ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೬೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೫೬ ಯವನಯಾಮಿನೀ ವಿನೋದ ಎಂಬ, ವಿರಾ ! ಎಂದು ವರ್ತಕನು ಕೇಳಲು, ಬದರದೀನನು ಹೌದಯಾ! ನೀ ನು ಅನುಮಾನಿಸಬೇಕಾದ ಕೆಲಸವಿಲ್ಲ, ನನ್ನ ಬಾಲ್ಕು ಹಡಗುಗಳ ಸರ ಕನ್ನು ನಿನಗೆ ಮಾರಿಬಿಟ್ಟಿರುವೆನೆಂದು ನಂಬಿಕೆಯಾಗಿ ಹೇಳುವೆನು, ವಿನ ಲು, ಆದರೂ ವರ್ತಕನು, ಒಂದು ಚೀಟಿಯನ್ನು ಬರೆದು ಕೊಡಬೇಕೆಂದು ಕೇಳಿದುದಕ್ಕಾಗಿ, ಆತನು ಹೀಗೆ ಬರೆದನು, ಬಾಲನೂರಿನ ಬದರೋದೀನ ನಾದ ನಾನು, ಹಿಮ್ಮಕನಲವರ್ತಕನಿಗೆ ಬರೆದು ಕೊಟ್ಟ ವಿಕಯವತ್ರ;ನಾನು ನನ್ನ ಪಿರ್ತಾರ್ಜಿತವಾದ ಈ ರೇವಿಗೆ ಬರುವ ಹಡಗುಗಳಲ್ಲಿನ, ಮೊ ದಲನೆಯು ಸರಕುಗಳನ್ನು ನಿನಗೆ ಒಂದು ಸಾವಿರ ಹೆರ್ಕಿಸುಗಳಿಗೆ ಮಾರಿ ರುವುದರಿಂದ, ಈ ಚೀತಿಯ ದವಾಗಿರತಕ್ಕದೆಂದು ಬರೆದು, ಕೆಳಗೆ ರುಜ್ನನ್ನು ಮಾಡಿದನು. ಆ ಬಳಿಕ ಆ ಚಿಪಿಯನ್ನು ತೆಗೆದುಕೊಂಡು, ಬದರದೀನನಿಂದ ಅಪ್ಪಣೆಯನ್ನು ಪಡೆದು, ತನ್ನ ವೂರಿಗೆ ಹೊರಟು ಹೋದನು. ಬದರೋ ದೀನನು ತನ್ನ ತಂದೆಯ ಸಮಾಧಿಗೆ ಹೋಗಿ ಭೂಮಿಗೆ ಬಾಗಿ ನಮಸ್ಕರಿಸಿ ಕಣ್ಣೀರಿನಿಂದ ನೆನೆಯುತ್ತಾ ಅಗೋರಿಗೆ ತಲೆಯನ್ನಿಟ್ಟು ಕುಳಿತು, ಎಲೈ ನಿರ್ಭಾಗ್ಯನಾದ ಬದರೋಟೀನನೆ ! ತುದಿಯನ್ನು ಕಳೆದುಕೊಂಡು, ದುಃಖಿಸುತ್ತಿರುವ ನಿನ್ನನ್ನು ಅನ್ಯಾಯವಾಗಿ ತೊಂದರೆ ಪಡಿಸಬೇಕೆಂದು ಕಾದುಕೊಂಡಿರುವ, ಸುಲಾನನ ಬಾಧೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ, ಎಲ್ಲಿಹೋಗುವೆ, ನೀನು ಮೊದಲು ಅನುಭವಿಸುತ್ತಿದ್ದುದೇ ಸಾಲದೆ, ಎಂದು ಅತ್ತು ಮೂರ್ಛಾಾಂತವಾಗಿ, ಮರಳಿ ಎಚ್ಚತ್ತು ಪುನಹ ನೆಲಕ್ಕೆ ಬಿದ್ದ ನು, ನಗರಿಯಲ್ಲಿ ವಾಸಮಾಡುತ್ತಾ ಹಗಲೆಲ್ಲಾ ಅಡಗಿಕೊಂಡಿದ್ದು ರಾತ್ರಿ ಕಾಲದಲ್ಲಿ ಸಂಚಾರವಾಡುತ್ತಿದ್ದ, ಒಬ್ಬಾನೊಬ್ಬ ರಾಕ್ಷಸನು ಆ ಗೋರಿ ಯ ಬಳಿಗೆ ಬಂದು, ಮರ್ಣಿಕೊದಿ ಬಿದ್ದಿರುವ ಬದರೋದೀನನ ಸೌಂ ದರವನ್ನು ನೋಡಿ, ನಿಸ್ಕಯಯುಕ್ತನಾದನು. ಏಂದು ಹೇಳಿ ಬೆಳಗಾ ದಕಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಹೇಳಲಾರಂಭಿಸಿದಳು. F” A Cಿ ಕಥೆ. ಪ್ರಹರಜಾದಿಯ ಸುಲ್ತಾನರನ್ನು ಕುರಿತು, ಸಾಮೂಾ ! ಬಳಿಕ ಗಯವರನೆಂಬ ಪ್ರಧಾನ ಮಂತ್ರಿ ಕಲೀಫರನ್ನು ನೋಡಿ ಇಂತೆಂದನು,