ಈ ಪುಟವನ್ನು ಪ್ರಕಟಿಸಲಾಗಿದೆ
51
ಈ ಕಥೆಯನ್ನು ಕೇಳಿದ ಭೋಜನು ಆ ಹಾ! ಎದಂದುಕ್ಕೊಂಡು, ವಿಕ್ರಮನ ಗುಣಾತಿಶಯಗಳನ್ನು ಕೊಂಡಾಡುತ್ತಾ ಹೊರಟು ಹೋದನು. *** ಆದರೂ ಭೋಜನು ವಿಕ್ರಮಪೀಠದಬಳಿಗೆ ಬರುವುದನ್ನು ಬಿಡಲಿಲ್ಲ. ಉಳಿದ ಸಾಲಭಂಜಿಕೆಗಳು ಹೇಳುವ ಕಥೆಗಳನ್ನು ಕೇಳಬೇಕಂದೂ, ಅವು ಏನೂ ಹೇಳದಿದ್ದರೆ ಆ ಪೀಠವನ್ನೇರಬೇಕೆಂದೂ ಮರಳಿ ಅದರ ಮುಂದೆ ಬಂದು ನಿಂತನು. ಈಸಲ ಇಪ್ಪತ್ತೊಂಭತ್ತನೆಯ ಸಾಲಭಂಜಿಕೆಯು ಹೀಗೆಂದಿತು. "ಒಂದಾನೊಂದು ಸಮಯದಲ್ಲಿ ಒಬ್ಬಾನೊಬ್ಬ ದರಿದ್ರನಾದ ಕವಿಶ್ವರನು ವಿಕ್ರಮಾರ್ಕ ರಾಜನಬಳಿಗೆ ಬಂದು ಆತನನ್ನಾಶೀರ್ವದಿಸಿ ಯಾಚಿಸಲು, ಆತನು ಆ ಕವಿಯ ಕವಿತೆಯನ್ನ ಮೆಚ್ಚಿ ಅವನಿಗೆ ತನ್ನ ಭಂಡಾರದಲ್ಲಿನ ಅಮೂಲ್ಯಗಳಾದ ಒಂಭತ್ತು ರತ್ನಗಳನ್ನೇ ಕೊಡಿಸಿದನು. ಇಂತಹ ಕಾರ್ಯವು ಇತರರಲ್ಲಿರುವುದೆ?"
ಭೋಜನು ಮಾತನಾಡದೆ ಹಿಂದಿರುಗಿದನು.
***
ಪುನಃ ಭೋಜಭೂಸಾಲನು ವಿಕ್ರಮವಿರದಬಳಿ ಸಾರಿ, ಈ ಕಥೆಯನ್ನಾಲಿಸಿದನು:-
"ಒಂದುದಿನ ಬಬ್ಬಾನೊಬ್ಬ ಪುರುಷನು ಒಬ್ಬ ಸುಂದರಿಯ ಸಮೇತ ವಿಕ್ರಮನ ಅಸ್ಥಾನಕ್ಕೆ ಬಂದು, 'ಹೇ ರಾಜನ್ ನಾನು ದೇವೇಂದ್ರನ ಭೃತ್ಯನು, ಯಾವುದೋ ಕಾರಣದಿಂ