ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೪೧

ಈ ಪುಟವನ್ನು ಪ್ರಕಟಿಸಲಾಗಿದೆ
೨೬
ಪೂರ್ವಜನ್ಮದ ವೃತ್ತಾಂತ.

ಬೀ ರ ಬ ಲ ನ ಸಂ ತ ತಿ.

ರಾಜಾ ಬೀರಬಲನಿಗೆ ಎಷ್ಟು ಮಂದಿ ಮಕ್ಕಳಿದ್ದರೆಂಬ ಸಂಗತಿಯು ನಿಶ್ಚಯಾತ್ಮಕವಾಗಿ ತಿಳಿದು ಬರುವದಿಲ್ಲ. ಆದರೆ ಅಕಬರ ಮತ್ತು ಜಹಂಗಿರ ಇವರ ಚರಿತ್ರಗಳಲ್ಲಿ ಲಾಲಾ ಮತ್ತು ಹರಿಹರರಾಯ ಎಂಬ ಈರ್ವರು ಪುತ್ರರು ಇದ್ದಂತೆ ವ್ಯಕ್ತವಾಗುತ್ತದೆ. "ಅಕಬರನಾಮಾ” ಎಂಬ ಗ್ರಂಥದಲ್ಲಿ ಲಾಲಾನ ವಿಷಯವಾಗಿ ಈ ಪ್ರಕಾರ ಉಲ್ಲೇಖವಿರುವುದು ಲಾಲಾನು ತನ್ನ ಆದಾಯಕ್ಕಿಂತ ಹೆಚ್ಚು ವ್ಯಯವನ್ನು ಮಾಡುತ್ತಿದ್ದನು ಇದರಿಂದ ಸ್ಪಲ್ಪ ದಿವಸಗಳಲ್ಲಿಯೇ ದಿಲ್ಲಿಯನ್ನು ಬಿಟ್ಟು ಹೊರಟು ಹೋಗುವ ಪ್ರಸಂಗ ವು ಬಂತು. ಆದರಿಂದ ಅವನು ಬಾದಶಹನ ಅಪ್ಪಣೆಯನ್ನು ಹೊಂದಿ ಸನ್ ೪೭ ಜುಲಾಸೀ (ಸಂವತ್ ೧೬೫೮ ) ನೇದರಲ್ಲಿ ಪ್ರಯಾಗಕ್ಕೆ ಹೋಗಿ ಅಲ್ಲಿ ಜಹಾಂಗೀರನ ಆಶ್ರಯದಲ್ಲಿ ಇರಹತ್ತಿದನು.

ಹರಿಹರ ರಾಯನು ಬಾದಶಹನ ಸೇವೆಯಲ್ಲಿಯೇ ಇದ್ದನು. ಇವನು ಒಂದುಸಾರೆ ಸನ್ ೪೮ ಜುಲಾಸೀ (ಸಂವತ್ ೧೬೫೯) ನೇ ವರುಷ ಆಗ್ರಾದಿಂದ ದಕ್ಷಿಣಕ್ಕೆ ಹೊರಟಿರುವ ಶಹಾಜಾದಾ ದಾನಿಯಲನ ಕೂಡ ಹೋದಂತೆ ಕಂಡು ಬರುತ್ತದೆ.

ರಾಜಾ ಬೀರಬಲನ ರಾಣಿ ಜನರು.

ರಾಜಾ ಬೀರಬಲನ ಮರಣಾನಂತರ ಬಾದಶಹನು ಬೀರಬಲನ ಹೊಟ್ಟೆಯ ಗಂಡು ಮಕ್ಕಳಲ್ಲಿ ಸುಸಂಸ್ಕೃತನಾದವನನ್ನು ಕುರಿತು “ ಬೀರಬಲನ ಸಂಗಡ ಎಷ್ಟುಜನರಾಣಿಯರು ಸತಿಹೋದರು?” ಎಂದು ಪ್ರಶ್ನೆ ಮಾಡಿದನು. ಆಗ ಅವನು - "ವೀರತಾಬುದ್ಧಿವಂತಿಕೆ, ಉದಾರತಾ ಎಂಬ ಮೂರುಜನ ಸತಿಯರು ಸಹ ಗಮನಮಾಡಿದರು. ಕೀರ್ತಿ ಎಂಬ ಸ್ತ್ರೀಯು ಮಾತ್ರ ಬದುಕಿರುವಳು.” ಎಂದು ಉತ್ತರಕೊಟ್ಟನು. ಬಾದಶಹನು ಅವನ ಉತ್ತರವನ್ನು ಕೇಳಿ ಸಂತುಷ್ಟನಾಗಿ ಅಂದದ್ದೇನಂದರೆ -"ನೆಟ್ಟಗಾಯಿತು, ಅವಳು ಇರಲಿಕ್ಕೇಬೇಕು ಯಾಕಂದರೆ ಅವಳು ಹೋಗಿ ಬಿಟ್ಟಿದ್ದರೆ ದೋಷವು ಬರುತ್ತಿತ್ತು.

ಬೀರಬಲನ ಉಪದೇಶಪರ, ಮತ್ತು ಹಾಸ್ಯರಸೋತ್ಪಾದಕ ಸಣ್ಣ ಸಣ್ಣ ಕಥೆಗಳು.

ಇವನ ಸ್ವಭಾವದಲ್ಲಿ ಹಾಸ್ಯವು ಮನಪ್ರಸನ್ನ ಮಾಡಿಬಿಡುವಂಥ ಮಾತುಗಳೂ, ಸಮಯೋಚಿತ ಉತ್ತರಗಳನ್ನು ಕೊಡುವಂಥ ಶಕ್ತಿಯೂ ಅವರ್ಣನೀಯವಾಗಿತ್ತು. ಇವನ ಉಪದೇಶ ಪರವಾದ ವಾಕ್ಯಗಳೂ, ಮನ