......ಮಂಗಳವಾರ

...ಮಂಗಳವಾರ

ಬಲು ತಡವಾಗಿ ಎದ್ದು, ಈ ದಿನ ಎಲ್ಲರು ಕೌತುಕಕ್ಕೆ ಕಾರಣ ನಾಗಿದ್ದೀನೆ.....

ಕರಿಯ ಕೇಳಿದ "ಹೆಂಗಿದೀರ ರಾಯರೆ?"

ರಾಯರು 'ಹೆಂಗಿದ್ದರು'!

ಬಲ ಮಗ್ಗುಲಿನ ಯುವಕ ಕೇಳುತಿದ್ದಾನೆ:

"ನಿಮ್ಮ ವಿಚಾರಣೆ ಯಾವತ್ತು ಸಾರ್?"

ಹೌದು, ಯಾವತ್ತು ನನ್ನ ವಿಚಾರಣೆ? ಯಾವತ್ತು?

ಕಳೆದ ಮಂಗಳವಾರದಿಂದ ಈ ಮಂಗಳವಾರಕ್ಕೆ. ಇದೊಂದು
ವಾರದೊಳಗೆ ಇಷ್ಟೊಂದು ಪುಟಗಳನ್ನು ನಾನು ಬರೆದೆನೆ? ನನಗೆ
ಆಶ್ಚರ್ಯವಾಗುತ್ತಿದೆ. ನಿಜವಾಗಿಯೂ ನಾನೇ ಇಷ್ಟನ್ನೂ ಬರೆದೆನೆ?

ಇನ್ನು ನಾನು ಬರೆಯಬೇಕಾಗಿರುವುದು ಬಲುಸ್ವಲ್ಪ... ಇನ್ನು
ಉಳಿದಿರುವುದು ಕೊನೆಯದಾಗಿ ವಿದಾಯ ಹೇಳುವ ಕೆಲಸ.

....ಈ ದಿನ ಬೆಳಕಾಗಿ, ಹಗಲು ಕಳೆದು, ಸಂಜೆ ಬಂದಿದೆ-
ಎಷ್ಟೊಂದು ಬೇಗನೆ! ನನ್ನ ಬಾಳ ಸಂಜೆ ಬಂದೊದಗಿರುವುದು
ಎಷ್ಟೊಂದು ಬೇಗನೆ!

ಈ ದಿನ ನಾನು ಉಪವಾಸವಿದ್ದೇನೆ... ವ್ರತನಿಷ್ಠೆಯಿಂದಲ್ಲ!
ನನ್ನ ಅಂಗಾಂಗಗಳಿಗೆಲ್ಲ ವಿರಾತುಕೊಡುವ ಬಯಕೆಯಿಂದ ಹಾಗೆ
ಮಾಡುತ್ತಿದ್ದೇನೆ.

ಇನ್ನು ಸಂಜೆಯ ಸೂರ್ಯ ಮುಳುಗುತ್ತಾನೆ - ಈ ಮಂಗಳ
ವಾರವೂ. ಚಂದ್ರೋದಯವಾಗಬೇಕಾದರೆ ನಡು ರಾತ್ರೆ ಕಳೆಯ
ಬೇಕು. ಈ ಕೊಠಡಿಯ ಹಿಂಭಾಗದಲ್ಲಿ ಎತ್ತರದಲ್ಲಿರುವ ಕಿಟಕಿಯಿಂದ

೨೨೯

೩೪೦

ವಿಮೋಚನೆ

ಚಂದ್ರ ಇಣಿಕಿ ನೋಡುವನು. ಆಗ ಆತನಿಗೆ ಬಟ್ವಿಯ ಬಲ
ದಾರ ಕಾಣುವುದು. ಆ ದಾರಕ್ಕೆ ಜೋತುಬಿದ್ದು ಆತ ಇಳಿದು
ಬಹುದೇನೋ. ಅದಾಗದ ಕೆಲಸ. ನಾನು ಜೋತು ಬಿದ್ದಿರು
ಚಂದ್ರನ ಭಾರವನ್ನು ಆ ದಾರ ಹೊರುವುದುಂ‍ಟೆ?

....ಯಾಕೆ,ಅರ್ಥವಿಲ್ಲದ ಮಾತುಗಳು ಈ ಲೇಖಣಿಯ
ಹೊರಬೀಳುತ್ತಿವೆಯಲ್ಲ!.......

