ಈ ಪುಟವನ್ನು ಪರಿಶೀಲಿಸಲಾಗಿದೆ

ಅ. XXX. __ 366 __

   66.         ನಾನಭ್ಯಕ್ತೇ ನಾಪಿ ಚಾಸ್ನಿಗ್ಧ ದೇಹೇ || ಸ್ವೇದಕ್ಕೆ ಮುಂಚಿತ   ಸ್ವೇದೋ ಯೋಜ್ಯಃ ಸ್ವೇದವಿದ್ಭಿಃ ಕಧಂಚಿತ್ ಅಭ್ಯಂಜನ         ||(ಸು. 545.)
                    
  ಅಭ್ಯಂಜನ ಮಾಡದೆ ಮತ್ತು ದೇಹವನ್ನು ಸ್ನಿಗ್ಧಮಾಡದೆ ಸ್ವೇದವಿಧಿಗಳನ್ನು ತಿಳಿದ ವೈದ್ಯನು ಯಾವ ಸಂಗತಿಯಲ್ಲಿ ಯಾದರೂ ಸ್ವೇದಕ್ರಮವನ್ನು ನಡಿಸಕೂಡದು. ಯಾಕಂದರೆ:
     ದೃಷ್ಟಂ ಲೋಕೇ ಕಾಷ್ಠ ಮಸ್ನಿಗ್ಧ ಮಾಶು ||
     ಗಚ್ಛೇದ್ಭಂಗಂ ಸ್ವೇದಯೋಗೈರ್ಗೃಹೀತಂ || (ಸು 545.) 
 ಒಂದು ಕೋಲನ್ನು (ಪಸೆಹಚ್ಚಿ) ಸ್ನಿಗ್ಧಮಾಡಿಕೊಳ್ಳದೆ ಸ್ವೇದಕ್ರಮಗಳಿಂದ(ಬಿಸಿಮಾಡಿ) ಬಗ್ಗಿಸಲು ಯತ್ನಿಸಿದರೆ ಬೇಗನೇ ತುಂಡು ಆಗುವದು ಲೋಕದಲ್ಲಿ ಕಾಣುತ್ತದೆ.

67. ಶುಷ್ಕಾಣ್ಯಪಿ ಹಿ ಕಾಷ್ಠಾನಿ ಸ್ನೇಹಸ್ವೇದೋಪದನೈಃ | ಸ್ವೇದದ ಪ್ರ ನಮಯಂತಿ ಯಧಾನ್ಯಾಯಂ ಕಿಂ ಪುನರ್ಜೀವತೋ ಯೋಜನ ನರಾನ್ || (ಚ. 75.)

ಒಣಗಿದ ಮರದ ತುಂಡುಗಳನ್ನು ಎಣ್ಣೆ ಸವರಿ ಬೆವರಿಸಿದ್ದಲ್ಲಿ, ಸರಿಯಾಗಿ ಬೊಗ್ಗಿಸ ಲಿಕ್ಕಾಗುವಾಗ್ಗೆ, ಜೀವವಿರುವ ಮನುಷ್ಯರನ್ನು ಬೊಗ್ಗಿಸುವದು ಏನು ಕಷ್ಟ?

     ಸ್ವೇದನಾರ್ಧಂ ಘೃತಕ್ಷೀರತೈಲಕೋಷ್ಠಾಂಶ್ಚ ಕಾರಯೇತ್ |           
      (ಚ. 77.) 

ಸ್ವೇದನಮಾಡಿಸಿಕೊಳ್ಳುವವನು ಹೊಟ್ಟೆಗೆ ತುಪ್ಪವನ್ನು, ಹಾಲನ್ನು ಅಧವಾ ತೈಲವನ್ನು ಸೇವಿಸಬೇಕು.

        ಅಗ್ನೇರ್ದೀಪ್ತಿಂ ಮಾರ್ದವಂ ತ್ವಕ್ಪ್ರಸಾದಂ 
        ಭಕ್ತಶ್ರದ್ಧಾಂ ಸ್ರೋತಸಾಂ ನಿರ್ಮಲತ್ವಂ | 
     ಕುರ್ಯಾತ್ಸ್ವೇದೋ ಹಂತಿ ನಿದ್ರಾಂ ಸತಂದ್ರಾಂ                                                             
       ಸಂಧೀನ್ ಸ್ತಬ್ಧಾಂಶ್ಚೇಷ್ಟಯೇದಾಶು ಯುಕ್ತಃ ||       
            ಸ್ನೇಹಕ್ಲಿನ್ನಾ ಧಾತುಸಂಸ್ಥಾಶ್ವ ದೋಷಾಃ 
        ಸ್ವಸ್ಧಾನಸ್ಧಾ ಯೇ ಚ ಮಾರ್ಗೇಷು ಲೀನಾಃ |  
        ಸಮ್ಯಕ್ ಸ್ವೇದೈರ್ಯೋಜಿತೈಸ್ತೇ ದ್ರವತ್ವಂ
ಪ್ರಾಪ್ತಾಃ ಕೋಷ್ಠಂ ಯಾಂತಿ ದೇಹಾದಶೇಷಾತ್ ||(ಸು. 545.)

ಸ್ವೇದದಿಂದ ಅಗ್ನಿದೀಪನ, ಮೃದುತ್ವ, ಚರ್ಮದ ಪ್ರಸನ್ನತೆ, ಊಟದಲ್ಲಿ ಶ್ರದ್ಧೆ ಮತ್ತು ಸ್ರೋತಸ್ಸುಗಳ ನಿರ್ಮಲತೆ, ಉಂಟಾಗುವದಲ್ಲದೆ, ಅತಿನಿದ್ರೆ ಮತ್ತು ಜಡತ್ವ ವಾಸಿಯಾಗುತ್ತವೆ ಮತ್ತು ಸ್ತಬ್ಧವಾದ ಸಂದುಗಳು ಬೇಗನೇ ಬೇಕಾದ ಹಾಗೆ ಚಲಿಸುವವು. ಸ್ನೇಹದಿಂದ ಒದ್ದೆಯಾದ ದೋಷಗಳು, ಧಾತುಗಳನ್ನಾಶ್ರಯಿಸಿರುವವುಗಳಾಗಲಿ, ತಮ್ಮ ಸ್ಥಾನಗಳಲ್ಲಿರು ವವುಗಳಾಗಲಿ, (ಸ್ರೋತಸ್ಸುಗಳು) ಮಾರ್ಗಗಳಲ್ಲಿ ತಡೆದು ನಿಂತಿರುವವುಗಳಾಗಲಿ, ಸರಿಯಾಗಿ ನಡಿಸಲ್ಪಟ್ಟ ಸ್ವೇದಗಳಿಂದ ನೀರಾಗಿ, ಇಡೀ ದೇಹದಿಂದ ಹೊಟ್ಟೆಗೆ ಬಂದು ಸೇರಿ, ಹೊರಗೆ ವಿರೇಚನವಾಗಿ ಹೋಗುತ್ತವೆ.