ಇದು ಕುಮಾರವ್ಯಾಸ ಭಾರತ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |
---|---|
|
|
ಕೊಂಡಿಗಳನ್ನು ತೆಗೆದು ತೊಂದರೆ ಕೊಡುವ ವಿಚಾರ
ಸಂಪಾದಿಸಿ- ಅನಂತ್ ಸುಬ್ರಾಯ್ ಸದಸ್ಯ:Ananth subrayರವರೇ ನಾನು 'ಕುಮಾರವ್ಯಾಸ ಭಾರತದ ಸಂಧಿ'ಗಳಿಗೆ ಕೊಂಡಿ ಹಾಕಿ ಆ ಸಂಧಿಗಳನ್ನು ತುಂಬಿಸುತ್ತಿದ್ದೇನೆ. ಈಗ ನೋಡಿದರೆ ನೀವು ವಿಧ್ವಂಸಕರಂತೆ ಆ ಕೊಂಡಿಗಳನ್ನೆಲ್ಲಾ ತೆಗೆದಿದ್ದೀರಿ, ಮೊದಲಿಂದಲೂ ತೆಗೆಯುವ ಈ ಕೆಲಸ ಮಾಡುತ್ತಿದ್ದೀರಿ. ಸುಮಾರು ೫೦ - ೬೦ ಕ್ಕೂ ಹೆಚ್ಚು ಪುಟಗಳಲ್ಲಿರುವ ಕೊಂಡಿಗಳನ್ನು ತೆಗೆದು ನನಗೆ ಹಿಂಸೆ ಕೊಡುತ್ತಿದ್ದೀರಿ ಯಾಕೆ? ನಿಮಗೆ ಹೊಟ್ಟೇಕಿಚ್ಚೇ ; ಅಥವಾ ನನಗೆ ಮತ್ತು ಓದುಗರಿಗೆ ತೊಂದರೆಕೊಟ್ಟು ಸಂತೋಷ ಪಡುವ "ಸಿನಿಕಲ್' 'ಸ್ಯಾಡಿಸ್ಟ್' ರೋಗಪೀಡಿತರೇ? ಅಥವಾ ನನಗೆ ತೊಂದರೆ ಕೊಡಲು ಯಾರಾದರೂ ನಿಮಗೆ ಹೇಳಿದ್ದಾರೆಯೇ. ಹಾಗೆ ಕೊಂಡಿ ತೆಗೆದರೆ ಓದುಗರಿಗೂ ತೊಂದರೆ. ಈಗ ನೀವು ತೆಗೆದ ಕೊಂಡಿಗಳಿಗೆ ಸಂಬಂಧಪಟ್ಟ ಅನೇಕ ಸಂಧಿಗಳನ್ನು ತುಂಬಿದ್ದೇನೆ, ನೀವು ಅದನ್ನು ತೆಗೆದಿದ್ದರಿಂದ ಅವುಗಳನ್ನು ಹುಡುಕಲು ನನಗೂ ಓದುಗರಿಗೂ ಕೊಂಡಿಗಳಿಲ್ಲದಂತಾಗಿದೆ. ಅನೇಕ ದಿನಗಳಿಂದ ಇದೇ ಕೆಲಸ ಮಾಡಿತ್ತಿದ್ದೀರಿ. ನಾನು ಕೊಂಡಿಗಳನ್ನು ತುಂಬಿದ ಹಾಗೂ ತೆಗೆಯುತ್ತಿದ್ದೀರಿ. ತಾಂತ್ರಿಕ ಕೆಲಸ ಮಾಡುವ ನಿಮಗೆ ನನ್ನ ಮೇಲೆ ಏಕೆ ದ್ವೇಷ? ಒಬ್ಬ ಸಾಮಾನ್ಯ ವ್ಯಕ್ತಿ ವಿಕಿಸೋರ್ಸಿನಲ್ಲಿ ವಿಷಯ ತುಂಬುತ್ತಿದ್ದಾರೆ ಎಂದು ನಿಮಗೆ ಅಸೂಯೆ ಅಥವಾ ಸಿಟ್ಟೇ? ಅಥವಾ ಇದು ರೋಗವೇ? ವಿದ್ಯಾವಂತರಿಗೂ ಕೆಲವರಿಗೆ "ಕೆಡಿಸುವ ರೋಗ" (Cynicism) ಇರುತ್ತದೆ ಎಂದು ಓದಿದ್ದೇನೆ. ಅಥವಾ ನಿಮಗೆ ಮಾಡಲು ಯಾವ ಕೆಲಸವೂ ಇಲ್ಲದೆ ಬಿಡುವಾದಾಗ "ಕೀಟಲೆ ಕಿಡಿಗೇಡಿತನಕ್ಕೆ" ಕೊಂಡಿಗಳನ್ನು ರದ್ದುಮಾಡಿದ್ದೀರಾ? ತೊಂದರೆ ಕೊಟ್ಟು ಸಂತೋಷಪಡುವ ರೋಗ 'ಸ್ಯಾಡಿಸ್ಟ್' (Sadist), ರೋಗವೇ?. ಇರಲಾರದು ಎಂದು ಭಾವಿಸುತ್ತೇನೆ. ದಯವಿಟ್ಟು ನೀವು ರದ್ದು ಮಾಡಿದ ಅನೆಕ ಕೊಂಡಿಗಳನ್ನು ಮತ್ತೆ ಮತ್ತೆ ನಾನು ತುಂಬಿದಸಿದ ಹಾಗೆಲ್ಲಾ ಮಾಡುವ ಕೆಲಸ ಬಿಟ್ಟು ಹಾಕಿದ್ದೇನೆ. ಒಮ್ಮೆ ಎಲ್ಲಾ ಕೊಂಡಿಗಳನ್ನು ಹಾಕಿಕೊಂಡು ಆನಂತರ ಬಿಡುವಾದಾಗ ತುಂಬುತ್ತೇನೆ, ಈಗ ಮಾಡಿದ ಕೆಲಸವನ್ನೇ ಮತ್ತೆ ಮಾಡಬೇಕಾಗಿದೆ. ಕನ್ನಡ ವಿಕಿಯಲ್ಲಿ ಕೆಲಸ ಮಾಡುವ ನೀವು ಅದನ್ನು ಪ್ರೋತ್ಸಾಹಿಸುವ ಬದಲು 'ಅನಗತ್ಯ', ಎಂದು ಏನೋ ನೆವ ಕಾರಣ ಹಾಕಿ ರದ್ದುಪಡಿಸಿ ತೊಂದರೆ ಕೊಟ್ಟು ಖುಶಿ ಪಡುವುದು ಏಕೆ?. ವಿಕಿಪೀಡಿಯಾದಲ್ಲಿ 'ವಿಟಿಸಿ ಪರಿವಿಡಿ'ಯಲ್ಲಿ ಕೆಂಪು ಅಕ್ಷರದಲ್ಲಿರುವ ನೂರಾರು - ಸಾವಿರಾರು ಕೊಂಡಿಗಳಿವೆ - ೧೦ ವರ್ಷದಿಂದ. ಅಲ್ಲಿ ಯಾರೂ ಅವು ಅನಗತ್ಯ ಎಂದು ರದ್ದು ಮಾಡಿಲ್ಲ.
- ನಿಮಗೆ ನಾನು ಟೇಬಲ್‍ನಲ್ಲಿ ಹಾಕಿದ ಕೊಂಡಿಗಳು ಇಷ್ಟವಾಗದಿದ್ದರೆ, ನೀವು ಚರ್ಚೆ ಪುಟದಲ್ಲಿ ಚೆರ್ಚಿಸಿ, ನಂತರ ನೀವು ಅದರ ಟೆಂಪ್ಲೇಟ್ ಮಾಡಿ ಸಹಾಯ ಮಾಡಬಹುದಿತ್ತು. ಅದು ಮಾಡದೆ ರದ್ದು ಮಾಡಿ ತೊಂದರೆ ಕೊಡುವ ಕಾರಣ ತಿಳಿಯದು. ನಾನು ನಿಮ್ಮಿಂದ ಅನೆಕ ಬಾರಿ ತೊಂದರೆ ಅನುಭವಿಸಿ ಇದನ್ನು ಬರೆಯುತ್ತಿದ್ದೇನೆ. ನೀವು ನನ್ನ ಚರ್ಚೆಪುಟದಲ್ಲಿ ಯಾಕೆ ಚರ್ಚಿಸುತ್ತಿಲ್ಲ? "ನೀವು ದೊಡ್ಡ ತಂತ್ರಜ್ಞರೆಂಬ ದೊಡ್ಡಸ್ತಿಕೆಯ ಭಾವನೆಯೇ? ಅಹಂಕಾರವೇ?"
