ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೪೨

ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ.
೨೭


ಇನ್ನು ಪ್ರಸನ್ನವಾಗಿ ಮಾಡಿಬಿಡುವಂಥ ಸಣ್ಣ ಸಣ್ಣ ಹಾಸ್ಯರಸೋತ್ಪಾದಕ ಕಥೆಗಳೂ, ಸಮರ್ಪಕವಾಗಿ ಕೇಳಿದಪ್ರಶ್ನೆಗೆ ಉತ್ತರಕೊಟ್ಟಂಥ ಸಂ ಗತಿಗಳೂ, ಈ ಭಾರತವರ್ಷದ ಪ್ರತಿಯೊಂದು ಜನವಸತಿಯಲ್ಲಿ ಪ್ರಸಿದ್ಧ ವಾಗಿವೆ ಈ ಪುಸ್ತಕದಲ್ಲಿ ಬೀರಬಲನ ಉಪದೇಶ ಪರವಾದ ನೀತಿ ರಸಭರಿತ ವಾದ ನಗಿಯನ್ನು ಹುಟ್ಟಿಸುವ ಅನೇಕ ಸಂಗತಿಗಳನ್ನು ವರ್ಣಿಸಿದ್ದೇನೆ ಬೀರಬಲನಿಗೆ ಸರಸ್ವತೀದೇವಿಯು ಪ್ರಸನ್ನಳಾಗಿದ್ದಳೆಂದೂ ಅವನಬುದ್ಧಿಗೆ ಹರಿಯದೆ ಇದ್ದ ಸಂಗತಿಗಳನ್ನು ತಾನು ಸ್ವತಃ ತಿಳಿಸಿ ಇವನಮುಖದಿಂದ ಹೊರಬೀಳಿಸುತ್ತಿದ್ದಳೆಂದೂ ಜನರಲ್ಲಿ ವಾಡಿಕೆಯುಂಟು ಒಂದು ಸಾರೆ ಬಾದ ಶಹನು ಒಂದು ಜಲಭರಿತವಾದ ಜಲಾಶಯವನ್ನು ಕಂಡು "ಬೀರಬಲ ಇದ ರಲ್ಲಿ ಏನು ತುಂಬಿದೆ? ” ಎಂದು ಪ್ರಶ್ನೆ ಮಾಡಿದನು ಅದಕ್ಕೆ ಬೀರಬಲನ ತತ್‌ಕ್ಷಣದಲ್ಲಿ " ಮಳಲು ತುಂಬಿದೆ” ಎಂದು ಹೇಳಿಬಿಟ್ಟನು ಈ ಮಾತನ್ನು ಸತ್ಯವನ್ನಾಗಿಮಾಡಿ ತೋರಿಸಬೇಕೆಂದು ತಿಳಿದು ಸರಸ್ವತೀದೇವಿಯು ಅ ಜ ಲಾಶಯದಲ್ಲಿದ್ದ ಜಲವನ್ನೆಲ್ಲ ಶೋಷಿಸಿ , ಮಳಲನ್ನುಂಟುಮಾಡಿ ತೋರಿಸಿ ದಳು ಆದಿವಸದಿಂದ ಸರಸ್ವತೀದೇವಿಯ ಬೀರಬಲನಮೇಲೆ ಅಪ್ರಸನ್ನತೆ ಯುಳ್ಳವಳಾಗಿ ಇವನ ಮಗಳ ಮುಖದಿಂದ ಬೀರಬಲನಿಗೆ ತಿಳಿಯದೆ ಇದ್ದ ಮಾತುಗಳನ್ನು ಹೇಳಿಸುತ್ತಿದ್ದಳಂತೆ.
ಬೀರಬಲನ ವಿಷಯದಲ್ಲಿ ಉಂಟಾದ ಆಕ್ಷೇಪಗಳ ನಿರ್ಣಯ,
ಎಷ್ಟೋ ಜನ ಅಲ್ಪಬುದ್ಧಿಗಳಾದ ಮುಸಲ್ಮಾನರು ತಮ್ಮ ಮತಾನು ಯಾಯಿಗಳನ್ನು ಪ್ರಸನ್ನೀಕರಿಸಿಕೊಳ್ಳುವದಕ್ಕಾಗಿ, "ಮುಲ್ಲಾ ದುವ್ಯಾಜಿ " ಎಂಬವನು ಬೀರಬಲನನ್ನು ಮಾತಿನಲ್ಲಿ ಸೋಲಿಸಿರುವನೆಂದು ಹೇಳುತ್ತಾರೆ ಆದರೆ ಈ ಸಂಗತಿಯು ಪೂರ್ಣ ನಿರಾಧಾರವಾಗಿದೆ ಯಾಕಂದರೆ ಅಕಬರ ಬಾದಶಹನ ಕಾಲದಲ್ಲಿಯ ಯಾವಗ್ರಂಥಗಳಲ್ಲಿಯಾ “ಮುಲ್ಲಾದುವ್ಯಾಜಾ" ಎಂಬ ಮನುಷ್ಯನ ನಾಮನಿರ್ದೆಶವೇ ಇರುವದಿಲ್ಲ,