ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೭೪

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು
೫೯



ಅಷ್ಟರಲ್ಲಿ ಬೀರಬಲನು ಯಾವದೋ ಒಂದು ಬೇರೆಕಾರ್ಯಕ್ಕೆ ಹೋಗುವವನಂತೆ ಒಲಗದಿಂದ ಎದ್ದು ಬೇರೆಕಡೆಗೆ ಹೋಗಿ ಕರ್ಮಚಾರಿಯೋರನನ್ನು ಕರೆದು ಪ್ರತಿವಾದಿಯಾದ ವರ್ತಕನಮನೆಗೆ ಹೋಗಿ ಅವನ ಹಿರಿಯಮಗನಿಗೆ ಹೇಳಬೇಕಲ್ಲಾ - " ತುಪ್ಪವನ್ನು ಕಾಸಿ ಎರಡನೇ ಕೊಡಕ್ಕೆ ಹಾಕುವಕಾಲದಲ್ಲಿ ಹೊರಟ ವರಹವನ್ನು ತೆಗೆದುಕೊಂಡು ಓಲಗಕ್ಕೆ ಬರಬೇಕೆಂದು ನಿಮ್ಮ ತಂದೆಯು ಹೇಳಿ ಕಳುಹಿಸಿದ್ದಾನೆ, ಅವರಿಂದ ಬೇಗನೇ ಬಾ ಎಂದು ಹೇಳಿ, ಅವನನ್ನು ಕರೆದುಕೊಂಡು ಬಾ ” ಎಂದು ಅಪ್ಪಣೆಮಾಡಿದನು.

ಕರ್ಮಚಾರಿಯು ಕೂಡಲೆ ಆ ವರ್ತಕನಮನೆಗೆ ಹೋಗಿ ವರಹ ಸಹಿತವಾಗಿ ಅವನ ಹಿರಿಯಮಗನನ್ನು ಕರೆದುಕೊಂಡು ನ್ಯಾಯಾಸ್ಥಾನಕ್ಕೆ ಬಂದನು, ತನ್ನ ಮಗನು ನ್ಯಾಯಾಸ್ಥಾನಕ್ಕೆ ಬಂದದ್ದನ್ನು ನೋಡಿ ಆಶ್ಚರ್ಯಚಕಿತನಾದನು. ಆದರೆ ಬೀರಬಲನ ಕಟ್ಟಪ್ಪಣೆಯಿಂದ ಇಬ್ಬರಿಗೂ ಮಾತನಾಡಲು ಸಂಧಿಯು ದೊರೆಯಲಿಲ್ಲ.

ಬೀರಬಲನು ವರ್ತಕನ ಮಗನನ್ನು ಕುರಿತು, ನಿನ್ನ ತಂದೆಯು ಕೊಟ್ಟಂಥ ವರಹವನ್ನು ತಂದಿರುವಿಯೋ ! ಎಂದು ಪ್ರಶ್ನೆ ಮಾಡಲು ಆ ಹುಡುಗನು ಅಹುದು, ತೆಗೆದುಕೊಳ್ಳಬೇಕು ಎಂದು ಕೊಟ್ಟನು. ಆಗ ಬೀರಬಲನು ಪುನಃ ಅನ್ನುತ್ತಾನೆ; " ನಿನ್ನ ತಂದೆಯು ತುಪ್ಪದಕೊಡದಲ್ಲಿ ನಾಲ್ಕು ಮೋಹರುಗಳು ಹೊರಟಿರುವವೆಂದು ಹೇಳಿದ್ದಾನೆ, ನೀನು ಒಂದೇ ಮೊಹರನ್ನು ತಂದುಕೊಟ್ಟಿಯಲ್ಲಾ ?
ಆಗ ಆ ಹುಡುಗನು ತನ್ನ ತಂದೆಯಕಡೆಗೆ ನೋಡಿ- ( ಪಿತನೇ ! ನಾಲ್ಕು ವರಹಗಳು ಯಾವಾಗಹೊರಟಿದ್ದವು ? ನೀವು ನನ್ನ ಕೈಯಲ್ಲಿ ಒಂದನ್ನೇ ಕೊಡಲಿಲ್ಲವೇ ?” ಎಂದು ಕೇಳಿದನು. ಆ ಮಾತಿಗೆ ಆ ವರ್ತಕನು ಅಂದದ್ದೇನೇಂದರೆ; - ವರಹವು ಯಾವಾಗ ಹೊರಟಿತ್ತು!

ಮಗನು ಸರಲತೆಯಿಂದ “ ನೀವು ತುಪ್ಪವನ್ನು ಕಾಯಿಸಿ ಬೇರೆ ಕೊಡಕ್ಕೆ ಹಾಕುವಾಗ ಹೊರಡಲಿಲ್ಲವೇ ??
ವರ್ತಕನು. ಇವನಿಗೆ ಏನೂ ಬುದ್ಧಿಯಿಲ್ಲ, ಇವನಿಗೆ ಯಾವಾಗ ಬುದ್ದಿ ಬರುವದೋ ಕಾಣೆ ? ಎಂದು ಗುಣಗುಟ್ಟ ಹತ್ತಿದನು. ಪಿತಾಪುತ್ರರಲ್ಲಿ ನಡೆದ ಸಂಭಾಷಣೆಯನ್ನು ಕೇಳಿ ಸಭಿಕರೆಲ್ಲರಿಗೂ ಆಶ್ಚರ್ಯಪುಂಟಾಯಿತು, ಆಗ ಬೀರಬಲನು ಅನ್ನುತ್ತಾನೆ:- ನೀನು ಆ ವರ್ತಕನಿಗೆ ರೂಪಾಯಿಗಳನ್ನು ಕೊಡತಕ್ಕದ್ದು ನಿಜವೋ ಅಥವಾ ಸುಳ್ಳೋ ! ಎಂದು ಕೇಳಲು, ಆ ವರ್ತಕನು ಏನೂ ಮಾತಾಡದೆ ಸುಮ್ಮನೇ ನಿಂತುಕೊಂಡನು. ಆಗ ಬೀರಬಲನು ಪುನಃ