲ್ಲಿನೆದುರು 'ಕೂಲಿಕಾರರ ಗಲಾಟೆ' ಆಗಿತ್ತು. ಸೇರಿದ್ದ ಗುಂಪನ್ನು ಚೆದುರಿ
ಸಲು ಪೋಲೀಸರು ಲಾಠೀ ಪ್ರಹಾರ ಮಾಡಿದ್ದರು. ರಂಗಸ್ವಾಮಿಯೂ ಲಾಠಿ ತಿರುಗಿಸಿ
ಬಡಜನರನ್ನು ಹೊಡೆದಿದ್ದ. ತನ್ನನ್ನು ಎಲ್ಲರೂ ವೈರಿಯಂತೆ ಕಾಣುವರೆಂಬ ತಿಳಿವಳಿಕೆ
ಯಿಂದಲೇ ಆತ ಮನೆಗೆ ಬಂದ. ಏನೋ ಕುಂಟು ನೆಪ ತೆಗೆದು ಹೆಂಡತಿಯ ಮೇಲೆ
ರೇಗಾಡಿದ .ಆಕೆಯನ್ನು ಹಿಡಿದು ಬಲವಾಗಿ ಥಳಿಸಿದ. ಗದ್ದಲವಾಯಿತು. ರಂಗಮ್ಮನ
ವಠಾರದಲ್ಲಿ ಏನೋ ಆಗುತ್ತಿದೆಯೆಂದು ಬೀದಿಯಲ್ಲಿ ನಡೆದು ಹೋಗುತ್ತಿದ್ದವರು ಕ್ಷಣ
ಕಾಲ ತಡೆದು ನಿಂತು, ಬರಿಯ ಮನೆ ಜಗಳವೆಂದು ಮುಂದುವರಿದರು.
ಎರಡು ದಿನಗಳಿಂದ ರಾಮಚಂದ್ರಯ್ಯ ಮರೆಮಾಡಿದ್ದ ಕೆಟ್ಟ ಸುದ್ದಿಯೂ ಆ
ಸಂಜೆ ಹೊರಬಂತು.
'ರಾಮಚಂದ್ರಯ್ಯನ ಕೆಲಸ ಹೋಯಿತಂತೆ' ಎಂಬ ಕಹಿವಾರ್ತೆ ಮನೆಯಿಂದ
ಮನೆಗೆ ಸಂಚಾರ ಮಾಡಿತು.
ನಿಜವಾಗಿ ಸುದ್ದಿ ಅಷ್ಟೇ ಆಗಿರಲಿಲ್ಲ. ದಾಸ್ತಾನುಗಳ ಲೆಕ್ಕ ಸರಿಯಾಗಿಲ್ಲವೆಂದು
ಎರಡು ಮೂರು ಸಾರೆ ಆಡಳಿತದವರು ರಾಮಚಂದ್ರಯ್ಯನಿಗೆ ಎಚ್ಚರಿಕೆ ಕೊಟ್ಟಿದ್ದರು.
ತನ್ನ ಸಹಾಯಕ ಏನಾದರೂ ಮಾಡುತ್ತಿರಬಹುದೆಂದು ರಾಮಚಂದ್ರಯ್ಯ ಸಂಶಯ
ಗ್ರಸ್ತನಾದ. ಆದರೆ ಸಂಶಯವನ್ನು ಸಿದ್ದಪಡಿಸಿಕೊಡುವ ಯಾವ ಪುರಾವೆಯೂ
ಸಿಗಲಿಲ್ಲ. ಆಡಳಿತದವರು ಒಮ್ಮಿಂದೊಮ್ಮೆಲೆ ರಾಮಚಂದ್ರಯ್ಯನನ್ನು ಕೆಲಸದಿಂದ
ವಜಾ ಮಾಡಿದರು. ಅದು ಅಕ್ರಮವೆಂದು ದೂರುವ ಹಾಗೂ ಇರಲಿಲ್ಲ. ತನ್ನ
ಮೇಲಿನ ಆಪಾದನೆಗಳನ್ನು ಆಡಳಿತದವರು ಸುಲಭವಾಗಿ ರುಜುಪಡಿಸುವರೆಂಬುದು
ಆತನಿಗೆ ಗೊತ್ತಿತ್ತು.
......ಇಷ್ಟೆಲ್ಲಾ ಗಲಿಬಿಲಿ ವಠಾರದಲ್ಲಿದ್ದರೂ ಹಂಗಸರೆಲ್ಲರ ಗಮನ ಕೊನೆಯ
ಮನೆಯ ಕಡೆಗೇ ಇತ್ತು.
ನಾರಾಯಣಿ ಮಲಗಿದ್ದ ಕಡೆಯೆಲ್ಲ,-ಅದಕ್ಕಿದಿರು ಗೋಡೆಯ ಬಳಿ ಚಂಪಾವತಿ
ಯನ್ನು ಮಲಗಿಸಿದ್ದರು.
ವಠಾರದಲ್ಲಿ ದೀಪ ಆರಿಸದೇ ಇದ್ದ ಆ ರಾತ್ರೆಯೆಲ್ಲ ಸಣ್ಣನೆ ನೋವು ನರಳಾಟ
ಕೊನೆಯ ಮನೆಯಿಂದ ಕೇಳಿಸುತ್ತಿತ್ತು.
