ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

bರಿ೬ ಯವನ ಯಾಮಿನೀ ವಿನೋದ ಎಂಬ, ನಾಗಿ, ಎಲೈ ರಾಜಪುತ ನೇ ! ಇದು ನಲವತ್ರನೆಯದಿನ ನಾನಿನ್ನು ಸಾ ಯದ ಬದುಕಿರುವುದರಿಂದ ಭಗವಂತನಿಗೆ ವಂದನೆಗಳನ್ನು ನೋಡುವುದಲ್ಲದೆ, ನಿನ್ನ ಸತ್ಸಂಗದಿಂದ ನಾನು ಸುಖವಾಗಿರುವುದಕ್ಕಾಗಿ, ನಿನಗೂ ವಂದನೆಗಳ ನ್ನು ಸಮರ್ಪಿಸುವೆನು, ನನ್ನ ತಂದೆಯು, ಇಲ್ಲಿಗೆ ಶೀಘ್ರ ವಾಗಿ ಬರುವು ದರಿಂದ ನೀನು ಹಡಗನ್ನು ಹತ್ತಿ ನಿನ್ನ ರಾಜ್ಯವನ್ನು ಸೇರುವುದಕ್ಕೆ ಮಾಡ ಬೇಕಾದ ಪ್ರಯತ್ನವನ್ನು ಎಚ್ಚರಿಕೆಯಿಂದ ಮಾಡುವೆನು, ಇಸ್ಮರಕ್ಕೆ ನೀನು ಸ್ವಲ್ಪ ಬಿಸಿನೀರನ್ನು ಕಾಸಿ, ಈ ತೊಟ್ಟಿಯಲ್ಲಿ ಹಾಕಿದರೆ, ನಾನು ನನ್ನ ತಂದೆಯನ್ನು ಸಂತೋಷದಿಂದ ಬರಮಾಡಿ ಕೊಳ್ಳುವದಕ್ಕಾಗಿ ಸ್ನಾನ ಮಾಡಿ ಬೇರೆ ಉಡುಪುಗಳನ್ನು ಹಾಕಿಕೊಳ್ಳುವೆನು. ಎಂದು ಹೇಳಲು, ನಾನು ನೀರನ್ನು ಕಾಸಿ ತೊಟ್ಟಿಯಲ್ಲಿ ಹಾಕಲು ಆವರ್ತಿಕನ ಮಗನು ಸ್ನಾನ ಕೈಬಂದ ಕೂಡಲೆ, ಮೈಯ ಸಾನಮಾಡಿ ಬಟ್ಟೆಗಳನ್ನು ಹಾಸಿನ ಲಗಿಸಿ, ಮೇಲೆ ಹೊದಿಕೆಯನ್ನೂ ಹೊದಿಸಿದೆನು. ಆತನು ಸ್ವಲ್ಪ ಹೊತ್ತು ನಿದ್ರೆಮಾಡಿ ಎದ್ದು ನನ್ನನ್ನು ಕರೆದು ಎಲೆ ರಾಜಪುತ್ರನೇ ! ದಯಮಾಡಿ ಬಂದು ಖರ್ಜೂರದ ಹಣ್ಣನ್ನೂ, ಕೊಂಚಸಕ್ಕರೆಯನ್ನು ತಂದುಕೊಟ್ಟರೆ ಅದನ್ನು ತಿಂದು ಬಳಲಿಕೆಯನ್ನು ಹೋಗಲಾಡಿಸಿ ಕೊಳ್ಳುವೆನೆಂದು ಹೇಳಿ ದೆನ್ನು, ಅದನ್ನು ತೆಗೆದುಕೊಂಡು ಬಂದುಕೊಟ್ಟು ಆ ಖರ್ಜ್‌ರವನ್ನು ಕೊ ಯುವದಕ್ಕೆ ಚೂರಿಯಿಲ್ಲದುದರಿಂದ, ನಾನು ಆತನನ್ನು ಕುರಿತು ಕಲ್ಲಿ ರುವದೆಂದು ಕೇಳಿದೆನು, ಆತನು ತನ್ನ ತಲೆಹತ್ತಿರ ಗೋಡೆಯಮೇಲಿರು ವುದೆಂದು ಹೇಳಿದೆನು. ನಾನು ಆಗೋಡೆಯಮೇಲೆ ಹತ್ತಿಳಿಯುವಾಗ, ಆತನ ಹಾಸಿಗೆಯ ಬಟ್ಟೆಯು, ನನ್ನ ಕಾಲಿಗೆ ಸಿಕ್ಕಿಕೊಂಡು, ನಾನು ಆತನ ಮೇಲೆ ಬಿದ್ದೆನು. ಆಗ ನನ್ನ ಕೈಯಲ್ಲಿದ್ದ ಕತ್ತಿಯು ಆತನ ಎದೆ ಯಮೇಲೆ ನಾಟಿಕೊಂಡಿತು. ಅದನ್ನು ನೋಡಿದ ಕೂಡಲೆ ನಾನು ಹಾಯೆಂ ದರಚಿಕೊಂಡು, ಬಾಯನ್ನು , ಎದೆಯನ್ನು, ಹಣೆಯನ್ನು ಹೊಡೆದುಕೂ {ತಾ, ಅಳುತ್ತಿದ್ದನು. ಅಯೋ ! ಆತನಿಗೆ ಉಂಟಾಗುವ ಆಪತ್ತನ್ನು ಪೂರ್ತಿಯಾಗಿ ನಿವಾರಣೆ ಮಾಡುವುದಕ್ಕೆ, ಇನ್ನು ಸ್ವಲ್ಪ ಕಾಲವೇ ಅಲ್ಲವೆ ? ಬೇಕಾಗಿ ರುವುದು, ನಾನು ಯಾವಾಗ ಆತನ ಆಪದಗಳೆಲ್ಲವೂ ನಾಶವಾಯಿತಂದೆಂದು ಕೊಂಡೆನೋಆಗಲೆ, ನಾನುಆತನಿಗೆ ಮೃತ್ಯುರೂಪನಾದೆನು. ಆ