ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

GL ೧೬೬ ಯವನ ಯಾಮಿನೀ ವಿನೋದೆ, ಎಂಬ ನನ್ನನ್ನು ಒಬ್ಬ ರಾಕ್ಷಸನು, ಎತ್ತಿಕೊಂಡು ಹೋದನು. ಆಗ ನಾನು ಭಯಕಾಂತಳಾಗಿ, ಕೂಗಿಕೊಳ್ಳುತ್ತಾ ಮರ್ಧೆಹೋದೆನು. ಬಳಿಕ ಎಚ್ಚೆತ್ತುಕೊಡುವಲ್ಲಿ, ನಾನೀಸ್ಥಳದಲ್ಲಿರುವುದನ್ನು ಕಂಡು, ಮಹಾಸ ನವನ್ನು ಹೊಂದಿ, ಇಪ್ಪತ್ತೈದು ಸಂವತ್ಸರಗಳಿಂದಲೂ, ಆತನ ಆಜ್ಞಾ ನುಸಾರವಾಗಿ ನಡೆದುಕೊಳ್ಳುತ್ತಾ ಬಹುಪ್ರಯಾಸದಿಂದ, ಈ ಸ್ಥಳದಲ್ಲಿ ವಾಸಮೂಡಿಕೊಂಡಿರುವೆನು. ಇಲ್ಲಿ ನನ್ನ ಜೀವನವನ್ನು ನಡೆಸಿಕೊಳುವು ದಕ್ಕೆ ಬೇಕಾದವನ್ನುಗಳೂ, ರಾಜಕುವರಿಯಾದ ನಾನು ಧರಿಸುವುದಕ್ಕೆ ತಕ್ಕುವುಗಳಿಂದ ನಾನಾವಸ್ಯಗಳೂ, ಸಮೃದ್ಧಿಯಾಗಿರುವುವು. ಹತ್ತು ದಿನಗಳಿಗೊಂದುಸಾರಿ ಆ ರಾಕ್ಷಸನು ನನ್ನ ಬಳಿಗೆಬಂದು, ನನ್ನಲ್ಲಿ ಅನುರ ಕನಾಗಿದ್ದು ಹೊರಟುಹೋಗುವನೇ ಹೊರತು, ಮತ್ತೆ ಹತ್ತುದಿನಗಳಾ ಗುವವರಿವಿಗೂ, ಬರುವುದಿಲ್ಲ, ಆದರೆ ಆತನು ಹೇಳುವುದೇನಂದರೆ ತಾನು ಮತ್ತೊಬ್ಬ ಹೆಂಡತಿಯನ್ನು ಇಟ್ಟುಕೊಂಡಿರುವಂತೆಯಾ, ಅವಳಲ್ಲಿ ಅನುರಾಗ ಕಡಿಮೆಯಾದ್ದರಿಂದ, ನನ್ನ ಬಳಿಗೆ ಬರುತ್ತಿರುವಂತೆಯಾ, ಹಗ ಲಾಗಲಿ, ರಾತ್ರಿ ಯಾಗಲಿ, ನನ್ನ ಆಗಮನವು ನಿನಗೆ ಅವಶ್ಯಕವಾಗಿದ್ದರೆ ಮನೆಯ ಮುಂಭಾಗದಲ್ಲಿರುವ ಯ:ತ್ರವನ್ನು ಮುಟ್ಟಿದ ಕಡಲೆ, ಬರು ವೆನೆಂದು ಹೇಳಿರುವನು. ಆತನು ಇಲ್ಲಿಗೆ ಬಂದು ಇನ್ನು ನಾಲ್ಕು ದಿನಗಳಾ ಯಿತು. ಇನ್ನು ಐದುದಿನಗಳು ಕಳೆದಬಳಿಕ ಆತನು ಇಲ್ಲಿಗೆಬರುವನು. ಆದುದರಿಂದ ಸಂತೋಷಯುಕ್ತನಾಗಿ ನೀನು ನನ್ನ ಬಳಿಯಲ್ಲಿರುವುದಾದರೆ, ನಿನಗೆ ತಕ್ಕಂತೆ ಉಪಚಾರವನ್ನು ಮೂಡುವೆನೆಂದು ಹೇಳಿದಳು, ನಾನು ನಿನ್ನ ಇಷ್ಟಾನುಸಾರವಾಗಿ ನಡೆದು ಕೊಳ್ಳುವೆನಲ್ಲದ ಅಗಾ ರ್ಥಿತನಾಗಿ ನನಗೆ ಉಪಕಾರಮೂಡಿದುದಕ್ಕಾಗಿ ನಿನಗೆ ವಂದನೆಗಳ ನ್ನು ಸಮರ್ಪಿಸುತ್ತಿರುವೆನೆಂದು ಹೇಳಿದಕೂಡಲೆ ಆಕೆಯು ನನ್ನನ್ನು ಬಹುಮನೋಜ್ಞವಾದ ಮನಶಾಲೆಗೆ ಕರೆದುಕೊಂಡುಹೋಗಿ, ಮಡಿ ಯನ್ನುಡಿಸಿ, ನಾನು ಮೊದಲುಹಾಕಿಕೊಂಡಿದ್ದ, ಬಟ್ಟೆಗಳೆಲ್ಲವನ್ನು ತೆಗೆ ದುಕೊಂಡು, ಅದಕ್ಕಿಂತಲೂ ಅಮೂಲ್ಯವಾದವುಗಳಾಗಿ, ಅವಳ ಸಹವಾ ಸದಲ್ಲಿ ನಾನು ಇರುವುದಕ್ಕೆ ಅನುಕೂಲವಾದ ಉಡುಪುಗಳನ್ನು ಕೊಟ್ಟು ದುಕ್ಕಗಿ, ನಾನುತುಂಬ ಸಂತೋಷಯುಕ್ತನಾದನು.