ಬಹಳ ಹೊತ್ತು ರಂಗಮ್ಮನಿಗೆ ನಿದ್ದೆ ಬರಲಿಲ್ಲ. ನಡುರಾತ್ರೆಯಲ್ಲೊಮ್ಮೆ
ಅವರೆದ್ದು ಗೋಡೆ ಮುಟ್ಟಿಕೊಂಡು ಓಣಿಯುದ್ದಕ್ಕೂ ಹೋಗಿ ಬಂದರು. ವಠಾರದಿಂದ
ಹೊರಡುತ್ತಿದ್ದ ನಿದ್ದೆಯ ಉಸಿರಾಟದ ಗೊರಕೆಯ ಸ್ವರಗಳು ಯಾವುವೂ ಅವರಿಗೆ
ಅಪರಿಚಿತವಾಗಿರಲಿಲ್ಲ.
...ಒಮ್ಮೆಲೆ ಕಾಮಾಕ್ಷಿ ಕೂಗಿಕೊಂಡಳು. ಆಕೆಗೆ ಕೆಟ್ಟ ಕನಸು ಬಿದ್ದಿತ್ತು.
ನಾರಾಯಣನಿಗೂ ಎಚ್ಚರವಾಯಿತು.
"ಕಾಮೂ, ಕಾಮೂ, ಏನೇ ಅದು?"
ಬೆವತು ಹೋಗಿತ್ತು ಆಕೆಯ ಮೈ. ಗಂಟಲು ಆರಿತ್ತು.
"ನಾರಾಯಣಿ ಕಾಹಿಲೆ ಮಲಗಿದ್ದ ಕನಸು ಬಿತ್ತು."
"ಅಷ್ಟೇ ತಾನೆ? ಹಗಲೆಲ್ಲಾ ಅದೇ ಯೋಚ್ನೇ ಮಾಡ್ತಾ ಇದ್ದೆಯೋ
ಏನೋ....."
"ಚಂಪಾವತಿಗೆ ಹೆರಿಗೆ ನೋವು ಅಲ್ವೆ?"
"ಹೌದು. ನಾಳೆ ಬೆಳಿಗ್ಗೆ ಪುತ್ಥಳಿಯಂಥ ಒಂದು ಹೊಸ ಮಗು ವಠಾರಕ್ಕೆ ಬರುತ್ತೆ."
ಕಾಮಾಕ್ಷಿ ಗಂಡನ ಸಮೀಪಕ್ಕೆ ಸರಿದಳು. ಏನನ್ನೂ ಮಾತನಾಡಲಿಲ್ಲ.
"ಅವರಾದ್ಮೇಲೆ ನಿನ್ನ ಸರದಿ ಕಾಮೂ..."
...ರಾತ್ರಿ ಕಳೆದು ಬೆಳಗಾಯಿತು. ಹೆರಿಗೆಯಾಗಿರಲಿಲ್ಲ
ವಠಾರದವರು ದಿನನಿತ್ಯದ ಕೆಲಸ ಕಾರ್ಯಗಳನ್ನೆಲ್ಲ ಮರೆತಂತೆ ವರ್ತಿಸಿದರು.
ಚಂದ್ರಶೇಖರಯ್ಯ ಲೇಡಿ ಡಾಕ್ಟರೊಬ್ಬರನ್ನು ಕರೆತಂದ.
ಹೆಂಗಸರು ಹೆಬ್ಬಾಗಿಲಿನಾಚೆ ಹೊರ ಅಂಗಳದಲ್ಲಿ ಗುಂಪು ಕಟ್ಟಿ ನಿಂತು ಗುಸು
ಗುಸು ಮಾತನಾಡಿದರು.
ರಂಗಮ್ಮ ಹಲ್ಲು ಕಡಿಯುತ್ತ, ಗಂಟಲಿನಿಂದ ಸ್ವರ ಹೊರಡಿಸುತ್ತಾ, ಏದುಸಿರು
ಬಿಟ್ಟುಕೊಂಡು, ನಡೆಗೋಲಿನಿಂದ ಟಕ್ ಟಕ್ ಸದ್ದು ಮಾಡುತ್ತ, ಅತ್ತಿತ್ತಾ ಬೆನ್ನು
ಬಾಗಿಸಿ ನಡೆದರು.
ಬಹಿರಂಗವಾಗಿ ಅವರೇನನ್ನೂ ಹೇಳಲಿಲ್ಲವಾದರೂ ಅವರ ಅಂತರ್ಯದ ಧ್ವನಿ
ನುಡಿಯುತ್ತಿತ್ತು:

"ಅದೇ ಮನೆಯಲ್ಲಿ ಹೆರಿಗೆಗೆ ತಾನು ಬಿಡಬಾರದಾಗಿತ್ತು.ಆಸ್ಪತ್ರೆಗೇ ಕಳಿಸ್ಬೇ
ಕಾಗಿತ್ತು." ಬೇಡ ಬೇಡವೆಂದರೂ, ಒಂದು ವರ್ಷದ ಹಿಂದೆ ನಾರಾಯಣಿ ಆ ಮನೆಯಲ್ಲಿ
ಸುಮಾರು ಅದೇ ಹೊತ್ತಿಗೆ ಪ್ರಾಣಸಂಕಟದಿಂದ ನರಳುತ್ತಿದ್ದ ನೆನಪು ಅವರನ್ನು ಕಾಡಿತು.
ಮೀನಾಕ್ಷಮ್ಮ ತನ್ನ ಮನೆಯ ಬಾಗಿಲಲ್ಲೆ, ಕೊನೆಯ ಮನೆಗೆ ಸಮೀಪವಾಗಿಯೆ,
ನಿಂತಳು.
