ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫+೬ ಯವನ ಯಾಮಿನೀ ವಿನೋದ ಎಂಬ, ಸಂತೋಷವಾಯಿತು. ಇರ್ಬತಿಹರನು ಹೊರಟುಹೋದುದರಿಂದ ನಿನಗೆ ಸ್ವಲ್ಪ ಶುಭ ಉಂಟಾಗಲೆಂದು, ಬರೆದಿರುವೆಯಲ್ಲಾ! ಅದನ್ನು ಕುರಿತು ನಾನನುಭವಿಸುತ್ತಿರುವ ಕವ್ಯಗಳಲ್ಲಿ ದೂಂದು ಮಹಾ ವ್ಯಸನಕರವೆಂದು, ನಾನು ತಿಳಿದುಕೊಂಡಿರಲಾರೆನು, ನಿನ್ನ ಸನ್ನಿಧದಿಂದ ನನಗೆ ಸುಖ ಉಂಟಾಗಬೇಕಂದು ನಾನು ತಿಳಿದುಕೊಂಡಿರುವನು. ಅದು ಇನ್ನೊಂದಿಗೆ ಲಭ್ಯವಾಗುವುದೊ ನನಗೆ ತಿಳಿಯದು. ನನ್ನನ್ನು ಜಾಗರೂಕನಾಗಿ ಇರುವಂತ ಬರೆದಿರುವೆ. ನಾನು ಅತ್ಯವಶ್ಯಕವಾಗಿ ಅಂಗೀಕರಿಸಿರುವನು. ನನ್ನ ಬದಿಯು ನನಗೆ ಸ್ವಾಧೀನವಿಲ್ಲ. ಆದುದರಿಂದ ನಾನು ಹೇಳಿದತರ ದಿಂದ ನಾನು ನಡೆದುಕೊಳ್ಳಲು ಸಿದ್ಧನಾಗಿರುವೆನು, ಇಂತಿ ವಿಜ್ಞಾಪನಾ, ಆಕಾಗದವನ್ನು ದಾದಿಯಕೈಗೆ ಕೊಟ್ಟು, ಇದನ್ನು ತೆಗೆದುಕೊಂಡು ಹೋಗಿ ರಾಣಿಯಕ್ಕಗ ಕೊಟ್ಟು, ಆಕೆಯ ವರ್ತಮಾನವನ್ನು ತಿಳಿದು ಕೊಂಡುಬಂದು ನನ್ನ ಸಂಗಡ ಹೇಳಬೇಕೆಂದು, ರತ್ನ ಪಡಿವ್ಯಾಪಾರಿಯು ಹೇಳಿದಕೂಡಲೆ, ದಾದಿಯು ಅಲ್ಲಿಂದಜೂರಟು ತನ್ನ ರಾಣಿಯಬಳಿಗಗಿ ಮರಳಿ ಮಾತನಾಡಿಕೊಂಡು ಎರಡುದಿನಗಳಮೇಲೆ ಬಹು ಸಂತೋಷದಿಂದ ರತ್ನ ಪಡಿವರ್ತಕನಬಳಿಗೆ ಬಂದು ನಿಲ್ಲಲು, ಆತನು ದಾದಿಯನ್ನು ನೋಡಿ, ಏನು ನೀನು ಕಾರ್ಯಸಾಧನೆಯನ್ನು ಮಾಡಿಕೊಂಡು ಬಂದಿರುವೆಯಾ ! ಎನಲು ಆಕೆ ಬಹು ಸಂತೋಷದಿಂದ ಅಯಾ ! ರಾಣಿಯಮನಸೊಪ್ಪು ನಂತ ಬಹು ವಿವರವಾಗಿ ನಿನ್ನ ಗುಣಗಳನ್ನು, ನಿನ್ನ ಗೌರವವನ್ನೂ, ರಾಜಪುತ್ರನಿಗೂ, ನಿನಗೂ ಇರುವ ಸ್ನೇಹವನ್ನೂ, ಇರ್ಬತಿಹರನಿಗಿಂ ತಲ ನಿನ್ನಲ್ಲಿರುವ ಅತಿಶಯವಾದ ಸುಗುಣಗಳನ್ನು ನಿರೂಪಿಸಲಾಗಿ ಆಕೆ ಅಂತಹ ಸದ್ಗುಣಶಾಲಿಯಾದ ಪುರುಷನನ್ನು ಪ್ರತ್ಯಕ್ಷವಾಗಿ ನೋಡದೆ, ಆತನು ಮಾಡುವ ಪ್ರತ್ಯುಪಕಾರವನ್ನು ನಾವು ತಿಳಿದುಕೊಳ್ಳದೆ, ಹೇಗೆ ವಂದನೆಗಳನ್ನು ಸಮರ್ಪಿಸಲಾದೀತೇ ? ಆದುದರಿಂದ ನೀನು, ಅಗತ್ಯವಾಗಿ ನಾಳೆಯದಿನ ಆತನನ್ನು ಬಳಿಗೆ ಕರೆದುಕೊಂಡು ಬಾ ಎಂದು ಹೇಳಿರುವುದ ರಿಂದ, ನೀನು ದಯಮಾಡಿ, ನನ್ನ ಸಂಗಡ ಅರಮನೆಗೆ ಬರಬೇಕೆಂದು ಬೇಡಿ ಕಂಡಳು, ಬಳಿಕ ವರ್ತಕನು ದಾದಿಯನ್ನು ಕುರಿತು ನಿಮ್ಮ ರಾಶಿಯು ನನ್ನನ್ನು ಅರಮನೆಗೆಬರುವ.ತ ಹೇಳಿದಳ ಕೊರತು ಚೆನ್ನಾಗಿ ಯೋಚಿಸಲಿಲ್ಲ.