ಹುಟ್ಟಿದ ಹೊಲಿಮನಿ
ಸಂಪಾದಿಸಿ- ಪ್ರಾಪಂಚಿಕ ಜೀವನದ ಈ ಭೂಲೋಕ - ಇದು ಕೇವಲ ಆಟಕ್ಕೆ ತನ್ನ ನಿಜವಾದ ಮನೆ ಪರಮಾತ್ನ ಸಾನ್ಯಿಧ್ಯ. ಪುರಂದರ ದಾಸರು ಅದನ್ನೇ "ಅಲ್ಲಿದೆ ನನ್ನ ಮನೆ ಇಲ್ಲಿಗೆ ಬಂದೆ ಸುಮ್ಮನೆ !" ಎಂದಿದ್ದಾರೆ.
ಹುಟ್ಟಿದ ಹೊಲಿಮನಿ
ಬಿಟ್ಟರೆ ಖಾಲಿಮನಿ
ಎಷ್ಟಿದ್ದರೇನಿದು ಗಳಿಗಿ ಮನಿ.||ಪಲ್ಲವಿ|| (ಗಳಿಗಿ ಮನಿ -ಕ್ಷಣಮಾತ್ರದ್ದು)
ವಸ್ತಿ ಇರುವ ಮನಿ
ಗಸ್ತಿ ತಿರುಗೋ ಮನಿ
ಶಿಸ್ತಿಲೆ ಕಾಣುವ ಶಿವನ ಮನಿ.||೧||
ಚಿಂತೆ ಕಾಂತೆಯ ಮನಿ
ಸಂತಿ ಸವತಿಯ ಮನಿ
ಅಂತು ಬಲ್ಲವರಿಗೆ ಆಡೂ ಮನಿ.||೨||
ಒಂಬತ್ತು ದ್ವಾರ ದಾಟಿ
ಗಂಟಿಕ್ಕಿ ಹೋಗುವಾಗ
ಗಂಟೆ ಬಾರಿಸಿದಂತೆ ಗಾಳಿಮನಿ.||೩||
ವಸುಧೆಯೊಳಗೆ ನಮ್ಮ
ಶಿಶುನಾಳಧೀಶನ
ಹಸನಾದ ಪದಗಳ ಹಾಡೂ ಮನಿ.||೪||
ನೋಡಿ
ಸಂಪಾದಿಸಿಉಲ್ಲೇಖ
ಸಂಪಾದಿಸಿ- ಶಿಶುನಾಳ ಶರೀಫರ ಪದಗಳು -ಅನಾಮಿಕ