ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬) ೪೯ ಅರೇಬಿರ್ಯ ನೈಟ್ಸ್ ಕಥೆಗಳು. ನನು ನನ್ನ ಕ ಣವನ್ನು ಉಳಿಸಿದುದೇ ಆದರೆ, ನಾಳೆ ಇದನ್ನು ಪೂರ್ತಿ ಮಾಡುವನು. ಇದಕ್ಕಿಂತಲೂ ವಿನೋದಕರಂಗಳಾದ ಅನೇಕ ಕಥಗ ೪ಂಟೆಂದು ಹೇಳಿದಳು. ಆಕೆಯನ್ನು ತಂದ ಮುದುಕನ ಮಗನು ಮುಂದೆ ಏನಾಗುವನೋ ನೋಡ ಬೇಕೆಂಬ ಕುತೂಹಲದಿಂದ ನಾಳರಾತ್ರಿ ಈಕಥೆಯನ್ನು ಕೇಳಿ ಸಂತೋಷಿಸ ಬೇಕೆಂದು ಸುಲ್ತಾನನು ಹೇಳಿದನು. ಐ ದ ನ ರಾ ತಿ , ಕಥೆ . ಮರುದಿನ ಬೆಳಗಿನ ಜಾವದಲ್ಲಿ ದಿನರಜಾದಿ ತನ್ನ ಅಕ್ಕನನ್ನು ಕುರಿತು ಪ್ರಶ್ನೆ ಮಾಡಲು ನಿದ್ರೆಯಿಂದೆಚ್ತು ಸುಲ್ತಾನರ ಅಪ್ಪಣೆ ಯನ್ನು ಕೇಳಿ ಅವರು ಕಥೆ ಕೇಳಬೇಕೆಂಬ ಆಸೆಯಿಂದ ಸಮ್ಮತಿಸಲು ಅವ ರನ್ನು ಸಾವಧಾನವಾಗಿ ಹೇಳಬೇಕೆಂದು ಬೇಡಿಕೊಂಡು ಪ್ರಹರಜಾದಿಯು ಆ ಭೂತವು ವರ್ತಕನೂ ಹೆಣ್ಣು ಜಿಂಕೆಯನ್ನು ತಂದ ಮುದುಕನು ಇವ ರುಗಳ ಸಂಭಾಷಣೆಯಲ್ಲಿ ಜಿಂಕೆಯನ್ನು ತಂದವನ ಕಥೆಯನ್ನು ಮುಂದೆ ಸಾಗಹೇಳುವುದಕ್ಕೆ ತೊಡಗಿದಳು. ಹೇಗೆಂದರೆ, ನಾನುಕರುವನ್ನು ಕೊಲ್ಲುವುದಕ್ಕೆ ಕತ್ತಿಯನ್ನು ತೆಗೆ ದುಕೊಂಡೆನು. ಆಗ ನನಗೆ ಮೊದಲಿಗಿಂತಲೂ ಕನಿಕರವು ಹೆಚ್ಚಾಗಿ ಕತ್ತಿ ಯುಕೆಯಿಂದ ಜಾರಿಹೋಯಿತು. ನಿನ್ನ ಮಾತ ಕೂ ನಾನು ಅದನ್ನು ಕೊಲ್ಲಲಾರದೆ ಹೋದೆನು. ಆಕರುವು ನನ್ನನ್ನು ನೋಡಿ ಮಹತಾದ ವ್ಯಸನದಿಂದ ಕಣ್ಣೀರನ್ನು ಸುರಿಸುತ್ತಾ ಇದ್ದಿತು. ಇದನ್ನು ನೋಡಿ ನನ್ನ ಹೆಂಡತಿಯು ತುಂಬ ಕ್ಯಳಾಗಿ ಜಗಳಕ್ಕೆ ಹತ್ತಿದಳು. ಅವಳನ್ನು ನೋಡಿ ಖಂಡಿತವಾಗಿಯೂ ನಾನಿದನ್ನು ಕೊಲ್ಲ ಲಾರೆನು ನಿನಗೆ ಬೇಕಾಗಿದ್ದರೆ ಬೇರೆ ಕರುವನ್ನು ತರಿಸು, ಬೇಕಾದರೆ ಇನ್ನೊಂದು ಹಬ್ಬಕ್ಕೆ ಇದನ್ನು ಬಲಿಗೊಡೋಣವೆಂದು, ಸಮಧಾನ ಮಾಡಿದೆನು. ಮರುದಿನ ಜೀತಗಾರನು ನನ್ನ ಬಳಿಗೆ ಬಂದು ರಹಸ್ಯ ವಾಗಿ ಮಾತನಾಡ ಬೇಕೆಂದು ಹೇಳಿ, ಸವಿತಾ ! ನಿಮಗೆ ನಾನೊಂದು ವಿಷಯವನ್ನು ಹೇಳಬೇಕೆಂದು ಬಂದಿರುವೆನು. ಅದನ್ನು ನಿಮಗೆ ತಿಳಿಯ ಹೇಳಿದರೆ ನೀವು ನನ್ನನ್ನು ತುಂಬ ಗೌರವಿಸುವಿರಿ ! ಏನೆಂದರೆ ನಿನ್ನೆ ದಿನ ನೀವು ನನ್ನ ಬಳಿಗೆ ಕೊಟ್ಟ ಕರುವನ್ನು ಮನೆಗೆ ತೆಗೆದು ಕೊಂಡು ಹೋ