________________
೫೭೬ ಯವನ ಯಾಮಿನೀ ವಿನೋದ ಎಂಬ, ಬಳಿಯಲ್ಲಿಯೇ ಇಟ್ಟುಕೊಂಡನು. ಆತನು ಬೆಳಗಾದಡಲೆ, ತನ್ನ ಮನೆಗೆ ಬರಲು, ಸೇಮುವೆಲ್‌ನೆಹರಳ ದಾದಿಯೊಬ್ಬಳು ಬಾಗಿಲ ಕಾದುಕೊಂ ಡಿದ್ದು, ಆಯಾ ! ನನ್ನ ರಾಣಿಯು ನಿನಗೆ ಸಲಾಂ ಹೇಳಿ, ಈ ಕಾಗದ ವನ್ನು ಪರ್ಷಿಯಾ ರಾಜಕುಮಾರನಿಗೆ ತಲಪಿಸುವಂತೆ ಬೇಡಿಕೊಂಡಿರು ವಳೆಂದು ನುಡಿಯಲು, ಪರೋಪಕಾರಿಯ, ಸ್ವಾಮಿಭಕ್ತಿಯುಳ್ಳವನೂ, ಆದ ಇರ್ಬತಿಹರನು ಆ ದಾದಿಯನ್ನು ತನ್ನ ಸಂಗಡ ಕರೆದುಕೊಂಡು, ಪರ್ಷಿಯಾ ರಾಜಕುಮಾರನವನೆಗೆ ಬಂದನು. ಇಂತೆಂದುಹೇಳಿ, ವಡರ ಜಾದಿಯು ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಮರಳಿ ನುಡಿಯಲಾರಂಭಿಸಿದಳು. ೧೯೪ ನೆಯ ರಾತ್ರಿ ಕಥೆ. ಇರ್ಬತಿಹರನು ಆ ದಾದಿಯನ್ನು ಸಂಗಡಿ ಕರೆದುಕೊ೦ಡುಬಂದು ಪಡಸಾಲೆಯಬಳ ಒಳಗಣ ಅಂಗಳದಲ್ಲಿ ನಿಲ್ಲಿಸಿ, ತಾನುಮಾತ್ರ; ಒಳಹೊಕ್ಕು ರಾಜಕುಮಾರನನ್ನು ಕಾಣಿಸಿಕೊಂಡನು. ಕೂಡಲೇ ಆತನು ಅತ್ತು ಥ್ಯಾಹದಿಂದ ತನ್ನ ಸ್ನೇಹಿತನನ್ನು ಬರಮಾಡಿಕೊಂಡು ಕುಳ್ಳಿರಿಸಿ ಹೊಸ ವರ್ತಮಾನವೇನಾದರೂ ಉಂಟೇ ಎನಲು, ಇರ್ಬತಿಹರನು ಮನ ಇಲ್ಲ. ನೀನು ಕೋರುತ್ತಿದ್ದ ಸಂಗತಿಯನ್ನು ಈಗ ವಿವರವಾಗಿ ತಿಳಿದು ಕೊಳ್ಳಬಹುದು, ರಾಣಿಯಕಡೆಯಿಂದ ಕಾಗದವನ್ನು ತೆಗೆದುಕೊಂಡು ಬಂದಿರುವ ದಾದಿಯು, ಅಂಗಳದಲ್ಲಿ ನಿಂತಿರುವಳು ಎನಲು, ರಾಜಕುಮಾ ರನು ಮರಳಿ ಮರಳಿ ಏನು ಏನು ದಾಡಿ ಬಂದಿರುವಳೆ ! ಬರಹೇಳೆಂದು ಸಂಪೂ ರ್ಣವಾದ ಅಂದವನ್ನು ಹೊಂದಿದವನಾಗಿ, ಶುಭಸೂಚಕವಾದ ವರ್ತಮಾನವ ನ್ನು ಹೇಳಿ ತನ್ನ ಸ್ನೇಹಿತನನ್ನು ಆಲಿಂಗಿಸಿಕೊಂಡನು, ಕೂಡಲೆ ಅಲ್ಲಿದ್ದ ಸೇವಕರೆಲ್ಲರೂ ಹೊರಟುಹೋದರು, ಇರ್ಬಾಹಕನು ದಾದಿಯನ್ನು ಕರೆ ದುಕೊಂಡುಬಂದನು, ಆಕೆ ಬಹು ಪ್ರೀತಿಯಿಂದ ವಂದನೆಗಳನ್ನು ಮಾಡಿ, ನಿಂತುಕೊಳ್ಳಲು ರಾಜಪುತ್ರನೂಕೂಡ, ಅವಳನ್ನು ಬಹು ಮುರಾದೆಯಿಂದ ಬರಮಾಡಿಕೊಂಡನು. ಆಗ ದಾದಿಯು ಆತನನ್ನು ಕುರಿತು, ಅಯಾ ! ನಿಮಗಾಗಿ ಸಿದ್ಧವಾಗಿ ನಿಂತಿದ್ದ ಗಡಿಯಮೇಲೆ ನಿನ್ನನ್ನು ಕಳುಹಿಸಿದ ಬಳಿಕ, ನೀವು ಅನುಭವಿಸಿದ ಸ್ಥಿತಿ ಇಂಥದ್ದೆಂದು ನಾನು ತಿಳಿದುಕೊಳ್ಳಲಾರದೆ