________________
ಅರೇಬಿರ್ಯ ನೈಟ್ಸ್ ಕಥೆಗಳು, ೧v*ನೆಯ ರಾತ್ರಿ ಕಥ. ವಹರಜಾದಿಯು ಸುಲ್ತಾನರನ್ನು ಕುರಿತು ಇಂತಂದಳು:ನಂತರ ಸಮುಸಲ್‌ನೆಹರು ಎದುರಿಗೆ ನಿಂತಿರುವ ಇರ್ಬತಿಹರನನ್ನು ನೋಡಿ, ತನಗುಂಟಾದ ಪರಮಸಂತೋಷವನ್ನು ಆತನಿಗೆ ತಿಳಿಸಲುಪಕ ನಿಸಿ, ಓ ! ಇರ್ಬತಿಹರನೆ ! ನೀನು ನನಗೆ ಮಾಡಿರುವ ಉಪಕಾರವನ್ನು ನಾನೆಂದಿಗೂ ಮರೆಯಲಾರೆನು, ಇದಕ್ಕೆ ಪ್ರತಿಯಾಗಿ ಮತ್ತಾವ ಪ್ರತ್ಯುಪಕಾರವನ್ನು ಮಾಡಿ ನಾನು ನಿನ್ನ ಮನಸ್ಸನ್ನು ತೃಮಿಸಬೇಕೊ ನನಗೆ ತಿಳಿಯದು. ಆಹಾ ! ಸರಸಿ, ದಯಾಳುಪೂ, ಆದ ನೀನು ಇಂತಹ ಉಪಕರವನ್ನು ಮಾಡದೆಹೋಗಿದ್ದರೆ, ಸುಂದರಾಂಗನಾದ ಈ ಪರ್ಸಿಯಾ ರಾಜಕುಮಾ ರನು, ನನ್ನ ಪ್ರೀತಿ ವಿಶ್ವಾಸಗಳಿಗೆ ಹೇಗೆ ಗುರಿಯಾಗುತ್ತಿದ್ದನು. ಅಯಾ ! ಬಹಳವಾಗಿ ಹೇಳಿದುದರಿಂದ ಪ್ರಯೋಜನವೇನು. ನನ್ನ ಜೀವಮಾನದಲ್ಲಿ ಇದಕ್ಕೆ ತಕ್ಕ ಪ್ರತ್ಯುಪಕಾರವನ್ನು ಮಾಡದೆ ಇರಲಾರೆನು. ಇದನ್ನು ನಂಬಿ ಕೊಂಡಿರು ಎಂದು ನುಡಿಯಲು, ತಡರನು ಅತ್ಯಂತ ಭಯಭಕ್ತಿಯಿಂದ ವಂದನೆಗಳನ್ನು ಮಾಡಿ, ಆಕೆಯ ವಂದನಾದಿಗಳನ್ನು ಸ್ವೀಕರಿಸಿ, ಅಮ್ಮಾ ! ಭಗವಂತನು ನಿಮ್ಮ ಮನೋರಥವನ್ನು ನೆರವೇವಸುಮತೆಯ ಸಂಗೂರ್ ವಾಗಿ ಸುಖವನ್ನು ಅನುಭವಿಸುವಂತೆ ಮಾಡಲೆಂದು ಹರಿಸಿದನು. ನಂತರ ಆ ಲಲನಾಮಣಿಯ, ಪರ್ಸಿಯಾ ರಾಜಕುಮಾರನ ಕಡೆಗೆ ತಿರುಗಿನೋಡಿ, ಭ್ರಮೆಯಿಂದ ಇಂತಂದಳು;-ರಾಣನಾಥಾ ! ನನ್ನಲ್ಲಿ ತಮಗೆ ಮೋಹ ಉಂಟಾಗಿರುವುದೆಂದು, ನಾನು ಮನಃಪೂರ್ವಕ ವಾಗಿಯೂ, ತಿಳಿದಿರುವೆನು. ನನ್ನ ಮೇಲೆ ನಿನಗುಂಟಾಗಿರುವ ಮೋಹ ಕ್ಕಿಂತಲೂ ಅಧಿಕವಾದ ವಿಶ್ವಾಸವು ನಿನ್ನಗುವಾಗಿರುವುದೆನ್ನುವುದಕ್ಕೆ ಯಾವ ಸಂದೇಹವೂ ಇಲ್ಲ. ನಾವು ಬಹುವಾಗಿ ಹೊಗಳಿಕೊಳ್ಳುವುದರಿಂದ ಪಯೋಜನವಿಲ್ಲ. ನಾವು ಹೇಗಿದ್ದರೂ, ದುಃಖವೇ ಹೊರತು, ಸುಖ ಎಂದಿಗೂ ಇಲ್ಲ. ಆದುದರಿಂದ ಭಗವಂತನಮೇಲೆ ಭಾರವನ್ನು ವಹಿಸಿ, ಆತನ ಸಂಕಲ್ಪದಂತೆ, ನಮ್ಮ ಅದೃಸ್ಯಾನುಸಾರದಂತೆಯ, ನಡೆವುದು ಎಂಬುದನ್ನು ದೃಢವಾಗಿ ತಿಳಿದು ಸ್ಮಸ್ಯರಾಗಿರಬೇಕೆಂದು ನುಡಿಯಲು,