ಕನ್ನಡ ಪರಮಾರ್ಥ ಸೋಪಾನ ನಾದಶಬ್ದದಲಿ ಮನಸ | ಲುಬ್ಧ ಮಾಡಿದನೆ | ವಾದಿ ವಿವಾದೀ ಕೂಡ | ಕಾದೆ ಗೆಲಿಸಿದನ || ಭೇದಾಭೇದವ ಅರಿಯದೆ | ಹಾದಿ ತೋರಿsದನೆ | ಈದ ಹುಲಿಯಂಥ ಮನಸ | ಸಾದ ಮಾಡಿದನೆ 22 || 9 || ಭ್ರುಕುಟ ಮಧ್ಯದಲ್ಲಿ ವಸ್ತು | ಪ್ರಕಟ ಮಾಡಿದನೆ | ನಾಸಿಕಾಗ್ರದ ಕೊನೆಯ ಮೇಲೆ | ಭಾನುಪ್ರಕಾಶ ತೋರಿದನೆ || ಆಸನ ಬಲಿದು ಪೀಠವನಿಕ್ಕಿ | ಸಾಸಿರ ನಾಮ ಗೆಲಿದನೆ | ಈಶನು ದತ್ತ ಮಹೇಶ ದಿಗಂಬರ | ಘೋಷದೊಳಗೆ ಮನ ನಿಲಿಸಿದನೆ E ಸದ್ಗುರುವು ಕುರುಹಳಿದ ಸದ್ವಸ್ತುವಿನಲ್ಲಿ ಬೆರೆಯಿಸುವ (ರಾಗ-ಭೂಪ ತಾ-ದೀಪಚಂದಿ) ಬೋಧಿಸೆನ್ನನು ಗುರುವೆ | ನಿಮ್ಮಯ ದಿವ್ಯ | ಪಾದವ ನಂಬಿರುವೆ ವೇದಾಂತದೊಳು ಗೋಪ್ಯವಾದ ತತ್ವವನ್ನು | ಬೋಧಿಸಿ ಮನ ವಿನೋದಿಸಿ ಸುಖಿಸೆಂದು ಆದಿ ಅಂತ್ಯವ ಬೋಧಿಸಿ | ನಿರ್ಗುಣವಾದ | ನಾದಬ್ರಹ್ಮವ ಸಾಧಿಸಿ || ಹಾದಿ ನಾಲ್ಕರ ರ ನಡುವೆ | ವೇದಿಕೆಯೊಳು ಕುಳಿತು || ಮೋದದಿ ದಶವಿಧ | ನಾದವ ಕೇಳೆಂದು ಮೂಲ ಕುಂಡಲಿಯನೆತ್ತಿ | ಅಗ್ನಿಯದ ಮೇಲಣ ನೆಲೆಗೆ ಹತ್ತಿ || ಸಾಲಿಟ್ಟು ಸುರಿತಿರ್ಪ | ಹಾಲನು ಸವಿದುಂಡು || ನಿಲ ಜ್ಯೋತಿಯ ದಿವ್ಯ | ಜ್ವಾಲೆಯೊಳು ಬೆಳಗೆಂದು ರವಿಶಶಿಗಳ ತಡೆದು | ಸುಷುಮ್ಮಿಯ | || & || || ಪ || || ಅ. ಪ. || || 0 || || 9 || ನವಮಾರ್ಗದೊಳು ನಡೆದು ||
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.