ಈ ಪುಟವನ್ನು ಪ್ರಕಟಿಸಲಾಗಿದೆ

52

ದ ಆತನು ನನ್ನನ್ನು ಶಪಿಸಲು, ನಾನು ಭೂಲೋಕಕ್ಕೆ ಬರಬೇಕಾಯಿತು ಈಗ ದೇವತೆಗಳಿಗೂ ರಾಕ್ಷಸರಿಗೂ ಒಂದು ಮಹಾಯುದ್ದ ವು ಸಂಭವಿಸಿರುವ ಕರಣ ನಾನು ಮಹೇಂದ್ರನ ಸಹಾಯಾರ್ಧವಾಗಿ ಹೋಗಬೇಕಾಗಿದೆ, ನೀನು ಹೆರರ ಹೆಂಗಸರನ್ನು ಅಕ್ಕ ತಂಗಿಯರಂತಿ ಕಾಣವಿಯೊಂದು ಕೇಳಿರುವೆನಾದ ಕಾರಣ ನನ್ನ ಹೆಂಡತಿ ಯಾದ ಆಕೆಯನ್ನು ನಿನ್ನ ರಕ್ಷಣೆಯಲ್ಲಿರಿಸಲು ಬಂದಿರುವೆನು. ಏನ ಹೇಳುವಿ? ಎಂದನು. ವಿಕ್ರಮನು ಆಗಬಹುದೆನ್ನ ಲು, ಆ ಪುರುಷನು ಆಕೆಯನ್ನು ವಿಕ್ರಮನ ಬಳಿ ಬಿಟ್ಟು ಆಕಾಶಕ್ಕೆ ಹಾರಿ ಅದೃಶ್ಯನಾದನು. ರಾಜನೂ, ಸಭಿಕರೂ ಮುಖಗಳನ್ನು ಮೇಲಕ್ಕೆತ್ತಿ ಆಗಸದಲ್ಲಿ ದೃಷ್ಟಿಯನ್ನು ನಿಲ್ಲಿಸಲು,ಕ್ಷಣಮಾತ್ರದಲ್ಲಿ ಹಿಡಿ, ಹೊಡಿ, ಬಡಿ, ಕಡಿ " ಎಂದು ಮುಂತಾದ ಕಠಿಣವಾಕ್ಕುಗಳು ಕೇಳ ಬಂದುವು. ಉತ್ತರಕ್ಷಣದಲ್ಲಿ ಕತ್ತಿಯನ್ನು ಹಿಡಿದಿದ್ದ ರಕ್ತಮಯ ವಾದ ಒಂದು ಬಾಹುವು ಕೆಳಕ್ಕೆ ಬಿದ್ದು, ಇನ್ನೊಂದು ಕ್ಷಣದಲ್ಲಿ ತಲೆಯಿಲ್ಲದ ಒಂದು ಮುಂಡವು ಬಿದ್ದಿತು.ಎಲ್ಲರೂ ಈ ಅದ್ಬುತವನ್ನು ನೋಡಿ ಏನ ತೋರದೆ ನಿಂತಿರಲು, ಆ ದಿವ್ಯ ಪುರುಷನ ಮುಖವನ್ನೇ ಹೋಲುತಿದ್ದ ಒಂದು ತಲೆಯ ಕೆಳಕ್ಕೆ ಬಿದಿತ್ತು ಅದನ್ನು ಕಂಡೊಡನೆಯೇ ಅಲ್ಲಿದ್ದ ಸುಂದರಿಯು "ಹಾ! ಇನ್ನೇನು ಗತಿ! ನನ್ನ ಪತಿಯು ಸಂಹರಿಸಲ್ಪಟ್ಟಿರುವನು.' ಎಂದು ಗೋಳಾಡಿ, ತಾನು ಅಗ್ನಿಪ್ರವೇಶ ಮಾಡಲು ಅನುಕೂಲ ಪಡಿಸಿಕೊಡಬೇಕೆಂದು ವಿಕ್ರಮನನ್ನು ಪ್ರಾರ್ಥಿಸಿದಳು. ಆತನು ಬೇಡವೆಂದು ಎಷ್ಟು ಬಗೆಯಿಂದ ತೆಡೆದರೂ ಆಕೆಯ ಒಪ್ಪದಿರಲು, ವಿಕ್ರಮನು ಅನುತಾಪಪಟ್ಟ, ಆಕೆಯ ಸಹಗಮನಕ್ಕೆ ಬೇಕಾದುದನ್ನು ಒದಗಿಸಿಕೊಟ್ಟನು,ಆ ಕೋಮಲಾಂಗಿಯು ಅಗ್ನಿಜ್ವಾಲೆಯಲ್ಲಿ ಬಿದ್ದು ಪ್ರಾಣಗಳನ್ನು ತೊರೆದಳು, ಮಾರ