ರಂಗಮ್ಮ ಕೊಳಾಯಿಯ ಬೀಗ ತೆಗೆದರು. ಆದರೆ ವಠಾರದವರು ಬಿಂದಿಗೆ-
ಬಕೀಟು-ತಟ್ಟೆಗಳ ಸಾಲನ್ನು ಕಟ್ಟಿರಲಿಲ್ಲ.
ವಠಾರದ ಜೀವನ ಅಸ್ತವ್ಯಸ್ತವಾಗಿತ್ತು.
ಚಂಪಾವತಿಯ ನರಳಾಟ ಹೆಚ್ಚಿದಂತೆ ಹೆಂಗಸರೆಲ್ಲಾ ಓಣಿಗೇ ಬಂದಿಳಿದರು.
ನರಳಾಟ ನಿಂತಿತು.'ಸುಖಪ್ರಸವ'ವಾಗಿತ್ತು ಚಂಪಾವತಿಗೆ.
ಆವರೆಗೂ ಮಗಳೊಡನೆ ಅಡುಗೆ ಮನೆಯಲ್ಲಿ ನಿಂತಿದ್ದ ಶಂಕರನಾರಾಯಣಯ್ಯ
ನಿಗೆ ದಾದಿ ಸುದ್ದಿ ಮುಟ್ಟಿಸಿದಳು.
ಆತ ಎಲ್ಲಾ ಆಯಾಸವನ್ನೂ ಮರೆತು ಮುಖವರಳಿಸಿಕೊಂಡು ಡಾಕ್ಟರರ ಅನು
ಮತಿ ಪಡೆದು ಮನೆಯಿಂದ ಹೊರಬಂದ.
ಆತನ ಮುಖ ನೋಡುತ್ತಲೆ ಎಲ್ಲರಿಗೂ ಸಮಾಧಾನವಾಯಿತು.
ರಂಗಮ್ಮ ಮನಸ್ಸಿನಲ್ಲೆ ಅಂದುಕೊಂಡರು:
"ಗಂಡು ಮಗೂಂತ ತೋರುತ್ತೆ. ಅದಕ್ಕೇ ಇಷ್ಟು ಖುಶಿಯಾಗಿದಾನೆ."
ಮಗು ಎಂತಹದೆಂದು ಕೇಳುವ ಕುತೂಹಲ ಎಲ್ಲರಿಗೂ ಇತ್ತು. ಆದರೆ
ತಮ್ಮೆಲ್ಲರಿಗಿಂತಲೂ ಹಿರಿಯರಾದ ರಂಗಮ್ಮ ಅಲ್ಲಿ ನಿಂತಿದ್ದಾಗ ಬೇರೆ ಹೆಂಗಸರು
ಕೇಳುವ ಹಾಗಿರಲಿಲ್ಲ.
ಏನನ್ನೂ ಹೇಳದೆ ಆ ಗಂಡಸು ಹಾಗೆಯೇ ನಿಂತಿದ್ದುದನ್ನು ಕಂಡು ರಂಗಮ್ಮ
ನಿಗೆ ರೇಗಿತು. ಆದರೆ ಅದನ್ನು ಅವರು ಹೊರಗೆ ತೋರ್ಪಡಿಸಲಿಲ್ಲ. ಪ್ರಕಾಶವಾಗಿ
ನಗುತ್ತಲೇ ಅವರು ಹೇಳಿದರು:
"ಎಂಥದಪ್ಪಾ ಮಗು? ರಾಜಕುಮಾರ ತಾನೇ?"
ಶಂಕರನಾರಾಯಣಯ್ಯ ನಗುತ್ತ ಹೇಳಿದ:
"ಇಲ್ಲ ರಂಗಮ್ನೋರೆ. ಸೌಭಾಗ್ಯಲಕ್ಷ್ಮಿ!"
ಆ ಹೆಂಗಸರೆಲ್ಲ ಒಂದು ಕ್ಷಣ ನಿರಾಶೆಯಾದಂತೆ ತೋರಿತು. ಆದರೆ ಆ ಗಂಡ
ಸಿನ ಉತ್ಸಾಹ ಕಂಡು ಭ್ರಮೆಗೊಂಡು, ಸುಖಪ್ರಸವದ ಸುವಾರ್ತೆಯನ್ನು ಸ್ವಾಗತಿಸಿ,
ಅವರೆಲ್ಲ ಮುಗುಳ್ನಕ್ಕರು. ಅವರಿಗನಿಸಿತು: ಈತ ವಿಚಿತ್ರ ಮನುಷ್ಯ. ಅಳುಮೋರೆ
ಹಾಕಿ 'ಹೆಣ್ಣು' ಅನ್ನೋ ಬದಲು, ನಗುನಗುತ್ತ 'ಸೌಭಾಗ್ಯಲಕ್ಷ್ಮಿ',ಅನ್ನೋದೆ?
ಗಂಭೀರ ಧ್ವನಿಯಲ್ಲಿ ವಠಾರದ ಒಡತಿ ರಂಗಮ್ಮನೆಂದರು:
"ಸೌಭಾಗ್ಯಲಕ್ಷ್ಮಿಯೇ ಸರಿ. ಹೆಣ್ಣು ಯಾವುದರಲ್ಲೂ ಗಂಡಸಿಗೆ ಕಮ್ಮಿ ಇಲ್ಲ.
ಸಂತೋಷ-ಸಂತೋಷ!"
ಓದಿದ ಬಳಿಕ

"ಓದಿಯಾಯಿತೆ?"
