ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೯೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8fo ಯವನ ಯಾಮಿನೀ ವಿನೋದ ಎಂಖ, ಆ ಹರಕನನ್ನು ಕುರಿತು ಅಯಾ! ಆ ಹುಡುಗನು ಈಗ ಹೇಳಿದುದು ನಿಜವೇ ಆಗಿದ್ದರೆ, ನಿನ್ನ ಮೇಲೆ ಬಹಳವಾದ ಅಪರಾಧ ಉಂಟಾಗುವುದೆಂದು ನುಡಿಯಲು, ನಾಯಿಂದನು ಆಯಾ ! ಆ ಹುಡುಗನು ತನ್ನ ಕಥೆಯನ್ನು ಹೇಳುತ್ತಿದ್ದಾಗ, ನಾನು ಯಾವಮಾತನ್ನು ಆಡದೆ ಸುಮ್ಮನಿದ್ದುದರಿಂದ, ಆರನು ಹೇಳಿದುದೆಲ್ಲವೂ ನಿಮಗೆ ಚೆನ್ನಾಗಿ ಗೊತ್ತಾಗಿರಬಹುದು. ಆದರೆ ಆರನು ಹೇಳಿದುದಲ್ಲಹಾಗಿರಲಿ, ನಾನು ಆರನಿಗೆಮಾಡಿದ ಉಪಕಾರವನ್ನು ವಿವರಿಸಿ ಹೇಳಿದರೆ, ನಾನು ಆತನಿಗೆ ಕೊಂದರೆಯನ್ನು ಉಂಟುಮಾಡಿ ಕುಂಟ ನಾಗುವಂತೆ ಮಾಡಿದರೂ ಚಿಂಳಿದು, ಅವನು ನಾ }ಣದಿಂದಮಾತ್ರ) ಹೊರಗಬಂದನಲ್ಲಾ! ಆತನನ್ನು ಹೊಡೆಯುತ್ತಿರುವ ಶಬ್ದವನ್ನು ಕೇಳಿ, ಆತನನ್ನು ಹೊರಹೊರಡಿಸುವುದಕ್ಕೆ ನಾನು ಮಾಡಿದ ಉದಾಯವು ಉರ ಕಾರವಲ್ಲವೇ ! ನಾನು ಆತನಿಗೆ ಮಾಡಿರುವ ಉವಕಾರದ ತಪ್ಪನು ? ಇಂತಹ ಕಕಮ್ಮನಿಗೆ ಉಪಕಾರಮಾಡಿ, ಕಟಕಿಯೆಂದು, ಬಾಯಡುಕ ನಂದು, ದುರ್ಮಾರ್ಗಿಯಂದು, ಅಪವಾದವನ್ನು ಹೊಂದಬೇಕಾಯಿತಲ್ಲಾ ! ನನಗಿರುವ ಏಳುಜನ ಸಹೋದರರಲ್ಲಿ, ನಾನೇ ಮಿತಭಾಷಿಯಾಗಿಯ, ಚತುರನಾಗಿಯೂ, ಇರುವೆನೆಂಬುದನ್ನು ತಿಳಿಯಹೇಳುವುದಕ್ಕಾಗಿ, ನಿಮಗೆ ನನ್ನ ಚರಿತ್ರೆಯನ್ನೂ ಉಳಿದ ನನ್ನ ಸಹೋದರರ ಕಥೆಯನ ಹೇಳು ವನು, ದಯಮಾಡಿ ತಾವು ಅದನ್ನು ಕೇಳಬೇಕೆಂದು ನುಡಿದು ಇಂಡಂದನು. ಕ್ಷೌರ ಕ ನ ತ ಥೆ. ದೀನರಲ್ಲಿಯ, ದರಿದರಲ್ಲಿಯೂ, ದಯಾವಂತನಾಗಿದ್ದ ಮನು ಕ್ಯಾನ್ಸರ್ ಬೈಲಾ ಎಂಬ ಕಲೀಫರ ಆಳ್ವಿಕೆಯಲ್ಲಿ ಎಂಟು ಹತ್ತು ಮಂದಿ ದಾರಿಹೋಕರು, ಆಗಾಗ್ಗೆ ದಾರಿಗರನ್ನು ಕೊಲೆಮಾಡಿ ದೋಚಿಕೊಳ್ಳುತ್ತಾ ಬಹಳವಾಗಿ ತೊಂದರೆಯನ್ನು ಉಂಟುಮಾಡುತಿದ್ದುದನ್ನು ತಿಳಿದು, ಕರೀ ಥರು, ಬೈರಾಮನ ಹಟಕ್ಕೆ ಮೊದಲು, ಆ ಕಳ್ಳರನ್ನು ಹಿಡಿದುಕಾರ ದಿದ್ದರೆ ನಿನ್ನನ್ನು ಗಲ್ಲಿಗೆ ಹಾಕಿಸುವೆನೆಂದು ತನ್ನ ಮಂತ್ರಿಗೆ ಆಜ್ಞಾಪಿಸಿ ದರು, ಇಂತೆಂದು ಹೇಳಿದ ಪ್ರಹರಜೆದಿಯು ಬೆಳಗದಕೂಡಲೆ ಕಥೆ ಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು,