ಈ ಪುಟವನ್ನು ಪ್ರಕಟಿಸಲಾಗಿದೆ

೧೩೬ / ಕುಕ್ಕಿಲ ಸಂಪುಟ

ಪೂರ್ವದ ವಿಚಾರ ಏನೇ ಇರಲಿ, ಅನಂತರ ಪುನರೂರ್ಜಿತಗೊಂಡ ಈಗಿನ ಆಂಧ್ರ ಹಾಗೂ ಕರ್ಣಾಟಕ ಸಂಪ್ರದಾಯಗಳು ಏನಿವೆಯೋ ಅವು ಮೂಲತಃ ಆಂಧ್ರ ಪರಂಪರೆಯಿಂದಲೇ ವಿಸ್ತಾರಗೊಂಡುವು ಎಂದು ಊಹಿಸುವುದರಲ್ಲಿ ನ್ಯಾಯವಿದೆ, ಸತ್ಯವಿದೆ. ಆಧುನಿಕ ಶಾಸ್ತ್ರೀಯ ಸಂಗೀತವು ಹೇಗೆ ಆಂಧ್ರಮೂಲದಿಂದ ವೃದ್ಧಿಗೆ ಬಂದಿದೆಯೋ, ಹಾಗೆಯೇ ಇಂದಿನ ಯಕ್ಷಗಾನ ಮೂಲ ಆಂಧ್ರದಲ್ಲಿಯೇ ಯಕ್ಷಗಾನ ವೆಂಬ ಹೆಸರು ಪಡೆದು ತಲೆಯೆತ್ತಿ ವಿಸ್ತಾರಗೊಂಡು ಕರ್ಣಾಟಕಾಂಧ್ರಗಳ ಏಕಸಂಸ್ಕೃತಿ ಯಾಗಿ ಉಳಿದಿದೆ; ಬೆಳೆದಿದೆ. ನಮ್ಮಲ್ಲಿಯ ಸಂಪ್ರದಾಯ ಭೇದಗಳು ಏನಿವೆಯೋ ಅವು ಇದ್ದಂತೆಯೇ ಉಳಿಯಬೇಕು; ಬೆಳೆಯಬೇಕು.









(ರಂಗವೈಖರಿ: ಶ್ರೀ ಮಾಂಬಾಡಿ ನಾರಾಯಣ ಭಾಗವತರ ಅಭಿನಂದನ ಗ್ರಂಥ : ಮಾಂಬಾಡಿ ಸನ್ಮಾನ ಸಮಿತಿ, ಮಿತ್ತನಡ್ಕ, ಕರೋಪಾಡಿ, ದ. ಕ., ೧೯೮೧.)