"ಓಹೋ!"
"ಹೇಗಿದೆ?"
"..............."
"ಸುಮ್ಮನಿದ್ದೀರಲ್ಲ?"
"ಹೇಗಿದೆ ಅಂತ ಹೇಳಲು ಸ್ವಲ್ಪ ಕಾಲಾವಕಾಶ ಬೇಕು."
"ಆಗಲಿ. ಸಂದೇಹಗಳೇನಾದರೂ ಇದ್ದರೆ ಕೇಳಿ."
".......ನಿಮ್ಮ ಈ ಕಾದಂಬರಿಗೆ ಕಥಾನಾಯಕ-ಕಥಾನಾಯಿಕೆ ಯಾರು?"
"ಹಲವರು!"
"ಆದರೆ ಸಾಮಾನ್ಯವಾಗಿ ನಮ್ಮ ಕಾದಂಬರಿಗಳಲ್ಲಿ ಹೀಗಿಲ್ಲ"
"ನಿಜ. ಕಾದಂಬರಿ ಈ ರೀತಿಯಾಗಿಯೂ ಇರಬಹುದು. ಅಲ್ಲದೆ, ಇದು ತೀರಾ
ಹೊಸತೂ ಅಲ್ಲ."
"ಈ ಕಾದಂಬರಿಯಲ್ಲಿರೋದು ವಠಾರ ಜೀವನ, ಅಲ್ಲವೆ?"
"ಹೌದು."
"ವಠಾರ ಜೀವನವನ್ನು ಚಿತ್ರಿಸಿದ್ದೇವೆಂದು ಈ ಮೊದಲೇ ಹೇಳಿಕೊಂಡವ
ರುಂಟು."
"ಗೊತ್ತು. ಆದರೆ ಜೀವನವನ್ನು ನೋಡುವ ದೃಷ್ಟಿಗಳಲ್ಲಿ ವ್ಯತ್ಯಾಸವಿರ್ತದೆ.
ಇಲ್ಲಿರುವುದು ನನ್ನ ದೃಷ್ಟಿ"
"ನೀವು ಕಾದಂಬರಿಯನ್ನು ಬರೆದ ಉದ್ದೇಶ?"
"ಕಾದಂಬರಿಗಳನ್ನು ಜನ ಯಾಕೆ ಓದ್ತಾರೆ? ಮನೋರಂಜನೆಗೇಂತ, ಇಲ್ಲವೆ
ಕಾಲ ಹರಣಕ್ಕೇಂತ. ಇದನ್ನಾದರೂ ಆದರು ಕೈಗೆತ್ತಿಕೊಳ್ಳೋದು ಅದೇ ಉದ್ದೇಶ
ದಿಂದ ಅಂತ ನಾನು ಬಲ್ಲೆ!"
"ಅಷ್ಟೇ ಅಂತೀರಾ?"

"ಅದೀಗ ನಿಜಸ್ಥಿತಿ. ಆದರೆ ನಾನು ಬರಿಯ ಮನೋರಂಜನೆಯನ್ನು ಗುರಿ
ಯಾಗಿಟ್ಟು ಯಾವತ್ತೂ ಕೃತಿ ರಚಿಸೋದಿಲ್ಲ. ಇಲ್ಲಿಯೂ ಅಷ್ಟೆ. ಇದು ವಾಸ್ತವ
ಜೀವನವನ್ನು ಅವಲಂಬಿಸಿದೊಂದು ಕಟ್ಟುಕತೆ. ಇದನ್ನೋದುವಾಗ ಓದುಗರಿಗೆ ವಿವಿಧ
ರಸಾನುಭವವಾದೀತು ಅಂತ ನನ್ನ ನಂಬುಗೆ. ಆದರೆ ಅಷ್ಟೇ ಅಲ್ಲ. ಓದಿಯಾದ
ಮೇಲೂ ನಮ್ಮ ಸಮಾಜದೊಂದು ಜನ ವಿಭಾಗದ ಜೀವನಚಿತ್ರ ಅವರ ನೆನಪಿನಲ್ಲಿ
ಉಳಿಯಬೇಕು ಅನ್ನೋದು ನನ್ನ ಬಯಕೆ. ಆ ಚಿತ್ರ ಬದುಕಿನ 'ಏನು?'-'ಯಾಕೆ?'

ಗಳನ್ನು ಪ್ರಚೋದಿಸುವಂತಾಗಬೇಕು ಅನ್ನೋದು ನನ್ನ ಅಪೇಕ್ಷೆ."
"ಇಲ್ಲಿ ನೀವು ಚಿತ್ರಿಸಿರೋದು ಬ್ರಾಹ್ಮಣರ ವಠಾರ."
"ಹೌದು."
"ನೀವು ಬ್ರಾಹ್ಮಣರೆ?"
"..........."
"ಬ್ರಾಹ್ಮಣೇತರರೇ?"

"..........."
"ಯಾಕೆ ಮುಗುಳ್ನಗ್ತಿದ್ದೀರಿ?"
"ನಾನು ಮನುಷ್ಯ. ಮಾನವನಾಗಿ ಇಲ್ಲಿ ಬದುಕನ್ನು ನೋಡಿದ್ದೇನೆ."
"ಸಂತೋಷ. ನೀವು ಹೀಗೆ ಉತ್ತರ ಕೊಡ್ತೀರಿ ಅಂತ ನಿರೀಕ್ಷಿಸಿಯೇ ಇದ್ದೆ!"
