ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೩೦ ಯವನ ಯಾಮಿನೀ ವಿನೋದ ಎಂಬ, ಕೂಡಲೆ ಕಥೆಯನ್ನು ನಿಲ್ಲಿಸಿ, ಮರುದಿನದ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. ೯೧ನೆ ರಾತಿ ಕಥೆ. ಸಲ್ಮಾನರೇ! ಕಲೀಫರು ಅದನ್ನು ನೋಡಿದ ಕೂಡಲೆ, ಎಷ್ಟೋ ದು ಆಶ್ಚರ್ಯಯರದರೆಂಬುದನ್ನು, ನೀವು ತಿಳಿದುಕೊಳ್ಳಬಹುದೆಂದು ನಾನು ಖಂಡಿತವಾಗಿ ಚೇಳವನು. ಆತನು ಅದನ್ನು ನೋಡಿದ ಕೂಡಲೆ ಹೊಂದಿದ ಆಶ್ಚರ್ಯವೆಲ್ಲವೂ, ಕೋಪರವಾಗಿ ಪರಿಣಮಿಸಿ, ತನ್ನ ಮಂತ್ರಿಯನ್ನು ಕುರಿತು, ಅಯ! ನಿರ್ಭಾಗ್ಯನಾದ ಮಂತ್ರಿಯೇ! ನಿನ್ನ ತಹ ಆಯೋಗ್ಯನು ನನ್ನ ದೇಶದಲ್ಲಿ ಮಂತ್ರಿಯಾಗಿರುವುದರಿಂದ, ನನ್ನ ದೇ ಶದ ಪ್ರಜೆಗಳಿಗಿಂತಹ, ದುರವಸ್ಥೆಯುಂಟಾಗಿರುವುದಲ್ಲ ! ಹಾ ! ಇದನ್ನು ನಾನೆಂತು ತಾಳಲಿ ! ಈ ಕರಕೃತ್ಯವನ್ನು ಮಾಡಿದ ದುರಾತ್ಮನನ್ನು ಹಿಡಿದು, ಆತನನ್ನು ಕೊಲ್ಲಿಸದೆ ಹೋದರೆ, ನಿನ್ನನ್ನು ನಿನ್ನ ಸಂಗಡ ಇ ರುವ ನಲವತ್ತು ಜನರನ್ನು ಪ್ರಮಾಣಪೂರ್ವಕವಾಗಿಯೂ ಸಂಹರಿಸುವೆ ನಂದು ಹೇಳಲು, ಮಂತ್ರಿಯು ಆಕೆಲಸವನ್ನು ನಿರ್ವಹಿಸುವುದಕ್ಕೆ ಸಾಕಾ ದಷ್ಟು ಕಾಲವನ್ನು ಅನುಗ್ರಹಿಸಬೇಕೆಂದು ಬೇಡಿಕೊಳ್ಳಲು, ಆತನು,ಮೂರ ದಿನಗಳಿಗಿಂತಲೂ ಹೆಣ್ಣಾದ ಅವಧಿಯು ದೊರೆಯಲಾರದೆಂದು ಹೇಳಿದನು. ಬಳಿಕ ಮಂತ್ರಿಯು ವ್ಯಸನಾಕ್ತನಾಗಿ ತನ್ನ ಮನೆಯನ್ನು ಸೇರಿ, ಆಹಾ ! ಇಷ್ಟೊಂದು ಜನ ನಿಬಿಡವಾದ ಈ ಪಟ್ಟಣದಲ್ಲಿ ಗೂಢವಾ ಗಿ ಪಾಣಹತ್ಯಮಾಡಿದವನನ್ನು ನಾನು ಹೇಗೆ ಕಂಡು ಹಿಡಿಯಬಹುದು, ಅಂಥವನು ಈ ಊರಲ್ಲಿ ತಾನೆ ಹೇಗಿರುವನು ? ಎಲ್ಲಿ ಹೋಗಿರುವನೋ ಕಾ ಣೆನಲ್ಲಾ ! ಅಯ್ಯೋ ! ನನ್ನ ತಾಣವನ್ನು ಉಳಿಸಿಕೊಳ್ಳಬೇಕಾದರೆ, ಕಾ ರಾಗೃಹದಲ್ಲಿರುವ ಯಾವನಾದರೂ ಒಬ್ಬ ನಿರ್ಭಾಗ್ಯನನ್ನು ಕೊಲ್ಲಿಸಿ, ನಾ ನು ಬದುಕುವ ಮಾರ್ಗವನ್ನು ನೋಓಕೊಳ್ಳಬೇಕು, ನನ್ನದೊಂದು ಬಾ ಣವನ್ನುಳಿಸಿಕೊಳ್ಳುವುದಕ್ಕಾಗಿ, ಇಂತಹ ಕ ರ ಕರ್ಮವನ್ನು ಮಾಡ ಬೇಕಾಗಿರುವುದಲ್ಲ, ! ಈ ಕಾದ ಕರ್ತವನ್ನು ಮಾಡುವುದಕ್ಕಿಂತಲೂ, ಪ್ರಾಣವನ್ನೇ ಬಿಡುವುದು ಲೇಸೆಂದು ಯೋಚಿಸಿದನು.