(YY) ಸ್ಕೂಲಾ ಚ ಮಧುರೇ ಮಂದಾ ಮಂಡೂಕ ಗತಿಂ ಧರಾ |
ಆಹಾರಭೇದದಿಂ ಅಮ್ಮೆ ಸ್ನಗ್ಲಾ ಸವೇಗಾ ಚ ಜಲಕಾಕಗತಿಂ ಧರಾ || (ವೈ. ಸಾ. ಸಂ. 6.)
ದ ನಾಡೀ ಭೇದ
ಸೀಯಾದ ಆಹಾರವನ್ನು ಸೇವಿಸಿದವನ ನಾಡಿಯು ದಪ್ಪವಾಗಿಯೂ, ಮೆಲ್ಲಗಾಗಿಯೂ,
ಕಪ್ಪೆಯಂತೆ ಹಾರುತ್ತಿರುವದು ಹುಳಿಯಾದ ಆಹಾರವನ್ನು ಭುಂಜಿಸಿದವನ ನಾಡಿಯು ವೇಗ
ವುಳ್ಳದ್ದಾಗಿಯೂ, ಜಿಡ್ಡುಳ್ಳದ್ದಾಗಿಯೂ, ನೀರುಕಾಗೆಯಂತೆ ಓಡುತ್ತಿರುವದು.
ಉಪ್ಪು ಮೊದಲಾದ ಕ್ವಾರಗಳನ್ನು ಅತಿಯಾಗಿ ಭುಂಜಿಸಿದರೆ, ನಾಡಿಯು ಬೆವರುತ್ತಾ, ವೇಗವುಳ್ಳದ್ದಾಗಿ ಮತ್ತು ಅತಿಬಿಸಿಯಾಗಿ ಮೋಟನ ನಡಿಕೆಯಂತೆ ಚಲಿಸುವದು, ಚೊಗರು ಪದಾರ್ಥಗಳನ್ನು ಅಧಿಕವಾಗಿ) ಭುಂಜಿಸಿದವನ ನಾಡಿಯು ಬಹಳ ಸಪೂರವಾಗಿ ರಾಜಹಂಸ ದಂತೆ ಸಮಾಧಾನವಾಗಿ ಚಲಿಸುವದು ಮತಾಂತರ. ಮಧುರೇ ಬರ್ಹಿಗಮನಾ ತಿ ಸ್ವಾತ್ ಸ್ಕೂಲತಾಗತಿಃ | ಅಮ್ಲ ಕೂಷ್ಣಾ ಪ್ಲವಗತಿಃ ಕಟುಕೈರ್ಚ್ಛ೦ಗಸಭಾ || ಕಷಾಯೇ ಕರಿನಾ ಮ್ಲಾನಾ ಲವಣೇ ಸರಲಾ ದ್ರುತಾ | ಏವಂ ದ್ವಿಚತುರ್ಯೋಗೇ ನಾನಾಧರ್ಮವತೀ ಧರಾ || (ನಾ, ಪ್ರ 30 ) ನಾಡಿಯು ಮಧುರ ಆಹಾರವನ್ನು ಅತಿಯಾಗಿ ಭುಂಜಿಸಿದರೆ ನವಿಲಿನ ಗತಿಯುಳ್ಳದ್ದಾಗಿರು ವದು, ಕಹಿಪದಾರ್ಥಗಳನ್ನು ಅತಿಯಾಗಿ ಉಪಯೋಗಿಸಿಕೊಂಡದರಿಂದ ಸ್ಕೂಲಗತಿಯುಳ್ಳದ್ದಾ ಗಿಯೂ, ಹುಳಿಯಿಂದ ಸ್ವಲ್ಪ ಬಿಸಿಯಾಗಿ ಕಪ್ಪೆಯ ಗತಿಯುಳ್ಳದ್ದಾಗಿಯೂ, ಖಾರದ ಪದಾರ್ಧ ಗಳಿಂದ ಭ್ರಮರಗತಿಯುಳ್ಳದ್ದಾಗಿಯೂ, ಚೊಗರುಪದಾರ್ಥಗಳಿಂದ ಕರಿಣವಾಗಿ ಬಾಡಿದ ಹಾ ಗಿನ ಗತಿಯುಳ್ಳದ್ದಾಗಿಯೂ, ಉಪ್ಪಾಗಿರುವ ಪದಾರ್ಥಗಳಿಂದ ವೇಗವುಳ್ಳದ್ದಾಗಿಯೂ, ನೆಟ್ಟ ಗಾಗಿಯೂ, ಚಲಿಸುವದು. ಹೀಗೆಯೇ ಎರಡು ಮೂರು ಅಥವಾ ನಾಲ್ಕು ರಸಗಳು ಕೂಡಿ ಕೊಂಡ ಆಹಾರಗಳಿಂದ ನಾಡಿಯು ಅವುಗಳನ್ನನುಸರಿಸಿ ನಾನಾ ಕ್ರಮಗಳಲ್ಲಿ ನಡೆಯುವದು ಗುಡರಂಭಾವಾಂಸರೂಕ್ಷಶುಷ್ಕತೀಕ್ಷಾದಿಭೋಜನಾತ್ | ವಾತಪಿತ್ತಾರ್ತಿರೂಪೇಣ ನಾಡೀ ವಹ ನಿಶ್ಚಿತಾ || (ನಾ. ಪ್ರ. 32.) ಬೆಲ್ಲ, ಬಾಳೆಹಣ್ಣು, ಮಾಂಸ, ರೂಕ್ಷಪದಾರ್ಧ, ಒಣಗಿಸಿದ ಪದಾರ್ಧ, ತೀಕ್ಷಪದಾರ್ಧ, ಇವುಗಳು ಮೊದಲಾದವುಗಳನ್ನು ಭುಂಜಿಸಿದರಿಂದ ನಾಡಿಯು ವಾತಪಿತ್ತ ಪೀಡೆಯ ರೂಪ ದಿಂದ ಚಲಿಸುವದು. (22) ಭಾರ-ಪ್ರವಾಹ-ಮರ್ಚ್ಚಾ -ಭಯ-ಶೋಕ-ಪ್ರಮುಖಕಾರಣಾನ್ನಾಡೀ || ಭಯಂಕರವಾಗಿ ಕಂಡ ಸಮೂರ್ಛಿತಾಪಿ ಗಾಢಂ ಪುನರಪಿ ಸಾ ಜೀವಿತಂ ಧತೇ || ರೂ ಮೃತ್ಯುಸೂಚಕ ವಲ್ಲದ ನಾಡಿ (ನಾ, ಪ್ರ. 27.)