"ಈ ಕಾದಂಬರಿಯಲ್ಲಿ ಚಿತ್ರಿತವಾಗಿರುವ ಸಮಾಜ ಎಂಥದು? ಸುತ್ತಮುತ್ತಲೂ
ಔದ್ಯೋಗಿಕ ಬೆಳವಣಿಗೆಯಾಗ್ತಲೇ ಇದ್ದು, ಪಾಳೆಯಗಾರ ಆಚಾರ ವಿಚಾರಗಳ ಮೇಲೆ
ಒಂದೇ ಸಮನೆ ಆಘಾತವಾಗ್ತಿದೆ. ಇಲ್ಲಿ ಹೆಚ್ಚಿನ ಜನ ಬದಲಾವಣೆಯನ್ನು ಸ್ವಾಗತಿ
ಸದೆ ಇದ್ದರೂ ಅನಿವಾರ್ಯವೆಂದು ಒಪ್ಪಿಕೊಳ್ಳೋದನ್ನು ಕಾಣ್ತೇವೆ. ಹೊಸ ಹಳೆಯ
ಮನೋವೃತ್ತಿಗಳ ನಡುವೆ ವಠಾರ ಜೀವನದಲ್ಲಿ ತಾಕಲಾಟಗಳಾಗೋದನ್ನು ಕಾಣ್ತಲೇ
ಇರ್ತೇವೆ. "
"ಆದರೆ ಬೇರೆ ರೀತಿಯ ವಠಾರಗಳೂ ಇವೆ, ಅಲ್ಲವೇ?"
"ಇವೆ. ಔದ್ಯೋಗಿಕ ವ್ಯವಸ್ಥೆಯ ಒತ್ತಡಕ್ಕೆ ಸಿಲುಕಿ, ಹಿಂದಿನ ಜೀವನ ಕ್ರಮ
ಎಷ್ಟೋ ಕಡೆ ಬಿರುಕು ಬಿಟ್ಟಿದೆ. ಈಗೀಗ ವಿವಿಧ ಜಾತಿ ಕೋಮುಗಳ ಜನ ಒಂದೇ
ಕಡೆ ವಾಸವಾಗಿರುವ ವಠಾರಗಳೂ ಕಾಣಸಿಗ್ತವೆ. ಕನ್ನಡ ನಾಡಿನ ದೊಡ್ಡ ದೊಡ್ಡ
ನಗರಗಳಲ್ಲಿ ಅಕ್ಕಪಕ್ಕದ ಮನೆಯವರು ಯಾರೂಂತ ನಿವಾಸಿಗಳಿಗೆ ತಿಳೀದೇ ಇರೋ
ದುಂಟು. ಆದರೆ ಅದನ್ನು ತಿಳಕೊಳ್ಳೋದಕ್ಕೆ ಬಿಡುವಾಗಲೀ ಅಪೇಕ್ಷೆಯಾಗಲೀ
ಇರದ ವಠಾರ ಜೀವನವನ್ನು ಮುಂಬಯಿಯಂಥ ಶಹರಗಳಲ್ಲಿ ಕಾಣ್ತೇವೆ. ಅಲ್ಲಿ
ರೂಪುಗೊಂಡಿರುವ ಹಣದ, ದುಡಿಮೆಯ, ಸಮಾಜ ವ್ಯವಸ್ಥೆಯೊಳಗೆ ಜಾತಿ ಮತಗಳ
ಕಟ್ಟುಪಾಡು ಆಶ್ಚರ್ಯವೆನಿಸುವ ರೀತಿಯಲ್ಲಿ ಸಡಿಲವಾಗಿದೆ, ಅದು 'ಚಾಳ್' ಜೀವನ.
ನಮ್ಮ ನಾಡಿನ ವಠಾರ ಜೀವನಕ್ಕಿಂತ ಭಿನ್ನವಾದದ್ದು."
"ನಮ್ಮಲ್ಲಿ ಈಗಿರುವ ವಠಾರ ಜೀವನವೂ ಕ್ರಮೇಣ ಬದಲಾಗ್ತದೇಂತ ನಿಮ್ಮ
ಅಭಿಪ್ರಾಯವಲ್ವೆ?"
"ಹೌದು. ಖಂಡಿತವಾಗಿಯೂ. ಪ್ರತಿ ದಿನವೂ ಅದು ಬದಲಾಗ್ತಲೇ ಇದೆ.
ಮಾರ್ಪಾಟು ಹೊಂದುತಿರೋ ನಮ್ಮ ಬದುಕಿನ ವ್ಯವಸ್ಥೆ ವಠಾರ ಜೀವನದಲ್ಲೂ
ಸ್ವಾಭಾವಿಕವಾಗಿಯೇ ಪ್ರತಿಬಿಂಬಿತವಾಗ್ತಿದೆ.
"ನಿಮ್ಮ ಪಾತ್ರಗಳು__"
"ಏನು? ಹೇಳಿ."
"ಪುಸ್ತಕವನ್ನೋದಿದ ಪ್ರತಿಯೊಬ್ಬರೂ ಹೆಚ್ಚಿನ ಪಾತ್ರಗಳನ್ನೆಲ್ಲ ಸುತ್ತು
ಮುತ್ತಲೂ ಗುರುತಿಸಬಹುದು."
