ಯಾವಮನುಷ್ಯನು ಒಂದು ವರಹಕ್ಕೋಸುಗ ಅನೃತವನ್ನು ಹೇಳಲಿಕ್ಕೆ ಹಿಂದುಮುಂದು ನೋಡಲಿಲ್ಲವೋ ಅಂಥಮನುಷ್ಯನು ಐದುನೂರು ರೂಪಾಯಿಗಳನ್ನು ಕೊಡಲಿಕ್ಕೆ ಹ್ಯಾಗೆ ಒಪ್ಪಿಕೊಂಡಾನು ? ಎಂದನು. ಈಮಾತಿಗೂ ಪ್ರತಿವಾದಿಯು ಏನೂ ಉತ್ತರಕೊಡಲಿಲ್ಲ, ಆಗ ಒಬ್ಬ ಕರ್ಮಚಾರಿಯನ್ನು ಕರೆದು ಇವನ ಬೆನ್ನ ಮೇಲೆ ಒಳಿತಾಗಿ ವೆಟ್ಟುಗಳನ್ನು ಹಾಕು; ಎಂದು ಅಪ್ಪಣೆಮಾಡಿದನು. ಆಗ ಆ ವರ್ತಕನ ಮಗನು ಅನ್ನುತ್ತಾನೆ- "" ಪಿತನೇ ? ನೀನು ಹಿಂದಕ್ಕೆ ಒಂದು ದಿವಸ ಈ ವರ್ತಕನಿಗೆ ಐದುನೂರು ರೂಪಾಯಿಗಳನ್ನು ಕೊಡಬೇಕಾಗಿದೆ ಎಂದು ಹೇಳಿದ್ದಿಲ್ಲವೇ ? ಈಗ ಹ್ಯಾಗಾದರೂ ರೂಪಾಯಿಗಳು ಮನೆಯಲ್ಲಿ ಅವೆ, ಕೊಟ್ಟುಬಿಡಬೇಕು. ” ಈ ಪ್ರಕಾರ ಮಗನು ಸತ್ಯವನ್ನು ನುಡಿದದ್ದರಿಂದಲೂ ಬೆನ್ನ ಮೇಲೆ ಪೆಟ್ಟುಗಳು ಬೀಳುವವೆಂಬ ಹೆದರಿಕೆಯಿಂದಲೂ ತನ್ನ ಅಪರಾಧವನ್ನೊಪ್ಪಿಕೊಂಡನು. ಆಗ ಬೀರಬಲನು ಪ್ರತಿವಾದಿಯ ಕಡೆಯಿಂದ ಐದುನೂರು ರೂಪಾಯಿಗಳನ್ನು ವಾದಿಗೆ ಕೊಡಿಸಿ ಪ್ರತಿವಾದಿಯನ್ನು ಕಾರಾಗೃಹದಲ್ಲಿಡುವಂತೆ ಆಜ್ಞಾಪಿಸಿ, ಪುನಃ ಅಂದನೆಂದರೆ;- ವರ್ತಕರಾದವರೆಲ್ಲರೂ ತಮ್ಮ ತಮ್ಮ ನಡಾವಳಿಯಲ್ಲಿಯೂ ಮಾತು ಕಥೆಗಳಲ್ಲಿಯೂ ಸತ್ಯದಿಂದಲೇ ವರ್ತಿಸತಕ್ಕದ್ದು, ಇದರಿಂದ ಅವರಿಗೆ ಮೇಲುಂಟಾಗುವದು. ಅಸತ್ಯವನ್ನು ನುಡಿದರೆ ಅದು ಮೊದಲು ಸುಖಕರವಾಗಿ ತೋರುತ್ತದೆ; ಆದರೆ ಅಂತ್ಯದಲ್ಲಿ ಅದರ ದುಷ್ಪರಿಣಾಮವು ಕಂಡುಬರುತ್ತದೆ. ಮಾತಾಪಿತೃಗಳಾದವರು ತಮ್ಮ ಮಕ್ಕಳಿಗೆ ಸತ್ಯವನ್ನೇ ಹೇಳುವಂತೆ ಕಲಿಸಬೇಕು. ಈ ಪ್ರತಿವಾದಿಯ ಮಗನು ಇಲ್ಲಿಯವರೆಗೆ ಸತ್ಯವನ್ನೇ ಅವಲಂಬಿಸಿದ್ದಾನೆ, ಇದರಂತೆ ಕಡೆತನಕ ಸತ್ಯದಿಂದಲೇ ಇದ್ದರೆ ಸುಖದಿಂದಲೇ ಜೀವಿಸಬಹುದು, ಹೀಗೆ ಇರದೆ ತಂದೆಯ ಗುಣವನ್ನು ಅವಲಂಬಿಸಿದರೆ ಮಾತ್ರ ಗುರಿಯಾಗುವದು ಎಂದು ಹೇಳಿ ಎಲ್ಲರಿಗೂ ಅಪ್ಪಣೆಕೊಟ್ಟು ಕಳಿಸಿದನು.
- (೨೧, ಬಾದಶಹ ಮತ್ತು ಗಂಗಕವಿ.)-
ಒಂದುದಿವಸ ಬೇಗಮ್ಮ ಜನರೂ, ಮತ್ತು ಅವರ ಹೆಣ್ಣು ಮಕ್ಕಳೂ, ಎಲ್ಲರೂ ಒಂದು ಅಂತಪುರದಲ್ಲಿ ಕೂಡಿದ್ದರು ಗಾಯನವಾದನವು ನಡೆದಿತ್ತು. ಆ ಸಮೂಹದಲ್ಲಿ ಪುರುಷನೆಂದರೆ ಬಾದಶಹನೊಬ್ಬನೇ ಇದ್ದನು. ಬಾದಶಹನನ್ನು ಎಂದೂ ಹೊರಗೆ ಬಿಡಗೊಡಬಾರದೆಂದು ಬೇಗಮ್ಮ ಜನರೆಲ್ಲರೂ ಈ ಯುಕ್ತಿಯನ್ನು ತೆಗೆದಿದ್ದರು, ಅವರ ಈಸಾಹಸವು ಸ್ವಲ್ಪಸ್ವಲ್ಪ ಕೈಗೂಡುತ್ತ ಬಂದಿತ್ತು, ಆ ಸಮಯದಲ್ಲಿ ಒಬ್ಬ ಬೇಗಮ್ಮಳು ಕೋಮಲಸ್ವರದಿಂದ ವಿ