________________
2L8 ಯವನಯಾಮಿನೀ ವಿನೋದ ಎಂಬಿ, ಇದ್ದಿತು. ಈ ತರದಿಂದ ಮಂತ್ರಿ ಪುತಿಯು ಏಳುಸಾರಿ ತನ್ನ ಅಲಂಕಾರ ಗಳನ್ನು ಬದಲಾಯಿಸಿದ ನಂತರ, ವಾದ್ಯಘೋಷವು ನಿಂತಿತು. ಬದರೆ ದೀನನು ಸ್ವಲ್ಪ ಮರೆಯಾಗಿರುವಂತೆ ಸಂಜ್ ಮಾಡಲ್ಪಟ್ಟು, ಹಾಗೆಯೇ ಇದ್ದನು. ಇತರ ದೊಡ್ಡ ಮನುಷ್ಯರೆಲ್ಲರೂ ತಂತಮ್ಮ ಮನೆಗಳಿಗೆ ಹೋದರು, ಆದುದರಿಂದ ಆ ಮಂತ್ರಿ ಪುತ್ರಿಯ ಕುಟುಂಬಕ್ಕೆ ಸೇರಿದ ಜನಗಳೇ ಅಲ್ಲಿದ್ದರು. ಬಳಿಕ ವಧುವು ತನ್ನ ವಸ್ತ್ರಗಳನ್ನು ಬದಲಾಯಿ ಸುವುದಕ್ಕಾಗಿ, ಒಬ್ಬ ದಾದಿಯೊಡನೆ ತನ್ನ ಅಂತಃಪುರವನ್ನು ಸೇರಿದಳು. ಆಗ ಆ ಮನೆಯಲ್ಲಿ ಗೊನು ಮನುಷ್ಕನೂ, ಬದರೋದೀನನೂ, ಚಾರಕ ರಲ್ಲಿ ಕೆಲವರೂ ಇದ್ದರೇ ಹೊರತು ಮತ್ತಾರೂ ಇರಲಿಲ್ಲ. ಹೀಗಿರುವಲ್ಲಿ ಆ ಗೂನನು ಬದರೋ ದೀನನನ್ನು ನೋಡಿ ಅಸೂಯೆಯಿಂದ ಎಲಾ ! ನೀ ನು ಯಾಕೆ ಎಲ್ಲರಂತೆ ತೊಲಗಿ ಹೋಗಲಿಲ್ಲ. ಇಲ್ಲಿ ನಿಂತಿರುವುದಕ್ಕೆ ಕಾರ ಣವೇನು ? ಕೂಡಲೆ ಈ ಸ್ಥಳವನ್ನು ಬಿಟ್ಟು ಹೊರಟು ಹೋಗೆಂದು, ನಿರ್ಲಕವಾಗಿ ಮಾತನಾಡಲು, ಬದರೋದೀನನು, ಸುಮ್ಮನೆ ತೆರಳಲಾ ರಂಭಿಸಿ, ಸ್ವಲ್ಪ ದೂರ ಹೋಗಲು, ಕೂಡಲೆ ಆತನನ್ನು ರಾಕ್ಷಸನು, ಯಕ್ಷಕನ್ನಿ ಕಯ ಸಹ ಕೈ ಹಿಡಿದು ಅಲ್ಲಿಯೇ ನಿಲ್ಲಿಸಿ, ಅಯ್ಯಾ ! ಏತ ಕ್ಕೆ ಹೊರಟು ಹೋಗುತ್ತಿದೆ ! ಈಗ ಆ ಗೂನನು ಅಂತಃಪುರದಲ್ಲಿಲ್ಲ, ಏನೋ ಕೆಲಸದ ನಿಮಿತ್ತವಾಗಿ ಹೊರಗೆ ಹೋಗಿರುವನು. ಆದುದರಿಂದ ನೀನಿಲ್ಲಿಯೇ ನಿಂತು, ಏಕಾಂತದಲ್ಲಿ ಮಂತ್ರಿ ಪುತ್ರಿಯಸಂಗಡ ಇರುವಾಗ, ನಾನೇ ನಿನ್ನ ಗಂಡನು, ಸುಲ್ತಾನನು, ಕುದುರೆಚಾಕರನಾದ ಆ ಗೂನನ್ನು ಪರಿಹಾಸಮಾಡಿ ಕಳುಹಿಸಿದನು. ಆತನು, ಕುದುರೆ ಲಾಯದಲ್ಲಿ ಹುರಳ ಯನ್ನು ಬೇಯಿಸುತ್ತಿರುವನು. ನಾನೇ ನಿನ್ನ ಗಂಡನಲ್ಲದೆ ಮತ್ತಾರೂ ಇಲ್ಲವೆಂದು ಧೈರದಿಂದ ಹೇಳು. ಅದಕ್ಕವಳು ಒಪ್ಪದೆ ಹೋದರೆ, ನಿನ್ನ ಬುದ್ಧಿ ಚಾತುರವನ್ನು ಖರ್ಚುಮಾಡಿ, ಆಕೆಯ ಮನಸ್ಸು ಕರಗುವಂತ ಹ ಮಾತುಗಳನ್ನಾಡಿದರೆ, ಸ್ವಭಾವ ಸುಂದನಾದ ನಿನ್ನ ಮಾತುಗಳಿಗೆ ಸೋ ತು, ಆಕೆ ನಿನ್ನನ್ನು ವರಿಸುವಳು. ಅವಳೇ ನಿನ್ನ ಹೆಂಡತಿಯಲ್ಲದೆ ಮ ತಾರು ಇಲ್ಲ. ಇದಕ್ಕೆ ಅಡ್ಡಿಯಾಗಿ ಮಧ್ಯದಲ್ಲಿ ಆ ಗೂನನು ಬಂದರೆ ನಾ ನು ಅವನನ್ನು ನೋಡಿ, ಕೊಳ್ಳುವನು. ಅಲ್ಲದೆ ನಿರ್ವಿಘ್ನವಾಗಿ ನಿನ್ನ ವಿವಾಹವು ನೆರವೇರುವಂತೆ ನಾನು ಮಾಡುವೆನು, ನೀನು ಸಂತೋಷದಿಂ