ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧

ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ,


ಮನೆಗೆ ಬರುತ್ತಿದ್ದನು. ಆ ಸಮಯದಲ್ಲಿ ಬಾದಶಹನ ಅರಮನೆಯ ಎದುರಿಗೆ ಬಹುರೂಪಿಯು ಆಟವನ್ನು ಆಡಹತ್ತಿದ್ದನು. ಅದನ್ನು ನೋಡಲಿಕ್ಕೆ ದೊಡ್ಡ ದೊಡ್ಡ ಸರದಾರರೂ, ದರಕದಾರರೂ, ರಾಜರೂ, ಮಹಾರಾಜರೂ ಕೂಡಿ ದ್ದರು. ಅದರಂತೆ ನಗರವಾಸಿಗಳೂ ಬಹುಮಂದಿ ಮಿಲಿತರಾಗಿದ್ದರು. ಅವರಲ್ಲಿ ಬೀರಬಲನೂ ಆಟವನ್ನು ನೋಡಲಿಕ್ಕೆ ಹೋಗಿ ನಿಂತು ಕೊಂಡಿದ್ದನು ಬಹು ರೂಪಿಯು ಎತ್ತಿನ ವೇಷವನ್ನು ಹಾಕಿಕೊಂಡು ತನ್ನ ಚತುರತೆಯನ್ನು ಬಾದಶಹನ ಎದುರಿಗೆ ಪ್ರಕಟಮಾಡಿ ತೋರಿಸಿದನು ಆಗ ನೆರೆದವರೆಲ್ಲರೂ ಮತ್ತು ಬಾದಶಹನೂ ಸಹ ಆ ಬಹುರೂಪಿಯ ಚತುರತನವನ್ನು ಕಂಡು ಸಹ ಬಾಸ, ವಾಹಾವ್ವಾ, ಎಂದು ಹೊಗಳಹತ್ತಿದರು. ಪ್ರಸನ್ನ ಚಿತ್ರನಾದ ಬಾದ ಶಹನು ತನ್ನ ಮೈಮೇಲಿನ ಬಹು ಬೆಲೆಯುಳ್ಳವಸ್ತ್ರವನ್ನು ಪಾರಿತೋಷಕ ವಾಗಿ ಕೊಟ್ಟು ಬಿಟ್ಟನು ಆ ಆಟವನ್ನು ನೋಡುತ್ತ ನಿಂತಿದ್ದ ಬೀರಬಲನು ಆ ಬಹುರೂಪಿಯನ್ನು ಪರೀಕ್ಷಿಸಬೇಕೆಂದು ಒಂದು ಸಣ್ಣಕಲ್ಲು ಹರಳನ್ನು ತೆಗೆದುಕೊಂಡು ಎತ್ತಿನ ವೇಷವನ್ನು ಧರಿಸಿದ್ದ ಬಹುರೂಪಿಗೆ ಒಗೆದನು ಕೂ ಡಲೆ ಅವನು ಸ್ವಾಭಾವಿಕ ಎತ್ತಿನಂತ ಮೈಯನ್ನು ಅಲುಗುಡಿಸಿದನು. ಅದ ನ್ನು ಕಂಡು ಬಾಲಕನಾದ ಬೀರಬಲನು ಅತ್ಯಾನಂದಿತನಾಗಿ ಈ ವಾರವಾ ಶಹಬಾಸ ” ಎಂದು ಹೊಗಳಿ ತನ್ನ ತಲೆಯಮೇಲಿದ್ದ ಟೊಪ್ಪಿಗೆಯನ್ನು ಪಾರಿ ತೋಪಕವಾಗಿ ಕೊಟ್ಟುಬಿಟ್ಟನು ಅದನ್ನು ಕಂಡು ಬಹುರೂಪಿಯು ನೃತ್ಯಮಾನವನಾಗಿ ಆಟೊಪ್ಪಿಯನ್ನು ಕೈಯಲ್ಲಿ ಹಿಡಿದುಕೊಂಡು ಬಾದ ಶಹನ ಸಮೀಪಕ್ಕೆ ಹೋಗಿ ಆಹುಡುಗನ ಚಾತುರ್ಯವನ್ನೂ ಗುಣಗ್ರಾಹ ದಂತೆಯನ್ನೂ ಹೊಗಳಿ " ಪೃಥ್ವಿನಾಥ ಈ ಟೊಪ್ಪಿಗೆಯ ಒಡೆಯನು ಒಳ್ಳೆ ಚತುರನಾಗಿದ್ದು ಗುಣಗ್ರಾಹಿಯಾಗಿದ್ದಾನೆ ನೀವು ಕೊಟ್ಟ ಸಾವಿರಾ ರುರೂಪಾಯಿಗಳ ಪಾರಿತೋಷಕ್ಕಿಂತಲೂ ಈ ಟೊಪ್ಪಿಗೆಯು ನನಗೆ ಬಹುಮಾನ ವಾಗಿ ಸಿಕ್ಕುದ್ದರಿಂದ ಅತ್ಯಾನಂದವಾಗಿದೆ ಅವನು ಕೇವಲ ದರಿದ್ರನಾಗಿ ದ್ದರೂ ತನ್ನ ಹತ್ತಿರ ಇದ್ದವಸ್ತುವನ್ನು ಹಿಂದುಮುಂದು ನೋಡದೆ ಕೊಟ್ಟು ಬಿಟ್ಟನು ಎಂದು ವರ್ಣನೆ ಮಾಡಿದನು.

ಆಗ ಬಾದಶಹನು ಆ ಹುಡುಗನನ್ನು ತನ್ನ ಸಮೀಪಕ್ಕೆ ಕರಿಸಿಕೊಂಡು ದಯೆಯಿಂದ ಅವನ ಅದ್ಯೋವಾಂತ ವೃತ್ತಾಂತವನ್ನೆಲ್ಲ ಕೇಳಿಕೊಂಡನು, ನಿರ್ಭಯದಿಂದ ಉತ್ತರ ಕೊಡುತ್ತಿದ್ದ ಆ ಬಾಲಕನ ಮೇಲೆ ಪ್ರೀತಿಯುಳ್ಳವ ನಾಗಿ ಉತ್ತಮವಾದ ವಸ್ತ್ರಗಳನ್ನು ಹಾಕಿಕೊಳ್ಳುವದಕ್ಕೆ ಕೊಟ್ಟು ಪ್ರತಿದಿನ ದಲ್ಲಿ ತನ್ನ ಸಭೆಯಲ್ಲಿ ಬಂದು ಕುಳಿತುಕೊಳ್ಳಬೇಕೆಂದು ಅಪ್ಪಣೆ ಮಾಡಿದನು