ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ, • • ••••• ಸ್ವಯಂಪ್ರಭೆ-ಎಲೈ : ಪುತ್ರಿವಿಹೀನೆಯಾಗಿಯುಂ ಪತಿವಿರಹಿಣಿಯಾಗಿಯು ಮಿರ್ಪೆನಗೀ ರಾಜ್ಯದಿಂ ಫಲಮೇಂ ? ಕಂಚುಕಿ-ಎಲ್‌ ಒಡತಿ ! ರಾಯಗುವರಿಯಾದ ಕನಕಲತೆ ವಿಮಲನಗರದರ ಸನಪ್ಪ ವಿಕಮಸಿಂಹನಂ ವರಯಿಸಿ ಅವನಂತಪುರದೊಳೆ ಇರ್ಸ ೪. ಇದರ್ಕಿನಿತೇಕೆ ಚಿಂತಿಸುತಿರ್ಪೆ ? ಸ್ವಯಂಪ.-ಎಲೈ : ಸತಿಸಹಿತೆಯಾದ ಕನಕಲತೆಯನಾಂ ನಿರುಕಿಸಲ್ ಬಯಸುವೆ. ಕಂಚುಕಿ.-ಒಡತಿಯಭಿಮತವಿರ್ದಂತೆ ಅಕ್ಕೆ. ಸೃದುಪ್ರಭೆ.-ಯಥೋಚಿತವಾದ ಪಡೆಯನೊಡಂಗೊಂಡು ಪಡೆವಳ್ಳನಪ್ಪ ಸಲ ವಕನುಂ, ಮಂತ್ರಿಯಾದ ನಂದನಕನುಂ ಪುರಮಂ ರಕ್ಷಿಸು ತಿರ್ಕ, ನೀನಿದನವರ್ಗೆ ಬೆಸಸಿ ಚಚ್ಛರಂ ಬಾರ, ವಿಮಲನಗರಕ್ಕೆ ಪೋಪಂ. ಕಂಚುಕಿ-ಅಂತೆ ಅಕ್ಕೆ, (ಎಂದು ತೆರಳ್ಳಿ) ಸ್ವಯಂಪ್ರಭೆ- ಈಗಳಾನುಂ ಪೋಗಿ ಕನಕಲತೆಗೆ ಬಟ್ಟುಂಬಳಿಯನನು ಗೆದ್ದ ಸೆಂ. (ಎಂದು ತೆರಳಳ ) ( ಬಳಿಕ ಮುಂದಾರಿಕಾ ಸಾಧನಿಕೆಯರರನುರಾಯನುಂ ವಿದೂಷಕನು ಮೇಲ್ಕಂದರ್ ) ರಾಯಂ.-ಆ6 : ನಿರ್ಭಾಗ್ಯನಾದ ನಾಂ ಕನಕಲತೆಯನಿನ್ನೆಲ್ಲಿ ಅರಸುವೆಂ ? ಅಕಟಾ, ಎಲ್‌ : ವನದೇವತೆಯರಿರಾ ! ಎನ್ನ ಮನದನ್ನೆಯಾದ ಕನಕಲತೆಯಂ ನೀಮೇನಾನು ಕಂಡಿರೇ೦. (ಎಂದು ಕಿವಿಗೊಟ್ಟಾಲಿಸಿ) ನೀಮರಿಯಿರಿ. ಹಾ ! ಪ್ರಿಯೇ ! ಕನಕಲತೆ ! ಎನ್ನನುಳಿದು ನೀನದೆಲ್ಲಿ ರ್ದವೆ ? (ಎಂದು ಕಣ್ಣನಿದುಂಬಿದೆ) ಸುಧನಿಕ.-ಎಲೆ ಮಾರಾಯ : ಸಕಲಲೋಕಶೋಕಹಾರಕನಾದ ನೀನಿಂತು ಶೋಕಿಸುವುದುಚಿತಮಲ್ಲು ಸೈರಿಸಸೈರಿಸ.