ಈ ಪುಟವನ್ನು ಪ್ರಕಟಿಸಲಾಗಿದೆ

58

ಅವನಿಗೆ ನೀವು ವಿಕ್ರಮನ ಗುಣಗಳನ್ನು ವರ್ಣಿಸಿ ನಿಮ್ಮ ನಿಜ ರೂಪವನ್ನು ಹೊಂದುವಿರಿ” ಎಂದಳು. ಈಗ ನಮ್ಮ ಶಾಪವಿಮೋಚನೆಯು ಆಯಿತು. ಇನ್ನು ನಾವು ದೇವಲೋಕಕ್ಕೆ ಹೊರಡುವೆವು. ನೀನು ವಿಕ್ರಮನ ಸದ್ಗುಣಗಳನ್ನು ಅವಲಂಬಿಸಿ ನಡೆದು, ಚಿರಕಾಲ ಬಾಳಿ ಕೀರ್ತಿವಂತನಾಗು, ನಿನಗೆ ಶುಭವಾಗಲಿ."

ಹೀಗೆ ಆ ಪಾಂಚಾಲಿಕೆಯು ಹೇಳಿದೊಡನೆಯೆ, ಆ ಮೂವತ್ತೆರಡು ಪ್ರತಿಮೆಗಳೂ ಮಾಯವಾಗಿ ಅಷ್ಟು ಮಂದಿ ದಿವ್ಯ ಸ್ತ್ರೀಯರು ಅಲ್ಲಿ ನಿಂತಿದ್ದರು. ಅವರುಗಳಿಂದ ಪ್ರತ್ಯೇಕ ಪ್ರತ್ಯೇಕವಾಗಿ ಭೋಜನು ಆಶೀರ್ವಾದವನ್ನೂ ಅನೇಕ ವರಗಳನ್ನು ಪಡೆದಮೇಲೆ ಅವರೂ ಮಾಯವಾದರು.

ಭೋಜನು ವಿಕ್ರಮನ ಕಥೆಗಳು ಮುಗಿದು
ಹೋದವಲ್ಲಾ ಎಂದು ವ್ಯಸನಪಟ್ಟು, ಆತನ
ಗುಣಗಳನ್ನು ಪದೇಪದೇ ಸ್ಮರಿಸುತ್ತಾ,
ಅಭ್ಯಾಸಮಾಡುತ್ತಾ, ಆಸಿಂಹಪೀಠ
ವನ್ನು ಅರಮನೆಯಲ್ಲಿರಿಸಿ ಪ್ರತಿನಿ
ತ್ಯವೂ ಪೂಜಿಸುತ್ತಾ, ಬಹು
ಕಾಲ ಧರ್ಮದಿಂದ ರಾಜ್ಯ
ಪರಿಪಾಲನೆ ಮಾಡಿ,
ಯಶಸ್ವಿಯಾದನು.