ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೭೬

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೬೧



ರಹವ್ಯಥೆಯನ್ನು ವರ್ಣಿಸತಕ್ಕ ಪಠ್ಯವನ್ನು ಹಾಡತೊಡಗಿದಳು. ಆಗ ಬಾದಶಹನು "ಇಂಥ ಪದ್ಯದಿಂದ ಏನುಪ್ರಯೋಜನ ” ಎಂದು ಪ್ರಶ್ನೆ ಮಾಡಿದನು, ಈ ಸುಸಮಯವನ್ನು ಎದುರು ನೋಡುತ್ತ ಕುಳಿತ ಒಬ್ಬತರುಣ ಬೇಗಮ್ಮಳು, ಸ್ವಾಮಿ ತಾವು ಸಕಾಲದಲ್ಲಿ ಯುದ್ಧಾಸಕ್ತರಾಗಿ ನಮ್ಮನ್ನು ಮರೆತುಬಿಟ್ಟಿರುವಿರಲ್ಲಾ ! ಇದು ಎಂಥಾ ಅನ್ಯಾಯ; ತಾವು ಯಾವಯಾವ ಕಾಲದಲ್ಲಿ ಯುದ್ಧಕ್ಕೆ ಹೊರಟು ಹೋಗುವಿರೋ ಆ ಆ ಕಾಲದಲ್ಲಿ ನಮ್ಮೆಲ್ಲರಿಗೂ ಎಷ್ಟು ವಿರಹವ್ಯಥೆಯನ್ನು ಅನುಭೋಗಿಸಬೇಕಾಗುತ್ತದೆಂಬ ಸಂಗತಿಯನ್ನು ಈಶ್ವರನಹೊರತು ಅನ್ಯರಾರಿಗೂ ತಿಳಿಯುವದಕ್ಕೆ ಕಠಿಣವು, ತಾವು ಈಗ ಎಷ್ಟೋಮಾಸಗಳಿಂದ ಯುದ್ಧಾಸಕ್ತರಾಗಿ ಹೋಗಿಬಿಡೋಣವಾಗಿತ್ತು ಈಗ ನಾಲ್ಕಾರು ದಿವಸದಿಂದ ತಮ್ಮ ದರ್ಶನಸುಖವು ದೊರೆಯ ಹತ್ತಿದೆ, ಆದ್ದರಿಂದ ಇನ್ನು ಕೆಲವುದಿವಸ ನಮ್ಮ ಬಳಿಯಲ್ಲಿಯೇ ಇದ್ದು ನಮಗೆ ಸಂತೋಷವನ್ನುಂಟು ಮಾಡಬೇಕು ಈಗರಾಜ್ಯದಲ್ಲಿ ಯಾವಪ್ರಕಾರದ ತೊಂದರೆಗಳು ಇದ್ದಂತೆ ಕಂಡು ಬರುವುದಿಲ್ಲ ” ಎಂದು ವಿನಯ ಪೂರ್ವಕ ವಾಗಿ ಬೇಡಿಕೊಂಡಳು ಆಗ ಬಾದಶಹನು ಅನ್ನುತ್ತಾನೆ- ಪ್ರಾಣೇಶ್ವರೀ ಯುದ್ಧಗಳು ಸರ್ವಕಾಲದಲ್ಲಿ ನಡೆಯುತ್ತಿರುಯ್ಯವೇ ಹ್ಯಾಗೆ ! ವರ್ಷದಲ್ಲಿ ಎರಡು ಮೂರು ತಿಂಗಳು ಹೋಗುವ ಪ್ರನಂಗವು ಬರುತ್ತದೆ. ನಾನು ಈ ಸುಖವಿಲಾಸದಲ್ಲಿ ಮಗ್ನನಾಗಿ, ಅಂತಃಪುರದಲ್ಲಿ ವಾಸಮಾಡ ಹತ್ತಿದರೆ ನನ್ನ ಪ್ರಜೆಗಳಿಗೆ ಎಷ್ಟು ದುಃಖಗಳು ಉಂಟಾಗುತ್ತವೆಂಬುದನ್ನು ಹೇಳಲಸಾಧ್ಯವು ನನ್ನ ರಾಜ್ಯವು ಸುಯಂತ್ರವಾಗಿ ಹ್ಯಾಗೆ ನಡೆದೀತು ? ನಾನು ಸಂಪಾದಿಸಿದ ಕೀರ್ತಿಯೆಲ್ಲವು ಮಣ್ಣು ಪಾಲಾಗಿ ಹೋದೀತು ? ಹತ್ತು ಹದಿನೈದು ದಿವಸಗಳ ಮಟ್ಟಿಗೆ ಹ್ಯಾಗಾದರೂ ನಡೆದೀತು, ಆದರೆ ನೀವು ಆಜನ್ಮ ಪರಿಯಂತರ ಅಂತಃಪುರದಲ್ಲಿಯೇ ಇರಬೇಕೆಂದು ಆಗ್ರಹ ಮಾಡುತ್ತಿರುವಿರಿ ಇದು ಸಮಂಜಸವಾದ ಮಾತಲ್ಲ ನನ್ನ ಮಕ್ಕಳು ಮತ್ತು ಸರದಾರರು ನನ್ನೊಡನೆ ವೈರವನ್ನು ಬೆಳೆಯಿಸಿ ನನ್ನನ್ನು ರಾಜ್ಯಾಧಿಕಾರದಿಂದ ದೂರ ಮಾಡಿ ಬಿಟ್ಟರೆ ಎಷ್ಟು ಕಠಿಣವಾದೀತು; ಎಂಬದ ರಕಡೆಗೆ ನಿಮ್ಮ ಲಕ್ಷ್ಯವು ಇದ್ದಂತೆ ಕಂಡು ಬರುವದಿಲ್ಲ ಇರಲಿ ನನ್ನ ರಾಜ್ಯಕಾವ್ಯಗಳೆಲ್ಲ ನಿವೃತ್ತವಾದಮೇಲೆ ನಾನು ಮೃಗಯಾ ವಿಹಾರದ ಸಲುವಾಗಿ ಎಷ್ಟು ಸಮಯವನ್ನು ವ್ಯಯ ಮಾಡುವೆನೋ ಆ ಸಮಯವನ್ನೆಲ್ಲ ನಿಮ್ಮ ಸಮಾಗಮ ಸುಖದಲ್ಲಿಯೇ ವ್ಯಯಮಾಡುವೆನು, ಅಂದರೆ ನಿಮ್ಮ ವಾಂಛಿತವು ಈಡೇರಿದಂತಾಗುವದಿಲ್ಲವೇ ಎಂದನು,