ಅರ್ಥವಿಲ್ಲದ .

ನಾನು ಬಲ್ಲೆ, ಈಗಿನ ಕಾಲದಲ್ಲಿ ಪದಗಳ ಅರ್ಥವಾ
ಲಾಗುತ್ತಿದೆ. ಹಳೆಯ ಪದಗಳಿಗೆ ಹೊಸ ಅರ್ಥ ಬರುತ್ತಿದೆ...

ಆದರೆ ಪದಗಳು ಸಾಯುವುದಿಲ್ಲ.

ನಾನು?

ಅಮ್ಮಾ - ಅಮ್ಮಾ - ಅಪ್ಪಾ - ಅಪ್ಪಾ - ಅಜ್ಜಿ - ಅಜ್ಜಿ

" ರುಕ್ಕೂ ಏನ್ಮಾಡೋಣಾಂತೀಯಾ? "

" ನೀನು ನಿಜವಾಗ್ಲೂ ಕದ್ದಿಲ್ಲ ಅಲ್ವಾ ಚಂದ್ರೂ?"

" ನಾನು ಯಾವತ್ತಾದರೂ ಹಾಗ್ಮಾಡೇನಾ ಅಪ್ಪಾ?"

" ಒಬ್ಬರೊಬ್ಬರು ಸುಲಿದು ತಿನ್ನೋದೇ ಈ ಪ್ರಪಂಚದ
ಶೇಖರ್."

ದೊಡ್ಡ ಮನುಷ್ಯ -- ದೊಡ್ಮನುಷ್ಯ....
"ಭಿಕ್ಷಾ ಸಿಗ್ತೇನೋ...."

ಎರಡು ರೂಪಾಯಿ.... ಎರಡು....

ವನಜಾ --- ವನೂ....

"ನಾನು ಭಿಕಾರಿಯಾದರೆ?"

"ಥೂ ಹೋಗಪ್ಪ ,ಎಂಥ ಮಾತಾಡ್ತೀಯಾ?

"ನಾನು ಆ ಹುಡುಗೀನ ನೋಡ್ಬೇಕು ಶೇಖರ್...

"ಸೈತಾನ ಕಣೋ ನೀನು...."

"ಮೂರು ತಿಂಗಳ ಬೋನಸ್...."

"ಸ್ವಾತಂತ್ರ್ಯ ಬಂದ ಘಳಿಗೇಲೇ ನಿದ್ದೆ ಹೋದ್ಯ

ವಿಮೋಚನೆ

೩೪೧

ಭೂಪ!"

" ಯಾವಾಗ್ಲೂ ಬ್ಯಾಸ್ಗೇನೆ ಇದ್ಬಾತಾ? ಮಳೆ ಬತ್ತದೆ ಕಣ್ರಪೋ"

"ಶಾರದಾ ಸತ್ತೋದ್ಲು...."

"ಕರುಳಿನ ಬಾಧೆ--ಒಂದ್ಸಾರಿ ಸರಿಯಾಗಿ ಪರೀಕ್ಷಿಸ್ಬೇಕು."

"ಮನುಷ್ನಾದ್ಮೇಲೆ ಜೀವನದಲ್ಲಿ ಒಂದು ಶ್ರದ್ಧೆ--ನಂಬುಗೆ
ಇರಬೇಕು ಚಂದ್ರಶೇಖರ್."

....ಗತ ಕಾಲದ ಸ್ಮರಣೆಗಳ ಈ ಸುರುಳಿ....

"ಅಷ್ಟು ಶಕ್ತಿ ಬಂತೇನೋ ಭಡವಾ?"

ಜುಟ್ಟು-ಕ್ರಾಪು-

"ಇಸ್ಕೂಲ್ಗೆ ಓಯ್ತವ್ನಾ?"

"ಕೈಲಿ ಕೆಂಪು ಬಾ-ವು-ಟಾ... ಓಹ್ಪೋ..!"

ನನ್ನಿಂದಾಗದು. ನಾನಿನ್ನು ಏನನ್ನು ಬರೆಯಲಾರೆ.

