ಕೃತಿಯ ಸಂಕ್ಷಿಪ್ತ ಪರಿಚಯ

ಸಂಪಾದಿಸಿ

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಗದುಗಿನ ನಾರಣಪ್ಪನು ಹುಬ್ಬಳ್ಳಿಯ ಕುಂದಗೋಳ ತಾಲ್ಲೂಕಿನ ಕೋಳಿವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ನಂತರ ಅವನು ಗದುಗಿನಲ್ಲಿ ವಾಸವಾಗಿರಬಹುದು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೮೨೪೪ ಪದ್ಯಗಳನ್ನು ಒಳಗೊಂಡಿದೆ.

ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ. ಉದಾಹರಣೆಗೆ ಪರಿಶೀಲಿಸಿ:

"ಬವರವಾದರೆ ಹರನ ವದನಕೆ ಬೆವರ ತಹೆನು" (ಅಭಿಮನ್ಯುವಿನ ವೀರೋಕ್ತಿ!)

"ಜವನ ಮೀಸೆಯ ಮುರಿದನೋ" (ಉತ್ತರನ ಪೌರುಷದಲ್ಲಿ)

"ಅರಿವಿನ ಸೆರಗು ಹಾರಿತು"

ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. ("ತಿಳಿಯ ಹೇಳುವೆ ಕೃ‍ಷ್ಣ ಕಥೆಯನು") ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ;[][]

ಅವನು ತನ್ನ ಆರಾಧ್ಯ ದೇವನಾದ ಕೃಷ್ಣನನ್ನು ಅದ್ಭುತವಾಗಿ ಒಗಟಿನಲ್ಲಿ ವರ್ಣಿಸಿದ್ದಾನೆ. ಅದನ್ನು ಈ ಕೆಳಗಿನ ಸಾಲುಗಳಲ್ಲಿ ಕಾಣಬಹುದು:

ವೇದ ಪುರುಷನ ಸುತನ ಸುತನ ಸ

ಹೋದರನ ಹೆಮ್ಮಗನ ಮಗನ ತ

ಳೋದರಿಯ ಮಾತುಳನ ರೂಪನನತುಳ ಭುಜಬಲದಿ

ಕಾದಿ ಗೆಲಿದನಣ್ಣನವ್ವೆಯ

ನಾದಿನಿಯ ಜಠರದಲಿ ಜನಿಸಿದ

ನಾದಿ ಮೂರುತಿ ಸಲಹೋ ಗದುಗಿನ ವೀರನಾರಯಣ

ಪರ್ವಗಳು

ಸಂಪಾದಿಸಿ

  • ೧-ಆದಿಪರ್ವ --೨೦ ಸಂಧಿಗಳು ೯೫೦ ಪದ್ಯಗಳು. ೧೭ ಸಂಧಿಗಳನ್ನು ತುಂಬಿದೆ; ಬಾಕಿ ಇದೆ->೯, ೧೦,೧೩,೧೯
  • ೨-ಸಭಾಪರ್ವ --- ೧೬ ಸಂಧಿಗಳು ೧೧೨೦ ಪದ್ಯಗಳು. (+ ೪ನೆಯ ಸಂಧಿ ಆಂತ್ಯದ ವರೆಗೆ + ೧೨ ತುಂಬಿದೆ)
  • ೩-ಅರಣ್ಯಪರ್ವ ---- ೨೦ ಸಂಧಿಗಳು ೧೨೨೮ ಪದ್ಯಗಳು .(+ ೧೬ ನೆಯ ಸಂಧಿ ಆಂತ್ಯದ ವರೆಗೆ ತುಂಬಿದೆ)
  • ೪-ವಿರಾಟಪರ್ವ---೧೦ ಸಂಧಿಗಳು ೧೨೨೮ ಪದ್ಯಗಳು .(+ ಪೂರ್ತಿ ೧೦ ರ ಆಂತ್ಯದ ವರೆಗೆ ತುಂಬಿದೆ;
  • ೫-ಉದ್ಯೋಗಪರ್ವ---೧೧ ಸಂಧಿಗಳು ೬೬೧ ಪದ್ಯಗಳು .(+ ೨. ನೆಯ ಸಂಧಿ ಆಂತ್ಯದ ವರೆಗೆ+ ೪, ೫, ತುಂಬಿದೆ)
  • ೬-ಭೀಷ್ಮಪರ್ವ----೧೦ ಸಂಧಿಗಳು ೫೭೯ ಪದ್ಯಗಳು .(+ ೨ ನೆಯ ಸಂಧಿ ಆಂತ್ಯದ ವರೆಗೆ+ ೪, ತುಂಬಿದೆ
  • ೭-ದ್ರೋಣಪರ್ವ---೧೯ ಸಂಧಿಗಳು ೧೧೨೮ ಪದ್ಯಗಳು .(+ ೬. ನೆಯ ಸಂಧಿ ಆಂತ್ಯದ ವರೆಗೆ + ೧೫, ತುಂಬಿದೆ)
  • ೮-ಕರ್ಣಪರ್ವ----೨೭ ಸಂಧಿಗಳು ೧೧೫೪ ಪದ್ಯಗಳು .(+ ೫ ನೆಯ ಸಂಧಿ ಆಂತ್ಯದ ವರೆಗೆ+ ೭, ೧೦, ೧೮,೨೪,೨೫ ತುಂಬಿದೆ)
  • ೯-ಶಲ್ಯಪರ್ವ--೩ ಸಂಧಿಗಳು ೧೭೫ ಪದ್ಯಗಳು .(+ ೧ ೨, ೩ ನೆಯ ಸಂಧಿ ಆಂತ್ಯದ ವರೆಗೆ ತುಂಬಿದೆ)
  • ೧೦-ಗದಾಪರ್ವ---೧೩ ಸಂಧಿಗಳು ೧೨೨೮ ಪದ್ಯಗಳು .(೧- ೧೩ ನೆಯ ಸಂಧಿ ಆಂತ್ಯದ ವರೆಗೆ ತುಂಬಿದೆ)

