________________
8೩೪ ಯವನ ಯಾಮಿನೀ ವಿನೋದ ಎಂಬ, ಮೇಲೆ, ನಮ್ಮಗಳಿಗೆ ದೊಡ್ಡ ಔತನವೂ, ಜರುಗಿತು. ಆಗ ತಟ್ಟಿಗಳ ಅನೇಕವಾದ ರುಚಿಕರ ಪದಾರ್ಥಗಳನ್ನು ಬಡಿಸಿದ್ದರು. ಅದರಲ್ಲಿ ಬೆಳ್ಳುಳ್ಳಿಯ ಪಚ್ಡಿಯು ಬಹು ರುಚಿಕರವಾಗಿದ್ದಿತು. ನಮ್ಮ ಸಭೆಯಲ್ಲಿ ಕುಳಿತಿದ್ದವ ನೋಬ್ಬ ಅದನ್ನು ಕೈಯಸಹ ಮುಟ್ಟಲಿಲ್ಲ. ಅದನ್ನು ತೆಗೆದುಕೊಳ್ಳು ನಂತೆ, ನಾನೆಷ್ಟು ಬೇಡಿಕೊಂಡಾಗ, ಆತನು ಕೇಳದೆ, ಅಯಾ ! ಬೆಳ್ಳುಳ್ಳಿಯ ಬದಾರ್ಥಗಳನ್ನು ನಾನಾ ತಿನ್ನುವುದಿಲ್ಲ. ತಿಂದಾಗ ಅನುಭವಿ ಸಿದ ತೊಂದರೆಯು ಬಹ.ಚೆನ್ನಾಗಿ ಜ್ಞಾಪಕ ನಿದೆ ಎಂದನು. ಇದನ್ನು ತಿನ್ನುವುದರಿಂದ ನಿನಗೇನು ಕೊರತೆಯುಂಟ:ಗುವುದೆಂದು, ನಾವು ಕೇಳಿ ದೆವು. ಆತನು ಉತ್ತರ ಹೇಳುವುದಕ್ಕೆ ಮೊದಲೇ, ಯಜಮಾನನ್ನು, ಅಯ್ಯಾ! ನಾನು ಮಾಡಿಸಿದ ಔತನವನ್ನು ಸ್ವೀಕರಿಸುವುದು ಹೀಗೆಯಾ ! ಈ ಬೆಳ್ಳುಳ್ಳಿಯ ಪಚ್ಚಡಿಯು ಬಹು ಉತ್ತಮವಾದುದು. ಇದನ್ನು ತಿನ್ನಿಲೆನೆಂದು ಹೇಳಬೇಡ. ಎಲ್ಲರಂತೆ ನೀನೂ ಅಂಗೀಕರಿಸಬೇಕು. ಎನಲು, ಬಾಗದಾದುಪಟ್ಟಣದ ವರ್ತಕರಲ್ಲೊಬ್ಬನು, ಆಯಾ ! ನಿಮ್ಮ ಆಜ್ಞಾನುಸಾರವಾಗಿ, ನಾನು ತಿನ್ನುವೆನು. ಆದರೆ, ತಿಂದಮೇಲೆ ಕೈಯ್ಯನ್ನು ವೀಳ್ಯದೆಲೆಯಿಂದ ನಲವತ್ತು ಸರಿಯ, ಬದಿಯಿಂದ ನಲವತ್ತುಬಾರಿಯ, ಬಳಿಕ ಸಾಬೂನಿನಿಂದಲ, ತೊಳೆದುಕೊಳ್ಳುವು ದಕ್ಕೆ ಅಪ್ಪಣೆ ಮಾಡಬೇಕೆಂದನು. ಹಾಗೆ ಮಾಡದೆ ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲವೆಂದು, ನಾನು ಪ್ರಮಾಣ ಮಾಡಿಕೊಂಡಿರುವುದರಿಂದ, ತಾವು ಮನ್ನಿಸಬೇಕೆಂದು ಬೇಡಿಕೊಳ್ಳುವೆನು ಎಂದು ಹೇಳಿದಕೂಡಲೆ ಬೆಳಗಾದುದ ರಿಂದ, ಹಗರಜಾದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವ ದಲ್ಲಿ ಪುನಹ ಹೇಳಲಾರಂಭಿಸಿದಳು. ೧೪೧ ನೆಯ ರಾತ್ರಿ | ಕಥೆ. ಸಹರಜಾದಿಯು ಸುಲ್ತಾನರನ್ನು ಕುರಿತು, ಇಂತೆಂದಳು;ಆ ವರ್ತಕನ ಮಾತನ್ನು ಕೇಳಿ, ಮನೆಯ ಯಜಮಾನನು ಆತನು ಕೈ ತೊಳೆವುದಕ್ಕಾಗಿ ಕೇಳಿದ ಪದಾರ್ಥಗಳೆಲ್ಲವನ್ನೂ ಕೊಡಿಸಿ, ಕೈ ತೊಳೆದು ಕೊಂಡಮೇಲೆ, ಈಗ ನಮ್ಮಗಳಂತೆ ನೀವೂ ತಿನ್ನಬೇಕೆಂದು ಬೇಡಿಕೊಂ ಡನು. ಬಳಿಕ ಆತನು ಬಹುಕಸ್ಮದಿಂದ ಕೈ ನೀಡಿ ಸ್ವಲ್ಪವನ್ನು ತೆಗೆದು ಕೊಂಡು, ಬಹು ಅಸಹ್ಯದಿಂದ ತಿಂದನು. ಅದನ್ನು ನೋಡಿ ನಾವು ಆಸ್ಟ್ರ