ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೪೦

ಈ ಪುಟವನ್ನು ಪ್ರಕಟಿಸಲಾಗಿದೆ
(೪)
ಪೂರ್ವಜನ್ಮದ ವೃತ್ತಾಂತ.
೨೫

ಸ ವಾ ಯಿ.

"ವಾವಕೆ ಮಂಜ ವಖಾವಜ ಕೇಶವ, ಶೋಕಕೆ ಶಂಖ ಸುನೆ
ಸುಖಮಾಮೆ | ಝಾಂಠಕೀ ಝಾಲರ ಝಾಂಝ ಅಲೋಕ
ಕೀ, ಕೌತುಕ ಭೋಕಲಿಕೆ ಶುರಮಾಮೆ | ಭೇದಕಿ ಭೇರಿ ಬಡೆ
ಡರಕೇ ಡಫ ಆವಜ ಯುತ್ಥನಜಾನೀ ಜಮಾಮೇ | ಜೂಝ
ತಹೀ ಬಲಬೀರ ಬಜೇಬಹು ದಾರಿದಕೆ ದರಬಾರ ದಮಾ
ಮೆ ||೧||

ರಾಜಾ ಬೀರಬಲನ ಈಪ್ರಕಾರದ ಉದಾರತೆಯ ವರ್ಣನವನ್ನು ಕೇಳಿ ಮನಸ್ಸಿನಲ್ಲಿ ಒಂದು ಪ್ರಕಾರದ ಸಂದೇಹವುಂಟಾಗುತ್ತದೆ. ಏನಂದರೆ, ರಾಜಾ ಬೀರಬಲನು ವಂಶ ಪರಂಪರಾಗತವಾಗಿ ನಡೆದು ಬಂದ ಅಮೀರರ ವಂಶದವನಲ್ಲ; ಬಾದಶಹನು ಕೇವಲಪ್ರೀತನಾಗಿ ರಾಜನೆಂಬ ಪದವಿಯನ್ನು ಕೊಟ್ಟಿದ್ದನು. ಅವನಿಗೆ ಎರಡು ಸಾವಿರ ಸವಾರರನ್ನು ಇಟ್ಟುಕೊಳ್ಳುವಷ್ಟು ಮನಸಬದಾರಿಯಿತ್ತು. ಈ ಸವಾರರಖರ್ಚು ನಡಿಸುವದು ಅಸಾಮಾನ್ಯರ ಕೆಲಸವಲ್ಲ. ಹೀಗಿದ್ದು ಒಂದೊಂದು ಸಮಯದಲ್ಲಿ ಆರು ಆರು ಕರೋಡ ರೂಪಾಯಿಗಳನ್ನು ಕೇಶವದಾಸನಂಥ ಕವಿಗಳಿಗೆ ಕೊಡುವದೆಂದರೆ ಎಂಥ ಆಶ್ಚರ್ಯದ ಸಂಗತಿಯು ! ಆದರೆ ಈ ಸಂಗತಿಯು ಅಸಂಭಾವ್ಯವಾದದಲ್ಲ: ರಾಜಾಬೀರಬಲನಿಗೆ ಎರಡು ಸಾವಿರ ಸವಾರರ ಮನಸಬದಾರಿ ಇದ್ದದ್ದಲ್ಲದೆ ಬಾದಶಹನ ಕೃಪಾಛತ್ರವು ಇವನ ಮೇಲೆ ಪೂರ್ಣವಾಗಿತ್ತು. ಬಾದಶಹನು ಇವನ ಹೇಳಿಕೆಯಂತೆಯೇ ವರ್ತಿಸುತ್ತಿದ್ದನು ತನ್ನ ಮನಸ್ಸಿಗೆ ಬಂದದ್ದನ್ನು ಮಾಡಲು ಪೂರ್ಣಸಮರ್ಥನಾಗಿದ್ದನು. "ಮುಂತಬಿಬುಲ ಲುಬಾಬ” ಎಂಬಗ್ರಂಥದಲ್ಲಿ ಬರೆದಿರುವದೇನಂದರೆ ರಾಜಾಬೀರಬಲನಿಗೆ ಎರಡುಸಾವಿರ ಮನಸಬದಾರಿಯಿತ್ತು, ಆದರೆ ಅವನು ತನ್ನ ಚಾತುರ್ಯದಿಂದಲೂ ಸಮಯೋಚಿತ ಉತ್ತರವನ್ನು ಕೊಡುವ ನೈಪುಣ್ಯದಿಂದಲೂ ಬಾದಶಹನ ಮನವನ್ನು ಪೂರ್ಣವಾಗಿ ಒಲಿಸಿಕೊಂಡು ಬಿಟ್ಟನು. ಇದರಿಂದ ಪ್ರತಿಮಾಸದಲ್ಲಿ ಲಕ್ಷ ಲಕ್ಷ ರೂಪಾಯಿಗಳನ್ನು ಪಾರಿತೋಷಕವಾಗಿ ತೆಗೆದುಕೊಳ್ಳುತಿದ್ದನು ಮತ್ತು ದೂರ ದೂರಿನ ಅಮೀರ ಉಮರಾವರು ಬಹು ಮೂಲ್ಯವಾದ ಕಾಣಿಕೆಗಳನ್ನು ಕಳುಹಿಸಿ ಕೊಡುತ್ತಿದ್ದರು. ಇದಲ್ಲದೆ ಬಾದಶಹನ ರಾಣೇವಾಸದಿಂದ ಸಹಾ ಅನರ್ಘ್ಯವಾದ ಪಾರಿತೋಷಕಗಳು ಮೇಲಿಂದ ಮೇಲೆ ಬರುತ್ತಿದ್ದವು.