"ಹಾಗಾಯಿತೆಂದರೆ ನಾನು ಧನ್ಯ. ಸಾಹಿತ್ಯಕೃತಿ ಜೀವಂತ ವ್ಯಕ್ತಿಗಳ ಛಾಯ
ಗ್ರಹಣವಲ್ಲ; ಅವರ ನಡೆನುಡಿಗಳ ವರದಿಯಲ್ಲ. ಆದರೆ ಸೂಕ್ಷ್ಮ ನಿರೀಕ್ಷಣೆಯ
ಸಾಮರ್ಥ್ಯವುಳ್ಳ ಬರೆಹಗಾರ ಬದುಕಿನಲ್ಲಿ ಕಾಣುವ ವಿಧವಿಧದ ವ್ಯಕ್ತಿಗಳಿಂದ ಸಮಾನ
ಗುಣಗಳನ್ನು ಆಯ್ದುಕೊಳ್ಳಬೇಕು. ಪ್ರತಿಯೊಂದು ಪಾತ್ರದ ಸೃಷ್ಟಿಯ ಹಿಂದೆಯೂ
ಅಂಥದೇ ಗುಣಗಳುಳ್ಳ ಎಷ್ಟೋ ವ್ಯಕ್ತಿಗಳ ಸ್ವಭಾವ ನಿರೀಕ್ಷಣೆಯ ಮೊತ್ತವಿರಬೇಕು.
ಅಂಥ ಮೊತ್ತವೇ ಕಲಾವಿದನಾದ ಬರೆಹಗಾರನಿಗೆ ದೊರೆಯೋ ಆವೆಮಣ್ಣು. ಅದನ್ನು
ಹದಗೊಳಿಸಿದ ಬಳಿಕ, ಬರೆಹಗಾರ ಶಿಲ್ಪಿಯ ಕೌಶಲ ಪ್ರತಿಭೆಗಳಿಗೆ ಅನುಗುಣವಾಗಿ
ಕೃತಿ ಸಿದ್ಧವಾಗ್ತದೆ. ವಾಸ್ತವವಾದದಂಥ ಒಳ್ಳೆಯ ಪ್ರವೃತ್ತಿ ಅಪೇಕ್ಷಿಸೋದು
ಅದನ್ನು."
"ನಿಮ್ಮ 'ರಂಗಮ್ಮನ ವಠಾರ' ಆ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇದೆ
ಅಂತೀರಾ?"
"ಪ್ರಯತ್ನವನ್ನಂತೂ ಮಾಡಿದ್ದೇನೆ."
"ನಮ್ಮ ಆಧುನಿಕ ಸಾಹಿತ್ಯದಲ್ಲಿ ಕಾಣುವ ವಾಸ್ತವವಾದದ ಪ್ರವೃತ್ತಿ ಪಾಶ್ಚಾತ್ಯ
ಸಾಹಿತ್ಯದ ಪ್ರಭಾವದ ಫಲವಾಗಿ ಹುಟ್ಟಿತು, ಅಲ್ಲವೆ?"
"ಆರಂಭದಲ್ಲಿ ಹಾಗಾಯಿತು ಎನ್ನದಿರಲಾರೆ. ವಿದೇಶೀಯರ ಆಳ್ವಿಕೆಗೆ ಒಳ
ಗಾದ ನಾವು ಅವರ ಸಾಹಿತ್ಯದಿಂದ ಪ್ರಭಾವಿತರಾಗುವುದು ಅನಿವಾರ್ಯವಾಗಿತ್ತು...
ಆಧುನಿಕ ಕನ್ನಡ ಸಾಹಿತ್ಯದ ಮೊತ್ತ ಮೊದಲಿನ ಲಲಿತ ಕೃತಿಗಳೇ ವಾಸ್ತವವಾದದ
ಬಾವುಟವನ್ನು ಹಾರಿಸಿದುವು ಅನ್ನೋದು ಅಭಿಮಾನದ ಸಂಗತಿ. ೧೮೮೭ನೆಯ ಇಸವಿ
ಯಲ್ಲಿ ಪ್ರಕಟವಾದ ಕನ್ನಡದ ಪ್ರಪ್ರಥಮ ಏಕಾಂಕ ನಾಟಕ 'ಇಗ್ಗಪ್ಪ ಹೆಗಡೆಯ
ವಿವಾಹ ಪ್ರಹಸನ' ಮತ್ತು ೧೮೯೯ರಲ್ಲಿ ಪ್ರಕಟವಾದ ಪ್ರಪ್ರಥಮ ಕಾದಂಬರಿ
'ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು'__ ಇವು ಎರಡೂ ವಾಸ್ತವವಾದದ
ಹೆದ್ದಾರಿಯನ್ನು ಹಾಕಿಕೊಟ್ಟುವೂಂತ ಧಾರಾಳವಾಗಿ ಹೇಳಬಹುದು."
"ಜೀವನವನ್ನು ಸಾಹಿತ್ಯ ನಿರೂಪಿಸಬೇಕು ಅಲ್ವೆ?"
"ಜೀವನವನ್ನು ಸಾಹಿತ್ಯ ನಿರೂಪಿಸಲೂ ಬೇಕೂ, ರೂಪಿಸಲೂ ಬೇಕು."
"ಆದರೆ ಬದುಕಿನ ಯಥಾರ್ಥ ಚಿತ್ರಣವೊಂದರಿಂದಲೇ ಎರಡೂ ಕೆಲಸಗಳು
ಆಗಲಾರವು. ನಿಜವೆ?"
