ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೦೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦೪ ಯವನ ಯಾಮಿನೀ ವಿನೋದ ಎಂಬ, ಡರು. ನಂತರ ಆತನು ದಾರಿಯನ್ನು ನಡೆದುಬಂದ ಆಯಾಸದಿಂದಲೂ, ಹೊಸಬರ ಮಧ್ಯದಲ್ಲಿ ತಾನು ಒಂಟಿಯಾಗಿರುವ ಭಯದಿಂದಲ, ನಿಂತು ಕೊಳ್ಳಲಾರದೆ ಕುಳಿತುಕೊಂಡನು. ಆ ಜನರು ತಮ್ಮ ಯಜಮಾನನು ಬರುವವರೆಗೂ, ಕಾದುಕೊಂಡಿದ್ದು ಆತನು ಬಂದಮೇಲೆ ಕೈ ಕಾಲುಗಳನ್ನು ತೊಳೆದುಕೊಳ್ಳುವಂತೆ ಹೇಳಿ, ಎಲ್ಲರೂ ಕುಳಿತುಕೊಂಡು, ಒಟ್ಟಾಗಿ ಭೋಜ ನಮಾಡಿದರು. ನಂತರ ಆತನು ಸುಮ್ಮನೆ ಸಸ್ಯವಾಗಿ ಕುಳಿತುಕೊಂಡಿ ರುವಾಗ, ಆ ಜನರ ಯಜಮಾನನು ಆತನನ್ನು ನೋಡಿ, ಅಯಾ ! ನಾವು ಗಳು ಯಾರು ಬಲ್ಯಾ ! ಎಂದು ಹೇಳಿದನು. ಅದಕ್ಕಾತನು ಅಯಾ ! ನಾನು ನೀವಿರುವಸಲವನ್ನಾಗಲಿ, ನಿಮ್ಮನ್ನಾಗಲಿ, ಎಂದೂ ನೋಡಿದವನಲ್ಲವೆಂದು, ರತ್ನಪಡಿ ವ್ಯಾಪಾರಿ ಯು, ಹೇಳಿದನು. ಓಹೋ ! ಹಾಗಾದರೆ ಚಿಂತೆಯಿಲ್ಲ. ನಿನ್ನೆ ರಾತ್ರಿ ) ನಿನ್ನ ಮನೆಯಲ್ಲಿ ನಡೆದವರ್ತಮಾನವನ್ನು, ಮರಮಾಜದೆ ನನ್ನ ಸಂಗಡ ಹೇಳು. ನಿಜವಾದಸಂಗತಿಯನ್ನು ತಿಳಿದುಕೊಳ್ಳಬೇಕೆಂದು, ನಾವು ಕುತೂಹಲಸು ತಿರುವೆನೆನಲು,ರತ್ನ ಪಡಿವಮಾರಿಯು ಅಯ್ಯಾ! ಇದುವರಿಗ, ತನಗೆ ತಿಳಿಯದಸಂಗತಿ ಯಾವುದೂ ಇಲ್ಲ. ಎಲ್ಲವೂ ನಿನಗೆ ಗೊತ್ತಾಗಿರುವು ದಲ್ಯಾ ! ಎಂದು ನುಡಿದಕೂಡಲೆ, ಕಳ್ಳರ ಯದಮಾನನು ಅಯಾ ನಿನ್ನೆ ರಾತಿ ) ನಿನ್ನ ಮನೆಯಲ್ಲಿದ್ದ ಯುವತಿಯ, ಯುವಕನೂಸಹ ಇಂಥವರೆಂದು, ನಾವು ತಿಳಿದಿದ್ದರೂ, ನಿನ್ನ ಬಾಯಿಯಿಂದ ನಿಜವಾದ ವರ್ತಮಾನವನ್ನು ಕೇಳಬೇಕೆಂದು, ಅವೇ (ಸುತಿರುವೆನೆನಲು, ರತ್ನ ಪಡಿವಾವಾರಿಯು ಅವರು ಕಳ್ಳರ ಯಜಮಾನನೆಂದು ತಿಳಿದುಕೊಂಡು, ಅಯಾ ! ಆ ನಾಯಿಕಾನಾಯಕಿಯರ ವಿಷಯದಲ್ಲಿ ನಾನು ಬಹಳವಾಗಿ ದುಃಖಿಸುತ್ತಿರುವುದರಿಂದ ಅವರ ವಿಷಯವನ್ನು ಕುರಿತು, ನೀವು ಏನಾ ಬರೂ ಹೇಳಬಲ್ಲಿರಾ ಎಂದು ಹೇಳಿದನಂದು, ಪಹರಜಾದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲಿ ಪುನಹ ಹೇಳಲಾರಂಭಿಸಿದಳು.