________________
ಅರೇಬಿರ್ಯ ನೈಟ್ಸ್ ಕಥೆಗಳು. ತರುವಂತೆ ಆಜ್ಞಾಪಿಸಲು, ಅವರು ಸುಂದರವಾದ ಭಂಗಾರದ ತಟ್ಟಿಗಳಲ್ಲಿ ಮಧುರನಾಗಿಯೂ, ರುಚಿಕರವಾಗಿಯೂ, ಸೊಗಸಾಗಿಯೂ, ಇರುವ ದೇವ ಯೋಗ್ಯವಾದ, ಆಹಾರಪದಾರ್ಥಗಳನ್ನು ತಂದು ಪರ್ಷಿಯಾ ರಾಜಕುಮಾರ ನಿಗದುರಾಗಿಯ, ಪ್ರಮುಸೆಲ್‌ನೆಹರು ಮತ್ತು ಇರ್ಬತಹರು ಇವರುಗಳ ಮಧ್ಯಭಾಗವಾಗಿಯೂ, ಇರುವಂತೆ ತಮ್ಮೆದುರಿಗಿರುವ ಕಾಲುಮಣೆಯ ಮೇಲಿರಿಸಿದರು. ಆಗ ಸುಲಾನಿಯು, ಅಲ್ಲಿರುವ ಉತ್ತಮಪದಾರ್ಥ ಗಳನ್ನು ತೆಗೆದು, ತನ್ನ ಹಸ್ತದಿಂದ ರಾಜಪುತ್ರನಿಗೂ ವರ್ತಕನಿಗೂಸಹ ಕೊಡುತ್ತಿರಲು, ಅವರಿಬ್ಬರೂ, ಆಕೆ ಮುಟ್ಟಿದ ಭಾಗವನ್ನು ಮಾತ್ರ ) ತಾವು ತಿಂದು, ಉಳಿದ ಭಾಗವನ್ನು ರಾಣಿಗೆ ಕೊಡುತ್ತಿದ್ದರು. ರಾಣಿ ಯಾದರೋ ಸಂತಸದಿಂದಲೂ, ಉಲ್ಲಾಸದಿಂದಲೂ, ಅವುಗಳನ್ನು ಭಕ್ಷಿಸುತ್ತಾ, ವಿನೋದವಾಗಿ ಮಾತನಾಡುತ್ತಿದ್ದಳು. ಫಲಾಹಾರಕ ಮವು ಮುಗಿದನಂತರದಲ್ಲಿ, ದಾದಿಯರು ಮೂರು ಭಂಗಾರದ ಗಿಂಡಿಗಳಲ್ಲಿ ನೀರನ್ನು ತಂದಿಡಲು, ಆ ಮೂವರೂ ಕೈಗಳನ್ನು ತೊಳೆದುಕೊಂಡು, ತಂತಮ್ಮ ಸ್ಥಲಗಳಲ್ಲಿ ಕುಳಿತುಕೊಂಡಮೇಲೆ ಕಾಫರೀ ದಾದಿಯರು, ಸುಂದರವಾದ ಸ್ಪಟಿಕತೆಯಲ್ಲಿ ಉತ್ತಮವಾದ ದ್ರಾಕ್ಷಾ ರಸವನ್ನು ತುಂಬಿ, ಭಂಗಾರದ ತಟ್ಟೆಗಳಲ್ಲಿಟ್ಟುಕೊಂಡುಬಂದು, ರಾಣಿಗೂ, ರಾಜಕುಮಾರನಿಗೂ, ಇರ್ಬ ತೆಹರನಿಗೂ, ಮಧ್ಯದಲ್ಲಿರಿಸಿದರು. ರಾಣಿ ಯಾದರೂ, ಕೆಲವು ಕಾಲ ಏಕಾಂತದಲ್ಲಿರಲು, ಬಯಸಿ, ಹತ್ತು ಮಂದಿ ದಾದಿಯರನ್ನು ಮಾತ್ರ ), ತನ್ನ ಬಳಿಯಲ್ಲಿರುವಂತೆ, ಆಜ್ಞೆ ಮಾಡುತ್ತಾ ದಾಕ್ಷಾರಸದ ಬಟ್ಟಲನ್ನು ಕೈಗೆ ತೆಗೆದುಕೊಂಡು, ಎದ್ದು ನಿಂತಳು. ಕಡಲೆ, ಕಾಫರಿಯ ನರ್ತನವೂ, ಸಖಿಯರ ಗಾನವೂ, ವೀಣಾನಾದರೂ ಸಹಾ ನೇತ್ರ ಆದಿ ಯಗಳಿಗೆ ಆನಂದವನ್ನುಂಟುಮಾಡುತ್ತಿರಲು, ತಾನೂ ನಾಟವಾಡಿ, ರಾಜಕುಮಾರನಮೇಲಣ ವೆಹವು ತನಗುಂಟಾದ ನೆನಪಿ ಗಾಗಿ ಈ ದಾ ರಸವನ್ನು ಕುಡಿಯುವೆನೆಂದು ಹೇಳಿ, ತಾನು ಮೊದಲು ಕುಡಿದು ನಂತರ ಎರಡನೆಪಾತ್ರೆಯನ್ನು ತೆಗೆದು ರಾಜಕುಮಾರನೇ ! ನಾನು ನಿನ್ನನ್ನು ಮೋಹಿಸಿದುದಕ್ಕಾಗಿ, ದಾಕ್ಷಾರಸವನ್ನು ಕುಡಿದಂತೆ, ನೀನು ಈವಧುವನ್ನು ನನ್ನ ಮೇಲೆ ಒಲಿದಿರುವ ಗುರುತಿಗಾಗಿ ಕುಡಿಯಬೇಕೆಂದು