ಸಮಾಜದ ಏಣಿಯ ಕೆಳ ಹಂತದಲ್ಲಿ ನಾನು ಹುಟ್ಟಿದೆ. ಅಲ್ಲಿಂದ
ನಡು ಹಂತಕ್ಕೆ ಬಂದೆ. ಆ ಮೇಲೆ ಮೇಲೆ ಮೇಲಣ ಹಂತ...ಏಣಿ ಇದೆ
ಎಂದು ಧೈಯರ್ವಾಗಿ ಮೇಲೇರುವ ಯತ್ನ.....ಆದರೆ ಬಾರಿ
ಬಾರಿಗೂ ಏಣಿ ಬಾರಿ ಹೋಗುವುದು.

ಆ ಮೇಲೆ ಮುಗಿಲಿಗೆ ನೇತಾಡುವ-ಗಾಳಿ ಸೇವಿಸುತ್ತಾ.

ಈ ಪ್ರಪಂಚದಲ್ಲಿ ಇಷ್ಟು ದಿನ ಇದ್ದು ನಾನೇನು ಮಾಡಿದ
ಹಾಗಾಯಿತು? ಎಷ್ಟೋಂದು ತಪ್ಪುಗಳಾಗಲಿಲ್ಲ ನನ್ನಿಂದ! ತಿಳವಳಿಕೆ
ಇಲ್ಲದೆ ನಾನು ತಪ್ಪುಗಲನ್ನು ಮಾಡಿದ್ದೆ!

ನನ್ನ ಕೆಲಸದಲ್ಲಿ ನಾಳೆಯ ದಿನ ಜನ ಮೆಚ್ಚುವಂಥಾದ್ದು
ಏನಾದರೂ ಇತ್ತೆ? ತೆಗಳುವಂಥಾದ್ದು?

ನಾನೀಗ ಒಬ್ಬಂಟಿಗನಾಗಿ ಗೋರಿಗೆ ಹೋಗುತಿದ್ದೇನೆ--ನನ
ನೆನಪುಗಳೊಡನೆ.

ವನಜ---ವನಜ......

ಯೌವನ, ಚು.
ಎಂದರೇನೆಂಬುದನ್ನು ತಿಳಿಯದೆಯೇ ನಾನು ಹೊ
ತಿದ್ದೇನೆ.

ಕಾಮ ಸಂಬಂಧದ ವಿಚಾರ ಬೇರೆ. ಆದರೆ ಪ್ರೇಮ?

ಇಂಥ ಸಮಾಜದಲ್ಲೂ ನಾನಿಷ್ಟು ಒಳ್ಳೆಯ ಕೆಲಸ ಮಾಡುವುದು
ಸಾಧ್ಯವಿತ್ತು-ನಾರಾಯಣನ ಹಾಗೆ. ಆ ಕೃಷ್ಣರಾಜರು ಒಳ್ಳೆಯ
ಮನುಷ್ಯರಲ್ಲವೆ? ಅವರ ಮಾತು ಗಳು ನ್ಯಾಯದ-ಸತ್ಯದ ಮಾ
ತು ಗಳಾಗಿರಲಿಲ್ಲವೆ?

ಆದರೆ ನಾನು ಅಡ್ಡದಾರಿ ಹಿಡಿದು ಬಂದು ತಲಪಿರುವುದಿಲ್ಲಿ

ನನ್ನ ಬಾಳಿನ ಈ ದುರವಸ್ಥೆಗೆ ಯಾರು ಕಾರಣ?
ಆಕ್ರೋಶ ಮಾಡಬೇಕಾಗಿರುವುದು ಯಾರ ಮೇಲೆ? ನನ್ನ ದುಸ್ಥಿ
ಯಾವುದೇ ವ್ಯಕ್ತಿಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲ.
ವಿಷಚಕ್ರ ಸುತ್ತುವರಿಯುವ ರೀತಿಯೇ ಅಂಥಾದ್ದು. ಒಂದೊ
ಬಾರಿ ಅದರ ಒಂದೊಂದು ಹಲ್ಲು ನನ್ನನ್ನು ಘಾಸಿಗೋಳಿಸಿದೆ.

ನನ್ನ ತಪ್ಪೇನೂ ಇಲ್ಲ-ಇತರರೇ ಆಪರಾಧಿಗಳು, ಎನ
ಮುರ್ಖತನ. ಇನ್ನೇನು ಬೇಕಾದರೂ ನಾನಾಗಿರಬಹುದ
ಮೂರ್ಖ ಮಾತ್ರ ಅಲ್ಲ........

