ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ಹೋಗುವದಕ್ಕೆ ದುರ್ಘಟವಾಗಿರುವದು ; ಆ ದ್ವೀಪದಲ್ಲಿ ಸೀತಾದೇವಿಯಿರಬಹುದೆಂದು ತೋರುವದರಿಂದ ಅಲ್ಲಿ ವಿಕೆ: ಪ್ರವಾಗಿ ಅರಸಿ ನೋಡಬೇಕು ; ದುರಾತ್ಮನಾಗಿ ದೇವೇಂದ್ರನ ಸಂಪತ್ತಿಗಿಂತಲು ಅಧಿಕವಾದ ಸಂಪತ್ತುಳ್ಳವನಾಗಿ ರಾಕ್ಷ ಸಾಧಿಪತಿಯಾದ ರಾವಣನಿಗೆ ಅದೇ ವಾಸಸ್ಥಾನವಾಗಿರಬಹುದು ! ಆ ದ್ವೀಪದಲ್ಲಿ ಅಂಗಾರಕ ಎಂಬ ಮಹಾ ಪ್ರಸಿದ್ದ ೪ದವಳು ಛಾಯೆಯನ್ನು ಗ್ರಹಿಸಿ ಮನುಷ್ಯರನ್ನು ಭಕ್ಷಣೆಮಾಡುತ್ತಿರುವಳು ! ನೀವು ಆ ಸ್ಥಳಗಳಿಗೆ ಹೋಗಿ ಶ್ರೀರಾಮನ ಪಟ್ಟದರಾಣಿಯಾದ ಸೀತಾದೇವಿಯನ್ನರಸಿನೋಡೀ ! ಆ ಬಳಕ ಮುಂದೆ ಹೋದರೆ ಸಮುದ್ರ ಮಧ್ಯ ದಲ್ಲಿ ನೂರುಗಾವುದ ವಿಸ್ತೀರ್ಣವುಳ್ಳದ್ದಾಗಿ ಅನೇಕ ಸಂಪತ್ತುಳ್ಳದ್ದಾಗಿ ನಿದ್ದಚಾರಣಾದಿಗಳಿಂದ ಸೇವಿಸಲ್ಪಟ್ಟದ್ದಾಗಿ ಚಂದ್ರಸೂರ್ಯಪ್ರಭೆಯಂತೆ ಪ್ರಕಾಶಮಾನವಾದ್ದಾಗಿ ಸಮುದ್ರದಕದಿಂದ ಸುತ್ತುವರಿಯಲ್ಪಟ್ಟದ್ದಾಗಿ ನಾನಾ ಸರ್ಣವಾಗಿ ಅತ್ಯುನ್ನತವಾದ ಕೊಡುಗಲ್ಲುಗಳಿಂದ ಆಕಾಶವನ್ನು ತುರುಕುವಂತೆ ಒಪ್ಪುತ್ತಿರುವ ಪುಸ್ಮತವೆಂಬ ಪರ್ವತವಿರುವದು ; ಆ ಪರ್ವತದ ಒಂದು ಕೊಡುಗಲ್ಲು ಸುವರ್ಣಮಯವಾಗಿರುವದು ; ಅದನ್ನು ಸೂನು ಸೇ ವಿಸುತ್ತಿರುವನು; ಮತ್ತೊಂದು ಕೂಡುಗಲ್ಲು ಬೆಳ್ಳಿಯಮಯವಾಗಿ ಬಿಳುಪಾಗಿರುವದು; ಅದನ್ನು ಚಂದ್ರನು ಸೇವಿಸುತ್ತಿರುವನು; ಆ ಪರ್ವತದ ಕೊಡುಗಲ್ಲುಗಳು ಮಾಡಿದ ಉಪಕಾರವನ್ನು ಮರೆಯುವ ಕೃತಘ್ನರಿಗೂ ದೈವವಿಲ್ಲ ಧರ್ಮವಿಲ್ಲವೆಂಬ ನಾಸ್ತಿಕಬುದ್ದಿಯುಳ್ಳ ಪಾಪಾತ್ಮರಿಗೂ ಕಾಣಿಸವು ; ಆ ಪರ್ವತಕ್ಕೆ ನೀವು ಸಂಪ್ಪಾಂಗ ದಂಡಪ್ರಣಾಮಗಳನ್ನು ಮಾಡಿ ಅಲ್ಲಿಂದ ಮಹಾ ದುರ್ಘಟವಾದ ಹದಿನಾಲ್ಕು ಗಾವುದ ದಾರಿ ಹೋಗಿ ಸರ್ವಾ ಎಂಬ ಪರ್ವತವನ್ನು ದಾಟಿಹೋಗಿ ಮುಂದೆ ವೈದ್ಭುತ ಎಂಬ ಪರ್ವತಕ್ಕೆ ಹೋಗಿ ಆ ಪರ್ವತದಲ್ಲಿ ಬೇಡಿದ ಇಷ್ಟಾರ್ಥಗಳನ್ನು ಕೊಡುವ ಮರಗಳುಳ್ಳ ವನಗಳಲ್ಲಿ ಹುಡುಕಿ ಅಲ್ಲಿರುವ ದಿವ್ಯವಾದ ಕಂದಮೂಲಫಲಗಳನ್ನು ಆಹಾರಮಾಡಿ ಶ್ರೇಷ್ಟವಾದ ಜೇನುತುಪ್ಪವನ್ನು ತೆಗೆದುಕೊಂಡು ಮುಂದೆ ಹೋದರೆ ಕಣ್ಮನಗಳಗೆ ಮನೋಹರ ವಾದ ಕುಂಜರಪರ್ವತವು ತೋರುವದು ; ಆ ಪರ್ವತವು ಒಂದುಗಾವುದ ವಿಸ್ತಾರವುಳ್ಳದ್ದಾಗಿ ಹತ್ತು ಗಾವುದ ಉನ್ನ ತವುಳ್ಳದ್ದಾಗಿರುವದು; ಅಲ್ಲಿ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟು ಸುವರ್ಣಮಯವಾಗಿ ರತ್ನಖಚಿತವಾದ ಅಗಸ್ಯ ಮಹಾಮುನಿಯ ಆಶ್ರಮವಿರುವದು; ಮುಂದೆ ಭಗವತಿಯೆಂಬ ಪಟ್ಟಣವಿರುವದು ; ಆ ಪಟ್ಟಣವು ಸಮಸ್ತ ಸರ್ಪಗಳಿಗೂ ಆವಾಸಸ್ಥಾನವಾಗಿ ತೆರವಾದ ರಾಜಬೀದಿಯುಳ್ಳದ್ದಾಗಿ ತೀಕವಾದ ಕೋರೆದಾಡೆಗಳ ಸರ್ಪಗಳ೦ ದ ರಕ್ಷಿಸಲ್ಪಟ್ಟಿರುವದು ; ಅಲ್ಲಿ ವಾಸುಕಿಯೆಂಬ ಮಹಾಭಯಂಕರವಾದ ಸರ್ಪರಾಜನಿರುವನು; ನೀವು ಆ ಪಟ್ಟಣ ದಲ್ಲಿ ಅರಸಿನೋಡಿ ಅದರ ಸಮಿಾರದಲ್ಲಿರುವ ಭವಭವೆಂಬ ಪರ್ವತದಲ್ಲಿ ನೋಡಿ ಆ ಪರ್ವತದ ಸಮೀಪದಲ್ಲಿರುವ ಗೋಶೀರ್ಷಕವನ ಪದ್ಮ ವನ ಹರಿಶಮಂಚವನವೆಂಬ ಮೂರು ವನಗಳಲ್ಲಿ ನೋಡಿ ಮುಂದೆ ಹೋದರೆ ಮೇಘ ಮಂಡಲದಂತ ಕಮ್ರದ ಒಂದು ಚಂದನವನವು ಕಾಣುವದು ; ಆ ಚಂದನವನವು ಯಜ್ಞಪುರುಷನ ವರ್ಣಕ್ಕೆ ಸಮಾನವಾಗಿ ದಿವ್ಯಪರಿಮಳವುಳ್ಳದ್ದಾಗಿರುವದು; ಆ ವನವನ್ನು ನೋಡಲೂಬಾರದು ಕೇಳಲೂಬಾರದು ; ಆ ವನ ವನ್ನು ಭಯಂಕರಾಕಾರರಾದ ರೋಹಿತರೆಂಬ ಐದುಮಂದಿ ಗಂಧರ್ವರು ಸರಪ್ರಭೆಯಂತೆ ನಿರೀಕ್ಷಿಸಿಕಂ ಡಿರುವರು ; ಸರಕಾಂತಿಯುಳ್ಳವರಾದ ಶೈಲಪ ಆಗಾಮಣಿ ಶ್ರೀಪಕ್ಷ ಶುಂಭೋಚ ನೃಸರೆಂಬ ಆ ಐದು ಮಂದಿ ಗಂಧರ್ವಾಧಿಪತಿಗಳು ಭೂಲೋಕದಲ್ಲಿ ತಪಸ್ಸು ಮಾಡಿ ಸ್ವರ್ಗಲೋಕವನ್ನು ಪಡೆದು ಅಲ್ಲಿರುವದಕ್ಕೆ ಮನ ಸ್ಪಿಲ್ಲದೆ ಚಂದ್ರಸೂರರ ಪ್ರಭೆಯಂತೆ ತನುಕಾಂತಿಯುಳ್ಳವರಾಗಿ ತಾವು ಮಾಡಿದ ಪುಣ್ಯಕರ್ಮಾತಿಶಯದಿಂದ ಆ ಚಂ ದನವನದಲ್ಲಿದ್ದಾರೆ ! ಅಲ್ಲಿಂದ ಮುಂದೆ ಮಹಾ ಭಯಂಕರವಾದ ಪಿತೃಲೋಕಗಳರುವವು ; ಅಲ್ಲಿ ಅಂಧಕಾರಕವಿದ ಯಮನ ಪಟ್ಟಣವಿರುವದು ; ಆ ದಿಕ್ಕು ನಿಮಗೆ ಹೊಕ್ಕು ನೋಡುವದಕ್ಕೆ ಅಶಕ್ಯವಾದದ್ದು ; ಅಲ್ಲಿಂದ ಮುಂದೆ ಯಾರಿಗೂ ಸಂಚರಿಸಲು ಶಕ್ಯವಲ್ಲ ! ಈಗ ನಾನು ಹೇಳಿದ ಸಮಸ್ತ ಲೋಕಗಳಲ್ಲಿಯ ಸೀತಾದೇವಿಯನ್ನು ಹುಡು ಕಿಕೊಂಡು ಬನ್ನಿ; ಸೀತಾದೇವಿಯನ್ನು ಕಂಡು ಆ ಸಂತೋಷವಾರ್ತೆಯನ್ನು ಹೇಳುವಾತನಿಗೆ ನನಗಿರುವ ಐಕ್ಷ ರಕ್ಕೆ ಸಮಾನವಾದ ಭಾಗ್ಯವನ್ನು ಕಟ್ಟು ಸುಖವಾಗಿರುವಹಾಗೆ ಮಾಡುವನು ; ಆತನು ನನ್ನ ಚಿತ್ರಣಗಳಿಗಿಂತ ೪ು ನೆಗ್ಗಳವಾದ ಪ್ರಿಯಸಖನಾಗುವನು; ಆತನು ಅನೇಕ ಅಪರಾಧಗಳನ್ನು ಮಾಡಿದರೂ ನನ್ನ ಮಿತ್ರನಾಗಿಯೇ