ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೬೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಬ, ಹೇಳಿ, ಆತನಗೆ ಬಟ್ಟಲನ್ನು ಕೊಡಲು, ದಾದಿಯರು ಮಧುರಸ್ಪರ ದಿಂದ ಗಾನ ಮಾಡಿದರು. ರಾಣಿಯು ತನಗೆ ಮಾಡುತ್ತಿರುವ ಉಪಚಾರ ಕ್ಯಾಗಿಯೂ, ತನಗೆ ಆಕೆಯಮೇಲೆ ಉಂಟಾಗಿರುವ ಮೋಹಕ್ಕಾಗಿಯೂ, ಸಂಪೂರ್ಣವಾದ ಸುಖವು ದೊರೆಯದಿರುವುದಕ್ಕೆ ಕಾರಣವನ್ನು ಕುರಿತು, ಕಣ್ಣೀರನ್ನು ಸುರಿಸುತ, ಆ ರಾಣಿಯ ಮುಖಚಂದ ನಿಂದ ಸುರಿಯು ತಿರ.ವ, ಅಮೃತವನ್ನು ಮೊದಲು ನಾನಮಾಡಿ, ನಂತರ ಮಧುರಸವನ್ನು ಸೇವಿಸಿದನು. ನಂತರ ರಾಣಿಯು ನೆಮುಸಲ್‌ನೆಸರನಿಗಸಹ ದ ಲಕ್ಷ ರಸದ ಬಟ್ಟಲನ್ನು ಕೊಡಲು, ಆತನು ಬಹು ಮರಾದೆಯಿಂದ ಅದನ್ನು ಸ್ವೀಕರಿಸಿ, ತಾನು ಕುಡಿದು ತೃಪ್ತನಾದನು. ಬಳಿಕ ಅವರೆಲ್ಲರೂ ಆನಂದ ಗಯಸ್ಥಿರತಿರುವಾಗ, ಮಸರನ್ನೂ, ಇಬ್ಬರು ಮೊಜೆಸವಾ ರರೂ, ಬಾಗಿಲ ಕಾದುಕೊಂಡಿರುವ ದಾದಿಯರನ್ನು ಕುರಿತು, ನಾವು ಕಲೀಫರ ಆಳ್ಮೆಯನ್ನು ರಾಣಿಯವರಿಗೆ ತಿಳಿಸುವುದಕ್ಕಾಗಿ ಕಾದು ಕಂ ಡಿರುವೆವೆಂದು ಹೇಳಲು, ದಾದಿಯು ಬೆ ಗನೆ ಓಡಿ ಬಂದು ತನ್ನ ರಾಣಿಯ ಸಂಗಡ ಈ ವರ್ತಮಾನವನ್ನು ಹೇಳಲು, ವರ್ಕೀಕರೂ ರಾಜಕುಮಾರನೂ ಸಹ ವಿವರ್ಣಮುಖರಾಗಿ ಭಯದಿಂದ ನಡುಗುತ್ತಿರಲು, ರಾಣಿಯು ಅವ ರನ್ನು ಸಮಾಧಾನಪಡಿಸಿದಳು. ಇಂತೆಂದು ಹೇಳಿ ಮಹರಾದಿಯು ಕಥೆ ಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. vr೯ ನೆಯ ರಾತಿ ಕಥೆ. ಸಹರಜಾದಿಯ ಸುಲ್ತಾನರನ್ನು ನೋಡಿ ಇಂತಂದಳು. ಪೆಮು ಸೆನೆಹರಳು, ರಾಜಕುಮಾರನಿಗೂ, ವರ್ತಕನಿಗೂಸಹ ಧೈರವನ್ನು ಹೇಳಿ ತನಗೆ ನಂಬಿಕೆಯಾದ ಒಬ್ಬ ದಾದಿಯನ್ನು ಕರೆದು ನಾನು ರಾಜಕುಮಾ ರನನ್ನೂ ಇರ್ಬ ತಹರನನ್ನೂ ಮರೆಮಾಜಿ, ಮಾತನಾಡುವುದಕ್ಕೆ ಸಿದ್ಧ ೪ಾಗುವವರೆಗೂ, ನೀನು ಮಸ್ತರನ್ನು ಆತನಿಸಂಗಡ ಬಂದಿರುವ ನಪುಂಸಕ ಸರದಾರರನ್ನೂ ಸಹ ಒಳಕ್ಕೆ ಬಿಡಬೇಡವೆಂದು ಹೇಳಿ, ತಾನು ತನ್ನ ಅಂತಃ ಫುರದ ಕಿಟಕಿಗಳನ್ನೆಲ್ಲ ಮುಚ್ಚಿಸಿ, ಹಿಂಭಾಗದಲ್ಲಿ ತೆರೆಯನ್ನು ಹಾಕಿಸಿ, ಅದರ ಒಳಭಾಗದಲ್ಲಿ ನಿರ್ಭಯರಾಗಿರುವಂತೆ ಇಡಿಸಿ, ಅವರಿಬ್ಬರಿಗೂ