"ಸರಿ ಹೇಳಿದಿರಿ. ಯಾವುದೋ ದೇಶದ ಯಾವುದೋ ಕಾಲದ ಸಾಹಿತ್ಯವನ್ನು
ಉದಾಹರಿಸಿ ವಾಸ್ತವವಾದವನ್ನು ಒರಟು ನಿಸರ್ಗವಾದವಾಗಿ ವಿವರಿಸುವವರಿದ್ದಾರೆ.
ಅದು ಸರಿಯಲ್ಲ. ಸಮಾಜದ ಹಿತೇಚ್ಛುವಾದ, ನಾಳೆಯ ನವ್ಯತೆಯನ್ನು ಗುರುತಿಸ

ಬಲ್ಲ, ಬರೆಹಗಾರನ ಕೈಯಲ್ಲಿ ವಾಸ್ತವವಾದದ ಪ್ರವೃತ್ತಿ ಸಂಜೀವಿನಿಯಾಗ್ಬೇಕು.
ಯಥಾರ್ಥವಾದಕ್ಕೆ ಕಟ್ಟುಬಿದ್ದು, ಸುಲಭ ಲಭ್ಯವಲ್ಲವೆಂಬ ಒಂದೇ ಕಾರಣದಿಂದ,
ಅಸ್ಪಷ್ಟವಾದ-ಆದರೆ ಒಳ್ಳೆಯ- ಚಿತ್ರಗಳನ್ನು ಎತ್ತಿ ತೋರಿಸದೇ ಇರುವುದೂ ಸರಿ
ಯಲ್ಲ. ನಿಜ ಸ್ಥಿತಿಯ ಚಿತ್ರಣದಲ್ಲಿ ಆಗಾಗ್ಗೆ ಅಪೇಕ್ಷಣೀಯ ಪರಿಸ್ಥಿತಿಯು ಸೂಕ್ಷ್ಮ
ಬಣ್ಣಗಳನ್ನೂ ಉಪಯೋಗಿಸ್ಬೇಕು."
"ಪೇಂಟರ್ ಶಂಕರನಾರಾಯಣಯ್ಯ ಮತ್ತು ಚಂಪಾ ಈ ಜೋಡಿಯ ವಿಷಯ
ದಲ್ಲಿ ಹಾಗೆ ಹೇಳಬಹುದಲ್ಲ?"
"ಹೌದು, ಸರಿಯಾಗಿಯೇ ಊಹಿಸಿದಿರಿ."
"ಪಾತ್ರಗಳನ್ನು ಒಂದೋ ಕರಿಯದಾಗಿ ಇಲ್ಲವೆ ಬಿಳಿಯದಾಗಿ ಚಿತ್ರಿಸುವುದು
ವಾಸ್ತವವಾದದ ಪ್ರವೃತ್ತಿ ವಿರುದ್ಧವೇ?”
"ವಿರುದ್ಧ. ನಮ್ಮ ಪಾತ್ರಗಳು ಒಮ್ಮೊಮ್ಮೆ ಸಕಲ ಸದ್ಗುಣ ಸಂಪನ್ನರು ಇಲ್ಲವೆ
ದುರಾಚಾರಗಳ ದಾನವರು. ಇದು ಸರಿಯಲ್ಲ. ಪ್ರತಿಯೊಬ್ಬನಲ್ಲಿ ಒಳ್ಳೆಯ ಗುಣ
ಗಳೂ ಇರ್ತವೆ; ಕೆಟ್ಟ ಗುಣಗಳೂ ಇರ್ತವೆ. ಗುಣಗಳ ದಾಮಾಶಯಕ್ಕೆ ತಕ್ಕಂತೆ ಆ
ವ್ಯಕ್ತಿಗಳನ್ನು ಒಳ್ಳೆಯವರೆಂದೋ ಕೆಟ್ಟವರೆಂದೋ ಕರೀತೇವೆ. ಆದರೆ 'ಒಳ್ಳೆಯವರು'
ಎಂದಾಗ ಅವರಲ್ಲಿ ದುರ್ಗುಣಗಳೇ ಇಲ್ಲ ಅನ್ನೋದಾಗಲೀ 'ಕೆಟ್ಟವರು' ಎಂದಾಗ
ಅವರು ಕಡು ಪಾಪಿಗಳೇ ಎಂದಾಗಲೀ ಅರ್ಥವಲ್ಲ."
"ರಂಗಮ್ಮನನ್ನು ಉದಾತ್ತ ವ್ಯಕ್ತಿಯಾಗಿ ನೀವು ಯಾಕೆ ಚಿತ್ರಿಸಿಲ್ಲ ಅನ್ನೋದು
ಈಗ ತಿಳೀತು"
"ರಂಗಮ್ಮನನ್ನು 'ದೇವತೆ'ಯಾಗಿ ಚಿತ್ರಿಸೋದು ಆದರ್ಶದ ಪರಮಾವಧಿ
ಯಾದೀತು. ಹಲವು ಒಳ್ಳೆಯ ಗುಣಗಳಿದ್ದರೂ ರಂಗಮ್ಮ 'ದೇವತೆ'ಯಾಗೋದು
ಸಾಧ್ಯವಿల్ల. ಆಕೆಯ ಜೀವನ ವಿಧಾನ, ಅದನ್ನು ಕೋದಿರುವ ಆರ್ಥಿಕ ಸೂತ್ರ,
ಅಂತಹ ಅವಕಾಶವನ್ನು ಆಕೆಗೆ ಕೊಡೋದಿಲ್ಲ."