- ದಯವಿಟ್ಟು ತಿಳಿಯಿರಿ ನಾನು ಯಾವುದೇ ಲಾಭಕ್ಕಾಗಿ ಅಥವಾ(ನಿಮ್ಮಂತೆ ಸಂಭಾವನೆ ಪಡೆದು? ಹಾಗಂದುಕೊಂಡಿದ್ದೇನೆ) ಇಲ್ಲಿ ಕೆಲಸ ಮಾಡುತ್ತಿಲ್ಲ. ಕನ್ನಡ ಓದುಗರಿಗೆ ಸಹಾಯವಾಗಲಿ, ವಿಕಿಯಲ್ಲಿ ಕನ್ನಡ ಅಭಿವೃದ್ಧಿಯಾಗಲಿ ಎಂದು ಹೊಸದಾಗಿ ನನ್ನ ಎಂಭತ್ತೆವಸ್ಸಿನಲ್ಲಿ ಕಂ.ಮತ್ತು ಟೈಪಿಂಗ್ ಕಲಿತು ಇಲ್ಲಿ ಜನಪ್ರಿಯ ಕಾವ್ಯಗಳನ್ನು ತುಂಬಿ ಅರ್ಥ ಬರೆಯುತ್ತಿದ್ದೇನೆ. ವಿಕಿಪಿಡಿಯಾದಲ್ಲೂ ಲೇಖನಗಳನ್ನು ಹಾಕಿದ್ದೇನೆ. ನನಗೆ ಈಗ ಎಂಭತ್ತಾರನೆಯ ವರ್ಷ. ನಿಮಗೆಷ್ಟು ವರ್ಷ?
- ಇದನ್ನು ನಾನು ಅನೇಕ ದಿನಗಳಿಂದ ತೊಂದರೆ ಅನುಭವಿಸಿ, ಬಹು ಬಾರಿ ಸಹಿಸಿ, ನಂತರ ಅತ್ಯಂತ ಬೇಸರದಿಂದ ಬರೆಯುತ್ತಿದ್ದೇನೆ. ನೀವು ವಿಕಿಯ ಉತ್ತಮ ತಂತ್ರಜ್ಞರು ಎಂದು ಭಾವಿಸಿದ್ದೇನೆ. ದಯವಿಟ್ಟು ನನ್ನಂತಹ ಹೊಸಬರಿಗೆ ಬಿಡುವಿದ್ದಾಗ ಸಹಾಯಮಾಡಿ ಸಹಕರಿಸಿ, ಮತ್ತು ಪ್ರೋತ್ಸಾಹಿಸಿ ಅಂತರ್ಜಾಲದಲ್ಲಿ ಕನ್ನಡ ಬಾಷೆಯ ಬೆಳವಣಿಗೆಗೆ ಸಹಾಯ ಮಾಡಬೇಕೆಂದು ಮುದುಕನಾದ/ ವಯೋವೃದ್ಧನಾದ ನಾನು ವಿನಯಪೂರ್ವಕ ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ. ದಯವಿಟ್ಟು ನೀವು ರದ್ದು ಮಾಡಿದ ೫೦- ೬೦ ಪುಟಗಳ ಕೊಂಡಿಗಳನ್ನು ನೀವೇ ಪುನಃ ಸ್ಥಾಪಿಸಿ ಉಪಕಾರ ಮಾಡಬೇಕೆಂದು ಕೋರುತ್ತೇನೆ. ಕೆಲವು ಕೆಂಪು ಅಕ್ಷರಗಳಲ್ಲಿದ್ದರೂ ಅವನ್ನು ಕ್ರಮೇಣ ತುಂಬಲಾಗುವುದು. ಈ ಹಿಂದೆ ಹಾಗೆ ಕೆಂಪು ಅಕ್ಷರಗಳಲ್ಲಿದ್ದ ಅನೇಕ ಕೊಂಡಿಗಳನ್ನು ಯಾರು ಅಳಿಸಿರಲಿಲ್ಲ, ಅದರಲ್ಲಿ ಅನೇಕವನ್ನು ನಾನು ತುಂಬಿದ್ದೇನೆ. ದಯಮಾಡಿ ತೊಂದರೆ ಕೊಡದೆ ಹಿಂದೆ ನಾನು ಹಾಕಿದ ಕೊಂಡಿಗಳನ್ನು ಪುನಃಸ್ಥಾಪಿಸಿ ಓದುಗರಿಗೆ ನನಗೆ ಉಪಕಾರ ಮಾಡಬೇಕೆಂದು ಕೋರುತ್ತೇನೆ.Bschandrasgr (ಚರ್ಚೆ) ೧೦:೫೩, ೧೧ ಆಗಸ್ಟ್ ೨೦೧೯ (UTC)