________________
೩೧8 ಯವನಯಾಮಿನೀ ವಿನೋದ ಎಂಬ, ವನ್ನು ಹೋಗಿ ನೋಡಿಕೊಂಡು, ಯಾತ್ರೆಯನ್ನು ತೀರಿಸಿಕೊಂಡು, ಬರ ಬೇಕಂಬಭಿಲಾಷೆಯುಳ್ಳವನಾಗಿದ್ದೆನು. ನಾನು ಯಾತ್ರೆಯನ್ನು ಮುಗಿಸಿಕೊಂಡು, ರಾಜನ ಬಳಿಗೆ ಬಂ ದು, ನನ್ನ ಪ್ರದೇಶಕ್ಕೆ ಪ್ರಯಾಣಮಾಡಲು ಅಪ್ಪಣೆ ಕೊಡಬೇಕೆಂದು ಬೇಡಿಕೊಂಡೆನು. ಆತನು ನನಗೆ ಬಹಳವಾಗಿ ಮಲ್ಕಾದೆಮಾಡಿ, ತನ್ನ ರಾವ್ಯದಲ್ಲಿರುವ ಉತ್ತಮ ವಸ್ತುಗಳನ್ನು ಬಹುಮಾನವಾಗಿ ಕೊಟ್ಟು ನನ್ನೂರಿಗೆ ಪ್ರಯಾಣಮಾಡಲು, ಅಪ್ಪಣೆ ಕೊಟ್ಟನು. ಅಲ್ಲದೆ ಬಳಿಕ ನಮ್ಮ ರಾಜಾಧಿರಾಜರಿಗೊಂದು, ವಿಜ್ಞಾಪನಾವತ್ರಿಕೆಯನ್ನು ಬರೆದು, ನನ್ನ ಕೈಗೆ ಕೊಟ್ಟು, ಅಯಾ ! ನೀನು ಇದನ್ನು ಬಹು ಜಾಗ್ರತೆಯಿಂ ದ ತಗೆದುಕೊಂಡು, ನನ್ನ ಮೂಲಕವಾದ ಮರ್ಯಾದೆಯನ್ನು ಅವರಿಗೆ ತಿಳಿಸಿ, ಈ ಪತ್ರವನೊಪ್ಪಿಸಿ, ನಾನು ಬೆಳೆಸಬೇಕಂದಿರುವ ಸ್ನೇಹದ ತಾ ಕೃರ್ಯವನಾತನಿಗೆ ತಿಳಿಸಬೇಕೆಂದು ನುಡಿದನು. ನಾನು ಆತನನ್ನು ಕುರಿತು, ತನ್ನ ಅಪ್ಪಣೆಯಂತೆ ಈ ಕಾಗದವನ್ನು ತೆಗೆದುಕೊಂಡು, ಹೊ ಗಿ, ನಮ್ಮಧಿರಾಜನಾದ ಹರ್ರೋ ಅಲರಾದವರ ಸನ್ನಿಧಿಯಲ್ಲಿ ಕೊಟ್ಟು ತಾವು ಮಾಡಿದ ಮನ್ನಣೆಯನ್ನು ಅವರಿಗೆ ತಿಳಿಯಪಡಿಸುವನೆಂದು ಹೇಳಿದ 'ಕೂಡಲೆ, ಆ ರಾಜನು ಹಡಗಿನ ಯಜಮಾನನ್ನು ಕರೆಸಿ, ಈ ದೊಡ್ಡ ಮನುಷ್ಯನಾದ ಸಿಂದಬಾದನನ್ನು ಬಹು ಮುರಾದೆಯಿಂದ ನನ್ನಂತೆ ಭಾವಿಸಿ, ಆತನ ಊರಿಗೆ ಕರೆದುಕೊಂಡು ಹೋಗಬೇಕೆಂದು ಹೇಳಿದನು. ನಂತರ ನಾನು ಆತನು ಕೊಟ್ಟ ವಿಜ್ಞಾಪನಾಪತ್ರಿಕೆಯನ್ನು ನೋಡಲು ಅದು ಅತ್ಯುತ್ತಮವಾದ ಹಳದಿಬಣ್ಣದ ಹುಲಿಯ ಚರ್ಮದಮೇಲೆ, ನೀಲ ವರ್ಣದ ಅಕ್ಷರಗಳನ್ನು ಕೆತ್ತಿರುವುದರಿಂದ, ನೋಡುವುದಕ್ಕೆ ಬಹು ಸುಂದ ರವಾಗಿದ್ದಿತು. ಆ ಕಾಗದದ ವಿವರವೇನೆಂದರೆ: ಸಾವಿರ ಆನೆಗಳನ್ನು ಸಹಜದಿಂದ ಬಾರಿಸುತ್ತ ಲಕ್ಷೇಪಲಕ್ಷ ರತ್ನರಾಜಿಗಳಿಂದ ಹೊಳೆಯುತ್ತಿರುವ ಬಾಗದದು ಪಟ್ಟಣವನ್ನಾಳುವ ಕಿರೀಟಕೋತೀರಸಂಘಟಿತ ರತ್ನ ಕಾಂತಿಯಿಂದ ದಿಮ್ಮಿಂಡಲವಂ ಬೆಳಗುತ್ತಿ ರುವ ರತ್ನಮುಕುಟಧಾರಕರಾದ ಸರ್ವಸಂಪದ್ಭುಸಾದ ಇಂಡಿಯಾದೇಶದ ರಾಜರಾದ ಕಪು, ಹರ್ರೆ ಅಲರಾಕ್ಷಿದವರ ಸನ್ನಿಧಿಗೆ_ಸಿರಂದಿಬಾ”