ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೩೯

ಈ ಪುಟವನ್ನು ಪ್ರಕಟಿಸಲಾಗಿದೆ
೨೬೮
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.


ಬಾದಶಹನು ಹಾಗೇ ಆಗಲಿ; ಎಂದನು. ಆ ಸೇವಕನು ಎಲ್ಲದ್ರವ್ಯವ ನ್ನು ತಂದು ಬಾದಶಹನಿಗೆ ಒಪ್ಪಿಸಿದನು. ಆ ಹಣವನ್ನು ಬಾದಶಹನು ಆ ಕೃಪಣನಿಗೊಪ್ಪಿಸಿದನು.
--( ೧೫೯. ಬೀರಬಲನು ಯೋಗಿ ಯಾದದ್ದು.) -
ಒಂದು ಸಮಯದಲ್ಲಿ ಬಾದಶಹನು ಯಾವುದೋ ಒಂದು ಕಾರಣಾಂ ತರದಿಂದ ಬೀರಬಲನ ಮೇಲೆ ಕೃದ್ಧನಾಗಿದ್ದನು ಅದರಿಂದ ಬೀರಬಲನು ಯಾ ರಿಗೂ ಅರಿಯದಂತೆ ವಿದೇಶಕ್ಕೆ ಹೊರಟು ಹೋದನು ಆರುತಿಂಗಳು ಗಳುಕ ಳೆದು ಹೋದವು ಬೀರಬಲನು ಇಲ್ಲದ್ದರಿಂದ ಬಾದಶಹನಿಗೆ ಒಂದು ಕ್ಷಣವು ಒಂದು ಯುಗದಂತೆ ಭಾಸವಾಗ ಹತ್ತಿತು ಬೀರಬಲನ ಪ್ರಧಾರ್ಥವಾಗಿ ಅನೇಕ ಜನ ಅನುಚರರನ್ನೂ ಗೂಢ ಚಾರರನ್ನೂ ದೇಶಾಂತರಗಳಲ್ಲಿ ಕಳು ಹಿಸಿ ಬಿಟ್ಟನು ಅವರು ಹುಡುಕಿ ಬೇಸತ್ತು ಹೋದರೂ, ಬೀರಬಲನ ಶೋಧ ವಾಗಲಿಲ್ಲ ಬಾದಶಹನು ತನ್ನನ್ನು ಶೋಧಿಸುತ್ತಿರ ಬಹುದು ಯಾವದಾದ ರೊಂದು ಹಂಚಿಕೆಯಿಂದ ನಾನೇ ಬಾದಶ ಹನಿಗೆ ಭೇಟಿಯಾಗ ಬೇಕು ಎಂ ದು ಯೋಚಿಸಿ, ಸನ್ಯಾಸಿಯ ವೇಷವನ್ನು ಧರಿಸಿ ದಿಲ್ಲಿಗೆ ಬಂದು ಪ್ರತಿದಿನ ದೇವದರ್ಶನಕ್ಕೆ ಸಾವಿರಾರು ಜನಗಳು ಬರುತ್ತಿರುವ ಒಂದು ದೇವಾಲಯದ ಲ್ಲಿ ಆ ಸನಸ್ಥನಾಗಿ ಕುಳಿತುಕೊಂಡನು ಆನೇಕ ಜನರು ದೇವತಾ ದರ್ಶನವ ನ್ನು ತೆಗೆದು ಕೊಂಡು ಸನ್ಯಾಸಿಯಾಗಿ ಕುಳಿತುಕೊಂಡಿದ್ದ ಬೀರಬಲನಿಗೆ ದಂಡವತಪ್ರಣಾಮವನ್ನು ಮಾಡುತ್ತಿದ್ದರು. ಬೀರಬಲನು ಅವರವರ ಹೆಸ ರ್ಗೊಂಡು ಆಶೀರ್ವಾದ ಮಾಡಿ ಫಲಮಂತ್ರಾಕ್ಷತೆಗಳನ್ನು ಕೊಡುತ್ತಿದ್ದನು ಅದನ್ನು ಕಂಡು ಸನ್ಯಾಸಿಯು ಅಂತರ್ಜ್ಞಾನಿಯಾಗಿರುವೆನೆಂದು ಜನರು ಪ್ರ ಶಂಸೆ ಮಾಡಹತ್ತಿದರು. ಅಸಂಖ್ಯಾತ ಜನಗಳು ದರುಶನಕ್ಕೆ ಬರಹತ್ತಿದರು ಈವಾರ್ತೆಯು ಬಾದಶಹನಿಗೆ ತಿಳಿಯಬರಲು ಅವನು ಹಿಂದು ಮುಸಲ್ಮಾನ ಮುತ್ಸದ್ಧಿಗಳನ್ನೊಡಗೊಂಡು ದರುಶನಕ್ಕೆ ಬಂದನು. ಆಗ ಬಾದಶಹನು ಪ್ರ ಚ್ಛನ್ನ ವೇಷಧಾರಿಯಾಗಿದ್ದನು, ಬಾದಶಹನು ಆ ಸನ್ಯಾಸಿಗೆ ಪ್ರಣಾಮವ ನ್ನು ಮಾಡಿ- “ಮಹಾ ರಾಜ ? ತಾವು ಪ್ರತಿಯೊಬ್ಬರ ಹೆಸರ್ಗೊಂಡುಕರೆದು ಫಲಮಂತ್ರಾಕ್ಷತೆಗಳನ್ನು ಕೊಟ್ಟು ಆಶೀರ್ವದಿಸುತ್ತಿರುವಿರಿ, ಹೀಗಿದ್ದು ನಾ ನೇನು ಅಪರಾಧವನ್ನು ಮಾಡಿದ್ದೇನೆ; ನನಗೂ ಆಶೀರಾದಮಾಡಿರಿ ಎಂದು ಪ್ರಾರ್ಥನೆಮಾಡಿಕೊಂಡನು. ಆಗ ಬೀರಬಲನು ಅವನನ್ನು ಒಳ್ಳೆ ದಿಟ್ಟಿಸಿ ನೋಡಿ ಬಾದಶಹನೆಂದು ಅರಿತುಕೊಂಡು " ಈ ಜನಸಮ್ಮರ್ದವೆಲ್ಲ ಅಡಗಿದ ಬಳಿಕ ನಿನ್ನ ನಾಮಧೇಯವನ್ನು ಹೇಳುತ್ತೇನೆ.” ಎಂದನು ಕಿಂಚಿತ್ಕಾಲ