________________
೪೩೬ ಯವನ ಯಾಮಿನೀ ವಿನೋದ ಎಂಬ, ವುದು. ಪೇಟೆಗೆ ಇನ್ನೂ ಯಾರೂ ಬುದಿಲ್ಲವಲ್ಲಾ ! ನಾನು ಹೇಳುವ ಮಾತನ್ನು ನೀನು ಕೇಳುವುದಾದರೆ, ಇ ಕಾದುಕೊಂಡಿರಬೇಕಾದ ಅಗತ್ಯವೇ ಇಲ್ಲವೆಂದು, ಹೇಳುವೆನು ಎನಲು, ಆಕ ಸುತ್ತಲೂ ನೋಡಿ ಯಾವ ಅಂಗಡಿಯ ತರೆಯದೆ ಇರುವುದರಿಂದ, ನನ್ನ ಬಳಿಗೆ ಬಂದು, ನಿನ್ನಂತೆ ಉಳಿದ ವ೯ಕರು ಬಂದು, ಅಂಗಡಿಗಳನ್ನು ತೆರೆಯುವವರಿಗೂ, ನಾನಿಲ್ಲಿ ಕುಳಿತುಕೊಂಡಿರಬಹುದೇ ? ಎಂದು ಕೇಳಲು, ನಾನು ಗೌರವವಾಗಿ ಜವಾಬನ್ನು ಹೇಳಿ ಬರಮಾಡಿಕೊಂಡೆನು, ಇಸ್ಮರಲ್ಲಿಯೇ ಬೆಳಗಾದುದರಿಂದ ಸಹರಜಾದಿಯು ಆ ರಾತ್ರಿ ಸುಲ್ತಾನನೊಡನೆ ಸುಖಶಯನದಲ್ಲಿದ್ದು ಮಾರನೆಯದಿನದ ಉಷಃಕಾಲದಲ್ಲಿ ಮರಳಿ ದಾಳಿಯ ಕಥೆಯನ್ನು ಹೀಗೆಂದು ಹೇಳಲಾರಂಭಿಸಿದಳು. ೧೪೨ ನೆಯ ರಾತ್ರಿ ಕಥೆ. ಪ್ರಹರಜಾದಿಯು ಸುಲ್ತಾನರನ್ನು ಕುರಿತು ಮತ ಇಂತೆಂದು ಹೇಳತೊಡಗಿದಳು. ನನ್ನ ಅಂಗಡಿಯಲ್ಲಿ, ಆ ಲಲನಾಮಣಿಯ, ನಪುಂಸಕ ಸೇವಕನೂ, ನಾನೂಾರತ ಮತ್ತಾರೂ ವಾರದಲ್ಲಿ ಕೂಡ ಸಂಚರಿಸದೆ ಇದ್ದುದರಿಂದ, ಆಕೆ ಗಾಳಿಗೋಸ್ಕರವಾಗಿ, ಮುಸುಕನ್ನು ತೆರೆದಳು. ಆಕೆ ಯಂತೆ ಸಂದರವತಿಯರಾದವರನ್ನು ನಾನೆಂದಿಗೂ ನೋಡಿರಲಿಲ್ಲ, ಆದರೆ • ಅವಳನ್ನು ನೋಡಿದಕೂಡಲೆ, ನನಗೆ ಮೋಹ ಉಂಟಾಗಿ, ಆಕೆಯನ್ನ ನೋಡುತ್ತಿದ್ದನು. ಅದಕ್ಯಾಕೆ ಸಮ್ಮತಿಸಿದವಳಾಗಿ, ಬಹಳ ಹೊತ್ತಿನ ವರಿಗೂ ಮುಸುಕನ್ನು ತೆರೆದಿದ್ದು, ಬಳಿಕ ಮತ್ತಾರಾದರೂ ಬರುವರೋ, ಏನೋ ಎಂಬ ಭಯದಿಂದ ಮುಸುಕು ಹಾಕಿಕೊಂಡಳು. ಇನ್ನು ಸ್ಮ ಹೊತ್ತಿಗೆ ಮರಳಿ ಮುಸುಕು ತೆಗೆದು, ನನ್ನನ್ನು ನೋಡಿ, ಬೆಲೆಬಾಳುವ ಉತ್ತಮವಾದ ರತ್ನದ ಬಟ್ಟಲುಗಳು, ನನಗೆ ಬಹಳವಾಗಿ ಬೇಕಾಗಿವೆ. ನಿನ್ನಿ ನಾದರೂ ದೊರೆವುದೇ ? ಎಂದು ಕೇಳಿದಳು. ಆಗ ನಾನು ಆಕೆ ಯನ್ನು ಕುರಿತು ಅಯೋ ! ನಾನು ಬಡವನಾ ! ಈಗತಾನೆ ವ್ಯಾಸಾ ರಕ್ಕೆ ಆರಂಭಿಸಿರುವೆನು. ನಿನಗೆ ಬೇಕಾದ ಉತ್ತಮವಸ್ತುಗಳು ನನ್ನಲ್ಲಿ ಇಲ್ಲದಿರುವುದಕ್ಕಾಗಿ, ನಾನು ತುಂಬ ವ್ಯಸನಪಡುತ್ತೇನೆ, ಅಲ್ಲದೆ ವರ್ತ ಕರು ಬಂದಮೇಲೆ, ನಾನೇ ಹೊರಟು ಅಂಗಡಿಗಳನ್ನು ತಿರುಗಿ, ನಿನಗೆ