ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೭೫ ಪಡಿಸುವೆನೆಂದು ಹೇಳಿದಕಡಲೆ ರಾಜಕುಮಾರನು ತನ್ನ ಇನ್ನಾರ್ಥವು ಬೇಗ ಕೈಗೂಡುವುದೆಂಬ ಭರವಸದಿದ, ಉತಾಹಯುಕ್ತನಾದನು. ಮೊದಲಿನ ನಿಶ್ಕಿಣಿ, ತೊಂದರೆಗಳ, ಹಾಳಾದವು. ರಾಜಪುತ್ರನು ತನ್ನ ತಂದೆಯನ್ನು ನೋಡಿ, ಬಟ್ಟೆಗಳನ್ನು ಹಾಕಿಕೊಳ್ಳಬೇಕೆಂದು ನುಡಿದು ಉತ್ತಮವಾದ ವಸ್ತ್ರಗಳನ್ನು ಧರಿಸಿಕೊಂಡು ಕುಳಿತನು. ಆ ಕಾಲದಲ್ಲಿ ತನ್ನ ಮಗನ ಆರೋಗ್ಯ ಸ್ಥಿತಿಯನ್ನು ಸಂಪೂರ್ಣವಾಗಿ ನೋಡಿದವನಾದ ರಾಜನು ಆತನನ್ನು ಪ್ರೀತಿಯಿಂದಾಲಿಂಗಿಸಿಕೊಂಡು, ಅಯಾ ! ನೀನು ನನ್ನ ಪುತ್ರನನ್ನು ಸ್ಪಷ್ಟಪಡಿಸುವುದಕ್ಕಾಗಿ ಬಂದ ಸಂಜೀವನವೆಂದು ತಿಳ ದಿರುವೆನು. ಇದರ ಸಂತೋಷವನ್ನು ನನ್ನ ರಾಜ್ಯದಲ್ಲಿ ಪ್ರಸಿದ್ದಿ ಪಡಿ ಸುವುದಕ್ಕಾಗಿ ನಾನು ಮಾಡುವ ಉವಚಾರಗಳನ್ನು ನೀನು ಸ್ವೀಕರಿಸಿ ಬೆಕೆಂದು ನುಡಿದು ತಾನೂ, ತನ್ನ ಸಭಿಕರೂ, ದೇಶದಜನರೂ, ಬಹುದಿನ ಗಳವರೆಗೂ ಔತನಾದಿಗಳನ್ನು ಮಾಡಿ ಸಂತೋಷಪಡಿಸಿದುದರಿಂದ ಮರದ ವಾನನ ಕೀರ್ತಿಯು ರಾಜ್ಯದಲೆಲ್ಯಾ ವ್ಯಾಪಿಸಿತು, ಅದುವರಿಗೆ ನಿದ್ರಾಹಾರಗಳನ್ನು ತೊರೆದು ಪ್ರಯಾಸಪಡುತ್ತಿದ್ದ ರಾಜಪುತ್ರನು ತನ್ನ ಮನೋವ್ಯಥೆಯು ನಿವಾರಣೆಯಾದುದರಿಂದ ಸಂಪೂ ರ್ಣವಾಗಿ ನಿದ್ರಾ ಹಾರಾದಿಗಳನ್ನು ರ್ಗಹಿಸಿ, ಸಂಪೂರ್ಣಶಕ್ತಿ ಸಾಮರ್ಥ್ಯ ಗಳುಳ್ಳವನಾಗಿ ಮರಜವಾನನಬಳಿಗೆ ಬಂದು ಫಿಯಾ ! ನೀನು ಹೇಳಿದ ನಾಗಾನವನ್ನು ನೆರವೇರಿಸುವುದಕಿ ಂದು ಉತ್ತಮವಾದ ಸಮಯವಾಗಿ ರುವುದು. ಆದುದರಿಂದ ಶೀಘ್ರವಾಗಿ ಹೊರಟು ನನ್ನ ಮನೋಹರಿಯನು ತೂರಿಸಿ, ನನ್ನನ್ನು ಸಂತೋಷಪಡಿಸುವನಾಗು. ಆದರೆ ನಾವಿಬ್ಬರೂ ಹೊರಡುವುದಕ್ಕೆ ಒಂದಾನೊಂದು ನಿರ್ಬಂಧ ಉಂಟು. ಅದೇನೆಂದರೆ :ವ್ಯದನಾದ ನನ್ನ ತಂದೆಯು ನನ್ನನ್ನು ಅಗಲಿರಲು ಒಪ್ಪದಿರುವುದರಿಂದ ಇದಕ್ಕೇನು ಉಪಾಯವನ್ನು ಮಾಡಬೇಕೋ ತಿಳಿಯದಲ್ಲಾ ಎಂದು ಗಟ್ಟಿಯಾಗಿ ಅಳಲಾರಂಭಿಸಿದನು. ಅದನ್ನು ನೋಡಿ ಮರದವಾನನು, ಆಯಾ ! ಈ ವಿಷಯದಲ್ಲಿ ತೊಂದರೆ ಬರುವುದೆಂದು ನನಗೆ ಮೊದಲೇ ತಿಳಿದಿದ್ದಿತು. ಆದರೆ ಚೀನಾ ರಾಜಪುತ್ರಿದು ನಾನು ಅಣ್ಣ ತಂಗಿಯರಂತ ಚಿಕ್ಕಂದಿನಿಂದಲೂ ಬಹಳವಾದ ಪ್ರೀತಿವಾತ್ರಗಳನ್ನು ಹೊಂದಿ, ಬೆಳೆ ದವರ ಮದರಿಂದ ನನ್ನ ವೈರಾಗ್ಯವನ್ನು ತೊರೆದು ಮನಃಪೂರ್ವಕವಾಗಿ