ಈ ಮಾತುಗಳನ್ನಾಲಿಸಿ ಮುಖ್ಯ ಬೇಗಮ್ಮಳು ಅನ್ನುತ್ತಾಳೆ:- ಸ್ವಾ
ಮಿ ! ತಾವು ನುಡಿದ ಮಾತುಗಳೆಲ್ಲ ಸತ್ಯವಾಗಲಿ ! ಆದರೆ ನಮ್ಮ ಜನ್ಮವ
ಪಶುಗಳಿಗಿಂತ ನಿಂದ್ಯವಾದದ್ದು ಎಂದು ತಿಳಿದುಕೊಳ್ಳುತ್ತೇವೆ ಇದು ನಮ್ಮ
ದುರ್ದೈವವೇಸರಿ.
ಮತ್ತೊಬ್ಬ ಬೇಗಮ್ಮಳು ಅನ್ನುತ್ತಾಳ:- "ಜಹಾಪನಾ! ತಾವು ರಾಜ್ಯದಲ್ಲಿಯ ಒಬ್ಬಯಕಶ್ಚಿತ ಮನುಷ್ಯನ ಪಾರ್ಥನೆಯನ್ನು ಸಹಾ ಮನಸುಗೊಟ್ಟು ಕೇಳಿಕೊಳ್ಳುತ್ತೀರಿ ಹೀಗಿದ್ದು ನಮ್ಮ ಪ್ರಾರ್ಥನೆಯನ್ನು ಕಿವಿಯ ಮೇಲೆ ಸಹಾ ಹಾಕಿ ಕೊಳ್ಳುವದಿಲ್ಲವಲ್ಲಾ ? ಇರಲಿ; ನೀವು ಇನ್ನು ಈ
ರಾಣಿವಾಸದಿಂದ ಹ್ಯಾಗೆ ಪಾರಾಗಿ ಹೋಗುವಿರೋ ! ನೋಡುತ್ತೇನೆ"
ಎಂದಳು.
ಮೂರನೆಯವಳೊಬ್ಬಳು ಮುಂದೆಬಂದು, ಈ ಛೇ ! ಯಜಮಾನರು ಅಷ್ಟು
ಕಠಿಣ ಹೃದಯರಲ್ಲ ! ಇವರು ಇನ್ನು ಮೇಲೆ ನಮ್ಮನ್ನು ವಿರಹ ವ್ಯಥೆಗೆ ಗುರಿಮಾಡಿ, ಎಂದೂ ಹೋಗಲಾರರು ಎಂದು ನಾನು ನಿಶ್ಚಯವಾಗಿ ಹೇಳುತ್ತೇನೆ ” ಎಂದಳು
ನಾಲ್ಕನೆಯವಳೊಬ್ಬಳು ತನ್ನ ನೇತ್ರ ಕಟಾಕ್ಷಗಳನ್ನು ಬೀರುತ್ತ
ಮುಂದೆ ಬಂದು, " ನಾವು ಇಷ್ಟು ಸಮಯದ ವರೆಗೆ ಪ್ರಾರ್ಥನೆ ಮಾಡಿಕೊ
ಡರೂ ಸಹಾ ಅವರಿಂದ ಸಮ್ಮತಿಯ ಒಂದು ಶಬ್ದವಾದರೂ ಹೊರಡಲಿಲ್ಲ
ಅವರ ಮುಖದಲ್ಲಿ ಸೂಸುತ್ತಿರುವ ಮುಗುಳು ನಗೆಯೇ ನಮ್ಮ ಮಾತಿಗೆ
ಒಪ್ಪಿಕೊಂಡಿರುವರೆಂಬ ಸಂಗತಿಯನ್ನು ಸೂಚಿಸುತ್ತದೆ” ಎಂದುನುಡಿದಳು.
ಬಾದಶಹನು ಆ ಮೊಹಿನೀಮೂರ್ತಿಗಳ ನೇತ್ರಕಟಾಕ್ಷದಿಂದ ಮೋಹಿತನಾಗಿ ಹೋದನು ಅವರಿಗೆ ಉತ್ತರಕೊಡಬೇಕೆಂಬ ಪ್ರಜ್ಞೆಯು ಸಹಾ
ಇಲ್ಲದಂತಾಯಿತು ಸ್ವಲ್ಪ ಹೊತ್ತಿನ ಮೇಲೆ ಅನ್ನುತ್ತಾನೆ, “ ಪ್ರಿಯಸಹಚರಿಯರೇ ನಾನು ನಿಮ್ಮೆಲ್ಲರ ಅತ್ಯಂತ ಆಗ್ರಹಕ್ಕೆ ಸಿಲುಕಿ ಬಿದ್ದು ನಿಮ್ಮ
ಸಮಾಗಮ ಸುಖದಲ್ಲಿಯೇ ಕಾಲಹರಣ ಮಾಡಬೇಕೆಂದು ನಿಶ್ಚಯಿಸಿದ್ದೇನೆ
ಎಂದನು.
ಬಾದಶಹನ ಮುಖದಿಂದ ಹೊರಟ ಮಧುರವಾಣಿಯನ್ನು ಕೇಳಿ ಬೇಗಮ್ಮರಿಗೆಲ್ಲ ಉಂಟಾದ ಆನಂದಕ್ಕೆ ಪಾರವೇ ಇಲ್ಲದಾಯಿತು ಅವರೆಲ್ಲರು
ತಮ್ಮ ತಮ್ಮ ಶೃಂಗಾರಚೇಷ್ಟೆಗಳಿಂದ ಬಾದಶಹನನ್ನು ಹೆಚ್ಚು ಹೆಚ್ಚು
ಮೋಹಪಾಶಬದ್ಧನನ್ನಾಗಿ ಮಾಡಿಬಿಟ್ಟರು ಬಾದಶಹನಿಗೆ ತನ್ನ ರಾಜ್ಯದ
ಪರಿವೆಯು ಸಹಾ ಇಲ್ಲದೆ ಹೋಯಿತು ಇದೇ ಪ್ರಕಾರ ಎಂಟು ಹತ್ತು ಮಾ
”
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೭೭
ಈ ಪುಟವನ್ನು ಪ್ರಕಟಿಸಲಾಗಿದೆ
೬೨
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.