________________
೬೦ ಯವನ ಯಾಮಿನೀ ವಿನೋದ ಎಂಬ, ಪರಿಹರಿಸಿ ಕೊಳ್ಳೆಂದು ಹೇಳಿ, ತನ್ನ ಮನೆಗೆ ಕರೆದುಕೊಂಡುಹೋಗಿ ಬಹ ಳವಾಗಿ ಉಪಚಾರಾದಿಗಳನ್ನು ಮಾಡಿ, ಮಲಗಿಕೊಳ್ಳುವಂತೆ ಹೇಳಿದಬಳಕ ಅಯ್ಯಾ ! ನೀನು ಇಲ್ಲಿಗೆ ಹೋಗಿಬಂದೆಯೋ ಅದನ್ನು ಹೇಳೆಂದು ಹೇಳಿ ದನು. ಬಳಿಕ ಕಮರಲುಜಮಾನನು ತಾನು ರಾಜಪುತ್ರಿಯನ್ನು ತೊರೆದು ಯಂತ ಕೋಸುಗವಗಿ ಪಕ್ಷಿಯನ್ನು ಹಿಂದಟ್ಟಿಕೊಂಡು ಬಂದುದನ್ನು ವಿವರಿಸಿ ಹೇಳಿ ಇನ್ನು ರಾಜಪ್ರತಿ ಯನ್ನು ನೆನೆದುದರಿಂದ ಫಲವೇನು, ಅವಳು ಹೇಗಿರುವಳೆ ತಿಳಿಯದಾ! ನಾನೇನುವಾಡರಿ, ದುರ್ದೆ ವದಿಂದ ಈತರನಾದ ಸಂಕಟಕ್ಕೆ ಪಾತ್ರನಾದೆನಲ್ಲಾ! ಅಯಾ ! ನನ್ನು ತಂದೆಯಾದ ವಹಜವಾನನ ರಾಜ್ಯಕ್ಕೆ ಹೋಗುವುದಕ್ಕಿಲ್ಲಿಂದ ಹತ್ತಿರ ವಾದ ದಾರಿಯಂಟಿ: ? ಎಂದು ಕೇಳಲು, ಆತನು ಅಯಾ! ಆ ರಾದ್ಧಕ್ಕೆ ಇಲ್ಲಿಂದ ಹೋಗುವ ಭೂಮಾರ್ಗವು ನಾನಾವಿಧವಾದ ಗುಟ್ಟಬೆಟ್ಟಗಳ ಮೇಲೆ ಹಾದುಹೊಗುವುದರಿಂದಲೂ, ಅಲ್ಲಲ್ಲಿ ಕಾಡುಜನರು ಪ್ರಯಾಣಿಕ ರನ್ನು ಪೀಡಿಸತ್ತಿರುವುದರಿಂದ, ಒಂದು ಸಂವತಗದ ಧಾರಿಯವರಿಗೂ ಮುಸಲಾ , ನರೇ ಇಲ್ಲದುದರಿಂದಲೂ, ಆಹಾರ ಪದಾರ್ಥಗಳು ಸರಿಯಾಗಿ ದೊರಕುದರಿಂದಲೂ, ಅದು ದುರ್ಗಮವಾದ ಮಾರ್ಗವಾಗಿರುವುದು, ಆದರೆ ಇಲ್ಲಿಂದ ಹಡಗನ್ನು ಹತಿ ನೀಲದಿದದ ವಲವಾಗಿ ನಿಮ್ಮ ತಂದೆ ಯಂ ರಾಜ್ಯವನ್ನು ಸೇರಬಹುದು. ಅದೇ ಸುಲಭವಾದ ಮಾರ್ಗ, ಇದಕ್ಕಿಂತಲೂ ಉಪಾಯಕರವಾದ ದಾರಿಯೇ ಇಲ್ಲ. ಪ್ರತಿ ಸಂವತ್ಸರವೂ ಈ ಸಲದಿಂದ ನೀಲದಿದಕೂ, ಇಚಿನಿನ ನಡುಗು ಗಳಿಗೂ, ಹಡಗುಗಳು ಹೋಗುತ್ತಲೇ ಇರುವುವು. ನಿನ್ನೆ ತಾನೆ ಒಂದು ಹಡಗು ಇಲ್ಲಿಂದ ಇಚಿಸಿ ದಿನಕ್ಕೆ ಪ್ರಯಾಣ ಮಾಡಿತು. ನೀನು ಇನ್ನು ಕೆಲವು ದಿನಗಳ ಮುಂಚಿತವಾಗಿ ಇಲ್ಲಿಗೆ ಬಂದು ಇದ್ದರೆ ಕೊರಡಬಹುದಾ ಗಿತ್ತು. ಈ ಕೆಲವು ಮಿಂಚಿಹೋದುದರಿಂದ ಕೆಲವ್ರದಿನಗಳವರಿಗೂ ನೀನಿಲ್ಲಿಯೇ ಇದ್ದು ನಂತರ ಬಂದು ಹೋಗುವ ಹಡಗುಗಳನ್ನು ನೋಡಿಕೊಂಡು ನೀನು ಪ್ರಯಾಣ ಮಾಡಬಹುದೆಂದು ಹೇಳಲು ರಾಜಪುತ ನು ತಾನು ಆ ಸಲಕ್ಕೆ ಹೊಸಬನಾಗಿ ತನಗೆ ಮತ್ತಾವ ಸ್ನೇಹಿತರೂ ಇಲ್ಲದುದರಿಂದ ಪ್ರಕೃತದಲ್ಲಿ ಆ ತೋಟಗಾರನ ಆದರಣೆಗೆಸಿಕ್ಕಿ ಅನುಮೋದಿತವಾಗಿ ನಂತರ ಜೀರೆಯಲ್ಲಿ ಮಲಗಿ ನಿದ್ರಿಸಿದ ಚೀನಾ ರಾಜಪುತ್ರಿಯ ಕಥೆಯನ್ನು ಕುರಿತು, ಹೇಳಲಾರಂಭಿಸಿ, ಪ್ರಹರದಿಯು ಸುಲ್ತಾನರನ್ನು ಕುರಿತು, ಇಂತಂದಳು,