“ಅದು ನಿಜ... ಇತರ ಪಾತ್ರಗಳೂ ಅಷ್ಟೆ. ಒಬ್ಬೊಬ್ಬರ ಮೂರ್ಖತನ ಕಂಡು
ನಗು ಬಂದರೂ ಬುದ್ಧಿವಂತಿಕೇನ ನೋಡಿ ಮೆಚ್ಚಬೇಕೆನಿಸಿದರೂ ಅವರ ಒಟ್ಟು ಬದು
ಕಿನ ಬಗೆಗೆ ಮರುಕ ಅನಿಸ್ತದೆ."
"ಸಮಾಜ ವ್ಯವಸ್ಥೆ ಅವರನ್ನು ಇರಿಸಿದೆಯಲ್ಲಾ ಅಂತ ಮರುಕ
ವಾಗ್ಬೇಕು."
"ಆ ಉದ್ದೇಶದಿಂದಲೆ ನೀವು ಕೃತಿ ರಚಿಸಿದ್ದೀರಿ ಅಲ್ಲವೆ?"
"ಹೌದು.... ಆದರೆ ಪ್ರಯತ್ನ ಯಶಸ್ವಿಯಾಗಿದೆಯೋ ಇಲ್ಲವೋ!"
"ಅದನ್ನು ಹೇಳಬೇಕಾದವರು ನಾವು."
"ತಲೆ ಬಾಗಿದೆ"

25
"ನಿಮ್ಮ 'ರಂಗಮ್ಮನ ವಠಾರ' ಕೃತಿ ಬರುತದೇಂತ ಓದಿದಾಗ ಏನನಿಸಿತು ಗೊತ್ತೆ?"

"ಏನು?"
"ನಿರಂಜನರೂ ಅದೇ ವಿಷಯ ಬರೆಯ ಹೊರಟರಲ್ಲಾ ಅಂತ."
ಆ ವಿಷಯ ಎಂದಿರಾ?ವಿಷಯದ ಬಗ್ಗೆ ನನ್ನ ಆಕ್ಷೇಪವಿಲ್ಲ.ಭಿನ್ನಾಭಿಪ್ರಾಯ
ವಿರೋದು ಅದರ ನಿರುಪಣೆಗೆ ಸಂಬಂಧಿಸಿ.ವಿಷಯ ಯಾವುದೇ ಆದರೂ ಬದುಕನ್ನು
ನೋಡೋ ದೃಷ್ಟಿ ಒಂದಿರುತ್ತದೆ!ನಿಮ್ಮ ಊಹೆಗೆ ಆಧಾರವೇ ಇಲ್ಲ್ ಎನ್ನಲಾರೆ.'ವಠಾರ'
ಪದವನ್ನು 'ಗಟಾರ' ಅಂತ ಈಗಾಗಲೇ ಬಳಸಿದ್ದರಿಂದ ಹಾಗಗಿದೆ.ಒಂದೇ ಪದಕ್ಕೆ ಬೇರೆ ಬೇರೆ ಅರ್ಥಗಳಿರೋದು ಸಾಧ್ಯ.ಆದರೆ,ಯಾವುದಾದರೂ ಪದಕ್ಕೆ ವಿಪರೀತಾರ್ಥ ಕಲ್ಪಿಸಿ ಅದೀ ಸತ್ಯ ಅಂತ ಸಾಧಿಸೋ ಆಧುನಿಕ ಶಬ್ದಬ್ರಹ್ಮರಿಗೆ ನಮ್ಮ ನಾಡಿನಲ್ಲಿ ಅಭಾವವಿಲ್ಲ."
"ನಿಮ್ಮ ಈ ಕೃತಿಯೂ ಕೈಹೊತ್ತಿಗೆಯ ರೂಪದಲ್ಲೇ ಹೊರಗೆ ಬಂದು ಸುಲಭ ಬೆಲೆಗೆ ಓದುಗರಿಗೆ ದೊರೆಯುವಂತಾದುದಕ್ಕೆ ನೀವು ಸಂತೋಷಪಡ್ತೀರಿ ಅಲ್ಲವೆ?"
"ಹೌದು.ಅದಕ್ಕಾಗಿ ವಾಹಿನಿ ಪ್ರಕಾಶನದ ಒಡೆಯರಿಗೆ ನಾನು ಕೃತಜ್ಞ್."
"ವಿವಹರಣೆಗಳಿಗಾಗಿ ಋಣಿ.ಹೊರಡಲು ಸಮ್ಮತಿ ಕೊಡಿ.ಏಕಾಂತದಲ್ಲಿ ಎಲ್ಲಾ
ದರೂ ಕೂತ್ಕೊಂಡು ನಿಮ್ಮ ಪಾತ್ರಗಳಾದ ರಂಗಮ್ಮ_ಚಂಪಾವತಿ-ಶಂಕರನಾರಾ
ಯಣಯ್ಯ-ಚಂದ್ರಶೇಖರಯ್ಯ-ಜಯರಾಮು-ರಾಧೆ, ಆ ಓದುವ ಹುಡುಗರು_
ಪೋಲೀಸ್ ರಂಗಸ್ವಾಮಿ,ಇವರೆಲ್ಲರ ಜತೆ ಇನ್ನೊಮ್ಮೆ ಬೆರೀಬೇಕು.ಆ ಬಳಿಕ
'ರಂಗಮ್ಮನ ವಠಾರ'ದ ಬಗೆಗೆ ಅಭಿಪ್ರಾಯ ತಿಳಿಸ್ತೇನೆ."
"ಹಾಗೆಯೇ ಆಗಲಿ."


೨೫
ನಿರಂಜನ