________________
೧೦೧ (೨೬) ಅರೇಬಿರ್ಯ ನೈಟ್ಸ್ ಕಥೆಗಳು ಆ ದ್ವೀಪಕ್ಕೂ, ಬಹುದೂರವಿರುವದೆಂದು ತಿಳಿದುಬಂದಿತು. ಆಗ ಭಗ ಪಂತನೆ ಮೊದಲಿನಂತ, ನನ್ನ ಆಪದವನ್ನು ನಾಶಮಡಿ, ಸಂರಕ್ಷಿಸೆಂದು, ಬೇಡಿಕೊಂಡನು. ಹೀಗಿರುವಲ್ಲಿ ಭೂಮಿಯಕಡೆಯಿಂದೊಂದು ಹಡಗುಬ ರುತ್ತಿರುವುದನ್ನು ಕಂಡು ಅವರು ಇಲ್ಲಿ ತಂಗುತ್ತಾರೆಂದು ತಿಳಿದವನಾಗಿ ಸಂತೋಷಪಟ್ಟರೂ, ಅವರು ನನಗೆ ಶತ್ರುಗಳೊ, ಅಥವಾ ಮಿತ ರೂ, ತಿಳಿಯದಿರುವುದರಿಂದ ಅವರನ್ನು ಕಾಣಿಸಿಕೊಳ್ಳುವುದು, ಯುಕ್ತವಲ್ಲವೆಂ ದು, ಎತ್ತರವಾದೊಂದು, ಮರದಮೇಲೆ, ಕುಳತುನೋಡುತ್ತಾ ಇದ್ದೆನು ಆ ಹಡಗು, ಆ ಸ್ಥಳಕ್ಕೆ ಬಂದಕೂಡಲೆ ಅದರಲ್ಲಿದ್ದ ಹತ್ತು ಮಂದಿ ಜನರು ಭೂಮಿಯನ್ನಗೆಯುವ ಪದಾರ್ಥಗಳನ್ನು ತೆಗೆದುಕೊಂಡು, ಆ ದಿನದ ಮಧ್ಯಭಾಗದಲ್ಲಿ ಅಗೆಯುತ್ತಿದ್ದು, ಒಂದಾನೊಂದು ತಂತಕವಾಟವನ್ನು ಮೇಲಕ್ಕೆತ್ತಿದರು. ಬಳಿಕ ತಮ್ಮಹಡಗಿನಲ್ಲಿ ಆಹಾರದಿನಸುಗಳನ್ನು ತೆಗೆ ದುಕೊಂಡು, ಆ ಪಾತಾಳಗ್ರಹವನ್ನು ಸೇರಿದುದನ್ನು ನಾನು ವರವಕ್ಷ್ಯ ರ್ಯದಿಂದ ನೋಡುತ್ತಿದ್ದನು. ಬಳಿಕ ಅವರು ಪುನಹ ಹೊರಗಬಂದು ಹಡಗಿನಬಳಗೆ ಹೋಗಿ ಒಬ್ಬ ಮುದುಕನನ್ನು ಕರೆತಂದರು, ಆತನಬಳ ಯಲ್ಲಿ ಹದಿನಾಲ್ಕು ಹದಿನೈದು ಸಂವತ್ಸರದ ಒಬ್ಬ ಬಾಲಕನೂ ಇದ್ದನು. ಅವರು ಅವನನ್ನು ಆ ಅಂತಗೃಹದಲ್ಲಿ ಹಾಕಿ ಬಾಗಿಲನ್ನು ಮುಚ್ಚಿ ಮೇಲೆ ಣ್ಣುಹಾಕಿ, ಹಡಗಿನಬಳಿಗೆ ಹೋಗುತ್ತಿರುವಾಗ ಹುಡುಗನನ್ನು ನಾನು ಕಾಣಲಿಲ್ಲವಾದುದರಿಂದ, ಆತನು ಆ ಪಾತಾಲಗ್ರಹದಲ್ಲಿಯೇ ಇರುವನೆಂದೆಂ ದುಕೊಂಡೆನು. ಅಲ್ಲದೆ ನನಗೆ ಅತ್ಯಂತವಾದ ಆಶ್ಚರ್ಯವೂ ಉಂಟಾ ಯಿತು. ಆ ಜನರು ಹಡಗನ್ನು ಹತ್ತಿ ಕಣ್ಣಿಗೆ ಕಾಣಿಸದು ದೂರ ಹೊರಟುಹೋದಬಳಿಕ ನಾನು ಮರದಿಂದಿಳಿದು, ಅವರು ಅಗೆದ ಸ್ಥಳಕ್ಕೆ ಬಂದು ಮಣ್ಣನ್ನು ಎತ್ತಿಹಾಕಿ, ಕೆಳಗಡೆ ಇದ್ದ ಹಲಗೆಯನ್ನು ಕಲ್ಲನ್ನು ತೆಗೆದು ಬಾಗಿಲಿನಿಂದ ಒಳಕ್ಕಿಳಿದು, ಪ್ರವೇಶಮೂಡುವಲ್ಲಿ ಆ ಸ್ಥಳದಲ್ಲಿ ನೆಲ ದಮೇಲೆಂದು ಹಾಸಿಗೆಯು ಹಾಕಿದ್ದಿತು. ಅದರ ಬಳಿಯಲ್ಲಿ ಸುಂದರವಾ ದ ವಕ್ಷ್ಯಗಳಿಂದ ಗೌಸಸಾಕಿದ ಒಂದು ಮಂಚವಿದ್ದಿತು. ಅದರಮೇಲೆ ಒಬ್ಬ ಹುಡುಗನು, ಕೈಯ್ಯ? ಒಂದ, ಬೀಸಣಿಗೆ ಯನ್ನು ಹಿಡಿದುಕೊಂಡು ಆತುಕೊಂಡಿದ್ದನು. ಆತನದಿಯಲ್ಲಿ ಹೂ ವಿನ ಕುಂಡಗಳ, ಹಣ್ಣಿನ ತಟ್ಟೆಗಳೂ ಇದ್ದವು. ಇಮ್ಮಗಳೆಲ್ಲವನ್ನು