<ಮಂಕುತಿಮ್ಮನ ಕಗ್ಗ
ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ|
ಮಹಿಮೆಯಿಂ ಜಗವಾಗಿ ಜೀವವೇಷದಲಿ||
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ|
ಗಹನ ತತ್ವಕೆ ಶರಣೊ - ಮಂಕುತಿಮ್ಮ|| ೩||
(ತಿಳಿಯಗೊಡದ+ಒಂದು)(ವಿಹರಿಪುದು+ಅದು+ಒಳ್ಳಿತು+ಎಂಬುದು) (ನಿಸದವಾದೊಡೆ+ಆ)
ಇದೆಯೊ ಇಲ್ಲವೋ, ನಮಗೆ ತಿಳಿಯಗೊಡದ ಒಂದು ವಸ್ತು, ತನ್ನ ಸ್ವಂತ ಮಹಿಮೆಯಿಂದ ಜಗತ್ತು ಎಂದಾಗಿ, ಜೀವಿಗಳ ವೇಷದಲಿ ವಿಹರಿಸುತ್ತಿದೆ(ವಿಹರಿಪುದು),
ಅದು ಒಳ್ಳೆಯದು(ಅದು+ಒಳ್ಳಿತು), ಎನ್ನುವುದು ನಿಶ್ಚಯ ಮತ್ತು ಸತ್ಯವಾದರೆ(ನಿಸದ), ಆ ರಹಸ್ಯವಾದ ತತ್ವಕ್ಕೆ ಶರಣಾಗು.