  • {ತುಂಬದೆ ಉಳಿದ ಸಂಧಿಗಳನ್ನು ಕನ್ನಡ ಅಭಿಮಾನಿಗಳು ಸಾಧ್ಯವಿದ್ದಷ್ಟು ತುಂಬಲು ಕೋರಿದೆ. ಈಗ ಹೊಸ ಮೊಬೈಲುಗಳಲ್ಲಿ ಮುದ್ರಿತ ಪಠ್ಯವನ್ನು ತಿದ್ದಬಲ್ಲ ಪಠ್ಯವಾಗಿ ಪರಿವರ್ತಿಸುವ ಗೂಗಲ್ ಸೌಲಭ್ಯ ಇದೆ. ತಪ್ಪುಗಳೂ ಬಹಳ ಕಡಿಮೆ ಇರುತ್ತವೆ. ಬಿಟ್ಟ ಸಂಧಿಗಳನ್ನು ಅನುಕೂಲವಿದ್ದವರು ತುಂಬಲು ಕೋರುತ್ತೇನೆ- (ಚಂ)}

ತುಂಬಬೇಕಾದ ಸಂದಿಗಳು- ಪದ್ಯಗಳು(೮ - ೯- ೨೦೧೯ ರಲ್ಲಿ)

ಸಂಪಾದಿಸಿ
ಕ್ರ.ಸಂ ಪರ್ವ ಒಟ್ಟು ಸಂಧಿ ಗಳು ಪದ್ಯಗಳು ತುಂಬಿದಸಂಧಿಗಳು; ಬಾಕಿ ಉಳಿದ ಸಂದಿಗಳು ಸಂಧಿಗಳು; ಸಟೀಕಾ ಪದ್ಯಗಳು(೨೩-೧೨-೨೦)
1 ಆದಿಪರ್ವ 20 940 17 9, 10,13,19* ೧ ರಿಂದ ೮ 396 ಪದ್ಯಗಳು)
2 ಸಭಾಪರ್ವ 16 1120 1. 2, 3, 4+ 12th ಒಟ್ಟು 11* ಸಂಧಿ-1,2,3,4 290+14=304
3 ಅರಣ್ಯಪರ್ವ 23 1228 1 ರಿಂದ 16 ಕೊನೆಯ 7* ೧ ರಿಂದ ೧೬ 873
4 ವಿರಾಟಪರ್ವ 10 646 1 ರಿಂದ 10 nil 1 ರಿಂದ 1೦ 590
5 ಉದ್ಯೋಗಪರ್ವ 11 661 1 & 2,4 & 5 ಒಟ್ಟು 7 ಸಂಧಿಗಳು **
6 ಭೀಷ್ಮಪರ್ವ 10 579 1; 2; & 4 ಒಟ್ಟು 6 ಸಂಧಿಗಳು **
7 ದ್ರೋಣಪರ್ವ 19 1128 1 to 6 + 15 ಒಟ್ಟು 12ಸಂಧಿಗಳು **
8 ಕರ್ಣಪರ್ವ 27 1154 1 to 5+ 7, 10, 18, 24, 25 ಒಟ್ಟು 17 **
9 ಶಲ್ಯಪರ್ವ 03 175 1; 2; 3 - ೧, ೨, ೩. 175
10 ಗದಾಪರ್ವ 13 613 1 ರಿಂದ 13 (ಪೂರ್ಣ) - 1 ರಿಂದ 13 613
ಒಟ್ಟು 155 ಸಂಧಿಗಳು 8244 ಪದ್ಯಗಳು ತುಂಬಿದವು102 ಉಳಿದವು, 53 ಸಂಧಿಗಳು ಸಟೀಕಾ:54; ;;ಸಂಧಿಗಳು (ಅರ್ಥ:2951- ಪದ್ಯಗಳು)

ಕವಿಯ ತಾತ್ವಿಕ ದರ್ಶನ

ಸಂಪಾದಿಸಿ

ಇವನ್ನೂ ಓದಿ

ಸಂಪಾದಿಸಿ

ಬ್ಲಾಗ್

ಸಂಪಾದಿಸಿ
  • The Mahabharata,()ಇಂಗ್ಲಿಷ್‍ನಲ್ಲಿ ಅನುವಾದ.
೧-ಆದಿಪರ್ವ ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ಸಂಧಿಗಳು

ಸಂಪಾದಿಸಿ
೪-ವಿರಾಟಪರ್ವ:ಸಂಧಿಗಳು>: ೧೦

ಸಂಧಿಗಳು

ಸಂಪಾದಿಸಿ
ಕರ್ಣಪರ್ವ: ಸಂಧಿಗಳು>: ೧೦ ೧೧ ೧೨ ೧೩ ೧೪
-ಸಂಧಿಗಳು- ೧೫ ೧೬ ೧೭ ೧೮ ೧೯ ೨೦ ೨೦ ೨೨ ೨೩ ೨೪ ೨೫ ೨೬ ೨೭ -೦೦-
<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< >ಶಲ್ಯಪರ್ವ<>ಗದಾಪರ್ವ

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.