ನಾನು ಸಮಾಜದ ಹೊರಗೇ ಇದ್ದೆನೆಂಬುದು ನಿಜ.
ತಾತ್ವಿಕ ದೃಷ್ಟಿಯಲ್ಲಿ. ನದಿಯ ನೀರಿನಲ್ಲಿ ನಾನು ತುಂತುರು ಹನಿ
ರಲಿಲ್ಲ. ಆದರೆ ಆ ಕೆಸರು ನೀರಿನಲ್ಲಿ ನಾನು ಮೀನಾಗಿದ್ದೆ.

ಇನ್ನೂ ಹೆಚ್ಚು ಮಾತುಗಳ ಅವಶ್ಯತೆಯುಂಟೆ?

ಕರುಳಿನ ನೋವಿಗೆ ಹೃದಯದ ಯಾತನೆಗೆ ಮೆದುಳಿನ ಮೆ
ನೆಗೆ ಔಷಧಿ ದೊರೆಯಲಾರದ ಈ ಸಮಾಜದಲ್ಲಿ ನಾನೊಬ್ಬನಿ
ದ್ದರೂ ತಪ್ಪಾಗದು.

ಸ್ಯಾಯಾಸ್ಥಾನದಲ್ಲಿ ನನ್ನ ಪರವಕೀಲಿ....ಇನ್ನು ಯ
ವಕೀಲಿ?

ನೀವು ಯಾರಾದರೂ ನನಗೊಂದು ಪ್ರಶ್ನೆ ಕೇಳಬಹು

ವಿಮೋಚನೆ

೩೪೩

ನಮ್ಮ ಹುಡುಗನಾದೆಯೆಂದರೆ, ಮತ್ತೆ ಬಾಳುವ ಅವಕಾಶ
ದೊರೆಯಿತೆಂದರೆ, ನೀನೇನು ಮಾಡುವೆ?'
ಅದಕ್ಕಿದು ನನ್ನ ಉತ್ತರ: 'ಈಗ ನಾನು ಪಡೆದಿರುವ ಈ
ಜ್ಞಾನದ ನೆರವಿನಿಂದ, ಈ ವರೆಗೆ ಮಾಡಿರುವ ತಪ್ಪುಗಳನ್ನು
ಮ್ಮೆ ಮಾಡದೆಯೇ, ನಾಲ್ಕು ಜನರಿಗೆ ನೆರವಾಗುವಂತಹ
ನಡೆಸುವೆ.'

ನನ್ನನ್ನು ಹೇಡಿಯೆಂದು ದುರ್ಬಲನೆಂದು ಮಾತ್ರ ಕರೆಯ
ನನ್ನಬಗ್ಗೆ ಕನಿಕರದ ಅನುಭಾವ ನಿಮಗೆ ಉಂಟಾದರೆ ಅದೇ
ದು.

.......ಚೆನ್ನಾಗಿ ಕತ್ತಲಾಗಿದೆ.....ನಾನು ಸಿದ್ಧನಾಗಲೆ? ಬೀಳ್ಕೊಡಲೆ?
ದಯವಿಟ್ಟು ನನ್ನನ್ನು ಬಡವರ ಬಳಿ ಮಣ್ಣಿನಲ್ಲಿರಿಸಬೇಡಿ. ನನ್ನ

ಅವರ ಗೋಳಾಟದಿಂದ ಭಂಗ ಬಂದೀತು. ಹಾಗೆಯೇ
ತರಿರುವಲ್ಲಿ ಮಣ್ಣುಮಾಡಬೇಡಿ...ಅವರ ಜೀವನಕ್ರಮದಿಂದ

ಉಸಿರುಕಟ್ಟೀತು....
ಲೇಖನಿಯನ್ನು ಕೆಳಗಿಡಲೆ?ಕೊನೆಯ ಬಾರಿಗೆ ಬೆರಳುಗಳ ಬರಿಯಲೆ?

ಇನ್ನು ದೀರ್ಘ ವಿಶ್ರಾಂತಿ;ಇನ್ನು ನಿಜವಾದ ವಿಮೋಚನೆ.

_______*_______