ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬೬ ಯವನ ಯಾಮಿನೀ ವಿನೋದ ಎಂಬ, ಯನ್ನು ಕರೆದುತಂದು, ಆ ಅಂತಃಪುರದಲ್ಲಿ ಬಿಟ್ಟು ತೊರೆಯಾಗಿಬಾಗಿಲನ್ನು ಮುಚ್ಚಿಕೊಂಡು, ಅತ್ತಿತ್ತ ನೋಡದ ಹೊರಟು ಹೋದಳು. ಬಳಕ ಮಂತ್ರಿ ಪುತ್ರಿಯಂ, ಗೂನ ಪುರುಷನಲ್ಲದೆ ಸರ್ವಾಂಗ ಸುಂದರನಾದ ಒಬ್ಬ ಪುರುಷನು ಕುಳಿತಿರುವುದನ್ನು ಕಂಡು ಏನಯ್ಯಾ ! ಸ್ನೇಹಿತನೇ ! ನನ್ನ ಗಂಡನು ಇಲ್ಲಿಲ್ಲದೆ ! ನೀನುಮಾತು ಕುಳಿತಿರುವುದಕ್ಕೆ ಕಾರಣವೇನು, ನೀ ನು ಆತನ ಸ್ನೇಹಿತನೇ ? ಎಂದು ಕೇಳಿದಳು. ಆತನು, ಸ್ತ್ರೀಯ, ನಾನಾ ದರೋ ನೀನು ಗಂಡನೆಂದು ಹೇಳಿದ ಗೂನು ಮನುಷ್ಯನಂತಿರುವವನಲ್ಲ. ನನ್ನ ಹೆಸರು ಬದರೀನು ಹರ್ಸಿ, ಎಂದು ಹೇಳಲು, ಆಕೆ, ಇದೇ ನು ನನ್ನ ಗಂಡನನ್ನು ನಿಂದಿಸುತ್ತಿರುವೆ ಎಂದು ಕೇಳಿದಳು, ಅಯ್ಯೋ ! ನಾನೇ ನಿನ್ನ ಗಂಡನಾಗಿರುವಲ್ಲಿ, ನಾನು ಯಾರನ್ನು ನಿಂದಿಸಲಿ ! ಆ ಗನ ನು ಕುದುರೆಯ ಚಾಕರನೇ ಹೊರತು ನಿನ್ನ ಗಂಡನೆಂದಿಗೂ ಅಲ್ಲ, ಸುಲ್ಲಾ ನನು ನಿಮ್ಮ ತಂದೆಯನ್ನು ವರಿಹಾಸಮಾಡುವುದಕ್ಕಾಗಿ, ಹೀಗೆ ಮಾಡಿದ ನೆಂಬುದು, ವಿವಾಹ ಮಂಟಪದಲ್ಲಿ ನೆರೆದಿದ್ದವರೆಲ್ಲರೂ ಮಾಡುತ್ತಿದ್ದ ಹಾ ಸೃದಿಂದಲೇ ನಿನಗೆ ಗೊತ್ತಾಗಿರ ಬಹುದು, ಈಗ ಆ ಗೂನನ್ನು, ಕುದುರ ಲಾಯದಲ್ಲಿ ಹುರಳಿಯನ್ನು ತಿನ್ನುತ್ತಾ ಕುಳಿತಿರುವನು. ಇನ್ನು ಆತನ ಮಾತನ್ನು ಮರೆತುಬಿಡು, ನಾನೇ ನಿನ್ನ ಗಂಡನಲ್ಲದೆ, ಆ ಗೂನನ್ನು ಪುನ ಹ ನಿನ್ನ ಕಣ್ಣಿಗೆ ಕಾಣಬರನು ಎಂದು, ಬದರೋದೀನನು ಹೇಳಿಬಿಟ್ಟನು. ಆ ಮಾತುಗಳನ್ನು ಕೇಳಿ, ಅಂತಃಪುರವನ್ನು ಸೇರುವ ಕಾಲದಲ್ಲಿ ಸತ್ಯನ ಳಂತೆ ಉತ್ಸಾಹ ಹೀನಳಾಗಿದ್ದ ಮಂತ್ರಿ ಪುತ್ರಿಯ ಸಂತೋಷವು, ಅಧಿಕವಾ ಗಿ ಮುಖವು ಮೊಹರಸವನ್ನು ಸುರಿಸುತ್ತಾ, ಇದ್ದುದನ್ನು ನೋಡಿ ಬದ ದೀನನು ಆನಂದ ಪರವಶನಾದನು. ಆಗ ಮಂತ್ರಿ ಪುತ್ರಿಯ, ಪ್ರಿಯಕಾಂತನೇ ! ನಾನು ನಿನ್ನಂತ ಹ ಸುಂದರಾಂಗನ, ಸಂಗಸುಖದಿಂದ ಸಂತೋಷವನ್ನು ಹೊಂದುವೆನೆಂದು ಸ್ವಪ್ನದಲ್ಲಿಯೂ ತಿಳಿದಿರಲಿಲ್ಲ. ಆದರೆ ಆ ಕುರೂಪಿಯಾದ ವರನನ್ನು ಮ ದುವೆಯಾಗಿ, ಯಾವಜೈವವು, ದುಃಖಸಾಗರದಲ್ಲಿ ಮುಳುಗಿ ತೇಲುವುದ ಕ್ಕೆ ಸಿದ್ಧಳಾಗಿದ್ದೆನು. ನನ್ನ ಅದೃಷ್ಟವಶ ದಿಂದ, ನಿನ್ನಂತಹಸುಂದರಾಂ ಗನು ದೊರಕುದರಿಂದ, ಭಗವಂತನು ಸಂಪೂರ್ಣ ಕಟಾಕ್ಷವನ್ನು ತೂಗಿ ಧಂತ, ನಾನು ಭಾವಿಸುವೆನೆಂದು ಹೇಳಿ, ಆತನನ್ನು ಆಲಿಂಗಿಸಿಕೊಂಡು,