________________
H೫೬ ಯವನ ಯಾಮಿನೀ ವಿನೋದ ಎಂಬ, ರಾಜಕುಮಾರನು ನಾ ಣಕಾಂತೇ ! ನಿನ್ನ ಮೇಲೆ ಮೋಹ ಉಂಟಾಗಿರುವು ದೆಂದು ಹೇಳಿದೆಯಲ್ಲಾ ಅದು ತುಂಬ ಅನ್ಯಾಯಕರವಾದ ಕೆಲಸ. ಹೇಗೆ ದರೆ :- ನನ್ನ ಆತ್ಮವೇ ನಿನ್ನ ಮೋಹವೆಂಬ ರಜ್ನಿನಿಂದ ಒಲವಾಗಿ ಬಿಗಿದು ಬಂಧಿಸಲ್ಪಟ್ಟಿರುವುದರಿಂದ, ನಿನ್ನ ಮೋಹವು ನನ್ನ ಆತ್ಮಕ್ಕೆ ಮುಖ್ಯಾಂಶವಾಗಿರುವುದಲ್ಲದೆ, ನಾನು ಸಾಯುವವರೆಗೂ, ನಿನ್ನ ಮೋಹ ವೆಂದಿಗೂ ನನ್ನನ್ನು ಅಗಲಲಾರದು. ಆದಕಾರಣ ಎಂತಹ ವಿಘ್ರವಾದರೂ ಇಲ್ಲವೆ. ಬಹು ಪ್ರಮಾದಗಳಾದರೂ, ಅತ್ಯಂತ ದುಖಪರಂಪರೆಗಳಾದರೂ, ಬಂದೊದಗಿದರೆ, ನಾನೆಂದಿಗೂ ನಿನ್ನ ಮೋಹವನ್ನು ಬಿಡಲಾರೆನೆಂದು, ಕಣ್ಣೀರಿನಲ್ಲಿ ಸ್ನಾನಮಾಡುತ್ತಿದ್ದ ರಾಜಪುತ್ರನನ್ನು ಆ ಲಲನಾಮಣಿಯು ಸಮಾಧಾನ ಪಡಿಸಲಾರದೆ ಹೋದಳು. ಆ ಕಾಲದಲ್ಲಿ ಇರ್ಬ ಹರನು, ಅಮಾ ! ನೀವಿಬ್ಬರೂ ಸೇರಿರು ವುದಕ್ಕಾಗಿ, ಭಗವಂತನನ್ನು ಪ್ರಾರ್ಥಿಸುತ್ತಾ ಉತ್ಸಾಹಕಾಲದಿಂದ ಕಾಲ ವನ್ನು ಕಳೆಯುತ್ತಿರುವುದನ್ನು ತೊರೆದು, ಏತಕ್ಕೆ ಹೀಗೆ ಉಭಯತ್ರರೂ ಕುಂದಿ ಕೊರಗುತ್ತಿರುವಿರಿ. ಪ್ರಾಣಸಿಯರಾದ ದಂಪತಿಗಳಿಬ್ಬರೂ, ಅನ್ನೋನ್ಯವಾಗಿ ಕಲೆತಿದ್ದರೂ, ಹೀಗೆ ವ್ಯಸನಪಡುತ್ತಿರುವ ನೀವು ಭಗವಂತನ ದಯದಿಂದ ಅಗಲಿಕೆಯುಂಟಾದರೆ, ಮುಂದೆ ಹೇಗೆ ಮಾಡುತ್ತಿ ದಿರೂ, ನನಗೆ ತಿಳಿಯದು, ಬಹಳವಾಗಿ ಮಾತನಾಡಿ ಪ್ರಯೋಜನ ವೇನು ? ನಾವು ಬಂದು ಬಹಳ ಹೊತ್ತಾದುದರಿಂದ ಹೊರಡಬೇಕೆನಲು, ಅಯಿ ! ನೀನೆ ತಹ ಕಠಿಣಚಿತ್ರನು. ನನ್ನ ವ್ಯಸನಕ್ಕೆ ಕಾರಣವನ್ನು ತಿಳಿದಿರುವ ನಿನಗೂಕೂಡ ನನ್ನ ಮೇಲೆ ದಯವಿಲ್ಲವೆ ? ನಾನು ಮೋಹಿಸಿದ ಮೋಹನಾಂಗನ ಒಂದುಮಾತನ್ನಾದರೂ, ಆಡಿ ಸಂತೋಷಪಡಬೇಕೆಂ ದಿದ್ದರೆ, ಅದನ್ನು ಕೂಡ ತಪ್ಪಿಸುವಂತಹ ಕೌರ್ಯವನ್ನು ಮಾಡುತ್ತಿ ರುವೆಯಲ್ಲಾ ! ಆಹಾ ! ನಾನೇನುಮಾಡಿದುದಕ್ಕಾಗಿ, ನನಗಿಂತ ನಿರ್ಬಂಧ ವನ್ನು ತೋರುತ್ತಿರುವೆಯೋ ಕಾಣೆನೆಂದು ಪ್ರಮುಸೆಲ್‌ನೆಹರು, ವ್ಯಸನಾ ಕಾಂತಳಾಗಿ ನುಡಿಯಲು, ಇರ್ಬ ತೆಹರನು ತನ್ನ ಸ್ನೇಹಿತನಾದುದರಿಂದ, ಹಾಸ್ಯಕ್ಕಾಗಿ ಹೇಳುತ್ತಿರುವನೆಂದು ತಿಳಿದು, ರಾಣಿಯು ಆತನ ತಪ್ಪ ಗಳನ್ನೆಣಿಸದೆ, ತನ್ನ ದಾದಿಯರನ್ನು ನೋಡಿ, ಫಲಾಹಾರಪದಾರ್ಥಗಳನ್ನು